Infinite Thoughts

Thoughts beyond imagination

ನಾವು ಜಾತ್ಯಾತೀತರಲ್ಲ...! ನಮ್ಮ ರಕ್ತಕ್ಕೆ ಬೆಲೆಯಿದೆ

ಇತ್ತೀಚಿಗೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ಮುಂಡುಗೋಡಿನ ಚಿಗಳ್ಳಿ ಗ್ರಾಮದಲ್ಲಿ ಪಾಲ್ಗೊಂಡಾಗ ಮಾತನಾಡಿದ ಕೆಲವು ಮುಖ್ಯಾಂಶಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

" ಶಿವಾಜಿ ಜಾತ್ಯಾತೀತ, ರಾಣಾ ಪ್ರತಾಪ ... ಅವನೂ ಜಾತ್ಯಾತೀತ. ... ಅಲ್ರೀ... ಅವ್ರೆಲ್ಲ ಹುಟ್ಟಬೇಕಾದ್ರೆ ಜಾತ್ಯಾತೀತ ಎಂಬ ಶಬ್ದವೇ ಇರ್ಲಿಲ್ಲ.. ಜಗತ್ತಿನಲ್ಲಿ. ಅವರು ಜಾತ್ಯತೀತರು ಹೇಗಾಗ್ತಾರೆ? ಅವ್ರು ಹುಟ್ಟಿದ್ದೂ ಧರ್ಮಕ್ಕೋಸ್ಕರ... ಸತ್ತಿದ್ದೂ ಧರ್ಮಕ್ಕೋಸ್ಕರ...! ಅದಕ್ಕೋಸ್ಕರ ಧರ್ಮ ಅವರಿಗೆ ಮುಖ್ಯವಾಯ್ತು. ಬಂಧುಗಳೇ... ಇತಿಹಾಸದ ಬಗ್ಗೆ ಸ್ಪಷ್ಟ ಅರಿವು ನಮಗೆ ಇರಬೇಕು... ರಾಜಕಾರಣಕ್ಕೋಸ್ಕರ ನಮ್ಮ ರಕ್ತವನ್ನು ಮಾರಾಟ ಮಾಡಿಕೊಳ್ಳುವಂಥ ಜನಗಳು ನಾವಾಗಬಾರದು ಯಾವತ್ತಿಗೂ ಕೂಡ... ಅದೆಷ್ಟೋ ಸರಿ ಇತಿಹಾಸದ ಜೊತೆಗೆ ಅಪಚಾರ ನಡೆದಿದೆ... ನಮಗೇ ಗೊತ್ತಿಲ್ಲ. ನಿನ್ನೆಯಷ್ಟೇ ಸುಮ್ಮನೆ ಪುಸ್ತಕವೊಂದನ್ನು ಓದುತ್ತ ಇದ್ದೆ..

ರಾತ್ರಿ... ಮಕ್ಕಳು ಶಿವಾಜಿ ಬಗ್ಗೆ ಕಥೆ ಹೇಳಬೇಕು ಅಂತ ಅಂದ್ರು... ಶಿವಾಜಿಯ ಕಥೆ ಹೇಳಿದೆ... ನಂತರ ವಿಜಯನಗರ ಸಾಮ್ರಾಜ್ಯದ ಬಗ್ಗೆ ಏನೋ ಒಂದು ಡೌಟ್ ಇತ್ತು... ಅದಕ್ಕೋಸ್ಕರ ಪುಸ್ತಕ ಓದಲು ಶುರು ಮಾಡಿದೆ... ನಿಜಕ್ಕೂ ಇಲ್ಲಿರತಕ್ಕಂಥ ನಮ್ಮ ಉತ್ತರ ಕನ್ನಡ ಜಿಲ್ಲೆಯವರು ಹೆಮ್ಮೆ ಪಟ್ಕೋಬೇಕು... ವಿಜಯನಗರದ ಸ್ಥಾಪಕರಾಗಿರತಕ್ಕಂಥ ಹಕ್ಕ ಮತ್ತು ಬುಕ್ಕ... ಮತ್ತೆಲ್ಲಿಯವರಲ್ಲಾ ಸ್ವಾಮೀ... ಉತ್ತರಕನ್ನಡದ ಹಿರೇಗುತ್ತಿಯವರು. ಇವತ್ತೂ ಕೂಡಾ ಅವರು ಹುಟ್ಟಿದ ಗುತ್ತಿಯ ಮನೆ.... ಇವತ್ತು ಕೂಡಾ ಇದೆ. ಇತಿಹಾಸ ಓದಬೇಕಾದರೆ ನನಗೆ ನಿಜಕ್ಕೂ ಒಂದು ರೀತಿಯ ದುಃಖ .... ಮಧ್ಯದಲ್ಲೇ ಹೈವೇ ಹಾದು ಹೋಗಿದೆ... ಇಡೀ ವಿಜಯನಗರದ ಸ್ಥಾಪಕರಾಗಿರತಕ್ಕಂಥ ಹಕ್ಕ ಮತ್ತು ಬುಕ್ಕ ... ಅವರು ವಾಸ ಮಾಡಿದಂಥ ಅರಮನೆಯನ್ನು ಅಭಿವೃದ್ಧಿಯ ಹೆಸರಿನಲ್ಲಿ ನಾಶ ಮಾಡಿ... ಅದರ ಮೇಲೆ ಹೈವೇ ಯನ್ನು ಕಟ್ಟಿದ್ದಾರೆ... ಅದಕ್ಕೆ ಲೆಟರ್ ಕೊಟ್ಟಿರತಕ್ಕಂಥವರು ನಮ್ಮ ಜಿಲ್ಲೆಯ ಪ್ರಮುಖರೇ... !

ಇತಿಹಾಸದ ಬಗ್ಗೆ ಗೊತ್ತಿಲ್ಲದೇ ಇರತಕ್ಕಂಥ ಜನಗಳು... ಇವತ್ತು ಹೈವೇಯ ಕೆಳಗಡೆ ನಮ್ಮ ಹಕ್ಕ-ಬುಕ್ಕ ಅರಮನೆಯ ಅವಶೇಷಗಳಿದ್ದಾವೆ ! ಇವತ್ತು ಕೂಡ ಹಾಗೇ ... ಅದರ ಜೊತೆಗೆ.... ಎರಡು ನೂರಾ ತೊಂಬತ್ತೇಳು ವರ್ಷಗಳ ಹಿಂದೆ... . ಎರಡು ನೂರಾ ತೊಂಬತ್ತೇಳು ವರ್ಷಗಳ ಹಿಂದೆ.ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ..ನೆಲ ಇದ್ದರೆ... . ಅದು ಉತ್ತರಕನ್ನಡ ಜಿಲ್ಲೆ. ಮತ್ತ್ಯಾರೂ ಕೂಡ ಮಾಡಿಲ್ಲ... ನಮ್ಮ ದೇಶದಲ್ಲಿ.... ಕಾರವಾರದ ಕಳವಾಟದಲ್ಲಿದ್ದಂಥ ಬ್ರಿಟಿಷರನ್ನ ಹೊಡೆದೋಡಿಸತಕ್ಕಂಥದ್ದು ನಮ್ಮ ಸೋಂದೆಯ ರಾಜರು... ಐತಿಹಾಸ ಹೇಳುತ್ತೆ... ಆದ್ರೆ... ನಮಗೆ ನಮ್ದೇ ಮಣ್ಣಿನ ಕಲ್ಪನೆ ಇಲ್ಲ... ಇಡೀ ದೇಶದಲ್ಲೇ ಯಾವ ಜಿಲ್ಲೆಯಲ್ಲಿಯೂ ಕೂಡ ಇಷ್ಟೊಂದು ಕೋಟೆಗಳಿರಲಿಕ್ಕಿಲ್ಲ. ಸುಮಾರು ಮೊವತ್ತಾರು ಕೋಟೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದಾವೆ . ಪ್ರಾಚೀನ ಕೋಟೆಗಳು... ಕೇವಲ ಮುನ್ನೂರು... ನಾನೂರು ವರ್ಷದ ಹಿಂದಿನ ಕೋಟೆಗಳಲ್ಲ. ಸಾವಿರ... ಎರಡು ಸಾವಿರ ವರ್ಷಗಳ ಹಿಂದಿನ ಕೋಟೆಗಳು ಇವತ್ತು ಉತ್ತರಕನ್ನಡ ಜಿಲ್ಲೆಯಲ್ಲಿವೆ... ಸುಮಾರು ಮೊವತ್ತಾರು ಕೋಟೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿವೇ. ಇದು ಪುಣ್ಯ ಭೂಮೀನೂ ಹೌದು ... ವೀರ ಭೂಮೀನೂ ಹೌದು ಕಣ್ರೀ ... ತಟ್ಟಿಕೊಳ್ಳಿರೀ... ಮತ್ತೊಂದು ಸಲ ಎದೆಯನ್ನ... ಜಿಲ್ಲೆಯಲ್ಲಿ ಹುಟ್ಟಿದ್ದೀವಲ್ಲಾ.... ಅದಕ್ಕೋಸ್ಕರ ಹೆಮ್ಮೆ ಪಟ್ಟುಕೊಳ್ಳಬೇಕು.

ನಾವು... ಶಿವಾಜಿ... ಧರ್ಮಕ್ಕೋಸ್ಕರ ಹುಟ್ಟಿರತಕ್ಕಂಥ ಮಹಾಪುರುಷ... ಜೀಜಾಬಾಯಿ... ಅವನನ್ನು ಬೆಳೆಸಿದ್ದು ಧರ್ಮದ ರಕ್ಷಣೆಗೋಸ್ಕರ.... ಕತ್ತಿಯನ್ನು ಕೊಟ್ಟಿದ್ದು ಕೂಡಾ ಧರ್ಮದ ರಕ್ಷಣೆಗೋಸ್ಕರ... ತಾಯಿ ಭವಾನಿ ಕತ್ತಿಯನ್ನು ಕೊಟ್ಟಿದ್ದು ಕೂಡಾ ಧರ್ಮದ ರಕ್ಷಣೆಗೋಸ್ಕರ... ನಾವು ಇವತ್ತು ಇಷ್ಟೆಲ್ಲ ಇತಿಹಾಸವನ್ನು ಓದುತ್ತೇವೆ... ಇತಿಹಾಸದಲ್ಲಿ ಕೆಲವೇ ಕೆಲವು ಹೆಸರುಗಳು ನಮ್ಮ ಕಣ್ಣ ಮುಂದೆ ಕಾಣುತ್ತವೆ... ಎಂಥಾ ಹೆಸರುಗಳದು...? ತುಂಬಾ ಒಳ್ಳೆಯ ಆಡಳಿತವನ್ನು ನಡೆಸಿದ್ರು... ಒಂದಿಷ್ಟು ಗಿಡಗಳನ್ನ ನೆಟ್ಟರು... ಒಂದಿಷ್ಟು ಕೆರೆಗಳನ್ನು ಕಟ್ಟಿದ್ರು... ಜನರಿಗೆ ಅನುಕೂಲ ಮಾಡಿದ್ರು... ಅಂಥವರ ಹೆಸರುಗಳು ತುಂಬಾ ಕಣ್ಣಿಗೆ ಕಾಣುತ್ತವೆ... ಯಾರು ಧರ್ಮಕ್ಕೋಸ್ಕರ ಬದುಕ್ಕಿದ್ದರೋ ..! ಯಾರು ಧರ್ಮಕ್ಕೋಸ್ಕರ ಸತ್ತಿದ್ದಾರೋ... ! ಅಂಥವರ ಹೆಸರುಗಳನ್ನು ಇವತ್ತು ಇಡೀ ದೇಶದಲ್ಲಿ ನಾವು ಕೊಂಡಾಡ್ತೇವೆ... ಅಂಥವರ ಹೆಸರೇ ಇವತ್ತು ರಾರಾಜಿಸ್ತಿದೆ.. ಇವತ್ತು ಬುಂದೇಲ್ ಖಂಡದ ಚ್ಛತ್ರಸಾಲ ಇರಬಹುದು... ಅಸ್ಸಾಮಿನ ಲಾಚಿತ್ ಭೋರ್ಫುಕಾನ್ ಇರಬಹುದು... ರಾಣಾ ಪ್ರತಾಪ ಸಿಂಹ ಇರಬಹುದು... ಕಿತ್ತೂರು ರಾಣಿ ಚೆನ್ನಮ್ಮ ಇರಬಹುದು... ಛತ್ರಪತಿ ಶಿವಾಜಿ ಇರಬಹುದು... ಯಾರೂ ಕೂಡ ಆದರ್ಶ ಆಡಳಿತವನ್ನು ಕೊಟ್ಟರು ಅಂತಲ್ಲ .... ಬದಲಾಗಿ ಧರ್ಮಕ್ಕೋಸ್ಕರ... ತಮ್ಮ ಪ್ರಾಣವನ್ನು ಪಣವಾಗಿಟ್ಟಿದ್ರೆಂಬ ಕಾರಣಕ್ಕೋಸ್ಕರ ನಾವೀವತ್ತು ಅವರನ್ನು ನೆನಪಿಸಿಕೊಳ್ಳಬೇಕು... ಬಂಧುಗಳೇ... ಹೆಮ್ಮೆ ಪಟ್ಟುಕೋಬೇಕು... ರಕ್ತದಲ್ಲಿ ಹುಟ್ಟಿದ್ದೀವಿ... ರಕ್ತದಲ್ಲಿನ ಹುರುಪಿನ ಜೊತೆಗೇ ಬದುಕಬೇಕು ನಾವು... ಎಷ್ಟೋ ಸಲ ನಾನು ಹೇಳ್ತೀನಿ... ದಯವಿಟ್ಟು ನನ್ನ ಮಾತು ಒರಟಾದ್ರೆ ಕ್ಷಮಿಸಿಬಿಡ್ರಿ ... ನಮ್ಮ ಅಪ್ಪ ಅಮ್ಮನಿಗೆ ಹುಟ್ಟಿದ್ದೇವೆ... ಅಪ್ಪ ಅಮ್ಮನ ರಕ್ತಕ್ಕೆ ಯಾವತ್ತೂ ಅಪಚಾರ ಮಾಡಬಾರದು.... ರಕ್ತದ ಮೇಲೆ ಹೆಮ್ಮೆಯಿರಬೇಕು... ನಮ್ಮದು ಕಲಸುಮೇಲೋಗರ ರಕ್ತ ಅಲ್ಲ... ಬೇವಾರ್ಸಿ ರಕ್ತ ಅಲ್ಲ... ನಮ್ಮ ಅಪ್ಪ ಯಾರು ಅನ್ನೋದೂ ಗೊತ್ತಿದೆ... ನಮ್ಮ ಅಮ್ಮ ಯಾರು ಅನ್ನೋದೂ ಗೊತ್ತಿದೆ... ಅಂಥವರ ಮಕ್ಕಳು ನಾವು... ನಾವು ಜಾತ್ಯಾತೀತರಲ್ಲ...! ನಾವು ಜಾತ್ಯಾತೀತರಲ್ಲ...! ನಮ್ಮ ರಕ್ತಕ್ಕೆ ಬೆಲೆಯಿದೆ... ನಮ್ಮ ರಕ್ತಕ್ಕೊಂದು ಗುರುತಿದೆ... ಅಪ್ಪನ ಪರಿಚಯವೇ ಇಲ್ಲದೆ ಇರತಕ್ಕಂಥವರು ಜಾತ್ಯಾತೀತರು.. ಆದ್ರೆ ಯಾರಿಗೆ ಅಪ್ಪನ ಪರಿಚಯ ಇದೆಯೋ.. ಅವನು ಜಾತ್ಯಾತೀತ ಆಗಲಿಕ್ಕೆ ಸಾಧ್ಯವೇ.. ಇಲ್ಲ..."

Related posts