Infinite Thoughts

Thoughts beyond imagination

ಇಸ್ರೋ ವಿಶ್ವದಾಖಲೆ - ಭಾರತಕ್ಕೊಂದು ಹೆಮ್ಮೆ - ಒಂದೇ ಬಾರಿಗೆ ೧೦೪ ಉಪಗ್ರಹಗಳು ಕಕ್ಷೆಗೆ.

ಬೆಳಗ್ಗೆ ಒಂಭತ್ತು ಘಂಟೆ ಇಪ್ಪತ್ತೆಂಟು ನಿಮಿಷ... ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ... 44.4 ಮೀಟರ್ ಎತ್ತರದ ೩೨೦ ಟನ್ ತೂಗುವ ಭಾರತದ ಹೆಮ್ಮೆಯ ಅಂತರಿಕ್ಷ ರಾಕೆಟ್ ಪಿ.ಎಸ.ಎಲ್.ವಿ. - ಸಿ- 37 ಬೆಂಕಿಯುಗುಳುತ್ತ, ಕಿವಿಗಡಚಿಕ್ಕುವಂತೆ ಘರ್ಜಿಸುತ್ತಾ ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಭೇದಿಸುತ್ತಾ ಬಾನಂಗಳಕ್ಕೆ ಚಿಮ್ಮಿತು. ಮೂಲಕ ನಮ್ಮ ದೇಶದ ಬಾಹ್ಯಾಂತರಿಕ್ಷ ಸಂಶೋಧನಾ ಸಂಸ್ಥೆ "ಇಸ್ರೋ" ವಿಶ್ವದಾಖಲೆ ಬರೆಯಿತು. ಯಾಕೆಂದರೆ ಪ್ರಪಂಚದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಒಂದೇ ರಾಕೆಟ್ ನಲ್ಲಿ ಒಂದೇ ಬಾರಿಗೆ 104 ಉಪಗ್ರಹಗಳನ್ನು ಅಂತರಿಕ್ಷ ಕಕ್ಷೆಗೆ ಸೇರಿಸುವ ಪ್ರಯತ್ನದಲ್ಲಿ ಇಸ್ರೋ ಯಶಸ್ವಿಯಾಯಿತು.

ಹಿಂದೆ 2008 ರಲ್ಲಿ ಪಿ.ಎಸ.ಎಲ್.ವಿ. - ಸಿ- 10 ರಾಕೆಟ್ ಮೊಲಕ ಇಸ್ರೋ ಒಂದೇ ಬಾರಿಗೆ 10 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿ ದಾಖಲೆ ಬರೆದಿತ್ತು. ಆದರೆ ಬಾಹ್ಯಾಂತರಿಕ್ಷದ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವ ಅಮೇರಿಕ ಮತ್ತು ರಷ್ಯಾ ದಾಖಲೆಯನ್ನು ಮುರಿಯಿತು. ಅಮೇರಿಕ ಒಟ್ಟಿಗೇ ಇಪ್ಪತ್ತೊಂಬತ್ತು ಉಪಗ್ರಹಗಳನ್ನು ಹಾರಿಸಿದ್ದರೆ, 2014 ರಲ್ಲಿ ರಷ್ಯಾ, ಒಂದೇ ರಾಕೆಟ್ ನಲ್ಲಿ 37 ಉಪಗ್ರಹಗಳನ್ನು ಹಾರಿಸಿ ದಾಖಲೆ ಬರೆದಿತ್ತು . ಮಂಗಳಯಾನ ಚಂದ್ರಯಾನದ ಮೂಲಕ ಜಾಗತಿಕವಾಗಿ ದೊಡ್ಡಮಟ್ಟದ ಹೆಸರು ಮಾಡಿದ ಇಸ್ರೋ ಅತಿಹೆಚ್ಚು ಉಪಗ್ರಹಗಳನ್ನು ಒಂದೇ ರಾಕೆಟ್ ನಲ್ಲಿ ಹಾರಿಸಿ ಹೊಸದೊಂದು ವಿಶ್ವದಾಖಲೆ ನಿರ್ಮಿಸಲು ಸಿದ್ಧತೆ ನಡೆಸುತ್ತಿತ್ತು. ಇದಕ್ಕೆ ಪೂರ್ವಭಾವಿಯಾಗಿ 2015 ಜೂನ್ ನಲ್ಲಿ ಒಂದೇ ಬಾರಿಗೆ 23 ಉಪಗ್ರಹಗಳನ್ನು ಯಶಸ್ವಿಯಾಗಿ ಹಾರಿಸಿತ್ತು . ಆದರೆ ಬಾರಿ ಮಾತ್ರ ಬರೋಬ್ಬರಿ 104 ಉಪಗ್ರಹಗಳನ್ನು ಹಾರಿಸುವ ಮೂಲಕ ಅಮೋಘ ವಿಶ್ವ ದಾಖಲೆ ಬರೆಯಿತು.

ನೂರನಾಲ್ಕು ಉಪಗ್ರಹಗಳ ಪೈಕಿ ನೂರಾಒಂದು ವಿದೇಶೀ ಉಪಗ್ರಹಗಳೇ! ಇಸ್ರೇಲ್, ಯು.., ನೆದರ್ಲ್ಯಾಂಡ್ಸ್, ಕಝಕ್ ಸ್ತಾನ್ ಮತ್ತು ಸ್ವಿಟ್ಝರ್ ಲ್ಯಾಂಡ್ ನ್ ಒಂದೊಂದು ಉಪಗ್ರಹಗಳಾದರೆ, ಭರ್ತಿ ತೊಂಭತ್ತಾರು ಉಪಗ್ರಹಗಳು ಅಮೆರಿಕಾ ದೇಶದ್ದು! ಭಾರತದ ಮಟ್ಟಿಗೆ ನಿಜಕ್ಕೂ ಇದೊಂದು ಹೆಮ್ಮೆಯಾ ವಿಚಾರ. ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೊ ಪ್ಲಾನೆಟ್ ಇನ್ಕಾರ್ಪೊರೇಟೆಡ್ ಎಂಬ ಕಂಪೆನಿಯ ಉಪಗ್ರಹಗಳು ನ್ಯಾನೋ ಸ್ಯಾಟೆಲೈಟ್ ಗಳಾಗಿದ್ದು, ಒಂದೊಂದೂ ತಲಾ 4.7 ಕಿಲೋ ತೂಗುತ್ತವೆ. ವಿಶ್ವದ ಬೇರೆಲ್ಲ ದೇಶಗಳಿಂದ ಅತ್ಯಂತ ಕಡಿಮೆ ಖರ್ಚಿನಲ್ಲಿ ಚಂದ್ರ ಮತ್ತು ಮಂಗಳ ಗ್ರಹಕ್ಕೆ ಅಂತರಿಕ್ಷ ನೌಕೆಗಳನ್ನು ಕಳಿಸಿ ಯಶಸ್ವಿಯಾಗಿದ್ದ ಭಾರತದ ಇಸ್ರೋ ವಿಜ್ಞಾನಿಗಳು, ಅಂತರಿಕ್ಷಕ್ಕೆ ಉಪಗ್ರಹಗಳನ್ನೂ ಅತ್ಯಂತ ಕಡಿಮೆ ಖರ್ಚಿನಲ್ಲಿ ಉಡಾವಣೆ ಮಾಡುವುದರಲ್ಲಿ ಭಾರೀ ಯಶಸ್ಸು ಗಳಿಸಿದ್ದಾರೆ. ಕಾರಣವೇ ಇತರ ದೇಶಗಳು ತಮ್ಮ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಭಾರತದ ಸಹಾಯ ಪಡೆಯುತ್ತಿದೆ.

ಆದರೆ ಬಾರಿ ಅಮೆರಿಕಾದಂಥ ಘಟಾನುಘಟಿ ದೇಶವೇ ತಮ್ಮ96 ನ್ಯಾನೋ ಉಪಗ್ರಹಗಳನ್ನು ಕಕ್ಷೆ ಸೇರಿಸಲು ಇಸ್ರೋದ ಸಹಾಯ ಪಡೆದಿದ್ದು ಭಾರತಕ್ಕೊಂದು ಹೆಮ್ಮೆಯ ವಿಚಾರ. ಭಾರತದ ಅಂತರಿಕ್ಷ ವಿಜ್ಞಾನಿಗಳು ಜಗತ್ತಿಗೇ ಸವಾಲೊಡ್ಡುವಂತೆ ಯಾರಿಗೂ ಸಾಧ್ಯವಾಗದ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಹೆಚ್ಚು ಸಂಖ್ಯೆಯ ಉಪಗ್ರಹಗಳನ್ನು ಒಂದೇ ಬಾರಿಗೆ ಅಂತರಿಕ್ಷಕ್ಕೆ ಹಾರಿಬಿಡುವ ಸಾಹಸವನ್ನು ಜಗತ್ತಿನ ಇತರ ದೇಶಗಳ ವಿಜ್ಞಾನಿಗಳು ಮಾಡಲು ಹೋಗುವುದಿಲ್ಲ ಯಾಕೆಂದರೆ, ಉಪಗ್ರಹಗಳನ್ನು ಭೂಮಿಯಿಂದ 500 ಕಿಲೋಮೀಟರು ಎತ್ತರದಲ್ಲಿರುವ ಕಕ್ಷೆಗೆ ಸೇರಿಸಬೇಕಾಗಿದ್ದು, ಸಂದರ್ಭದಲ್ಲಿ ರಾಕೆಟ್ ಮತ್ತು ಉಪಗ್ರಹಗಳ ವೇಗ ಘಂಟೆಗೆ ಇಪ್ಪತ್ತೇಳು ಸಾವಿರ ಕಿಲೋಮೀಟರು ಗಳಷ್ಟಿರುತ್ತದೆ! ಇಂಥ ಭಾರಿ ವೇಗದಲ್ಲಿ ಒಂದಕ್ಕಿಂತ ಹೆಚ್ಚಿನ ಉಪಗ್ರಹಗಳನ್ನು ಒಂದಕ್ಕೊಂದು ಡಿಕ್ಕಿಯಾಗದಂತೆ ಕಕ್ಷೆಗೆ ಸೇರಿಸುವುದೇ ಒಂದು ಸಾಹಸ. ಇದಕ್ಕೆ ಭಾರೀ ಮಟ್ಟದ ಉನ್ನತ ತಾಂತ್ರಿಕತೆ ಮತ್ತು ಅತಿ ನಿಖರವಾದ ವೈಜ್ಞಾನಿಕ ಲೆಕ್ಕಾಚಾರಗಳ ಅವಶ್ಯಕತೆಯಿದೆ. ಆದುದರಿಂದಲೇ ಬೇರ್ಯಾವ ದೇಶಗಳ ವಿಜ್ಞಾನಿಗಳೂ ಇಂಥದ್ದೊಂದು ರಿಸ್ಕ್ ತೆಗೆದುಕೊಳ್ಳಲು ಹಿಂದೆ ಮುಂದೆ ಯೋಚಿಸುತ್ತಾರೆ. ಆದರೆ ನಮ್ಮ ವಿಜ್ಞಾನಿಗಳು ರೀತಿಯ ಅಮೋಘ ಸಾಧನೆಯ ಮೂಲಕ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ನಿಖರವಾಗಿ ಒಂಭತ್ತು ಘಂಟೆ ಐವತ್ತೊಂಭತ್ತು ನಿಮಿಷಕ್ಕೆ ಅಂದರೆ ಉಡಾವಣೆಯಾಗಿ ಅರ್ಧ ಘಂಟೆಯ ನಂತರ ಎಲ್ಲ ನೂರಾನಾಲ್ಕು ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಯಿತು. ಇದರೊಂದಿಗೆ ಅಂತರಿಕ್ಷ ವಿಜ್ಞಾನದಲ್ಲಿ ಭಾರತದ ವಿಜ್ಞಾನಿಗಳು ಹೊಸ ಮೈಲುಗಲ್ಲೊಂದನ್ನು ಸ್ಥಾಪಿಸಿದರು.

ಅಂದ ಹಾಗೆ ವಿದೇಶಗಳ ನೂರಾ ಒಂದು ನ್ಯಾನೋ ಉಪಗ್ರಹಗಳ ಜೊತೆಗೆ ಭಾರತ ಮೊಟ್ಟಮೊದಲ ಬಾರಿಗೆ ತನ್ನದೇ ಆದ ಎರಡು ನ್ಯಾನೋ ಉಪಗ್ರಹಗಳನ್ನೂ ಹಾರಿಸಿತು. ನ್ಯಾನೋ ಉಪಗ್ರಹಗಳಾದ .ಎನ್.ಎಸ್ 1 ಮತ್ತು .ಎನ್.ಎಸ್ 1 ಬಿ. ಇದು ಇಸ್ರೋದ ಮುಂದಿನ ಹಲವಾರು ಬಾಹ್ಯಾಂತರಿಕ್ಷ ಸಾಹಸಗಳಿಗೆ ಅನುಗುಣವಾಗಿ ಪ್ರಯೋಗಾತ್ಮಕ ಕೆಲಸಗಳನ್ನು ನಿರ್ವಹಿಸಲಿವೆ. ಇದಲ್ಲದೆ ಬಾರಿ ಇಸ್ರೋ ಇನ್ನೊಂದು ಹೊಸ ಸಾಹಸವನ್ನೂ ಸದ್ದಿಲ್ಲದೇ ಕೈಗೊಂಡಿದೆ. ಇದು ಇವತ್ತು ಕಕ್ಷೆಗೆ ಸೇರಿದ ಭಾರತದ ಇನ್ನೊಂದು ಉಪಗ್ರಹ "ಕಾರ್ಟೋ ಸ್ಯಾಟ್ - 2 ಸಿರೀಸ್" ಇದು ಇಸ್ರೋ ಮತ್ತು ಭಾರತದ ಪಾಲಿಗೆ ಸಾಧನೆಯ ಇನ್ನೊಂದು ಮೈಲಿಗಲ್ಲು. 714 ಕೆ.ಜಿ. ತೂಕದ ಉಪಗ್ರಹ ಭಾರತ ಸೇರಿದಂತೆ ಚೀನಾ ಪಾಕಿಸ್ತಾನ ಮುಂತಾದ ಎಲ್ಲ ದೇಶಗಳ ಭೂಭಾಗದ ಚಿತ್ರಗಳನ್ನು ಅತ್ಯಂತ ನಿಖರವಾಗಿ ಅತಿ ಹೆಚ್ಚಿನ ರೆಸೊಲ್ಯೂಷನ್ ನೊಂದಿಗೆ ತೆಗೆಯುತ್ತದೆ. ಒಂದು ಬಾರಿಗೆ 9.6 ಕಿಲೋಮೀಟರ್ ಗಳಷ್ಟು ಉದ್ದಗಲದ ಭೂಭಾಗಗಳ ಚಿತ್ರಗಳನ್ನು ಕೇವಲ ಒಂದು ಮೀಟರ್ ಅಳತೆಯಷ್ಟು ನಿಖರವಾಗಿ ತೆಗೆಯುವ ಸಾಮರ್ಥ್ಯವಿರುವ ಉಪಗ್ರಹ ಭೂಮಿ ಮೇಲೆ ನಡೆಯುವ ವಿದ್ಯಮಾನಗಳನ್ನು ಸೆರೆಹಿಡಿಯುತ್ತದೆ. ಹಿಂದೆ ಭಾರತಕ್ಕೆ ಇಂಥ ಚಿತ್ರಗಳು ಬೇಕಾಗಿದ್ದರೆ ಅಮೆರಿಕಾದ ಲಾಕ್ ಹೀಡ್ ಮಾರ್ಟಿನ್ ಕಂಪೆನಿಯ "ಇಕೋನಾಸ್" ಎಂಬ ಉಪಗ್ರಹ ತೆಗೆದ ಚಿತ್ರಗಳನ್ನು ದುಡ್ಡು ಕೊಟ್ಟು ಖರೀದಿಸಬೇಕಾಗಿತ್ತು. ಅವರಾದರೋ ನಮಗೆ ಚಿತ್ರಗಳಿಗೆ ತುಂಬಾ ದುಬಾರಿ ಶುಲ್ಕ ಹೇಳುತ್ತಿದ್ದರು. ಒಂದು ಚದರ ಕಿಲೋಮೀಟರ್ ಭೂಭಾಗದ ಚಿತ್ರಕ್ಕೆ ಸಾಮಾನ್ಯವಾಗಿ 7.9. ಡಾಲರ್ ಶುಲ್ಕವಿದ್ದರೆ ದಕ್ಷಿಣ ಏಷ್ಯಾ ಭೂಭಾಗಕ್ಕೆ ಪ್ರತ್ಯೇಕ ಪ್ರಾದೇಶಿಕ ವೆಚ್ಚ ಅಂತ ಅವರು ನಮಗೆ ಒಂದು ಚದರ ಕಿಲೋಮೀಟರ್ ಗೆ 20 ಡಾಲರ್ ಚಾರ್ಜ್ ಮಾಡುತ್ತಿದ್ದರು. ಆದರೆ ಈಗ ಇಸ್ರೋದ ವಿಜ್ಞಾನಿಗಳು :ಇಕೋನಾಸ್" ಗಿಂತಲೂ ಉತ್ಕೃಷ್ಟವಾದ ಚಿತ್ರಗಳನ್ನು ತೆಗೆಯುವ ಉಪಗ್ರಹ ತಯಾರಿಸಿದ್ದಾರೆ.

ಹಿಂದೆಲ್ಲ ನಮ್ಮ ಪತ್ರಿಕೆಗಳು, ಸುದ್ದಿ ಮಾಧ್ಯಮಗಳು ಪಾಕಿಸ್ತಾನ ಮತ್ತು ಚೀನಾ ದೇಶಗಳ ಗಡಿಯಲ್ಲಿನ ಕಾವಲಿನ ಬಗ್ಗೆ ಬರೆಯುತ್ತಾ, ಹೇಳುತ್ತಾ, "ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.... ನಮ್ಮ ಸೇನಾಪಡೆಗಳು ಹದ್ದಿನ ಕಣ್ಣಿಟ್ಟು ಗಡಿಗಳನ್ನು ಕಾಯುತ್ತಿವೆ" ಅಂತೆಲ್ಲ ವಿಶೇಷಣಗಳನ್ನು ಸೇರಿಸುತ್ತಿದ್ದವು. ಆದರೆ ಅದೀಗ ನಿಜವಾಗಿದೆ, ಕಾರ್ಟೋ ಸ್ಯಾಟ್ ಉಪಗ್ರಹಗಳು ಭಾರತ ಪಾಕಿಸ್ತಾನ, ಚೈನಾ ಪಾಕಿಸ್ತಾನ ಗಡಿಗಳಲ್ಲಿ ಮಾತ್ರವಲ್ಲ ದೇಶದ ಭೂಭಾಗದೊಳಗೂ ಹದ್ದಿನ ಕಣ್ಣಿಡಲಿವೆ. ಅಂಥಾ ಉತ್ಕೃಷ್ಟ ತಂತ್ರಜ್ಞಾನವನ್ನು ಉಪಗ್ರಹದಲ್ಲಿ ಅಳವಡಿಸಲಾಗಿದೆ, ಅಷ್ಟೇ ಅಲ್ಲ, ಉಪಗ್ರಹ ದೇಶದೊಳಗೂ ಸದಾ ಹದ್ದಿನ ಕಣ್ಣಿಟ್ಟು ಕಾಯುತ್ತಿವೆ. ಉಪಗ್ರಹ ಕೂಡ ವಿಶೇಷವಾದ "ಭುವನ್ " ಸಾಫ್ಟ್ ವೇರ್ app ಮೊಲಕ ದೇಶದೊಳಗಿನ ಭ್ರಷ್ಟರ ಮೇಲೂ ಒಂದು ಕಣ್ಣಿಡಲಿದೆ. ಈಗಾಗಲೇ ನರೇಗಾ ಯೋಜನೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಮುಂದೆ ದೇಶದೊಳಗಡೆ ನಡೆಯುವ ಎಲ್ಲ ಭಾರಿ ಯೋಜನೆಗಳ ಪ್ರತೀ ಹಂತದ ಅಭಿವೃದ್ಧಿಯನ್ನು ಸಮಯದ ಮಾಹಿತಿ ಸಹಿತ ಉಪಗ್ರಹಗಳು ಸೆರೆಹಿಡಿಯಲಿವೆ... ಗಣಿಗಾರಿಕೆಯಲ್ಲೂ ಇದರ ಉಪಯೋಗವಾಗಲಿದೆ.. ಸರಕಾರಕ್ಕೆ, ಜನರಿಗೆ ಸುಳ್ಳು ಹೇಳಿ ಅಪರಾ ತಪರಾ ಮಾಡುವವನ್ನು ಈಗ ಸರಕಾರ ಅಂತರಿಕ್ಷದ ಕಣ್ಣಿನಿಂದಲೇ ಗಮನಿಸುತ್ತದೆ.

ಇಸ್ರೋ ವಿಜ್ಞಾನಿಗಳಿಗೆ ಎಷ್ಟು ಧನ್ಯವಾದ ತಿಳಿಸಿದರು ಅದು ಅವರ ಪರಿಶ್ರಮಕ್ಕೆ ಕಡಿಮೆಯೇ... ದೇಶ ಸದಾ ಚಿರಋಣಿಯಾಗಿರುವಂತೆ ಮಾಡಿದ್ದಾರೆ. ದೇಶದ ರಕ್ಷಣಾ ಕಾರ್ಯಕ್ಕೆ ಅವರ ಕಾಣಿಕೆ ಅತ್ಯಮೋಘ!! ಇಸ್ರೋ ಹಾಗು ವಿಜ್ಞಾನಿಗಳ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

Related posts