ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ - ಉಗ್ರ ಮುಸ್ಲಿಂ ಸಂಘಟನೆಯ ಅಸಲೀ ಕಥೆ- ಭಾಗ ಮೂರು!!
ಮೈಸೂರಿನಲ್ಲಿ ೨೦೦೯ರಲ್ಲಾದ ಕೋಮು ಗಲಭೆಯಲ್ಲಿ ಪಾಪ್ಯುಲರ್ ಫ್ರಂಟ್ ಉಗ್ರಸಂಘಟನೆಯ ಕೈವಾಡವಿರುವುದನ್ನು ಅಲ್ಲಿನ ಪೊಲೀಸ್ ಮುಖ್ಯಸ್ಥರೇ ತಮ್ಮ ವರದಿಯಲ್ಲಿ ಸ್ಪಷ್ಟ ಪಡಿಸಿದ್ದರು. ಪಾಪ್ಯುಲರ್ ಫ್ರಂಟ್ ಮೈಸೂರಿಗೆ ಗಲಭ ನಡೆಸುವ ಉದ್ದೇಶದಿಂದಲೇ ರಾಜ್ಯದೆಲ್ಲೆಡೆಯಿಂದ ಕಾರ್ಯಕರ್ತರನ್ನು ಕರೆಸಿತ್ತು. ಪೊಲೀಸ್ ಲಾಠಿ ಚಾರ್ಜ್ ನಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದವರಲ್ಲಿ ಕೇರಳದ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರೂ ಇದ್ದರು. ಪಿ.ಎಫ್.ಐ ಸಂಘಟನೆಯ ಮುಖ್ಯಸ್ಥ ಕಲೀಮ್ ಮತ್ತು ಇತರರನ್ನು ಪೊಲೀಸರು ಬಂಧಿಸಿದ್ದನ್ನು ಪ್ರತಿಭಟಿಸಲು ಒಂದು ವಾರದ ನಂತರ ಪಾಪ್ಯುಲರ್ ಫ್ರಂಟ್ ಮತ್ತೊಮ್ಮೆ ಜನ ಸೇರಿಸಿತು. ಈ ಬಾರಿ ಕೇರಳ ಮಾತ್ರವಲ್ಲದೆ ಆಂಧ್ರ, ತಮಿಳುನಾಡಿನಿಂದಲೂ ಕಾರ್ಯಕರ್ತರು ಮೈಸೂರಿಗೆ ಬಂದಿದ್ದರು. ಆಗಲೂ ಮತ್ತೊಮ್ಮೆ ಮೈಸೂರಿನಲ್ಲಿ ಗಲಭೆ ಭುಗಿಲೆದ್ದಿತು. ಆಗ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಪಿ. ಮಣಿವಣ್ಣನ್ ಮತ್ತು ಪೊಲೀಸ್ ಮುಖ್ಯಸ್ಥರಾಗಿದ್ದ ಐ.ಪಿ.ಎಸ್ ಅಧಿಕಾರಿ ಸುನಿಲ್ ಅಗರವಾಲ್ ಬಹಳ ವಿವರವಾದ ವರದಿ ನೀಡಿ ಗಲಭೆಯಲ್ಲಿ ಪಾಪ್ಯುಲರ್ ಫ್ರಂಟ್ ನ ನೇರ ಕೈವಾಡವಿರುವುದನ್ನು ಹೇಳಿದ್ದರು.
ಆದರೆ ಮೈಸೂರಿನಲ್ಲಿ ಪಾಪ್ಯುಲರ್ ಫ್ರಂಟ್ ತನ್ನ ಕಾರ್ಯತಂತ್ರವನ್ನು ೨೦೦೯ರ ಈ ಗಲಭೆಗಿಂತಲೂ ಮೊದಲೇ ಆರಂಭಿಸಿತ್ತು. ೨೦೦೮ರ ಜುಲೈ ೧೨ರಂದು ಬಜರಂಗದಳದ ಕಾರ್ಯಕರ್ತ ಹೇರ್ ಕಟಿಂಗ್ ಸೆಲೂನ್ ನಡೆಸುತ್ತಿದ್ದ ಶಶಿಕುಮಾರ್ ನನ್ನು ಪಿ.ಎಫ್.ಐ ಸಂಘಟನೆ ಕಾರ್ಯಕರ್ತರು ಬರ್ಬರವಾಗಿ ಹತ್ಯೆಗೈದಿದ್ದರು. ೨೦೦೯ರ ಜೂನ್ ೯ರಂದು ಮೈಸೂರು ಉದಯಗಿರಿಯ ಬಿಜೆಪಿ ಮುಖಂಡ, ವಿಕ್ರಾಂತ್ ಟೈಯರ್ ಫ್ಯಾಕ್ಟರಿಯ ಉದ್ಯೋಗಿ ಆನಂದ ಪೈ ಮತ್ತು ಅವರ ಸ್ನೇಹಿತ ರಮೇಶ್ ದ್ವಿಚಕ್ರವಾಹನದಲ್ಲಿ ಸಾಗುತ್ತಿರುವಾಗ ಅವರ ಮೇಲೆ ಪಿ.ಎಫ್.ಐ ಸಂಘಟನೆ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಅವರ ಮುಖ್ಯ ಗುರಿಯಿದ್ದದ್ದು ಆನಂದ ಪೈ ಯಾದರೂ ದಾಳಿಯಲ್ಲಿ ಪ್ರಾಣ ಕಳಕೊಂಡದ್ದು ರಮೇಶ್. ೨೦೦೯ರ ನವೆಂಬರ್ ನಲ್ಲಿ ಪುಸ್ತಕ ವ್ಯಾಪಾರಿ ಸಹೋದರರಿಬ್ಬರ ಮೇಲೆ ಪಿ.ಎಫ್.ಐ ಸಂಘಟನೆ ಕಾರ್ಯಕರ್ತರು ಮಾರಣಾಂತಿಕ ದಾಳಿ ನಡೆಸಿದರು. ಅದರಲ್ಲಿ ಸಹೋದರ ಹರೀಶ್.ಎಂ ಮೃತಪಟ್ಟ. ೨೦೧೦ರ ಮೇ ತಿಂಗಳಲ್ಲಿ ಹಾಲು ಮಾರುವ ಹುಡುಗನೊಬ್ಬನನ್ನು ಪಿ.ಎಫ್.ಐ ಸಂಘಟನೆ ಕಾರ್ಯಕರ್ತರ ಇದೆ ಗುಂಪು ಕೊಲೆಮಾಡಿತು.
ಆದರೆ ೨೦೧೧ರಲ್ಲಿ ಹುಣಸೂರಿನ ಬಿಬಿಎಂ ವಿದ್ಯಾರ್ಥಿಗಳಾದ ಸುಧೀಂದ್ರ ಮತ್ತು ವಿಘ್ನೇಶ್ ಎಂಬವರ ಅಪಹರಣ ಮತ್ತು ಕೊಲೆ ನಡೆದು ಇಡೀ ಕರ್ನಾಟಕವೇ ಬೆಚ್ಚಿ ಬಿತ್ತು. ಆಗ ಈ ಪ್ರಕರಣವನ್ನು ಬೇಧಿಸಿದ ಪೊಲೀಸರಿಗೆ ಪ್ರಮುಖ ಆರೋಪಿಯ ಸುಳಿವು ದೊರಕಿತ್ತು. ಹುಣಸೂರಿನ ಪಿ.ಎಫ್.ಐ ಸಂಘಟನೆ ಸದಸ್ಯ ಅಬೀದ್ ಪಾಶ ಈ ಜೋಡಿ ಕೊಲೆಯ ಪ್ರಧಾನ ಸೂತ್ರಧಾರಿ. ಅವನದೇ ಒಂದು ತಂಡವೂ ಜೊತೆಗಿತ್ತು. ಆದರೆ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯ ದೌರ್ಬಲ್ಯವೋ ಏನೋ ಅಬೀದ್ ಪಾಷಾ ಎಂಬ ಹಂತಕ ಮತ್ತೆರಡು ಕೊಲೆಗಳನ್ನು ಮಾಡಿದ. ೨೦೧೪ರಲ್ಲಿ ತನ್ನದೇ ಮುಸ್ಲಿಂ ಸಮುದಾಯದ ಪರ್ವೀನ್ ತಾಜ್ ಅಲಿಯಾಸ್ ಮುನ್ನಿ ಎಂಬಾಕೆಯನ್ನು ವೇಶ್ಯಾವೃತ್ತಿ ನಡೆಸುತ್ತಿದ್ದಳೆಂಬ ಸಂಶಯದಿಂದ ಆಕೆಯನ್ನು ಕೊಂದ. ಇದು ಯಾರ ಗಮನಕ್ಕೂ ಬರಲೇ ಇಲ್ಲ. ಆ ಬಳಿಕ ಕಳೆದ ವರ್ಷ ೨೦೧೬ರ ಮಾರ್ಚ್ ನಲ್ಲಿ ಬಿಜೆಪಿ ಮುಖಂಡ ರಾಜುವನ್ನು ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ಹಾಡಹಗಲೇ ಕೊಲೆಮಾಡಲಾಯಿತು. ರಾಜು ಕೊಲೆ ಪ್ರಕರಣವನ್ನು ಬೆನ್ನುಹತ್ತಿದ ಪೊಲೀಸರು ಪುಣೆಯ ಮದರಸಾವೊಂದರಲ್ಲಿ ಮೂರು ಮಂದಿಯನ್ನು ಬಂಧಿಸಿದರು. ಆದರೆ ಆಗ ಮುಖ್ಯ ಆರೋಪಿ ಪಾಷಾ ತಪ್ಪಿಸಿಕೊಂಡಿದ್ದ. ನಂತರ ಅವನನ್ನು ಕಳೆದ ಆಗಸ್ಟ್ ನಲ್ಲಿ ಮೈಸೂರಿನಲ್ಲೆ ಬಂಧಿಸಲಾಯಿತು.
ಶಿವಮೊಗ್ಗದಲ್ಲಾದ ಗಲಭೆಗಳೂ ಮೈಸೂರಿನ ರೀತಿಯದ್ದೇ ಕಾರ್ಯತಂತ್ರವನ್ನು ಹೊಂದಿದ್ದವು. ಶಿವಮೊಗ್ಗಕ್ಕೂ ಕರ್ನಾಟಕ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಪಿ.ಎಫ್.ಐ ಸಂಘಟನೆ ಕಾರ್ಯಕರ್ತರು ಬಂದು ಜಮಾಯಿಸಿ ಪ್ರತಿಭಟನೆಗಿಳಿದಿದ್ದರು. ಮೈಸೂರಿನಲ್ಲಿ ಪೊಲೀಸರ ಮೇಲೆ ದಾಳಿ ಮಾಡಿದ ರೀತಿಯೇ ಶಿವಮೊಗ್ಗದಲ್ಲೂ ದಾಳಿಗಳಾದವು. ಅಲ್ಲೂ ವಿಶ್ವನಾಥ್ ಎಂಬ ಹಿಂದೂವೊಬ್ಬನ ದಾರುಣ ಹತ್ಯೆ ನಡೆಯಿತು. ಹಲವರ ಮೇಲೆ ಮಾರಣಾಂತಿಕ ಹಲ್ಲೆ ನಡೆಯಿತು. ಈ ದೇಶ ದ್ರೋಹಿ ಪಡೆಯ ಕಾರ್ಯಕರ್ತರು "ಇಂದು ಶೇ. ೨೦ರಷ್ಟು ಇರುವ ನಾವು ಮುಂದೆ ೭೦ರಷ್ಟು ಆದರೆ, ಹಿಂದೂಗಳ ಗತಿಯೇನು" ಎಂದು ಈಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ರಾಜಾರೋಷವಾಗಿ ಪ್ರಶ್ನಿಸುತಿರುವುದು ನೋಡಿದರೆ, ಆಡಳಿತ ಪಕ್ಷದ ಪ್ರಬಲ ಬೆಂಬಲ ಇರುವುದು ಸ್ಪಷ್ಟ!
ಮೂಡಬಿದರಿಯಲ್ಲಿ ನಡೆದ ಪ್ರಶಾಂತ್ ಪೂಜಾರಿ ಹತ್ಯೆಯಲ್ಲಿ ಪಿ.ಎಫ್.ಐ ಸಂಘಟನೆ ಕಾರ್ಯಕರ್ತನ್ನು ಪೊಲೀಸರು ಬಂಧಿಸಿದರು. ಮಡಿಕೇರಿಯಲ್ಲಿ ಕುಟ್ಟಪ್ಪ ಹತ್ಯೆಯನ್ನು ಕೇರಳದಿಂದ ಬಂದ ಪಿ.ಎಫ್.ಐ ಸಂಘಟನೆ ಕಾರ್ಯಕರ್ತರು ಮಾಡಿದ್ದೂ ನಿಚ್ಚಳ. ನಂತರ ಮಡಿಕೇರಿಯಲ್ಲೇ ನಡೆದ ಪ್ರವೀಣ್ ಪೂಜಾರಿ ಹತ್ಯೆಯಲ್ಲಿ ಪಿ.ಎಫ್.ಐ ಸಂಘಟನೆ ಕಾರ್ಯಕರ್ತರ ಬಂಧನವಾಯಿತು. ಆ ಬಳಿಕ ಬೆಂಗಳೂರಿನಲ್ಲಿ ಆರೆಸ್ಸೆಸ್ ಮುಖಂಡ ರುದ್ರೇಶ್ ಹತ್ಯೆಯೆಯನ್ನೂ ಪಿ.ಎಫ್.ಐ ಸಂಘಟನೆ ಕಾರ್ಯಕರ್ತರೇ ಮಾಡಿದ್ದೂ ಗೊತ್ತಾಯಿತು.
ಹೊಸಪೇಟೆಯಲ್ಲಿ ಖಾಜಾ ಪೀರ್ ಎಂಬ ಪಿ.ಎಫ್.ಐ. ಸಂಘಟನೆ ಕಾರ್ಯಕರ್ತ ಐಸಿಸ್ ಹೆಸರಿನಲ್ಲಿ ಕರಪತ್ರವೊಂದನ್ನು ಹಂಚಿದ. ಅದರಲ್ಲಿನ ವಿವರಗಳು ಸಾಮಾನ್ಯರನ್ನು ಬೆಚ್ಚಿ ಬೀಳಿಸುವಂತಿದೆ. ಇದರಿಂದಾಗಿ ಹೊಸಪೇಟೆಯಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಯಿತು. ಖಾಜಾ ಪೀರ್ ಐಸಿಸ್ ಹೆಸರಿನಲ್ಲಿ ಮುದ್ರಿಸಿ ಹಂಚಿದ ಆ ಕರಪತ್ರದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಲ್ಮೀಕಿ ಜನಾಂಗದ ಬಗ್ಗೆ ಅವಹೇಳನಕಾರಿಯಾದ ಮಾತುಗಳಿದ್ದವು. ಅವರಿಗೆ ನೇರವಾಗಿಯೇ ಬೆದರಿಕೆ ಒಡ್ಡಲಾಗಿತ್ತು.
ಆದರೆ ಇಷ್ಟೆಲ್ಲಾ ಉದಾಹರಣೆಗಳಿದ್ದೂ, ಸಾಕ್ಷಿಗಳಿದ್ದೂ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಪಾಪ್ಯುಲರ್ ಫ್ರಂಟ್ ಅನ್ನು ಬೆಂಬಲಿಸುತ್ತಾ ಅದರ ಕಾರ್ಯಕರ್ತರ ಮೇಲೆ ದಾಖಲಾದ ಅಷ್ಟೂ ಕೇಸುಗಳನ್ನು ಹಿಂದೆಗೆದು ಕೊಂಡಿತು. ಮುಂದಿನ ಭಾಗದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಹೇಗೆ ವಿದೇಶೀ ಇಸ್ಲಾಮಿಕ್ ಉಗ್ರ ಸಂಘಟನೆಗಳೊಂದಿಗೆ ಸಂಬಂದ ಹೊಂದಿದೆ ಎಂಬುದನ್ನು ವಿವರಿಸುತ್ತೇನೆ.