Infinite Thoughts

Thoughts beyond imagination

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ - ಉಗ್ರ ಮುಸ್ಲಿಂ ಸಂಘಟನೆಯ ಅಸಲೀ ಕಥೆ- ಭಾಗ ಎರಡು

೨೦೧೦ರ ಜುಲೈ ೨೪ನೇ ತಾರೀಕು ಕೇರಳದ ಅಂದಿನ ಕಮ್ಯುನಿಸ್ಟ್ ಸರಕಾರದ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ದೆಹಲಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತಾಡುತ್ತಾ ಕೇರಳವನ್ನು ಇನೂ ಇಪ್ಪತ್ತೇ ವರ್ಷಗಳಲ್ಲಿ ಮುಸ್ಲಿಂ ರಾಜ್ಯವನ್ನಾಗಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಸಂಚು ರೂಪಿಸುತ್ತಿದೆ. ಆಗಷ್ಟೇ ಉಪನ್ಯಾಸಕ ಜೋಸೆಫ್ ಕೈ ಕತ್ತರಿಸಲಾಗಿತ್ತು, ಮತ್ತು ಕೇರಳ ಪೊಲೀಸರು ಪಿ.ಎಫ್. ಸಂಘಟನೆಗೆ ಇಸ್ಲಾಮಿಕ್ ಉಗ್ರವಾದಿಗಳೊಂದಿಗಿರುವ ಸಂಬಂಧವನ್ನು ತನಿಖೆ ನಡೆಸುತ್ತಿದ್ದರು. ಮಾಮೂಲಾಗಿ ಸೌಮ್ಯ ಮಾತಿನ ವಿ.ಎಸ್.ಅಚ್ಯುತಾನಂದನ್ ಅಂದು ವ್ಯಗ್ರರಾಗಿದ್ದರು ಮತ್ತು ಬಹಳ ಕಠಿಣ ಶಬ್ದಗಳಲ್ಲಿ ಪಿ.ಎಫ್. ಯನ್ನು ಟೀಕಿಸಿದ ಅವರು ಪಿ.ಎಫ್. ಇತರ ಧರ್ಮಗಳ ಯುವತಿಯರನ್ನು ಮತಾಂತರ ಮಾಡಲು ಭಾರೀ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿದೆ ಎಂದು ಆರೋಪಿಸಿ "ಲವ್ ಜಿಹಾದ್'' ಎಂಬುದು ನಿಜಕ್ಕೂ ನಡೆಯುತ್ತಿದೆ ಅನ್ನುವುದನ್ನು ಖಚಿತಪಡಿಸಿದರು. ಸುದ್ದಿಯನ್ನು ಇಂಡಿಯನ್ ಎಕ್ಸ್ ಪ್ರೆಸ್, ಹೆರಾಲ್ಡ್ ಮುಂತಾದ ಆಂಗ್ಲ ಪತ್ರಿಕೆಗಳು ಯಥಾವತ್ತಾಗಿ ಪ್ರಕಟಿಸಿದವು ಕೂಡಾ.

ಕೇರಳದ ಕಮ್ಯುನಿಸ್ಟ್ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ದೆಹಲಿಯಲ್ಲಿಯೇ ಇಂಥದ್ದೊಂದು ಸ್ಫೋಟಕ ಹೇಳಿಕೆ ನೀಡಿದರೂ ನಮ್ಮ 'ಸಿಕ್ಕ್ಯುಲರ್' ಮಂದಿಗೆ ಅರ್ಥವಾಗಲಿಲ್ಲ. ಆದರೆ ವಿಪರ್ಯಾಸವೆಂದರೆ ಮುಂದಿನ ದಿನಗಳಲ್ಲಿ ಕಮ್ಯುನಿಸ್ಟರು ವಿ.ಎಸ್.ಅಚ್ಯುತಾನಂದನ್ ಅವರನ್ನೇ ದೂರವಿಟ್ಟರು. ಅಂದು ಕೇರಳದ ಗೃಹ ಮಂತ್ರಿಯಾಗಿದ್ದ ಕೊಡಿಯೇರಿ ಬಾಲಕೃಷ್ಣನ್ ಪಿ.ಎಫ್. ಯನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆಯೆಂದು ದೂರಿದರು. ನಂತರ ಬಂದ ಕಾಂಗ್ರೆಸ್ ಸರಕಾರದ ಕ್ರಿಶ್ಚಿಯನ್ ಮುಖ್ಯಮಂತ್ರಿ ಚಾಂಡಿ ಸದನದಲ್ಲೇ ಕೇರಳದಲ್ಲಿ ಪಿ.ಎಫ್. ಶುರುವಾದ ಬಳಿಕ ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಕೆಡವಿ ಮತಾಂತರ ಮಾಡಲಾಗುತ್ತದೆ ಎಂಬುದನ್ನು ಅಂಕಿ ಅಂಶಗಳ ಸಮೇತ ಒಪ್ಪಿಕೊಂಡರೂ ಇದರ ಹಿಂದೆ ಪಿ.ಎಫ್. ಇದೆ ಎಂಬುದನ್ನು ಹೇಳದೆ ಜಾರಿಕೊಂಡರು. ಬಳಿಕ ಮತ್ತೆ ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರ ಬಂತು. ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾದರು. ಮೇಲೆ ಸಂಘ ಪರಿವಾರದವರ ಮೇಲಿನ ಕಮ್ಯುನಿಸ್ಟರ ಮಾರಣಾಂತಿಕ ದಾಳಿಗಳು ಹೆಚ್ಚಿದವು. ಹಿಂದಿನ ಕಮ್ಯುನಿಸ್ಟ್ ಮುಖ್ಯಮಂತ್ರಿ ಅಚ್ಯುತಾನಂದನ್ ರಂತೆ ಪಿಣರಾಯಿ ದೊಡ್ಡ ಮಟ್ಟದಲ್ಲಿ ಪಿ.ಎಫ್. ಯನ್ನು ಟೀಕಿಸದಿದ್ದರೂ ಪಿ.ಎಫ್.. ರಾಜಕೀಯ ಸಂಘಟನೆ ಎಸ್.ಡಿ.ಪಿ. ಮೇಲೆ ಹರಿಹಾಯ್ದರು. ಎಸ್.ಡಿ.ಪಿ. ತನ್ನ ಕಾರ್ಯಕರ್ತರಿಗೆ ಎದುರಾಳಿಗಳನ್ನು ಕೊಲೆಮಾಡುವ ತರಬೇತಿ ನೀಡುತ್ತಿದೆ ಅಂತ ಪತ್ರಿಕೆಗಳಿಗೆ ಹೇಳಿಕೆ ನೀಡಿದರು.

ಆದರೆ ತುಷ್ಟೀಕರಣದ ರಾಜಕೀಯ ಹೇಗೆ ಕೆಲಸ ಮಾಡುತ್ತದೋ ನೋಡಿ...! ಕರ್ನಾಟಕದಲ್ಲಿ ಪಾಪ್ಯುಲರ್ ಫ್ರಂಟ್ ಕಾರ್ಯಾಚರಣೆಯ ಕೇಂದ್ರ ಸ್ಥಳವಿರುವುದೇ ಮಂಗಳೂರಿನಲ್ಲಿ. ಅಲ್ಲಿ ಪಾಪ್ಯುಲರ್ ಫ್ರಂಟ್ ಸಂಘಟನೆಗೆ ನೇರ ಬೆಂಬಲ ನೀಡುವವರೇ ಕಮ್ಯುನಿಸ್ಟರು!. ಅಲ್ಲಿನ ಡಿ.ವೈ.ಎಫ್.. ಅಧ್ಯಕ್ಷ ಮುನೀರ್ ಕಾಟಿಪಳ್ಳ ನೇರವಾಗಿ ಪಾಪ್ಯುಲರ್ ಫ್ರಂಟ್ ನ್ ಬೆಂಬಲಕಿದ್ದಾನೆ. ಕೋಮು ಸೌಹಾರ್ದ ವೇದಿಕೆ ಅಂತ ಹೇಳುವ ಹೆಸರಿನ ಪಕ್ಕಾ ಎಡಚರ ಗುಂಪು ದಕ್ಷಿಣ ಕನ್ನಡದಲ್ಲಿ ಕೋಮು ಸೌಹಾರ್ದದ ಉಪದೇಶ ಮಾಡುವುದು ಕೋಮುವಾದಿ ಹಾಗು ದೇಶ ದ್ರೋಹಿ ಪಾಪ್ಯುಲರ್ ಫ್ರಂಟ್ ಹುಡುಗರನ್ನು ಪಕ್ಕದಲ್ಲಿ ಕೂರಿಸಿಕೊಂಡೇ. ಹೀಗಾಗಿ ಮೊನ್ನೆ ಮೊನ್ನೆ ಪಿಣರಾಯಿ ವಿಜಯನ್ ಮಂಗಳೂರಿನಲ್ಲಿ ಸೌಹಾರ್ದ ಸಭೆ ನಡೆಸುವುದಕ್ಕೆ ಸಂಘ ಪರಿವಾರ ಆಕ್ಷೇಪ ವ್ಯಕ್ತ ಪಡಿಸಿದರೆ ಪಾಪ್ಯುಲರ್ ಫ್ರಂಟ್ ಮುಗುಮ್ಮಾಗಿಯೇ ಸಮಾರಂಭದಲ್ಲಿ ಭಾಗವಹಿಸಿತು. ಅಲ್ಲಿ ಕೇರಳದಲ್ಲಿ ಪಾಪ್ಯುಲರ್ ಫ್ರಂಟ್ ಅನ್ನು ವಿರೋಧಿಸುವ ಕಮ್ಯುನಿಸ್ಟರು ಇಲ್ಲಿ ಕರ್ನಾಟಕದಲ್ಲಿ ಅವರ ಮಗ್ಗುಲಲ್ಲೇ ನಿಂತುಕೊಂಡು ಬೆನ್ನುತಟ್ಟುತ್ತಾರೆ. ಕೇರಳದಲ್ಲಿ ಅಧಿಕಾರದಲ್ಲಿದ್ದಾಗ ಪಾಪ್ಯುಲರ್ ಫ್ರಂಟ್ ಒಂದು ಉಗ್ರಸಂಘಟನೆ ಅಂತ ನ್ಯಾಯಾಲಯಕ್ಕೆ ರಿಪೋರ್ಟ್ ಸಲ್ಲಿಸುವ ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಅವರನ್ನು ಲಜ್ಜೆ ಬಿಟ್ಟು ಬೆಂಬಲಿಸುತ್ತದೆ. ಇಲ್ಲಿ ಕರ್ನಾಟಕದಲ್ಲಂತೂ ಕಾಂಗ್ರೆಸ್ ಸಂಪೂರ್ಣವಾಗಿ ಪಾಪ್ಯುಲರ್ ಫ್ರಂಟ್ ಜೊತೆ ಮಂಚದಲ್ಲೇ ಮಲಗಿದೆ!!!

ಮುಂದಿನ ಕಂತಿನಲ್ಲಿ ಮತ್ತಷ್ಟು ಬರೆಯಲ್ಲಿದ್ದೇನೆ. ಒಂದಷ್ಟ್ಟು ಜಂತು ದ್ರೋಹಿಗಳು ನನ್ನ ಮೊದಲ ಕಂತು ಓದಿದ ನಂತರ, ಮೇಲೆ ಕೆಳಗೆಲ್ಲ ತಣ್ಣಗೆ ಒದ್ದೆಯಾಗಿ ನನ್ನ ಗೋಡೆಯಲ್ಲಿ ಹಲುಬಿದ್ದು ನೋಡಿದೆ. ಹಾಗಾಗಿ ಮತ್ತಷ್ಟು ಬರೆಯಲೇಬೇಕೆಂದು ತೀರ್ಮಾನಿಸಿದ್ದೇನೆ.

Related posts