Infinite Thoughts

Thoughts beyond imagination

ರಾಮ ನವಮಿ ಎಲ್ಲರಿಗೂ ಶುಭವನ್ನು ಉಂಟುಮಾಡಲೆಂದು ಹಾರೈಸುತ್ತೇನೆ...!!!

ಐನೂರು ವರ್ಷಗಳ ಬಳಿಕ ರಾಮನ ಜನ್ಮಭೂಮಿಯಲ್ಲಿ ರಾಮನವಮಿಯ ಸಂಭ್ರಮ ಮೂಡಬಹುದೇ?

ಜಗತ್ತಿನಾದ್ಯಂತ ಇರುವ ಭಾರತೀಯರೆಲ್ಲರೂ ರಾಮನವಮಿಯನ್ನು ಹಬ್ಬದ ಸಡಗರದಲ್ಲಿ ಆಚರಿಸುತ್ತಾರೆ. ಆದರೆ ಭಗವಾನ್ ಶ್ರೀ ರಾಮನ ಜನ್ಮಭೂಮಿಯಲ್ಲಿ ಮಾತ್ರ ರಾಮನವಮಿಯ ಸಡಗರ ನಿಂತು ಹೋಗಿ ಅಂದಾಜು ನಾಲ್ಕುನೂರಾ ಎಂಭತ್ತು ವರ್ಷಗಳಾದವು.!!

ಹೌದು... ೧೫೨೮ ರಲ್ಲಿ ಮುಘಲ್ ದಾಳಿಕೋರ ಬಾಬರನ ಸೇನೆಯ ದಂಡನಾಯಕ ಮೀರ್ ಬಾಖಿ ಅಯೋಧ್ಯೆಯಲ್ಲಿನ ರಾಮನ ಜನ್ಮಭೂಮಿಯಲ್ಲಿದ್ದ ಭವ್ಯ ಮಂದಿರವನ್ನು ನೆಲಕ್ಕೆ ಕೆಡವಿ ಅವಶೇಷದ ಮೇಲೆಯೇ ಮಸೀದಿ ನಿರ್ಮಿಸಿದ. ಬಾಬರ ಮಸೀದಿ ನಿರ್ಮಿಸಿದ್ದರಿಂದ ಅದನ್ನು 'ಬಾಬರಿ ಮಸೀದಿ' ಅಂತಲೇ ಕರೆಸಿಕೊಂಡಿತು. ಯಾವಾಗ ರಾಮ ಜನ್ಮಭೂಮಿಯಲ್ಲಿ ದೇವಳವನ್ನು ಕೆಡವಿ ಮಸೀದಿ ನಿರ್ಮಿಸಲಾಯಿತೋ , ಅಂದಿನಿಂದಲೇ ಮತ್ತೆ ಜಾಗವನ್ನು ವಶಕ್ಕೆ ಪಡೆದು ಮಂದಿರ ನಿರ್ಮಿಸುವ ಹೋರಾಟಗಳು ಶುರುವಾದವು. ಇದಕ್ಕಾಗಿ ಹಲವಾರು ಯುದ್ಧಗಳೇ ನಡೆದವು. ಆದರೆ ಪ್ರಯೋಜನ ಮಾತ್ರ ಶೂನ್ಯ. ರಜಪೂತರಾಜ ಸವಾಯಿ ಜಯಸಿಂಗನ ಕಾಲದಲ್ಲಿ ಅಯೋಧ್ಯೆ ಅವನ ವಶಕ್ಕೆ ಬಂತಾದರೂ, ಅಲ್ಲಿದ್ದ ಮಸೀದಿಯನ್ನೇನೂ ಮಾಡಲಾಗಲಿಲ್ಲ.

ನಂತರ ಇದನ್ನು ವಶಪಡಿಸಿಕೊಳ್ಳುವ ಪ್ರಯತ್ನಗಳು ಹಲವಾರು ನಡೆದವಾದರೂ ಯಶಸ್ವಿಯಾಗಲಿಲ್ಲ. ದೇಶ ಬ್ರಿಟಿಷರ ಅಡಿಯಲ್ಲಿದ್ದಾಗ ಅಯೋಧ್ಯೆಯ ರಾಮ ಜನ್ಮಭೂಮಿಯ ಸಮೀಪವೇ ಇದ್ದ ಹನುಮಾನ್ ಘರಿಯನ್ನು ವಶಪಡಿಸಿಕೊಳ್ಳಲು ಹಿಂದೂಗಳು ಸಂಘಟಿತರಾಗಿ ಹೋರಾಡಿ ಬಾಬರಿ ಮಸೀದಿಯ ಮೇಲೆ ದಾಳಿ ಮಾಡಿದರು. ಆಗ ಹಿಂಸಾಚಾರ ಸಂಭವಿಸಿತು. ಆದರೂ ಹಿಂದೂಗಳು ಅಲ್ಲಿ ಮಸೀದಿಯ ಹೊರಗಡೆ ರಾಮಲಲ್ಲಾನನ್ನು ಪೂಜಿಸುತ್ತ ಪ್ರತಿವರ್ಷ ರಾಮನವಮಿಯನ್ನು ಆಚರಿಸುತ್ತಿದರು. ಬ್ರಿಟಿಷರ ನ್ಯಾಯಾಲಯಗಳಲ್ಲಿ ಬಾಬರಿ ಮಸೀದಿ ವಿಚಾರದಲ್ಲಿ ದಾವೆಗಳೂ ದಾಖಲಾದವು. ೧೮೫೮ರಲ್ಲಿ ಬಾಬರೀ ಮಸೀದಿಯ ಮುಹಾಜಿನ್ 'ನೂರಾರು ವರ್ಷಗಳಿಂದಲೂ ಹಿಂದೂಗಳು ಇಲ್ಲಿ ರಾಮನನ್ನು ಪೂಜಿಸುತ್ತಾ ಇದ್ದಾರೆ' ಅಂತ ಬ್ರಿಟಿಷ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ. ಬಳಿಕ ೧೮೮೫ರಲ್ಲಿ ಮಹಾಂತ ರಘುಬರ ದಾಸರು ಮಸೀದಿಯಿರುವ ಸ್ಥಳದಲ್ಲಿ ರಾಮನ ಮಂದಿರ ಕಟ್ಟಲು ಅನುಮತಿ ಕೇಳಿ ಬ್ರಿಟಿಷರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದರು. ೧೮೮೬ರ ಮಾರ್ಚ್ ೧೮ರಂದು ಅಲ್ಲಿಗೆ ಭೇಟಿ ನೀಡಿದ ಫೈಜಾಬಾದ್ ಜಿಲ್ಲಾ ನ್ಯಾಯಾಲಯದ ಬ್ರಿಟಿಷ್ ನ್ಯಾಯಾಧೀಶ ಕರ್ನಲ್ ಎಫ್. . . ಚಾಮಿಯರ್ ಎಂಬಾತ ಹಿಂದೂ ದೇವಳವನ್ನು ಧ್ವಂಸ ಮಾಡಿಯೇ ಅಲ್ಲಿ ಮಸೀದೀ ನಿರ್ಮಿಸಿದ್ದು ನಿಜವೆಂದು ಒಪ್ಪಿಕೊಂಡರೂ, ಈಗಾಗಲೇ ಘಟನೆ ಸಂಭವಿಸಿ ೩೫೬ ವರ್ಷಗಳಾದುದರಿಂದ ಹಿಂದೂಗಳ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲವೆಂದುಬಿಟ್ಟ... ಸ್ವಾತಂತ್ರ್ಯ ಸಿಗುವುದಕ್ಕಿಂತ ಸ್ವಲ್ಪ ಮೊದಲು ೧೯೪೬ರಲ್ಲಿ ಹಿಂದೂ ಮಹಾಸಭಾದ ಅಂಗ ಸಂಸ್ಥೆ 'ಅಖಿಲ ಭಾರತೀಯ ರಾಮಾಯಣ ಮಹಾಸಭಾ' ಮತ್ತೊಮ್ಮೆ ಜನ್ಮಭೂಮಿಯನ್ನು ವಶಕ್ಕೆ ಪಡೆಯಲು ಹೋರಾಟ ಪ್ರಾರಂಭಿಸಿತು.

೧೯೪೯ರಲ್ಲಿ ಒಂದು ಮಹತ್ವದ ಘಟನೆ ಸಂಭವಿಸಿತು. ಹಿಂದೂ ಮಹಾಸಭಾದ ನಾಯಕರಾಗಿದ್ದ, ಗೋರಖ್ ಪುರದ ಶ್ರೀ ಗೋರಖ್ ನಾಥ್ ಮಂದಿರದ ಮಹಾಂತ ಶ್ರೀ ದಿಗ್ವಿಜಯನಾಥರು ಜನ್ಮಭೂಮಿಯಲ್ಲಿ ಒಂಭತ್ತು ದಿನಗಳ ಕಾಲ 'ರಾಮಚರಿತ ಮಾನಸ' ಪಠಣ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಒಂಭತ್ತನೇ ದಿನ ಅಂದರೆ ೧೯೪೯ರ ಡಿಸೆಂಬರ್ ೨೨ರಂದು ಶ್ರೀ ದಿಗ್ವಿಜಯನಾಥರು ಮತ್ತು ಅವರ ಜೊತೆಯಲ್ಲಿದ್ದ ಭಕ್ತಾದಿಗಳು ಏಕಾಏಕಿ ಮಸೀದಿಯೊಳಗೆ ನುಗ್ಗಿ ರಾಮಲಲ್ಲಾನ ವಿಗ್ರಹವನ್ನು ಮಸೀದಿಯೊಳಗೆ ಸ್ಥಾಪಿಸಿದರು!!! ಆಗ ಪ್ರಧಾನಿಯಾಗಿದ್ದ ನೆಹರೂ ಇದರಿಂದ ಕೆಂಡಾಮಂಡಲರಾದರು... ಕೂಡಲೇ ವಿಗ್ರಹಗಳನ್ನು ತೆರವುಗೊಳಿಸುವಂತೆ ಅಲ್ಲಿನ .ಸಿ.ಎಸ್. ಅಧಿಕಾರಿಯಾಗಿದ್ದ ಕೆ.ಕೆ.ಕೆ.ನಾಯರ್ ಗೆ ಸೂಚಿಸಿದರು. ಹಿಂದೂ ರಾಷ್ಟ್ರೀಯವಾದಿಯಾಗಿದ್ದ ಖಡಕ್ ಅಧಿಕಾರಿ ನೆಹರೂರ ಆಜ್ಞೆಯನ್ನು ಪಾಲಿಸಲು ಒಪ್ಪಲೇ ಇಲ್ಲ. ಕೋಮು ಗಲಭೆಗಳಾಗಬಹುದು ಎಂಬ ಕಾರಣವೊಡ್ಡಿ ವಿಗ್ರಹಗಳನ್ನು ತೆರವುಗೊಳಿಸಲು ಒಪ್ಪದೇ ಗೇಟುಗಳಿಗೆ ಬೀಗ ಜಡಿದು ಹಿಂದೂಗಳಿಗೂ ಮತ್ತು ಮುಸ್ಲಿಮರಿಗೂ ಪ್ರವೇಶವನ್ನೇ ನಿರ್ಬಂಧಿಸಿದರು. ಮುಂದೆ ನಾಯರ್ ಭಾರತೀಯ ಜನಸಂಘ ಸೇರಿ ಚುನಾವಣೆಗೆ ಸ್ಪರ್ಧಿಸಿ ಸಂಸದರು ಆದರು.

ಮಧ್ಯದಲ್ಲಿ ೧೯೭೭-೭೮ರಲ್ಲಿ ಆರ್ಕಿಯೋಲೋಜಿ ಸರ್ವೇ ಆಫ್ ಇಂಡಿಯ ಕೈಗೊಂಡ ಉತ್ಕನನ ದಲ್ಲಿ ಅಲ್ಲಿ ಪುರಾತನವಾದ ಸನಾತನ ಮಂದಿರವಿರುವ ಪುರಾವೆಯನ್ನು ಸಹ ಪತ್ತೆಮಾಡಿತು. ಹಾಗಂತ ಘೋಷಣೆ ಮಾಡಿ ನ್ಯಾಯಾಲಯಕ್ಕೆ ಪುರಾವೆ ಒದಗಿಸಿದ ತಂಡದಲ್ಲಿ ಅಂದು ಇದ್ದದ್ದು ಡಾ. ಕೆ ಕೆ ಮೊಹಮ್ಮದ್, ಎನ್ನುವ ಪ್ರಸಿದ್ಧ ಇತಿಹಾಸ ತಜ್ಞ. ಅವರು ಆರ್ಕಿಯೋಲೋಜಿ ಸರ್ವೇ ಆಫ್ ಇಂಡಿಯ ಸಂಸ್ಥೆಯ ಉತ್ತರ ಭಾಗದ ಪ್ರಾದೇಶಿಕ ನಿರ್ದೇಶಕರಾಗಿದ್ದರು. ಅವರೇ ಹೇಳಿದಂತೆ ಎಡ ಪಂಥದ ಹಾಗು ಕಮ್ಯುನಿಸ್ಟ್ ಚಿಂತನೆಯ "ಇತಿಹಾಸಕಾರ" ರೆಂದು ಕರೆಸಿಕೊಳ್ಳುವ ಮಂದಿ (ಇರ್ಫಾನ್ ಹಬೀಬ್, ರೋಮಿಲ ಥಾಪರ್, ಕೆ ಏನ್ ಪೆನ್ನಿಕ್ಕರ್ ರಂಥ) ಇಸ್ಲಾಂಮೀ ಉಗ್ರರೊಂದಿಗೆ ಸೇರಿಕೊಂಡು ಕಳೆದ ೫೦-೬೦ ವರ್ಷಗಳ ಕಾಲ ಸಮಸ್ಯೆಗೆ ಅಡ್ಡಿಪಡಿಸುತ್ತಿದ್ದಾರೆ.

ಬಳಿಕ ನಡೆದ ಬೆಳವಣಿಗೆಗಳು ನಮಗೆಲ್ಲ ಗೊತ್ತಿರುವಂಥದ್ದೇ. ವಿಶ್ವ ಹಿಂದೂ ಪರಿಷತ್ತು ಹೋರಾಟವನ್ನು ಕೈಗೆತ್ತಿಕೊಂಡದ್ದು, ಬಳಿಕ ನಡೆದದ್ದು ಶ್ರೀ ಅಡ್ವಾಣಿಯವರ ಐತಿಹಾಸಿಕ ರಥಯಾತ್ರೆ, ನಂತರ ೧೯೯೨ರ ಡಿಸೆಂಬರ್ ೬ನೇ ತಾರೀಕು "ಬಾಬರೀ ಮಸೀದಿ" ಎಂಬ ಕಳಂಕ ಹೊತ್ತ ಕಟ್ಟಡ ಧ್ವಂಸ. ಎಲ್ಲವೂ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಬಳಿಕ ಅಯೋಧ್ಯೆಯ ರಾಮ ಜನ್ಮಭೂಮಿ ಸ್ಥಳದಲ್ಲಿ ಆರ್ಚಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಅಲಹಾಬಾದ್ ಉಚ್ಚನ್ಯಾಯಾಲದ ಆದೇಶದಂತೆ ನಡೆಸಿದ ಉತ್ಖನನದಲ್ಲಿ ಅಲ್ಲಿ ಕ್ರಿಸ್ತಪೂರ್ವಕ್ಕಿಂತಲೂ ಹಿಂದಿನ ಹಿಂದೂ / ಸನಾತನ ಪಳೆಯುಳಿಕೆಗಳನ್ನು ಪತ್ತೆಹಚ್ಚಿದ್ದು, ೫೦ ಮೀಟರ್ ಉದ್ದ ೩೦ ಮೀಟರ್ ಅಗಲದ ಭಾರೀ ದೇವಾಲಯವಿದ್ದದ್ದನು ಪತ್ತೆಹಚ್ಚಿ ಅಲ್ಲಿ ಮೊದಲು ದೇವಾಲಯವಿತ್ತು ಎಂಬುದನ್ನು ಪುರಾವೆ ಸಹಿತ ಸಾಧಿಸಿದ್ದು. ನಂತರ ತೀರ್ಪು ನೀಡಿದ ನ್ಯಾಯಾಲಯ ಜನ್ಮಭೂಮಿ ಸ್ಥಳವನ್ನು ಮೂರು ಪಾಲು ಮಾಡಿ ಎರಡನ್ನು ಹಿಂದೂಗಳಿಗೂ, ಒಂದನ್ನು ಮುಸ್ಲಿಮರಿಗೂ ಹಂಚಿದ್ದು, ಬಳಿಕ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದು ಎಲ್ಲವೂ ಹಸಿರಾಗಿದೆ.

ಈಗ ರಾಮ ಜನ್ಮಭೂಮಿಯ ಮಾತು ಮತ್ತೊಮ್ಮೆ ಎದ್ದುಕುಳಿತಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೋಸ್ಕರವೇ ಎಲ್ಲರೂ ಕಾಯುತ್ತಿರುವಂತೆಯೇ... ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಅಭೂತಪೂರ್ವ ಮುನ್ನಡೆಯೊಂದಿಗೆ ಅಧಿಕಾರಕ್ಕೆ ಬಂದಿದೆ. ಅದೇ ಗೋರಖ್ ಪುರದ ಶ್ರೀ ಗೋರಖ್ ನಾಥ್ ಮಂದಿರದ ಮಹಾಂತ ಶ್ರೀ ಯೋಗಿ ಆದಿತ್ಯನಾಥ್ ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯೇ ಆಗಿದ್ದಾರೆ!! ಅಂತೂ ಸಮಯ ಕೂಡಿ ಬರುತ್ತಿದೆ... ೧೯೪೯ರ ಡಿಸೆಂಬರ್ ೨೨ರಂದು ಶ್ರೀ ಗೋರಖ್ ನಾಥ್ ಮಂದಿರದ ಮಹಾಂತ ಶ್ರೀ ದಿಗ್ವಿಜಯನಾಥರು ಮಸೀದಿಯೊಳಗೆ ರಾಮಲಲ್ಲಾನ ವಿಗ್ರಹ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದರು. ಇಂದು ಶ್ರೀ ಗೋರಖ್ ನಾಥ್ ಮಂದಿರದ ಮಹಾಂತ ಶ್ರೀ ಯೋಗಿ ಆದಿತ್ಯ ನಾಥರು ಜನ್ಮಭೂಮಿಸ್ತಾನದಲ್ಲೇ ಮಂದಿರ ಸ್ಥಾಪಿಸಲು ಯಶಸ್ವಿಯಾಗುತ್ತಾರಾ? ಹೆಚ್ಚುಕಡಿಮೆ ಐನೂರು ವರ್ಷಗಳ ಹಿಂದೂಗಳ ಬೇಡಿಕೆ ಬಾರಿಯಾದರೂ ಈಡೇರುತ್ತದಾ?

ತುಂಬಾ ನಿರೀಕ್ಷೆಗಳೊಂದಿಗೆ.... ಖಂಡಿತವಾಗಿಯೂ ಭವ್ಯ ರಾಮಮಂದಿರವೊಂದು ಅಯೋಧ್ಯೆಯ ಜನ್ಮಭೂಮಿಯಲ್ಲಿ ತಲೆಯೆತ್ತುತ್ತದೆ ಎಂಬ ಖಂಡಿತ ವಿಶ್ವಾಸದೊಂದಿಗೆ ಬಾರಿಯ ರಾಮನವಮಿಯನ್ನು ಆಚರಿಸೋಣ... ಸುಮಾರು ಹದಿನೈದು-ಹದಿನಾರು ತಲೆಮಾರುಗಳ ಸಂಘರ್ಷದ ಇತಿಹಾಸ ಹೊಂದಿದ ವಿವಾದ ನಮ್ಮ ತಲೆಮಾರೀನಲ್ಲೆ ಭವ್ಯ ರಾಮಮಂದಿರದಲ್ಲಿಯೇ ರಾಮನವಮಿ ಆಚರಿಸುವ ಭಾಗ್ಯ ಪಡೆದ್ದಾರೆ ಅಂತ ನನ್ನ ಒಳ ಮನಸು ಹೇಳುತ್ತಿದೆ. ಯಾಕಂದರೆ ಹಿಂದಿನ ಹದಿನೈದು-ಹದಿನಾರು ತಲೆಮಾರುಗಳಿಗಿಲ್ಲದ ಭಾಗ್ಯವೊಂದು ನಮ್ಮ ತಲೆಮಾರಿಗೆ ಈಗಾಗಲೇ ಸಿಕ್ಕಿಯಾಗಿದೆ. ಅಷ್ಟೂ ತಲೆಮಾರುಗಳವರು ಜನ್ಮಭೂಮಿಯಲ್ಲಿದ್ದ ಅಕ್ರಮ ಮಸೀದಿ ಕಟ್ಟಡ ನೋಡುತ್ತಲೇ ಸಂಘರ್ಷದ ಜೀವನ ಸವೆಸಿದರು. ಆದರೆ ನಮ್ಮ ಕಾಲಘಟ್ಟದಲ್ಲಿ ಮಸೀದಿ ಎಂಬ ಕಳಂಕ ಹೊತ್ತ ಅಕ್ರಮ ಕಟ್ಟಡ ಧರೆಗುರುಳಿತು... ಈಗ ನಮಗೆ ರಾಮ ಹುಟ್ಟಿದ ಪುಣ್ಯ ಭೂಮಿಯಲ್ಲೇ ಒಂದು ಭವ್ಯ ಹಾಗು ದಿವ್ಯ ರಾಮ ಮಂದಿರದ ನಿರ್ಮಾಣವನ್ನು ಕಟ್ಟಿ ಕಣ್ಣಾರೆ ನೋಡುವ ಭಾಗ್ಯ ಆದಷ್ಟು ಬೇಗ ಭಗವಾನ್ ಶ್ರೀ ರಾಮಚಂದ್ರನೇ ಕರುಣಿಸಲಿ ಹಾಗು ಅನುಗ್ರಹಿಸಲಿ ಎಂದು ರಾಮನವಮಿಯಂದು ಪ್ರಾರ್ಥಿಸುತ್ತೇನೆ. ....!

ರಾಮ ನವಮಿ ಎಲ್ಲರಿಗೂ ಶುಭವನ್ನು ಉಂಟುಮಾಡಲೆಂದು ಹಾರೈಸುತ್ತೇನೆ...!!!

Related posts