ಒಡಹುಟ್ಟಿದ ತಮ್ಮನಂಥಾ ಪರೇಶನಿಗೆ ....
ಒಡಹುಟ್ಟಿದ ತಮ್ಮನಂಥಾ ಪರೇಶನಿಗೆ ....
ಹದಿನೆಂಟನೆಯ ಹುಟುಹಬ್ಬ ಆಚರಿಸಿಕೊಂಡು ಕೆಲ ತಿಂಗಳುಗಳು ಕಳೆದಿತ್ತಷ್ಟೇ... ಪರೇಶ್ ಮೇಸ್ತ ಎಂಬ ಆ ಚುರುಕು ಹುಡುಗ ತನ್ನ ಹದಿವಯಸ್ಸು ಮಾಸುವ ಮುನ್ನವೇ ಜೀವನ ಯಾತ್ರೆಯನ್ನೇ ಮುಗಿಸಿದ್ದ. ಡಿಸೆಂಬರ್ ಆರನೇ ತಾರೀಕು ಪರೇಶನ ಪಾಲಿಗೆ ಶೌರ್ಯ ದಿವಸವಾಗಿತ್ತಾದರೆ... ಇನ್ನೂ ಕೆಲವರಿಗೆ ಅದು ಕರಾಳ ದಿನವಾಗಿತ್ತು. ಹೊನ್ನಾವರದಲ್ಲಿ ಇದೇ ಕರಾಳ ದಿನದ ನೆಪದಲ್ಲಿ ಕಲ್ಲು ತೂರಾಟ, ದೊಂಬಿ, ಗಲಾಟೆಗಳು ನಡೆದವು. ಮತಾಂಧ ಮನಸುಗಳೊಳಗೆ ಮಾನವೀಯತೆ ಸತ್ತು ಹೋಗಿತ್ತು. ಪರೇಶನಂಥ ಒಂಟಿ ಅಸಹಾಯಕ ಹುಡುಗ ಪಾಶವೀ ಮನಸ್ಥಿತಿಯ ಆ ಮನುಷ್ಯರೂಪದ ಮೃಗಗಳಿಗೆ ಸುಲಭದ ತುತ್ತಾದ.
ಪಾಪ... ಆ ಎಳೆಯ ಜೀವ ಕೊನೆಯುಸಿರು ಎಳೆಯುವ ಮುನ್ನ ಅದೆಷ್ಟು ನೋವನುಭವಿಸಿತೋ ಏನೋ? ನೀರೊಳಗೆ ಈಜುವ ಮೀನನ್ನು ಹಿಡಿಯುತ್ತಿದ್ದ, ಸ್ವತಹಾ ತಾನೇ ಮೀನಿಗಿಂತಲೂ ಚುರುಕಾಗಿ ಈಜುತ್ತಿದ್ದ ಪರೇಶ ಮೇಸ್ತ ಹೊನ್ನಾವರದ ಶೆಟ್ಟಿಕೆರೆಯಲ್ಲಿ ಶವವಾಗಿ ತೇಲುತ್ತಿದ್ದ... ಅಧರ್ಮದ ಅಮಲಿನಿಂದ ಕುರುಡರಾಗಿದ್ದ ಜನ ಅಮಾಯಕ ಪರೇಶನನ್ನು ಅಮಾನವೀಯವಾಗಿ ಸಾಯಿಸಿದರು ಎಂಬುದು ಎಲ್ಲರಿಗೂ ನಿಚ್ಚಳವಾಗಿಯೇ ಅನ್ನಿಸುತ್ತಿತ್ತಾದರೂ ಕೊಲೆಗಾರರ ಬೆಂಬಲಕ್ಕೆ ಆಳುವ ಸರಕಾರವೇ, ಅದರ ಅಧಿಕಾರಿಗಳೇ ನಿಂತುಬಿಟ್ಟರು. ಜನ ಬೀದಿಗಿಳಿದರೂ ಸೆಕ್ಯುಲರ್ ಹೆಸರಿನ ಹೇಸಿಗೆ ರಾಜಕೀಯದ ಕೈಯೇ ಮೇಲಾಯಿತು. ಪರೇಶ ಕಾಣೆಯಾಗಿದಾಗ ಆತನ ತಂದೆಯೇ ಪೊಲೀಸ್ ಕಂಪ್ಲೇಂಟ್ ನಲ್ಲಿ ಐದಾರು ಜನರ ಮೇಲೆ ಅನುಮಾನ ವ್ಯಕ್ತಪಡಿಸಿ ಹೆಸರುಗಳನ್ನೂ ನಮೂದಿಸಿದ್ದರು. ಆದರೆ ಖಾಕಿ ಗೋಸುಂಬೆಯಂತೆ ಬಣ್ಣ ಬದಲಿಸಿತು, ಖಾದಿ ಸೆಕ್ಯುಲರಿಸಂ ರಾಗ ಹಾಡಿತು. ಪರೇಶ ಮೇಸ್ತನದ್ದು ಕೊಲೆಯೇ ಅಲ್ಲ ಆಕಸ್ಮಿಕ ಸಾವು ಅಂತ ತಿಪ್ಪೇ ಸಾರಿಸಲು ಸಾಕ್ಷಾತ್ತು ಅಂದಿನ ಮುಖ್ಯಮಂತ್ರಿಗಳೇ ತಮ್ಮ ಟವಲ್ ಕೊಡವಿ ಎದ್ದುನಿಂತ ಮೇಲೆ ಇನ್ನೇನಿದೆ... ಸಾಕ್ಷ್ಯಗಳು ಉಳಿದಾವೇ..?
ಪ್ರತಿಭಟನೆ ಹೋರಾಟಗಳು ತೀವ್ರ ರೂಪ ಪಡೆದುಕೊಂಡ ಮೇಲೆಯೇ ಸರಕಾರ ಪ್ರಕರಣದ ತನಿಖೆಯನ್ನು ಸಿಬಿಐ ಗೆ ಒಪ್ಪಿಸಿದ್ದು. ಆದರೆ ಅಷ್ಟರಲ್ಲಿ ಇದೊಂದು ಆಕಸ್ಮಿಕ ಸಾವು ಅಂತ ನಿರೂಪಿಸಲಿಕ್ಕೇ ಹೆಣಗಾಣಿದ ಅಧಿಕಾರಿಗಳು, ಮಂತ್ರಿಗಳು ಎಲ್ಲರೂ ಸೇರಿಕೊಂಡು ಸಾಕ್ಷ್ಯ ನಾಶ ಮಾಡದೆಯೇ ಇದ್ದಾರೇ ಎಂಬ ಅನುಮಾನಗಳು ಬಲವಾಗತೊಡಗಿದವು. ಆದರೂ ಸಿಬಿಐ ತನಿಖೆ ನಡೆಸಿದ್ದೇ ಆದರೆ ಈ ಅನ್ಯಾಯದ ಸಾವಿಗೆ ಸ್ವಲ್ಪ ಮಟ್ಟಿಗಿನ ನ್ಯಾಯವಾದರೂ ಸಿಗಬಹುದೇನೋ ಎಂಬ ಒಂದು ಆಸೆ ನಿರೀಕ್ಷೆ ಎಲ್ಲರಲ್ಲೂ ಇತ್ತು.
ಅದಕ್ಕೆ ಇಂಬು ನೀಡುವಂತೆ ಪರೇಶನ ಸಾವಿನ ನಾಲ್ಕು ತಿಂಗಳ ಬಳಿಕ ಸಿಬಿಐ ತನಿಖೆ ಕೈಗೆತ್ತಿಕೊಂಡು ಹೊಸದಾಗಿಯೇ ಎಫ್ ಐ ಆರ್ ದಾಖಲಿಸಿತು. ಹಳೆಯ ಎಫ್ ಐ ಆರ್ ನಲ್ಲೂ ಮುಸ್ಲಿಮರು ಏಕಾಏಕಿ ಕಲ್ಲು ತೂರಾಟ ಆರಂಭಿಸಿ , ಕತ್ತಿ, ತಲವಾರು, ಕಬ್ಬಿಣದ ರಾಡು ಹಿಡಿದುಕೊಂಡು ದೇವಾಲಯದ ಮೇಲೆ, ಅಂಗಡಿ ಮುಂಗಟ್ಟುಗಳ ಮೇಲೆ, ವಾಹನಗಳ ಮೇಲೆ, ಸಾರ್ವಜನಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತು ಎಂಬುದನ್ನು ಉಲ್ಲೇಖಿಸಲಾಗಿದೆ. ಈ ಗುಂಪೇ ಪರೇಶ್ ಮೇಸ್ತಾ ಮೇಲೂ ದಾಳಿ ನಡೆಸಿ ಅವನನ್ನು ಕೊಲೆ ಮಾಡಿ ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದಲೇ ಶೆಟ್ಟಿಕೆರೆಗೆ ಬಿಸಾಡಿತು ಎಂಬುದು ಕೂಡ ಎಫ್ ಐ ಆರ್ ನಲ್ಲಿ ಇದೆ. ಈಗ ಸಿಬಿಐ ತನಿಖೆ ಕೈಗೆತ್ತಿಕೊಂಡ ಮೇಲೆ ಹಲವಾರು ಸುತ್ತುಗಳ ವಿಚಾರಣೆ, ತನಿಖೆ ನಡೆದಿದೆ. ಆಜಾದ್ ಅಣ್ಣಿಗೇರಿ, ಆಸೀಫ್ ರಫೀಕ್, ಮೊಹಮ್ಮದ್ ಫೈಸಲ್ ಅಣ್ಣಿಗೇರಿ, ಇಮ್ತಿಯಾಜ್ ಘನಿ ಮತ್ತು ಸಲೀಂ ಅನ್ನುವವರನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ಖಂಡಿತಾ ಅಪರಾಧಿಗಳ ಪತ್ತೆ ಆಗಲಿ, ಆರೋಪ ಸಾಬೀತು ಆಗಿ ಅವರಿಗೆ ಶಿಕ್ಷೆ ಆಗಲಿ ಎಂಬುದು ಎಲ್ಲರ ಅಪೇಕ್ಷೆ, ಮುಗ್ಧ ಪರೇಶನನ್ನು ಅಮಾನವೀಯವಾಗಿ ಹಿಂಸೆ ನೀಡಿ ಕೊಂದ ಕೊಲೆಗಾರರು ಖಂಡಿತಾ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲಾರರು... ಪರೇಶನ ಅನ್ಯಾಯದ ಸಾವಿಗೆ ಖಂಡಿತಾ ನ್ಯಾಯ ದೊರಕೀತು ಎಂಬ ಭರವಸೆಯೊಂದಿಗೆ......
ನನ್ನ ತಮ್ಮನಂಥಾ ಪರೇಶ ಮೇಸ್ತನಿಗೆ ಅಶ್ರುತರ್ಪಣ ಸಲ್ಲಿಸುತ್ತಾ... ಅವನ ಆತ್ಮಕ್ಕೆ ಸದ್ಗತಿ ದೊರಕಲೆಂದೂ ... ಅವನ ಮನೆಯವರಿಗೆ, ಬಂಧು ಬಳಗಕ್ಕೆ ಅವನ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ದೇವಿ ಮಾರಿಕಾಂಬೆ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ ...