Infinite Thoughts

Thoughts beyond imagination

ಡಾ. ಉಜ್ಮಾ ಅಹಮ್ಮದ್ ಹಿಂದೂಸ್ತಾನದ ಪವಿತ್ರ ಭೂಮಿಯನ್ನು ಮುಟ್ಟಿ ನಮಸ್ಕರಿಸಿದಳು... ಆದರೆ....ಸತ್ಯ ಗೊತ್ತಿರಲಿ ನಿಮಗೆ.... !

ವಾಘಾ ಗಡಿಯ ಗೇಟು ದಾಟಿ ಭಾರತದೊಳಕ್ಕೆ ಕಾಲಿಟ್ಟ ಅವಳು ಹಿಂದೂಸ್ಥಾನದ ಭೂಮಿಯನ್ನು ಬಾಗಿ ಸ್ಪರ್ಶಿಸಿ ನಮಸ್ಕರಿಸಿದ ದೃಶ್ಯವನ್ನು ಮೊನ್ನೆ ನಮ್ಮ ಸುದ್ದಿ ಮಾಧ್ಯಮಗಳು ಪದೇ-ಪದೇ ತೋರಿಸಿದವು. 'ವಂದೇ ಮಾತರಂ' ಅಂದರೆ ಅದು ತಮ್ಮ ಧರ್ಮಕ್ಕೆ ವಿರುಧ್ದ... ತಾಯಿನಾಡಿಗೆ ನಮಸ್ಕರಿಸುವುದನ್ನು ಇಸ್ಲಾಮ್ ವಿರೋಧಿಸುತ್ತದೆ ಅನ್ನುವ ಹಲವು ಭಾರತೀಯ ಮುಸ್ಲಿಮರಿಗೆ ಇದನ್ನು ನೋಡಿ ಉರಿದಿರಬೇಕು. ಅಲ್ಲಿಂದ ಹೊರಟ ಉಜ್ಮಾ ಅಹಮ್ಮದ್ ಎಂಬ ಹೆಣ್ಣು ಮಗಳು ದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಶ್ರೀಮತಿ ಸುಶ್ಮಾ ಸ್ವರಾಜ್ ರನ್ನು ಭೇಟಿಯಾದಾಗ ಹಿಂದೂ ಸಂಪ್ರದಾಯದಂತೆ ಅವರ ಕಾಲಿಗೆರಗಿ ನಮಸ್ಕರಿಸಿದಳು. ಇದು ಅಷ್ಟಕ್ಕೇ ಮುಗಿಯಲಿಲ್ಲ, ಬಳಿಕ ಆಕೆ ಪತ್ರಿಕಾಗೋಷ್ಠಿ ನಡೆಸಿ ಪಾಕಿಸ್ತಾನವನ್ನು ಹಿಗ್ಗಾಮುಗ್ಗಾ ಬೈದಳು. ಅದು ಮರಣದ ಕೂಪ ಅಂತಂದಳು. ಭಾರತಕ್ಕೆ ಸುರಕ್ಷಿತವಾಗಿ ತನಗೆ ಮರಳಿ ಬರಲು ಸಹಕರಿಸಿದ ವಿದೇಶಾಂಗ ಸಚಿವೆ ಶ್ರೀಮತಿ ಸುಶ್ಮಾ ಸ್ವರಾಜ್ ರನ್ನು ಸಿಕ್ಕಾಪಟ್ಟೆ ಹೊಗಳಿದಳು, ಭಾರತೀಯ ದೂತಾವಾಸದ ಸಿಬ್ಬಂದಿಯನ್ನೂ ಹೊಗಳಿದಳು. ಪಾಪ ಶ್ರೀಮತಿ ಸುಶ್ಮಾ ಸ್ವರಾಜ್ ಆಕೆಯನ್ನು ಭಾರತದ ಮಗಳು ಅಂತ ಅಕ್ಕರೆಯಿಂದ ಕರೆದರು. ಮಾಧ್ಯಮಗಳಲೆಲ್ಲಾ ಇದೆ ಸುದ್ದಿ. ಎಲ್ಲರೂ ಉಜ್ಮಾಳ ಧೈರ್ಯವನ್ನು ಹೊಗಳುವವರೇ.

ಆದರೆ ಒಂದು ಸೂಕ್ಷ್ಮವನ್ನು ಎಲ್ಲರೂ ಮರೆತರು. ಆಕೆ ಪತ್ರಿಕಾಗೋಷ್ಠಿಯಲ್ಲಿ ಮಾತಾಡುತ್ತಾ 'ನಮ್ಮ ಭಾರತದ ಮುಸ್ಲಿಂ ಹೆಣ್ಣುಮಕ್ಕಳು ಇಸ್ಲಾಮ್ ರಾಷ್ಟ್ರವಾದ ಪಾಕಿಸ್ತಾನದ ಬಗ್ಗೆ ತುಂಬಾ ಪ್ರೀತಿ ಹೊಂದಿರುತ್ತೇವೆ... ಭಾರತಕ್ಕಿಂತ ಪಾಕಿಸ್ತಾನವೇ ಉತ್ತಮ ಅಂತ ಅಂದುಕೊಂಡಿರುತ್ತೇವೆ... ಆದರೆ ನನ್ನಂಥ ಹೆಣ್ಣುಮಕ್ಕಳಿಗೆ ನಾನೊಂದು ಮಾತು ಹೇಳುತ್ತೇನೆ... ಪಾಕಿಸ್ತಾನ ಒಂದು ಮರಣಕೂಪ.. ಅಲ್ಲಿ ಹೆಣ್ಣು ಮಕ್ಕಳಷ್ಟೇ ಅಲ್ಲ ಗಂಡಸರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ..."

ಹಾಗಾದರೆ ಉಜ್ಮಾ ಪಾಕಿಸ್ತಾನಕ್ಕೆ ಹೋದದ್ದು ಯಾಕೆ? ಆಕೆ ಹೇಳುವ ಹಾಗೆ ಅಲ್ಲಿ ಆಕೆಗೆ ನಿದ್ದೆ ಮಾತ್ರೆ ಕೊಟ್ಟು ಬಂದೂಕು ತೋರಿಸಿ ಬೆದರಿಸಿ, ಆಕೆಯ ಮಗಳನ್ನು ಅಪಹರಿಸುತ್ತೇವೆಂದು ಹೆದರಿಸಿ ಮದುವೆ ಮಾಡಿಕೊಂಡನಾ .? ಎಲ್ಲಾ ಭಾರತೀಯ ಮಾಧ್ಯಮಗಳೂ ಉಜ್ಮಾ ಪರವಾಗಿಯೇ ಸುದ್ದಿ ಮಾಡಿದವು. ಆದರೆ ಪಾಕಿಸ್ಥಾನದ ಮಾಧ್ಯಮಗಳು ಮಾತ್ರ ಉಜ್ಮಾ ಚರಿತ್ರೆಯನ್ನು ಜಾಲಾಡಿದವು. ಭಾರತದವಳಾದ ಉಜ್ಮಾಗೆ ಪಾಕಿಸ್ತಾನದ ತಾಹಿರ್ ಅದು ಹೇಗೆ ಪರಿಚಯವಾದ? ಉಜ್ಮಾ ಪ್ರಕಾರ ಆಕೆ ಆತನನ್ನು ಭೇಟಿಯಾದದ್ದು ಮಲೇಷ್ಯಾದಲ್ಲಿ. ಇಲ್ಲೇ ಇರುವುದು ಅರ್ಧ ಸತ್ಯ!!

ಆಕೆ ಮಲೇಷ್ಯಾಕ್ಕೆ ಹೋದದ್ದೇ ಆತನನ್ನು ಭೇಟಿಯಾಗಲು!

ತಾಹಿರ್ ಉಜ್ಮಾಗೆ ಪರಿಚಯವಾದದ್ದು ಫೇಸ್ ಬುಕ್ ಮೂಲಕ. ದೆಹಲಿಯ ಉಜ್ಮಾಗೆ ಈಗಾಗಲೇ ಮದುವೆಯಾಗಿದ್ದು ಅದರ ಫಲವಾಗಿ ಒಂದು ಹೆಣ್ಣು ಮಗುವೂ ಇದೆ. ಪಾಪ ಕಂದಮ್ಮನಿಗೆ ತಾಲಿಸ್ಸೀಮಿಯ ಎಂಬ ರಕ್ತದ ಖಾಯಿಲೆ. ಖಾಯಿಲೆಯಿರುವ ಮಗುವನ್ನು ಬಿಟ್ಟು ಉಜ್ಮಾ ಏಕಾಂಗಿಯಾಗಿ ಮಲೇಷ್ಯಾಗೆ ತೆರಳಿ ತಾಹಿರ್ ನನ್ನ ಭೇಟಿಯಾಗಿ ನಂತರ ಆತನ ಜೊತೆಗೆ ಪಾಕಿಸ್ತಾನಕ್ಕೆ ಹೋಗಲು ನಿರ್ಧರಿಸಿದಾಗ ಉಜ್ಮಾಗೆ ಪಾಕಿಸ್ತಾನದ ಬಗ್ಗೆ ಬಹಳ ಬಣ್ಣಬಣ್ಣದ ಕನಸುಗಳಿದ್ದವು. ಇಸ್ಲಾಮಿಕ್ ರಾಷ್ಟ್ರ ಪಾಕಿಸ್ತಾನ ಭೂಲೋಕದ ಸ್ವರ್ಗ ಅಂತ ಆಕೆ ಭಾವಿಸಿದ್ದಳು. ಆದರೆ ಆಕೆ ಇದೆ ವಾಘಾ ಗಡಿಯ ಮೂಲಕ ಹೋದದ್ದು ಖೈಬರ್ ಫಕ್ತೂಂಕ್ವಾ ಪ್ರಾಂತ್ಯದ ಬುನೇರ್ ಎಂಬಲ್ಲಿಗೆ. ಅದು ಹೇಳಿಕೇಳಿ ಅಲ್- ಖೈದಾದ ಆಡುಂಬೊಲ. ಒಂದು ರೀತಿಯಲ್ಲಿ ಅದು ಭೂಲೋಕದ ನರಕ. ಪಾಕಿಸ್ತಾನದ ಸೈನ್ಯವೇ ಅಲ್ಲಿನ ಹಳ್ಳಿಗಳಿಗೆ ಹೋಗಲು ಹೆದರುತ್ತದೆ. ಇಂತಾದ್ದರಲ್ಲಿ ಪಾಕಿಸ್ತಾನವೆಂಬ ಸ್ವರ್ಗದಲ್ಲಿ ಎರಡನೆಯ ಗಂಡನೊಡನೆ ಬದುಕು ನಡೆಸಲು ಹೊರಟ ಉಜ್ಮಾಗೆ ಎರಡುಮೂರು ದಿನಗಳಲ್ಲೇ ಭ್ರಮನಿರಸನವಾಗಿದೆ. ಹಾಗಾಗಿಯೇ ಆಕೆ ಭಾರತದ ದೂತಾವಾಸ ತೆರಳಿ ನಾಟಕ ಶುರುಮಾಡಿದ್ದು. ಅಸೌಖ್ಯದ ಮಗುವನ್ನೇ ಬಿಟ್ಟು ಪಾಕಿಸ್ತಾನಕ್ಕೆ ಹೊರಟವಳಿಗೆ ಈಗ ನರಕ ದರ್ಶನವಾಗಿತ್ತು.

ಆದರೆ ತನಗೆ ನಿದ್ದೆ ಮಾತ್ರೆ ನೀಡಿ, ಬಂದೂಕು ತಲೆಗಿಟ್ಟು ತಾಹಿರ್ ಮದುವೆ ಮಾಡಿಕೊಂಡ ಅಂತ ನ್ಯಾಯಾಲಯದ ಮೆಟ್ಟಿಲೇರಿದವಳನ್ನು ಪಾಕ್ ಮೀಡಿಯಾಗಳು ಬಯಲಿಗೆಳೆದವು. ಆಕೆ ತಾಹಿರ್ ಜೊತೆಗೆ ನಿಖಾಹ್ ಆಗುವಾಗಿನ ವಿಡಿಯೋ ದೃಶ್ಯಗಳನ್ನು ಪಾಕ್ ಮಾಧ್ಯಮಗಳು ಬಿಡುಗಡೆ ಮಾಡಿದವು. ಉಜ್ಮಾ ನಿಖಾಹ್ ಸಂದರ್ಭದಲ್ಲಿ ಸರಿಯಾಗಿಯೇ ಇದ್ದಳು... ಅವಳಿಗೆ ನಿದ್ದೆ ಮಾತ್ರೆ ತಿನ್ನಿಸಿ, ಬಂದೂಕು ಹಣೆಗಿಟ್ಟು ನಿಖಾಹ್ ನಾಮಾಗೆ ಸಹಿ ಹಾಕಿಸಲಾಯಿತು ಅನ್ನೋದೇ ಸುಳ್ಳು. ತಾಹಿರ್ ಗೆ ಮೊದಲೇ ಮದುವೆಯಾಗಿರುವುದು ತನಗೆ ಗೊತ್ತೇ ಇರಲಿಲ್ಲ ಅಂತ ಉಜ್ಮಾ ಹೇಳಿದ್ದೂ ಸುಳ್ಳು ಅಂತ ತೋರಿಸಲು ಅವಳೇ ತಾಹಿರ್ ಗೆ ಮಾಡಿದ ವಾಟ್ಸ್ಯಾಪ್ ಮೆಸ್ಸೇಜ್ ಗಳಿದ್ದವು. ಅದರಲ್ಲಿ "ಒಂದು ವೇಳೆ ತನ್ನ ಅಣ್ಣ ಏನಾದರೂ ತಾಹಿರ್ ನಲ್ಲಿ ವಿಚಾರಿಸಿದರೆ... ತಾಹಿರ್ ತನಗೆ ಮೊದಲೇ ಮದುವೆಯಾಗಿ ನಾಲ್ಕು ಮಕ್ಕಳಿರುವ ವಿಚಾರ ತಿಳಿಸಬೇಡ... ವಿದ್ಯಾಭ್ಯಾಸದ ಬಗ್ಗೆ ಕೇಳಿದರೆ ಡಿಗ್ರಿ ಆಗಿದೆ ಅಂತ ಅನ್ನು.." ಅಂತ ವಾಟ್ಸ್ಯಾಪ್ ಮೆಸೇಜ್ ಕಳಿಸಿದ ಉಜ್ಮಾ... ಈಗ ಇಲ್ಲಿ ಭಾರತಕ್ಕೆ ಮರಳಿ ತನಗೆ ತಾಹಿರ್ ಮೊದಲೇ ಮದುವೆಯಾದ ವಿಚಾರವೇ ತಿಳಿದಿರಲಿಲ್ಲ ಅಂತ ಹಸೀ ಸುಳ್ಳು ಹೇಳುತ್ತಾಳೆ.

ಸುಂದರ ಇಸ್ಲಾಮಿಕ್ ರಾಷ್ಟ್ರವೊಂದರಲ್ಲಿ ನಾಲ್ಕು ಮಕ್ಕಳ ತಂದೆಯೊಂದಿಗೆ ಎರಡನೇ ಪತ್ನಿಯಾಗಿ ಜೀವಿಸಲು ಸಂಭ್ರಮದಿಂದ ಹೋದವಳು ಪಾಕಿಸ್ತಾನದ ಅಸಲಿಯತ್ತು ನೋಡಿ ಬೆಚ್ಚಿ ಬಿದ್ದಳು. ೨೦೦೯ರಲ್ಲಿ ಅಲ್-ಖೈದಾ ಬುನೇರ್ ಅನ್ನು ವಶಪಡಿಸಿಕೊಂಡಿತ್ತು. ಇವರನ್ನು ಮುಗಿಸಲು ಪಾಕಿಸ್ತಾನೀ ಸೈನ್ಯ ಮತ್ತು ಅಮೆರಿಕಾದ ಡ್ರೋನ್ ಗಳು ಭಯಂಕರ ಹೋರಾಟದಲ್ಲಿ ತೊಡಗಿದ್ದವು. ಒಂದು ಯುದ್ಧ ಸದೃಶ ಪರಿಸ್ಥಿತಿಯಿಂದಲೇ ಬುನೇರ್ ನಲ್ಲಿ ಭಯದ ವಾತಾವರಣವಿತ್ತು. ಜತೆಗೆ ೨೦೧೫ರಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಬುನೇರ್ ತುಂಬಾ ಉರುಳಿಬಿದ್ದ ಛಿದ್ರ ಛಿದ್ರ ಕಟ್ಟಡಗಳದ್ದೇ ಸಾಲು-ಸಾಲು. ಇವೆಲ್ಲದರ ಮಧ್ಯೆ ಉದ್ದನೆಯ ಗಡ್ಡ ಬಿಟ್ಟುಕೊಂಡು ಕೈಯಲ್ಲಿ ಭಾರೀ ಬಂದೂಕುಗಳನ್ನು ಹಿಡಿದುಕೊಂಡಿರುವ ಅಲ್ಲಿನ ಗಂಡಸರು. ಅವರೊಬ್ಬೊಬ್ಬರಿಗೂ ಎರಡು ಮೂರು ಹೆಂಡಂದಿರು, ಮನೆ ತುಂಬಾ ಗಿಜಿಗುಡುವ ಮಕ್ಕಳು. ಹಗಲೂ ರಾತ್ರಿಯೆನ್ನದೆ ಆಗಾಗ ಸಿಡಿಯುವ ಗುಂಡುಗಳ ಸಡ್ಡು. ಸುಂದರ ಇಸ್ಲಾಮಿಕ್ ದೇಶ ಪಾಕಿಸ್ತಾನವೆಂಬ ಸ್ವರ್ಗದ ಕಲ್ಪನೆಯನ್ನು ಬೆನ್ನಿಗೆ ಕಟ್ಟಿಕೊಂಡು ಅಲ್ಲಿಗೆ ಹಾರಿದ ಉಜ್ಮಾ ಎಂಬ ಪಾತರಗಿತ್ತಿಗೆ ಒಂದೇ ವಾರಕ್ಕೆ ಉಸಿರು ಕಟ್ಟಿತು. ಹಿಂದೂಸ್ತಾನ ಅದೆಷ್ಟು ಸುಂದರ ಅಂತನ್ನಿಸತೊಡಗಿತ್ತು. ಹೇಗಾದರೂ ನರಕದಿಂದ ಪಾರಾಗಿ ಬರಲು ಉಜ್ಮಾ ನಾಟಕ ಶುರುಮಾಡಿದಳು.

ಉಜ್ಮಾ ನಮ್ಮಲ್ಲಿನ ಕೆಲ ಭಾರತೀಯ ಮುಸ್ಲಿಮರ ಪ್ರತಿನಿಧಿಯಾಗಿ ಕಾಣಿಸುತ್ತಲೇ. ಪಾಕಿಸ್ತಾನವೆಂಬುದು ಷರಿಯಾ ಕಾನೂನಿರುವ ಪರಮಾದ್ಭುತ ದೇಶ ಅಂತ ಭಾರತದಲ್ಲನ ಅಸಂಖ್ಯಾತ ಮುಸ್ಲಿಮರು ಅಂದುಕೊಂಡಿದ್ದಾರೆ. ಹಾಗಾಗಿಯೇ ಉಜ್ಮಾಳಂಥ ವಿದ್ಯಾವಂತರೂ 'ಪಾಕಿಸ್ತಾನದಲ್ಲಿ ಸೆಟಲ್ ಆಗುವ" ಹುಚ್ಚು ಕನಸು ಕಾಣೋದು. ಭಾರತದ ಮುಸ್ಲಿಮರಿಗಷ್ಟೇ ಅಲ್ಲ... ಹಲವಾರು ಸಿಕ್ಯುಲರ್ ಮಂದಿಗೂ ಪಾಕಿಸ್ತಾನದ ಮೋಹವಿದೆ. ೨೦೧೪ ರಲ್ಲಿ ಒಡಿಶಾ ಮೂಲದ ಬಾಲಂಗಿರ್ ವೈದ್ಯೆ ಡಾ. ಪ್ರತಿಮಾ ಸಾಹೂ ಹೀಗೆಯೇ ಫೇಸ್ ಬುಕ್ ನಲ್ಲಿ ಪರಿಚಯವಾದ ಪಾಕಿಸ್ತಾನದ ಹುಡುಗ ಮುಹಮ್ಮದ್ ಮಾಂಶಾ ಎಂಬಾತನ ಜೊತೆ ಪ್ರೇಮಪಾಶಕ್ಕೆ ಬಿದ್ದು, ಯಾರಿಗೂ ಹೇಳದೆ ಪಾಕಿಸ್ತಾನಕ್ಕೆ ಓಡಿ ಹೋಗಿ ಮದುವೆಯಾದಳು.

ಆದರೆ ವಿಚಿತ್ರ ನೋಡಿ. ಅತ್ತ ಉಜ್ಮಾ ತನ್ನ ಬಣ್ಣ-ಬಣ್ಣದ ಕನಸಿನ ಮುಂದಿನ ಜೀವನವನ್ನು ಪಾಕಿಸ್ತಾನದಲ್ಲಿ ಹುಡುಕಿಕೊಂಡು ಹೋಗಿ ಜೀವ ಉಳಿದರೆ ಸಾಕಪ್ಪ ಎಂದು ವಾಪಸ್ ಭಾರತಕ್ಕೆ ಮರಳಿದರೆ..... ಇಲ್ಲಿ ಬೆಂಗಳೂರಿನಲ್ಲಿ ಒಂದು ಘಟನೆ ನಡೆದು ಹೋಯಿತು. ಪಾಕಿಸ್ತಾನದ ಕಿರಾನ್ ಗುಲಾಂ ಅಲಿ ಮತ್ತು ಸಮೀರಾ ಎಂಬ ಹೆಣ್ಣು ಮಕ್ಕಳು ಮತ್ತು ಅವರಲ್ಲೊಬ್ಬಳ ಗಂಡ ಸಂಶುದ್ದೀನ್ ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದರು. ಕೇರಳದ ಮೊಹಮ್ಮದ್ ಶಿಹಾಬ್ ಎಂಬವನು ಕತಾರ್ ನಲ್ಲಿದ್ದಾಗ ಪಾಕಿಸ್ತಾನದ ಹುಡುಗಿಯೊಬ್ಬಳೊಂದಿಗೆ ಪ್ರೀತಿಯಾಯಿತಂತೆ. ಆಕೆಯನ್ನು ಭಾರತಕ್ಕೆ ನೇಪಾಳ ಮೂಲಕ ಕಳ್ಳದಾರಿಯಲ್ಲಿ ಕರೆತರುವಾಗ ಆಕೆಯ ಜೊತೆಗೆ ಆಕೆಯ ಗೆಳೆಯ ಮತ್ತು ಗೆಳತಿ ಕೂಡಾ ಭಾರತಕ್ಕೆ ಬಂದರಂತೆ. ಮೂವರು ಪಾಕಿಸ್ತಾನಿಗಳಿಗೂ ಅವರ "ಸುಂದರ ಇಸ್ಲಾಮಿಕ್ ದೇಶ' ದಲ್ಲಿ ಬದುಕು ನಡೆಸುವುದು ದುಸ್ತರವಾಗಿ, ಅವರಿಗೆ ಭಾರತವೇ ನೆಮ್ಮದಿಯ ಜಾಗ ಅಂತ ಅನಿಸಿತಂತೆ!!!

ಹೇಗಿದೆ ನೋಡಿ! ಇಲ್ಲಿಯ ವಿದ್ಯಾವಂತ ಹಾಗು ಇಂದಿನ ಪ್ರಚಲಿತ ವಿದ್ಯಮಾನಗಳ ಅರಿವಿರುವ ಡಾ. ಉಜ್ಮಾರಂಥವರು ತಮ್ಮ ಸುಂದರ ಬದುಕನ್ನು ಆರಿಸಿಕೊಂಡು ಪಾಕಿಸ್ತಾನಕ್ಕೆ ಹೋಗುತ್ತಾರೆ, ಮತ್ತು ಅಲ್ಲಿಯ ಪ್ರಜೆಗಳಿಗೆ ಭಾರತವೇ ಸುರಕ್ಷಿತವೆಂದು ಕದ್ದು-ಮುಚ್ಚಿ ದೇಶದ ಒಳ ನುಸುಳುತ್ತಾರೆ.

ದಿನಕ್ಕಿಪ್ಪತ್ತು ಬಾಂಬ್ ಸ್ಫೋಟಿಸುವ... ಐವತ್ತರವತ್ತು ಮಂದಿ ನಿಷ್ಪಾಪಿಗಳು ಬಲಿಯಾಗುವ ಪಾಕಿಸ್ತಾನವೆಂಬ ಕ್ಷುದ್ರ ದೇಶದ ಬಗ್ಗೆ ನಮ್ಮಲ್ಲಿ ಹಲವರಿಗೇಕೋ ಅತಿ ಪ್ರೀತಿ. ಅದರಲ್ಲೂ ಸಿನಿಮಾ ಮಂದಿಗೆ ಪ್ರೀತಿ ಕೊಂಚ ಹೆಚ್ಚೆ. ಬಾಲಿವುಡ್ ಖಾನ್ ಗಳು ಮೋದೀಜಿ ಬಂದ ಮೇಲೆ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿ ದೇಶ ಬಿಟ್ಟು ಹೋಗುವ ಪರಿಸ್ಥಿತಿ ಇದೆ ಅಂತ ಮಾಧ್ಯಮಗಳ ಮುಂದೆ ತುತ್ತೂರಿ ಊದುತ್ತಾರೆ! ಅಷ್ಟೇ ಯಾಕೆ ನಮ್ಮ ಕನ್ನಡ ಚಿತ್ರರಂಗದ ಇನ್ನು ಎಳೆಯ ನಟಿಮಣಿಯೊಬ್ಬಳು ಪಾಕಿಸ್ತಾನ ನಮ್ಮಂತೆಯೇ ಸುಂದರ ವಾದ ದೇಶ.... ಅಲ್ಲೂ ಒಳ್ಳೆಯವರಿದ್ದಾರೆ ಎಂದು ಪುಂಗಿ ಊದಿದ್ದೆ ಊದಿದ್ದು !!

ಅಷ್ಟಕ್ಕೂ ತಮ್ಮ ಸುಂದರ ಬದುಕನ್ನು ಮುಸಲ್ಮಾನರು ಪಾಕಿಸ್ತಾನದಲ್ಲಿ ಹುಡುಕಿ-ಕೊಂಡು ಹೋದರೆ, ಹೋಗಲಿ ಬಿಡಿ... ಆದರೆ ಮತ್ತೆ ವಾಪಸ್ ಬರುವ ವಿಚಾರ ಮಾತ್ರ ಬೇಡ ಅದು ಕೇವಲ One way journey ಮಾತ್ರ ಆಗಿರಲಿ!!!

Related posts