Infinite Thoughts

Thoughts beyond imagination

ಬುರ್ಹಾನ್ ವಾನಿಯ ಉತ್ತರಾಧಿಕಾರಿ ಸಬ್ಝರ್ ಭಟ್ ಫಿನಿಷ್ !!

ನಿನ್ನೆ ರಾತ್ರಿಯಿಂದಲೂ ಒಂದು ಶುಭ ಸಮಾಚಾರಕ್ಕಾಗಿ ಕಿವಿಯಗಲ ಮಾಡಿ ಕಾಯುತ್ತಿದ್ದೆ. ಈಗ ತಾನೇ ಸುದ್ದಿ ಬಂತು. ಸಬ್ಝರ್ ಭಟ್ ನನ್ನು ಕೊನೆಗೂ ನಮ್ಮ ಯೋಧರು ಹೊಡೆದುರುಳಿಸಿದ್ದಾರೆ. ಬುರ್ಹಾನ್ ವಾನಿಯ ಸ್ನೇಹಿತನಾಗಿದ್ದ ಈತ ಇತ್ತೀಚಿಗೆ ಅವನ ಸ್ಥಾನಕ್ಕೇರಿ, ಕಾಶ್ಮೀರದ ಹಿಜ್ಬುಲ್ ಮುಜಾಹಿದ್ದೀನ್ ಹೊಸ ಕಮಾಂಡರ್ ಆಗಿದ್ದ. ಬುರ್ಹಾನ್ ವಾನಿಯ ರೀತಿಯಲ್ಲೇ ಸೋಷಿಯಲ್ ಮೀಡಿಯಾದಲ್ಲಿ ದೇಶ ದ್ರೋಹಿ ಹಾಗು ಭಯೋತ್ಪಾದಕರ ಪ್ರೀತಿಪಾತ್ರನಾಗತೊಡಗಿದ್ದ. ಇನ್ನೊಬ್ಬ ಬುರ್ಹಾನ್ ವಾನಿ ಯಾಗುವ ಎಲ್ಲ ಲಕ್ಷಣಗಳೂ ಈತನಲ್ಲಿ ಗೋಚರಿಸತೊಡಗಿದ್ದವು. ಆದರೆ ನಮ್ಮ ಯೋಧರು ಸಬ್ಝರ್ ಭಟ್ ಎಂಬ ಕ್ಷುದ್ರ ಜೀವಿಯನ್ನು ತಡ ಮಾಡದೆ ೭೨ ಕನ್ಯೆಯರ ಬಳಿಗೆ ಕಳುಹಿಸಿದ್ದಾರೆ. ಕಾಶ್ಮೀರದ ತ್ರಾಲ್ ನಲ್ಲಿನ ಸೈಮೋ ಪ್ರಾಂತ್ಯದ ರಥ್ಸುನ್ ಎಂಬ ಹಳ್ಳಿ ಸಬ್ಝರ್ ಹುಟ್ಟೂರು. ಹಲವು ತಿಂಗಳಿನಿಂದ ಸೈನ್ಯದ ಕಣ್ಣಿಗೆ ಮಣ್ಣೆರಚಿ ಹೇಡಿಯಂತೆ ತಲೆತಪ್ಪಿಸಿಕೊಂಡಿದ್ದ ಸಬ್ಝರ್ ಭಟ್ ನಿನ್ನೆ ರಾತ್ರಿ ಕದ್ದು-ಮುಚ್ಚಿ ತನ್ನ ಹುಟ್ಟೂರಿಗೆ ಬಂದಿದ್ದ ವಿಷಯ ಭದ್ರತಾ ಪಡೆಗಳಿಗೆ ಗೊತ್ತಾಯಿತು. ಆತ ಅಲ್ಲೊಂದು ಮನೆಯಲ್ಲಿ ಅವಿತಿದ್ದ. ಅವನ ಜೊತೆ ಆದಿಲ್ ಮತ್ತು ಫೈಜಾನ್ ಎಂಬಿಬ್ಬರು ಉಗ್ರಗರೂ ಇದ್ದರು. ಅವರ ಪೈಕಿ ಆದಿಲ್ ಬಹುಷಃ ಪಾಕಿಸ್ಥಾನಿಯಾಗಿದ್ದರೆ, ಇನ್ನೊಬ್ಬ ಫೈಜಾನ್ ಇನ್ನಷ್ಟೇ ಹತ್ತನೇ ಕ್ಲಾಸಿನಲ್ಲಿ ಕಲಿಯುತ್ತಿರುವ ಹುಡುಗ. ಪಾಕಿಸ್ತಾನದ ಹಿಜಬುಲ್ ಮುಜಾಹಿದ್ದೀನ್ ಫೈಜಾನ್ ನಂಥ ಸಣ್ಣ ಮಕ್ಕಳನ್ನೂ ತಮ್ಮ ಉಗ್ರವಾದಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ?

ರಥ್ಸುನ್ ಎಂಬ ಹಳ್ಳಿಮನೆಯಲ್ಲಿ ಸಬ್ಝರ್ ತನ್ನಿಬ್ಬರು ಸಂಗಡಿಗರೊಂದಿಗೆ ಅಡಗಿ ಕೂತಿದ್ದಾನೆಂಬ ಖಚಿತ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ನಮ್ಮ ಯೋಧರು ಮನೆಯನ್ನು ಸುತ್ತುವರಿದರು. ನಿನ್ನೆ ರಾತ್ರಿಯೇ ಸಬ್ಝರ್ ಮತ್ತವನ ಸಂಗಡಿಗರ ಅಡಗುದಾಣವನ್ನು ಭಧ್ರತಾ ಪಡೆಗಳು ಸುತ್ತುವರಿದಿರುವ ಸುದ್ದಿ ಸೋಶಿಯಲ್ ಮೀಡಿಯಾ ಮೂಲಕ ಕಾಳ್ಗಿಚ್ಚಿನಂತೆ ಹರಡಿತು. ಪಾಕಿಸ್ತಾನಿ ಕಮಾಂಡರ್ ಗಳು ವಾಟ್ಸಾಪ್ ಮೂಲಕ ಕಾಶ್ಮೀರಿ ಹುಡುಗರಿಗೆ ಮೆಸೇಜ್ ಕಳುಹಿಸಿ, ಸಬ್ಝರ್ ಅಡಗಿರುವ ಮನೆಯತ್ತ ತೆರಳಿ ಭಧ್ರತಾ ಪಡೆಗಳತ್ತ ಕಲ್ಲೆಸೆಯಲು, ಮತ್ತವನ ಸಂಗಡಿಗರು ಪಾರಾಗಲು ಸಹಕರಿಸುವಂತೆ ಕೇಳಿಕೊಂಡರು. ಕಾಶ್ಮೀರಿ ಹುಡುಗರು ತಮ್ಮತ್ತ ಕಲ್ಲೆಸೆಯುತ್ತಾ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿದ್ದರೂ, ಭಧ್ರತಾ ಪಡೆಗಳು ತಮ್ಮ ಕೆಲಸವನ್ನು ಸುಸೂತ್ರವಾಗಿ ಮಾಡಿ ಮುಗಿಸಿದವು. ಸಬ್ಝರ್, ಆದಿಲ್ ಮತ್ತು ಫೈಜಾನ್ ದೇಹ ಭದ್ರತಾ ಪಡೆಗಳ ಗುಂಡಿಗೆ ಛಿದ್ರ ಛಿದ್ರವಾಯಿತು... ಗುಂಡುಗಳಿಂದ ಛಿದ್ರವಾದ ದೇಹದ ಗಾಯಗಳಿಗೆ ಮುಲಾಮು ಲೇಪಿಸಲು ಎಪ್ಪತ್ತೆರಡು ಕನ್ಯೆಯರು ಯಾವಾಗ ಬರುತ್ತಾರೋ ಅಂತ ಹೇಡಿಗಳ ಆತ್ಮಗಳು ಕಾಯುತ್ತಿರಬಹುದು...!

ನಮ್ಮ ಭದ್ರತಾ ಪಡೆ ಹಾಗು ಕಾಶ್ಮೀರ ಪೊಲೀಸ್ ಪಡೆಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು!!

Related posts