Infinite Thoughts

Thoughts beyond imagination

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ - ಉಗ್ರ ಮುಸ್ಲಿಂ ಸಂಘಟನೆಯ ಅಸಲೀ ಕಥೆ- ಭಾಗ ಐದು

ಹೌದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಎಂಬ ಹೆಸರಿಗೆ ೧೯೬೭ರಲ್ಲಿ ಪ್ಯಾಲೆಸ್ಟೀನಿನಲ್ಲಿ ಉದಯವಾದ ಪಕ್ಕಾ ಕಮ್ಯುನಿಸ್ಟ್ (ಮಾರ್ಕ್ಸಿಸ್ಟ್ - ಲೆನಿನಿಸ್ಟ್) ಸಂಘಟನೆಯಾದ "ಪಾಪ್ಯುಲರ್ ಫ್ರಂಟ್ ಫ಼ಾರ್ ದಿ ಲಿಬರೇಶನ್ ಆಫ್ ಪ್ಲ್ಯಾಲೆಸ್ತೀನ್" ಎಂಬ ಸಂಘಟನೆಯೇ ಸ್ಪೂರ್ತಿ. ಅದೇ ಸಂಘಟನೆಯ ಬಾವುಟವನ್ನೇ ಇಲ್ಲಿನ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಕೂಡಾ ಹೊಂದಿದೆ. ಇನ್ನೂ ಆಶ್ಚರ್ಯ ಹುಟ್ಟಿಸುವ ಸಂಗತಿಯೆಂದರೆ ಬಾವುಟದ ಇತಿಹಾಸ. ಇದು ಪ್ರಥಮ ಮಹಾಯುದ್ಧಕ್ಕಿಂತಲೂ ಹಿಂದಿನದ್ದು. ಆಗ ಅಸ್ತಿತ್ವದಲ್ಲಿದ್ದ ಒಟ್ಟೊಮಾನ್ ಸಾಮ್ರಾಜ್ಯದ ವಿರುಧ್ದ ಅರಬರನ್ನು ಬಂಡೇಳುವಂತೆ ಪ್ರಚೋದಿಸಿದ ಬ್ರಿಟಿಷರು "ಅರಬ್ ದಂಗೆ" ಯನ್ನು ರೂಪಿಸಿದರು. ಅರಬ್ ದಂಗೆಗಾಗಿ ಬ್ರಿಟಿಷ್ ರಾಜತಾಂತ್ರಿಕ ಮಾರ್ಕ್ಸ್ ಸೈಕ್ಸ್ ನಿಂದ ರೂಪಿಸಲ್ಪಟ್ಟ ಬಾವುಟವೇ ಇದು. ನಂತರ ಒಟ್ಟೊಮಾನ್ ಸಾಮ್ರಾಜ್ಯ ಪತನವಾಗಿ ಬ್ರಿಟನ್, ಫ್ರಾನ್ಸ್ ಮತ್ತು ರಷ್ಯಾದ ಮಧ್ಯೆ ಹರಿದು ಹಂಚಿ ಹೋದಾಗ ಪ್ಯಾಲೆಸ್ಟೀನಿನ ಗ್ರಾಂಡ್ ಮುಫ್ತಿ ಅಮೀನ್-ಅಲ್-ಹುಸೇನಿ ಸಿರಿಯಾದಲ್ಲಿ ಹೊಸ ಆಧುನಿಕ ಇಸ್ಲಾಮಿಕ್ ದೇಶವೊಂದರ ಸ್ಥಾಪನೆ ಮಾಡಿದ. "ಅಲ್-ಮಾಮ್ಲಕಾಹ್-ಅಲ್-ಅರೇಬಿಯಹ್-ಅಲ್-ಸುರಿಯಾಹ್" ಎಂಬ ಹೆಸರಿನ ಹೊಸ ರಾಷ್ಟ್ರ ೧೯೨೦ ಮಾರ್ಚ್ ನಿಂದ ಜುಲೈ (ನಾಲ್ಕೇ ತಿಂಗಳು) ಅಸ್ತಿತ್ವದಲ್ಲಿತ್ತು. ಆಗ ಇತರ ಅರಬ್ ದೇಶಗಳ ಬೆಂಬಲ ದೊರೆಯದೆ ಹೊಸ ಇಸ್ಲಾಮಿಕ್ ಖಿಲಾಫತ್ ಅನ್ನು ಕಟ್ಟುವ ಅಮೀನ್-ಅಲ್-ಹುಸೇನಿಯ ಕನಸು ಕೈಗೂಡಲಿಲ್ಲ. ಆದರೆ ನಾಲ್ಕು ತಿಂಗಳಲ್ಲಿ ಅಲ್-ಹುಸೇನಿ ಮತ್ತೆ ಅದೇ ಬಾವುಟವನ್ನು ಉಪಯೋಗಿಸಿದ್ದ! ಬಾವುಟದ ಪ್ರಕಾರ ಮೇಲಿನ ಕಪ್ಪು ಅಡ್ಡಪಟ್ಟಿ "ಅಬ್ಬಾಸಿದ್" ಸಾಮ್ರಾಜ್ಯವನ್ನೂ, ಬಿಳಿ ಅಡ್ಡಪಟ್ಟಿ "ಉಮೈಯ್ಯದ್" ಸಾಮ್ರಾಜ್ಯವನ್ನೂ, ಹಸಿರು ಅಡ್ಡಪಟ್ಟಿ "ಫಾತಿಮಿದ್ " ಸಾಮ್ರಾಜ್ಯವನ್ನೂ, ಮಧ್ಯದ ಕೆಂಪು ತ್ರಿಕೋನ "ಹಾಷಿಮೈಟ್" ಸಾಮ್ರಾಜ್ಯವನ್ನೂ ಸಂಕೇತಿಸುತ್ತದೆ.

ಆದರೆ ನಂತರ ಬಾವುಟವನ್ನು ಇತರ ಅರಬ್ ಜಗತ್ತು ತುಂಬಾ ನೆಚ್ಚಿಕೊಂಡಿತು. ಈಜಿಪ್ಟ್, ಜೋರ್ಡಾನ್, ಇರಾಕ್, ಕುವೈತ್, ಸುಡಾನ್, ಯು... ಯೆಮೆನ್, ಪ್ಯಾಲೆಸ್ತೀನ್ ಮುಂತಾದ ರಾಷ್ಟ್ರಗಳು ಇದೆ ರೀತಿಯ ಬಾವುಟವನ್ನು ಅಳವಡಿಸಿಕೊಂಡವು. ಆದರೆ ಪ್ಯಾಲೆಸ್ತೀನ್ ಹರ್ಕತ್-ಅಲ್-ಮುಖಾವಮತ್-ಅಲ್-ಇಸ್ಲಾಮಿಯ ಎಂಬ ಉಗ್ರ ಸಂಘಟನೆ ಬಾವುಟಕ್ಕೆ ಕುಖ್ಯಾತಿಯನ್ನು ನೀಡಿತು. ಹರ್ಕತ್-ಅಲ್-ಮುಖಾವಮತ್-ಅಲ್-ಇಸ್ಲಾಮಿಯ ಅಂದರೆ ನಮಗೆ ಸುಲಭದಲ್ಲಿ ಅರ್ಥವಾಗುವುದಿಲ್ಲ. ಆದರೆ "ಹಮಾಸ್" ಎಂದರೆ ಕೂಡಲೇ ಗೊತ್ತಾಗುತ್ತದೆ. ಬಳಿಕ ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸಷನ್ನಿನ ಯಾಸೆರ್ ಅರಾಫತ್ ಕೂಡಾ ಇದೆ ಬಾವುಟ ಬಳಸಿದ. ಆದರೆ ವಿಷವರ್ತುಲ ಭಾರತಕ್ಕೂ ಕಾಶ್ಮೀರದ ಮೂಲಕ ಕಾಲಿಟ್ಟಿತು. ಪ್ಯಾಲೆಸ್ತೀನ್ ಲಿಬರೇಶನ್ ರೀತಿಯೇ ಕಾಶ್ಮೀರದಲ್ಲೂ ತಲೆಯೆತ್ತಿದ ಜಮ್ಮು ಕಾಶ್ಮೀರ್ ಪ್ಯಾಲೆಸ್ತೀನ್ ಲಿಬರೇಶನ್ ಫ್ರಂಟ್ (ಜೆ.ಕೆ.ಎಲ್.ಎಫ್) ಕೂಡಾ ಇದೆ ಬಾವುಟವನ್ನು ಉಪಯೋಗಿಸಿತು. ಎಲ್ಲದರಲ್ಲೂ ಒಂದು ರೀತಿಯ ಸಮಾನ ಅಂಶಗಳಿವೆ.... ಇದೆಲ್ಲ ಆದ ಬಳಿಕ ಯಾವಾಗ ಸಿಮಿ ನಿಷೇಧದ ಬಳಿಕ ೨೦೦೬-೦೭ರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಎಂಬ ಸಂಘಟನೆ ಹುಟ್ಟಿಕೊಂಡಿತೋ, ಆಗ ಮತ್ತೊಮ್ಮೆ ಇದೇ ಬಾವುಟ ದಕ್ಷಿಣ ಭಾರತದಲ್ಲಿ ಹಾರಾಡತೊಡಗಿತು!

ಅಷ್ಟೇ ಅಲ್ಲ, ಇಲ್ಲೂ ಪ್ಯಾಲೆಸ್ತೀನ್ ಮತ್ತು ಇತರ ಅರಬ್ ರಾಷ್ಟ್ರಗಳಲ್ಲಿ ಆದಂಥ ರೀತಿಯದ್ದೇ ಪ್ರತಿಭಟನೆಗಳು ಶುರುವಾದವು. ಇರಾಕ್ ನಲ್ಲಿ ಸದ್ದಾಮ್ ಹುಸೇನ್ ನೇಣಿಗೇರಿದರೇ ಇಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಅದೇ ಬಾವುಟ ಹಿಡಿದುಕೊಂಡು ನಮ್ಮ ರಸ್ತೆಗಳಲ್ಲಿ ಹಿಂಸಾಚಾರ ನಡೆಸಿತು. ಅರಬ್ ದೇಶಗಳಲ್ಲಿ ಅಂದರೆ ಈಜಿಪ್ಟ್, ಲೆಬನಾನ್, ಸಿರಿಯಾಗಳಲ್ಲಿ ಜನ ದಂಗೆ ಎದ್ದಾಗ ಇದೆ ಬಾವುಟ ಉಪಯೋಗವಾಯಿತು. ಇಜಿಪ್ತನಲ್ಲಿ ಮುಸ್ಲಿಂ ಬ್ರದರ್ ಹುಡ್ ಮೊಹಮ್ಮದ್ ಮೊರ್ಸಿ ಅಧ್ಯಕ್ಷರಾಗಿ ಆಯ್ಕೆಯಾಗಿ ನಂತರ ಕೆಲವೇ ಸಮಯದಲ್ಲಿ ಆತನ ಇಸ್ಲಾಮಿಕ್ ಮೂಲಭೂತವಾದದ ಆಡಳಿತ ಸಹಿಸದೆ ಆತನನ್ನು ಪದಚ್ಯುತ ಗೊಳಿಸಲಾಯಿತು ಮತ್ತು ನೇಣುಶಿಕ್ಷೆ ಘೋಷಿಸಲಾಯಿತು. ಆಗ ಭಾರತದಲ್ಲಿ ಇದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಅದೇ ಬಾವುಟಗಳನ್ನು ಹಿಡಿದು ಮೊರ್ಸಿ ಪರ ಪ್ರತಿಭಟನೆಗಳನ್ನು ಮಾಡಿದರು. ಇಸ್ರೇಲ್ ನಲ್ಲಿ ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸಷನ್ನಿನ ಸದಸ್ಯರು ಗಾಝ ದಲ್ಲಿ ಇಸ್ರೇಲ್ ವಿರುದ್ಧ ಇದೆ ಬಾವುಟ ಹಿಡಿದು ಪ್ರತಿಭಟನೆ ಮಾಡಿದರೆ ಇಲ್ಲಿ ಭಾರತದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಕೂಡಾ ಅದೇ ರೀತಿಯ ಪ್ರತಿಭಟನೆ ಮಾಡಿತು.

ಹೀಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಸ್ಥಾಪಿಸುವಾಗಲೇ ಅದರ ಬಾವುಟದಿಂದ ಹಿಡಿದು ಸಂಘಟನೆಯ ಕಾರ್ಯವೈಖರಿ, ಅದರ ಸಂಪರ್ಕಗಳು, ಅದರ ಉದ್ದೇಶ ಎಲ್ಲವೂ ಸ್ಪಷ್ಟವೇ ಇತ್ತು. ಹಾಗಂತ ಇವತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯದ ಪ್ರತಿಭಟನೆಗಳಲ್ಲಿ ಕಾಣಿಸಿಕೊಳ್ಳುವ ಯುವಕ ಯುವತಿಯರಿಗೆಲ್ಲಾ ಹಿನ್ನೆಲೆಯ ಬಗೆ ತಿಳಿದಿದೆ ಅಂತ ಖಚಿತವಾಗಿ ನಾನೇನೂ ಹೇಳುವುದಿಲ್ಲ. ಯುವಜನರನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ದಾರಿತಪ್ಪಿಸಿ ಅವರನ್ನು ಮೂಲಭೂತವಾದದ ಕಡೆಗೆ ಅವರಿಗೆ ಗೊತ್ತಿಲ್ಲದೇ ಕೊಂಡೊಯ್ಯುತ್ತಿರುವ ಸಾಧ್ಯತೆಯೂ ಇದೆ. ದೇಶದಲ್ಲಿ ಅರಾಜಕ ಪರಿಸ್ಥಿತಿ ನಿರ್ಮಿಸಲು ಇತರ ಬಾಹ್ಯ ಇಸ್ಲಾಮಿಕ್ ಶಕ್ತಿಗಳೊಂದಿಗೆ ಕೈಜೋಡಿಸುತ್ತಿದೆ. ಆದರೆ ಇದ್ಯಾವುದರ ಬಗ್ಗೆಯೂ ಗೊತ್ತಿಲ್ಲದ ನಮ್ಮ ಸೆಕ್ಯುಲರ್ ಹುಂಬರು ಇಂಥ ಸಂಘಟನೆಯ ಬೆನ್ನು ತಟ್ಟುತ್ತಾ ಕೋಮು ಸೌಹಾರ್ದತೆಯ ಬಗ್ಗೆ ಭಾಷಣ ಬಿಗಿಯುತ್ತಾರೆ ಮತ್ತು ದೇಶದ ಭದ್ರತೆಯನ್ನೇ ಅಪಾಯಕ್ಕೊಡ್ಡುತ್ತಾರೆ.

ಅಂದ ಹಾಗೆ ಎಲ್ಲರಿಗೂ ಸತ್ಯ ಹೇಳಿದರೆ ಕೆಂಡದಂಥ ಕೋಪ. ಹಾಗಾಗಿಯೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಕೂಡಾ ತನ್ನದೇ ಆದ ಟ್ರೇಡ್ ಮಾರ್ಕ್ ಬಾವುಟ ಹಿಡಿದು ನನ್ನ ವಿರುದ್ಧವೂ ಪ್ರತಿಭಟನೆ ಮಾಡಿತು..!!!

Related posts