Infinite Thoughts

Thoughts beyond imagination

ಇಂದು... ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನ...

ನನ್ನ ರಾಜಕೀಯ ಜೀವನದ ಇಂದಿನ ಸ್ಥಾನಮಾನಕ್ಕೆ ಸಹಕರಿಸಿದ ನನ್ನ ಎಲ್ಲ ಸಂಘಟಣ ಸದಸ್ಯರಿಗಳಿಗೆ, ಪಕ್ಷದ ನಿಸ್ಪ್ರಹ ಕಾರ್ಯಕರ್ತರಿಗೆ, ಮಾರ್ಗದರ್ಶನ ನೀಡಿದ ಸಂಘದ ವಿವಿಧ ಪ್ರಚಾರಕರಿಗೆ, ಪಕ್ಷದ ನಾಯಕರುಗಳಿಗೆ ಹಾಗು ಹಿರಿಯರಿಗೆ ಪಕ್ಷ ಸಂಸ್ಥಾಪನಾ ದಿನದಂದು ಕೃತಜ್ಞತೆಯಿಂದ ನೆನೆದು ಸಮಾಜಕ್ಕೆ ಮತ್ತೊಮ್ಮೆ ನನ್ನನ್ನು ಸಮರ್ಪಿಸಿಕೊಳ್ಳುತ್ತಿದ್ದೇನೆ.

ಭಾರತೀಯ ಜನತಾ ಪಕ್ಷ ಹುಟ್ಟಿ ಇವತ್ತಿಗೆ ಭರ್ತಿ ಮೂವತ್ತೇಳು ವರ್ಷ. ೧೯೮೦ನೇ ಏಪ್ರಿಲ್ ೬ನೇ ತಾರೀಕು ಭಾರತೀಯ ಜನತಾ ಪಕ್ಷ ಸ್ಥಾಪನೆಯಾಯಿತಾದರೂ ವಿಚಾರಧಾರೆಯ ರಾಜಕೀಯ ಪಕ್ಷವೊಂದು ನಿಜಕ್ಕೂ ಪ್ರಾರಂಭವಾದದ್ದು ೧೯೫೧ರ ಅಕ್ಟೋಬರ್ ೨೧ರಂದು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶೀರ್ವಾದದೊಂದಿಗೆ ಡಾ. ಶ್ಯಾಮ ಪ್ರಸಾದ ಮುಖರ್ಜಿಯವರು ಸ್ಥಾಪಿಸಿದ "ಭಾರತೀಯ ಜನ ಸಂಘ" ಹಿಂದೂ ರಾಷ್ಟ್ರವಾದ' ಪರಿಕಲ್ಪನೆಯೊಂದಿಗೆ ಅಸ್ತಿತ್ವಕ್ಕೆ ಬಂತು. ಹಾಗಾಗಿಯೇ ನಮ್ಮ ಪಕ್ಷಕ್ಕೆ ೩೭ರ ಹರೆಯವಾದರೂ, ಅದಕ್ಕೆ ೬೬ರ ದುಡಿಮೆಯ ಪ್ರಾಯವಾಗಿದೆ.

೧೯೫೨ ಮಹಾ ಚುನಾವಣೆಯಲ್ಲಿ ಪಕ್ಷಕ್ಕೆ ಮೂರು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಲಭಿಸಿತು. ಅಲ್ಲಿಂದ ನಂತರದ ದಾರಿ ಭಾರೀ ಪ್ರಯಾಸದ್ದಾಗಿತ್ತು. ಆದರೆ ೧೯೬೭ರ ಮಹಾ ಚುನಾವಣಾ ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಮಹತ್ತರ ಬದಲಾವಣೆಯನ್ನು ಕಂಡ ವರ್ಷ. ನೆಹರೂರ ಸೊಷಿಯಲಿಸಂ ಮತ್ತು ಕಮ್ಯುನಿಸ್ಟ್ ಪಕ್ಷಗಳ ಎಡಪಂಥೀಯ ಧೋರಣೆಯ ವಿರುದ್ಧ ಮೊದಲ ಬಾರಿಗೆ ದೇಶದ ಜನ ಮತ ನೀಡಿ ಬಲಪಂಥೀಯ ಪಕ್ಷಗಳನ್ನು ಬೆಂಬಲಿಸಿದ ಘಟನೆ ನಡೆಯಿತು. ರಾಜಾಜಿಯವರ ಬಲಪಂಥೀಯ ಚಿಂತನೆಯ 'ಸ್ವತಂತ್ರ ಪಾರ್ಟಿ' ಗೆ ಚುನಾವಣೆಯಲ್ಲಿ ಶೇಕಡಾ .ರಷ್ಟು ಮತಗಳು ಬಿದ್ದು ಪಕ್ಷ ೪೪ ಸೀಟು ಗೆದ್ದುಕೊಂಡರೆ, ಭಾರತೀಯ ಜನಸಂಘಕ್ಕೆ ಶೇಕಡಾ . ರಷ್ಟು ಮತಚಲಾವಣೆಯಾಗಿ ೩೫ ಸೀಟುಗಳು ಬಂದವು. ಸಂದರ್ಭದಲ್ಲಿ ಪಕ್ಷಕ್ಕೆ ಶ್ರೀ ಬಲರಾಜ್ ಮಧೋಕ್ ರವರ ಸಮರ್ಥ ನಾಯಕತ್ವವಿತ್ತು.

ನಂತರ ೭೭ರಲ್ಲಿ ಮೈಮೂನ ಬೇಗಮ್ ತುರ್ತು ಪರಿಸ್ಥಿತಿಯ ಕರಾಳ ದಿನಗಳ ವಿರುದ್ಧ ಹೋರಾಡಲು ಜಯಪ್ರಕಾಶ್ ನಾರಾಯಣರ ಕರೆಯೇ ಮೇರೆಗೆ ದೇಶದ ಹಿತದೃಷ್ಟಿಯಿಂದ ಭಾರತೀಯ ಜನಸಂಘವೂ ಜನತಾ ಪಕ್ಷದೊಂದಿಗೆ ವಿಲೀನವಾಯಿತು. ಬಳಿಕವೇ ೧೯೮೦ರಲ್ಲಿ ಜನತಾ ಪಕ್ಷದ ಅವನತಿ ಹೊಂದಿದಾಗ ಮತ್ತೆ ಹಳೆಯ ಜನಸಂಘದ ಸದಸ್ಯರೆಲ್ಲ ಸೇರಿ, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣಾ ಅಡ್ವಾಣಿ ಮುಂತಾದ ನಾಯಕರ ಮುಂದಾಳತ್ವದಲ್ಲಿ "ಭಾರತೀಯ ಜನತಾ ಪಕ್ಷ' ಜನನ, ಏಪ್ರಿಲ್ ೬ನೇ ತಾರೀಕಿಗೆ ಆಯಿತು. ಅಲ್ಲಿಗೆ ನಮ್ಮ ಪಕ್ಷ ಒಂದು ವಿನೂತನ ಶಕ್ತಿಯ ಪ್ರದರ್ಶನ ವನ್ನು ಸಹ ಅನಾವರಣಗೊಳಿಸಿತು. ದೇಶ ಸ್ವಾತಂತ್ರ್ಯಗೊಂಡ ನಂತರ ಮೋಹನದಾಸ್ ಕರಮಚಂದ್ ಗಾಂಧಿಯವರು ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸುವಂತೆ ಕರೆ ನೀಡಿದ್ದರು ಸಹ ಪಕ್ಷದ ಗಣ್ಯಾತಿಗಣ್ಯರಿಗೆ ನಯಾಪೈಸೆ ಧೈರ್ಯವೇ ಇರಲಿಲ್ಲ. ಆದರೆ ಅಂದು ೨೬ ವಸಂತಗಳನ್ನು ಕಂಡಿದ್ದ ಹಾಗು ಶೇ. ೧೦-೧೨ ರಷ್ಟು ಮತಗಳ ಬೆಂಬಲ ಸಿಕ್ಕಿಯೂ ಸಹ ಪಕ್ಷ ದೇಶದ ಹಿತ-ದೃಷ್ಟಿಯಿಂದ ವಿಸರ್ಜನೆಗೊಂಡು ಜನತಾ ಪಕ್ಷದೊಂದಿಗೆ ವಿಲೀನಗೊಂಡಿತು. ವರ್ಷಗಳ ಕೆಟ್ಟ ಸಹವಾಸ ದಿಂದ ಹೊರಗೆ ಬಂದು ಮತ್ತೆ ಭಾರತೀಯ ಜನತಾ ಪಕ್ಷ ಕಟ್ಟಿ ಇಂದು ದೇಶದ ಚುಕ್ಕಾಣಿ ಹಿಡಿದು, ೧೭ ರಾಜ್ಯಗಳಲ್ಲಿ ಅಧಿಕಾರ ನಡೆಸುತಿರುವುದು ನಮ್ಮ ಪಕ್ಷದ ವಿರಾಟ ಶಕ್ತಿಯನ್ನು ಸೂಚಿಸುತ್ತದೆ. ಅಂದ ಹಾಗೆ "ಸ್ಥಾಪನೆ" ಮತ್ತು "ವಿಸರ್ಜನೆ" ಎರಡನ್ನು ಮಾಡುವ ಎದೆಗಾರಿಕೆ ಇರುವ ಪಕ್ಷ ನಮ್ಮದು ಮಾತ್ರ.

ಆದರೆ ೧೯೮೪ರ ಚುನಾವಣೆಯಲ್ಲಿ ಮೈಮೂನ ಬೇಗಮ್ ಹತ್ಯೆ ಹಿನ್ನಲೆಯಲ್ಲಿ ಪಕ್ಷಕ್ಕೆ ಬಾರಿ ಹಿನ್ನಡೆಯುಂಟಾಗಿ ಕೇವಲ ಎರಡು ಸ್ಥಾನಗಳಷ್ಟೇ ಲಭಿಸಿತು. ಆದರೆ ನಿಧಾನವಾಗಿ ತನ್ನ ಪ್ರಭಾವವನ್ನು ಹೆಚ್ಚಿಸುತ್ತ ಸಾಗಿದ ಪಕ್ಷ ೧೯೯೬ರ ಹೊತ್ತಿಗೆ ಲೋಕಸಭೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಇಲ್ಲಿಂದ ನಂತರ ಪಕ್ಷಕ್ಕೆ ಹಿಂತಿರುಗಿ ನೋಡುವ ಪ್ರಮೇಯವೇ ಒದಗಿ ಬರಲಿಲ್ಲ. ಮುಂದೆ ೧೯೯೮ರಲ್ಲಿ ಕೇಂದ್ರದಲ್ಲಿ ಭಾಜಪ ನೇತೃತ್ವದ ಏನ್.ಡಿ.. ಸರಕಾರ ಅಧಿಕಾರಕ್ಕೆ ಬಂತು. ಇವತ್ತು ನಮ್ಮೆಲ್ಲರ ಅಚ್ಚುಮೆಚ್ಚಿನ ಶ್ರೀ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಪಕ್ಷ ಭಾರೀ ಬಹುಮತದೊಂದಿಗೆ ಕೇಂದ್ರದಲ್ಲಿ ಸರಕಾರ ನಡೆಸುತ್ತಿದೆ. ಒಟ್ಟು ಹದಿನೇಳು ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ. ಅಂದಾಜು ಒಂದು ಕೋಟಿ ಇಪ್ಪತ್ತು ಲಕ್ಷಕ್ಕಿಂತಲೂ ಹೆಚ್ಚು ನಿಷ್ಠಾವಂತ ಕಾರ್ಯಕರ್ತರ ಪಡೆಯಿರುವ ಜಗತ್ತಿನ ಅತ್ಯಂತ ದೊಡ್ಡ ರಾಜಕೀಯ ಪಕ್ಷಗಳಲ್ಲೊಂದ್ದಾಗಿಯೂ ಭಾಜಪ ಹೊರಹೊಮ್ಮಿದೆ.

ಡಾ.ಶ್ಯಾಮ ಪ್ರಸಾದ ಮುಖರ್ಜಿಯಂಥ ಅನೇಕ ಹಿರಿಯರ ತ್ಯಾಗ ಬಲಿದಾನಗಳ ಜೊತೆ ಪಂಡಿತ ದೀನ ದಯಾಳ್ ಉಪಾಧ್ಯಾಯ, ಬಲರಾಜ್ ಮದೋಕ್, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿಯಂಥ ಹಲವಾರು ದೂರದೃಷ್ಟಿಯುಳ್ಳ ನಾಯಕರ ಸತತ ಶ್ರಮದ ಪ್ರತಿಫಲವಿದು. ಇವತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅದ್ಭುತ ನಾಯಕತ್ವದ ಜೊತೆಗೆ ಬಹಳ ಸಮರ್ಥ ಶ್ರೀ ಅಮಿತ್ ಶಾಹ್ ಯವರಂಥ ಅಧ್ಯಕ್ಷರ ಸೇವೆಯೂ ಪಕ್ಷಕ್ಕೆ ದೊರಕಿರುವುದು ನಮ್ಮೆಲ್ಲರ ಅದೃಷ್ಟ.

ಇವತ್ತಿನ ದಿನ ಭಾಜಪವನ್ನು ಮಟ್ಟಕೆ ಬೆಳೆಸಿದ ನಿಸ್ಪೃಹ, ನಿಸ್ವಾರ್ಥ, ನಿಷ್ಠಾವಂತ, ಕಾರ್ಯಕರ್ತರನ್ನು ನಾವೆಲ್ಲರೂ ಸ್ಮರಿಸಬೇಕಾದ ದಿನ.

Related posts