Infinite Thoughts

Thoughts beyond imagination

ಸುಕ್ಮಾ ಹತ್ಯಾಕಾಂಡ; ರಕ್ತ ಪಿಪಾಸು ಮಾವೋವಾದಿಗಳಿಗೆ ಬಲಿಯಾದ ವೀರ ಯೋಧರಿಗೆ ನಮನ

ಛತ್ತೀಸಘರ್ ಸುಕ್ಮಾದಲ್ಲಿ ಇತ್ತೀಚಿಗೆ ನಡೆದ ಮಾವೋವಾದಿಗಳ ಮೋಸದ ದಾಳಿಗೆ ಬಲಿಯಾದ ಸಿ.ಆರ್.ಪಿ.ಎಫ್. ಎಲ್ಲ ವೀರಯೋಧರಿಗೂ ನನ್ನ ಶ್ರದ್ಧಾಂಜಲಿ ಹಾಗು ನಮನಗಳು. ಯೋಧರ ತ್ಯಾಗ ಬಲಿದಾನಗಳು ಖಂಡಿತಾ ವ್ಯರ್ಥವಾಗುವುದಿಲ್ಲ. ಭಾರತದ ದೇಶಪ್ರೇಮಿಗಳು ನಿಮ್ಮನ್ನು ತಮ್ಮ ಹೃದಯದಲ್ಲಿಟ್ಟು ಪೂಜಿಸುತ್ತಾರೆ...ಕೆಚ್ಛೆದೆಯ ಯೋಧರ ನಿರ್ಭಾಗ್ಯ ಕುಟುಂಬದವರಿಗೆ ದೇವರು ನೋವನ್ನು ಸಹಿಸುವ ಶಕ್ತಿ ನೀಡಲಿ ಅಂತ ಭಗವಂತನಲ್ಲಿ ಹೃದಯಪೂರ್ವಕ ಪ್ರಾರ್ಥಿಸುತ್ತೇನೆ. ವೀರಮರಣ ಅಪ್ಪಿದ ಅಷ್ಟೂ ಜನ ಭಾರತ ಮಾತೆಯ ಹೆಮ್ಮೆಯ ಪುತ್ರರಿಗೆ ಮತ್ತೊಮ್ಮೆ ನನ್ನ ಶ್ರದ್ಧಾಂಜಲಿ!

ಮಾವೋವಾದಿಗಳೆಂಬ ಕ್ಷುದ್ರ ಕ್ರಿಮಿಗಳ ಅಂತ್ಯ ಕಾಲ ಸಮೀಪಿಸುತ್ತಾ ಇದೆ... ಕೇಂದ್ರದಲ್ಲಿ ಮೋದಿ ಸರಕಾರ ಬಂದಾಗಿನಿಂದಲೂ ನಮ್ಮ ಯೋಧರು ಅವರನ್ನು ತಿಗಣೆಗಳಂತೆ ಹೊಸಕಿ ಹಾಕುತ್ತಿದ್ದಾರೆ. ಬಹುಶಃ ಭಾರತದಲ್ಲಿ ನಕ್ಸಲಿಸಂ ಎಂಬ ಪಿಡುಗು ಶುರುವಾದಾಗಿನಿಂದ ಈವರೆಗೆ ಕೆಂಪು ಉಗ್ರರಿಗೆ ಮೋದಿ ಸರಕಾರ ಕೊಟ್ಟಂಥ ಏಟು ಯಾರೂ ಕೊಟ್ಟಿರಲಿಲ್ಲ.. ಇಂಥಾ ಮಾರಣಾಂತಿಕ ಪೆಟ್ಟು ನಕ್ಸಲರಿಗೆ ಯಾವತ್ತೂ ಬಿದ್ದಿರಲಿಕ್ಕಿಲ್ಲ. ಮಾವೋ ಎಂಬ ಕ್ರೂರ ಬಫೂನ್ ಹೆಸರು ಹೇಳಿಕೊಂಡು ಸಿದ್ಧಾಂತದ ಹೆಸರಿನಲ್ಲಿ ಮುಗ್ಧ ಗುಡ್ಡಗಾಡು ಯುವಕ ಯುವತಿಯರ ತಲೆಕೆಡಿಸಿ ಅವರನ್ನು ಶೋಷಿಸುವ ವರ್ಗವೇ ನಕ್ಸಲಿಸಂ ಮೂಲ ಗುಣ!

ಬುಡಕಟ್ಟು ಜನಾಂಗದ ಗಂಡುಮಕ್ಕಳನ್ನು ಬಂದೂಕಿನ ಬಾಯಿಗೊಡ್ಡಿ, ಅವರ ಹೆಣ್ಣುಮಕ್ಕಳನ್ನು ತಮ್ಮ ಮೋಜಿಗೆ ಬಳಸುವ ಅಸಹ್ಯಕರ ಕ್ರಿಮಿಗಳು ಕೊಳ್ಳೆ ಹೊಡೆದು ಕೂಡಿಟ್ಟ ಅಂದಾಜು ಹನ್ನೆರಡು ಸಾವಿರ ಕೋಟಿ ರೂಪಾಯಿಗಳು ಮೋದಿಯವರ ನೋಟ್ ಬ್ಯಾನ್ ನಿಂದ ರದ್ದಿ ಕಾಗದಗಳಾಗಿ ಬದಲಾದವು. ಈಗ ಕಳೆದ ಮೂರು ವರ್ಷಗಳಿಂದ ಮಾವೋವಾದಿಗಳ ಆಡುಂಬೊಲವಾಗಿದ್ದ ಛತ್ತೀಸಘರ್ ಅರಣ್ಯದೊಳಗಿನ ಹಳ್ಳಿಗಳಿಗೆ ಯುದ್ಧೋಪಾದಿಯಲ್ಲಿ ರಸ್ತೆಗಳ ನಿರ್ಮಾಣ, ವಿದ್ಯುದೀಕರಣ, ಮೊಬೈಲ್ ಸಂಪರ್ಕ ಮುಂತಾದವು ನಡೆಯುತ್ತಿವೆ. ಸ್ವಾತಂತ್ರ್ಯಾನಂತರ ಇದುವರೆಗೂ ಯಾರೂ ಹೋಗದ ಅತ್ಯಂತ ಕುಗ್ರಾಮಗಳಿಗೆ ಈಗ ಸರಕಾರದ ಯೋಜನೆಗಳು, ಸೌಲಭ್ಯಗಳು ತಲುಪತೊಡಗಿವೆ. ಇದರಿಂದ ಮಾವೋವಾದಿಗಳು ತಮ್ಮ ಬೆಲೆ ಬೇಯದೆ ತೀರಾ ಹತಾಶ ಸ್ಥಿತಿಗೆ ತಲುಪಿದ್ದರು. ಬಸ್ತಾರ್ ನಲ್ಲಿ ನೂರಾರು ಮೈಲಿಗಳಷ್ಟು ರಸ್ತೆಗಳು ನಿರ್ಮಾಣವಾದವು. ಹೊರಗಿನ ಜನ ಯಾವತ್ತೂ ಭೇಟಿಯೇ ನೀಡದಿದ್ದ ಹಲವಾರು ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ದೊರಕಿತು. ಕಳೆದ ಮೂವತ್ತು ವರ್ಷಗಳಿಂದಲೂ ಮಾವೋವಾದಿಗಳ ಹಿಡಿತದಲ್ಲಿದ್ದ ಹಲವಾರು ಹಳ್ಳಿಗಳಿಗೆ ಮುಕ್ತಿ ದೊರಕಿತ್ತು. ಸುಮಾರು ೫೪೧೨ ಕಿಲೋಮೀಟರ್ ನಷ್ಟು ರಸ್ತೆ ಕಾಮಗಾರಿಗಳಿಗೆ ಇತ್ತೀಚಿಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದ್ದೆ, ನಕ್ಸಲ್ಸ್ ಮಾವೋವಾದಿಗಳಿಗೆ ನಡುಕ ಹುಟ್ಟಿಸಿತು. ಯಾವ ಸ್ಥಳದಲ್ಲಿ ರಸ್ತೆ ಬಿಡಿ, ರಸ್ತೆಗಾಗಿ ಭೂಮಾಪನ ಮಾಡಲು ಆಗದಂಥ ವಾತಾವರಣ ನಿರ್ಮಾಣ ಮಾಡಿದ್ದರೋ, ಅದೇ ಪ್ರದೇಶಗಳಲ್ಲಿ ಇಂದು ಸರ್ಕಾರ ಸಿ.ಆರ್.ಪಿ.ಎಫ್ ಯೋಧರ ಕಾವಲಿನಲ್ಲಿ ರಸ್ತೆ ಕೆಲಸ ಪ್ರಾರಂಭಿಸಿತು.

ಸಿ.ಆರ್.ಪಿ.ಎಫ್.ಯೋಧರ ಕಟ್ಟೆಚ್ಚರದ ಕಣ್ಗಾವಲಿನಿಂದ ಅಲ್ಲಿ ಹಗಲೂ ರಾತ್ರಿ ರಸ್ತೆ ನಿರ್ಮಾಣದ ಕೆಲಸಗಳು ತುರುಸಿನಿಂದ ನಡೆಯ ತೊಡಗಿದವು. ಹಾಗಾಗಿ ಮಾವೋವಾದದ ಕ್ಷುದ್ರ ಜಂತುಗಳಿಗೆ ತಮ್ಮ ಆಟ ಇನ್ನು ತುಂಬಾ ಸಮಯ ನಡೆಯೋದಿಲ್ಲ ಎಂಬುದು ಖಾತ್ರಿಯಾಯಿತು. ಅದಕ್ಕೆ ಸರಿಯಾಗಿ ಕಾಡುಗಳಿಗೆ ಕಾಲೇ ಇಡದೆ ನಾಡಿನೊಳಗಿನ ವಿಶ್ವ ವಿದ್ಯಾಲಯಗಳೆಂಬ ಸುರಕ್ಷಿತ ಗಂಜಿಕೇಂದ್ರಗಳಲ್ಲಿ ಸೆಮಿನಾರುಗಳನ್ನು ಮಾಡುತ್ತಾ, ಪತ್ರಿಕೆಗಳಿಗೆ ಅಂಕಣ ಬರೆಯುತ್ತಾ.. ಅವರ ಬಾಸ್ ಗಳಿಗೂ ಈಗ ಗತಿಯಿಲ್ಲದಂತಾಗಿದೆ. ಅವರಲ್ಲಿ ಕೆಲವರನ್ನು ಈಗಾಗಲೇ ಜೈಲಿಗೂ ಅಟ್ಟಲಾಗಿದೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರಗಳಿದ್ದಾಗ ಇಂಥವರಿಗೆ ಸರಕಾರೀ ಸವಲತ್ತುಗಳನ್ನಿತ್ತು, ಯಾವ್ಯಾವುದೋ ತಗಡು, ಕೆಲಸಕ್ಕೆ ಬಾರದ ಅಧ್ಯಯನ ಕೇಂದ್ರ- ಪೀಠ ಸಮಿತಿ, ಬೋರ್ಡ್, ನಿಗಮ, ಮಂಡಳಿ ಅಂತೆಲ್ಲ ಗಂಜಿಕೇಂದ್ರಗಳನ್ನು ಸೃಷ್ಟಿಸಿ ಅವರಿಗೆ ಆಗಾಗ ಪ್ರಶಸ್ತಿಗಳನ್ನೂ ಕೊಟ್ಟು, ವಿದೇಶ ಪ್ರವಾಸಗಳನ್ನೂ ಮಾಡಿಸಿ ಸಾಕಲಾಗುತ್ತಿತು. ಈಗ ಅದಕ್ಕೆಲ್ಲ ಕಡಿವಾಣ ಬಿದ್ದಿದೆ. ಕೇಂದ್ರ-ಪೀಠ, ಸಮಿತಿ, ಬೋರ್ಡ್, ನಿಗಮ, ಮಂಡಳಿಗಳಿಗೆ ಇಂಥವರ ನೇಮಕವಾಗುತ್ತಿಲ್ಲ. ಪ್ರಶಸ್ತಿಗಳು ಅರ್ಹರಿಗೆ ಸಿಗತೊಡಗಿವೆ. ಸಂಬಳ, ಭತ್ಯೆ, ಗೌರವಧನ, ಮುಂತಾದ ಹೆಸರಿನಲ್ಲಿ ಇವರಿಗೆ ಸಿಗುತ್ತಿದ್ದ ಹಣಕಾಸುಗಳಿಗೆ ಕತ್ತರಿ ಹಾಕಲಾಗಿದೆ. ಹಾಗಾಗಿ ಕಾಡಿನಲ್ಲಿನ ಮಾವೋವಾದಿಗಳಿಗೆ ನಾಡಿನಲ್ಲಿ ಬೆಂಬಲ ಸೂಚಿಸಿ ಅವರ ಪರ ಘೋಷಣೆ ಕೂಗುವ, ಅವರ ಪರ ಅನುಕಂಪದ ಲೇಖನಗಳನ್ನು ಬರೆಯುವ, ಲದ್ಧಿ-ಜೀವಿಗಳ ಸ್ಲೀಪರ್ ಸೆಲ್ಲುಗಳ ಬಾಗಿಲು ಮುಚ್ಚಬೇಕಾದ ಪರಿಸ್ಥಿತಿ ಒದಗಿದೆ. ಕೇವಲ ಮೂರು ವರ್ಷಗಳಲ್ಲೇ ಗತಿಯಾದರೆ ಇನ್ನು ಮುಂದೆ ಹೇಗಪ್ಪಾ? ಎಂಬ ಭಯ ಅವರೆಲ್ಲರನ್ನೂ ಕಾಡ ಹತ್ತಿದೆ. ಹೀಗಾಗಿಯೇ ಅವಾರ್ಡ್ ವಾಪಸಿ ಯಂಥ ಚಳವಳಿಗಳು ನಡೆಯೋದು, ಜೆ.ಏನ್.ಯು. ಹಾಗು ಇತ್ತೀಚಿಗೆ ದೆಹಲಿಯ ರಾಂಝಾಸ್ ಕಾಲೇಜಿನಲ್ಲದಂಥ ಘಟನೆಗಳು ನಡೆಯೋದು. ಅಲ್ಲಿ ದೇಶದ್ರೋಹದ ಕೂಗು ಹಾಕಿ ಅಷ್ಟಾದರೂ ಮಾಡಿದೆವಲ್ಲ ಎಂಬ ಹುಸಿ ಸಂತೋಷ ಪಟ್ಟು ಅವರ ಅಹಂ ಅನ್ನು ಒಂದಷ್ಟು ತೃಪ್ತಿ ಪಡಿಸೋದು. ಹೀಗೆ ಕಾಡಿನ ಕೆಂಪು ಉಗ್ರರ ಮತ್ತವರ ನಾಡಿನೊಳಗಿನ ಮುಖಂಡರ ಬಾಯಿಯ ಪಸೆ ಆರಿದೆ.

ಮೋದಿಯವರು ಬಂದ ಬಳಿಕ ಇಂಥವರ ಏನ್.ಜಿ. ಗಳಿಗೆ ವಿದೇಶಿ ದೇಣಿಗೆ ಹರಿದು ಬರುವುದೂ ನಿಂತಿದೆ. ಹೀಗಾಗಿ ಅವರ ಬದುಕೇ ನರಕವಾಗಿದೆ. ಆದುದರಿಂದಲೇ ಅವರ ಹತಾಶೆಯ ಪ್ರತೀಕವಾಗಿ ಮೋಸದ ದಾಳಿ ನಡೆದಿದೆ. ಅದೂ ಕೂಡ ಎಂಥಾ ಸಂದರ್ಭದಲ್ಲಿ ಪೈಶಾಚಿಕ ದಾಳಿ ನಡೆಸಿದರೆಂದರೆ ಸುಕ್ಮಾದ ಬುರ್ಕಾಲ್ ಎಂಬಲ್ಲಿಂದ ಚಿಂತಾಗುಫಾ ಎಂಬಲ್ಲಿಗೆ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ರಸ್ತೆ ನಿರ್ಮಾಣ ಮಾಡುವ ಕಾರ್ಮಿಕರಿಗೆ ನಕ್ಸಲರಿಂದ ರಕ್ಷಣೆ ಕೊಡಲೆಂದೇ ಸಿ.ಆರ್.ಪಿ.ಎಫ್. ೭೪ನೇ ಬೆಟಾಲಿಯನ್ನಿನ ಎರಡು ಕಂಪೆನಿಗಳನ್ನು ನಿಯೋಜಿಸಲಾಗಿತ್ತು. ಯೋಧರ ಮೇಲೆ ಸುಮಾರು ಮುನ್ನೂರರಿಂದ ನಾಲ್ಕು ನೂರರಷ್ಟು ಮಾವೋ ಉಗ್ರರು ಮೋಸದಿಂದ ದಾಳಿ ನಡೆಸಿದರು. ಮಾತೆತ್ತಿದರೆ ತಾವು ಬಡ ಆದಿವಾಸಿಗಳ ಪರ, ಅವರನ್ನು ಶೋಷಿಸಿ ಅವರಿಗೆ ಸೌಲಭ್ಯಗಳನ್ನು ನೀಡದ ಸರಕಾರದ ವಿರುದ್ಧ ನಮ್ಮ ಹೋರಾಟ ಅಂತನ್ನುವ ಕೆಂಪು ಉಗ್ರರು, ಮತ್ತು ಇದನ್ನೇ ಗಿಣಿಯಂತೆ ಉಚ್ಚರಿಸುವ ನಮ್ಮ ನಾಡಿನ ಕೆಂಪು ಲಂಗೋಟಿಯ ಲದ್ಧಿ-ಜೀವಿಗಳಿಗೆ ನಾಚಿಕೆಯಾಗಬೇಕು. ಈಗ ರಸ್ತೆ ನಿರ್ಮಾಣದಂಥ, ವಿದ್ಯುದೀಕರಣದಂಥ ಅಭಿವೃದ್ಧಿ ಕಾರ್ಯಕ್ರಮಗಳಿಗೇ ಕೆಂಪು ಉಗ್ರರು ಅಡ್ಡಿಪಡಿಸುತ್ತಾರೆಂದರೆ ಅವರ ಆಷಾಢಭೂತಿತನ ಯಾವ ಮಟ್ಟಿನದು ಅಂತ ಒಮ್ಮೆ ಊಹಿಸಿ.

ದಾಳಿಯಲ್ಲಿ ನಮ್ಮ ೨೪ ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಆದರೆ ವೀರ ಯೋಧರು ತಮ್ಮ ಬಲಿದಾನದ ಮೊದಲು ದುಪ್ಪಟ್ಟಿಗಿಂತ ಹೆಚ್ಚಿನ ಸಂಖ್ಯೆಯ ಉಗ್ರರನ್ನೂ ಹೊಡೆದುರುಳಿಸಿದ್ದಾರೆ... ಆದರೆ ಅವರೆಷ್ಟು ಮಂದಿ ಸತ್ತರೆಂಬ ಲೆಕ್ಕ ಸಧ್ಯಕ್ಕೆ ಸಿಗಲಿಕ್ಕಿಲ್ಲ... ವಿಷಕಾರಿ ಕ್ರಿಮಿಗಳನ್ನು ದೇಶದ ಆರೋಗ್ಯದ ದೃಷ್ಟಿಯಿಂದ ಹೊಸಕಿ ಹಾಕಿದರೆ ಅದನ್ಯಾಕೆ ಲೆಕ್ಕ ಇಡಬೇಕು? ಅಲ್ಲವೇ? ಲೆಕ್ಕ ಇಡುವುದಿದ್ದರೆ ಅದಕ್ಕಾಗಿಯೇ ಅವರದೇ ರೋಗವಿರುವ ನಮ್ಮ ಹಲವಾರು 'ಮಾನವ ಹಕ್ಕು' ಸಂಘಟನೆಗಳಿವೆ. ಅವೇ ಹೋಗಿ ಸತ್ತ ಕ್ರಿಮಿಗಳೆಷ್ಟು ಅನ್ನೋದರ ಲೆಕ್ಕ ಹಾಕಿ ವರದಿ ಒಪ್ಪಿಸಿಯಾವು. ಕಾದು ನೋಡೋಣ...

ಮೋದೀಜಿಯವರ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮಾವೋವಾದಿಗಳಿಗೆ ಎಂಥಾ ದೊಡ್ಡ ಹೊಡೆತ ಬಿದ್ದಿತೆಂದರೆ, ಅವರೀಗ ಹೇಗಾದರೂ ಮಾಡಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕೆಂಬ ಕನಿಷ್ಠ ಅಜೇಂಡಾ ಹೊಂದಿದ್ದಾರೆ. ಕೇಂದ್ರ ಸರಕಾರದ ಗೃಹ ಇಲಾಖೆಯ ಅಂಕಿಅಂಶಗಳನ್ನು ಒಮ್ಮೆ ನೋಡಿದರೆ ನಿಮಗೆ ಮೋದೀಜಿ ಯವರ ಸರಕಾರ ಬಂದ ಮೇಲೆ ಯಾವ ರೀತಿ ನಕ್ಸಲರಿಗೆ ಮರ್ಮಾಘಾತವಾಗಿದೆ ಎಂಬುದು ತಿಳಿಯುತ್ತದೆ. ೨೦೦೨ ರಿಂದ ೨೦೧೬ ರವರೆಗಿನ ವಾರ್ಷಿಕ ಅಂಕಿ ಅಂಶಗಳ ಅವಗಾಹನೆ ಮಾಡಿ ನೋಡೋಣ. ೨೦೦೨ರಲ್ಲಿ ಕೆಂಪು ಉಗ್ರರ ಅಟ್ಟಹಾಸಕ್ಕೆ ಬಲಿಯಾದವರ ಸಂಖ್ಯೆ ೪೮೨. ಬಳಿಕ ವರ್ಷವೂ ಇದು ಏರಿಕೆಯಾಗುತ್ತಾ ಸಾಗಿ ಕ್ರಮವಾಗಿ ೫೧೫, ೫೫೬, ೭೧೭, ೭೩೭, ೬೫೦, ೬೪೮, ೯೯೭ ಹೀಗೆ ೨೦೦೯ನೇ ಇಸವಿಯ ವರೆಗೂ ಸಾಗುತ್ತದೆ. ಆದರೆ ೨೦೧೦ರ ವರ್ಷ ಮಾವೋವಾದಿಗಳ ಹಿಂಸೆಗೆ ಬಲಿಯಾದವರ ಸಂಖ್ಯೆ ೧೧೮೦. ಯುಪಿಎ ಅವಧಿಯಲ್ಲಿ ಮಾವೋ ಉಗ್ರರ ಹಿಂಸಾಚಾರಕ್ಕೆ ಅತ್ಯಂತ ಕಡಿಮೆ ಸಂಖ್ಯೆಯ ಜನ ಬಲಿಯಾದ ವರ್ಷವೆಂದರೆ ೨೦೧೨. ವರ್ಷ ೩೬೭ ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದರು. ಆದರೆ ೨೦೧೪ರಲ್ಲಿ ಆರಂಭದಲ್ಲಿ ಅಂದರೆ ಯು.ಪಿ. ಆಡಳಿತವಿದ್ದಾಗಲೇ ಸತ್ತವರ ಸಂಖ್ಯೆ ಹೆಚ್ಚಿತು. ಆದರು ವರ್ಷ ೩೧೪ ಮಂದಿ ಮಾವೋ ಭಯೋತ್ಪಾದನೆಗೆ ಬಲಿಯಾದರು ಅದು ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದಾಗ ಕಡಿಮೆಯಂತಲೇ ಹೇಳಬಹುದು. ಇನ್ನು ೨೦೧೫ ರಲ್ಲಿಆ ಸಂಖ್ಯೆ ತೀರಾ ಇಳಿದು ೨೫೧ ಮಂದಿ ಪ್ರಾಣಕಳಕೊಂಡಿದ್ದರು. ೨೦೧೬ ಅಂದರೆ ಕಳೆದ ವರ್ಷ ಸಂಖ್ಯೆ ಮತ್ತಷ್ಟು ಇಳಿದು ಕೇವಲ ೧೬೧ ಕ್ಕೆ ತಲುಪಿತು.

ಅಂದಹಾಗೆ ಅಂಕಿಸಂಖ್ಯೆಯಲ್ಲಿ ಮೃತಪಟ್ಟ ಕೆಂಪು ಉಗ್ರರ ಸಂಖ್ಯೆಯೂ ಸೇರಿದೆ. ಮೃತ ಉಗ್ರರ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡಾಗ ಮಾತ್ರ ಮೋದೀಜಿಯವರ ಸರಕಾರ ಹೇಗೆ ಮಾವೋವಾದಿಗಳಿಗೆ ಮಾರಣಾಂತಿಕ ಏಟು ಕೊಟ್ಟಿತು ಅನ್ನೋದು ಮನದಟ್ಟಾಗುತ್ತದೆ. ಪೊಲೀಸರ ಗುಂಡೇಟು ತಿಂದು ಸಾಯುವ ನಕ್ಸಲರ ಸಂಖ್ಯೆ ಮೋದೀಜಿ ಬಂದ ಮೇಲೆ ಹೆಚ್ಚಾಗಿದೆ. ಜೊತೆಗೆ ನಗರಗಳಲ್ಲಿ ಕಾಡಿನ ನಕ್ಸಲ ಪರವಾಗಿ ಮಾತಾಡುತ್ತಾ ಅಡ್ಡಾಡುತ್ತಿದ್ದ ಎಡಚ ಲದ್ಧಿ-ಜೀವಿಗಳಿಗೆ ಗಂಜಿ ಪೂರೈಕೆ ನಿಂತು ಹೋಗಿ ಗಂಟಲು ಇತ್ಯಾದಿಗಳ ಪಸೆ ಆರಿಹೋಗಿದೆ. ಹಾಗಾಗಿಯೇ ಹತಾಶರಾಗಿ ಇಂಥಾ ದಾಳಿಗಳನ್ನು ಮಾಡುತ್ತಾರೆ. ಆದರೆ ಬಾರಿ ಹಿಂದಿನಂತಲ್ಲ... ಮೋದೀಜಿ ಅಧಿಕಾರಕ್ಕೆ ಬಂದ ಮೇಲೆ ... ರಾಜನಾಥರೆಂಬ ಉಕ್ಕಿನ ಮನುಷ್ಯ ಗೃಹಸಚಿವನಾಗಿರುವಾಗ ಪ್ರತೀಕಾರ ಗ್ಯಾರಂಟಿ...! ವರ್ಷ ಮಾವೋವ್ಯಾಧಿಗಳ ಅತಿಹೆಚ್ಚು ವಿಕೆಟ್ ಉರುಳಲಿದೆ. ಕಾದು ನೋಡಿ...!

Related posts