Infinite Thoughts

Thoughts beyond imagination

ಪಕ್ಷಕ್ಕೆ ಹೊಸದಾಗಿ ಬರುವಾಗ ಯಾರದ್ದೋ ಬಾಲಂಗೋಚಿಗಳಾಗಿ ಅಥವಾ ಹಿಂಬಾಲಕರಾಗಿ ಬರಬೇಡಿ

ಇಂದು ಶಿರಸಿಯ ರೋಟರಿ ಸಭಾಂಗಣದಲ್ಲಿ ಭಾಜಪ ಯುವ ಮೋರ್ಚಾ ಘಟಕ ಹಮ್ಮಿಕೊಂಡಿದ್ದ ಯುವ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಬಹು ಸಂಖ್ಯೆಯಲ್ಲಿ ಯುವಕರು ಇಂದು ಭಾಜಪ ಪಕ್ಷಕ್ಕೆ ಸೇರ್ಪಡೆ ಗೊಂಡರು. ಮಾನ್ಯ ಪ್ರಧಾನಿ ಮೋದಿಯವರ ಕಾರ್ಯ ವೈಖರಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಅಮಿತ್ ಷಾ ರವರ ಧಣಿವರಿಯದ ಪಕ್ಷ ಸಂಘಟನೆಯಿಂದ ಸ್ಪೂರ್ತಿಗೊಂಡ ಯುವ ಪಡೆಯ ಉತ್ಸಾಹ ಮೇರೆ ಮೀರಿತ್ತು. ಸ್ವಾಭಾವಿಕವಾಗಿ ಅವರು ಪಕ್ಷಕ್ಕೆ ಸೇರ್ಪಡೆಗೊಳ್ಳಲು ಮನಸ್ಸು ಮಾಡಿದ್ದರು. ಹಾಗಾಗಿ ಸಂದರ್ಭದಲ್ಲಿ ಅವರೊಂದಿಗೆ ನನ್ನ ಕೆಲವೊಂದು ಅನುಭವಗಳ ನುಡಿಯನ್ನು ಹಂಚಿಕೊಳ್ಳಬೇಕಾಯಿತು.

"ಪಕ್ಷಕ್ಕೆ ಹೊಸದಾಗಿ ಬರುವಾಗ ಯಾರದ್ದೋ ಬಾಲಂಗೋಚಿಗಳಾಗಿ ಅಥವಾ ಹಿಂಬಾಲಕರಾಗಿ ಬರಬೇಡಿ. ಬದಲಾಗಿ ತತ್ವ-ಸಿದ್ಧಾಂತವನ್ನು ನಂಬಿಕೊಂಡು ಬನ್ನಿ. ನಂಬಿಕೆಯ ದಾರಿಯು ದುರ್ಗಮವಾದರೂ, ಕೊನೆಯಲ್ಲಿ ಜಯ ಹಾಗು ಯಶಸ್ಸು ನಿಮ್ಮದಾಗುತ್ತದೆ" ಎಂಬ ಹಿತ ನುಡಿಯನ್ನು ತಿಳಿಸಿದೆ.

ಎಲ್ಲರಿಗೂ ಆಶ್ಚರ್ಯವಾಗುವ ಹಾಗೆ ಸದ್ಯದಲ್ಲೇ ಜಿಲ್ಲೆಯ ಪ್ರಮುಖ ನಾಯಕರುಗಳು ಭಾಜಪ ಸೇರುವವರಿದ್ದಾರೆ. ಜನಮಾನಸದಲ್ಲಿ ಮೋದಿಯವರ ಚಿತ್ರಣ ಸಕಾರಾತ್ಮಕವಾಗಿ ರೂಪಗೊಂಡು ಅದಕ್ಕೆ ಪೂರಕವಾಗಿ ಜನಬೆಂಬಲ ದಿನ-ದಿನಕ್ಕೂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದು ಸುನಾಮಿ ಸ್ವರೂಪವಾಗಿ ಮಾರ್ಪಾಡುಗೊಂಡು, ನಮ್ಮ ಸಿದ್ಧಣ್ಣನ ಸರ್ಕಾರ ಆಪೋಶನ ತೆಗೆದು ಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

ದೇಶದ ಸ್ವಾಭಿಮಾನಕ್ಕೆ ಧ್ವನಿಯನ್ನು ಕೊಟ್ಟಿರುವ ನಾಯಕತ್ವ ಮೋದಿಯವರದ್ದಾಗಿದೆ. ಅದಕ್ಕಾಗಿ ಇಂದು ಹೆಚ್ಚಿನ ಜನರು ಅವರನ್ನು ಒಪ್ಪಿಕೊಂಡಿದ್ದಾರೆ. ರಾಜಕಾರಣದ ಕುರಿತಾಗಿ ಭರವಸೆಯ ಬೆಳಕನ್ನು ಕೊಟ್ಟಿರುವುದು ಮೋದಿಯ ನಾಯಕತ್ವವಾಗಿದೆ. ಪಾರದರ್ಶಕತೆ, ಸರಳತೆ ಮತ್ತು ಸ್ವಾಭಿಮಾನಿ ರಾಜಕಾರಣ ಇಂದಿನ ಹೊಸ ಯುವಕರಿಗೆ ಬೇಕಾಗಿದೆ. ದೇಶ, ಧರ್ಮ ಹಾಗು ಸಮಾಜಕ್ಕೋಸ್ಕರ ರಾಜಕೀಯ ಮಾಡುವುದನ್ನು ಭಾಜಪ ಕಲಿಸುತ್ತಿದೆ. ವಾತಾವರಣ ಬದಲಾಗುವುದರ ಹಿನ್ನಲೆಯಲ್ಲಿ ನಮ್ಮ ನಡುವಳಿಕೆ ಮತ್ತು ನಿಲುವು ಸಹ ಬದಲಾಗಬೇಕಾದ್ದು ಅನಿವಾರ್ಯ.

ಮೊದಲ ಹೆಜ್ಜೆ ಹುಸಿಯಾಗದ ಹಾಗೇ ದೃಢವಾಗಿ ಇಡಬೇಕು. ರಾಜಕಾರಣ ಕೇವಲ ಗುರಿಯಾಗಬಾರದು. ಜಗತ್ತಿನ ಎಲ್ಲ ನಾಗರಿಕತೆಗಳ ತೊಟ್ಟಿಲು ನಮ್ಮ ಭಾರತ. ಧರ್ಮ ಮತ್ತೊಬ್ಬನನ್ನು ಕೊಲ್ಲುವುದಿಲ್ಲ, ಬದಲಾಗಿ ಬದುಕಿಸುತ್ತದೆ. ವ್ಯಕ್ತಿಯನ್ನು ಬದಿಗೆ ಸರಿಸುತ್ತದೆ ಎಂದರೆ ಅದು ಖಂಡಿತವಾಗಿಯೂ ಧರ್ಮವಾಗಲಾರದು. ಅದು ಕೇವಲ ಸಂಪ್ರದಾಯ, ಮತವಾಗಿದೆ ಎಂದೇ ಅರ್ಥ. ಜಗತ್ತಿಗೆ ಶೂನ್ಯದ ಗುರುತನ್ನು ನೀಡಿದ್ದು ಭಾರತವಾಗಿದೆ. ಏನೂ ಇಲ್ಲದಿದ್ದಿದ್ದು ಶೂನ್ಯವಲ್ಲ. ಬದಲಾಗಿ ಎಲ್ಲವನ್ನೂ ಒಳಗೊಂಡಿದ್ದು ಶೂನ್ಯವಾಗಿದೆ. ಅದು ಸಮಷ್ಟಿಯ ರೂಪವಾಗಿದೆ. ನಮ್ಮ ಭಾರತೀಯತೆಯ ಹಿಂದಿನ ವೈಜ್ಞಾನಿಕ ವಿಚಾರಗಳ ಅರ್ಥ ಗೊತ್ತಿಲ್ಲದ ಬುದ್ಧಿಜೀವಿಗಳು ಇಂದು ಅರಚಾಡುತ್ತಾರೆ. ನಮ್ಮ ಅದ್ಧೂರಿ ಹಿನ್ನಲೆಯನ್ನು ಯುವಕರು ಅರ್ಥ ಮಾಡಿಕೊಂಡರೆ ಅವರಿಗೆ ಮುಂದಿನ ದಾರಿ ತಾನೇ ತಾನಾಗಿ ಗೋಚರಿಸುತ್ತದೆ.

ಉತ್ತರ ಪ್ರದೇಶದ ಸುನಾಮಿಗಿಂತ ಕರ್ನಾಟಕದಲ್ಲಿ ಬರುವುದು ಬಹುದೊಡ್ಡದಿದೆ. ಅದು ಭಾಜಪಾದ ಪರವಾಗಿ ಬರಲಿದೆ. ಆಂತರಿಕ ಪ್ರಜಾಪ್ರಭುತ್ವ ಇರುವುದರಲ್ಲಿ ಚರ್ಚೆಗಳು ಸಾಮಾನ್ಯ. ಸರ್ವಾಧಿಕಾರ ಇರುವಲ್ಲಿ ಇದ್ಯಾವುದಕ್ಕೂ ಅವಕಾಶವಿಲ್ಲ. ಜಿಲ್ಲೆಯಲ್ಲಿ ಬಿರುಕು ಬಿಟ್ಟಿರುವ ಕಾಂಗ್ರೆಸ್ ಡ್ಯಾಮ್ ಒಡೆಯಲಿದೆ. ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಅಲ್ಲಿ ಗೌರವ ಇಲ್ಲ ಜೊತೆಯಲ್ಲಿ ಅಸ್ತಿತ್ವನೇ ಇಲ್ಲ. ಕಾಂಗ್ರೆಸ್, ಜನತಾದಳದ ಯಾರೇ ಬಂದರೂ ಜೀರ್ಣಗೊಳಿಸಿಕೊಳ್ಳುವ ತಾಕತ್ತು ನಮಗಿದೆ. ಹಾಗಾಗಿ ಪಕ್ಷಕ್ಕೆ ಯಾರೇ ಬಂದರೂ ಅವರನ್ನು ಸ್ವಾಗತಿಸುತ್ತೇವೆ. ಆದರೆ ಅದಕ್ಕೂ ಒಂದು ಇತಿ-ಮಿತಿ ಎಂಬ ಗಡಿ-ರೇಖೆ ಇದ್ದೆ ಇರುತ್ತದೆ.

ಮತ್ತೆ ಇಂದಿನ ಬರಗಾಲದ ಹಿನ್ನಲೆಯಲ್ಲಿ ನೀರಿನ ಇಂಗುವಿಕೆ, ರೋಗಪೀಡಿತ ಜಾನುವಾರಗಳ ರಕ್ಷಣೆಯಲ್ಲಿ ನಮ್ಮ ಯುವ ಕಾರ್ಯಕರ್ತರು ಹೆಜ್ಜೆಯನ್ನು ಇಟ್ಟು ಸಂಪೂರ್ಣವಾಗಿ ತಮ್ಮನ್ನು ತೊಡಗಿಸಕೊಳ್ಳಬೇಕಂತ ವಿನಂತಿಸುತ್ತೇನೆ.

ಕಾರ್ಯಕ್ರಮಕ್ಕೆ ಮುನ್ನ ಸುಮಾರು ೧೦೦ಕ್ಕೂ ಅಧಿಕ ನೂತನ ಕಾರ್ಯಕರ್ತರು ಪಟ್ಟಣದ ಮಾರಿಕಾಂಬಾ ದೇವಾಲಯದಿಂದ ಬೈಕ್ ರ್ಯಾಲಿಯಲ್ಲಿ ನಮ್ಮ ಶಾಶಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಯವರೊಂದಿಗೆ ಸಭಾಂಗಣಕ್ಕೆ ಆಗಮಿಸಿದರು. ಮತ್ತು ಅವರೆಲ್ಲರನ್ನು ಶಾಲು ಹೊದಿಸಿ ಸೇರ್ಪಡೆಗೊಳಿಸಲಾಯಿತು. ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಮಂಜುನಾಥ ಜನ್ನು, ಯುವಮೋರ್ಚ ಜಿಲ್ಲಾ ಉಪಾಧ್ಯಕ್ಷ ಯೋಗೇಶ ಪಾಟೀಲ್, ಯುವ ಮೋರ್ಚಾದ ನಗರಾಧ್ಯಕ್ಷ ವಿಶಾಲ್ ಮರಾಠೆ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ರವೀಶ್ ಹೆಗಡೆ, ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರುಪ್ರಸಾದ್ ಹೆಗಡೆ, ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ, ಗ್ರಾಮೀಣ ಘಟಕದ ಅಧ್ಯಕ್ಷ ಪ್ರಸನ್ನ ಹೆಗಡೆ ಇಸಳೂರು ಉಪಸ್ಥಿತರಿದ್ದರು.

Related posts