Infinite Thoughts

Thoughts beyond imagination

ಭಾರತದ ಪರ ವಾದಿಸಲು ಪಾಕಿಸ್ತಾನದ ವಕೀಲನನ್ನು ನೇಮಿಸಿದ ಕಾಂಗ್ರೆಸ್

ಭಾರತದ ಪರ ವಾದಿಸಲು ಪಾಕಿಸ್ತಾನದ ವಕೀಲನನ್ನು ನೇಮಿಸಿದ ಕಾಂಗ್ರೆಸ್ | ಇದು ಮೂರು ಸಾವಿರ ಕೋಟಿ ರೂಪಾಯಿ ಹಗರಣ

ಮೊನ್ನೆ ಕುಲಭೂಷಣ್ ಜಾಧವ್ ಕೇಸಿನಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಪರ ದೇಶದ ಖ್ಯಾತ ವಕೀಲ ಹರೀಶ್ ಸಾಳ್ವೆ ವಾದಿಸಿ ಗೆದ್ದರೆ, ಪಾಕಿಸ್ತಾನದ ಪರ ವಾದಿಸಿ ಸೋತದ್ದು ಇಂಗ್ಲೆಂಡ್ ನಲ್ಲಿ ನೆಲೆಸಿರುವ ಪಾಕಿಸ್ತಾನ ಮೂಲದ ವಕೀಲ ಖವಾರ್ ಖುರೇಷಿ. ಮೊನ್ನೆ ಹರೀಶ್ ಸಾಳ್ವೆ ಎದುರು ಸೋತ ಖುರೇಷಿಯನ್ನು ಭಾರತದ ಮಾಧ್ಯಮಗಳು ಲೇವಡಿ ಮಾಡಿದ್ದವು. ಆದರೆ ಇದೇ ಖವಾರ್ ಖುರೇಷಿ ಒಂದು ಮಹತ್ವದ ಅಂತಾರಾಷ್ಟ್ರೀಯ ಮೊಕದ್ದಮೆಯೊಂದರಲ್ಲಿ ಭಾರತದ ಪರವೇ ವಾದಿಸಲು ನೇಮಕಗೊಂಡಿದ್ದ! ಹಾಗೂ ಅತಿಮುಖ್ಯ ಕೇಸಿನಲ್ಲಿ ಸೋತು ಭಾರತಕ್ಕೆ ಮೂರುಸಾವಿರ ಕೋಟಿ ರೊಪಾಯಿಗೂ ಹೆಚ್ಚು ನಷ್ಟವಾಗಲು ಕಾರಣವಾಗಿದ್ದ. ೨೦೦೪ರಲ್ಲಿ ಈತನನ್ನು ಭಾರತದ ಪರ ವಾದಮಾಡಲು ನೇಮಿಸಿದ್ದು ಸೋನಿಯ-ಮನಮೋಹನ್ ನೇತೃತ್ವದ ಕಾಂಗ್ರೆಸ್ ಯು.ಪಿ. - ಸರಕಾರ. ಆಶ್ಚರ್ಯವೆಂದರೆ ಭಾರತದ ಪರ ತುಂಬಾ ಚೆನ್ನಾಗಿ ವಾದ ಮಂಡಿಸಿ ಕೇಸು ಗೆಲ್ಲುವ ಹಂತದಲ್ಲಿದ್ದ ವಕೀಲ ಹರೀಶ್ ಸಾಳ್ವೆಯವರನ್ನೇ ಉಚ್ಚಾಟಿಸಿ ಅವರ ಜಾಗದಲ್ಲಿ ಪಾಕಿಸ್ತಾನದ ಖವಾರ್ ಖುರೇಷಿಯನ್ನು ಕಾಂಗ್ರೆಸ್ ಸರಕಾರ ನೇಮಿಸಿತ್ತು. ಅಂತಹದರಲ್ಲೂ ಆಗ ಖವಾರ್ ಖುರೇಷಿ ಕೇಸನ್ನು ಸೋತಿದ್ದರು. ಕೇಸು ಗೆದ್ದುಕೊಡಬಹುದಾಗಿದ್ದ ನಮ್ಮದೇ ದೇಶದ ಹರೀಶ್ ಸಾಲ್ವೆಯವರನ್ನು ಬದಲಿಸಿ ಪಾಕಿಸ್ತಾನದ ಖವಾರ್ ಖುರೇಷಿಯನ್ನು ನೇಮಿಸಿದ್ದರ ಹಿಂದೆ ಬಹುದೊಡ್ಡ ಷಡ್ಯಂತ್ರ ಒಂದಿತ್ತು. ಇದರ ಹಿಂದೆ ಸೋನಿಯ-ಮನಮೋಹನ್ ಅಲ್ಲದೆ ಅಂದಿನ ಘಟಾನುಘಟಿ ಮಂತ್ರಿಗಳಾಗಿದ್ದ ಚಿದಂಬರಂ, ಸಲ್ಮಾನ್ ಖುರ್ಷಿದ್, ಮಣಿಶಂಕರ್ ಐಯ್ಯರ್, ಶರದ್ ಪವಾರ್ ಮುಂತಾದವರ ನೇರ ಕೈವಾಡವಿತ್ತು. ಯಾಕಂದರೆ ಮಹತ್ವದ ಪ್ರಕರಣದಲ್ಲಿ ಪ್ರಪಂಚದ ಬಹುದೊಡ್ಡ ಕಾರ್ಪೊರೇಟ್ ಉದ್ಯಮಗಳು ಒಳಗೊಂಡಿದ್ದವು.

ಇದೆಲ್ಲಾ ಷಡ್ಯಂತ್ರದ ಬಗ್ಗೆ ತಿಳಿಯಬೇಕಾದರೆ ೧೯೯೦ ದಶಕದಲ್ಲಿ ಮಹಾರಾಷ್ಟ್ರ ಸರಕಾರ ಅಮೆರಿಕಾದ ಬೃಹತ್ ವಿದ್ಯುತ್ ಉತ್ಪಾದನಾ ಕಂಪೆನಿ ಎನ್ರಾನ್ ಜೊತೆ ಮಾಡಿಕೊಂಡ ಒಂದು ಒಪ್ಪಂದದ ಬಗ್ಗೆ ತಿಳಿಯಬೇಕು. ದೇಶದಲ್ಲಿ ಅಪಾರ ವಿದ್ಯುತ್ ಕೊರತೆಯನ್ನು ನೀಗಿಸಲು ಆಗಿನ ಶರದ್ ಪವಾರ್ ನೇತೃತ್ವದ ಕಾಂಗ್ರೆಸ್ ಸರಕಾರ ಮಹಾರಾಷ್ಟ್ರದ ಧಾಬೋಲ್ ನಲ್ಲಿ ಒಂದು ಬೃಹತ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿತ್ತು. ಬಗ್ಗೆ ಒಪ್ಪಂದಗಳಿಗೂ ಸಹಿಯಾಗಿತ್ತು. ಆದರೆ ನಂತರ ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಸರಕಾರ ಬಂದ ಮೇಲೆ ಯೋಜನೆಯಲ್ಲಿ ಭಾರತಕ್ಕೆ ಭಾರೀ ನಷ್ಟವಾಗುವುದನ್ನು ಮನಗಂಡು ಯೋಜನೆಯನ್ನು ರದ್ದುಪಡಿಸಿತ್ತು. ಆಗ ಯೋಜನೆಯಲ್ಲಿ ಎನ್ರಾನ್ ಜೊತೆಗೆ ಬೃಹತ್ ಯೋಜನೆಯಲ್ಲಿ ಅಮೆರಿಕದ ಜನರಲ್ ಎಲೆಕ್ಟ್ರಿಕಲ್ಸ್ ಮತ್ತು ಬೆಕ್ಟೆಲ್ ಕಂಪೆನಿಗಳೂ ತಲಾ ಹತ್ತು ಶೇಕಡಾ ಷೇರು ಹೊಂದಿದ್ದವು. ೧೯೯೩ರಲ್ಲಿ ಮಹಾರಾಷ್ಟ್ರ ಸರಕಾರ ಮಾಡಿಕೊಂಡ ಒಪ್ಪಂದವನ್ನು ಕೇಂದ್ರದಲ್ಲಿ ನಂತರ ಅಧಿಕಾರಕ್ಕೆ ಬಂದ ವಾಜಪೇಯಿ ಸರಕಾರ ರದ್ದು ಮಾಡಿದಾಗ, ಎನ್ರಾನ್, ಜನರಲ್ ಎಲೆಕ್ಟ್ರಿಕಲ್ಸ್ ಮತ್ತು ಬೆಕ್ಟೆಲ್, ಮೂರೂ ಕಂಪೆನಿಗಳೂ ಭಾರತ ಸರಕಾರವನ್ನು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆಳೆದವು. ಆಗ ಭಾರತ ಸರಕಾರ ಇದೇ ಹರೀಶ್ ಸಾಳ್ವೆಯವರನ್ನು ವಕೀಲರಾಗಿ ನೇಮಿಸಿತು.

ಎನ್ರಾನ್ ಭಾರತ ಸರಕಾರದ ವಿರುದ್ಧ ಸುಮಾರು ಐದೂವರೆ ಬಿಲಿಯನ್ ಡಾಲರ್ ಗಳಷ್ಟು ಭಾರೀ ಮೊತ್ತದ ನಷ್ಟ ಭರ್ತಿ ಮಾಡಿಕೊಡುವಂತೆ ದಾವೆ ಹೂಡಿತ್ತು. ಧಾಬೋಲ್ ವಿದ್ಯುತ್ ಯೋಜನೆಯಲ್ಲಿನ ಭಾರೀ ಅಪರಾ ತಪರಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಎನ್ರಾನ್ ಕಂಪೆನಿ ಅಮೆರಿಕದ ಅಧ್ಯಕ್ಷರಿಗೇ ತುಂಬಾ ಆಪ್ತವಾದ ಕಂಪೆನಿಯಾದುದರಿಂದ ಯೋಜನೆ ರದ್ದಾಗಿದ್ದು ಅಮೆರಿಕವನ್ನೂ ಕೆರಳಿಸಿತ್ತು. ಅಮೆರಿಕದ ಗೂಢಾಚಾರಿಕಾ ಸಂಸ್ಥೆ ಸಿ.. ಕೂಡಾ ಬಗ್ಗೆ ಒಂದು ರಹಸ್ಯ ಕಾರ್ಯಾಚರಣೆ ನಡೆಸಿ ವರದಿ ಸಿದ್ಧಪಡಿಸಿತ್ತು. ಎನ್ರಾನ್ ಪರ ಮತ್ತು ಯೋಜನೆ ರದ್ದು ಮಾಡಿದ ವಾಜಪೇಯಿ ಸರಕಾರದ ವಿರುದ್ಧ ರಾಷ್ಟ್ರೀಯ-ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಸತತವಾಗಿ ಬರೆಯಾಲಾಯಿತು. ಸ್ವತಃ ಚಿದಂಬರಂ ಅವರೇ ಎನ್ರಾನ್ ಪರ ಹಲವಾರು ಲೇಖನಗಳನ್ನು ಬರೆದರು. ಆದರೆ ಬಹಳಕಾಲದ ಮೇಲೆ ಗುಟ್ಟು ಹೊರಬಿತ್ತು. ಚಿದಂಬರಂ ಕೇಂದ್ರ ಸಚಿವರಾಗಿದ್ದುಕೊಂಡೇ ಎನ್ರಾನ್ ಪರ ವಕೀಲಿಕೆಯನ್ನೂ ಮಾಡಿದ್ದರು!. ಅದಕ್ಕಾಗಿ ಭಾರೀ ಮೊತ್ತದ ಫೀಸು ಕೂಡಾ ಅವರಿಗೆ ಸಂದಾಯವಾಗಿತ್ತು.

ಸರಿಯಾಗಿ ೨೦೦೪ರಲ್ಲಿ ಸೋನಿಯ-ಮನಮೋಹನ್ ನೇತೃತ್ವದ ಕಾಂಗ್ರೆಸ್ ಯು.ಪಿ. - ಸರಕಾರ ಅಧಿಕಾರಕ್ಕೆ ಬಂದಕೂಡಲೇ ಎನ್ರಾನ್ ಜೊತೆಗೆ ಜನರಲ್ ಎಲೆಕ್ಟ್ರಿಕಲ್ಸ್ ಮತ್ತು ಬೆಕ್ಟೆಲ್ ಕಂಪೆನಿಗಳೂ ತಮಗೆ ಇಪ್ಪತ್ತೈದುಸಾವಿರ ಕೋಟಿ ರೂಪಾಯಿ ನಷ್ಟ ತುಂಬಿಕೊಡಬೇಕೆಂದು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡಿದವು. ವಾಜಪೇಯಿ ಸರಕಾರ ಬದಲಾಗಿ ಸೋನಿಯ-ಮನಮೋಹನ್ ನೇತೃತ್ವದ ಕಾಂಗ್ರೆಸ್ ಯು.ಪಿ. - ಸರಕಾರ ಬಂದ ಕೂಡಲೇ ಹಿಂದಿನ ಸರಕಾರದ ಎಲ್ಲ ವಕೀಲರನ್ನೂ ತೆಗೆದುಹಾಕಿ ಹೊಸ ವಕೀಲರನ್ನು ನೇಮಿಸಿತು. ಆಗ ಎನ್ರಾನ್ ಕೇಸಿನಲ್ಲಿ ವಾದ ಮಾಡುತ್ತಿದ್ದ ಹರೀಶ್ ಸಾಳ್ವೆಯವರನ್ನು ಬದಲಿಸಿ ಇದೆ ಪಾಕಿಸ್ತಾನದ ವಕೀಲ ಖವಾರ್ ಖುರೇಷಿಯನ್ನು ನೇಮಿಸಲಾಯಿತು. ಇದರ ಹಿಂದೆ ಆಗಿನ ಕಾನೂನು ಸಚಿವ ಸಲ್ಮಾನ್ ಖುರೇಷಿ, ಆಗಿನ ಪ್ರಭಾವೀ ಸಚಿವ ಚಿದಂಬರಂ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಇಂಧನ ಸಚಿವ ಮಣಿಶಂಕರ್ ಐಯ್ಯರ್ ಮತ್ತು ಶರದ್ ಪವಾರ್ ಇದ್ದರು.

ತಾನು ವಕೀಲರ ತಂಡವನ್ನೇ ಬದಲಿಸಿದುದರಿಂದ ತನಗೆ ಎರಡು-ಮೂರು ತಿಂಗಳ ಕಾಲಾವಧಿ ಬೇಕೆಂದು ಭಾರತ ಸರಕಾರ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಬೇಡಿಕೊಂಡ ನಾಚಿಕೆಯ ಪ್ರಕರಣವೂ ಸಂದರ್ಭದಲ್ಲೇ ನಡೆಯಿತು. ಆಶ್ಚರ್ಯವೆನ್ನುವಂತೆ ಪೆಟ್ರೋಲಿಯಂ ಸಚಿವ ಮಣಿಶಂಕರ್ ಅಯ್ಯರ್ ಮಗಳು ಸುರಣ್ಯಾ ಅಯ್ಯರ್ ಕೂಡಾ ವಕೀಲರ ತಂಡದಲ್ಲಿದ್ದರು. ಆದರೆ ಪ್ರಧಾನಿ ಮನಮೋಹನ್ ಸಿಂಗ್ ಆಕ್ಷೇಪಿಸಿದ್ದರಿಂದ ಆಕೆಯನ್ನು ತೆಗೆಯಲಾಯಿತು. ಸಲ್ಮಾನ್ ಖುರ್ಷಿದ್ ಮತ್ತು ಮಣಿಶಂಕರ ಅಯ್ಯರ್ ಪಾಕಿಸ್ತಾನದ ರಾಜಕಾರಣಿಗಳೊಡನೆ ಬಹಳ ನಿಕಟ ಸಂಪರ್ಕವಿಟ್ಟುಕೊಂಡಿದ್ದಾರೆ. (ಇತ್ತೀಚಿಗೆ ಮೋದಿಯವರು ಪ್ರಧಾನಿಯಾದ ಬಳಿಕ ಅವರಿಬ್ಬರೂ ಪಾಕಿಸ್ತಾನಕ್ಕೆ ತೆರಳಿ ಬಹಿರಂಗವಾಗಿಯೇ ನಮ್ಮದೇ ಪ್ರಧಾನಿ ಮೋದಿಯವರನ್ನು ತೆಗಳಿ ನವಾಜ್ ಶರೀಫರನ್ನು ಹೊಗಳಿದ್ದರು) ಅಯ್ಯರ್ ಮಗಳ ಮದುವೆಗೆ ಪಾಕಿಸ್ತಾನದ ಖುರ್ಷಿದ್ ಮಹಮೂದ್ ಕಸೂರಿ ಸೇರಿದಂತೆ ಹಲವಾರು ಪ್ರಭಾವೀ ಪಾಕ್ ಮುಖಂಡರು ಬಂದಿದ್ದರು. ಧಾಬೋಲ್ ಕೇಸಿನಲ್ಲಿ ಭಾರತದ ಪರ ಖವಾರ್ ಖುರೇಷಿಯನ್ನು ನೇಮಿಸಿದಾಗ, ಆಗ ಕೇಂದ್ರ ಕಾನೂನು ಮಂತ್ರಿಯಾಗಿದ್ದ ಸಲ್ಮಾನ್ ಖುರ್ಶೀದ್ ತಮ್ಮ ಅಧಿಕೃತ ಇಂಗ್ಲೆಂಡ್ ಪ್ರವಾಸದ ಅವಧಿಯಲ್ಲಿಯೇ ಖವಾರ್ ಖುರೇಷಿಯನ್ನು ಭೇಟಿಯಾಗಿದ್ದರು.

ಖವಾರ್ ಖುರೇಷಿ ೨೦೦೪ ರಲ್ಲಿ ಕೇಸಿನಲ್ಲಿ ವಕೀಲನಾಗಿ ನೇಮಕಗೊಂಡ ಒಂದೇ ವರ್ಷಕ್ಕೆ ಭಾರತ ಕೇಸು ಸೋತು ಹೋಗುವ ಹಂತಕ್ಕೆ ತಲುಪಿ, ರಾಜೀ ಸೂತ್ರ ಮುಂದಿಟ್ಟು ಎನ್ರಾನ್, ಜನರಲ್ ಎಲೆಕ್ಟ್ರಿಕಲ್ಸ್ ಮತ್ತು ಬೆಕ್ಟೆಲ್, ಮೂರೂ ಕಂಪೆನಿಗಳಿಗೂ ಭಾರೀ ಮೊತ್ತದ ಹಣವನ್ನು ಪರಿಹಾರವಾಗಿ ನೀಡಲು ಒಪ್ಪಿಕೊಂಡಿತು! ಮಹಾರಾಷ್ಟ್ರ ರಾಜ್ಯ ವಿದ್ಯುತ್ ನಿಗಮ ಧಾಬೋಲ್ ಯೋಜನೆಯಲ್ಲಿ ಶೇಕಡಾ ಹದಿನೈದರಷ್ಟು ಷೇರ್ ಹೊಂದಿತ್ತು. ಇಡೀ ಯೋಜನೆಗೆ ಸಾಲ ನೀಡಿದ್ದು ಐಡಿಬಿಐ ಬ್ಯಾಂಕ್ ನೇತೃತ್ವದ ಹಲವು ಭಾರತೀಯ ಬ್ಯಾಂಕ್ ಗಳ ಸಮೂಹ. ಯೋಜನೆಗೆ ಓವರ್ ಸೀಸ್ ಪ್ರೈವೆಟ್ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ವತಿಯಿಂದ ಹತ್ತೊಂಬತ್ತಕ್ಕೂ ಹೆಚ್ಚು ವಿದೇಶಿ ಬ್ಯಾಂಕ್ ಗಳೂ ಸಾಲ ನೀಡಿದ್ದವು ರಾಜೀ ಒಪ್ಪಂದದಿಂದಾಗಿ ಓವರ್ ಸೀಸ್ ಪ್ರೈವೆಟ್ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್೨೦ ಶೇಕಡಾ ರಿಯಾಯಿತಿ ನೀಡಿ ಒಟ್ಟು ಇನ್ನೂರ-ಮೂವತ್ತು ಮಿಲಿಯನ್ ಡಾಲರ್ ಗಳನ್ನೂ ಪಡೆಯಿತು. ಜನರಲ್ ಎಲೆಕ್ಟ್ರಿಕಲ್ಸ್ ಗೆ ನೂರ-ನಲವತ್ತೈದು ಮಿಲಿಯನ್ ಡಾಲರ್ ಗಳು ಮತ್ತು ಬೆಕ್ಟೆಲ್ ಗೆ ನೂರ-ಅರವತ್ತು ಮಿಲಿಯನ್ ಡಾಲರ್ ಗಳನ್ನೂ ಸಲ್ಲಿಸಲಾಯಿತು.

ಆದರೆ ಇದರಲ್ಲಡಗಿದ ಭಾರೀ ಹಗರಣ ಯಾರ ಗಮನಕ್ಕೂ ಬರಲೇ ಇಲ್ಲ.

ವಾಸ್ತವಕ್ಕಾದರೆ ೧೯೯೩ರಲ್ಲಿ ಯೋಜನೆ ಶುರುವಾದಾಗ ಎನ್ರಾನ್ ನಲ್ಲಿ ಶೇಕಡಾ ಹತ್ತರಷ್ಟು ಪಾಲು ಬಂಡವಾಳವನ್ನು ಮಾತ್ರ ಹೊಂದಿದ್ದ ಜನರಲ್ ಎಲೆಕ್ಟ್ರಿಕಲ್ಸ್ ಮತ್ತು ಬೆಕ್ಟೆಲ್ ನಂತರ ೨೦೦೧ರಲ್ಲಿ ಎನ್ರಾನ್ ಇಪ್ಪತ್ತು ಮಿಲಿಯನ್ ಡಾಲರ್ಗಳಷ್ಟು ಪಾಲನ್ನು ಕೊಂಡವು. ಈಗ ತಮಾಷೆ ಹೇಗಿದೆಯೋ ನೋಡಿ.... ಎನ್ರಾನ್ ಇಪ್ಪತ್ತು ಮಿಲಿಯನ್ ಡಾಲರ್ ಗಳಷ್ಟು ಮೊತ್ತದ ಷೇರುಗಳನ್ನು ಹೊಂದಿದ ಜನರಲ್ ಎಲೆಕ್ಟ್ರಿಕಲ್ಸ್ ಮತ್ತು ಬೆಕ್ಟೆಲ್ ಕಂಪೆನಿಗಳಿಗೆ ಭಾರತದಿಂದ ದಂಡವಾಗಿ ಸಂದಾಯವಾಗಿದ್ದು ಒಟ್ಟು ಮುನ್ನೂರ-ಐದು ಮಿಲಿಯನ್ ಡಾಲರ್ ಗಳು! ಇಪ್ಪತ್ತು ಮಿಲಿಯನ್ ಡಾಲರ್ ಗಳ ಜುಜುಬಿ ಮೊತ್ತದ ಷೇರು ಹೊಂದಿದ್ದ ಎರಡು ಕಂಪೆನಿಗಳಿಗೆ ಭಾರತ ಸರಕಾರ ಪಾವತಿಸಿದ ಮೊತ್ತ ಮುನ್ನೂರ-ಐದು ಮಿಲಿಯನ್ ಡಾಲರ್ ಗಳು. ಈಗ ಹೇಳಿ ಸೋನಿಯ-ಮನಮೋಹನ್ ನೇತೃತ್ವದ ಕಾಂಗ್ರೆಸ್ ಯು.ಪಿ. - ಸರಕಾರ. ಭಾರತದ ಪರ ವಾದಮಾಡಲು ಖವಾರ್ ಖುರೇಷಿ ಯನ್ನು ನೇಮಿಸಿದ್ದುಯಾಕೆ ಅಂತ ತಿಳಿಯಿತೇ..! ಭಾರತದ ಹರೀಶ್ ಸಾಳ್ವೆ ಇರಲಿ ಅಥವಾ ಮತ್ತ್ಯಾರೇ ದೇಶ-ಪ್ರೇಮ ಇದ್ದವರೆಯಾಗಿದ್ದರೆ ಇಷ್ಟೊದು ಬೃಹತ್ ಮೊತ್ತವನ್ನು ನೀಡಲು ಒಪ್ಪಿಕೊಳ್ಳುತ್ತಿದ್ದರೇ? ಹಾಗಿದ್ದ ಮೇಲೆ ಇಷ್ಟೊಂದು ದೂಡ್ಡ ಮೊತ್ತದ ಹಗರಣದಲ್ಲಿ ಕಾಂಗ್ರೆಸ್ ಯು.ಪಿ. - ಸರಕಾರ ಮತ್ತದರ ಮಂತ್ರಿಗಳಿಗೆ ಎಷ್ಟು ಕಿಕ್ ಬ್ಯಾಕ್ ಸಿಕ್ಕಿರಬಹುದು?

ಮೇಲೆ ತಿಳಿಸಿದ ಎಲ್ಲ ಗಣ್ಯಾತಿ-ಗಣ್ಯರೆಲ್ಲ ಈಗ ವಿವಿಧ ಹಗರಣಗಳಲ್ಲಿ ಒದ್ದಾಡುತ್ತ ತಡಾಬದಡಾಯುಸುತ್ತಿದ್ದರೆ, ಇಂತಹ ದೊಡ್ಡ ಷಡ್ಯಂತ್ರ ರಚಿಸಿ ಇಷ್ಟು ದೊಡ್ಡ ಹಗರಣ ಮಾಡಿದರು ದೇಶದಲ್ಲಿರುವ ಎಲ್ಲ ಮಾಧ್ಯಮದವರು ತವಡು ಕುಟ್ಟುತ್ತಿದ್ದಾರೆಯೇ??? ಅಥವಾ ಸುಮ್ಮನಿರಲು ಹಗರಣದ ಎಷ್ಟು ಪಾಲು ಮಾಧ್ಯಮದವರಿಗೆ ಸಂದಿದೆ??

Related posts