ಇಸ್ಲಾಮ್ ವಿರುದ್ಧದ ಯುದ್ಧಕ್ಕೆ ಜಗತ್ತೇ ಒಗ್ಗಟ್ಟಾಯಿತು...
ಅಮೇರಿಕಾದ ಟ್ರಂಪ್ ಹಿಂದೆ ರಷ್ಯಾದ ಪುಟಿನ್ ನೆರಳು ಕಂಡಿತು...
ಬಹುಶಃ ಈ ಮಾತನ್ನು ಯಾರಾದರೂ ಒಂದು 30-40 ವರ್ಷಗಳಷ್ಟು ಹಿಂದೆ ಹೇಳಿದ್ದರೆ ...ಆಗ ಅದು ಬಹು ದೊಡ್ಡ ಜೋಕ್ ಆಗಿರುತ್ತಿತ್ತು. ರಷ್ಯಾದ ಎಣ್ಣೆ ಮತ್ತು ಅಮೆರಿಕಾದ ಸೀಗೆಕಾಯಿ ಯಾವತ್ತೂ, ಸೂರ್ಯ ಚಂದ್ರರಿರುವ ವರೆಗೂ ಒಂದಾಗಲು ಸಾಧ್ಯವಿಲ್ಲ ಎಂಬ ನಂಬಿಕೆ ಜಗತ್ತಿನ ಜನರಲ್ಲಿತ್ತು.
ದ್ವಿತೀಯ ಮಹಾಯುದ್ಧದ ಬಳಿಕ ಇಡೀ ಜಗತ್ತು ಎರಡು ಭಾಗವಾಗಿ ಹಂಚಿಹೋಗಿತ್ತು. ಕಮ್ಯುನಿಸ್ಟರ ಕಪಿಮುಷ್ಠಿಯಲ್ಲಿದ್ದ ಸೋವಿಯೆತ್ ರಷ್ಯಾದ ಜೊತೆಗೆ ಜಗತ್ತಿನ ಅಷ್ಟೂ ಕಮ್ಯುನಿಸ್ಟ್ ದೇಶಗಳು ಗುರುತಿಸಿಕೊಂಡಿದ್ದರೆ, ಇನ್ನುಳಿದ ಪ್ರಜಾಪ್ರಭುತ್ವವಾದಿ ದೇಶಗಳು ಅಮೆರಿಕಾ, ಬ್ರಿಟನ್, ಮುಂತಾದ ದೇಶಗಳ ಜೊತೆ ನಿಂತಿದ್ದವು... ಭಾರತ ನೆಹರೂವಿನ ಅಲಿಪ್ತ ನೀತಿಯ ಹೆಸರೇಳಿಕೊಂಡು ಇಂಡೋನೇಷ್ಯಾ, ಯುಗೊಸ್ಲಾವಿಯ, ಈಜಿಪ್ಟ್ ಮುಂತಾದ ದೇಶಗಳ ಜೊತೆ ಸೇರಿಕೊಂಡು ಯಾವುದೇ ಬಣಕ್ಕೆ ಸೇರದೆ... ನಮ್ಮದು ಅಲಿಪ್ತ ನೀತಿ ಅಂತ ಹೇಳಿಕೊಂಡರೂ, ಈ ಗುಂಪಿನಲ್ಲಿದ್ದ ಹೆಚ್ಚಿನೆಲ್ಲಾ ದೇಶಗಳು, ಭಾರತವನ್ನೂ ಸೇರಿಸಿ ರಷ್ಯಾ ಪರವೇ ಇದ್ದವು. ಜಗತ್ತಿನ ಮುಸ್ಲಿಂ ದೇಶಗಳಲ್ಲೂ ಎಡಪಂಥೀಯ ನಾಯಕರು ಸರ್ವಾಧಿಕಾರಿಗಳಾಗಿ ಅಳುತ್ತಿದ್ದರು. ಜರ್ಮನಿಯ ಮಧ್ಯೆ ಗೋಡೆ ಎಬ್ಬಿಸಿ ಅಮೆರಿಕ ಮತ್ತು ರಷ್ಯಾ ತಲಾ ಒಂದೊಂದು ಭಾಗವನ್ನು ಹಂಚಿಕೊಂಡು ಅಳುತ್ತಿದ್ದವು.
ಹೀಗೆ ಜಗತ್ತೇ ಶೀತಲ ಯುಧ್ದದ ನೆರಳಿನಲ್ಲಿ ನರಳುತ್ತಿತ್ತು. ಎರಡೂ ಬಣಗಳ ಮಧ್ಯೆ ಶಸ್ತ್ರಾಸ್ತ್ರ ಪೈಪೋಟಿ ಮೇರೆ ಮೀರಿತ್ತು. ಆಗೆಲ್ಲಾ ಜಗತ್ತಿಗೆ ಈ ಇಸ್ಲಾಮಿನ ತಲೆನೋವಿರಲಿಲ್ಲ. ಅದಕ್ಕೆ ಸರಿಯಾಗಿ ಜಗತ್ತಿನ ಅಷ್ಟು ಮುಸ್ಲಿಂ ರಾಷ್ಟ್ರಗಳೂ ಎರಡು ಬಣಗಳಾಗಿ, ಸೌದಿಯಂಥ ದೇಶಗಳು ಅಮೇರಿಕ ಪರ ನಿಂತರೆ... ಇರಾಕ್, ಈಜಿಪ್ಟ್ ಮುಂತಾದ ದೇಶಗಳು ಅಲಿಪ್ತವೆಂದು ಹೇಳಿಕೊಂಡೂ ರಷ್ಯಾ ಜೊತೆಗಿದ್ದವು. ಲೆಬನಾನ್ ಎಡಗಡೆಗೆ ಸ್ವಲ್ಪ ಹೆಚ್ಚಾಗಿಯೇ ವಾಲಿತ್ತು. ಹಾಗಾಗಿ ದ್ವಿತೀಯ ಮಹಾಯುದ್ಧದ ನಂತರ ಈ ಅವಧಿಯಲ್ಲಿ ಜಗತ್ತಿಗೆ ಇಸ್ಲಾಮಿನ ಮೂಲಭೂತ ವಾದದ ಭೀತಿ ಅಷ್ಟಾಗಿರಲಿಲ್ಲ. ಹಾಗಂತ ಜಗತ್ತು ಶಾಂತ ವಾಗಿತ್ತು ಅಂತ ಅಂದ್ಕೋಬೇಡಿ. ಎರಡನೇ ಮಹಾಯುದ್ಧದ ವೇಳೆ ಹಿಟ್ಲರ್ ನಂಥಾ ಮಹಾಕ್ರೂರಿಯಿಂದಾಗಿ ಕೋಟಿಗಟ್ಟಲೆ ಜನರು ಸತ್ತರು ಅಂತ ಜಗತ್ತು ಅಂದುಕೊಂಡಿದ್ದ ಹೊತ್ತಿಗೇ ರಷ್ಯಾದ ಸ್ಟಾಲಿನ್, ಚೀನಾದ ಮಾವೋ ಮುಂತಾದವರು ಹಿಟ್ಲರ್ ನನ್ನೂ ಮೀರಿಸುವ ಕ್ರೌರ್ಯ ಮೆರೆದು ಅವನಿಗಿಂತ ಹೆಚ್ಚಿನ ಜನರ ಸಾವಿಗೆ ಕಾರಣರಾಗಿದ್ದರು. ಹೀಗೆ ಜಗತ್ತು ಅಮೇರಿಕ ಮತ್ತು ರಷ್ಯಾ ಮಧ್ಯೆ ಹಂಚಿ ಹೋಗಿದ್ದಾಗಲೂ ಜನಕ್ಕೆ ಶಾಂತಿ ಎಂಬುದು ಮರೀಚಿಕೆಯಾಗಿತ್ತು. ಅಣುಯುದ್ಧದ ಭೀತಿ ನಿತ್ಯವೂ ಇದ್ದ ಸಮಯವದು ... ಇಡೀ ಜಗತ್ತಿನ ಮೇಲೆ ಹಿಡಿತ ಹೊಂದಬೇಕೆಂಬ ಮೇಲಾಟ ಇವೆರಡೂ ಬಲಾಢ್ಯ ಶಕ್ತಿಗಳಿಗೆ ಇತ್ತು. ಈ ಶೀತಲ ಯುದ್ಧಕ್ಕೆ ತೆರೆಬಿದ್ದದ್ದು ಸೋವಿಯತ್ ರಷ್ಯಾಗೆ ಅಧ್ಯಕ್ಷನಾಗಿ ಮಿಖಾಯಿಲ್ ಗೋರ್ಬಚೇವ್ ಬಂದ ಮೇಲೆ.
ನಿಕಿತಾ ಕ್ರುಶ್ಚೇವ್ ನ ನಂತರ ೧೯೬೪ ರಲ್ಲಿ ಸೋವಿಯೆತ್ ಅಧ್ಯಕ್ಷನಾದ ಲಿಯೊನಿಡ್ ಬ್ರೇಜ್ನೆವ್ ೧೯೮೨ ರವರೆಗೆ ದೇಶವನ್ನು ಕಪಿ ಮುಷ್ಟಿಯಲ್ಲೀ ಹಿಡಿದಿಟ್ಟಿದ್ದ. ಆದರೆ ನಂತರ ಸೋವಿಯೆತ್ ನಾಯಕತ್ವ ದುರ್ಬಲವಾಯಿತು. ಯೂರಿ ಅಂಡ್ರೊಪೋವ್ ಮತ್ತು ಕಾಂಸ್ಟ್ಯಾಂಟಿನ್ ಚೇರ್ನೆಂಕೋ ಕೇವಲ ಅಲ್ಪ ಕಾಲ ಆಳಿದರು... ನಂತರ ಬಂದ ಗೋರ್ಬಚೇವ್ ಸೋವಿಯೆತ್ ಪತನಕ್ಕೆ ನಾಂದಿ ಹಾಡಿದ. ಇದರಲ್ಲಿ ಅಮೇರಿಕ ಗುಪ್ತಚರ ಸಂಸ್ಥೆ ಸಿ.ಐ.ಏ. ಕೈವಾಡ ಇತ್ತೆಂಬುದು ದಿಟ. ಸೋವಿಯೆತ್ ಒಕ್ಕೂಟ ಬಿದ್ದ ಮೇಲೆ ಅಲ್ಲಿವರೆಗೆ ಜಗತ್ತಿನಲ್ಲಿದ್ದ ಶೀತಲ ಯುದ್ಧದ ಮುಸುಕು ನಿಧಾನವಾಗಿ ಕರಗಿತು. ಸೋವಿಯೆತ್ ಪತನದ ಬಗೆಗಿನ ರೋಚಕ ವೃತ್ತಾಂತವನ್ನು ಮುಂದೆ ಯಾವಾಗಾದರೂ ಬರೆಯುತ್ತೇನೆ. ಆದರೆ ಇಷ್ಟಾಗುವಾಗ ಜಗತ್ತಿಗೆ ಇಸ್ಲಾಮಿಕ್ ಭಯೋತ್ಪಾದನೆಯ ಕರಾಳ ನೆರಳು ಹಬ್ಬತೊಡಗಿತ್ತು.
ಇದಕ್ಕೂ ಪರೋಕ್ಷವಾಗಿ ಕಾರಣರಾದ್ದದ್ದು ಅಮೇರಿಕ ಮತ್ತು ರಷ್ಯಾವೇ ಎಂಬುದು ಮಾತ್ರ ವಿಪರ್ಯಾಸ. ಎರಡನೇ ಮಹಾಯುದ್ಧದ ಬಳಿಕ ಇಸ್ರೇಲ್- ಪ್ಯಾಲೆಸ್ತೀನ್ ಸಮಸ್ಯೆ ತಾರಕಕ್ಕೇರಿ ಮುಸ್ಲಿಂ ಮೂಲಭೂತವಾದದ ಬೀಜ ಮೊಳಕೆಯೊಡೆದಿತ್ತಾದರೂ, ಅಫಘಾನಿಸ್ತಾನವನ್ನು ರಷ್ಯಾ ಆಕ್ರಮಿಸಿದ್ದು, ಅದಕ್ಕೆ ಪ್ರತಿಕ್ರಿಯೆಯಾಗಿ ಅಮೇರಿಕ ಪಾಕಿಸ್ತಾನದ ಸಹಾಯದೊಂದಿಗೆ ತಾಲಿಬಾನ್ ಎಂಬ ರಕ್ತಬೀಜಾಸುರನನ್ನು ಸೃಷ್ಟಿಸಿದ್ದು ಇಡೀ ಜಗತ್ತಿನ ಚಿತ್ರಣವನ್ನೇ ಬದಲಿಸಿತು. ಅಮೇರಿಕ ಮತ್ತು ರಷ್ಯಾ ಪರಸ್ಪರ ಕೈ ಕೈ ಮಿಲಾಯಿಸುವ ಈ ಮೇಲಾಟದಲ್ಲಿ ತಾಲಿಬಾನ್ ರಾಕ್ಷಸನ ಜನನವಾಯಿತು. ವಿಚಿತ್ರವೆಂದರೆ ಈ ರಕ್ತಪಿಪಾಸು ಸಂತಾನ ನಂತರ ಅಮೇರಿಕ ವಿರುದ್ಧವೇ ತಿರುಗಿ ಬಿದ್ದದ್ದು ಇತಿಹಾಸದ ಘೋರ ವ್ಯಂಗಗಳಲ್ಲೊಂದು. ತಾವೇ ಪೋಷಿಸಿದ ಒಸಾಮಾ ಬಿನ್ ಲಾಡೆನ್ ನ ತಾಲಿಬಾನ್ ಅಮೇರಿಕಾದ ವರ್ಲ್ಡ್ ಟ್ರೇಡ್ ಸೆಂಟರನ್ನು ಉಡಾಯಿಸಿತ್ತು.
ಇದಕ್ಕೂ ಮೊದಲೇ ರಷ್ಯಾ ಮತ್ತದರ ಎಡಚ ಮಿತ್ರ ದೇಶಗಳು ಇಸ್ಲಾಮಿಕ್ ಮೂಲಭೂತವಾದದ ಆಳ ತಿಳಿಯದೇ ಆಫ್ರಿಕನ್ ರಾಷ್ಟ್ರಗಳ ಮೇಲಿನ ಹಿಡಿತಕ್ಕೋಸ್ಕರ ಆಡಬಾರದ ಆಟಗಳನ್ನಾಡಿದವು. ಅದೇ ಹೊತ್ತಿಗೆ ಅಮೇರಿಕ, ಬ್ರಿಟನ್, ಫ್ರಾನ್ಸ್, ಮುಂತಾದ ದೇಶಗಳೂ ಅರಬ್ ದೇಶಗಳ ಬೆನ್ನು ತಟ್ಟಿ ಬಾಲ ಹಿಡಿದು ಕುಣಿದವು. ಇದೆಲ್ಲ ಆಟ ಅಲ್ಲಿದ್ದ ತೈಲಕ್ಕಾಗಿ ಎಂಬುದು ಗುಟ್ಟಾಗಿಯೇನೂ ಇರಲಿಲ್ಲ. ಆದರೆ ಎಲ್ಲರೂ ಸೇರಿ ಅವರವರ ಸ್ವಾರ್ಥ ಸಾಧನೆಗೋಸ್ಕರ ಪೊಲಿಟಿಕಲ್ ಇಸ್ಲಾಮಿನ ದ್ವೇಷದ ಬೆಂಕಿಗೆ ಯಥಾನುಶಕ್ತಿ ತುಪ್ಪ ಸುರಿದೇ ಸುರಿದರು. ಈ ಬೆಂಕಿಯಲ್ಲಿ ಪಾಕಿಸ್ತಾನ ಚಳಿ ಕಾಯಿಸಿಕೊಂಡಿತು. ಸೌದಿ ಅರೇಬಿಯಾದ ತೈಲ ದೊರೆಗಳು ಇಸ್ಲಾಂ ಮೂಲಭೂತವಾದಕ್ಕೆ ಅಫೀಶಿಯಲ್ ಸ್ಪಾನ್ಸರ್ ಗಳಾದರು. ಜಗತ್ತು ನೋಡನೋಡುತ್ತಿದ್ದಂತೆ ಇಸ್ಲಾಮಿಕ್ ಭಯೋತ್ಪಾದನೆಯೆನ್ನುವುದು ಅಕರಾಳ ವಿಕರಾಳವಾಗಿ ರಾಕ್ಷಸಗಾತ್ರದಲ್ಲಿ ಬೆಳೆದು, ಜಗತ್ತಿಗೇ ಕಂಟಕವಾಯಿತು..
ತಾವೇ ಬಿತ್ತಿದ ವಿಷ ಬೀಜದ ಬೆಳೆ ತಮ್ಮನ್ನೇ ನಾಶಮಾಡಲು ಹೊರಟಿದೆ ಅಂತ ಜ್ಞಾನೋದಯವಾಗುವ ಹೊತ್ತಿಗೆ ತಡವಾಗಿತ್ತು. ಹಿಂದೆ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲೇ ಬೇಕಿತ್ತು. ಜಗತ್ತಿನ ಬಲಾಢ್ಯ ದೇಶಗಳೆಲ್ಲಾ ಜಿಹಾದಿಗಳ ಬಾಂಬಿಗೆ ಹೆದರುವ ಸ್ಥಿತಿ! ಸಿರಿಯಾದಲ್ಲಿ ಐಸಿಸ್ ಇಸ್ಲಾಮಿಕ್ ಖಲೀಫೇಟ್ ಸ್ಥಾಪಿಸಲು ಹೊರಟಿದೆ. ಆಶ್ಚರ್ಯವೆಂದರೆ ಇವತ್ತು ಇಸ್ಲಾಮೀ ಭಯೋತ್ಪಾದನೆಗೆ ಅತಿಹೆಚ್ಚು ಹೆದರಿರುವ ದೇಶ ರಷ್ಯಾ..! ಒಂದು ಅಧ್ಯಯನದ ಪ್ರಕಾರ ಶೇಕಡಾ ೫೨ ರಷ್ಟು ರಷ್ಯನ್ನರು ಇಸ್ಲಾಮಿನ ಬಗ್ಗೆ ಭೀತಿ ಹೊಂದಿದ್ದಾರೆ. ಅದಕ್ಕೆ ಸರಿಯಾಗಿ ಐ.ಸಿ.ಸ್. ಗೆ ಸೇರಲು ರಷ್ಯವೊಂದರಿಂದಲೇ ೭೦೦೦ ಕ್ಕೂ ಅಧಿಕ ಸಂಖ್ಯೆಯ ಯುವಕರು ತೆರಳಿದ್ದಾರೆ. ಜೊತೆಗೆ ಸಿರಿಯಾದ ಜಿಹಾದಿಗಳಿಗೆ ಮಕ್ಕಳನ್ನು ಹೆತ್ತುಕೊಡಲು ಅಪಾರ ಸಂಖ್ಯೆಯ ರಷ್ಯನ್ ಯುವತಿಯರೂ ಸಿರಿಯಾಗೆ ತೆರಳಿದ್ದಾರೆ. ಹಾಗಾಗಿಯೇ ರಷ್ಯಾಗೆ ಇವತ್ತಿನ ದಿನ ಜ್ಞಾನೋದಯವಾಗಿ ಇಸ್ಲಾಮಿನ ವಿರುದ್ಧದ ಅಂತಿಮ ಯುದ್ಧಕ್ಕೆ ತಾನು ಸಿದ್ಧವಾಗುತ್ತಿರುವುದಲ್ಲದೆ, ತನ್ನ ಒಂದು ಕಾಲದ ಬದ್ಧ ವೈರಿ. ಅಮೇರಿಕಾದ ಕಡೆಗೂ ನೋಡುತ್ತಿದೆ.
ಹೌದು... ಇವತ್ತಿನ ದಿನ ಜಗತ್ತು ಮಗ್ಗುಲು ಬದಲಿಸಿಕೊಂಡು ಎದ್ದು ಕೂತಿದೆ. ಎಡ ಪಂಥದ ಮೂಲಸ್ಥಾನ ರಷ್ಯಾವೇ ತನ್ನ ಸಿದ್ಧಾಂತಗಳನ್ನೆಲ್ಲಾ ಜಾಡಿಸಿಕೊಂಡು ಕ್ಯಾಪಿಟಲಿಸ್ಟ್ ಅಮೇರಿಕಾದ ಕಡೆಗೆ ಸ್ನೇಹ ಹಸ್ತ ಚಾಚುತ್ತಿದೆ. ಅತ್ತ ಅಮೇರಿಕಾದ ಅಧ್ಯಕ್ಷ ಸ್ಥಾನಕ್ಕೆ ಡೊನಾಲ್ಡ್ ಟ್ರಂಪ್ ಆಯ್ಕೆಯಾಯಿತು. ಚುನಾವಣೆಯ ವೇಳೆಗೇ ಟ್ರಂಪ್ ಸಿರಿಯಾ ನಿರಾಶ್ರಿತರಿಗೆ ಅಮೇರಿಕ ಆಶ್ರಯ ಕೊಡುವುದಿಲ್ಲ ಎಂಬ ತನ್ನ ಮಾತನ್ನು ಅಧ್ಯಕ್ಷರಾದ ಮೇಲೆ ನಿಜ ಮಾಡಿದ್ದಾರೆ. ಆಯ್ದ ಮುಸ್ಲಿಂ ದೇಶಗಳ ಮೇಲೆ ನಿಷೇಧ ಹೇರಿ ಅವರ ನಾಗರಿಕರಿಗೆ ಅಮೇರಿಕ ಪ್ರವೇಶವನ್ನು ಟ್ರಂಪ್ ನಿರ್ಬಂಧಿಸಿದ್ದೂ ಆಯಿತು. ಟ್ರಂಪ್ ನಿರ್ಧಾರವನ್ನು ಅಲ್ಲಿಯ ಕೋರ್ಟ್ ತಡೆಹಿಡಿದ್ದಿದು ಆಯಿತು. ಐ.ಸಿ.ಸ್. ಮೇಲೆ ಮುರಕೊಂಡು ಬಿದ್ದಿರುವ ಪುಟಿನ್ ಅಮೇರಿಕಾದ ಎಡಪಂಥದ ಡೆಮಾಕ್ರೆಟರಿಗೆ ಮಣೆ ಹಾಕಲಿಲ್ಲ. ಸ್ವತಃ ಮುಸ್ಲಿಮನೇ ಆಗಿದ್ದ ಬರಾಕ್ ಒಬಾಮನ ಇಸ್ಲಾಮಿಕ್ ಭಯೋತ್ಪಾದನೆ ಕುರಿತ ನಿಲುವುಗಳಿಗೆ ಪುಟಿನ್ ಬಹಿರಂಗವಾಗಿಯೇ ಟೀಕಿಸಿದ್ದರು. ಅದೇ ಹೊತ್ತಿಗೆ ಟ್ರಂಪ್ ಇಸ್ಲಾಂ ವಿರುದ್ಧ ನಿರ್ಣಾಯಕವಾದುದೊಂದು ಯುದ್ಧಕ್ಕೆ ಸಿದ್ಧವಾಗುವ ಹೊತ್ತಿಗೇ... ಟ್ರಂಪ್ ಹಿಂದೆ ರಷ್ಯಾದ ಅಧ್ಯಕ್ಷ ಪುಟಿನ್ ನೆರಳು ಸ್ಪಷ್ಟವಾಗಿ ಕಾಣಿಸತೊಡಗಿದೆ.
ಅಷ್ಟೇ ಅಲ್ಲ ಸ್ವಾಮಿ, ಟ್ರಂಪ್ ಹೆಗಲ ಮೇಲಿನ ಬಂದೂಕಿನ ಗುಂಡಿಯನ್ನು ಒತ್ತುವವರು ಸಹ ಪುಟಿನ್ ಆಗಿರುತ್ತಾರೆ.
ಇದು ನಿಜಕ್ಕೂ ಶುಭ ಸೂಚನೆಯೇ ಆಗಿದೆ. ಈಗಾಗಲೇ ಬ್ರಿಟನ್, ಆಸ್ಟ್ರೇಲಿಯ ಮುಂತಾದ ದೇಶಗಳು ಟ್ರಂಪ್ ಗೆ ಬೆಂಬಲ ಸೂಚಿಸಿದೆ. ಇದರ ಜೊತೆಗೇ ರಷ್ಯಾ ಕೂಡ ಸೇರಿಕೊಂಡರೆ, ಆಗ ಹೋರಾಟಕ್ಕೆ ಹೆಚ್ಚಿನ ಬಲ ಬರುತ್ತದೆ.
ಆದರೆ ಎಲ್ಲಕ್ಕೂ ಮಿಗಿಲಾಗಿ ಭಾರತ ಈ ಸಂದರ್ಭದಲ್ಲಿ ಈ ಎರಡು ಬಲಾಢ್ಯ ದೇಶಗಳ ಸ್ನೇಹಕ್ಕೆ ಸೇತುವೆಯಾಗಬಹುದಾದ ಎಲ್ಲ ಸಾಧ್ಯತೆಗಳೂ ನಿಚ್ಚಳವಾಗಿ ಕಾಣಿಸುತ್ತಿದೆ. ಭಾರತದ ಪ್ರಧಾನಮಂತ್ರಿ ಮೋದೀಜಿಯವರಿಗೆ ಟ್ರಂಪ್ ಈಗಾಗಲೇ ಅಮೇರಿಕ ಭೇಟಿಗೆ ಆಹ್ವಾನ ಇತ್ತಾಗಿದೆ.
ಮೋದೀಜಿ ಪುಟಿನ್ ಜೊತೆಗೂ ಒಳ್ಳೆಯ ಸಂಬಂಧ ಇರಿಸಿಕೊಂಡಿದ್ದಾರೆ. ಕಳೆದ ವರ್ಷ ರಶಿಯಾ ಪಾಕಿಸ್ತಾನದ ಜೊತೆ ಸೇರಿ ಶಸ್ತ್ರಾಭ್ಯಾಸ ನಡೆಸಿ, ಭಾರತದ ಪ್ರತಿಭಟನೆಯಿಂದ ಪಾಠ ಕಲಿತು ಇನ್ನು ಮುಂದೆ ಪಾಕಿಸ್ತಾನದ ಜೊತೆ ಯಾವುದೇ ಶಸ್ತ್ರಾಭ್ಯಾಸ ನಡೆಸುವುದಿಲ್ಲವೆಂದು ಘೋಷಿಸಿದೆ.
ಹಾಗಾಗಿ ಈ ಎರಡೂ ವಿಶ್ವ ನಾಯಕರ ರಾಜತಾಂತ್ರಿಕ ಗೆಳೆತನಕ್ಕೆ ಮತ್ತು ಮುಂದಿನ ಆ ನಿರ್ಣಾಯಕ ಯುದ್ಧಕ್ಕೆ ಮೋದೀಜಿ ಹೆಚ್ಚಿನ ಬಲ ತುಂಬಬಹುದು. ಜೊತೆಗೇ ಈ ಇಸ್ಲಾಂ ಭಯೋತ್ಪಾದನೆಯ ಜೊತೆ ಕಾದಾಡಿ ಗುದ್ದಾಡಿ ಭಾರತಕ್ಕೆ ಸಾವಿರ ವರ್ಷಗಳ ಅನುಭವವಿದೆ.. ಆದುದರಿಂದ ಮುಂದಿನ ಯುದ್ಧದಲ್ಲಿ ಭಾರತ ಮಹತ್ತರ ಪಾತ್ರ ವಹಿಸಲಿದೆ ಎಂಬುದಂತೂ ಪಕ್ಕಾ.