Infinite Thoughts

Thoughts beyond imagination

ಪ್ರವಾದಿ ಪ್ರಾರ್ಥಿಸುತ್ತಿದ್ದ ಬಿಲಾಲ್ ಮಸೀದಿಯನ್ನೇ ಧ್ವಂಸ ಮಾಡಿತಲ್ಲಾ ಸೌದಿ!

ಪ್ರವಾದಿ ಪ್ರಾರ್ಥಿಸುತ್ತಿದ್ದ ಬಿಲಾಲ್ ಮಸೀದಿಯನ್ನೇ  ಧ್ವಂಸ ಮಾಡಿತಲ್ಲಾ ಸೌದಿ! 

ಸೌದಿ ಅರಸರು ನೂರಾರು ಮಸೀದಿಗಳನ್ನು ಕೆಡವಿ ಹಾಕಿದರು...!          

 ಜಗತ್ತಿನಾದ್ಯಂತ ಮುಸ್ಲಿಮರು ಉಸಿರೆತ್ತದೆ ತೆಪ್ಪಗೆ ಕುಳಿತರು....! 

ಬಾಬರ ಎಂಬ ಅಕ್ರಮಣಕಾರ  ಅಯೋಧ್ಯೆಯ ಭವ್ಯ ರಾಮ ಮಂದಿರವನ್ನು ಕೆಡವಿಹಾಕಿ ಅದರ ಮೇಲೆಯೇ ಮಸೀದಿ ಕಟ್ಟಿ ಆದದ್ದು ಕೇವಲ ನಾಲ್ಕುನೂರಾ ನಲವತ್ತು ವರ್ಷ ಮಾತ್ರ. ಪ್ರಭು  ಶ್ರೀರಾಮಚಂದ್ರ ಹುಟ್ಟಿದ ಸ್ಥಳದಲ್ಲೇ ಇದ್ದ ಆ ಭವ್ಯ ದೇಗುಲ ಒಡೆದು ...ಅದರ ಅವಶೇಷಗಳ ಮೇಲೆಯೇ ಮಸೀದಿ ನಿರ್ಮಿಸಿದ್ದರಿಂದ ಹಿಂದೂಗಳು ಸಹಜವಾಗಿಯೇ ಘಾಸಿಗೊಂಡರು... ಹಾಗಾಗಿ ತಮ್ಮ ಧಾರ್ಮಿಕ ಹಕ್ಕಾಗಿದ್ದ ಶ್ರೀರಾಮನ ಜನ್ಮಭೂಮಿಯನ್ನು ಮರಳಿ ಪಡೆಯಲು ಹಿಂದೂಗಳು ಹೋರಾಟ ಆರಂಭಿಸಿದರು.. ನೂರಾರು ವರ್ಷಗಳ ಹೋರಾಟ ಅದು...! ೧೯೯೨ರಲ್ಲಿ ರಾಮ ಭಕ್ತ ಕರಸೇವಕರು ಬಾಬರ್ ನಿರ್ಮಿಸಿದ್ದ ಮಸೀದಿಯನ್ನು ಕೆಡವಿ ಹಾಕಿದರು. ಅಲ್ಲಿಗೆ ಹಿಂದೂಗಳ ಶತಮಾನಗಳ ಹೋರಾಟಕ್ಕೆ ಅರ್ಧ ಜಯ ದೊರಕಿತ್ತು. 

ಶ್ರೀ ರಾಮ ಸೀತಾಮಾತೆಯರ ಮೂರ್ತಿಗಳಿಗೆ ಪೂಜೆ ಸಲ್ಲುತ್ತಿದ್ದ ಈ ಜಾಗ ಒಂದು ಲೆಕ್ಕದಲ್ಲಿ ಮಸೀದಿಯೇ ಅಲ್ಲ ... ಯಾಕೆಂದರೆ ಅಲ್ಲಿ.. ಆ ಕಟ್ಟಡದ ಒಳಗೆ ದಿನದ ಮೂರು ಹೊತ್ತು ಅಜಾನ್ ಮೊಳಗುತ್ತಿರಲಿಲ್ಲ... ಐದು ಹೊತ್ತು ನಮಾಜ್ ನಡೆಯುತ್ತಿರಲಿಲ್ಲ... ಆದ್ರೆ ಶ್ರೀರಾಮನಿಗೆ ಪೂಜೆ ಮಾತ್ರ  ನಿತ್ಯವೂ ನಡೆಯುತ್ತಿತ್ತು! ಆದರೆ ಭಾರತದ ಮುಸ್ಲಿಮರು ಬಾಬರೀ ಮಸೀದಿ ಧ್ವಂಸವಾದ ಕೂಡಲೇ ಆಕಾಶ ಭೂಮಿ ಒಂದು ಮಾಡುವಂತೆ ಅರಚಾಡತೊಡಗಿದರು... ಆಕಾರ ಒಂದು ಬಿಟ್ಟರೆ, ಮಸೀದಿಯೊಂದರಲ್ಲಿ ನಿತ್ಯ ನಡೆಯಬೇಕಿದ್ದ ಯಾವೊಂದು ಧಾರ್ಮಿಕ ಚಟುವಟಿಕೆಗಳೂ ನಿಯಮಿತವಾಗಿ ನಡೆಯದಿದ್ದ ಆ ವಿವಾದಿತ ಕಟ್ಟಡ ಧ್ವಂಸವಾದಾಗ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಮುಸ್ಲಿಮರು ಇದನ್ನ ಬಹಳಷ್ಟು ವಿರೋಧಿಸಿ ಪ್ರತಿಭಟಿಸಿದರು.... 

ಇದಾಗಿ ಹಲವಾರು ವರ್ಷಗಳು ಕಳೆದವು ... ಪುರಾತತ್ವ ಇಲಾಖೆಯವರು ವೈಜ್ಞಾನಿಕವಾಗಿಯೇ ಉತ್ಖನನ ನಡೆಸಿ ಬಾಬರೀ ಮಸೀದಿಯ ಕೆಳಗೆ ಬಹಳ ಪ್ರಾಚೀನ ದೇವಾಲಯದ ಕುರುಹುಗಳನ್ನು ಅವಶೇಷಗಳನ್ನು ಪತ್ತೆ ಹಚ್ಚಿದರು. ನ್ಯಾಯಾಲಯ ಕೂಡಾ ಶ್ರೀರಾಮನ ದೇವಾಲಯವನ್ನು ಕೆಡವಿಯೇ ಬಾಬರೀ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದನ್ನು ಒಪ್ಪಿತು. ಆದರೆ ಇಷ್ಟೆಲ್ಲಾ ಆದ ಬಳಿಕವೂ ಕೂಡಾ ಭಾರತೀಯ ಮುಸ್ಲಿಮರು ಉದಾರ ಹೃದಯದಿಂದ ರಾಮ ಜನ್ಮಭೂಮಿಯನ್ನು ಹಿಂದುಗಳಿಗೆ ಬಿಟ್ಟು ಕೊಡಬಹುದಾಗಿತ್ತು.  ಆದ್ರೆ ಮುಸ್ಲಿಮರು ಇವತ್ತಿಗೂ ಬಾಬರಿ ಮಸೀದಿಯನ್ನು ಕೆಡವಿದ್ದಕ್ಕೆ ಹಿಂದುಗಳನ್ನು, ಹಿಂದೂ ಸಂಘಟನೆಗಳನ್ನು ದೂರುವಾಗ ನನಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ .... ಯಾಕೆಂದರೆ ಮಸೀದಿಗಳನ್ನು ಕೆಡವಿ ಹಾಕುವುದು, ಧ್ವಂಸ ಮಾಡುವುದು ಇದೆಲ್ಲ ಇಸ್ಲಾಮಿನಲ್ಲಿ ತೀರಾ ಮಾಮೂಲಿ ಸಂಗತಿ. ಯಾವುದೇ ಮಸೀದಿಯನ್ನು ಯಾರೇ ಕೆಡವಿಹಾಕಿದರೂ ಯಾರೂ ಕ್ಯಾರೇ ಮಾಡುವುದಿಲ್ಲ... ಒಂದು ಜಾಗದಲ್ಲಿದ್ದ ಮಸೀದಿಯನ್ನು ಕೆಡವಿಹಾಕಿ ಬೇರೊಂದು ಜಾಗದಲ್ಲಿ ಮಸೀದಿಯನ್ನು ನಿರ್ಮಿಸುವುದು ಇಸ್ಲಾಮಿಕ್ ಜಗತ್ತಿನಲ್ಲಿ ಹೊಸ ವಿಚಾರವೇ ಅಲ್ಲ.  

ಇಸ್ಲಾಮಿನ ಪವಿತ್ರ ಭೂಮಿ ಎನಿಸಿಕೊಂಡಿರುವ ಸೌದಿ ಅರೇಬಿಯಾದಲ್ಲೇ ನೂರಾರು ಮಸೀದಿಗಳು ನೆಲಸಮವಾಗಿವೆ. ಇದನ್ನು ಮಾಡಿದ್ದೂ ಕೂಡ ಬೇರೆ ಧರ್ಮದವರಲ್ಲ. ಅಥವಾ ನಮ್ಮ ನಿಮ್ಮಂಥ ಸಾಮಾನ್ಯ ಜನರೂ  ಅಲ್ಲ... ಇಸ್ಲಾಮಿನ ಪರಮೋಚ್ಛ ಪವಿತ್ರ ಕ್ಷೇತ್ರಗಳಾದ ಮೆಕ್ಕಾ ಮತ್ತು ಮೆದೀನಾದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸೌದಿ ಅರಸರೇ ನೂರಾರು ಮಸೀದಿಗಳನ್ನು ನಿರ್ನಾಮ ಮಾಡಿದ್ದಾರೆ . ಇತ್ತೀಚೆಗಷ್ಟೇ ಮೆದೀನಾದಲ್ಲಿ ಒಟ್ಟು ನೂರಾ ಇಪ್ಪತ್ತಾರು ಮಸೀದಿಗಳನ್ನು ಅಭಿವೃದ್ಧಿಯ ಹೆಸರಲ್ಲಿ ಸೌದಿ ಸರಕಾರ ನೆಲಸಮ ಮಾಡುವ ನಿರ್ಧಾರ ತೆಗೆದುಕೊಂಡಿತು. ಈ ಪೈಕಿ ಹೆಚ್ಚಿನ ಮಸೀದಿಗಳೆಲ್ಲಾ ನೂರಾರು, ಸಾವಿರಾರು ವರ್ಷಗಳಷ್ಟು ಪುರಾತನ ಮಸೀದಿಗಳೇ. 

ವಹಾಬಿ ಸಂಪ್ರದಾಯ ಪಾಲಿಸುವ ಸೌದಿ ಅರಸರ ಇತಿಹಾಸ ಮುಸ್ಲಿಂ ಜಗತ್ತಿನ ಒಂದು ಕರಾಳ ಅಧ್ಯಾಯ ಎಂದರೂ ತಪ್ಪಾಗಲಾರದು... ಹತ್ತೊಂಬತ್ತನೇ ಶತಮಾನದಲ್ಲೇ ಅಂದರೆ ೧೮೦೧-೦೨ ರಲ್ಲಿ ಸೌದ್ ಮನೆತನದ  ಅಬ್ದುಲ್ ಅಝೀಜ್ ಇಬ್ನ್ ಮುಹಮ್ಮದ್ ಇಬ್ನ್ ಸೌದ್ ಎಂಬ ರಾಜ ಇಸ್ಲಾಮ್ ನ ಪವಿತ್ರ ಕ್ಷೇತ್ರ ಕಾರ್ಬಾಲಾದ ಮಸೀದಿಯನ್ನು ಧ್ವಂಸ ಮಾಡಿದ್ದ. ಈ ಮಸೀದಿ ಅಂತಿಂಥಾ ಮಸೀದಿಯಲ್ಲ! ಪ್ರವಾದಿಯ ಮೊಮ್ಮಗ, ಇಸ್ಲಾಮ್ ನ ಮೂರನೇ ಇಮಾಮ್ ಮತ್ತು ಖಲೀಫನಾದ ಇಮಾಮ್ ಹುಸ್ಸೇಯ್ನ್ ಇಬ್ನ್ ಅಬಿ ತಾಲಿಬ್ ನ್ ಸಮಾಧಿಯಿರುವ ಜಾಗದಲ್ಲಿ ಆತನ ಹೆಸರಿನಲ್ಲಿಯೇ ಇರುವ ಅತ್ಯಂತ ಪುರಾತನ ಪವಿತ್ರ ಮಸೀದಿ ಅದು! ಅದಾಗಿ ಮಾರನೇ ವರ್ಷವೇ ಅಂದರೆ ೧೮೦೪ -೦೫ರಲ್ಲಿ ಮೆಕ್ಕಾ ಮೆದೀನಾದ ಮೇಲೆ ದಾಳಿ ಮಾಡಿದ್ದ ಸೌದ್ ಅರಸ, ಪ್ರವಾದಿ ಮಹಮ್ಮದರ ಪ್ರೀತಿಯ ಮಗಳಾದ ಫಾತಿಮಾ ಅವರ ಸಮಾಧಿಯನ್ನು ಒಡೆದು ಹಾಕಿದ. 

ಸೌದಿ ರಾಜಕುಟುಂಬ ನಂತರ ಅಧಿಕಾರ ಕಳೆದುಕೊಂಡಿತಾದರೂ ನೂರು ವರ್ಷ ಕಳೆದು ಮತ್ತೆ ಪ್ರಬಲರಾದ ಅವರು ಅರೇಬಿಯಾವನ್ನೂ, ಮೆಕ್ಕಾ ಮೆದೀನಾವನ್ನೂ ತಮ್ಮ ಅಧೀನಕ್ಕೆ ತೆಗೆದುಕೊಂಡರು. ಅರೇಬಿಯಾ ದೇಶಕ್ಕೆ ತಮ್ಮ ಕುಟುಂಬದ ಹೆಸರನ್ನೂ ಜೋಡಿಸಿ ಸೌದಿ ಅರೇಬಿಯಾ ಅಂತ ಮರುನಾಮಕರಣ ಮಾಡಿದರು.  ೧೯೨೫ರ ಏಪ್ರಿಲ್ ೨೧ರಂದು ಮತ್ತೊಮ್ಮೆ ಮೆಕ್ಕಾ ಮೇಲೆ ದಾಳಿ ಮಾಡಿ ಪ್ರವಾದಿಯ ಕುಟುಂಬಸ್ಥರು ಮತ್ತು ಆತ್ಮೀಯ ಒಡನಾಡಿಗಳ ಸಮಾಧಿಗಳಿದ್ದ ಜನ್ನತ್ ಉಲ್ ಮುಅಲ್ಲ ವನ್ನು ಧ್ವಂಸ ಮಾಡಿದರು.  ಜಗತ್ತಿನ ಪ್ರಥಮ ಮುಸ್ಲಿಂ ಮಹಿಳೆ ಎಂದೇ ಖ್ಯಾತಿ ಗಳಿಸಿರುವ ಪ್ರವಾದಿಯವರ ಪ್ರಥಮ ಪತ್ನಿ ಖದೀಜಾರ ಸಮಾಧಿಯನ್ನೂ ನಿರ್ನಾಮ ಮಾಡಿದರು. ಇದಾಗಿ ಮರುವರ್ಷವೇ ಮೆದೀನಾದಲ್ಲಿದ್ದ ಪ್ರವಾದಿಯ ಮಸೀದಿಯ ಪಕ್ಕವೇ ಇದ್ದ ಪ್ರವಾದಿ ಕುಟುಂಬಸ್ಥರ ಸಮಾಧಿಗಳಿದ್ದ ಜನ್ನತ್ ಅಲ್ ಬಾಖಿ ಯಲ್ಲಿರುವ ಎಲ್ಲಾ ಸಮಾಧಿಗಳನ್ನು ನಿರ್ನಾಮ ಮಾಡಿದರು. ಅಷ್ಟೇ ಅಲ್ಲ ಪ್ರವಾದಿ ಮೊಹಮ್ಮದರ ಸಮಾಧಿ ಇರುವ ಬಾಖಿ ಅಲ್ ಘರ್ಕಾದ್ ಅನ್ನು ಕೂಡಾ ಧ್ವಂಸ ಮಾಡುವ ಯೋಜನೆಯಿತ್ತಾದರೂ ಮುಸ್ಲಿಂ ಸಮುದಾಯದ ಭಾರೀ ವಿರೋಧ ಬಂದಿದ್ದರಿಂದ ಹೆದರಿದ ಸೌದಿಗಳು ಪ್ರವಾದಿಯವರ ಸಮಾಧಿ ಒಡೆದುಹಾಕದೆ ಹಾಗೆಯೇ ಬಿಟ್ಟರು. 

ಹೀಗೆ ಇಸ್ಲಾಮಿನ ಪುರಾತನ ಐತಿಹಾಸಿಕ ಸ್ಮಾರಕಗಳನ್ನೆಲ್ಲಾ ಸೌದ್ ರಾಜಕುಟುಂಬ ಧ್ವಂಸ ಮಾಡುತ್ತಿದ್ದರೆ... ಉಳಿದ ಮುಸ್ಲಿಂ ಜಗತ್ತು ತೆಪ್ಪಗೆ ಬಾಯಿಮುಚ್ಚಿ ಕುಳಿತಿತ್ತು. ಹಜ್ ಯಾತ್ರೆಗೆ ಬರುವ ಜನರಿಗೆ ಅನುಕೂಲ ಕಲ್ಪಿಸುವ ನೆಪದಲ್ಲಿ ಮತ್ತಷ್ಟು ಹಳೆಯ ಕಟ್ಟಡಗಳನ್ನು ಕೆಡವಿ ಹಾಕಿ ಆ ಜಾಗದಲ್ಲಿ ಹೊಸ ಕಟ್ಟಡಗಳನ್ನು ಕಟ್ಟಲಾಯಿತು. ಇಸ್ಲಾಮಿಕ್ ಇತಿಹಾಸದ ಕುರುಹುಗಳಂತೆ ಇದ್ದ, ಪ್ರವಾದಿಯವರ ಕಾಲದ ಕಟ್ಟಡಗಳನ್ನೆಲ್ಲ ಸಂರಕ್ಷಣೆ ಮಾಡಿ ಇಡಬೇಕಾಗಿತ್ತು. ಜಗತ್ತಿನ ಯಾವುದೇ ರಾಷ್ಟ್ರವಾದರೂ ತನ್ನ ಇತಿಹಾಸದ ಪ್ರಾಚೀನ ಪಳೆಯುಳಿಕೆಗಳನ್ನು, ಅವಶೇಷಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡುತ್ತಿದೆ. ಆದರೆ ಸೌದಿ ಅರಸರ ಹುಚ್ಚು ದರ್ಬಾರಿನಲ್ಲಿ ಪ್ರವಾದಿಯವರ ಕಾಲದ ಎಲ್ಲಾ ಕಟ್ಟಡಗಳನ್ನೂ ನೆಲಸಮ ಮಾಡಲಾಯಿತು! ಬಹಳ ಪವಿತ್ರವೆಂದೇ ಭಾವಿಸಲಾದ ಸ್ಥಳಗಳಲ್ಲಿ ಈಗ ಯಾವ್ಯಾವುದೋ ಕಟ್ಟಡಗಳು ತಲೆಎತ್ತಿ ನಿಂತಿವೆ... ಹಿಂದಿನ ಇತಿಹಾಸ ಕುರುಹೇ ಇಲ್ಲದಂತೆ ನಾಶವಾಗಿದೆ. ಉದಾಹರಣೆಗೆ ಪ್ರವಾದಿ ಪತ್ನಿ ಖದೀಜಾರ ಮನೆಯಿದ್ದ ಜಾಗದಲ್ಲೀಗ ಪಬ್ಲಿಕ್ ಟಾಯಿಲೆಟ್ ಇದೆ! ಪ್ರಥಮ ಖಲೀಫನೂ ಪ್ರವಾದಿಯ ಆತ್ಮೀಯ ಸ್ನೇಹಿತನೂ, ಹೆಣ್ಣುಕೊಟ್ಟ ಮಾವನೂ ಆದ ಅಬೂಬಕರ್ ಅವರ ಮನೆಯಿದ್ದ ಜಾಗದಲ್ಲೀಗ ಮೆಕ್ಕಾ ಹಿಲ್ಟನ್ ಫೈವ್ ಸ್ಟಾರ್ ಹೋಟೆಲ್ ಇದೆ! 

ಇದೆಲ್ಲಾ ಬಿಡಿ...ಇವತ್ತು ಇಸ್ಲಾಮ್ ಅತ್ಯಂತ ಪವಿತ್ರ ಮತ್ತು ಏಕಮಾತ್ರ ಶ್ರದ್ಧಾ ಕೇಂದ್ರ, ಜಗತ್ಪ್ರಸಿದ್ದ ಪವಿತ್ರ ಕಾಬಾ ಮೇಲೆ ಒಂದು ದೊಡ್ಡ ಕಟ್ಟಡದ ನೆರಳು ಬೀಳುತ್ತಿದೆ. ಆ ನೆರಳು ಜಗತ್ತಿನ ಅತ್ಯಂತ ಎತ್ತರದ ಕಟ್ಟಡಗಳಲ್ಲಿ ಒಂದೆನಿಸಿದ ಮೆಕ್ಕಾ ರಾಯಲ್ ಕ್ಲಾಕ್ ಟವರ್ ಎಂಬ ಬೃಹತ್ ಕಟ್ಟಡದ ನೆರಳು. ಬಹುಷಃ ಪ್ರವಾದಿ ಮಹಮ್ಮದರು ತಮ್ಮ ಜೀವಿತಕಾಲದಲ್ಲೇ ಪವಿತ್ರಾ ಕಾಬಾ ಬಳಿಯಲ್ಲಿ ಅದಕ್ಕಿಂತ ಬಹು ಎತ್ತರದ ಕಟ್ಟಡವೊಂದು ತಲೆ ಎತ್ತಬಹುದೆಂದೂ ... ಅದರ ನೆರಳು ಕಾಬಾದ ಮೇಲೆ ಬೀಳಬಹುದೆಂದೂ ಯೋಚಿಸಿಯೇ ಇರಲಿಕ್ಕಿಲ್ಲ ! 

ಆದರೆ ಇಸ್ಲಾಮಿಕ್ ಜಗತ್ತಿನ ಅತ್ಯಂತ ದೊಡ್ಡ ದೌರ್ಭಗ್ಯ ಎಂದರೆ ಈ ರಾಯಲ್ ಕ್ಲಾಕ್ ಟವರ್ ಎಂಬ ಅತೀ ಎತ್ತರದ ಕಟ್ಟಡ ನಿರ್ಮಿಸಲು ಸೌದಿ ಅರಸರು ಸುಮಾರು ಸಾವಿರದ ನಾಲ್ಕುನೂರು ವರ್ಷದಷ್ಟು ಹಳೆಯದಾದ ಮಸೀದಿಯೊಂದನ್ನು ಧ್ವಂಸಗೊಳಿಸಿದ್ದರು.... ಅದು ಸ್ವತಃ ಪ್ರವಾದಿ ಮೊಹಮ್ಮದ್ ಪ್ರಾರ್ಥನೆ ಸಲ್ಲಿಸುತ್ತಿದ್ದ ಬಿಲಾಲ್ ಮಸೀದಿ... ಅಂದ ಹಾಗೆ ಈ ಬಿಲಾಲ್ ಮಸೀದಿಗೆ ಇನ್ನೊಂದು ಐತಿಹಾಸಿಕ ಮಹತ್ವ ಕೂಡ ಇದೆ... ಅದೇನೆಂದರೆ ಈ ಬಿಲಾಲ್ ಇಬ್ನ್ ರಬಾಹ್ ಎಂಬಾತ ಇಸ್ಲಾಮಿನ ಪ್ರಥಮ ಮುಯೆಜ್ಝಿನ್(ಮುಯೆದ್ದಿನ್)... ಇಸ್ಲಾಮ್ ಸ್ಥಾಪನೆಯಾದ ಬಳಿಕ ಮೆಕ್ಕಾದ ಪ್ರಪ್ರಥಮ ಮುಯೆಜ್ಝಿನ್ ಆಗಿ ನೇಮಕವಾದಾತ. ಇವತ್ತು ಜಗತ್ತಿನಾದ್ಯಂತ ಎಲ್ಲಾ ಮಸೀದಿಗಳಲ್ಲಿ ಪ್ರತಿನಿತ್ಯವೂ ಅಜಾನ್  ಮೊಳಗುತ್ತದಲ್ಲವೇ.. ಮುಸ್ಲಿಮರ ಈ ಪ್ರಾರ್ಥನಾ ಕರೆಯನ್ನು ಮೊದಲಿಗೆ ಪ್ರಾರಂಭಿಸಿದಾತನೇ ಈ ಬಿಲಾಲ್ ಇಬ್ನ್ ರಬಾಹ್! 

ಇಂತಹ ಬಿಲಾಲ್ ನ ಹೆಸರಿನಲ್ಲಿ ಮೆಕ್ಕಾದಲ್ಲಿ ಕಾಬಾದಿಂದ ತುಸು ದೂರದ ಬೆಟ್ಟದ ಮೇಲಿದ್ದ ಮಸೀದಿಯಲ್ಲಿ ಸ್ವತಃ ಪ್ರವಾದಿಯೇ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇಂಥಾ ಹತ್ವದ ಮಸೀದಿಯನ್ನೇ ಸ್ವತಃ ಸೌದಿ ಅರಸರೇ ಧ್ವಂಸ ಮಾಡುತ್ತಾರೆ ಅಂತಂದ ಮೇಲೆ, ಕೇವಲ ನಾಲ್ಕುನೂರು ಚಿಲ್ಲರೆ ವರ್ಷಗಳ ಹಿಂದೆ ಭಾರತಕ್ಕೆ ಬಂದ ಅಕ್ರಮಣಕೋರ ಬಾಬರ್ ನಮ್ಮ ಪ್ರಭು ಶ್ರೀರಾಮಚಂದ್ರನ ಜನ್ಮಸ್ಥಾನದಲ್ಲಿರುವ ಪವಿತ್ರ ದೇವಾಲಯವನ್ನೇ ಕೆಡವಿ ನಿರ್ಮಿಸಿದ ಕಟ್ಟಡವನ್ನು ನಾವು ರಾಮಭಕ್ತರು ಕೆಡವಿಹಾಕೋದು ದೊಡ್ಡದೇ? ಅದರಲ್ಲೂ ಪ್ರತಿನಿತ್ಯವೂ  ಆಜಾನ್ ಮೊಳಗದಿದ್ದ, ನಿಯಮಿತವಾಗಿ ಐದು ಹೊತ್ತು ನಮಾಜ್ ಪ್ರಾರ್ಥನೆಗಳೇ ಆಗದೇ ಇದ್ದ ಒಂದು ಯಃಕಶ್ಚಿತ್ ಕಟ್ಟಡವನ್ನು ಮಸೀದಿ ಅಂತ ಕರೆಯುವುದೇ ಇಸ್ಲಾಮಿನ ಪ್ರಕಾರ ಹರಾಮ್. ಇಂಥ ಕಟ್ಟಡವೊಂದು ಹಿಂದೂ ಧರ್ಮದ ಅರಾಧ್ಯ ದೈವ ಶ್ರೀರಾಮನ ಜನ್ಮಸ್ಥಳದಲ್ಲಿ, ಅದೂ ಕೂಡಾ ಅಲ್ಲಿದ್ದ ಪವಿತ್ರ ಭವ್ಯ ದೇವಾಲಯವನ್ನು ಕೆಡವಿ ಅದರ ಮೇಲೆಯೇ ನಿರ್ಮಾಣ ಆಗಿದೆ ಅಂದರೆ ಅದನ್ನು ಕೆಡವಿ ಹಾಕೋದು ತಪ್ಪೇ ಅಲ್ಲ.  ಅಗತ್ಯ ಬಿದ್ದರೆ ಇಂಥಾ ನೂರಾರು ಮಸೀದಿಗಳನ್ನು ಕೂಡಾ ಕೆಡವಿ ಬಿಟ್ಟೇವು...ಇದರಿಂದ ಇಸ್ಲಾಮಿಗೆ, ಮುಸ್ಲಿಮರಿಗೆ ಯಾವುದೇ ರೀತಿಯ ಅಪಚಾರವೂ ಆಗಲು ಸಾಧ್ಯವಿಲ್ಲ. 

ಯಃಕಶ್ಚಿತ್ ಅಯೋಧ್ಯೆಯ ಬಾಬರಿ ಮಸೀದಿಯೆಂದು ಕರೆಯಲ್ಪಡುತ್ತಿದ್ದ ಈ ವಿವಾದಿತ ಕಟ್ಟಡವನ್ನು ಧ್ವಂಸ ಮಾಡಿದ್ದಕ್ಕಿಂತಲೂ ಹೆಚ್ಚಿನ ಹಾನಿಯನ್ನು ಇಸ್ಲಾಮಿಗೆ ಮತ್ತು ಮುಸ್ಲಿಮರಿಗೆ ಸೌದಿ ಅರಸರೇ ಮಾಡಿದ್ದಾರೆ. ಪ್ರವಾದಿಯವರ ಪ್ರಥಮ ಪತ್ನಿ, ಇಸ್ಲಾಮ್ ಸ್ವೀಕರಿಸಿದ ಜಗತ್ತಿನ ಪ್ರಪ್ರಥಮ ಹೆಣ್ಣುಮಗಳು ಖದೀಜಾ ಅಲ್ ಖುಬ್ರಾ ಮತ್ತು ಪ್ರವಾದಿ ಬದುಕಿ ಬಾಳಿದ ಮನೆ. ಪ್ರವಾದಿಯವರ ಎಲ್ಲಾ ಮಕ್ಕಳು ಜನಿಸಿದ ಮನೆಯನ್ನು ಕೂಡಾ ಸಂರಕ್ಷಿಸದೆಯೇ, ಆ ಜಾಗದಲ್ಲಿ ಪಬ್ಲಿಕ್ ಟಾಯಿಲೆಟ್ ನಿರ್ಮಿಸಿದ ಸೌದಿ ಅರಸರು ಇಸ್ಲಾಮಿಗೆ ಮಾಡಿದ  ಕೆಡುಕು ಎಲ್ಲಕ್ಕಿಂತ ದೊಡ್ಡದು ಅಲ್ಲವೇ?

Related posts