ತಿಪ್ಪೆ-ಸುಲ್ತಾನ್ ಮಸೀದಿಯ ಮುಲ್ಲಾ ನಿಗೆ ಕೆಂಪು ದೀಪದ ಕಾರು !
ತಿಪ್ಪೆ-ಸುಲ್ತಾನ್ ಮಸೀದಿಯ ಮುಲ್ಲಾ ನಿಗೆ ಕೆಂಪು ದೀಪದ ಕಾರು !
ಮುಮ್ತಾಜ್ ನ ಸಖ ಶಾಹೀ ಇಮಾಮನ ಕಾರುಬಾರು!
ಮಮತಾ ಬ್ಯಾನರ್ಜಿಯನ್ನು ಬಂಗಾಳಿಗಳು ಇತ್ತಿತ್ಲಾಗೆ 'ಮುಮ್ತಾಜ್ ಬೇಗಮ್' ಅಂತಾನೆ ಕರೆಯತೊಡಗಿದ್ದಾರೆ. ಅವರ ಹಿಂದೆ ಮುಂದೆ ಮೇಲೆ ಕೆಳಗೆ ಇರೋರೆಲ್ಲಾ ಮುಸ್ಲಿಮರೇ.... ಹಾಗಾಗಿ ಮಮತಾ ಕೂಡಾ ಪಕ್ಕನೆ ಮುಸ್ಲಿಂ ಹೆಂಗಸಿನ ತರಹಾನೇ ಕಾಣಿಸುತ್ತಾರೆ . . ಅಷ್ಟೇ ಅಲ್ಲ, ಥೇಟು ಅವರಂತೆಯೇ ಸಾರ್ವಜನಿಕವಾಗಿಯೇ ನಮಾಜು ಕೂಡಾ ಮಾಡುತ್ತಾರೆ. ಮಮತಾ ತನ್ನ ಸ್ನಾತಕೋತ್ತರ ಪದವಿ ಪಡೆಯಲು ಆರಿಸಿಕೊಂಡ ವಿಷಯ "ಇಸ್ಲಾಮಿಕ್ ಇತಿಹಾಸ". ಹೀಗೆ ಇತಿಹಾಸದ ಅರಿವಿರುವ ಮಮತಾ ಬಂಗಾಳದಲ್ಲಿ ಮೂವತ್ತು ಪರ್ಸೆಂಟ್ ನಷ್ಟಿರುವ ಮುಸ್ಲಿಮರ ಮತ ಪಡೆಯಲು ಏನು ಬೇಕಾದರೂ ಮಾಡಲು ಹೇಸುವುದಿಲ್ಲ. ಮಮತಾ ರಾಜ್ಯಭಾರದಲ್ಲಿ ಅಲ್ಲಿನ ಹಿಂದೂಗಳಿಗೆ ಉಳಿಗಾಲವಿಲ್ಲ ಎನ್ನುವಂಥ ಪರಿಸ್ಥಿತಿಯಿದೆ. ಅಲ್ಲೀಗ ಮಮತಾ ಬಲಗೈ ಬಂಟ, ಆತ್ಮೀಯ ಸಖ, ಕೋಲ್ಕತ್ತಾದ ಟಿಪ್ಪುಸುಲ್ತಾನ್ ಮಸೀದಿಯ ಶಾಹಿ ಇಮಾಮ್ ನೂರೂರ್ ರೆಹ್ಮಾನ್ ಬರ್ಕತಿ ಯದೇ ಕಾರುಬಾರು. ಮಮತಾ ಮುಖ್ಯಮಂತ್ರಿಯಾದಾಗಿನಿಂದ ಬಂಗಾಳದಲ್ಲಿ ಅಸಂಖ್ಯ ಕೋಮುಗಲಭೆಗಳು ನಡೆದಿದೆ. ಕ್ಯಾನ್ನಿಂಗ್, ದೇಗಾಂಗ, ಉಷ್ಟಿ ಮಾಲ್ಡಾ, ದುಲ್ಹಾಘರ್ ಮುಂತಾದ ಕಡೆ ನಡೆದ ಗಲಭೆಗಳು ಸಂಪೂರ್ಣ ಪೂರ್ವಯೋಜಿತವಾಗಿದ್ದು, ಅದಕ್ಕೆಲ್ಲಾ ಮಮತಾ ದೀದಿಯ ತೆರೆಮರೆಯ ಸಹಕಾರವೂ ಇತ್ತು. ಮೊಹರ್ರಮ್ ಗೋಸ್ಕರ ದುರ್ಗಾ ಪೂಜೆಯ ಮೆರವಣಿಗೆಯನ್ನೇ ರದ್ದು ಮಾಡಿದ ಮಮತಾ ನಿರ್ಣಯದ ಹಿಂದೆ ಇದ್ದದ್ದು ಇದೆ ಶಾಹಿ ಇಮಾಮ!
ನರೇಂದ್ರ ಮೋದೀಜಿ ನೋಟು ರದ್ದು ಮಾಡಿದಾಗ ಅತಿ ಹೆಚ್ಚು ಉರಿದದ್ದು ಮಮತಾಗೇ. ಆಗ ಆಕೆಯ ಸಖ ಇಮಾಮ್ ನೂರೂರ್ ರೆಹ್ಮಾನ್ ಬರ್ಕತಿ ಮಮತಾ ಬೆಂಬಲಕ್ಕೆ ನಿಂತ. ಕೊಲ್ಕತ್ತಾ ಪ್ರೆಸ್ ಕ್ಲಬ್ ನಲ್ಲೆ ಪತ್ರಿಕಾ ಗೋಷ್ಠಿ ಕರೆದು ದೇಶದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೇ 'ಫತ್ವಾ' ಹೊರಡಿಸಿದ... ಮೋದಿಯವರ ಗಡ್ಡ ತಲೆಗೂದಲು ಬೋಳಿಸಿ ಅವರ ಮುಖಕ್ಕೆ ಮಸಿ ಬಳಿದವರಿಗೆ ಇಪ್ಪತ್ತೈದು ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಘೋಷಿಸಿದ!. ಮಮತಾ ತೆರೆಯ ಹಿಂದೆ ಗಹಗಹಿಸಿ ನಕ್ಕರು. ಪ್ರಧಾನ ಮಂತ್ರಿ ವಿರುದ್ಧವೇ ಇಂಥ ಫತ್ವಾ ಹೊರಡಿಸಿದರೂ ಇಮಾಮನ ಕೂದಲೂ ಕೊಂಕದಂತೆ ಮುಮ್ತಾಜ್ ಬೆನ್ನಿಗಿದ್ದು ಕಾಪಾಡಿದರು. ಹಿಂದೆ ಲೇಖಕಿ ತಸ್ಲೀಮಾ ನಸ್ರೀನ್ ಳನ್ನು ಕೊಲ್ಕತ್ತಾದಿಂದ ಓಡಿಸಿದ್ದೂ ಇದೆ ಶಾಹಿ ಇಮಾಮ.
ಪಾಕಿಸ್ತಾನದಲ್ಲಿ ಇಲಿಯಂತೆ ಅಡಗಿದ್ದ ಒಸಾಮಾ ಬಿನ್ ಲಾಡೆನ್ ನನ್ನು ಅಮೇರಿಕದ ಸೈನಿಕರು ನಾಯಿಯಂತೆ ಹೊಡೆದು ಹಾಕಿದಾಗ, ಇಡೀ ಜಗತ್ತು ಖುಷಿ ಪಟ್ಟರೆ... ಈ ಶಾಹಿ ಇಮಾಮ್ ನೂರೂರ್ ರೆಹ್ಮಾನ್ ಬರ್ಕತಿ ಮಾತ್ರ ತನ್ನ ಸಂಬಂಧಿಕನೇ ಸತ್ತ ಎಂಬ ರೀತಿಯಲ್ಲಿ ರೋಧಿಸಿದ. ಅಷ್ಟೇ ಅಲ್ಲ ತಿಪ್ಪೆ-ಸುಲ್ತಾನ್ ಮಸೀದಿಯಲ್ಲಿ ಒಸಾಮಾನ ಸದ್ಗತಿಗಾಗಿ 'ನಮಾಜ್ ಎ ಜಾನೇಜಾ' ಪ್ರಾರ್ಥನೆ ಮಾಡಿದ.... ಅದಕ್ಕೆ ಐದು ಸಾವಿರ ಮುಸ್ಲಿಮರು ಸೇರಿದ್ದರು... ಯಾಕೂಬ್ ಮೆಮನ್ ನನ್ನ ಗಲ್ಲಿಗೇರಿಸಿದಾಗಲೂ ಈ ಇಮಾಮ ಜನ ಸೇರಿಸಿ ಪ್ರತಿಭಟನೆ ನಡೆಸಿದ್ದ...ಇತ್ತೀಚಿಗೆ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ, ಲೇಖಕ ತಾರೇಖ್ ಫತಾ ನನ್ನ ಕತ್ತು ಕತ್ತರಿಸಿ ಕೊಲೆಮಾಡುವ ಬೆದರಿಕೆಯನ್ನೂ ಎಲ್ಲರೆದುರಿಗೆ ಟಿವಿ ಚರ್ಚಾ ಗೋಷ್ಠಿಯಲ್ಲೇ ಒಡ್ಡಿದ್ದ. ತನ್ನ ಅಧೀನದಲ್ಲಿ ಎಪ್ಪತ್ತು ಸಾವಿರ ಮಸೀದಿಗಳಿದ್ದು, ತಾನು ಬಹಿರಂಗವಾಗಿಯೇ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸುತ್ತೇನೆ ಮತ್ತು ಮುಸ್ಲಿಮರ ಓಟನ್ನು ಅಕೆಗೇ ಕೊಡಿಸುತ್ತೇನೆ; ಅಂತ ಹೇಳುವ ನೂರೂರ್ ರೆಹ್ಮಾನ್ ಬರ್ಕತಿ ಬಂಗಾಳದಲ್ಲಿ ಅನಭಿಷಿಕ್ತ ಗೂಂಡಾ ದಾದಾನಂತೆ ವರ್ತಿಸುತ್ತಿದ್ದಾನೆ.
ಮೊನ್ನೆ ಮೊನ್ನೆ ಏಪ್ರಿಲ್ ಹತ್ತೊಂಬತ್ತನೇ ತಾರೀಕು ದೇಶದಲ್ಲಿ ಕೆಂಪುದೀಪವನ್ನು ವಾಹನದಲ್ಲಿ ಅಳವಡಿಸುವ ಬ್ರಿಟಿಷರ ಕಾಲದ ಅನಿಷ್ಟ ಪದ್ದತಿಯನ್ನು ತೊಡೆದು ಹಾಕಲು ಮೋದೀಜಿಯವರು ಕೆಂಪು ದೀಪದ ಉಪಯೋಗದ ಮೇಲೆಯೇ ನಿಷೇಧ ಹೇರಿದರು. ಆದರೆ ಇನ್ನೂ ನಮ್ಮ ಹಲವಾರು ಜನ ಮಂತ್ರಿಗಳಿಗೆ ಕೆಂಪು ದೀಪದ ವ್ಯಾಮೋಹ ಕಡಿಮೆಯಾಗಿಲ್ಲ. ಆದರೆ ಬಂಗಾಳದಲ್ಲಿನ ಕಥೆಯೇ ಬೇರೆ. ಯಾವುದೇ ಸಾಂವಿಧಾನಿಕ ಹುದ್ದೆಯಿಲ್ಲದಿದ್ದರೂ ಕೂಡ ಯಾವುದೋ ಪುಡಪೋಷಿ ತಿಪ್ಪೆ-ಸುಲ್ತಾನ್ ಮಸೀದಿಯ ಶಾಹಿ ಇಮಾಮ್ ನೂರೂರ್ ರೆಹ್ಮಾನ್ ಬರ್ಕತಿಯ ಕಾರಿನಲ್ಲಿ ಕೆಂಪುದೀಪ ಮಿನುಗುತ್ತಿದೆ!
ಈ ಬಗ್ಗೆ ಖುದ್ದು ಬರ್ಕತಿಯಲ್ಲೇ ವಿಚಾರಿಸಿದಾಗ, ತನಗೆ ಈ ಹಕ್ಕನ್ನು ಬ್ರಿಟಿಷರೇ ನೀಡಿದ್ದರು ಅಂತ ರೈಲು ಹತ್ತಿಸುತ್ತಾನೆ. ಅಷ್ಟೇ ಅಲ್ಲ ಮುಖ್ಯ ಮಂತ್ರಿ ಮುಮ್ತಾಜ್ ತನಗೆ ಅವಕಾಶ ನೀಡಿದ್ದು ಅವರ ಸೆಕ್ಯುಲರ್ ಸಿದ್ಧಾಂತಕ್ಕೆ ಇದೆ ಸಾಕ್ಷಿ ಅಂತ ಬಡಬಡಿಸುತ್ತಾನೆ. ಹಿಂದೊಮ್ಮೆ ಕೊಲ್ಕತ್ತಾ ಹೈಕೋರ್ಟ್ ನಲ್ಲಿ ಬರ್ಕತಿ ಕೆಂಪುದೀಪದ ಕಾರು ಉಪಯೋಗಿಸುವುದರ ವಿರುದ್ಧ ದೂರು ಸಲ್ಲಿಕೆಯಾಗಿತ್ತು. ಆದರೆ ನ್ಯಾಯಾಲಯ ಬರ್ಕತಿ ಕೆಂಪು ದೀಪದ ಕಾರು ಉಪಯೋಗಿಸುವುದು ತಪ್ಪು, ಪೊಲೀಸರು ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅಂತ ಆಜ್ಞೆ ಮಾಡಿತು. ಆದರೆ ಈ ಪ್ರಕರಣ ನಡೆದು ವರ್ಷಗಳೇ ಕಳೆದರೂ ಈ ಮಮತಾ ಸಖ ಇಮಾಮ ಮಾತ್ರ ಈಗಲು ಅದೇ ಕೆಂಪು ದೀಪದ ಕಾರಿನಲ್ಲೇ (ಡಬ್ಲ್ಯೂ. ಬಿ. ಓ. ಎಸ್ . ಜೆ. ೧೯೭೭) ಓಡಾಡುತ್ತಿದ್ದಾನೆ.
ಎಲ್ಲಿಯವರೆಗೆ ಕಾನೂನು ರಾಜ್ಯದ ಜವಾಬ್ದಾರಿಯಾಗಿರುತ್ತದೋ, ಎಲ್ಲಿಯವರೆಗೆ ಪ್ರಬುದ್ಧ ರಾಜಕಾರಣ ಮರೀಚಿಕೆ ಯಾಗಿರುತ್ತದೋ, ಅಲ್ಲಿಯವೆರೆಗೆ ಇಂತಹ ದರಿದ್ರ ಹಾಗು ಅನಿಷ್ಟ ಕ್ರೂರ ಕೋಡಂಗಿಗಳನ್ನು ಸಹಿಸಿಕೊಳ್ಳುವುದು ಅನಿವಾರ್ಯ. ವಿಪರ್ಯಾಸವೆಂದರೆ ದೇಶದಲ್ಲೇ ಅತ್ಯಂತ ಬುದ್ಧಿವಂತರೆನಿಸಿಕೊಂಡಂಥ ಬಂಗಾಳಿಗಳು ಇದನ್ನು ಹೇಗೆ ಜೀರ್ಣಿಸಿಕೊಳ್ಳುತ್ತಾರೆ ಎನ್ನುವುದು ಆಶ್ಚರ್ಯ್ಯ!