ಅನಾಣ್ಯೀಕರಣದಿಂದ ದೊಡ್ಡ ಹೊಡೆತ ಬಿದ್ದದ್ದು ಭಾರತದ ಮುಸ್ಲಿಮರಿಗೇ
ಕಳೆದ ತಿಂಗಳು ಶಿರಸಿಯಲ್ಲಿ “ಕಾಂಚಾಣ” ಎಂಬ ಕಿರುಚಿತ್ರವೊಂದರ ಬಿಡುಗಡೆ ಸಮಾರಂಭವಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಾನು ಮಾತಾಡುತ್ತಾ ಸಾವಿರ ಮತ್ತು ಐನೂರರ ನೋಟುಗಳು ರದ್ದಾದ ವಿಷಯ ಪ್ರಸ್ತಾಪಿಸುತ್ತಾ “ಇದರಿಂದಾಗಿ ದೊಡ್ಡ ಹೊಡೆತ ಬಿದ್ದದ್ದು ಭಾರತದ ಮುಸ್ಲಿಮರಿಗೇ” ಅಂತ ಅಂದಿದ್ದೆ. ಅದಕ್ಕೆ ತಕ್ಕ ವಿವರಣೆಯನ್ನೂ ನೀಡಿದ್ದೆ. ಆದರೆ ನಾನು ಮುಸಲ್ಮಾನ ಜನಾಂಗದ ಬಗ್ಗೆ ಏನೇ ಮಾತಾಡಿದರೂ ಅದನ್ನೊಂದು ವಿವಾದವನ್ನಾಗಿ ಮಾಡಲೇ ಬೇಕೆಂಬ ನಿಯಮವೊಂದು ಅಘೋಷಿತವಾಗಿ ಚಾಲ್ತಿಯಲ್ಲಿದೆ. ಹಾಗಾಗಿಯೇ ನನ್ನ ಈ ಹೇಳಿಕೆಯನ್ನು ಕೂಡಾ ವಿವಾದವನ್ನಾಗಿಸುವ ಪ್ರಯತ್ನ ನಡೆಯಿತಾದರೂ ಅದಷ್ಟು ಯಶಸ್ವಿಯಾಗಲಿಲ್ಲ ಅನ್ನೋದು ಬೇರೆ ಮಾತು. ಆದರೂ ಈ ಬಗ್ಗೆ ಯಾವತ್ತಾದರೂ ಒಮ್ಮೆ ವಿವರವಾಗಿ ಒಂದಷ್ಟು ವಿಷಯ ಬರೆಯಬೇಕೆಂದು ಅಂದೇ ಅನ್ನಿಸಿತ್ತು.
ಪ್ರಧಾನಿ ನರೇಂದ್ರ ಮೋದಿಯವರು ನೋಟು ರದ್ದು ಮಾಡಿದಾಗ ಕಪ್ಪು ಹಣವಿರುವವರೆಲ್ಲಾ ಹೇಗೆ ವಿಲವಿಲ ಅಂತ ಒದ್ದಾಡಿದ್ದರೋ ಅದೇ ಪರಿಸ್ಥಿತಿ ಭಾರತೀಯ ಮುಸ್ಲಿಮ್ ಜನಾಂಗದ್ದೂ ಆಗಿತ್ತು! ಅದ್ಯಾವ ರೀತಿಯ ಲೆಕ್ಕಾಚಾರ ಹಾಕಿ ನೋಡಿದರೂ ನೋಟು ರದ್ದತಿಯಿಂದಾಗಿ ಅತಿ ಹೆಚ್ಚು ತೊಂದರೆಗೊಳಗಾಗಿದ್ದು ಮುಸ್ಲಿಮರು ಮತ್ತು ಅದಕ್ಕೆ ನೇರ ಕಾರಣ ಇಸ್ಲಾಂ ಧರ್ಮ! ನಾನೀರೀತಿ ಹೇಳಿದರೆ ಅದಕ್ಕೆ ಕೋಮುವಾದದ ಬಣ್ಣ ಬಳಿದು ರಂಗುರಂಗಿನ ಸುದ್ದಿ ಹರಡಲು ತುದಿಗಾಲಲ್ಲಿ ಕಾಯೋ ಮಂದಿಗಾಗಿ ಒಂದಷ್ಟು ಕಹಿ ಸತ್ಯಗಳ ಡೀಟೇಲ್ಸ್ ಒದಗಿಸಬೇಕಾದ ಜರೂರತ್ತಿದೆ.
ಜಗತ್ತಿನಲ್ಲಿ ಸಂಖ್ಯಾಬಲದ ದೃಷ್ಟಿಯಿಂದ ಇಸ್ಲಾಂ ಇವತ್ತು ಎರಡನೇ ಸ್ಥಾನದಲ್ಲಿದೆ ಮತ್ತು ಕ್ರಿಶ್ಚಿಯನ್ನರು ಮೊದಲ ಸ್ಥಾನದಲ್ಲಿದ್ದಾರೆ. ಜಗತ್ತಿನ ಜನಸಂಖ್ಯೆಯ ಶೇಕಡಾ 31.50 ರಷ್ಟಿರುವ ಕ್ರಿಶ್ಚಿಯನ್ನರ ಸಂಖ್ಯೆ ಅಂದಾಜು 220 ಕೋಟಿ. ಅದೇ ಹೊತ್ತಿಗೆ ಶೇಕಡಾ 22.3 ರಷ್ಟಿರುವ ಮುಸ್ಲಿಮರ ಸಂಖ್ಯೆ ಅಂದಾಜು 160 ಕೋಟಿಗೂ ಹೆಚ್ಚು. ಜಗತ್ತಿನಲ್ಲಿ ಸುಮಾರು 49 ರಿಂದ 52 ಮುಸ್ಲಿಮ್ ದೇಶಗಳಿವೆ. ಆದರೆ ಆಶ್ಚರ್ಯ ಹುಟ್ಟಿಸುವ ವಿಷಯವೆಂದರೆ ಈ ಎಲ್ಲಾ ಮುಸ್ಲಿಮ್ ದೇಶಗಳಲ್ಲಿ ಇರೋದಕ್ಕಿಂತ ಹೆಚ್ಚಿನ ಮುಸ್ಲಿಮರು ಭಾರತದಲ್ಲಿದ್ದಾರೆ! ಜಗತ್ತಿನಲ್ಲೇ ಅತಿಹೆಚ್ಚು ಮುಸ್ಲಿಮರಿರುವ ಟಾಪ್ ಟೆನ್ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಸ್ಥಾನ! ಅಂದ ಹಾಗೆ ಮೊದಲ ಸ್ಥಾನ ಸೌದಿ ಅರೇಬಿಯಾ ಅಥವಾ ಯಾವುದಾದರೂ ಇತರ ಅರಬ್ ದೇಶದ್ದಲ್ಲ, ಬದಲಿಗೆ ಮೊದಲ ಸ್ಥಾನ ಪಡೆಯೋದು ಇಂಡೋನೇಷ್ಯಾ! ನಮ್ಮಲ್ಲಿ ಪಾಕಿಸ್ಥಾನಕ್ಕಿಂತಲೂ ಹೆಚ್ಚು ಸಂಖ್ಯೆಯ, ಅಂದರೆ ಅಂದಾಜು 17.2 ಕೋಟಿ ಮುಸ್ಲಿಮರಿದ್ದಾರೆ. ಇದರ ಅರ್ಥವೇನೆಂದರೆ ಭಾರತದಲ್ಲಿ ಅಲ್ಪಸಂಖ್ಯಾತರೆಂಬ ಹಣೆಪಟ್ಟಿ ಹೊತ್ತಿದ್ದರೂ ಜಗತ್ತಿನ ಮುಸ್ಲಿಮರ ಪೈಕೆ ಅತಿ ಹೆಚ್ಚು ಜನ ಭಾರತದಲ್ಲೇ ಇದ್ದಾರೆ! ಹಾಗಾಗಿ ನಾನು ಹೇಳಿದ ಮಾತಿಗೆ ಮೊದಲ ಪುರಾವೆ ಇಲ್ಲೇ ಸಿಗುತ್ತದೆ.
ಇನ್ನು ಎರಡನೇ ಪುರಾವೆ ನೇರವಾಗಿ ಇಸ್ಲಾಂ ಧರ್ಮಕ್ಕೇ ಸಂಬಂಧ ಪಟ್ಟದ್ದು. ಇಸ್ಲಾಮಿನ ಧಾರ್ಮಿಕ ಕಾನೂನಿನನ್ವಯ ಯಾವನೇ ಮುಸ್ಲಿಮ್ ಬಡ್ಡಿ ಸಹಿತ ಸಾಲ ಪಡೆಯೋದು ಮತ್ತು ಸಾಲ ಕೊಡೋದು ನಿಷಿದ್ಧ. ಹಾಗಾಗಿ ಜಗತ್ತಿನ ಮುಸ್ಲಿಮರು ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಸೇರಿಕೊಳ್ಳೋದೇ ಇಲ್ಲ. ಇಸ್ಲಾಂ ಧರ್ಮದ ಪ್ರಕಾರ “ರಿಬಾ”(ಬಡ್ಡಿ ಅಥವಾ ಅನ್ಯಾಯದಿಂದ ಪಡೆದ ಲಾಭದ ಹಣ) ಎಂಬುದು ನಿಷಿದ್ಧ. ಕುರಾನಿನ ಸುರಾ ಅರ್ ರುಮ್ (30:39) ಸುರಾ ಅನ್ ನಿಸಾ (4:161) ಸುರಾ ಅಲ್ ಇ ಇಮ್ರಾನ್ (3:130) ಸುರಾ ಅಲ್ ಬಖಾರಾಹ್ (2:275-281) ಗಳಲ್ಲಿ ಈ “ರಿಬಾ” (ಬಡ್ಡಿ ಪಡೆಯುವುದು ಮತ್ತು ಬಡ್ಡಿ ಕೊಡುವುದು) ವನ್ನು ನಿಷೇಧಿಸಲಾಗಿದೆ. ಹಾಗಾಗಿ ಮುಸ್ಲಿಮರು ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬರಲು ಇಸ್ಲಾಂ ಧರ್ಮವೇ ನಿರಾಕರಿಸುತ್ತದೆ.
ಈ “ರಿಬಾ” ಬಗ್ಗೆ ಕುರಾನ್ ಅಲ್ಲದೆ ಇತರ ಹಲವು ಹದೀಸ್ ಗಳಲ್ಲೂ, ಷರಿಯಾ ಕಾನೂನಿನಲ್ಲೂ ವಿವರವಾಗಿ ಹೇಳಲ್ಪಟ್ಟಿದೆ. ಇಸ್ಲಾಂ ಧರ್ಮವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಹೇಳಲಿಕ್ಕೆಂದೇ ಇರುವ ಇಮಾಮ್- ಮುಲ್ಲಾಗಳು ಈ “ರಿಬಾ” ಎಂಬುದನ್ನು 3 ವಿಧವಾಗಿ ವಿಂಗಡಿಸಿದ್ದಾರೆ. ಅವು ಹೀಗಿದೆ…
1)ರಿಬಾ ಅನ್ ಜಹಿಲಿಯಾ- ಇದರ ಬಗ್ಗೆ ಇಸ್ಲಾಂ ಪಂಡಿತರಲ್ಲೇ ಗೊಂದಲವಿದೆ. ಹಲವರು ಬೇರೆ ಬೇರೆ ರೀತಿಯಲ್ಲಿ ಇದನ್ನು ವಿವರಿಸಿದ್ದಾರೆ. ಆದರೂ ಇದನ್ನು ಸಾಲದ ಮೂಲಧನದ ಮೇಲಿನ ಚಕ್ರಬಡ್ಡಿ ಅಂತ ಹೇಳಬಹುದು. ಇದು ಇಸ್ಲಾಂ ಹುಟ್ಟೋದಕ್ಕಿಂತಲೂ ಮೊದಲೇ ಅರೇಬಿಯಾದಲ್ಲಿದ್ದ ಪದ್ಧತಿ.
2)ರಿಬಾ ಅನ್ ನಸಿಯಾಹ್- ಇದು ಕೂಡಾ ಬಡ್ಡಿ ಸಾಲದ ರೂಪದಲ್ಲೇ ಇರುತ್ತದೆ.
3)ರಿಬಾ ಅಲ್ ಫಾದಿ- ಇದನ್ನು ರಿಬಾ ಅಲ್ ಸುನ್ನಾ ಅಂತಲೂ ಕರೆಯುತ್ತಾರೆ. ಇದು ವಸ್ತುಗಳ ಮಾರಾಟ ಅಥವಾ ಬದಲಾಯಿಸುವಾಗ (ಕೊಟ್ಟು-ತೆಗೆದುಕೊಳ್ಳುವಾಗ) ಪಡೆಯುವ ಅಧಿಕ ಶುಲ್ಕ.
ಮಧ್ಯಯುಗದ ಈ ನಿಯಮಗಳನ್ನು ಮುಸ್ಲಿಂ ಜಗತ್ತು ಈಗಲೂ ಪಾಲಿಸಿಕೊಂಡು ಬರುತ್ತಿರೋದರಿಂದಲೇ ಮುಸ್ಲಿಮರು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬರಲೇ ಇಲ್ಲ. ಆದರೆ ಶ್ರೀಮಂತ ಮುಸ್ಲಿಂ ರಾಷ್ಟ್ರಗಳು “ಇಸ್ಲಾಮಿಕ್ ಬ್ಯಾಂಕ್” ಎಂಬುದನ್ನು ಹುಟ್ಟು ಹಾಕಿ ಆಧುನಿಕ ಹಣಕಾಸಿನ ವ್ಯವಹಾರವನ್ನು ನಡೆಸತೊಡಗಿದವು. ಸೌದಿ ಅರೇಬಿಯಾ, ಯು.ಎ.ಇ, ಮುಂತಾದ ದೇಶಗಳ ಶ್ರೀಮಂತ ಮುಸ್ಲಿಮರು ಅಮೇರಿಕಾದಂಥ ಕ್ಯಾಪಿಟಲಿಸ್ಟ್ ದೇಶಗಳ ಜೊತೆಗೆ ಬಿಲಿಯನ್- ಟ್ರಿಲಿಯನ್ ಡಾಲರ್ ಗಳ ವ್ಯವಹಾರವನ್ನುಆರಾಮವಾಗಿ ನಡೆಸಿಕೊಂಡು ಬಂದರು. ಇಸ್ಲಾಂನ ಷರಿಯಾ ಕಾನೂನಿನ ಚೌಕಟ್ಟಿನೊಳಗೇ ಧರ್ಮದ ಕಣ್ಣಿಗೆ ಮಣ್ಣೆರಚುತ್ತಾ ತಮ್ಮ ಕಾರ್ಯ ಸಾಧಿಸಿಕೊಂಡರು!
ಆದರೆ ಜಗತ್ತಿನ ಅತಿ ಹೆಚ್ಚು ಮುಸ್ಲಿಮರಿರುವ ಭಾರತದಂಥ ದೇಶಗಳ ಮುಸ್ಲಿಮರ ಪೈಕಿ ಬಹುತೇಕರು ಬ್ಯಾಂಕ್ ನಲ್ಲಿ ಒಂದು ಅಕೌಂಟ್ ಹೊಂದೋದೇ ಮಹಾ ಪಾಪವೆಂದು ಬಗೆದು ವ್ಯವಸ್ಥೆಯಿಂದ ಹೊರಗುಳಿದುಬಿಟ್ಟರು. ಹಾಗಂತ ಇಲ್ಲಿನ ಮುಸ್ಲಿಮರು ವ್ಯಾಪಾರ-ವಹಿವಾಟುಗಳಲ್ಲೇನೂ ಹಿಂದುಳಿಯಲಿಲ್ಲ. ರಿಬಾ ಅನ್ ಜಹಿಲಿಯಾ, ರಿಬಾ ಅನ್ ನಸಿಯಾಹ್ ಗಳನ್ನು ನಮ್ಮ ಧರ್ಮ ನಿಷೇಧಿಸಿದೆ ಅಂತ ಕಾರಣ ಕೊಟ್ಟು ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗುಳಿದ ಮುಸ್ಲಿಮರು ತಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಪಡೆಯೋದು ತಪ್ಪು ಅಂತ ಸುಮ್ಮಗೆ ಕೂರಲಿಲ್ಲ. ದೇಶದೆಲ್ಲಾ ಕಡೆ ಚಪ್ಲಿ ಅಂಗಡಿ, ಬಟ್ಟೆ, ಬಂಗಾರದ ಮಳಿಗೆ, ಹೋಟೆಲು, ಟ್ರಾವೆಲ್ಸ್ ದಂಧೆ, ಮೀನು-ಮಾಂಸದ ವ್ಯಾಪಾರ ಮಾಡುವ ಮುಸ್ಲಿಮರೆಲ್ಲಾ ಲಾಭದ ಅಂಶ ತೀರಾ ಕಡಿಮೆಯಿಟ್ಟು ತಮ್ಮ ಧರ್ಮದ ಪ್ರಕಾರ ನ್ಯಾಯಯುತ ವ್ಯವಹಾರ ಮಾಡುತ್ತಾರೆಂದುಕೊಂಡಿದ್ದೀರಾ? ಇವರ್ಯಾರೂ ಒಂದಕ್ಕೆ ದುಪ್ಪಟ್ಟು ಲಾಭ ಮಾಡಿಕೊಳ್ಳದೆಯೇ ವ್ಯವಹಾರ ನಡೆಸುತ್ತಾರಾ? ತಮ್ಮ ಅಂಗಡಿಗಳಿಗೆ ಗ್ರಾಹಕರಾಗಿ ಮುಸ್ಲಿಮರೇ ಬಂದರೂ ಹೆಚ್ಚಿನ ಲಾಭವಿಲ್ಲದೆ ವ್ಯಾಪಾರ ಮಾಡುತ್ತಾರಾ? ಇವರ್ಯಾರಿಗೂ ರಿಬಾ ಅಲ್ ಫಾದಿ- ಅಥವಾ ರಿಬಾ ಅಲ್ ಸುನ್ನಾ ನೆನಪಿಗೆ ಬರುತ್ತದೆಯೇ?
ಭಾರತ ಸ್ವತಂತ್ರಗೊಂಡ ಮೇಲೆ ಈ ದೇಶದಲ್ಲಿ ನಡೆದ, ಈಗಲೂ ನಡೆಯುತ್ತಿರುವ ಸ್ಮಗ್ಲಿಂಗ್ ದಂಧೆಯ ನಿಯಂತ್ರಣ ಯಾರದ್ದು? ಗಲ್ಫ್ ರಾಷ್ಟ್ರಗಳಿಂದ ವಿಮಾನದಲ್ಲಿ ಶೂ, ಅಂಡರ್ ವೇರ್ ಗಳಲ್ಲೆಲ್ಲಾ ಚಿನ್ನ ಅಡಗಿಸಿಟ್ಟು ಬರೋ ಮಂದಿ ಯಾರು? ಮರಮಟ್ಟುಗಳ ವ್ಯಾಪಾರದ ಸೋಗಿನಲ್ಲಿ ಗಂಧ, ಚಂದನಗಳ ಕಳ್ಳವ್ಯವಹಾರ ಮಾಡೋ ಜನರಲ್ಲಿ ಹೆಚ್ಚಿನ ಪಾಲು ಯಾರದ್ದು? ದೇಶದ ಹತ್ತು ಮೋಸ್ಟ್ ವಾಂಟೆಡ್ ಭೂಗತ ಪಾತಕಿಗಳ ಪಟ್ಟಿಯಲ್ಲಿರೋ ಮುಸ್ಲಿಮರೆಷ್ಟು? ಇವರೆಲ್ಲರ ಕಳ್ಳ ವ್ಯವಹಾರವೂ ಅಕೌಂಟೇ ಇಲ್ಲದೆ ನಡೆಯುತ್ತದೆ. ಭಾರತದ ಹವಾಲಾ ಜಾಲದ ಕಿಂಗ್ ಪಿನ್ ಗಳಲ್ಲಿ ಹಚ್ಚಿನವರು ಮುಸ್ಲಿಮರೇ. ಭಾರತದ ಕ್ರೈಮ್ ರೆಕಾರ್ಡ್ ಬ್ಯೂರೋದ ದಾಖಲೆಗಳನ್ನು ಒಮ್ಮೆ ಜಾಲಾಡಿದರೂ ದೇಶದ್ರೋಹದ ಆರೋಪಗಳಡಿ ಬಂಧಿಸಲ್ಪಟ್ಟವರಲ್ಲಿ ದೊಡ್ಡ ಪಾಲನ್ನು ಮುಸ್ಲಿಮರೇ ಪಡೆದಿದ್ದಾರೆ. ದೇಶದೆಲ್ಲೆಡೆ ನಡೆಯುವ ನಕಲಿ ನೋಟು ದಂಧೆಯಲ್ಲಿ ಪಾಕಿಸ್ತಾನದಿಂದ ನಕಲಿ ನೋಟುಗಳನ್ನು ದೇಶದೊಳಕ್ಕೆ ತರೋರು ಯಾರು? ಈ ಪೈಕಿ ಹೆಚ್ಚಿನವರೆಲ್ಲಾ ಮುಸ್ಲಿಮರೇ ಯಾಕಿರುತ್ತಾರೆ? ಮೋದಿ ಹಳೆ ನೋಟುಗಳನ್ನು ಬ್ಯಾನ್ ಮಾಡಿ ನಕಲಿ ನೋಟು ದಂಧೆಯ ನಡು ಮುರಿದಾಗ ವಿಲವಿಲ ಅಂತ ಒದ್ದಾಡಿದ್ದು ಇವರೇ ಅಲ್ಲವೇ?
ಅದೆಲ್ಲಾ ಬಿಡಿ. ಇವತ್ತು ಬೆಂಗಳೂರಿನಲ್ಲಿ ಬೀದಿ ಬೀದಿಗಳ ಬದಿಯಲ್ಲೂ ಬ್ಯಾಗು, ಚಪ್ಪಲು, ಚೂಡೀದಾರ ಅಂತ ವ್ಯಾಪಾರ ಮಾಡೋ ಹುಡುಗರು ಬ್ಯಾಂಕ್ ಅಕೌಂಟ್ ಹೊಂದಿದ್ದಾರಾ? ಇವರ್ಯಾರೂ ಅನಕ್ಷರಸ್ಥರೇನಲ್ಲ… ಆದರೂ ಬ್ಯಾಂಕ್ ಗಳ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಇವರೆಲ್ಲರ ವ್ಯವಹಾರಗಳೂ ನಗದಿನಲ್ಲೇ ನಡೆಯುತ್ತದೆ. ಯಾವುದೂ ಲೆಕ್ಕಕ್ಕೆ ಸಿಗೋದೇ ಇಲ್ಲ. ಎಲ್ಲರನ್ನೂ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ತರಬೇಕೆಂದು, ಬಹುನಿರೀಕ್ಷೆಯ ‘ಫೈನಾನ್ಶಿಯಲ್ ಇನ್ಕ್ಲೂಸಿವ್” ಸ್ಕೀಮ್ ನ ಅನ್ವಯ ಪ್ರಧಾನಿ ಮೋದಿಯವರು “ಜನ ಧನ ಯೋಜನೆ” ಜಾರಿಗೆ ತಂದಾಗ ಇಸ್ಲಾಂ ಧರ್ಮದ ನೆಪ ಒಡ್ಡಿ ಅಕೌಂಟ್ ಮಾಡಿಸದೇ ಇದ್ದವರಿಗೆಲ್ಲಾ ಇವತ್ತು ತೊಂದರೆಯಾಗಿದೆ. ಇಷ್ಟರವರೆಗೆ ಸಂಪಾದಿಸಿದ ಹಣ ಹಳೆ 1000- 500ರ ನೋಟುಗಳಲ್ಲಿದ್ದರೆ, ಅದೀಗ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬರಲೇಬೇಕಾದ ಸಂದರ್ಭ ಸೃಷ್ಟಿಯಾಯಿತಲ್ಲಾ. ಧರ್ಮದ ಹೆಸರೇಳಿಕೊಂಡು ಅಕೌಂಟ್ ಮಾಡಿಸದವರಿಗೆಲ್ಲಾ “ನೋಟ್ ರದ್ದತಿ” ಯಿಂದ ದೊಡ್ಡ ಏಟೇ ಬಿದ್ದಿದೆ. ಇನ್ನು ಮುಂದೆ ಏನೇ ವ್ಯವಹಾರ ಮಾಡುವುದಿದ್ದರೂ ಅದು ಬ್ಯಾಂಕ್ ಗಳ ಮೂಲಕವೇ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಗಾಗೇ ನಾನು ಹೇಳಿದ್ದು “ಮೋದಿಯವರು ಮಾಡಿದ ನೋಟ್ ಬ್ಯಾನ್ ನಿಂದ ದೊಡ್ಡ ಹೊಡೆತ ಬಿದ್ದದ್ದು ಭಾರತದ ಮುಸ್ಲಿಮರಿಗೇ” ಅಂತ! ಇದನ್ನೂ ಕೂಡಾ “ಕೋಮುವಾದಿ ಹೇಳಿಕೆ” ಅಂತ ಬಣ್ಣಹಚ್ಚಿದರೆ ನಾನೇನೂ ಮಾಡಲಾಗುವುದಿಲ್ಲ! ಯಾಕಂದರೆ ನನಗೆ ಸತ್ಯ ಹೇಳಿ ಅಭ್ಯಾಸ!
ಅಂದ ಹಾಗೆ ಭಾರತ ಸರಕಾರಕ್ಕೆ ತೆರಿಗೆಯನ್ನೇ ಕೊಡಬಾರದು. “ಮುಸ್ಲಿಮರಲ್ಲದವರು ನಮ್ಮನ್ನಾಳುವ ದೇಶ “ ದರ್ ಉಲ್ ಹರ್ಬ್”. ಹಾಗಾಗಿ ಇಂಥ ದೇಶದ ಸರಕಾರದ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯವಿಲ್ಲದೆ ಬದುಕುವ ನಾವು ಈ ‘ಕಾಫಿರ್ ಸರಕಾರಕ್ಕೆ ತೆರಿಗೆ ಹಣ ಕಟ್ಟುವುದು ಮಹಾ ಪಾಪ” ಅಂತ ಅಂದುಕೊಂಡು ತೆರಿಗೆ ಕಟ್ಟದ ಮುಸ್ಲಿಮರಿದ್ದಾರೆ. ಇಂಥವರ್ಯಾರೂ ಕೂಡ ತಮ್ಮ ವ್ಯವಹಾರಗಳ ಲೆಕ್ಕ ಕೊಡೋದಿಲ್ಲ, ಬ್ಯಾಂಕ್ ಗಳಿಗೆ ಹೋಗೋದಿಲ್ಲ ಮತ್ತು ಇನ್ ಕಂ ಟ್ಯಾಕ್ಸ್ ಕಟ್ಟೋದಿಲ್ಲ. ಬದಲಿಗೆ ತಮ್ಮ ‘ಉಮ್ಮಾ’ದ ಅಭಿವೃದ್ಧಿಗೆ ‘ಝಕಾತ್” ನೀಡುತ್ತಾರೆ.