Infinite Thoughts

Thoughts beyond imagination

ಎಡಚ ಎಡಬಿಡಂಗಿಗಳು ಬಾಯಿ ಬಡಿದುಕೊಳ್ಳುವ "ಅಸಹಿಷ್ಣುತೆ" ಎಲ್ಲಿದೆ? ಯಾರಲ್ಲಿದೆ?

ಡೆಲ್ಲಿ ಯೂನಿವರ್ಸಿಟಿಯಿಂದ ಕೇರಳದ ಕಣ್ಣೂರಿನ ವರೆಗೆ... ರಕ್ತ ಸಿಕ್ತ ಮನಸ್ಸುಗಳು.....! ಎಡಚ ಎಡಬಿಡಂಗಿಗಳು ಬಾಯಿ ಬಡಿದುಕೊಳ್ಳುವ "ಅಸಹಿಷ್ಣುತೆ" ಎಲ್ಲಿದೆ? ಯಾರಲ್ಲಿದೆ?

ಜೆ.ಎನ್.ಯು ನಲ್ಲಿ "ಭಾರತ್ ತೇರೇ ಟುಕ್ಡೆ ಹೋಂಗೆ ... ಇಂಶಾ ಅಲ್ಲಾಹ್ ... ಇಂಶಾ ಅಲ್ಲಾಹ್" ಅಂತ ಘೋಷಣೆ ಮೊಳಗಿದಾಗ ಅದನ್ನು 'ಅಭಿವ್ಯಕ್ತಿ ಸ್ವಾತಂತ್ರ್ಯ ಅಂತ ಬೊಬ್ಬೆ ಹಾಕಲಾಯಿತು. ಆಗ ಅವರ ಪರ ಗಟ್ಟಿ ದನಿಯಲ್ಲಿ ಅರಚಿದ್ದು ಇದೆ ಎಡಪಂಥೀಯರು, ಕಾಂಗ್ರೆಸಿಗರು, ಸಿಕ್ಯುಲರ್ ಸಿದ್ಧಾಂತಿಗಳು, ಪ್ರಗತಿಪರ ಲದ್ಧಿಜೀವಿ ವಿಧೂಷಕರು, ಮತ್ತವರ ಗುಲಾಮರಂತಿರುವ ಪತ್ರಕರ್ತರು. ಆದರೆ ಇವರ್ಯಾರೂ ಕೂಡ ಸಾಮಾನ್ಯ ಭಾರತೀಯ ನಾಗರಿಕನ ಮನಸ್ಸಿನಲ್ಲೆದ್ದ ಸಹಜ ಪ್ರಶ್ನೆಗಳಿಗೆ ಉತ್ತರಿಸಲೇ ಇಲ್ಲ...!

"ಭಾರತ ಯಾಕೆ ಚೂರು ಚೂರಾಗಬೇಕು..?" ಒಂದು ವೇಳೆ ಭಾರತ ಒಡೆದು ಚೂರಾಗಬೇಕು ಅನ್ನೋದು ಘೋಷಣೆ ಕೂಗಿದವರ ಬಯಕೆಯೇ ಆಗಿದ್ದು, ಅದನ್ನೂ ಕೂಡಾ ನಾವು ಅಭಿವ್ಯಕ್ತಿ ಸ್ವಾತಂತ್ರ್ಯ ಅಂತಲೇ ಪರಿಗಣಿಸಿದರೂ..... ಘೋಷಣೆಯ ಜೊತೆಗೆಯೇ "ಇಂಶಾ ಅಲ್ಲಾಹ್ ...ಇಂಶಾ ಅಲ್ಲಾಹ್" ಎಂಬ ಬಾಲಂಗೋಚಿ ಯಾಕೆ? ಬಹುಷಃ ಸಂದರ್ಭದಲ್ಲಿ ಸುದ್ದಿ ಮಾಧ್ಯಮಗಳಲ್ಲಿ ನಡೆದ ಯಾವುದೇ ಚರ್ಚೆಗಳಲ್ಲೂ ವಿಷಯದ ಪ್ರಸ್ತಾಪವಾಗಲೇ ಇಲ್ಲ ಅಂತನ್ನಿಸುತ್ತದೆ....

ಆದರೆ ನನ್ನ ಅನಿಸಿಕೆಯ ಪ್ರಕಾರ "ಇಂಶಾ ಅಲ್ಲಾಹ್ ...ಇಂಶಾ ಅಲ್ಲಾಹ್" ಎಂಬ ಕೂಗು ಹಾಕಿದವರಿಗೆ ಕೇಂದ್ರದಲ್ಲಿ ಮೋದೀಜಿಯವರ ಸರಕಾರ ಬಂದ ಮೇಲೆ ಕಜ್ಜಿ ತುರಿಕೆ ಹೆಚ್ಚಿದೆ... ಅಸಹಿಷ್ಣುತೆ ಹೆಚ್ಚಿದೆ... ಜೆ.ಎನ್.ಯು ನಲ್ಲಿನ ವಿಷಕ್ರಿಮಿ ದೇಶದಗಲಕ್ಕೂ ವ್ಯಾಪಿಸತೊಡಗಿದೆ.... ಮೋದೀಜಿಯವರನ್ನೂ ಅವರ ಸರಕಾರವನ್ನೂ ಸಹಿಸಿಕೊಳ್ಳಲಿಕ್ಕಾಗದ ಮಖೇಡಿಗಳ ಹೇಡಿತನ ಪರಾಕಾಷ್ಠೆ ತಲುಪಿದೆ. ಹೀಗೆ ಅಸಹಾಯಕರಾಗಿ ಬೊಬ್ಬೆ ಹೊಡೆಯುತ್ತಿದ್ದ ಮಂದಿ ಈಗ ಬರೀ ಘೋಷಣೆಗೇ ಸೀಮಿತರಾಗಿಲ್ಲ. ಮೊನ್ನೆ ದೆಹಲಿ ಯುನಿವರ್ಸಿಟಿಯಲ್ಲಿ ಐಸಿಸ್ ಪರ ಗೋಡೆಬರಹಗಳು ಕಾಣಿಸಿಕೊಂಡವು... ಇದು ಕಿಡಿಗೇಡಿತನದ ಕೃತ್ಯವಾಗಿದ್ದರೂ ಸಹ ಬರೆದವರ ಮನದ ವಿಕೃತಿ ಜಗಜ್ಜಾಹೀರಾಗಿದೆ.. "ಭಾರತ್ ತೇರೇ ಟುಕ್ಡೆ ಹೋಂಗೆ ... ಇಂಶಾ ಅಲ್ಲಾಹ್ ... ಇಂಶಾ ಅಲ್ಲಾಹ್" ಎಂಬ ಮಾನಸಿಕತೆಯನ್ನು 'ಅಭಿವ್ಯಕ್ತಿ ಸ್ವಾತಂತ್ರ್ಯ' ಅನ್ನೋ ಹೆಸರಿನಲ್ಲಿ ಪೋಷಿಸಿದರೆ ಏನಾಗುತ್ತದೆ ಎಂಬುದಕ್ಕೆ ಇದೊಂದು ಚಿಕ್ಕ ಉದಾಹರಣೆಯಷ್ಟೇ.

ಇದಾಗಿ ಎರಡೇ ದಿನದೊಳಗೆ ಡೆಲ್ಲಿ ಯೂನಿವರ್ಸಿಟಿಗೆ ಸಂಬಂಧಿಸಿಯೇ ಒಂದು ಆಘಾತಕಾರಿ ಸಂಗತಿ ನಡೆದಿದೆ. ಹೆಚ್ಚಿನ ಮಾಧ್ಯಮಗಳು ಇದನ್ನೊಂದು ದೊಡ್ಡ ಸುದ್ದಿ ಮಾಡಲೇ ಇಲ್ಲ. ಯಾಕಂದರೆ ಅಮಾನುಷ ಘಟನೆಗೂ, ಮೋದೀಜಿಯವರ ಸರಕಾರದ ಜನಪ್ರಿಯತೆಯ ವಿರುದ್ಧ ಮಡುಗಟ್ಟಿದ ರೋಷಕ್ಕೂ ನೇರಾನೇರ ಸಂಬಂಧವಿದೆ. ಮೋದೀಜಿಯವರ ಕನಸಿನ ಯೋಜನೆ ಸ್ವಚ್ಛ ಭಾರತದ ಅಂಗವಾಗಿ ದೆಹಲಿಯಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಬಳಕೆಗೆ ತರಲಾಗಿದೆ. ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಿತರಾಗಿದ್ದ ಹಲವಾರು ಆಟೋ ಚಾಲಕರು ಎಲೆಕ್ಟ್ರಿಕ್ ಆಟೋ ರಿಕ್ಷಾ ಮೂಲಕ ನಾಗರಿಕರಿಗೆ ಸೇವೆ ಸಲ್ಲಿಸುವುದಲ್ಲದೆ ನಾಗರಿಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವನ್ನೂ ಮೂಡಿಸುತಿದ್ದಾರೆ.

ರವೀಂದರ್ ಕುಮಾರ್ ಕೂಡಾ ರಿಕ್ಷಾ ಓಡಿಸುತ್ತಾ ಮೋದೀಜಿಯವರ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದ. ಮೊನ್ನೆ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ದೆಹಲಿಯ ಜಿಟಿಬಿ ಮೆಟ್ರೋ ರೈಲು ನಿಲ್ದಾಣದ ಬಳಿ ಆಟೋ ನಿಲ್ಲಿಸಿಕೊಂಡು ಊಟ ಮಾಡುತ್ತಿದ್ದ. ಆಗ ಅಲ್ಲೇ ಸಮೀಪದಲ್ಲಿದ್ದ ಶೌಚಾಲಯದ ಗೋಡೆಗೆ ಇಬ್ಬರು ಹುಡುಗರು ಮೂತ್ರ ವಿಸರ್ಜಿಸುವುದನ್ನು ಕಂಡ ರವೀಂದರ್ ಅದಕ್ಕೆ ಆಕ್ಷೇಪಿಸಿದ್ದಾನೆ. ಶೌಚಾಲಯ ಉಪಯೋಗಿಸಿ, ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಬೇಡಿ ಅಂತ ಅವರಲ್ಲಿ ಹೇಳಿದ ರವೀಂದರ್ ಮೋದೀಜಿಯವ ಹೆಸರು ಹೇಳಿ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಜ್ಞಾಪಿಸಿದ್ದಾನೆ. ಅದಕ್ಕೆ ಹುಡುಗರು ಕೆರಳಿ ರವೀಂದರ್ ಜೊತೆ ಜಗಳವಾಡಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ನಂತರ ಇತರರು ಜಗಳ ಬಿಡಿಸಿ ಹುಡುಗರು ಬೇರಿನ್ನೊಂದು ಆಟೋ ಹತ್ತಿ ಅಲ್ಲೇ ಮೂರು ಕಿಮಿ ದೂರವಿದ್ದ ಡೆಲ್ಲಿ ಯುನಿವರ್ಸಿಟಿಯ ನಾರ್ತ್ ಕ್ಯಾಂಪಸ್ ಕಿರೋಲಿ ಮಾಲ್ ಕಾಲೇಜಿನ ಬಳಿ ಹೋಗಿದ್ದಾರೆ. ರಾತ್ರಿ ಅದೇ ಹುಡುಗರು ಕಾರ್ ಮತ್ತು ಬೈಕ್ ಗಳಲ್ಲಿ ಹದಿನೈದು-ಇಪ್ಪತ್ತು ಹುಡುಗರ ಜೊತೆ ಬಂದು ರವೀಂದರ್ ಮೇಲೆ ಹಲ್ಲೆ ನಡೆಸಿದ್ದಾರೆ. ಕಲ್ಲೆಸೆದು ಸಾಯಿಸೋದು ಕೆಲವರ ಮನೋ "ಧರ್ಮ" ಹಂತಕ ಹುಡುಗರೂ ಕಲ್ಲೆತ್ತಿಕೊಂಡೆ ಬಂದಿದ್ದರು, ಆದರೆ ಬರುವಾಗ ಅದನ್ನು ಬಿಳಿಬಟ್ಟೆಗಳಲ್ಲಿ (ಶಾಂತಿಯ ಸಂಕೇತ) ಸುತ್ತಿಕೊಂಡು ತಂದಿದ್ದರು. ರವೀಂದರ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುವಾಗ ಇನ್ನೊಬ್ಬ ಸ್ವಚ್ಛ ಭಾರತ -ರಿಕ್ಷಾ ಚಾಲಕ ರಕ್ಷಣೆಗೆ ಬಂದ. ಆದರೆ ಇಪ್ಪತ್ತು ಹುಡುಗರ ಮಾರಣಾಂತಿಕ ಹಲ್ಲೆಗೆ ಹೆದರಿ ಪ್ರಾಣ ಉಳಿಸಿಕೊಳ್ಳಲು ಓದಿದ. ಇದೆಲ್ಲವೂ ಕೇವಲ ಐದೇ ನಿಮಿಷದಲ್ಲಿ ಮುಗಿದು ಹೋಯಿತು. ರವೀಂದರ್ ಅಣ್ಣ ಅವನ ರಕ್ಷಣೆಗೆ ಬರುವಷ್ಟರಲ್ಲಿ ಯುವಕ ರವೀಂದರ್ ಪ್ರಾಣಕಳಕೊಂಡಿದ್ದ.

ರವೀಂದರ್ ಹೆಂಡತಿ ಎರಡು ತಿಂಗಳ ಗರ್ಭಿಣಿ. ಪೈಶಾಚಿಕ ಕೃತ್ಯದ ಬಗ್ಗೆ ತಿಳಿದು ಕೇಂದ್ರ ಮಂತ್ರಿ ಶ್ರೀ ವೆಂಕಯ್ಯ ನಾಯ್ದೂಜೀ ಕೂಡಲೇ ಸ್ಥಳಕ್ಕೆ ಧಾವಿಸಿದರು. ಮೃತನ ಮನೆಯವರನ್ನು ಭೇಟಿ ಮಾಡಿ ಸಹಾಯ ಹಸ್ತ ನೀಡಿದರು. ಮೋದಿಜಿ ವಿಷಯ ತಿಳಿದು ವ್ಯಾಕುಲ ಗೊಂಡ ಅವರು ಹಂತಕರ ಪತ್ತೆ ಮಾಡುವಂತೆ ಕಟ್ಟು ನಿಟ್ಟಾಗಿ ಸೂಚಿಸಿ ತತ್ ಕ್ಷಣ ಒಂದು ಲಕ್ಷ ಪರಿಹಾರ ಮಂಜೂರು ಮಾಡಿದರು. ಪ್ರಧಾನಿಯೇ ಪ್ರಕರಣದ ಬಗ್ಗೆ ವಿಚಾರಿಸಿದ್ದರಿಂದ ಪೊಲೀಸರು ಸಿಸಿ ಟಿವಿ ಆಧರಿಸಿ ಇಬ್ಬರನ್ನು ಬಂಧಿಸಿದ್ದಾರೆ. ಅವರಿಬ್ಬರೂ ದಿಲ್ಲಿ ಯುನಿವರ್ಸಿಟಿಯ ವಿದ್ಯಾರ್ಥಿಗಳು.... ಯುನಿವರ್ಸಿಟಿಯಲ್ಲಿನ ಐಸಿಸ್ ಪರ ಗೋಡೆ ಬರಹ ಬರೆದವರ ಮನಸ್ಥಿತಿಗೂ ಇಬ್ಬರು ವಿದ್ಯಾರ್ಥಿಗಳ ಮನಸ್ಥಿತಿಗೂ ವ್ಯತ್ಯಾಸವೇ ಇಲ್ಲ. ಅವು ರಕ್ತ ಸಿಕ್ತ ಮನಸ್ಸುಗಳಲ್ಲವೇ?

ಬಂಧಿತ ವಿದ್ಯಾರ್ಥಿಗಳ ಹೆಸರು ಯಾವ ಮಾಧ್ಯಮಗಳಲ್ಲೂ ಕಾಣಿಸಿಕೊಂಡಿಲ್ಲವಾದರೂ ಸೋಷಿಯಲ್ ಮೀಡಿಯಾದಲ್ಲಿ ಮೊಹಮ್ಮದ್ ಆರೀಫ್ ಮತ್ತು ಮೊಹಮ್ಮದ್ ಅರ್ಬಾಜ್ ಎಂಬೆರಡು ಹೆಸರುಗಳು ಹರಿದಾಡುತ್ತಿವೆ....

ಅಲ್ಲಿ ಕೇರಳದಲ್ಲಿ ಕೇಂದ್ರ ಸರಕಾರದ ಗೋಹತ್ಯೆ ನೀತಿಯನ್ನು ವಿರೋಧಿಸುವ, ಮೋದೀಜಿಯವರನ್ನು ತೆಗಳುವ ಭರದಲ್ಲಿ ಕಣ್ಣೂರಿನ ಯೂತ್ ಕಾಂಗ್ರೆಸ್ ಮುಖಂಡ ರಿಜಿಲ್ ಮಾಕುಟ್ಟಿ, ಆತನ ಸಹಚರರಾದ ಶರಾಫುದ್ದೀನ್, ಜೋಶ್ ಕಂಡತ್ತಿಲ್ ಮುಂತಾದವರು ನಡುರಸ್ತೆಯಲ್ಲೇ ಕರುವೊಂದರ ಕತ್ತನ್ನು ಅಮಾನುಷವಾಗಿ ಕತ್ತರಿಸಿ ಕೊಂದು, ಅದರ ಮಾಂಸವನ್ನು ಬೇಯಿಸಿ ಆಹಾರ ತಯಾರಿಸಿ ಊಟ ಮಾಡಿದರು. ಕರುವನ್ನು ಕೊಲ್ಲುವಾಗ ಸತತವಾಗಿ ಮೋದಿ ವಿರೋಧಿ ಘೋಷಣೆಗಳನ್ನು ಕೂಗಲಾಯಿತು. ಯೂತ್ ಕಾಂಗ್ರೆಸ್ ಮುಖಂಡರಾದ ನಿಯಾಜ್ ಕೂರಪ್ಪಿಲ್, ಟೋನಿ ಥಾಮಸ್ ಮುಂತಾದವರ ತಂಡ ಕತ್ತರಿಸಿದ ಹಸುವಿನ ತಲೆಯಿಂದ ರಕ್ತ ತೊಟ್ಟಿಕ್ಕುತ್ತಿದ್ದಂತೆಯೇ ಹಿಡಿದುಕೊಂಡು ರಸ್ತೆಯಲ್ಲಿ ಮೆರವಣಿಗೆ ಹೊರಟರು.... ಇದನ್ನೆಲ್ಲಾ ಏನೆಂದು ಕರೆಯುವುದು.? ಅಮಾನುಷತೆಯ ಮೂಲ ಯಾವುದು? ರಕ್ತ ಸಿಕ್ತ ಮನಸುಗಳು ತಮ್ಮ ಕ್ರೌರ್ಯ ಪ್ರದರ್ಶನವನ್ನು ಇಷ್ಟು ಧೈರ್ಯದಿಂದ ಸಾರ್ವಜನಿಕವಾಗಿಯೇ ವ್ಯಕ್ತಪಡಿಸಲು ಏನು ಕಾರಣ?

ಎಡಚ ಎಡಬಿಡಂಗಿಗಳು ಬಾಯಿ ಬಡಿದುಕೊಳ್ಳುವ "ಅಸಹಿಷ್ಣುತೆ" ಎಲ್ಲಿದೆ? ಯಾರಲ್ಲಿದೆ?

ಇದನ್ನೂ ಅಭಿವ್ಯಕ್ತಿ ಸ್ವಾತಂತ್ರ್ಯ ಅಂತ ಕರೆಯಬೇಕಾ? ಕಾಂಗ್ರೆಸ್ ನೆಹರೂ ಕಾಲದಲ್ಲಿ ಜೋಡು ಎತ್ತುಗಳ ಚಿಹ್ನೆಯಡಿ ಸ್ಪರ್ದಿಸುತ್ತಿತ್ತು. ಅದಾದ ಬಳಿಕ ಇಂದಿರಾಗಾಂಧಿ ಕಾಲದಲ್ಲಿ ಹಸು ಮತ್ತು ಕರುವಿನ ಚಿಹ್ನೆಯಲ್ಲಿಯೇ ಸ್ಪರ್ದಿಸಿ ಗೆದ್ದು ಅಧಿಕಾರ ಹಿಡಿಯಿತು. ನೆಹರೂ ಮತ್ತು ಇಂದಿರಾ ಇಬ್ಬರೂ ದೇಶದಲ್ಲಿ 'ಗೋಹತ್ಯಾ ನಿಷೇಧ ಕಾನೂನು ಜಾರಿಯಲ್ಲಿಟ್ಟಿದ್ದರು... ಆದರೆ ಸೋನಿಯಾ ಕಾಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎತ್ತು, ಹಸು ಮತ್ತು ಕರುಗಳ ತಲೆಕತ್ತರಿಸಿ ರಸ್ತೆ ತುಂಬಾ ಮೆರವಣಿಗೆ ಮಾಡುತ್ತಿದ್ದಾರೆ! ದನದ ಮಾಂಸವನ್ನು ರಸ್ತೆಯಲ್ಲೇ ಮಾರುತ್ತಿದ್ದಾರೆ!'

ಅಪರಾಧ ಎಸಗುವವರ ಕ್ರೌರ್ಯ ಧೈರ್ಯ ನೋಡಿದರೆ ...ಅಂಥವರನ್ನು ಶತಾಯ ಗತಾಯ ನಾಚಿಕೆ ಬಿಟ್ಟು ಬೆಂಬಲಿಸುವವರನ್ನೇ ಹಿಡಿದು ಚಚ್ಚಬೇಕು ಅಂತನ್ನಿಸೋದಿಲ್ಲವೇ...? ಭಾಷೆ -ಸಂಸ್ಕೃತಿ ಬೇರೆಯಾದರೂ ಕೇರಳದಿಂದ ದೆಹಲಿಯವರೆಗೆ ಒಂದು ವರ್ಗದ ಜನರ ಮನಸ್ಥಿತಿ ರಕ್ತ ಸಿಕ್ತವಾಗಿರಲು ಕಾರಣವೇನು..? ಮತ್ತು ಇದಕ್ಕೆ ಸಾರ್ವಜನಿಕವಾಗಿ ರಾಜರೋಷದಲ್ಲಿ ವ್ಯಕ್ತಪಡಿಸುತ್ತಿರುವ ರಾಕ್ಷಶಿ ಮನೋಭಾವದ ಮನುಷ್ಯರೂಪಿ ಹುಳುಗಳಿಗೆ ಬೆಂಬಲ ನೀಡುತ್ತಿರುವ ಶಕ್ತಿಯಾದರೂ ಯಾವುದಿರಬಹುದು??? ಇಂಥವರನ್ನು ಸುಮ್ಮನೆ ಎಷ್ಟು ದಿನವೆಂದು ನಿರ್ಲಕ್ಷಿಸುವುದು??

Related posts