Infinite Thoughts

Thoughts beyond imagination

ಈ ಬಾರಿಯ ಬಜೆಟ್ ರೈತರಿಗೆ, ಕೃಷಿಕರಿಗೆ ಯಾಕೆ ಖುಷಿ ಕೊಡುತ್ತದೆಂದರೆ...

ಬಜೆಟ್ ಮಂಡನೆಯಾದ ಮೇಲೆ ಸಂಸತ್ತಿನಿಂದ ಹೊರಬಂದ ರೌಲ್ ವಿನ್ಸಿ ಯವರ ಮೂತಿಗೆ ಮಾಧ್ಯಮ ಮಿತ್ರರು ಮೈಕ್ ಹಿಡಿದರು.... ರೌಲ್ ಬಾಬಾ ಯಥಾ ಪ್ರಕಾರ ಪೆದ್ದು ಪೆದ್ದಾಗಿ ಬಾರಿಯ ಬಜೆಟ್ ನಲ್ಲಿ ರೈತರಿಗೆ ಏನೂ ಅನುಕೂಲವಾಗುವ ಅಂಶಗಳಿಲ್ಲ... ಯುವಜನರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುವ ಯಾವುದೇ ಭರವಸೆಯಿಲ್ಲ.... ಅಂತೆಲ್ಲ ಬಜೆಟ್ ಅನ್ನು ಟೀಕಿಸಿದರು.... ರೌಲ್ ಹೇಳಿಕೆ ಟಿವಿಗಳಲ್ಲಿ ಬಿತ್ತರವಾಗುತ್ತಿರುವ ಹೊತ್ತಿನಲ್ಲೇ " ಬಜೆಟ್ ನಲ್ಲಿ ರೈತರಿಗೆ, ಗ್ರಾಮೀಣ ಭಾಗದ ಯುವಜನರಿಗೆ ಭಾರೀ ಅನುಕೂಲವಾಗುತ್ತದೆಂದು ಅದೇ ಸುದ್ದಿ ಚಾನೆಲ್ ಗಳಲ್ಲಿ ಚರ್ಚೆಯಲ್ಲಿ ಪಾಲ್ಗೊಂಡ ವಿಷಯ ನಿಪುಣರು ಹೇಳುತ್ತಿದ್ದರು. ಪಾಪ... ನಮ್ಮ ರೌಲ್ ಬಾಬಾ ಮತ್ತೊಮ್ಮೆ ಜನರ ಮುಂದೆ ನಗೆಪಾಟಲಿಗೀಡಾಗಿದ್ದರು. ಯೆಚೂರಿ, ಡಿ. ರಾಜಾ ಮುಂತಾದ ಎಡಚರೂ, ಮಮತಾ, ಕೇಜ್ರಿವಾಲ್ ಮುಂತಾದ ಎಡಬಿಡಂಗಿಗಳ ಸಹವರ್ತಿಗಳೂ ಬಜೆಟ್ ಬಗ್ಗೆ ಇದೇ ರೀತಿ ಅಪದ್ಧ ಮಾತುಗಳನ್ನಾಡಿ ಜನರ ದೃಷ್ಟಿಯಲ್ಲಿ ಹಾಸ್ಯಾಸ್ಪದರಾದರು. ಅರುಣ್ ಜೇಟ್ಲಿಯವರ ಬಾರಿಯ ಬಜೆಟ್ ನಿಜಕ್ಕೂ ರೈತ ಮತ್ತು ಗ್ರಾಮೀಣ ಜನರ ಆಶೋತ್ತರಗಳಿಗೆ ಸ್ಪಂದಿಸುವ ಅದ್ಭುತ ಬಜೆಟ್ ಎಂಬುದರಲ್ಲಿ ಎರಡು ಮಾತಿಲ್ಲ. ಬಾರಿಯ ಬಜೆಟ್ ರೈತರಿಗೆ -ಕೃಷಿಕರಿಗೆ ಯಾಕೆ ಖುಷಿ ಕೊಡುತ್ತದೆಂಬುದಕ್ಕೆ ಒಂದಷ್ಟು ವಿವರಗಳನ್ನು ನಾನಿಲ್ಲಿ ನೀಡುತ್ತಿದ್ದೇನೆ.

ಗ್ರಾಮೀಣ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ಒಟ್ಟಾಗಿ ಬಾರಿಯ ಬಜೆಟ್ ನಲ್ಲಿ ಕಳೆದ ಬಾರಿಗಿಂತ ಇಪ್ಪತ್ತನಾಲ್ಕು ಶೇಕಡಾ ಹೆಚ್ಚು ಹಣವನ್ನು ಕಾದಿರಿಸಲಾಗಿದೆ ... ಅಂದರೆ ಬರೋಬ್ಬರಿ ರೂ. 1,87,223 ಕೋಟಿ ರೂಪಾಯಿಗಳು!

ಪ್ರಸಕ್ತ ಸಾಲಿನಲ್ಲಿ ದಾಖಲೆ ಮಟ್ಟದ ಕೃಷಿ ಸಾಲದ ಗುರಿ ಇಟ್ಟುಕೊಳ್ಳಲಾಗಿದೆ... " ಭೂತೋ ಭವಿಷ್ಯತಿ" ಎಂಬಂತೆ ಹತ್ತು ಲಕ್ಷ ಕೋಟಿ ರೂಪಾಯಿಗಳ ಸಾರ್ವಕಾಲಿಕ ದಾಖಲೆಯ ಮೊತ್ತವನ್ನು ನಿಗದಿಪಡಿಸಲಾಗಿದೆ!

"ಫಸಲ್ ಬಿಮಾ" ಯೋಜನೆಯನ್ನು ಶೇಕಡಾ ಮೂವತ್ತರಿಂದ ನಲವತ್ತಕ್ಕೆ ಹೆಚ್ಚಿಸಲಾಗಿದೆ. ಇದಕ್ಕಾಗಿ ಒಂಭತ್ತು ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗಿದೆ.

"ಮೈಕ್ರೋ ಇರಿಗೇಷನ್' ಯೋಜನೆಯನ್ವಯ ಹಳ್ಳಿಗಳಲ್ಲಿ ಸೂಕ್ಷ್ಮ ಕೃಷಿ ನೀರಾವರಿಗೋಸ್ಕರವೇ "ನಬಾರ್ಡ್" ಮೂಲಕ ಐದು ಸಾವಿರ ಕೋಟಿ ರೂಪಾಯಿಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.

ಈಗಾಗಲೇ 'ನಬಾರ್ಡ್' ಮೂಲಕ ಜಾರಿಯಾಗಿರುವ ಭಾರಿ ಮತ್ತು ಮಾಧ್ಯಮ ನೀರಾವರಿ ಯೋಜನೆಗಳಿಗೆ ಅನುದಾನವನ್ನು ಶೇಕಡಾ ನೂರರಷ್ಟು ಹೆಚ್ಚಿಸಿ ನಲವತ್ತು ಸಾವಿರ ಕೋಟಿ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ.

ರೈತರ ಹೊಲದಲ್ಲಿನ ಮಣ್ಣಿನ ಅರೋಗ್ಯ ಪರೀಕ್ಷಿಸಿ "ಸಾಯಿಲ್ ಹೆಲ್ತ್ ಕಾರ್ಡ್" ಗಳನ್ನೂ ನೀಡಲಿಕ್ಕಾಗಿಯೇ ದೇಶದಾದ್ಯಂತ ಇರುವ ಎಲ್ಲಾ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಮಿನಿ ಲ್ಯಾಬ್ ಗಳ ಸ್ಥಾಪನೆ.

ಕಂಪ್ಯೂಟರೈಸ್ಡ್ ಆನ್ ಲೈನ್ ಸೇವೆ ಒದಗಿಸುವ "E-NAM"- - ನ್ಯಾಷನಲ್ ಅಗ್ರಿಕಲ್ಚರ್ ಮಾರ್ಕೆಟ್ -ಗಳನ್ನು 585 . ಪಿ. ಎಂ. ಸಿ. ಗಳಿಗೆ ವಿಸ್ತರಿಸಿ ರೈತರಿಗೆ ಸೂಕ್ತ ಬೆಲೆ ಒದಗಿಸಲು ಸಹಾಯ ಮಾಡುವ ಮಹತ್ವದ ಯೋಜನೆಗಾಗಿ ಪ್ರತಿಯೊಂದು ಕೇಂದ್ರಕ್ಕೂ ಎಪ್ಪತ್ತೈದು ಲಕ್ಷ ರೂಪಾಯಿಗಳನ್ನು ಒದಗಿಸಲಾಗಿದೆ.

"ಡೇರಿ ಫಾರ್ಮ್' ಮೂಲಸೌಕರ್ಯ ಅಭಿವೃದ್ಧಿಗಾಗಿ ನಬಾರ್ಡ್ ಮೂಲಕ ಎರಡು ಸಾವಿರ ಕೋಟಿ ರೂಪಾಯಿಗಳ ನಿಧಿಯನ್ನು ಕಾಯ್ದಿರಿಸಲಿಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ಅದನ್ನು ಎಂಟು ಸಾವಿರ ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗುತ್ತದೆ.

ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸುಲಭವಾಗಿ ಸಾಲ ಲಭ್ಯವಾಗುವಂತೆ ಮಾಡಲು ಈಗ ಕಾರ್ಯನಿರ್ವಹಿಸುತ್ತಿರುವ ಅರವತ್ತಮೂರು ಸಾವಿರ ಪ್ರಾಥಮಿಕ ಕೃಷಿ ಸಾಲ ಸಹಕಾರ ಕೇಂದ್ರಗಳನ್ನು ಸಂಪೂರ್ಣ ಗಣಕೀಕರಣಗೊಳಿಸಿ ಅವುಗಳನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳಿಗೆ ಕೋರ್ ಬ್ಯಾಂಕಿಂಗ್ ಮೂಲಕ ಜೋಡಿಸಲಾಗುವುದು. ಇದಕ್ಕೆಂದೇ ನಬಾರ್ಡ್ ಮೂಲಕ ಸಾವಿರದ ಒಂಬೈನೂರು ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

ಗುತ್ತಿಗೆ ಆಧಾರದಲ್ಲಿ ಕೃಷಿ ಮಾಡಲು ಸಾಧ್ಯವಾಗುವಂತೆ ಮಾಡಲು ಒಂದು ಮಾದರಿ ಕಾನೂನನ್ನು ಜಾರಿಗೆ ತರಲಾಗುವುದು.

ಕಿರು ಅವಧಿಯ ಬೆಳೆ ಸಾಲವಾಗಿ ರೂಪಾಯಿ ಮೂರು ಲಕ್ಷ ವನ್ನು ಶೇಕಡಾ ಏಳರ ಸಬ್ಸಿಡಿ ಬಡ್ಡಿದರದಲ್ಲಿ ನೀಡಲಾಗುವುದು ಮತ್ತು ಅವಧಿಯೊಳಗೆ ಸಾಲ ಮರುಪಾವತಿಮಾಡಿದ ರೈತರಿಗೆ ಶೇಕಡ ಮೂರರಷ್ಟು ವಿನಾಯಿತಿಯನ್ನು ಪ್ರೋತ್ಸಾಹಧನದ ರೂಪದಲ್ಲಿ ವಾಪಾಸ್ ನೀಡಲಾಗುವುದು. ಆಗ ಸರಿಯಾಗಿ ಕ್ಲಪ್ತ ಸಮಯದಲ್ಲಿ ಸಾಲ ಮರು ಪಾವತಿ ಮಾಡಿದ ರೈತರಿಗೆ ಕೇವಲ ನಾಲ್ಕು ಶೇಕಡ ಬಡ್ಡಿ ಮಾತ್ರ ಬೀಳುತ್ತದೆ.

ಒಟ್ಟಿನಲ್ಲಿ ದೇಶದ ರೈತರ ಲಾಭದ ಪ್ರಮಾಣವನ್ನು ವೈಜ್ಞಾನಿಕ ರೀತಿಯಲ್ಲಿ ಮುಂದಿನ ಐದು ವರ್ಷಗಳೊಳಗೆ ದುಪ್ಪಟ್ಟು ಮಾಡುವ ಭಾರಿ ಮಹತ್ವಾಕಾಂಕ್ಷೆಯ ಯೋಜನೆಯೊಂದಕ್ಕೆ ಮೋದಿಯವರ ಸರಕಾರ ಬಜೆಟ್ ಮೂಲಕ ಭಾರಿ ಭದ್ರ ಅಡಿಪಾಯವನ್ನೇ ಹಾಕಿದೆ. ಆದರೆ ಪ್ರತಿಪಕ್ಷದ ಎಡ-ಬಿಡಂಗಿ ನೇತಾರರು ಮಾತ್ರ ಮಾಮೂಲಿ ರಾಗ ಹಾಡುತ್ತ ಡಿಜಿಟಲ್ ಯುಗದಲ್ಲಿ ಸತ್ಯ ಜನರಿಗೆ ನೇರವಾಗಿ ತಲುಪುತ್ತದೆಂಬ ಅರಿವೇ ಇಲ್ಲದೆ ಬೆತ್ತಲಾಗುತ್ತಾ ಕೋಡಂಗಿ ಕುಣಿತ ಶುರು ಮಾಡಿದ್ದಾರೆ.

Related posts