Infinite Thoughts

Thoughts beyond imagination

ಅಲ್ಲಾ.. ಸ್ವಾಮೀ ಕಿವುಡನೇ - ಮಸೀದಿಗಳಲ್ಲಿ ಧ್ವನಿವರ್ಧಕಗಳ ಗದ್ದಲ ಮತ್ತು ಸೋನೂ ನಿಗಮ್.

ಖ್ಯಾತ ಗಾಯಕ ಸೋನು ನಿಗಮ್ ಮೊನ್ನೆ ಟ್ವೀಟ್ ಮಾಡಿ ನಮ್ಮ ದೇಶದಲ್ಲಿನ ಸಿಕ್ಲ್ಯೂಲರ್ ಮಂದಿಯ ಕೆಂಗಣ್ಣಿಗೆ ಗುರಿಯಾದರಲ್ಲ..? ಇದರಿಂದಾಗಿ ಪ್ರಾರ್ಥನ ಸ್ಥಳಗಳಲ್ಲಿ ಧ್ವನಿ ವರ್ಧಕಗಳ ನಿಷೇಧವಾಗಬೇಕೆಂಬ ಕೂಗಿಗೆ ಮತ್ತೊಮ್ಮೆ ಜೀವ ಬಂದಿದೆ. ಸೋನು ನಿಗಮ್ ಬಂದದ್ದೇ ಮೊಹಮ್ಮದ್ ರಫಿಯವರ ಸ್ವರದ ಅನುಕರಣೆ ಮಾಡಿ. ರಫಿಯನ್ನು ತನ್ನ ಗುರುವೆಂದೇ ಆರಾಧಿಸುವ ಸೋನು ನಿಗಮ್ ಈಗ ಮುಸ್ಲಿಂ ವಿರೋಧಿ ಹಣೆಪಟ್ಟಿ ಕಟ್ಟಿಕೊಳ್ಳುವಂತಾದದ್ದು, ಮಸೀದಿಗಳಲ್ಲಿ ನಿತ್ಯವೂ ಐದು ಬಾರಿ ಧ್ವನಿವರ್ಧಕದಲ್ಲಿ ಮೊಳಗುವ 'ಆಜಾನ್" ಅಥವಾ 'ಬಾಂಗ್' ಎಂಬ ಕೂಗಿನ ಕರೆಯ ವಿರುದ್ಧ ಟ್ವೀಟ್ ಮಾಡಿ!

ಸೋನು ನಿಗಮ್ .... "ಯಾವುದೇ ದೇವಸ್ಥಾನ ಅಥವಾ ಗುರುದ್ವಾರಗಳು ತಮ್ಮ ಧರ್ಮವನ್ನು ಪಾಲಿಸುವಂತೆ ಜನರನ್ನು ಎಚ್ಚರಿಸಲು ವಿದ್ಯುಚ್ಛಕ್ತಿಯನ್ನು ಬಳಸುವುದನ್ನು ನಂಬುವುದಿಲ್ಲ. ಅದೇ ವೇಳೆ ಮೊಹಮ್ಮದರು ಇಸ್ಲಾಮ್ ಅನ್ನು ಸ್ಥಾಪಿಸುವಾಗ ವಿದ್ಯುತ್ತೇ ಇರಲಿಲ್ಲ... ಎಡಿಸನ್ (ಥಾಮಸ್ ಆಲ್ವಾ ಎಡಿಸನ್) ನಂತರವೇ ಗೌಜು ಗದ್ದಲಗಳೆಲ್ಲ ಶುರುವಾದದ್ದು. ... ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ನಾನು ಮುಸ್ಲಿಮನಲ್ಲ ... ಆದರೂ ಬೆಳಗ್ಗೆ ಅಜಾನ್ ಕರೆಯಿಂದಲೇ ನನಗೆಚ್ಚರವಾಗುತ್ತದೆ. ಬಲವಂತದ ಧಾರ್ಮಿಕತೆ ಯಾವಾಗ ನಿಲ್ಲುತ್ತದೋ..?" ಅನ್ನೋ ಅರ್ಥದಲ್ಲಿ ಸೋನು ನಿಗಮ್ ಟ್ವೀಟ್ ಮಾಡಿದ್ದರು. ಆದರೆ ಇಷ್ಟಕ್ಕೆ ಸೋನು ನಿಗಮ್ ಮತಾಂಧ ಹಿಂದೂ ಎಂದೂ, ಮುಸ್ಲಿಂ ವಿರೋಧಿಯೆಂದೂ, ಬಿಜೆಪಿ ಬೆಂಬಲಿಸಿ ರಾಜ್ಯ ಸಭಾ ಸದಸ್ಯತ್ವಕ್ಕೆ ಲಾಬಿ ಮಾಡುತ್ತಿದ್ದಾನೆಂದೂ ನಮ್ಮ ಸೆಕ್ಲ್ಯೂಲರ್ ಮಂದಿ ಅವರ ಮೇಲೆ ಮುರಕೊಂಡು ಬಿದ್ದರು. ಪಶ್ಚಿಮ ಬಂಗಾಳದ ಮೈನಾರಿಟಿ ಕೌನ್ಸಿಲ್ ಸಯ್ಯದ್ ಷಾ ಆಸೀಫ್ ಅಲ್ ಖಾದ್ರಿ ಯಂತೂ ಪತ್ರಿಕಾ ಗೋಷ್ಠಿ ನಡೆಸಿ ಸೋನು ನಿಗಮ್ ತಲೆಬೋಳಿಸಿ, ಹಳೆ ಚಪ್ಪಲಿ ಮೆರವಣಿಗೆ ಮಾಡಬೇಕೆಂದು ಫತ್ವಾ ಹೊರಡಿಸಿದ. ಇದಕ್ಕೆ ಪ್ರತಿಕ್ರಿಯೆಯಾಗಿ ಸೋನು ನಿಗಮ್ ಕೂಡ ತಾನು ಮುಸ್ಲಿಂ ವಿರೋಧಿಯಲ್ಲ ಆದರೆ ಸಯ್ಯದ್ ಷಾ ಆಸೀಫ್ ಅಲ್ ಖಾದ್ರಿಯ ಸವಾಲನ್ನು ಸ್ವೀಕರಿಸಿದ್ದು, ಖ್ಯಾತ ಹೇರ್ ಸ್ಟೈಲಿಶ್ ಅಲೀಮ್ ಹಕೀಮ್ ಎಂಬ ಮುಸ್ಲಿಮನನ್ನೇ ಕರೆಸಿ ತನ್ನ ತಲೆ ಬೋಳಿಸಿಕೊಂಡರು ಹಾಗೂ ಹತ್ತು ಲಕ್ಷ ರೂಪಾಯಿ ನೀಡುವಂತೆ ಖಾದ್ರಿಗೆ ಸವಾಲೆಸೆದರು.

"ನಾನು ಧ್ವನಿಯೆತ್ತಿದ್ದು. ಧ್ವನಿವರ್ಧಕಗಳಿಂದ ಅಪರಾತ್ರಿಯಲ್ಲಾಗುವ ತೊಂದರೆಯ ಬಗ್ಗೆ. ದೇಶದಲ್ಲಿ ಶಬ್ದ ಮಾಲಿನ್ಯದ ವಿರುದ್ಧ ಕಾನೂನುಗಳಿವೆ. ನಾನು ಗಾಯಕನಾಗಿ ಕಾರ್ಯಕ್ರಮಗಳಲ್ಲಿ ಹಾಡುವಾಗಲೂ ರಾತ್ರಿ ಹತ್ತು ಗಂಟೆಯ ನಂತರ ಧ್ವನಿವರ್ಧಕ ಉಪಯೋಗಿಸಿದರೆ ಪೊಲೀಸ್ ಕೇಸು ದಾಖಲಾಗುತ್ತದೆ. ಹಾಗಾಗಿ ಅದು ಮಸೀದಿಯೇ ಇರಲಿ, ಗುರುದ್ವಾರವೇ ಇರಲಿ, ದೇವಸ್ಥಾನವೇ ಇರಲಿ ಧ್ವನಿವರ್ಧಕಗಳನ್ನು ಉಪಯೋಗಿಸಿ ಇತರರ ನೆಮ್ಮದಿಯನ್ನು ಹಾಳು ಮಾಡುವುದನ್ನು ವಿರೋಧಿಸುತ್ತೇನೆ. " ಅಂತ ಸೋನು ತನ್ನ ನಿಲುವನ್ನು ಸ್ಪಷ್ಟ ಪಡಿಸುತ್ತಾರೆ. ಇದು ಸೋನು ನಿಗಮ್ ಕಥೆ.

ಆದರೆ ಹಿಂದೆಲ್ಲ 'ಅಭಿವ್ಯಕ್ತಿ ಸ್ವಾತಂತ್ರ್ಯ" ಪರ ಮಾತಾಡುತ್ತಿದ್ದ ಘಟಾನುಘಟಿ ಲದ್ಧಿಜೀವಿಗಳು, ದಲ್ಲಾಳಿ-ಪತ್ರಕರ್ತರು, ದಾವೂದ್ ಎಂಜಲು ಕಾಸಿನ ಸಿನೆಮಾ ಗಿರಾಕಿಗಳು ಇವತ್ತು ಸಹಜವಾಗಿ ಸೋನು ಮೇಲೆಯೇ ಹರಿಹಾಯ್ದರು.
ಆದರೆ ಇದು ಇವತ್ತಿನ ವಿವಾದವೇನೂ ಅಲ್ಲ. ಸೋನೂ ನಿಗಮ್ ಹೇಳಿದ್ದು ಹೊಸದೇನೂ ಅಲ್ಲ. ಯಾಕೆಂದರೆ ಹೆಚ್ಚುತ್ತಿರುವ ಶಬ್ದ ಮಾಲಿನ್ಯವನ್ನು ತಡೆಯಲು ಸರ್ವೋಚ್ಚ ನ್ಯಾಯಾಲಯವೇ ಬಗ್ಗೆ ನಿರ್ದೇಶನಗಳನ್ನು ನೀಡಿದೆ. ಕೈಗಾರಿಕಾ ಪ್ರದೇಶಗಳಲ್ಲಿ ೭೦ ರಿಂದ ೭೫ ಡೆಸಿಬಲ್ಸ್, ಮಾರುಕಟ್ಟೆ ಪ್ರದೇಶಗಳಲ್ಲಿ ೬೦ ರಿಂದ ೬೫ ಡೆಸಿಬಲ್ಸ್, ವಸತಿ ಪ್ರದೇಶದಲ್ಲಿ ೪೫ ರಿಂದ ಐವತ್ತು ಡೆಸಿಬಲ್ಸ್ ಧ್ವನಿಮಟ್ಟವೇ ಇರಬೇಕೆಂದು ಖಚಿತವಾಗಿ ಹೇಳಿದೆ. ೨೦೦೫ ರಲ್ಲೇ ಸರ್ವೋಚ್ಚ ನ್ಯಾಯಾಲಯ ಹತ್ತರಿಂದ ಬೆಳಿಗ್ಗೆ ಆರು ಗಂಟೆಯವರೆಗೆ ಧ್ವನಿವರ್ಧಕ ಬಳಕೆಯನ್ನು ನಿಷೇಧಿಸಿದೆ. ಬಳಿಕ ಹಸಿರು ಪೀಠವೂ ಇದನ್ನೇ ಸೂಚಿಸಿದೆ. ನಂತರ ಕೇರಳ, ಚೆನ್ನೈ, ಕೊಲ್ಕತ್ತಾ ಮುಂತಾದ ಉಚ್ಚ ನ್ಯಾಯಾಲಯಗಳೂ ಬಗ್ಗೆ ಕಠಿಣ ತೀರ್ಪುಗಳನ್ನು ನೀಡಿದೆ. ಆದರೆ ಹೆಚ್ಚಿನೆಲ್ಲಾ ರಾಜ್ಯಗಳು ಇವುಗಳನ್ನು ಸರಿಯಾಗಿ ಪಾಲಿಸಲೇ ಇಲ್ಲ.

ಕೇರಳದ ಮುಸ್ಲಿಂ ಧಾರ್ಮಿಕ ಸಂಘಟನೆ ಸಮಸ್ತ ಜಮೀಯ್ಯತ್ತುಲ್ ಉಲೇಮಾ ಮಸೀದಿಗಳಲ್ಲಿನ ಧಾರ್ಮಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕಗಳ ಅಗತ್ಯವೇ ಇಲ್ಲ ಎಂಬ ಮಹತ್ವದ ತೀರ್ಮಾನ ತೆಗೆದುಕೊಂಡಿತು. ಸ್ವಾಭಾವಿಕವಾಗಿ ಕೇರಳದ ಮುಸ್ಲಿಮರನ್ನು ಕಟ್ಟರ್ ಮತೀಯವಾದಿಗಳೆಂದೇ ಭಾವಿಸಲಾಗುತ್ತದೆ. ಆದರೆ ಜಮೀಯ್ಯತ್ತುಲ್ ಉಲೇಮಾದ ಕಾರ್ಯದರ್ಶಿ ನಜೀಬ್ ಮೌಲವಿ ಪ್ರಾರ್ಥನೆಗಳಿಗೆ ಧ್ವನಿವರ್ಧಕಗಳ ಉಪಯೋಗವನ್ನು ಇಸ್ಲಾಮ್ ಬೆಂಬಲಿಸುವುದಿಲ್ಲ... ಕೇರಳದಲ್ಲಿ ಸುನ್ನಿ ಮುಸ್ಲಿಮರು ಧ್ವನಿವರ್ಧಕದ ಬಳಕೆ ಪ್ರಾರಂಭ ಮಾಡಿ ಕೇವಲ ಒಂದು ಶತಮಾನವೂ ಆಗಿಲ್ಲ. ೧೯೬೭ರಲ್ಲೇ ಸಮಸ್ತ ಜಮೀಯ್ಯತ್ತುಲ್ ಉಲೇಮಾ ಮಸೀದಿಗಳಲ್ಲಿ 'ಕುತ್ಬಾ' ಪತನಕ್ಕೆ ಧ್ವನಿವರ್ಧಕದ ಬಳಕೆಯನ್ನು ವಿರೋಧಿಸಿತ್ತು. ಆದರೆ ಆಗ ಸಮಸ್ತದ ಅಧ್ಯಕ್ಷರಾಗಿದ್ದ ಕೆ.ಕೆ. ಸದಾಖಾತುಲ್ಲಾ ಮೌಲ್ವಿ ಇದನ್ನು ತೀವ್ರವಾಗಿ ವಿರೋಧಿಸಿ, ಧ್ವನಿವರ್ಧಕ ಬೇಕೇ ಬೇಕೆಂಬ ಪಟ್ಟುಹಿಡಿದು ರಾಜೀನಾಮೆ ಇತ್ತು ತನ್ನದೇ ಪ್ರತ್ಯೇಕ ಸಂಘಟನೆ ಕಟ್ಟಿಕೊಂಡರು. ಆದರೆ ಈಗಲೂ ಕೇರಳದ ಮಲಬಾರ್ ಪ್ರಾಂತ್ಯದಲ್ಲಿನ ಸುಮಾರು ಐನೂರಕ್ಕೂ ಹೆಚ್ಚು ಮಸೀದಿಗಳು 'ಕುತ್ಬಾ' ಪ್ರಾರ್ಥನೆಗೆ ಧ್ವನಿವರ್ಧಕ ಉಪಯೋಗಿಸುವುದಿಲ್ಲ. ತುಂಬಾ ಜನನಿಬಿಡ ಪ್ರದೇಶದಲ್ಲಿರುವ ಮಸೀದಿಗಳಲ್ಲಿ ಧ್ವನಿವರ್ಧಕದ ಬಳಕೆಯಿಂದ ಜನರಿಗೆ ತುಂಬಾ ಕಿರಿಕಿರಿಯಾಗುತ್ತದೆ ಎಂಬುದನ್ನು ನಜೀಬ್ ಮೌಲವಿ ಒಪ್ಪುತ್ತಾರೆ. ಹಿಂದಿನ ಕಾಲದಲ್ಲಿ ನಮಾಜು ಮಾಡಲು ಮುಸ್ಲಿಮರಿಗೆ ಸಮಯದ ಮನವರಿಕೆ ಮಾಡಿಕೊಡಲೆಂದು ಪ್ರವಾದಿಯ ಕಾಲದಲ್ಲೇ ಬಿಲಾಲ್ ಎಂಬಾತ 'ಅಜಾನ್' ಅಥವಾ 'ಬಾಂಗ್' ಕರೆಕೊಡುವ ಪದ್ಧತಿ ಪ್ರಾರಂಭಿಸಿದ್ದು ಈಗಲೂ ಇದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಆದರೆ ಕಾಲ ಘಟ್ಟದಲ್ಲಿ ನಮಾಜ್ ಸಮಯದ ಮನವರಿಕೆ ಮಾಡಿಕೊಡಲು ಹಲವಾರು ದಾರಿಗಳಿವೆ. ಆಧುನಿಕ ಮೊಬೈಲ್ ಫೋನ್ ಗಳಲ್ಲಿ ಇದಕ್ಕೆಂದೇ ಆಪ್ ಗಳಿವೆ. ಹಾಗಾಗಿ ನಮಾಜಿಗೆ ಕರೆಕೊಡಲು ಧ್ವನಿವರ್ಧಕಗಳ ಬಳಕೆ ಅಗತ್ಯವೇ ಇಲ್ಲ.

ಹಿಂದೂ ದೇವಾಲಯಗಳಲ್ಲಿ ಪೂಜಾ ಸಮಯ ತಿಳಿಸಲು ನಗಾರಿಗಳ ಬಳಕೆಯಿದ್ದರೆ, ಕ್ರಿಶ್ಚಿಯನ್ ಚರ್ಚುಗಳಲ್ಲಿ ಪ್ರಾರ್ಥನಾ ಸಮಯ ತಿಳಿಸಲು ಗಂಟಾಗೋಪುರಗಳ ಬಳಕೆಯಿದೆ. ಹಿಂದಿನ ಕಾಲದಲ್ಲಿ ಮುಸ್ಲಿಮರೂ ಕೂಡ ತಮ್ಮ ಮಸೀದಿಯಲ್ಲಿನ ಎತ್ತರದ ಮಿನಾರುಗಳ ಮೇಲೆ ನಿಂತುಕೊಂಡು ನಮಾಜ್ ಕರೆ ಕೊಡುತ್ತಿದ್ದರು.. ಆದರೆ ಕಾಲಾನಂತರದಲ್ಲಿ ಧ್ವನಿವರ್ಧಕಗಳ ಬಳಕೆ ಶುರುವಾಯಿತು. ಪ್ರತಿಯೊಂದ್ದಕ್ಕೂ ಪ್ರವಾದಿಯ ಉವಾಚವನ್ನು ಉಲ್ಲೇಖಿಸುವ ಧರ್ಮಾಂಧರು ಪ್ರವಾದಿಯ ಕಾಲದಲ್ಲಿ ಧ್ವನಿವರ್ಧಕಗಳ ಬಳಕೆ ಇತ್ತೇ ಎಂದು ಒಮ್ಮೆ ಇತಿಹಾಸ ಹಾಗು ವಿಜ್ಞಾನದ ಪಠ್ಯ ಪುಸ್ತಕಗಳನ್ನು ಪರಿಶೀಲಿಸಲಿ. ನಂತರ ತಮ್ಮ ತಲೆಬುರಡೆಯ ಟೋಪಿಯೊಳಗಿನ ಫತ್ವಾ ಹೊರಡಿಸಲಿ!

ಧ್ವನಿವರ್ಧಕಗಳ ಮೂಲಕವೇ ಪ್ರಾರ್ಥನೆ ಸಲ್ಲಿಸ ಬೇಕೆಂದರೆ, ಅಲ್ಲಾ ಸ್ವಾಮಿ ಏನು ಕಿವುಡನೆ .? ಇಲ್ಲಿ ಮುಸ್ಲಿಮರ "ಆಜಾನ್' ಬಗ್ಗೆಯೇ ಹೆಚ್ಚು ಕಂಪ್ಲೇಂಟ್ ಗಳಿರುವುದಕ್ಕೆ ಕಾರಣವೂ ಇದೆ. ಭಾರತದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಸಮಯಕ್ಕೆ ಅಜಾನ್ ಇರುತ್ತದೆ. ಉದಾಹರಣೆಗೆ ಬೆಂಗಳೂರಿನಲ್ಲಿ ಬೆಳಗ್ಗೆ -೫೨ ಗಂಟೆಗೆ ಮೊದಲ ಫಜ್ರ್ ಅಜಾನ್ ಆದರೆ ನಂತರ ಮಧ್ಯಾಹ್ನ ೧೨-೧೯ ಗಂಟೆಯ ಸುಮಾರಿಗೆ ಎರಡನೆಯ ಜೋಹರ್ ಆಜಾನ್, -೨೭ ಗಂಟೆಗೆ ಅಸರ್ ಅಜಾನ್, ಸಂಜೆ -೩೩ಕ್ಕೆ ಮಘ್ರೀಬ್ ಅಜಾನ್, ರಾತ್ರಿ -೪೬ಕ್ಕೆ ಇಶಾ ಆಜಾನ್ ಹೀಗೆ ಅಂದಾಜು ಎರಡು ನಿಮಿಷ ಕಾಲಾವಧಿಯ ಐದು ಆಜಾನ್ ಗಳು ಧ್ವನಿವರ್ಧಕದ ಮೂಲಕ ಮೊಳಗುತ್ತದೆ. ಅದರಲ್ಲೂ ಕೂಗಳತೆ ದೂರದಲ್ಲೇ ಹಲವಾರು ಮಸೀದಿಗಳಿದ್ದರಂತೂ ಎಲ್ಲ ಕಡೆಯೂ ಒಂದೇ ಬಾರಿಗೆ ಅಜಾನ್ ಗಳು ಮೊಳಗಲಾರಂಭಿಸುತ್ತವೆ! ಇದರಿಂದಾಗಿ ಶಬ್ದ ಮಾಲಿನ್ಯವೇ ಹೊರತು ಬೇರೇನೂ ಪ್ರಯೋಜನವಿಲ್ಲ.

ಇತ್ತೀಚಿಗೆ ಹಿಂದೂ ದೇವಸ್ಥಾನಗಳು ಕಿವುಡರಿಗೆ ಪ್ರತಿಕ್ರಿಯೆ ನೀಡಲು ಕೆಲವೊಮ್ಮೆ ತಮ್ಮ ದೇವರುಗಳ ಸ್ತುತಿಗಳನ್ನು ಜೋರಾಗಿ ಬಿತ್ತರಿಸುತಿರುವುದು ನಡೆದಿದೆ. ಆದರೆ ಇದು ಒಂದು ಪ್ರತಿಕ್ರಿಯೆ ಮಾತ್ರವಾಗಿರುತ್ತದೆ. ಧ್ವನಿ ವರ್ಧಕಗಳ ಬಳಕೆ ಬಗ್ಗೆ ಹಿಂದುಗಳಲ್ಲಿ ಯಾರು ಸಮರ್ಥಿಸಿಕೊಳ್ಳಲು ಹೋಗುವುದಿಲ್ಲ. ಅದು ಕೇವಲ ಸರ್ಕಾರದ ಇಸ್ಲಾಮಿ ಕುರುಡು ಮೋಹದ ವಿರುದ್ಧದ ಒಂದು ಪ್ರತಿಭಟನಾ ಪ್ರತಿಕ್ರಿಯೆ ಯಾಗಿರುತ್ತದೆ. ಸರ್ಕಾರ ತುರ್ಥಾಗಿ ಸುಪ್ರೀಂ ಕೋರ್ಟ್ ಆದೇಶವನ್ನು ನಿರ್ದಾಕ್ಷಿಣ್ಯವಾಗಿ ಪಾಲಿಸಿದರೆ, ಎಲ್ಲ ಸಮಸ್ಯೆಯು ಪರಿಹಾರವಾಗುತ್ತದೆ. ಒಂದು ಮತಾಂಧ ಜನಾಂಗದವರಿಗೆ ಕಾನೂನು ಬಾಹಿರವಾಗಿ ಅವಕಾಶ ಮಾಡಿಕೊಟ್ಟರೆ, ಹಿಂದುಗಳೇನು ಬಳೆತೊಟ್ಟುಕೊಂಡು ಸುಮ್ಮನೆ ಕೂರುವುದಿಲ್ಲ. ಅಂತಹ ದಿನಗಳು ಕಳೆದು ಹೋದವು ಎಂದು ಸಾರಲು ಪ್ರತಿಕ್ರಿಯೆಗಳು ಬಂದೇಬರುತ್ತವೆ.

ಅಂದಹಾಗೆ ಕೇರಳದ ಶೇಕಡಾ ಎಂಭತ್ತರಷ್ಟು ಮುಸ್ಲಿಂ ಜನಸಂಖ್ಯೆಯಿರುವ ಮಲಪ್ಪುರಂನಲ್ಲೇ ಇರುವ ವಂಡೂರಿನ ಪಲ್ಲಿಕುನ್ನು ಜುಮ್ಮಾ ಮಸೀದಿ ಸುಮಾರು ಇನ್ನೂರು ವರ್ಷಗಳಷ್ಟು ಹಳೆಯದು. ಮಸೀದಿ ಪ್ರಾರಂಭವಾದಂದಿನಿಂದ ಇಂದಿನವರೆಗೂ ಒಂದೇ ಒಂದು ದಿನವೂ 'ಅಜಾನ್' ಅಥವಾ 'ಬಾಂಗ್' ಕೂಗು ಮೊಳಗೇ ಇಲ್ಲ. ಅಲ್ಲಿ ಧ್ವನಿವರ್ಧಕದಲ್ಲಿ ಅಜಾನ್ ಕೂಗುವ ಸಂಪ್ರದಾಯವೇ ಇಲ್ಲ. ಬದಲಿಗೆ ಅಲ್ಲಿನ ಮಸೀದಿಯ ಮುಅಜ್ಜೀನ್ ಪ್ರಾರ್ಥನೆಯ ಸಮಯದಲ್ಲಿ ಜೋರಾಗಿ ನಗಾರಿ ಬಾರಿಸುತ್ತಾನೆ!.... ನಗಾರಿಯ ಸದ್ದು ಕೇಳಿಯೇ ಮುಸ್ಲಿಮರು ನಮಾಜಿಗೆ ಬರುತ್ತಾರೆ. ಇದನ್ನು ಅಲ್ಲಿನ ಮುಸ್ಲಿಮರೆಲ್ಲರೂ ಎರಡು ಶತಮಾನಗಳಿಂದ ಒಪ್ಪಿಕೊಂಡಿದ್ದಾರೆ... ಇವತ್ತು ಅಂತರ್ಜಾಲದಲ್ಲಿ ಮತೀಯ ದ್ವೇಷದ ಬೆಂಕಿಯುಗುಳುವ ಮುಸ್ಲಿಂ ಹುಡುಗರು... ಮತ್ತು ಸೋನು ನಿಗಮ್ ರಂಥವರನ್ನು ಮುಸ್ಲಿಂ ವಿರೋಧಿ ಎನ್ನುವ ಸಿಕ್ಯುಲರ್ ಮನಸ್ಥಿತಿಯವರು ವಂಡೂರಿನ ಪಲ್ಲಿಕುನ್ನು ಜುಮ್ಮಾ ಮಸೀದಿಯ ಕಡೆಗೊಮ್ಮೆ ಮತ್ತು ಕೇರಳದ 'ಸಮಸ್ತ ಜಮೀಯ್ಯತ್ತುಲ್ ಉಲೇಮಾದ ಕಡೆಗೊಮ್ಮೆ ನೋಡಬೇಕು...

ಶಬ್ದ ಮಾತ್ರವಲ್ಲ ಎಲ್ಲಾ ರೀತಿಯ ವಾತಾವರಣ ಮಾಲಿನ್ಯದ ವಿರುದ್ಧವೂ ನನ್ನದು ನಿರಂತರ ಹೋರಾಟ. ಹಾಗಾಗಿ ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಅಭಿಪ್ರಾಯ ವ್ಯಕ್ತಪಡಿಸಿದ ಸೋನು ನಿಗಮ್ ಅವರಿಗೆ ನನ್ನದು ಅಖಂಡ ಬೆಂಬಲ. ಆದರೆ ಜನ ಇದನ್ನೇ ಕೋಮುವಾದ ಎಂದು ಕರೆದರೆ ನನ್ನದೇನು ಅಭ್ಯಂತರವಿಲ್ಲ!!!

ಅಂದ ಹಾಗೆ ಈಗ ಆಕ್ಷೇಪ ಬಂದದ್ದು ಸಂಘ ಪರಿವಾರದಿಂದ ಅಲ್ಲ... ಬದಲಿಗೆ ಜನರೇ ನೇರವಾಗಿ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡ್ಡಿದ್ದು!! ಜನರೇ ಒಂದು ರೀತಿಯಲ್ಲಿ ಬಂಡೆದ್ದಿದ್ದಾರೆ. ಎಲ್ಲಿಯವರೆಗೆ ಜನ ಸಾಮಾನ್ಯರ ಅಭಿಪ್ರಾಯಗಳನ್ನು ತಡೆಹಿಡಿಯುಲಾಗುತ್ತದೆ??? ಕಾಲ ಚಕ್ರ ತಿರುಗಿದೆ ಈಗ ಬದಲಾವಣೆ ಅನಿವಾರ್ಯ, ಒಪ್ಪಿ ಬದಲಾಗದಿದ್ದರೆ ಅಂಥವರು ಕಾಲಚಕ್ರದಲ್ಲೇ ಹೂತು ಹೋಗುತ್ತಾರೆ. ಭಾರತ ಬದಲಾಗುತ್ತಿದೆ.

Related posts