Infinite Thoughts

Thoughts beyond imagination

ಭಾರತೀಯ ಸೇನೆಯ ಮಹಾದಂಡನಾಯಕನನ್ನು ಅವಮಾನಿಸಿದ TheWire.in ಅಂತರ್ಜಾಲ ಪತ್ರಿಕೆ

ಜನರಲ್ ಬಿಪಿನ್ ರಾವತ್ ಮತ್ತು ಜಲಿಯನ್ ವಾಲಾ ಭಾಗ್ ಹತ್ಯಾಕಾಂಡದ ರೂವಾರಿ ಕರ್ನಲ್ ರೆಜಿನಾಲ್ಡ್ ಡೈಯರ್ ನನ್ನ ಹೋಲಿಸಿ ಎಡಚ ಸಿಕ್ಯುಲರ್ ಪ್ರೊಫೆಸರ್ ಪಾರ್ಥ ಚಟರ್ಜಿ TheWire.inಎಂಬ ಅಂತರ್ಜಾಲ ಪತ್ರಿಕೆಯಲ್ಲಿ ಒಂದು ಲೇಖನ ಬರೆದ. ಎಡಚರ ಕೊಳೆತು ನಾರುವ ಮನಸ್ಸಿಗೆ ಇದಕ್ಕಿಂತ ಕೀಳು ಯೋಚನೆ ಬಂದೀತೆ? ಈಗಂತೂ ಕೇಂದ್ರದಲ್ಲಿ ಮೋದೀಜಿ ಯವರ ಸರಕಾರ ಬಂದ ಬಳಿಕ ಗಂಜಿ ನೀರಿಗೂ ಗತಿಯಿಲ್ಲದಂತೆ ಪರದಾಡುವ ಪರಿಸ್ಥಿತಿಯಲ್ಲಿರುವ ಎಡಚ ಎಡಬಿಡಂಗಿ, ಲದ್ದಿಜೀವಿಗಳಿಗೆ ಭಾರತೀಯ ಸೇನೆಯ ಮೇಲೆಯೇ ಕಣ್ಣು, ಅದರಲ್ಲೂ ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿಗಳಾದ ಮೇಲೆ, ಭಾರತೀಯ ಸೈನಿಕರು ಬುರ್ಹಾನ್ ವಾನಿ ಯಂಥವರನ್ನು ೭೨ ಕನ್ಯೆಯರ ಬಳಿಗೆ ಪಾರ್ಸೆಲ್ ಮಾಡಿದ ಮೇಲೆ ಎಡಬಿಡಂಗಿಗಳಿಗೆ ಅಂಡು ಸುಟ್ಟಂತಾಗಿದೆ. ಸುಮ್ಮನೆ ಕೂರಲಿಕ್ಕೂ ಆಗದೆ ಮಲಗಲಿಕ್ಕೂ ಆಗದೆ ವಿಷಕಾರುತ್ತಾ ಪಾಕಿಸ್ತಾನದ ದಳ್ಳಾಳಿಗಳಂತೆ ವರ್ತಿಸುತ್ತಾರೆ.

ಇತ್ತೀಚೆಗೆ ಇವರ ಹೊಟ್ಟೆಯುರಿಗೆ ಕಾರಣವಾದದ್ದು ಫಾರೂಕ್ ಅಹ್ಮದ್ ಡರ್ ಎಂಬ ಪ್ರತ್ಯೇಕತಾ ವಾದಿಯನ್ನು ಜೀಪಿನ ಮುಂಭಾಗಕ್ಕೆ ಕಟ್ಟಿ ಕಲ್ಲೆಸೆತಗಾರರಿಂದ ಪಾರಾದ ಮೇಜರ್ ಲಿತುಲ್ ಗೊಗೋಯಿಗೆ ಸೇನೆಯ ಮಹಾದಂಡನಾಯಕ ಬಿಪಿನ್ ರಾವತ್ ಪ್ರಶಸ್ತಿ ನೀಡಿದ ಘಟನೆ.

ದೇಶಾದ್ಯಂತ ಎಡಚರು ಎದ್ದುಕುಳಿತು ಮಾನವ ಹಕ್ಕಿನ ಬಗ್ಗೆ, ಮಾತಾಡತೊಡಗಿದರು. ಎಡ ಸಿದ್ಧಾಂತದ ಪರ ಇರುವ ಪತ್ರಿಕೆಗಳಂತೂ ಇದರ ವಿರುದ್ಧ ಪುಂಖಾನುಪುಂಖವಾಗಿ ಬರೆದವು . ಸಿದ್ಧಾರ್ಥ ವರದರಾಜನ್ ಸಂಪಾದಕನಾಗಿರುವ ದಿ ವೈರ್ ಅಂತೂ ಇದೊಂದೇ ವಿಷಯದ ಮೇಲೆ ಹದಿನೇಳಕ್ಕೂ ಹೆಚ್ಚು ಲೇಖನಗಳನ್ನು ಬರೆಯಿತು! ಲೇಖನ ಸರಣಿಯ ಇತ್ತೀಚಿನ ಲೇಖನವೇ ಪಾರ್ಥ ಚಟರ್ಜೀ ಎಂಬ ತಲೆತಿರುಕ ಎಡಬಿಡಂಗಿ ಪ್ರೊಫೆಸರ್ ಬರೆದ ಲೇಖನ. ಅದರಲ್ಲಿ ನಮ್ಮ ಭಾರತೀಯ ಸೇನೆಯ ದಂಡನಾಯಕನ ಬಿಪಿನ್ ರಾವತ್ ರನ್ನೇ ಬ್ರಿಟಿಷ್ ಸರಕಾರದ ಕಟುಕ ಅಧಿಕಾರಿ ಜಲಿಯನ್ ವಾಲಾ ಭಾಗ್ ಹತ್ಯಾಕಾಂಡ ರೂವಾರಿ ಕರ್ನಲ್ ರೆಜಿನಾಲ್ಡ್ ಡೈಯರ್ ಗೆ ಹೋಲಿಸಿದ್ದು. ದೇಶದ ಸೈನ್ಯದ ಅತ್ಯುನ್ನತ ಹುದ್ದೆಯಲ್ಲಿರುವ, ತಮ್ಮ ಹಲವು ತಲೆಮಾರುಗಳಿಂದ ಸೇನೆಯಲ್ಲಿ ದೇಶ ಸೇವೆ ಮಾಡಿ, ತಾವೇ ದೇಶಕ್ಕೋಸ್ಕರ ನಲವತ್ತು ವರ್ಷಗಳಷ್ಟು ಸುಧೀರ್ಘ ಸೇವೆ ಸಲ್ಲಿಸಿದ ವೀರ ಯೋಧ ಬಿಪಿನ್ ರಾವತ್ ರನ್ನು ರೀತಿ ಅವಮಾನಿಸಿದ್ದಕ್ಕೆ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ. ಆದರೆ ಮೂರೂ ಬಿಟ್ಟ ನಾಚಿಕೆಗೆಟ್ಟ ಲದ್ದಿಜೀವಿಗಳಿಗೆ ಜನರ ಆಕ್ರೋಶ ಎಂಥದ್ದೆಂಬ ಅರಿವಿಲ್ಲ...!

ಜಲಿಯನ್ ವಾಲಾ ಭಾಗ್ ಹತ್ಯಾಕಾಂಡದ ಬಗ್ಗೆ ನಾವೆಲ್ಲ ಶಾಲಾ ಪಠ್ಯದಲ್ಲಿ ಓದಿದ್ದೇವೆ. ೧೯೧೯ ನೇ ಇಸವಿಯ ಏಪ್ರಿಲ್ ಹದಿಮೂರನೇ ತಾರೀಕು ಪಂಜಾಬದ ಅಮೃತಸರದ ಜಲಿಯನ್ ವಾಲಾ ಭಾಗ್ ನಲ್ಲಿ ಅಂದಾಜು ಇಪ್ಪತ್ತು ಸಾವಿರ ಜನ ಸೇರಿದ್ದರು. ಹೆಂಗಸರು ಮಕ್ಕಳೂ ಇದ್ದ ಜನರ ಗುಂಪು ಬೈಶಾಖಿ ಹಬ್ಬ ಆಚರಿಸಲು ಅಲ್ಲಿ ಸೇರಿದ್ದರು. ಜೊತೆಗೆ ಸ್ವಾತಂತ್ರ್ಯ ಹೋರಾಟದ ಕಾರಣವೂ ಇತ್ತು. ಇಂಥ ಅಸಹಾಯಕ ಗುಂಪಿನ ಮೇಲೆ ಕರ್ನಲ್ ಡೈಯರ್ ತನ್ನ ಸೈನಿಕರಿಂದ ಗುಂಡಿನ ಮಳೆ ಸುರಿಸಿದ. ಬ್ರಿಟಿಷರ ಅಧಿಕೃತ ದಾಖಲೆಯ ಪ್ರಕಾರವೇ ಅವತ್ತು ಸತ್ತವರು ೩೭೯ ಮಂದಿ. ಆದರೆ ನಿಜಕ್ಕಾದರೆ ಸಾವಿರಕ್ಕೂ ಹೆಚ್ಚು ಜನರು ಹತ್ಯಾಕಾಂಡಕ್ಕೆ ಬಲಿಯಾಗಿದ್ದರು. ಇದು ಜಗತ್ತಿನಾದ್ಯಂತ ಅಲ್ಲೋಲಕಲ್ಲೋಲ ಎಬ್ಬಿಸಿತು. ಬ್ರಿಟಿಷರು ತಮ್ಮ ಸೈನ್ಯಾಧಿಕಾರಿಯ ಅಮಾನುಷ ಕೃತ್ಯಕ್ಕೆ ಜಗತ್ತಿನ ಎದಿರು ಅವಮಾನಿತರಾದರು. ಇದಕ್ಕೆ ಪ್ರತೀಕಾರವಾಗಿಯೇ ದೇಶಭಕ್ತ ಉಧಮ್ ಸಿಂಗ್ ಮೈಕೆಲ್ ದ್ವೈಯೆರ್ ನನ್ನ ಗುಂಡು ಹಾರಿಸಿ ಕೊಂದದ್ದು. ಇದು ನಾವು ಓದಿದ ಇತಿಹಾಸ. ಇಂಥ ಕ್ರೂರ ಅಮಾನುಷ ಕೃತ್ಯವೆಸಗಿದ ಕರ್ನಲ್ ಡೈಯರ್ ನನ್ನು ನಮ್ಮ ಸೈನ್ಯದ ಮಹಾದಂಡನಾಯಕ ಬಿಪಿನ್ ರಾವತ್ ಅವರಿಗೆ ಹೋಲಿಸಿದ್ದು ಎಡಪಂಥೀಯರ ಕೊಳೆತು ಹೋದ ಮನಸ್ಥಿತಿಯನ್ನು ಸೂಚಿಸುತ್ತದೆ.

ದಿ ವೈರ್ ಅಂತರ್ಜಾಲ ಪತ್ರಿಕೆಯಲ್ಲಿ ಲೇಖನ ಬರೆದ ಪಾರ್ಥ ಚಟರ್ಜೀ ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್. ಮಾವೋವಾದಿಗಳ ಪರ ಕಣ್ಣೀರು ಸುರಿಸುವ ವಿಕೃತ ಮನುಷ್ಯ. ಇನ್ನು ದಿ ವೈರ್ ಸಂಪಾದಕ ಸಿದ್ಧಾರ್ಥ ವರದರಾಜನ್ ಪ್ರಬಲ ಎಡಪಂಥೀಯ ಪತ್ರಕರ್ತ. ಬಿಳಿಗಡ್ಡ ಬಿಟ್ಟು ಬುದ್ದಿಜೀವಿಯಂತೆ ಓಡಾಡುವ ನಕ್ಸಲ್ ಹಿತಚಿಂತಕ. ಪಾಕಿಸ್ತಾನದ ಪಕ್ಕಾ ಏಜಂಟನಂತೆ ವರ್ತಿಸುವ ಇವನಿಗೆ ಪಾಕಿಸ್ತಾನದ ತುಂಬಾ ಸ್ನೇಹಿತರಿದ್ದಾರೆ. ಆತ ಬಹಳ ಸಲ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾನೆ ಕೂಡಾ. ಜಾಲ ತಾಣದ ಹಿನ್ನೆಲೆ ಕುತೂಹಲಕರವಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲೇ ತಮಿಳುನಾಡಿನ ಹಿರಿಯ ಪೊಲೀಸು ಅಧಿಕಾರಿಯಾಗಿದ್ದ ಓಂಬಲಪಾಡಿ ಅಪ್ಪಾಸಾಮಿ ಮುತ್ತುಸಾಮಿಯ ಮಗ ಮುತ್ತುಸಾಮಿ ವರದರಾಜನ್ ಭಾರತದ ಹಿರಿಯ ..ಎಸ್ ಅಧಿಕಾರಿಯಾಗಿದ್ದಾತ. ಕಾಂಗ್ರೆಸ್ ಸರಕಾರದ ಕೃಪಾಕಟಾಕ್ಷದಿಂದ ಮುತ್ತುಸಾಮಿ ಬ್ರಿಟನ್ ನಲ್ಲಿ ಭಾರತದ ಪರ ಕೆಲಸ ಮಾಡಿದ . ಆದುದರಿಂದಲೇ ಇವನ ಮಕ್ಕಳಿಗೆ ವಿದೇಶದಲ್ಲೇ ಓದುವ ಅವಕಾಶ ದೊರೆಯಿತು. ದೊಡ್ಡಮಗ ಪತಂಜಲಿ ಅಲಿಯಾಸ್ ತುಂಕೂ ವರದರಾಜನ್ ಬಾಲ್ಯದಲ್ಲೇ ಎಡಪಂಥೀಯ ವಿಚಾರಧಾರೆ ಮೈಗೂಡಿಸಿಕೊಂಡು ಬಳಿಕ ಬ್ರಿಟಿಷ್ ಪ್ರಜೆಯಾಗಿ ಪತ್ರಕರ್ತನಾದ. ಅವನ ತಮ್ಮ ಸಿದ್ಧಾರ್ಥ ವರದರಾಜನ್ ಕೂಡಾ ಎಡಚನಾಗಿ ಅಮೆರಿಕಾದಲ್ಲಿ ನೆಲೆಸಿ ಅಮೆರಿಕಾದಲ್ಲಿ ಓದುತ್ತಿರುವಾಗಲೇ ಸ್ಟಾಲಿನ್ ಸಿದ್ಧಾಂತದಿಂದ ಪ್ರಭಾವಿತನಾಗಿ ಭಾರತೀಯ ವಿದ್ಯಾರ್ಥಿ ಸಂಘಟನೆಯೊಂದನ್ನು ಕಟ್ಟಿ ಭಾರತದ ವಿರುದ್ಧವೇ ಪ್ರತಿಭಟನೆಗಳನ್ನು ಮಾಡುತ್ತಿದ್ದ. ಬಳಿಕ ಪತ್ರಕರ್ತನಾದ, ಅಲ್ಲಿ ಕೆಲಕಾಲ ಲೆಕ್ಚರ್ ಹುದ್ದೆ ಕೂಡಾ ನಿರ್ವಹಿಸಿದ್ದ. ಅಮೇರಿಕದಲ್ಲಿ ಪತ್ರಕರ್ತನಾಗಿ ಕೆಲಸ ಮಾಡುವಾಗ ತನ್ನ ಪಾಕಿಸ್ತಾನೀ ಗೆಳೆಯರ ಮೂಲಕ ಅಫಘಾನಿಸ್ತಾನ ತೆರಳಿ ತಾಲಿಬಾನ್ ಕುರಿತು ವರದಿ ಮಾಡಿದ ಬಳಿಕ ಭಾರತಕ್ಕೆ ಬಂದು ಮೊದಲು ಟೈಮ್ಸ್ ಆಫ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿದ. ಬಳಿಕ ಹಿಂದೂ ಪತ್ರಿಕೆಯ ಸಂಪಾದಕನ ಹುದ್ದೆಗೇರಿದ. ಹಂತದಲ್ಲೇ ಸುಬ್ರಹ್ಮಣಿಯಂ ಸ್ವಾಮಿಯವರು ಸಿದ್ಧಾರ್ಥ ವರದರಾಜನ್ ಮೇಲೆ ಕೇಸು ದಾಖಲಿಸಿದ್ದು. ಅಮೆರಿಕ ಪ್ರಜೆಯಾಗಿರುವ ಸಿದ್ಧಾರ್ಥ ವರದರಾಜನ್ ಭಾರತೀಯ ಪತ್ರಿಕೆಯೊಂದರ ಸಂಪಾದಕನಾಗುವುದು ಕಾನೂನಿನ ಪ್ರಕಾರ ಅಪರಾಧವೆಂದು ವಾದಿಸಿದರು. ಕೇಸು ದಾಖಲಾಗುತ್ತಲೇ ಸಿದ್ಧಾರ್ಥ ವರದರಾಜನ್ ಹಿಂದೂ ಪತ್ರಿಕೆಗೆ ರಾಜೀನಾಮೆ ನೀಡಬೇಕಾಯಿತು. .

ಅಲ್ಲಿಂದ ಹೊರಬಿದ್ದ ಸಿದ್ಧಾರ್ಥ ವರದರಾಜನ್ ನಂತರ ದಿ ವೈರ್.ಇನ್ ಅನ್ನುವ ಹೆಸರಿನ ಒಂದು ಆನ್ ಲೈನ್ ಪತ್ರಿಕೆ ಆರಂಭಿಸಿದ. ಅವನ ಜೊತೆ ಅವನಷ್ಟೇ ವಿಕೃತಿಯುಳ್ಳ ಸಿದ್ಧಾರ್ಥ ಭಾಟಿಯಾ, ಎಂ.ಕೆ. ವೇಣು, ಮುಂತಾದವರು ಕೈಜೋಡಿಸಿದರು. ದೇಶದಲ್ಲಿ ಮೋದಿ ಸರ್ಕಾರ ಬಂದ ಮೇಲೆ ಕೊಳೆತ ಮನಸ್ಸಿನ ಲದ್ದಿಜೀವಿಗಳಿಗೆ ಸರಕಾರದ ನೆರವು ಸಿಗದೇ ಪರಿತಪಿಸುವಂತಾಗಿತ್ತು. ಅದಕ್ಕೆ ತಕ್ಕ ಹಾಗೆ ದೃಶ್ಯಮಾಧ್ಯಮಗಳು ಎಡಪಂಥೀಯ ಧೋರಣೆಯನ್ನು ನಿಧಾನವಾಗಿ ಕಳಚಿಕೊಳ್ಳತೊಡಗಿದವು. ಆಗ ಎಡಪಂಥೀಯ ಪತ್ರಕರ್ತರಿಗೊಂದು ತಮ್ಮದೇ ಗಂಜಿ ಕೇಂದ್ರ ಹುಟ್ಟಿಸಿಕೊಳ್ಳುವ ಅನಿವಾರ್ಯತೆ ಉಂಟಾಯಿತು.. ಅವರೆಲ್ಲ ಅಂತರ್ಜಾಲದ ಮೊರೆ ಹೋದರು. ಆಗ ಹುಟ್ಟಿಕೊಂಡ ಮೂರ್ನಾಲ್ಕು ಅಂತರ್ಜಾಲ ಪತ್ರಿಕೆಗಳಲ್ಲಿ ದಿ ವೈರ್ ಕೂಡ ಒಂದು. ಎಡಚ ಪತ್ರಕರ್ತರುಗಳೆಲ್ಲ ಸೇರಿ ಇದಕ್ಕೆಂದೇ "ಇಂಡಿಪೆಂಡಂಟ್ ಅಂಡ್ ಪಬ್ಲಿಕ್ ಸ್ಪಿರಿಟೆಡ್ ಮೀಡಿಯಾ ಫೌಂಡೇಶನ್" ಅಂತ ಶುರು ಮಾಡಿದರು. ಅದರಲ್ಲಿ ಟಿ.ಎಸ್.ನಿನನ್, ಸಿ.ಬಿ.ಭಾವೆ, ರಾಮಚಂದ್ರ ಗುಹಾ ಮುಂತಾದವರ ಗುಂಪು ಇತ್ತು. ಮೋದೀಜಿಯವರ ಸರಕಾರವನ್ನು ಟೀಕಿಸುವುದೇ ಇದರ ಕೆಲಸ. ಇದಕ್ಕೆ ದೇಣಿಗೆ ನೀಡಿದವರ ಪೈಕಿ ಅಮೀರ್ ಖಾನ್ ಪ್ರಮುಖ.! ಅಂದ ಹಾಗೆ ನಂದನ್ ನೀಲೇಕಣಿ ಹೆಂಡತಿ ರೋಹಿಣಿ ಕೂಡಾ ಇದರಲ್ಲಿ ಹಣ ಹೂಡಿದ್ದಾರೆ. ಆಶ್ಚರ್ಯ ಪಡಬೇಡಿ.... ನಮ್ಮ ಘನ ಜ್ಞಾನಪೀಠಿ, ಎಡಬಿಡಂಗಿ ಹಿಂದೂ ವಿರೋಧಿ ಮನಸ್ಥಿತಿಯ ಗಿರೀಶ್ ಕಾರ್ನಾಡರ ಮಗ ರಘು ಕಾರ್ನಾಡ್ ದಿ ವೈರ್ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿದ್ದಾನೆ!

ಇನ್ನು ತಂಡ ನೇರವಾಗಿಯೇ ಮಾವೋವಾದಿಗಳನ್ನು ಬೆಂಬಲಿಸುತ್ತದೆ ಎಂದರೆ ಆಶ್ಚರ್ಯಪಡಬೇಕಿಲ್ಲ!. ಛತ್ತೀಸಘಡದಲ್ಲಿನ ಹತ್ಯಾಕಾಂಡದಲ್ಲಿ ಇವರು ನೇರವಾಗಿಯೇ ತೊಡಗಿಸಿಕೊಂಡಿದ್ದಾರೆ. ಯಾಕೆಂದರೆ ಸಿದ್ಧಾರ್ಥ ವರದರಾಜನ್ ಹೆಂಡತಿಯೇ ದೆಹಲಿ ವಿಶ್ವ ವಿದ್ಯಾಲಯದ ಪ್ರೊಫೆಸರ್ ನಂದಿನಿ ಸುಂದರ್.! ಇವಳು ಹಿಂದೆ ಜೆ.ಏನ್.ಯು ದಲ್ಲಿ ಸತ್ಯಶೋಧನಾ ನಿಯೋಗ ಎಂಬ ನಾಟಕ ತಂಡ ಕಟ್ಟಿಕೊಂಡು ಬಸ್ತಾರ್, ದಾಂತೇವಾಡಾ ಮುಂತಾದ ಕಾಡುಗಳಿಗೆ ಭೇಟಿ ನೀಡುತ್ತಾಳೆ. ಅವಳ ಜೊತೆ ಜೆ.ಏನ್.ಯು ಪ್ರೊಫೆಸರ್ ಅರ್ಚನಾ ಪ್ರಸಾದ್, ಸಂಜಯ್ ಪರಾಟೆ ಮುಂತಾದವರೇ ಇರುತ್ತಾರೆ. ಇವರೇ ಮಾನವ ಹಕ್ಕುಗಳ ಹೆಸರಿನಲ್ಲಿ ಪೊಲೀಸರ ಮೇಲೆಯೇ ಹೈ ಕೋರ್ಟ್ , ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿ ಕಿರುಕುಳ ನೀಡುವುದು.

ಅಂದಹಾಗೆ ಸತ್ಯಶೋಧನಾ ನಿಯೋಗದ ಹೆಸರಿನಲ್ಲಿ ಈಕೆ ಪ್ರಕಟಿಸುವ ವರದಿ ಪ್ರಕಟವಾಗುವುದು ಸಬರಂಗ್ ಪತ್ರಿಕೆಯಲ್ಲಿ! ಇದು ತೀಸ್ತಾ ಸೆಟಲ್ವಾಡ್ ಮತ್ತವಳ ಪತಿ ಜಾವೇದ್ ಆನಂದ್ ನಡೆಸುವ ಪತ್ರಿಕೆ. ಇದೆ ತೀಸ್ತಾ ಸೆಟಲ್ವಾಡ್ ಮೋದೀಜಿಯವರ ವಿರುದ್ಧ ಗುಜರಾತ್ ಗಲಭೆಗೆ ಸಂಬಂಧಿಸಿ ಅವರ ಮೇಲೆ ಸುಳ್ಳು ಕೇಸು ದಾಖಲಿಸಿ ಕಿರುಕುಳ ನೀಡಿದ್ದು.

ಅಂದಹಾಗೆ ಇತ್ತೀಚೆಗೆ ಬಸ್ತಾರ್ ನಿವಾಸಿ ಪರಿಶಿಷ್ಟ ಪಂಗಡದ ಶ್ಯಾಮ್ ನಾಥ್ ಬಘೇಲ್ ಎಂಬಾತನನ್ನು ನಕ್ಸಲರು ಹತ್ಯೆ ಮಾಡಿದರು. ಆತ ನಕ್ಸಲರಿಗೆ ಸಹಾಯ ಮಾಡದೇ ಪೊಲೀಸರಿಗೆ ಸಹಾಯ ಮಾಡಿದ್ದೇ ಅವನ ತಪ್ಪಾಗಿತ್ತು. ತನ್ನ ಅಧ್ಯಯನ ಪ್ರವಾಸದ ಸೋಗಿನಲ್ಲಿ ಅಲ್ಲಿಗೆ ತೆರಳಿ ಶ್ಯಾಮ್ ನಾಥನನ್ನು ನಕ್ಸಲರ ಜೊತೆಗೆ ಸೇರುವಂತೆ ಪುಸಲಾಯಿಸಿದಳು ನಂದಿನಿ ಸುಂದರ್ ಹಾಗು ಅವಳ ತಂಡ. ಆದರೆ ಅದಕ್ಕೆ ಆತ ಒಪ್ಪದಿದ್ದುದರಿಂದಲೇ ಆತನನ್ನು ನಕ್ಸಲರು ಕೊಂದರು.

ಕೊಲೆ ಕೇಸಿನಲ್ಲಿ ನೇರವಾಗಿ ಸಿದ್ಧಾರ್ಥ್ ವರದರಾಜನ್ ಹೆಂಡತಿ ನಂದಿನಿ ಸುಂದರ್ ಮೇಲೆಯೇ ಕೊಲೆ ಪ್ರಕರಣ ದಾಖಲಾಯಿತು!

ಒಂದು ತಂಡ ಅತ್ತ ಜಾರ್ಖಂಡ್, ಛತ್ತೀಸಘಡ ಮುಂತಾದ ಕಡೆ ನಕ್ಸಲರನ್ನು ಬೆಂಬಲಿಸುತ್ತದೆ, ಮತ್ತೊಂದು ಕಡೆ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯ ವಿಚಾರ ಎತ್ತಿ ಅಲ್ಲಿನ ಉಗ್ರ ಪ್ರತ್ಯೇಕತಾ ವಾದಿಗಳನ್ನು ಬೆಂಬಲಿಸಿ ಸೈನ್ಯವನ್ನೇ ವಿರೋಧಿಸುತ್ತದೆ . ಈಗಂತೂ ವಿಕೃತರ ಗುಂಪು ನಮ್ಮ ಸೇನೆಯ ಮಹಾ ದಂಡನಾಯಕರನ್ನೇ ಅವಮಾನಿಸುವ ಮಟ್ಟ ತಲುಪಿದ್ದಾರೆ. ಇದೊಂದು ದೊಡ್ಡ ಷಡ್ಯಂತ್ರದ ಭಾಗ. ಯಾವಾಗ ಕಾಶ್ಮೀರದಲ್ಲಿ ಪ್ರತ್ಯೇಕತಾ ವಾದಿಗಳಿಗೆ ತೊಂದರೆ ಯಾಗುತ್ತದೋ ಆಗೆಲ್ಲಾ ಇದೇ ಎಡಬಿಡಂಗಿಗಳ ಗುಂಪು ಎಚ್ಛೆತ್ತು ಕೊಳ್ಳುತ್ತದೆ.

ಕಳೆದ ಮೂರು ವರ್ಷಗಳಲ್ಲಿ ಮೋದೀಜಿಯವರ ಸರಕಾರ ಬಂದ ಮೇಲೆ ಉಗ್ರಗಾಮಿಗಳನ್ನು ಒಬ್ಬೊಬ್ಬರನ್ನಾಗಿ ೭೨ ಕನ್ಯೆಯರ ಬಳಿಗೆ ಕಳುಹಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಬಂದೂಕು ಹಿಡಿದವರಿಗೆ ಕಲ್ಲೆಸೆಯುತ್ತ ಸಾಥ್ ನೀಡುವವರಿಗೂ ಪೆಲ್ಲೆಟ್ ಗನ್ ರುಚಿ ತೋರಿಸಲಾಗಿದೆ. ಯಾವಾಗ ಪೆಲ್ಲೆಟ್ ಗನ್ ಗಳಿಂದ ತೊಂದರೆಯಾಗುತ್ತದೆ ಎಂಬುದು ಮನದಟ್ಟಾಯಿತೋ ಬರ್ಖಾ ದತ್ ಥರದವರು ಪೆಲ್ಲೆಟ್ ಗನ್ ಗಳಿಂದ ಅಮಾಯಕ ಮಕ್ಕಳ ಕಣ್ಣುಗಳೇ ಕುರುಡಾಗುತ್ತದೆಂಬ ವರಾತ ತೆಗೆಯುತ್ತಾರೆ. ಯಾವಾಗೆಲ್ಲಾ ನಮ್ಮ ಭದ್ರತಾ ಪಡೆಗಳ ಕೈ ಮೇಲಾಗುತ್ತದೋ, ಆಗೆಲ್ಲಾ ನಮ್ಮ ನಾಡಿನ ಲದ್ದಿಜೀವಿಗಳ ಗುಂಪು ಎದ್ದುಕುಳಿತು ನಮ್ಮ ಸೈನ್ಯದ ವಿರುದ್ಧವೇ ಅಪಸ್ವರದ ಕೂಗು ಹಾಕುತ್ತದೆ. ಆದರೆ ಇವರೆಲ್ಲಾ ಯಾಕಾಗಿ ಹೀಗೆ ಮಾಡುತ್ತಾರೆ? ಇದರಿಂದ ಇವರಿಗೆಲ್ಲಾ ಏನು ಲಾಭ ಅಂತ ಪ್ರಶ್ನೆಗಳೇಳುತ್ತವೆ.

ಯಾಕಂದರೆ ಇವರಲ್ಲಿ ಹೆಚ್ಚಿನವರಿಗೆ ಬದುಕುವುದಕ್ಕೆ ಇದೊಂದೇ ದಾರಿ. ಸದಾ ವಿಮಾನಗಳಲ್ಲೇ ದೇಶ ವಿದೇಶ ಸುತ್ತುವ ಇವರ ವೈಭವೋಪೇತ ಜೀವನ ಶೈಲಿಗೆ ಹಣ ಎಲ್ಲಿಂದ ಬರುತ್ತದೆ.? ಇದರ ಬಗ್ಗೆ ಒಂದು ಸರಿಯಾದ ತನಿಖೆಯಾದರೆ ಖಂಡಿತಾ ಇವರೆಲ್ಲಾ ಸಿಕ್ಕಿಬೀಳುತ್ತಾರೆ.

ಈಗಾಗಲೇ ಕಾಶ್ಮೀರದ ಹುರಿಯತ್ ನಾಯಕರಿಗೆ ಪಾಕಿಸ್ತಾನದಿಂದ ಬರುವ ದೇಣಿಗೆ ಮೂಲದ ಮೇಲೆಯೇ ಏನ್.. ದಾಳಿ ನಡೆಸಿದೆ. ಅತ್ತ ಸಿ.ಬಿ. ತಂಡದಿಂದ ಎನ್.ಡಿ ಟಿ.ವಿ ಮುಖ್ಯಸ್ಥ ಪ್ರಣಯ್ ಜೇಮ್ಸ್ ರಾಯ್ ಮನೆ ಮತ್ತು ಆಫೀಸುಗಳಲ್ಲಿ ದಾಳಿಮಾಡಲಾಗಿದೆ ... ಇದಲ್ಲದೆ ಎನ್.ಡಿ ಟಿ. ವಿ ಮತ್ತು ಚಿದಂಬರಂ ಸೇರಿ ಮಾಡಿರುವ ಐದೂವರೆ ಸಾವಿರ ಕೋಟಿ ರೂಪಾಯಿಗಳ ಭಾರೀ ದೊಡ್ಡ ಹಗರಣದ ತನಿಖೆಯೂ ನಡೆಯುತ್ತಿದೆ... ಮೋದೀಜಿಯವರ ಸರಕಾರ ಬಂದ ನಂತರ ವಿಕೃತ ಮನಸಿನ ಎಡಚರಿಗೆ ಗಂಟಲು ಮತ್ತು ಇತರ ಕಡೆಯ ಪಸೆ ಆರಿದೆ. ಬರುತ್ತಿದ್ದ ಹಡಬೆ ದುಡ್ಡಿಗೂ ಈಗ ಕತ್ತರಿ ಬಿದ್ದಿದೆ. ಸರಕಾರೀ ಪ್ರಾಯೋಜಿತ ಗಂಜಿಕೇಂದ್ರಗಳ ಆಸರೆ ತಪ್ಪಿದೆ.

ಅಂದಹಾಗೆ ದಿ ವೈರ್ ಅಂತರ್ಜಾಲ ಪತ್ರಿಕೆಯ ಸಂಪಾದಕ ಸಿದ್ಧಾರ್ಥ ವರದರಾಜನ್ ೨೦೦೩ ರಲ್ಲಿ "ಗುಜರಾತ್ - ದಿ ಮೇಕಿಂಗ್ ಆಫ್ ದಿ ಟ್ರ್ಯಾಜಿಡಿ " ಎಂಬ ಪುಸ್ತಕ ಬರೆದು ಮೋದಿಯವರನ್ನು ಹಿಗ್ಗಾ ಮುಗ್ಗಾ ತೆಗಳಿಯೇ ಹಿಂದೂ ಪತ್ರಿಕೆಯ ಸಂಪಾದಕ ಹುದ್ದೆ ಗಿಟ್ಟಿಸಿಕೊಂಡದ್ದು. ಈಗ ಬಿಜೆಪಿ ನೇತೃತ್ವದ ಸರಕಾರದ ಆಡಳಿತ ನೋಡಲಿಕ್ಕಾಗದೆ ಇವರೆಲ್ಲಾ ಜೊತೆಯಾಗಿಯೇ ಅಪಸ್ವರದ ಕೋರಸ್ ಹಾಡತೊಡಗಿದ್ದಾರೆ. ಮೊನ್ನೆ ಮೊನ್ನೆ ಕೇರಳದ ಕಮ್ಯುನಿಸ್ಟ್ ಸರಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾರತೀಯ ಸೈನಿಕರು ರೇಪ್ ಮಾಡುತ್ತಾರೆ ಅಂತಂದು ಭಾರತೀಯ ಸೇನೆಗೆ ಅಗೌರವ ತೋರಿದ್ದರು. ಈಗ ಇವರೆಲ್ಲರ ಅಧಿನಾಯಕ ಪ್ರಕಾಶ್ ಕಾರಟ್ ಸೈನ್ಯವನ್ನು ಅವಮಾನಿಸುವ ರೀತಿಯಲ್ಲಿ ಲೇಖನ ಬರೆದಿದ್ದಾನೆೆ. ಪಾಪ ಪ್ರಕಾಶ್ ಕಾರಟ್ ಗೆ ಪ್ರಣಯ್ ಜೇಮ್ಸ್ ರಾಯ್ ಮತ್ತವನ ಹೆಂಡತಿ ರಾಧಿಕಾ ರಾಯ್ ಮನೆಗೆ ಸಿ.ಬಿ. ದಾಳಿಮಾಡಿದ್ದನ್ನು ತಡೆಯಲಿಕ್ಕಾಗುತ್ತಿಲ್ಲ... ಯಾಕೆಂದರೆ ಪ್ರಕಾಶ್ ಕಾರಟ್ ಪತ್ನಿ ಬೃಂದಾ ಕಾರಟ್ ಸಹೋದರಿಯೇ ರಾಧಿಕಾ ರಾಯ್ ! ಹೀಗೆ ಎಡಬಿಡಂಗಿಗಳೆಲ್ಲಾ ಒಂದಾಗಿ ಮೋದೀಜಿ ಸರಕಾರದ ಮೇಲಿರುವ ತಮ್ಮ ಅಸಮಾಧಾನವನ್ನು ನಮ್ಮ ಸೇನೆಯ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ.. !

Related posts