Infinite Thoughts

Thoughts beyond imagination

ವ್ಯಾಲೆಂಟೈನ್ಸ್ ಡೇ ಬೇಡೆವೇ ಬೇಡ

ಮಾಡುವ ಹಾದರಕ್ಕೆ ಅಧಿಕೃತ ಮನ್ನಣೆ ಸಿಗಲೆಂದೇ ಹುಟ್ಟಿಕೊಂಡ ದಿನವೇ ವ್ಯಾಲೆಂಟೈನ್ಸ್ ಡೇ!!

ವ್ಯಾಲೆಂಟೈನ್ಸ್ ಡೇ ಎಂಬ ಫೆಬ್ರವರಿ ೧೪ ನೇ ತಾರೀಕಿನ ದಿನಾಚರಣೆ ಬಗ್ಗೆ ನಮ್ಮ ಯುವ ಜನರಿಗೇಕೋ ಪುಳಕ. ಪ್ರೀತಿಸುವುದು ತಪ್ಪಲ್ಲ. ಅದರಲ್ಲೂ ಹದಿಹರೆಯದ ಮನಸ್ಸುಗಳು ಪ್ರೀತಿಯ ಬಲೆಯಲ್ಲಿ ಸಿಲುಕಿಕೊಳ್ಳುವುದು ತೀರಾ ಸಹಜ ಮತ್ತು ಪ್ರಾಕೃತಿಕವಾಗಿಯೂ ಸರಿ. ಆದರೆ.. ಪ್ರಶ್ನೆ ಇರೋದು ದಿನಾಚರಣೆಯ ಹಿಂದಿನ ಕಥೆಯ ಬಗ್ಗೆ ಮತ್ತು ಕಥೆಯ ಹಿಂದಿನ ಇತಿಹಾಸದ ಬಗ್ಗೆ ಮಾತ್ರ..!

ಇದು ತಿರುಚಿದ ಇತಿಹಾಸ.

ವ್ಯಾಲೆಂಟೈನ್ ಎಂಬಾತ ಕ್ರಿಶ್ಚಿಯನ್ ಸಂತ ಎಂಬಲ್ಲಿಂದ ಹಿಡಿದು ಅವನು ಪ್ರೇಮಿಗಳಿಗೆ ಆದರ್ಶ ಎಂಬ ಅಷ್ಟೂ ಕಥೆಗಳೆಲ್ಲವೂ ಇತಿಹಾಸದ ದೃಷ್ಟಿಯಲ್ಲಿ ಸಂಪೂರ್ಣ ಕಪೋಲ ಕಲ್ಪಿತ. ಇದನ್ನು ನಾನು ಹೇಳೋದಲ್ಲ. ಜಗತ್ತಿನಾದ್ಯಂತ ವಿಷಯದ ಬಗ್ಗೆ ಕ್ರಿಶ್ಚಿಯನ್ನರೇ ಹಲವಾರು ಸಂಶೋಧನೆಗಳನ್ನು ಮಾಡಿದ್ದಾರೆ ಮತ್ತು ಅವರ ಪ್ರಕಾರವೇ ಇತಿಹಾಸದಲ್ಲಿ ಕನಿಷ್ಠ ಮೂರರಿಂದ ಆರು ವ್ಯಾಲೆಂಟೈನ್ ಗಳಿದ್ದರು ಮತ್ತು ಅಷ್ಟೂ ಜನ ಬೇರೆ ಬೇರೆ ಕಾಲಮಾನದಲ್ಲಿದ್ದರು..! ಕ್ರಿಶ್ಚಿಯನ್ನರಲ್ಲಿ ಹಲವಾರು ಪಂಗಡ ಉಪ ಪಂಗಡಗಳಿದ್ದು, ಇವೆಲ್ಲವೂ ಬೇರೆ ಬೇರೆ ದಿನಗಳಂದು ವ್ಯಾಲೆಂಟೈನ್ಸ್ ದಿನವನ್ನು ಆಚರಿಸುತ್ತವೆ...!

ಈಸ್ಟರ್ನ್ ಆರ್ಥೋಡಾಕ್ಸ್ ಚರ್ಚ್ ಜುಲೈ ಆರು ಮತ್ತು ಜುಲೈ ಮೂವತ್ತರಂದು ಬೇರೆ ಬೇರೆ ದಿನ.. ಬೇರೆ ಬೇರೆ ವ್ಯಾಲೆಂಟೈನ್ ದಿನವನ್ನು ಆಚರಿಸುತ್ತದೆ..! ಸಂತ ವ್ಯಾಲೆಂಟೈನ್ ಎಂಬ ಹೆಸರಿನಿಂದ ಕರೆಯಲ್ಪಡುವ ಹಲವಾರು ಜನ ಬೇರೆ ಬೇರೆ ಕಾಲಘಟ್ಟಗಳ್ಳಲ್ಲಿದ್ದರು. ಕ್ಯಾಥೋಲಿಕ್ ಎನ್ಸೈಕ್ಲೋಪೀಡಿಯಾ ಪ್ರಕಾರವೇ ಕಡಿಮೆಯೆಂದರೂ ಮೂರು ಜನ ವ್ಯಾಲೆಂಟೈನ್ ಗಳಿದ್ದರು..! ಓರ್ವ ರೋಮ್ ನಲ್ಲಿ ಪೂಜಾರಿ (ಪ್ರೀಸ್ಟ್) ಆಗಿದ್ದ. ಇನ್ನೋರ್ವ ಇಟಲಿ ಇಂಟೆರಾಮ್ನಾ (ಈಗಿನ ಮಧ್ಯ ಇಟಲಿ ಉಂಬ್ರಿಯ ಪ್ರಾಂತದಲ್ಲಿರುವ ಟೆರ್ನಿ) ಎಂಬ ಊರಲ್ಲಿದ್ದ ಬಿಷಪ್. ಇನ್ನೋರ್ವ ವ್ಯಾಲೆಂಟೈನ್ ತನ್ನ ಶಿಷ್ಯಂದಿರೊಂದಿಗೆ ಆಫ್ರಿಕಾದಲ್ಲಿ ಹತನಾದ. ಈತನ ಬಗ್ಗೆ ಹೆಚ್ಚಿನ ವಿವರಗಳಿಲ್ಲ. ಆದರೆ ವಿಚಿತ್ರವೆಂದರೆ ಮೂರೂ ಜನ ಫೆಬ್ರವರಿ ಹದಿನಾಲ್ಕನೆಯ ತಾರೀಕಿಗೆ ಸತ್ತುಹೋಗಿದ್ದಾರೆ ಎಂದು ಹೇಳಲಾಗುತ್ತದೆ !

ಹೀಗೆ ಸಂತ ವ್ಯಾಲೆಂಟೈನ್ ಎಂಬಾತನ ಬಗ್ಗೆ ಹಲವಾರು ಗೊಂದಲಗಳಿವೆ. ಆದರೆ ಫೆಬ್ರವರಿ ಹದಿನಾಲ್ಕನೇ ತಾರೀಕಿಗೆ ಸಂತ ವ್ಯಾಲೆಂಟೈನ್ ದಿನಾಚರಣೆಯನ್ನು ೧೯೬೯ರಲ್ಲೆ ಅಧಿಕೃತವಾಗಿ ನಿಲ್ಲಿಸಲಾಯಿತು! ರೋಮನ್ ಕ್ಯಾಥೋಲಿಕ್ ಚರ್ಚ್ 'ಯೂನಿವರ್ಸಲ್ ಕ್ಯಾಲೆಂಡರ್ ಆಫ್ ಸೆಯಿಂಟ್ಸ್" ನಿಂದ ಸಂತ ವ್ಯಾಲೆಂಟೈನ್ ಹೆಸರನ್ನು ಅಧಿಕೃತವಾಗಿ ತೆಗೆದುಹಾಕಲಾಯಿತು! ದಿನ ... ಅಂದರೆ ಫೆಬ್ರವರಿ ಹದಿನಾಲ್ಕನೆಯ ತಾರೀಕಿಗೆ ಸಂತ ಸಿರಿಲ್ ಮತ್ತು ಅವನ ಸಹೋದರ ಮೆಥಾಡಿಯಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಇವರೀರ್ವರಲ್ಲಿ ಸಂತ ಸಿರಿಲ್ ೮೬೯ ಫೆಬ್ರವರಿ ೧೪ ರಂದು ಮೃತಪಟ್ಟರೆ ಮೆಥಾಡಿಯಸ್ ೮೮೨ ಡಿಸೆಂಬರ್ ತಿಂಗಳಲ್ಲಿ ಮೃತನಾಗುತ್ತಾನೆ. ಆದರೂ ಇಂದಿಗೂ ರೋಮನ್ ಕ್ಯಾಥೋಲಿಕರು ಸೇರಿದಂತೆ ಹಲವಾರು ಕ್ರಿಶ್ಚಿಯನ್ ಪಂಗಡಗಳು ಫೆಬ್ರವರಿ ಹದಿನಾಲ್ಕರಂದೇ ಇಬ್ಬರು ಅಣ್ಣ ತಮ್ಮಂದಿರ ದಿನವನ್ನು ಆಚರಿಸುತ್ತಾರೆ.

ಹೀಗೆ ವ್ಯಾಲೆಂಟೈನ್ ದಿನಾಚರಣೆಯನ್ನು ಅಧಿಕೃತವಾಗಿ ವ್ಯಾಟಿಕನ್ ತನ್ನ ಪಟ್ಟಿಯಿಂದ ತೆಗೆದುಹಾಕಲು ಬಲವಾದ ಕಾರಣವೊಂದಿತ್ತು. ೧೯೬೬ ರಲ್ಲಿ ಓರ್ವ ಕ್ರಿಶ್ಚಿಯನ್ ಧರ್ಮಗುರು ಅಗಸ್ಟಿನೋ ಅಮೋರ್ (ಈತ ೧೨೦೯ ರಲ್ಲಿ ಸೈನ್ಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಎಂಬಾತ ಸ್ಥಾಪಿಸಿದ ಕ್ರಿಶ್ಚಿಯನ್ ಪಂಗಡವೊಂದರ ಧರ್ಮಗುರು) ಎಂಬಾತ ವ್ಯಾಲೆಂಟೈನ್ ಬಗ್ಗೆ ತನಿಖೆ ನಡೆಸಿ ಒಂದು ಪುಸ್ತಕ ಬರೆದ. ಇದರಲ್ಲಿ ಸಂತ ವ್ಯಾಲೆಂಟೈನ್ ಎಂಬಾತ ಇರಲೇ ಇಲ್ಲ ಅಂತ ಪುರಾವೆ ಒದಗಿಸಿದ. ಪುಸ್ತಕ ಪ್ರಕಟವಾಗಿ ಮೂರೇ ವರ್ಷಗಳಲ್ಲಿ ವ್ಯಾಲೆಂಟೈನ್ ನನ್ನು ಸಂತರ ಪಟ್ಟಿಯಿಂದ ತೆಗೆದು ಹಾಕಲಾಯಿತು. ಹೀಗೆ ಸಂತ ವ್ಯಾಲೆಂಟೈನ್ ಮತ್ತು ಫೆಬ್ರವರಿಯ ಹದಿನಾಲ್ಕನೆಯ ತಾರೀಕು ಒಂದು ದೊಡ್ಡ ಗೋಲ್ಮಾಲ್!

ಆದರೆ ಇಲ್ಲಿಗೆ ವ್ಯಾಲೆಂಟೈನ್ ಡೇ ಮೋಸ ಹಾಗು ವಂಚನೆಗಳು ಮುಗಿಯುವುದಿಲ್ಲ. ದಿನವನ್ನು ಪ್ರೇಮಿಗಳ ದಿನವನ್ನಾಗಿ ಆಚರಿಸಲು ಒಂದು ಐತಿಹಾಸಿಕ ಕಾರಣವಿದೆ. ಬಗ್ಗೆ ಹಲವಾರು ಇತಿಹಾಸಕಾರರು ಸಂಶೋಧನೆ ನಡೆಸಿದ್ದಾರೆ. ವ್ಯಾಲೆಂಟೈನ್ಸ್ ಡೇ ಎಂಬ ಪ್ರೇಮಿಗಳ ದಿನಾಚರಣೆಗೂ ರೋಮನ್ನರ ಅನಾದಿ ಕಾಲದ ಲೂಪರ್ ಕಾಲಿಯಾ ಎಂಬ ಹಬ್ಬಕ್ಕೂ ಸಂಬಂಧವಿದೆ. ಪ್ರಾಚೀನ ರೋಮನ್ನರಿಗಿಂತಲೂ ಹಿಂದಿನ ಗ್ರೀಕರ ಆಚರಣೆಯಂದು ಇದನ್ನು ಪರಿಗಣಿಸಲಾಗಿದೆಯಾದರೂ ರೋಮನ್ ನಂಬಿಕೆಗಳೇ ಇಲ್ಲಿ ಪ್ರಧಾನವಾಗಿದೆ.

ರೋಮ್ ಪಟ್ಟಣದ ನಿರ್ಮಾತೃಗಳಾದ ರೋಮುಲಸ್ ಮತ್ತು ರೀಮಸ್ ಎಂಬ ಅಣ್ಣ ತಮ್ಮಂದಿರು ಚಿಕ್ಕ ಮಕ್ಕಳಿದ್ದಾಗ ದೇಶಭ್ರಷ್ಟರಾಗಿ ಲೂಪರ್ ಕಾಲ ಎಂಬ ಗುಹೆಯಲ್ಲಿ ಲೂಪ ಎಂಬ ಹೆಣ್ಣು ತೋಳದ ಮೊಲೆಯಿಂದ ಹಾಲು ಕುಡಿದು ಬದುಕುತ್ತಾರೆ.. ದಂತಕತೆಯ ಮೂಲದಿಂದ ರೋಮನ್ನರಲ್ಲಿ ಲೂಪ ಎಂಬ ಹೆಣ್ಣುತೋಳದ ಸ್ಮರಣೆಗಾಗಿ ಲೂಪರ್ ಕಾಲಿಯಾ ಎಂಬ ಹಬ್ಬ ಆಚರಣೆಗೆ ಬಂತು. ಲೂಪರ್ ಕಾಲಾ ಗುಹೆಯ ಬಳಿ ರೋಮುಲಸ್ ಮತ್ತು ರೀಮಸ್ ಹೊಸ ಹುಟ್ಟಿಗೆ ಕಾರಣವಾದ ತೋಳದ ನೆನಪಿಗೆ ಹೊಸ ಹುಟ್ಟು, ಸಂತಾನ, ಫಲವತ್ತತೆಯನ್ನು ಸಂಕೇತಿಸುವ ಹಬ್ಬವಾಗಿ ಇದು ರೂಢಿಗೆ ಬಂತು. ಇದನ್ನು ಫೆಬ್ರವರಿ ಹದಿಮೂರನೇ ತಾರೀಕಿಗೆ ಆಚರಿಸಲಾಗುತ್ತಿತ್ತು. ಲ್ಯೂಪರ್ಸಿ ಎಂಬ ಪುರೋಹಿತರು ನಗ್ನರಾಗಿ ಎರಡು ಆಡುಗಳನ್ನು ಮತ್ತು ನಾಯಿಯನ್ನು ಬಲಿನೀಡಿ, ಅದರ ರಕ್ತವನ್ನು ಮೈಗೆ ಸವರಿ ಕೊಂಡು, ಬಲಿಗೊಟ್ಟ ಆಡಿನ ಚರ್ಮವನ್ನು ನಗ್ನ ಮೈಗೆ ಸುತ್ತಿಕೊಳ್ಳುತ್ತಿದ್ದರು. ಅದೇ ವೇಳೆ ವೆಸ್ಟಲ್ ವರ್ಜಿನ್ಸ್ ಎಂಬ ಇಬ್ಬರು ಕನ್ಯಾ ಪುರೋಹಿತರು ತಾವು ತಯಾರಿಸಿದ ಉಪ್ಪು ಕೇಕ್ ಅನ್ನು ಉರಿಸುತ್ತಿದ್ದರು. ನಂತರ ಇಬ್ಬರು ತರುಣ ಲ್ಯೂಪರ್ಸಿ ನಗ್ನರಾಗಿ ಬಲಿಪೀಠದ ಬಳಿ ತೆರಳುತ್ತಿದ್ದರು. ಆಗ ಅವರ ಮೈಗೆ ಆಡಿನ ರಕ್ತವನ್ನು ಹಚ್ಚಲಾಗುತ್ತಿತ್ತು. ನಂತರ ಅವರಿಬ್ಬಬ್ಬರು ಆಡಿನ ಚರ್ಮವನ್ನು ಮೈಗೆ ಉಡುಪಿನ ರೀತಿ ಸುತ್ತಿಕೊಂಡು ಉಳಿದ ಚರ್ಮವನ್ನು ಚಾವಟಿಯ ರೀತಿ ಮಾಡಿಕೊಂಡು ಪಟ್ಟಣದ ಬೀದಿಗಳಲ್ಲಿ ಓಡಿ ಬರುತ್ತಿದ್ದರು. ಆಗ ಅಲ್ಲಿ ಸೇರುತ್ತಿದ್ದ ಜನರಿಗೆ ಚಾಟಿಯಿಂದ ಅವರು ಹೊಡೆಯುತ್ತ ಮುಂದೆ ಸಾಗುತ್ತಿದ್ದರು. ಅವರ ಎದುರಿಗೆ ಊರಿನ ಕನ್ಯೆಯರು ಹಾಗು ಹೆಂಗಸರು ಬಂದು ಏಟು ತಿನ್ನುತ್ತಿದ್ದರು. ಅದರಿಂದ ತಮ್ಮ ಫಲವತ್ತತೆ ಹೆಚ್ಚುತ್ತದೆ ಎಂಬ ನಂಬಿಕೆ ಅವರಿಗಿತ್ತು.

ಮೇಲೆ ರೋಮ್ ಅನ್ನು ಕ್ರಿಶ್ಚಿಯನ್ ಧರ್ಮಗುರುಗಳು ಆಳತೊಡಗಿದರು. ರೋಮನ್ನರು ಕ್ರಿಶ್ಚಿಯನ್ನರಾದ ಮೇಲೂ ತಮ್ಮ ಪುರಾತನ ಲೂಪರ್ ಕಾಲಿಯಾ ಹಬ್ಬದ ಆಚರಣೆಯನ್ನು ಬಿಡಲಿಲ್ಲ. ಕಾಲಾಂತರದಲ್ಲಿ ಹಬ್ಬ ಹುಡುಗ ಹುಡುಗಿ ಸೇರಿ ಬದುಕಲು ಒಂದು ರೀತಿಯ ಸಂಗಾತಿಯನ್ನು ಆರಿಸುವ ಹಬ್ಬವಾಗಿ ಬದಲಾಯಿತು. ಇದು ಫೆಬ್ರವರಿ ಹದಿಮೂರರ ಬದಲಿಗೆ ಹದಿನೈದನೇ ತಾರೀಕಿಗೆ ಬದಲಾಯಿತು. ಹುಡುಗರು ಹುಡುಗಿಯರನ್ನು ಆಯ್ಕೆ ಮಾಡಿಕೊಳ್ಳಲು ಹಬ್ಬ ವೇದಿಕೆಯಾಯಿತು. ಆದರೆ ರೋಮನ್ನರು ಕ್ರಿಶ್ಚಿಯನ್ನರಾಗಿ ಮತಾಂತರ ಹೊಂದಿದ್ದರೂ ಪ್ರಾಚೀನ ಧಾರ್ಮಿಕ ಆಚರಣೆಯನ್ನು ಕ್ರಿಸ್ತ ಶಕ ಐದನೇ ಶತಮಾನದವರೆಗೂ ಮುಂದುವರಿಯಿತು. ಕ್ರಿಶ್ಚಿಯನ್ ಧರ್ಮ ಗುರುಗಳ ವಿರೋಧದ ನಡುವೆಯೂ ಇದು ನಡೆದೇ ಇತ್ತು. ಕೆಲವೊಂದು ಸಂಶೋಧಕರ ಪ್ರಕಾರ ಕ್ರಿ.. ೪೬೯ ರಲ್ಲಿ ಪೋಪ್ ಗೆಲಸಿಯಸ್ ಇದನ್ನು ಕನ್ಯೆಯರ ಹಬ್ಬದ ಬದಲು ಕನ್ಯ ಮರಿಯಮ್ಮನವರ ಹಬ್ಬವಾಗಿ ಬದಲಿಸಿದನು. ಮೊದಲಿಗೆ ಇದನ್ನು ಫೆಬ್ರವರಿ ಎರಡನೇ ತಾರೀಕಿಗೆ ಬದಲಿಸಿ ನಂತರ ಅಂತಿಮವಾಗಿ ಫೆಬ್ರವರಿ ಹದಿನಾಲ್ಕನೆಯ ತಾರೀಕಿಗೆ ನಿಗದಿಪಡಿಸಲಾಯಿತು. ನಂತರ ಕ್ರಿ.. ೨೭೦ ರಲ್ಲಿ ರೋಮ್ ಚಕ್ರವರ್ತಿಯೊಬ್ಬನಿಂದ ತನ್ನ ಕ್ರಿಶ್ಚಿಯನ್ ನಂಬಿಕೆಗಳಿಗೋಸ್ಕರ ಪ್ರಾಣ ತೆತ್ತನೆಂದು ಹೇಳಲಾಗುವ ಸಾಂಟಾ ವ್ಯಾಲೆಂಟೈನ್ ಹೆಸರಿನಲ್ಲಿ ಹಬ್ಬದ ಆಚರಣೆ ರೂಢಿಗೆ ಬಂತು.

ಆದರೆ ನಂತರ ಫ್ರಾನ್ಸ್ ನಲ್ಲಿ ಹದಿನೈದನೇ ಶತಮಾನದಲ್ಲಿ ವ್ಯಾಲೆಂಟೈನ್ಸ್ ಡೇ ಆಚರಣೆ ಚಿಕ್ಕದಾಗಿ ಶುರುವಾಯಿತು. ನಂತರ ಶೇಕ್ಸ್ ಪಿಯರ್ ತನ್ನ ಕೃತಿಯಲ್ಲಿ ಇದರ ಬಗ್ಗೆ ದಾಖಲಿಸಿದ. ಹದಿನೇಟನೆಯ ಶತಮಾನದ ಹೊತ್ತಿಗೆ ಇಂಗ್ಲೆಂಡ್ನಲ್ಲಿ ಕೈಯಲ್ಲೇ ಬರೆದ ಕಾರ್ಡ್ ಗಳನ್ನೂ ಉಪಯೋಗಿಸಲಾಗುತ್ತಿತ್ತು. ಬಳಿಕ ಸಂಪ್ರದಾಯ ಅಮೆರಿಕದಲ್ಲೂ ಶುರುವಾಯಿತು.

೧೯೧೩ ರಲ್ಲಿ ಅಮೇರಿಕಾದ ಕಾನ್ಸಾಸ್ ನಗರದಲ್ಲಿನ ಹಾಲ್ ಮಾರ್ಕ್ ಕಂಪನಿ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಆರಂಭಿಸಿತು. ಈಗ ಜಗತ್ತಿನಾದ್ಯಂತ ವ್ಯಾಲೆಂಟೈನ್ಸ್ ಕಾರ್ಡ್ ಗಳ ಬಿಸಿನೆಸ್ ವರ್ಷಕ್ಕೆ ಏನಿಲ್ಲವೆಂದರೂ ಇಪ್ಪತ್ತು ಬಿಲಿಯನ್ ಡಾಲರ್ ಗಳಷ್ಟಾಗುತ್ತದೆ. ಇದರ ಜೊತೆಗೆ ಗಿಫ್ಟ್ ಗಳು, ಚಾಕಲೇಟು, ಉಡುಪು. ಹೂವು ಇವುಗಳ ಬಿಸಿನೆಸ್ ಬೇರೆ ಭಾರೀ ಪ್ರಮಾಣದಲ್ಲೇ ನಡೆಯುತ್ತದೆ. ದಿನದಿಂದ ದಿನಕ್ಕೆ ವ್ಯಾಲೆಂಟೈನ್ಸ್ ಡೇ ಹುಚ್ಚಿನಲ್ಲಿ ಯುವ ಜನತೆ ಉನ್ಮಾದಕ್ಕೊಳಗಾಗುತ್ತಿದೆ. ಸಂಗಾತಿಯ ಒಪ್ಪಿಗೆಯಿರಲಿ ಬಿಡಲಿ ಶಾಲಾ ಕಾಲೇಜುಗಳಲ್ಲಿ ವ್ಯಾಲೆಂಟೈನ್ಸ್ ಡೇ ಹೆಸರಲ್ಲಿ ಹೆಣ್ಣುಮಕ್ಕಳ ಮಾನಕಳೆಯುವ ಕೆಲಸ ನಡೆಯುತ್ತಿದೆ. ಹುಡುಗಿ ಒಪ್ಪದಿದ್ದರೂ ಆಕೆಯನ್ನು ಬೆನ್ನಟ್ಟಿ ಹಿಂಬಾಲಿಸಿ ಪ್ರೀತಿ ನಿವೇದಿಸುವ ಸ್ಟಾಕರ್ ಗಳು ಹೆಚ್ಚುತ್ತಿದ್ದಾರೆ. ಕಳೆದ ವರ್ಷವೊಂದರಲ್ಲೇ ಇಂಥ ಹುಚ್ಚು ಪ್ರೇಮಿಗಳಿಂದ ಮಾರಣಾಂತಿಕ ದಾಳಿಗೊಳಗಾದ, ಹತ್ಯೆಗೀಡಾದ ಅಮಾಯಕ ಹೆಣ್ಣುಮಕ್ಕಳು ಬಹಳಷ್ಟ್ಟಿದ್ದಾರೆ. ವಿಚಾರ ವಾದದ, ಪ್ರಗತಿ ಪರ ಚಿಂತನೆಯ ಹೆಸರಲ್ಲಿ, ಸೋಗಲಾಡಿತನ ಮಾಡುತ್ತಾ ವ್ಯಾಲೆಂಟೈನ್ಸ್ ಡೇ ಬೆಂಬಲಿಸುವ ಸೋಗಲ್ಲಿ ಹೆಣ್ಣುಮಕ್ಕಳ ವೈಯಕ್ತಿಕ ಸ್ವಬದುಕಿನ ಹಕ್ಕುಗಳಿಗೆ ಚ್ಯುತಿ ಬಂದರೂ ಕಣ್ಣು ಮುಚ್ಚಿ ಏನೂ ಆಗಿಲ್ಲವೆಂಬಂತೆ ನಟಿಸುವುದು ರೇಜಿಗೆ ಹುಟ್ಟಿಸುತ್ತದೆ.

ಮಾಡುವ ಹಾದರಕ್ಕೆ ಅಧಿಕೃತ ಮನ್ನಣೆ ಸಿಗಲೆಂದೇ ಹುಟ್ಟಿಕೊಂಡ ದಿನವೇ ವ್ಯಾಲೆಂಟೈನ್ಸ್ ಡೇ!!

Related posts