ಮಧ್ಯಪ್ರದೇಶದ ರೈತ ಚಳುವಳಿಯ ಹಿಂಸಾಚಾರದ ಹಿಂದೆ ರಕ್ತಪಿಪಾಸು ಕಾಂಗ್ರೆಸ್ಸಿನ ಕೈ ಹಾಗು ಕೊಳೆತ ಧರಿದ್ರ ಮನಸ್ಸು!
ಇಂಥದ್ದೊಂದು ಘಟನೆ ನಿರೀಕ್ಷಿತವೇ ಆಗಿತ್ತು. ಮೋದೀಜಿಯವರ ಕೇಂದ್ರ ಸರಕಾರದ ಕೂದಲೂ ಕೊಂಕಿಸಲಾಗದೆ ಹತಾಶವಾಗಿದ್ದ ಕಾಂಗ್ರೆಸ್ ಮತ್ತು ಅದರ ಗೆಣೆಕಾರ ಸಿಕ್ಯುಲರ್ ಪಕ್ಷಗಳು ಇಂಥದ್ದೊಂದು ಹೇಯ ಕೃತ್ಯ ಎಸಗಬಹುದೆಂಬ ಅಂದಾಜಂತೂ ಇತ್ತು. ಆದರೆ ಅದನ್ನವರು ಮಧ್ಯ ಪ್ರದೇಶದಲ್ಲೇ ಮಾಡುತ್ತಾರೆ ಅನ್ನುವುದು ಸ್ವಲ್ಪ ಗೊಂದಲವಿತ್ತು. ಆದರೆ ಈ ಕಾಂಗ್ರೆಸ್ ಎಂಬ ಮುದಿ ರಕ್ತಪಿಪಾಸು ಪಕ್ಷ ಆ ರಾಜ್ಯವನ್ನೇ ಆಯ್ದುಕೊಳ್ಳಲು ಹಲವಾರು ಕಾರಣಗಳಿವೆ.
ಉತ್ತರ ಪ್ರದೇಶದ ಅವಮಾನಕಾರಿ ಸೋಲಿನ ನಂತರ ಕಾಂಗ್ರೆಸ್ ತನ್ನ ಗೆಣೆಕಾರರೊಡನೆ ಸೇರಿ ಹಲವು ಬಿಜೆಪಿ ರಾಜ್ಯ ಸರಕಾರಗಳು ಮತ್ತು ಮೋದೀಜಿಯವರ ಕೇಂದ್ರ ಸರಕಾರದ ವಿರುಧ್ದ ಜನಾಭಿಪ್ರಾಯ ರೂಪುಗೊಳಿಸಲು ಹಲವಾರು ಬಾರಿ ಹತಾಶ ಪ್ರಯತ್ನ ನಡೆಸಿ ವಿಫಲವಾಗಿತ್ತು. ತಮಿಳುನಾಡಿನಿಂದ ರಾಜಧಾನಿ ದೆಹಲಿಗೇ ಬಂದು ಅರೆಬೆತ್ತಲೆಯಾಗಿ, ತಲೆಬುರುಡೆ ಹಿಡಿದು (ಆತ್ಮ ಹತ್ಯೆ ಮಾಡಿಕೊಂಡ ರೈತರದ್ದು ಎಂಬ ಹಸಿ ಸುಳ್ಳು ಹಬ್ಬಿಸಿ; ಅಸಲಿಗೆ ಈ ತಲೆ ಬುರುಡೆಗಳು ಮಾರುಕಟ್ಟೆಯಿಂದ ಕೊಂಡು ತಂದದ್ದೆಂಬುದು ನಂತರ ಬಯಲಾಯಿತು) ಹಾವು ಹೆಗ್ಗಣ ತಿಂದು ಮೂತ್ರ ಕುಡಿದು ರೈತರ ವೇಷದಲ್ಲಿ ಪ್ರತಿಭಟಿಸಿದ ತಂಡದ ಆಟ ಸೋಶಿಯಲ್ ಮೀಡಿಯಾ ಮೂಲಕ ಬಟಾಬಯಲಾಗಿ ಹೋದ ಮೇಲೆ ಅಷ್ಟೂ ಜನ ಪಾಪ ಬರಿಗೈಯ್ಯಲ್ಲಿ ತಮಿಳುನಾಡಿಗೆ ವಾಪಾಸು ಹೋದರು. ಆಗಲೇ ಈ ಡೂಪ್ಲಿಕೇಟ್ ರೈತ ಹೋರಾಟದ ನಾಟಕದಂತೆ ಕಾಂಗ್ರೆಸ್ ಮತ್ತದರ ದುಷ್ಟಕೂಟ ಈ ರೀತಿಯ ಅಸಹ್ಯ ಸಂಚು ಹೂಡುತ್ತದೆ ಎಂಬುದು ತಿಳಿದಿತ್ತು.
ಈ ಬಾರಿ ಮುಂಗಾರು ಪ್ರಾರಂಭವಾಗುವ ಹೊತ್ತಿನಲ್ಲೇ ರೈತರ ಸಮಸ್ಯೆಗಳನ್ನೆತ್ತಿಕೊಂಡು ರೈತರ ಸೋಗಿನಲ್ಲಿ ಹಿಂಸಾಚಾರ ಎಸಗಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಗಲಭೆಯೆಬ್ಬಿಸುವುದು, ಬಿಜೆಪಿ ರೈತವಿರೋಧಿಯೆಂದು ಬಿಂಬಿಸುವುದು, ಆ ಮೂಲಕ ಮೋದೀಜಿಯವರನ್ನು ಸಂಕಷ್ಟಕ್ಕೆ ಸಿಲುಕಿಸುವುದು..... ಇದು ಕಾಂಗ್ರೆಸ್ ಮತ್ತದರ ಬಾಲಂಗೋಚಿಗಳ ಮಾಸ್ಟರ್ ಪ್ಲ್ಯಾನ್ ಆಗಿತ್ತು. ಮೊದಲಿಗೆ ಮಹಾರಾಷ್ಟ್ರದಲ್ಲಿ ಈ ತಂತ್ರವನ್ನು ಪ್ರಾಯೋಗಿಕವಾಗಿ ಮಾಡಲಾಯಿತು. ಆದರೆ ಮುಖ್ಯಮಂತ್ರಿ ಫಡ್ನವೀಸರು ಸಮಸ್ಯೆ ಬಗೆಹರಿಸಿ ಕಾಂಗ್ರೆಸ್ ತಂತ್ರ ಯಶಸ್ವಿಯಾಗದಂತೆ ಮಾಡಿದರು. ಆದರೆ ಕೂಡಲೇ ಮಧ್ಯಪ್ರದೇಶದ ರೈತರನ್ನು ರೊಚ್ಚಿಗೆಬ್ಬಿಸಿ ರೈತರ ಹೆಸರಲ್ಲಿ ಹಿಂಸಾಚಾರ ಎಸಗುವ ಪ್ಲ್ಯಾನ್ ಸಿದ್ಧವಾಗಿತ್ತು. ಅದರ ಫಲವೇ ಮಂದ್ಸೌರ್ ನಲ್ಲಿನ ಗಲಭೆಗಳು. ಇದರ ಹಿಂದೆ ರೌಲ್ ವಿನ್ಸಿಯ ಆಪ್ತ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಪಾತ್ರವೂ ಇದೆ. ಯಾಕಂದರೆ ಹದಿನೆಂಟು ವರ್ಷಗಳ ಹಿಂದೆ ಕಾಂಗ್ರೆಸ್ಸಿನ ದಿಗ್ವಿಜಯ್ ಸಿಂಗ್ ಸರಕಾರವಿದ್ದಾಗ ಮಧ್ಯಪ್ರದೇಶದ ಮುಲ್ತಾಯ್ ನಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ರೈತರ ಸಂಖ್ಯೆ ಹದಿನೆಂಟು! ಆಗ ರೈತರ ಹೋರಾಟ ಸಂಘಟಿಸಿದ್ದು ಬಿಜೆಪಿಯೇನಲ್ಲ ... ಬದಲಿಗೆ ಇವತ್ತು ಕಾಂಗ್ರೆಸ್ ಜೊತೆ ಡ್ಯುಯೆಟ್ ಹಾಡುತ್ತಿರುವ ಜನತಾದಳ! ಈಗ ಕಾಂಗ್ರೆಸ್ ಅದೇ ಕೆಲಸವನ್ನು ಬಿಜೆಪಿ ಸರಕಾರದ ವಿರುದ್ಧ ಮಾಡಹೊರಟಿತು!
ಯಾವಾಗ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾದರೋ ಆಗಿನಿಂದಲೇ ಕೃಷಿ ಕ್ಷೇತ್ರದಲ್ಲಿ ಮಧ್ಯಪ್ರದೇಶ ಮಹತ್ತರ ಅಭಿವೃದ್ಧಿ ಹೊಂದತೊಡಗಿತು. ಕಳೆದ ಹತ್ತು ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಾದ ಅಮೋಘ ಅಭಿವೃದ್ಧಿ ಬಿಜೆಪಿಯ ಪಾರಂಪರಿಕ ವಿರೋಧಿಗಳಾದ ಎಡಪಂಥೀಯ ಪತ್ರಿಕೆಗಳಿಂದಲೂ ಪ್ರಶಂಸೆಗೊಳಗಾಗಿತ್ತು. ೨೦೦೪-೦೫ ರಲ್ಲಿ ಕೇವಲ ಶೇಕಡಾ ೪ ರಷ್ಟಿದ್ದ ಕೃಷಿ ಪ್ರಗತಿ ಸೂಚ್ಯಾಂಕ ೨೦೧೪-೧೫ ನೇ ಸಾಲಿನಲ್ಲಿ ಶೇಕಡ ಇಪ್ಪತ್ತನ್ನು ತಲುಪಿತ್ತು. ೨೦೦೪-೦೫ ರಲ್ಲಿ ೨೧೪ ಲಕ್ಷ ಟನ್ ಗಳಷ್ಟಿದ್ದ ಕೃಷಿ ಉತ್ಪಾದನೆ ೨೦೧೪-೧೫ ನೇ ಸಾಲಿನಲ್ಲಿ೪೫೦ ಲಕ್ಷ ಟನ್ ದಾಟಿ ಶೇಕಡ ೧೧೧ ರಷ್ಟು ಅಭಿವೃದ್ಧಿಯನ್ನು ದಾಖಲಿಸಿತ್ತು. ೨೦೦೪-೦೫ ರಲ್ಲಿ ಕೇವಲ ೪೬ ಲಕ್ಷ ಹೆಕ್ಟೇರ್ ಗಳಷ್ಟು ಭೂಮಿಗೆ ಮಾತ್ರ ನೀರಾವರಿ ಇದ್ದರೆ, ೨೦೧೪-೧೫ ನೇ ಸಾಲಿನಲ್ಲಿ ೯೬ ಲಕ್ಷ ಹೆಕ್ಟೇರ್ ಗಳಷ್ಟು ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿತ್ತು. ರಾಜ್ಯದ ಕೃಷಿ ತಲಾದಾಯ ದೇಶದಲ್ಲೇ ಅತಿವೇಗದ ಪ್ರಗತಿ ದಾಖಲಿಸಿ ಕಳೆದ ಐದು ವರ್ಷಗಳಿಂದ ಶೇಕಡಾ ೧೪೨ ರಷ್ಟು ಪ್ರಗತಿ ಕಂಡಿತ್ತು. ಮಧ್ಯಪ್ರದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿ ನಂಬಲ ಸಾಧ್ಯವಾಗಿತ್ತು. ಅದಕ್ಕೆ ತಕ್ಕಂತೆ ಈ ಬಾರಿ ಮಧ್ಯ ಪ್ರದೇಶದ ರೈತನಿಗೆ ಬಂಪರ್ ಬೆಳೆ ಬೇರೆ ಬಂದಿತ್ತು. ಬೆಳೆ ಹೆಚ್ಚಾದಾಗ, ಇಳುವರಿ ಹೆಚ್ಚಾದಾಗ, ಫಸಲು ಹೆಚ್ಚಳವಾದಾಗ ಸಹಜವಾಗಿಯೇ ಬೆಲೆಗಳು ಕೆಳಗಿಳಿಯುತ್ತವೆ. ಈ ಬಾರಿಯೂ ಹಾಗೆಯೆ ಆಯಿತು. ಅದಕ್ಕಾಗಿಯೇ ರೈತರು ಉತ್ತಮ ಬೆಂಬಲ ಬೆಲೆ ಕೊಡಬೇಕೆಂದು ಸರಕಾರವನ್ನು ಆಗ್ರಹಿಸಿದ್ದು. ಸರಕಾರವೂ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿತ್ತು. ಅಷ್ಟರಲ್ಲೇ ರೈತ ಚಳುವಳಿಯಲ್ಲಿ ಕಾಂಗ್ರೆಸ್ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದು.
ಈ ಬಾರಿ ಮಧ್ಯಪ್ರದೇಶದ ರೈತ ಚಳವಳಿಯನ್ನು ಹೇಗಾದರೂ ಹಿಂಸಾತ್ಮಕವಾಗಿಸಬೇಕೆಂಬ ತಂತ್ರದೊಂದಿಗೆಯೇ ಅದು ಶುರು ಮಾಡಿತು. ಆಗ ಕಾಂಗ್ರೆಸ್ ಆಯ್ಕೆ ಮಾಡಿಕೊಂಡದ್ದು ಸಂಘ ಪರಿವಾರದ ಭಾರತೀಯ ಕಿಸಾನ್ ಸಂಘದಲ್ಲಿದ್ದ. ಬಳಿಕ ಉಲ್ಟಾಹೊಡೆದ ತಥಾಕಥಿತ ರೈತ ನಾಯಕ ಶಿವಕುಮಾರ್ ಶರ್ಮಾ ಅಲಿಯಾಸ್ ಕಕ್ಕಾಜಿಯನ್ನು. ಈತ ಬಿಜೆಪಿ ಸರಕಾರದ ಷಡ್ಯಂತ್ರ ರೂಪಿಸಿ ೨೦೧೨ರಲ್ಲೇ ಹಿಂಸಾತ್ಮಕ ರೈತಚಳುವಳಿ ಮಾಡಿದ್ದ. ಈತ ತನಗೆ ಮೈನಿಂಗ್ ಲೈಸೆನ್ಸ್ ಬೇಕೆಂದು ಬೇಡಿಕೆ ಇಟ್ಟಾಗ ಶಿವರಾಜಸಿಂಗ್ ಒಪ್ಪಿರಲಿಲ್ಲ. ಹಾಗಾಗಿ ಆತ ಬ್ಲ್ಯಾಕ್ ಮೇಲ್ ಶುರುಮಾಡಿದ್ದ. ಸೊಪ್ಪು ಹಾಕದಿದ್ದಾಗ ತನ್ನದೇ ರೈತ ಸಂಘ ಶುರು ಮಾಡಿ ಹಿಂಸೆಗೆ ಪ್ರಚೋದಿಸಿದ್ದ. ಆಗ ಆತನ ವಿರುದ್ಧ ಹಲವಾರು ಕೇಸು ದಾಖಲಾಗಿತ್ತು. ಬಳಿಕ ಬಿಜೆಪಿ ವಿರುದ್ಧ ಕಳೆದ ವಿಧಾಸಭಾ ಚುನಾವಣೆಯಲ್ಲಿ ತನ್ನದೇ ರೈತಸಂಘದಿಂದ ಸ್ಪರ್ಧಿಸಿ ಸೋತಿದ್ದ. ಇದೆ ಶಿವಕುಮಾರ್ ಶರ್ಮಾನನ್ನು ಕಾಂಗ್ರೆಸ್ ತೆಕ್ಕೆಗೆ ಹಾಕಿಕೊಂಡು ಮಂದ್ಸೌರ್ ನಲ್ಲಿ ರೈತಚಳುವಳಿ ಪ್ಲ್ಯಾನ್ ಮಾಡಿತು.
ದೆಹಲಿಯ ವೈಫಲ್ಯ ಈ ಬಾರಿ ಆಗಬಾರದೆಂದು ಚಳುವಳಿಯನ್ನು ಮಂದ್ಸೌರ್ ನಿಂದಲೇ ಪ್ರಾರಂಭಿಸಿ ಅಲ್ಲಿನ ಸ್ಥಳೀಯ ಕಾಂಗ್ರೆಸ್ ನಾಯಕರನ್ನೂ ಇದರ ಹಿಂದೆ ರಹಸ್ಯವಾಗಿ ನಿಯೋಜಿಸಿತು. ದಿಗ್ವಿಜಯ್ ಸಿಂಗ್ ಆಪ್ತ ಫೈಝನ್ ಖಾನ್ ಗೆ ಉಸ್ತುವಾರಿಯನ್ನು ವಹಿಸಲಾಯಿತು. ಸಹಾಯಕ್ಕೆ ಕಾಂಗ್ರೆಸ್ ನ ಸ್ಥಳೀಯ ಎಂಎಲ್ಎ ಗಳಾದ ಶಕುಂತಲಾ ಖತಿಕ್, ಜೀತು ಪತ್ವಾರಿ, ಡಿ.ಪಿ ಧಾಕಡ್, ರಾಜೇಶ್ ಭಾರವ, ಭಗವತೀ ಪತಿದಾರ್ ಮುಂತಾದವರ ತಂಡವನ್ನು ನಿಯೋಜಿಸಲಾಯಿತು. ಗಲಭೆಯ ಹಿಂದಿನ ರಾತ್ರಿಯೇ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿ ಅವರನ್ನು ಉದ್ದೇಶಿಸಿ ಮಾತಾಡಿದ ಡಿ.ಪಿ ಧಾಕಡ್ ಏನೇ ಬಂದರೂ, ಯಾರೇ ಎದುರಾದರೂ, ಲಾರಿ ಬಸ್ ಮುಂತಾದ ವಾಹನಗಳನ್ನು ಸುಡುವಂತೆ ಪ್ರಚೋದನಕಾರಿ ಭಾಷಣ ಮಾಡಿದ. ಎಂಎಲ್ಎ ಗಳಾದ ಶಕುಂತಲಾ ಖತಿಕ್ ಮತ್ತು ಜೀತು ಪತ್ವಾರಿ ಕೂಡಾ ಜನರನ್ನು ಪ್ರಚೋದಿಸಿ ಹಿಂಸಾಚಾರ ನಡೆಸಿದರು.
ಇದೆಲ್ಲಕ್ಕೂ ಈಗ ವಿಡಿಯೋ ಸಾಕ್ಷ್ಯ ದೊರೆತಿದೆ. ಹಲವರ ಮೇಲೆ ಹತ್ತು ಸಾವಿರ ರೂಪಾಯಿಗಳ ಬಹುಮಾನವನ್ನೂ ಘೋಷಿಸಲಾಗಿದೆ. ಡಿ.ಪಿ ಧಾಕಡ್ , ರಾಜೇಶ್ ಭಾರವ, ಭಗವತೀ ಪತಿದಾರ್ ಮುಂತಾದವರೀಗ ತಲೆತಪ್ಪಿಸಿಕೊಂಡಿದ್ದಾರೆ. ಜೊತೆಗೇ ಹಿಂಸಾಚಾರವನ್ನು ಹಬ್ಬಿಸಲು ಫೇಸ್ ಬುಕ್, ವಾಟ್ಸಾಪ್ ಬಳಕೆಯೂ ಆಯಿತು. ಇಲ್ಲೂ ಸುಳ್ಳು ಸುದ್ದಿಗಳನ್ನ ಹರಡೋದಕ್ಕೆಂದೇ ಯೂತ್ ಕಾಂಗ್ರೆಸ್ ಕಾರ್ಯಕರ್ತರಿದ್ದರು. ವ್ಯಾಪಮ್ ಹಗರಣ ಬಯಲಿಗೆಳೆದೆ ಅಂತ ಕೊಚ್ಚಿಕೊಳ್ಳುವ ಡಾ ಆನಂದ್ ರಾಯ್ ಎಂಬಾತ ಕಾಶ್ಮೀರದಲ್ಲಿ ಸೈನಿಕರ ಗುಂಡೇಟಿಗೆ ಬಲಿಯಾದ ಉಗ್ರಗಾಮಿಗಳ ಫೋಟೋವನ್ನೇ ಟ್ವಿಟ್ಟರ್ ನಲ್ಲಿ ಹಾಕಿ ಇವರು ಕಾಶ್ಮೀರದ ಉಗ್ರರಲ್ಲ, ಬದಲಿಗೆ ಮಂದ್ಸೌರ್ ನಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ರೈತರ ಮಕ್ಕಳು ಅಂತ ಪೋಸ್ಟ್ ಮಾಡಿದ್ದ. ಹೀಗೆ ಕಾಂಗ್ರೆಸ್ ನಡೆಸಿದ ವಿಕೃತ ಕೃತ್ಯಗಳೆಲ್ಲವೂ ಒಂದೊಂದಾಗಿ ಬಯಲಾಗುತ್ತ ಬಂದಂತೆ ರೈತರ ಹಿಂಸಾತ್ಮಕ ಚಳವಳಿಯ ಅಸಲಿಯತ್ತು ಬಿಚ್ಚಿಕೊಳ್ಳುತ್ತಾ ಹೋಯಿತು.
ಗಲಭೆಯಲ್ಲಿ ಪಾಲ್ಗೊಂಡವರಲ್ಲಿ ಹೆಚ್ಚಿನವರು ರೈತರೇ ಅಲ್ಲ. ಜೀನ್ಸ್ ಪ್ಯಾಂಟ್ ಕೂಲಿಂಗ್ ಗ್ಲಾಸ್ ಹಾಕಿದ ಹುಡುಗರೂ ರೈತರಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಅಂಗಡಿಯಲ್ಲಿದ್ದ, ಲಾರಿಗಳಲ್ಲಿದ್ದ ವಸ್ತುಗಳನ್ನು ರಸ್ತೆಗೆ ಚೆಲ್ಲಾಡಿದರು. ಪೀಪಲ್ಯಾ ಪೊಲೀಸ್ ಠಾಣೆಗೆ ನುಗ್ಗಿ ಅದಕ್ಕೆ ಬೆಂಕಿಯಿಡಲು ಪ್ರಯತ್ನಿಸಿದವರಲ್ಲಿ ಪತಿದಾರ್ ಸಮುದಾಯದ ಮಂದಿಯೇ ಅಧಿಕವಿದ್ದರು. ಪತಿದಾರ್ ಆಂದೋಲನ ಮಾಡಿದ ಹಾರ್ದಿಕ್ ಪಟೇಲ್ ಕೈವಾಡವೂ ಈ ಗಲಭೆಗಳಲ್ಲಿದೆ. ಮಧ್ಯಪ್ರದೇಶ ಪತಿದಾರ್ ಸಮಾಜ್ ಅಧ್ಯಕ್ಷ ಮಹೇಂದ್ರ ಪತಿದಾರ್ ಹಾರ್ದಿಕ್ ಪಟೇಲ್ ಜೊತೆಗಾರ. ಪತಿದಾರ್ ಚಳುವಳಿಯನ್ನು ಕಾಂಗ್ರೆಸ್ ದುರುಪಯೋಗಪಡಿಸಿದ್ದು ಮಂದ್ಸೌರ್ ನ ಗಲಭೆಗಳನ್ನು ಗಮನಿಸಿದಾಗ ನಿಚ್ಚಳವಾಗುತ್ತದೆ. ಪೊಲೀಸರ ಗುಂಡೇಟಿಗೆ ಸಿಲುಕಿ ಪ್ರಾಣ ಕಳಕೊಂಡವರಲ್ಲಿ ಪತಿದಾರ್ ಸಮುದಾಯಕ್ಕೆ ಸೇರಿದವರೇ ಹೆಚ್ಚು ಹಾಗು ಅವರ್ಯಾರು ಕೃಷಿ ಭೂಮಿ ಹೊಂದಿದವರಾಗಿರಲಿಲ್ಲ.
ರೈತ ಚಳುವಳಿಯಲ್ಲಿ ರೌಲ್ ವಿನ್ಸಿ ಎಂಬ ವಿಧೂಷಕನನ್ನು ಮೆರೆಸಬೇಕೆಂಬ ಕಾಂಗ್ರೆಸ್ ಆಟಕ್ಕೂ ತೆರೆ ಬಿದ್ದಿದೆ. ಯಾಕಂದರೆ ಗಲಭೆಗಳಲ್ಲಿ ಕಾಂಗ್ರೆಸ್ ಪಾತ್ರವಿರುವುದು ಮೇಲ್ನೋಟಕ್ಕೇ ಎಲ್ಲರಿಗೂ ಈಗ ಮನದಟ್ಟಾಗಿದೆ. ಕೇವಲ ರಾಜಕೀಯ ಲಾಭಕ್ಕೋಸ್ಕರ ಅಮಾಯಕರನ್ನು ಬಲಿಗೊಟ್ಟ ಕಾಂಗ್ರೆಸ್ ರಕ್ತಪಿಪಾಸು ತಂತ್ರಗಳಿಗೆ ಜನ ಖಂಡಿತಾ ತಕ್ಕ ಪಾಠ ಕಲಿಸಲಿದ್ದಾರೆ.. ಅಷ್ಟಕ್ಕೂ ಕರ್ನಾಟಕದಲ್ಲಿ ಯಾವ ಪರಿ ರೈತರು ಆತ್ಮಹತ್ಯೆಗೆ ಶರಣಾದರು, ರಾಜ್ಯದಲ್ಲಿರುವ ತನ್ನದೇ ಪಕ್ಷದ ಮುಖ್ಯಮಂತ್ರಿಯನ್ನು ಪ್ರಶ್ನಿಸುವ ತಾಕತ್ತು ಈ ಜೋಕರ್ ರೌಲ್ ನಿಗೆ ಇಲ್ಲದಿರುವುದು ಸಹ ಈ ಮೂಲಕ ಸಾಬೀತಾಗಿದೆ.
ಅಂದ ಹಾಗೆ ಈಗಲೂ ಕಾಂಗ್ರೆಸ್ ಪರ ಅರಚಾಡುವ ಕೆಲ ಎಡಚ ಪತ್ರಕರ್ತರು ಮಂದ್ಸೌರ್ ನಲ್ಲಿನ ರೈತ ಚಳುವಳಿಯನ್ನು ಬಡ ಸಂಕಷ್ಟಕೀಡಾದ ರೈತರು ತಾವು ಬೆಳೆದ ಫಸಲಿಗೆ ಯೋಗ್ಯ ಬೆಲೆ ದೊರಕದ ಹಿನ್ನೆಲೆಯಲ್ಲಿ ರೈತರು ಮಾಡಿದ ಚಳವಳಿ ಅಂತ ಬಿಂಬಿಸಿದರಲ್ಲ... ಅವರಿಗೆಲ್ಲ ಶಾಕ್ ಆಗುವಂಥ ಸಂಗತಿಯೊಂದಿದೆ.
ಮಧ್ಯಪ್ರದೇಶ ಗೋಧಿ, ತೊಗರಿ, ಉದ್ದು, ಹೆಸರು ಮುಂತಾದ ಧಾನ್ಯಗಳಿಗೆ, ಸೋಯಾಬೀನ್ ಮುಂತಾದ ಎಣ್ಣೆಕಾಳುಗಳ ಕೃಷಿಗೆ ಹೆಸರುವಾಸಿ. ಆದರೆ ಈಗ ರೈತ ಚಳುವಳಿ ನಡೆಯುತ್ತಿರುವ ಮಂದ್ಸೌರ್ ನಲ್ಲಿನಯಾವೊಬ್ಬ ರೈತನೂ ಈ ಯಾವುದೇ ಬೆಳೆಯನ್ನೂ ಬೆಳೆಯುತ್ತಿಲ್ಲ...! ಆತ ಈರುಳ್ಳಿ- ಬೆಳ್ಳುಳ್ಳಿ ಕೂಡಾ ಬೆಳೆಯುವ ರೈತ ಅಲ್ಲ..! ಮಂದ್ಸೌರ್ ನಲ್ಲಿನ ರೈತರಲ್ಲಿ ಹೆಚ್ಚಿನವರು ಬಡವರಲ್ಲ..! ಯಾಕೆಂದರೆ ಅವರು ಬೆಳೆಯುವ ಬೆಳೆಗೆ ರೇಟು ಕುಸಿದಿಲ್ಲ... ಯಾವತ್ತಿಗೂ ಕುಸಿಯೋದಿಲ್ಲ... ಬದಲಿಗೆ ಪ್ರತಿವರ್ಷವೂ ಹೆಚ್ಚೇ ಆಗುತ್ತಿದೆ.
ಯಾಕೆಂದರೆ ಅವರು ಬೆಳೆಯುವುದು "ಅಫೀಮ್" ಬೆಳೆಯನ್ನು!!
ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲೇ ಮಂದ್ಸೌರ್ ಹೆಸರುವಾಸಿಯಾಗಿರೋದು "ಅಫೀಮ್" ಬೆಳೆಗೆ! ಭಾರತದಲ್ಲಿ ಗಸಗಸೆ ಗಿಡ ಬೆಳೆಯಲು ಮತ್ತು ಅಫೀಮ್ ತಯಾರಿಸಲು ಸರಕಾರದ ಪರವಾನಗಿ ಪಡೆದು ಬೆಳೆಯುವ ಕೆಲವೇ ಕೆಲವು ಜಿಲ್ಲೆಗಳಲ್ಲಿ ಮಂದ್ಸೌರ್ ಕೂಡಾ ಒಂದು ಮತ್ತು ಅತೀ ಹೆಚ್ಚಿನ ಅಫೀಮ್ ಬೆಳೆಯೋದೂ ಅಲ್ಲೇ ..! ಹಾಗಾಗಿ ಇಲ್ಲಿನ ಬಹುತೇಕ ರೈತರ್ಯಾರೂ ಬಡವರಲ್ಲ. ಮೊನ್ನೆ ನಡೆದ ಗಲಭೆಗಳಲ್ಲಿ ಪಾಲ್ಗೊಂಡ ಯುವಕರು ಅಫೀಮ್ ಸೇವಿಸಿ ಅದರ ಮತ್ತಿನಲ್ಲೇ ಹಿಂಸೆ ನಡೆಸಿದ್ದರೂ ಆಶ್ಚರ್ಯ ಪಡಬೇಕಾಗಿಲ್ಲ...!