Infinite Thoughts

Thoughts beyond imagination

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ - ಉಗ್ರ ಮುಸ್ಲಿಂ ಸಂಘಟನೆಯ ಅಸಲೀ ಕಥೆ- ಭಾಗ ನಾಲ್ಕು

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಸಂಘಟನೆಗೆ ಇತರ ವಿದೇಶೀ ಜಿಹಾದೀ ಸಂಘಟನೆಗಳೊಂದಿಗಿರುವ ಸಂಪರ್ಕವನ್ನು ಕೇರಳ ಸರಕಾರದ ಗೃಹ ಇಲಾಖೆಯೂ ಒಪ್ಪಿಕೊಂಡಿದೆ ಮತ್ತು ಎನ್.. (ನ್ಯಾಷನಲ್ ಇನ್ವೆಸ್ಟಿಗೇಟೀವ್ ಏಜೆನ್ಸಿ) ಕೂಡಾ ಬಗ್ಗೆ ಸಾಕಷ್ಟು ಪುರಾವೆಗಳನ್ನು ಹೊಂದಿದೆ. ೨೦೦೭ರ ಜನವರಿ ೯ನೇ ತಾರೀಕು ದುಬಾಯಿನಿಂದ ಕರಾಚಿಗೆ ಪ್ರಯಾಣಿಸುತ್ತಿದ್ದ ಹಡಗೊಂದು ಕೊಚ್ಚಿ ಬಂದರಿನಲ್ಲಿ ತ್ರಿಶೂರಿನ ಕೋಯಾ ಎಂಬ ಹೆಸರಿನ ವ್ಯಾಪಾರಿಯೊಬ್ಬನಿಗೆ ಒಂದು ಕಂಟೇನರ್ ಅನ್ನು ಇಳಿಸಿತು. ಆಶ್ಚರ್ಯವೆನ್ನುವಂತೆ ಕಸ್ಟಮ್ಸ್ ಅಧಿಕಾರಿಗಳಿಗೆ ಕಂಟೇನರ್ ತುಂಬಾ ಬಂದೂಕು ಮದ್ದು-ಗುಂಡುಗಳಿರುವುದು ತಿಳಿಯಿತು. ಅದೇ ವರ್ಷ ಬಾಂಗ್ಲಾದೇಶದ ಗಡಿಯಲ್ಲಿ ಬಾಂಗ್ಲಾ ಸೇನೆ ಕೇರಳದ ಕಣ್ಣೂರಿನ ಕುಖ್ಯಾತ ಉಗ್ರ ಟಿ.ನಜೀರ್ ನನ್ನ ಬಂಧಿಸಿ ಭಾರತೀಯ ಗಡಿರಕ್ಷಣಾ ಪಡೆಗಳಿಗೊಪ್ಪಿಸಿತು. ತಡಿಯಂಡವಿಡೆ ನಜೀರ್ ಕೇರಳದ ಜೈಲಿನಲ್ಲಿದ್ದಾಗಲೇ ದೀಪ ಚೆರಿಯನ್ ಎಂಬ ಕ್ರಿಶ್ಚಿಯನ್ ಹೆಂಗಸು ತನ್ನ ಮುಸ್ಲಿಂ ಪ್ರಿಯಕರ ನೌಶಾದ್ ಮೂಲಕ ಜೈಲಿನೊಳಗೆ ಎರಡು ಸಿಮ್ ಕಾರ್ಡನ್ನು ಕಳಿಸಿದ್ದು, ದುಬೈ ಸಿಮ್ ಕಾರ್ಡುಗಳಿಗೋಸ್ಕರ ದೀಪಾ ಚೆರಿಯನ್ ಳನ್ನು ಉಪಯೋಗಿಸಲಾಯಿತು.

೨೦೦೮ರ ಆಗಸ್ಟ್ ನಲ್ಲಿ ಕಾಶ್ಮೀರದ ಕುಪ್ವಾರ ದಲ್ಲಿ ಭಾರತೀಯ ಭದ್ರತಾ ಪಡೆಗಳು ಐದು ಮಂದಿ ಉಗ್ರರ ಜೊತೆ ಗುಂಡಿನ ಕಾಳಗದಲ್ಲಿ ನಾಲ್ಕು ಮಂದಿ ಹತರಾದರು. ಆಶ್ಚರ್ಯ ಹುಟ್ಟಿಸುವ ವಿಷಯವೆಂದರೆ ಅವರ್ಯಾರೂ ಕಾಶ್ಮೀರದವರೇ ಅಲ್ಲ! ಬದಲಿಗೆ ಕೇರಳದ ಮಲೆಯಾಳಿ /ಬ್ಯಾರಿ ಮುಸ್ಲಿಮರು! ಮೊಹಮ್ಮದ್ ಫಯಾಜ್, ಮೊಹಮ್ಮೆದ್ ಫಾಯೀಸ್ ಎಂಬಿಬ್ಬರು ಕಣ್ಣೂರಿನವರಾದರೆ ಮಲಪ್ಪುರಂ ಕೆ. ಅಬ್ದುಲ್ ರಹೀಮ್ ಮತ್ತು ಎರ್ನಾಕುಲಂನ ಮೊಹಮ್ಮದ್ ಯಾಸೀನ್, ಎಲ್ಲಾ ನಾಲ್ಕೂ ಜನ ಕೇರಳದವರು. ಇವರಿಗೆ ಕೇರಳದ ಉಗ್ರ ಶಿಬಿರದಲ್ಲಿ ತರಬೇತಿ ನೀಡಿದವರು ಇದೆ ತಡಿಯಂಡವಿಡೆ ನಜೀರ್ ಮತ್ತವನ ಸ್ನೇಹಿತರು. ಬಳಿಕ ಕಣ್ಣೂರ್ ಮತ್ತು ಕೊಚ್ಚಿಯಲ್ಲಿ ನಡೆದ ಪೊಲೀಸ್ ದಾಳಿಗಳಲ್ಲಿ ಲಷ್ಕರ್--ತೊಯ್ಬಾ ಸಂಘಟನೆಗೆ ಕೇರಳದಿಂದ ಯುವಕರನ್ನು ರಿಕ್ರೂಟ್ ಮಾಡುವ ಫೈಸಲ್ ಮತ್ತು ಜಲೀಲ್ ಎಂಬಿಬ್ಬರನ್ನು ಬಂಧಿಸಿದ ಪೊಲೀಸರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ಕೇರಳದಿಂದ ಅಂದಾಜು ೩೦೦ ಯುವಕರನ್ನು ಕಾಶ್ಮೀರ ಮತ್ತು ಪಾಕಿಸ್ತಾನಕ್ಕೆ ಉಗ್ರ ತರಬೇತಿಗಾಗಿ ಕಳಿಸಿದ್ದ ವಿಷಯವನ್ನು ಇವರು ಬಾಯಿಬಿಟ್ಟರು. ಪಾಕ್ ಆಕ್ರಮಿತ ಕಾಶ್ಮೀರದ ಮುಜಫರಾಬಾದ್ನಲ್ಲಿನ ಎಲ್..ಟಿ ಕಮಾಂಡರ್ ಓರ್ವ ಮತ್ತು ವಾಲಿ ಅಲಿಯಾಸ್ ಅಬ್ದುಲ ರಹಿಮಾನ್ ಎನ್ನುವ ಪಾಕಿಸ್ತಾನಿ ಕೇರಳದ ಮುಸ್ಲಿಂ ಹುಡುಗರನ್ನು ಲಷ್ಕರ್--ತೊಯ್ಬಾ ಸಂಘಟನೆಗೆ ಸೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಕೇರಳದಲ್ಲಿ ಇವರಿಗೆಲ್ಲ ಆಶ್ರಯದಾತರಾಗಿದ್ದದ್ದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಸಂಘಟನಯೇ!! ೨೦೧೩ ಅಕ್ಟೋಬರ್ ನಲ್ಲಿ ಪ್ರಕರಣದ ಆರೋಪಿಗಳಿಗೆ ಎನ್.. ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆಯಿತ್ತಿತು.

ಇಂತಹ ಉಗ್ರ ಸಂಘಟನೆ ಮೊನ್ನೆ ಮಂಗಳೂರಿನಲ್ಲಿ ಪೊಲೀಸ್ ಮೇಲೆ ಹಲ್ಲೆ ನಡೆಸಿ ನಂತರ ಪೊಲೀಸರಿಂದ ಗೂಸಾ ತಿಂದು ರಾಜ್ಯದ ಮುಖ್ಯ ಮಂತ್ರಿಗೆ ದೂರು ನೀಡಿದರು. ಆಗ ನಮ್ಮ ಸಿದ್ಧಣ್ಣ ಇವರೆಲ್ಲರನ್ನು ತಮ್ಮ ಮಲಗುವ ಕೋಣೆಯಲ್ಲೇ ಖುದ್ದು ವಿಚಾರಿಸಿ ಕೊಂಡರು. ಪಾಪ ಅಮಾಯಕ ಹುಡುಗರನ್ನು ವಿನಾಕಾರಣ ಲಾಠಿ-ಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಗಳ ಮೇಲೆ ಉಗ್ರ ಕ್ರಮ ಕೈಗೊಳ್ಳುವ ಭರವಸೆಯನ್ನು ಸಹ ನೀಡಿದರು. ಅಲ್ಲಿಗೆ ಪಿ.ಎಫ್. ನೇರವಾಗಿ, ಸಿದ್ಧಣ್ಣನ ಕಾಂಗ್ರೆಸ್ ಇರುವ ತನಕ, ಇನ್ನು ಅಧಿಕಾರಕ್ಕೆ ಬರಬೇಕಾದ ಅಗತ್ಯವಾದರು ಏನಿದೆ?

ಅಂದಹಾಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಎಂಬ ಸಂಘಟನೆ ಹುಟ್ಟಿಕೊಂಡ ಹಿಂದಿನ ಸ್ಫೂರ್ತಿಯೇ ಪ್ಯಾಲೆಸ್ಟೀನಿನ ಇಸ್ಲಾಮಿಕ್ ಉಗ್ರ ಸಂಘಟನೆಗಳು. ಅದರ ಬಗ್ಗೆ ಮತ್ತೆ ನಾಳೆ ಅಥವಾ ನಾಡಿದ್ದು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ.

Related posts