Infinite Thoughts

Thoughts beyond imagination

ಮುಂದೆ ಮರ ಕಡಿಯಲು ಸಹ ಅರಣ್ಯ ಇಲಾಖೆ ಈ ಅರಣ್ಯ ಹಕ್ಕಿನ ಸಮಿತಿಯಿಂದಲೇ ಪರವಾನಗಿ ಪಡೆಯಬೇಕು.

ಕಳೆದ ವಾರ ಯಲ್ಲಾಪುರ ತಾಲೂಕಿನ ಕಂಪ್ಲಿ ಗ್ರಾಮದಲ್ಲಿ ಬೆಟ್ಟ ಬಳಕೆದಾರರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದೆ. ಭಾಗದಲ್ಲಿ ಬೆಟ್ಟ ಬಳಕೆದಾರರ ಸಂಘ ರಚನೆಯಾಗಿರುವುದು ಸಂತಸ ತಂದಿದೆ. ಬೆಟ್ಟ ಬಳಕೆದಾರರ ಸಂಘದ ಮೂಲಕ ಒಂದು ದೊಡ್ಡ ಮಟ್ಟದ ಕ್ರಿಯಾ ಯೋಜನೆ ಕದಂಬದ ವತಿಯಿಂದ ತಯಾರಾಗುತ್ತಿದೆ.

ಇನ್ನು ಕೇವಲ - ವರ್ಷಗಳಲ್ಲಿ ನಮ್ಮ ಭಾಗದಲ್ಲಿ ದೊಡ್ಡ ಮಟ್ಟದ Fragrance (ಸುಗಂಧ ದೃವ್ಯ) industry ತಲೆ ಎತ್ತಲಿದೆ. ಬನವಾಸಿಯಲ್ಲೆ Aroma Industry ಬರಲಿದೆ ಎಂಬ ವಿಶ್ವಾಸ ನನ್ನದು. ಕದಂಬ ಕೇವಲ ಒಂದು ರಾಜವಂಶದ ಹೆಸರಿಗೆ ಸೀಮಿತವಲ್ಲ. ಕದಂಬವೆಂದರೆ ಒಂದು ಸುವಾಸನೆಯುಕ್ತ ಸುಗಂಧ ದೃವ್ಯ! ಇಂದು ನೆಲದಲ್ಲಿ ನಾವು ಬರುವ ದಿನಗಳಿಗೆ ಹಾಗು ಮುಂದಿನ ತಲೆಮಾರುಗಳಿಗೆ ಇಂತಹ ಬೆಳೆಗಳನ್ನು ಬೆಳೆದು ನಮ್ಮ ಭವಿಷ್ಯದ ಆರ್ಥಿಕ ದಾರಿಯನ್ನು ತೋರಿಸಬೇಕಾಗಿದೆ. ಬೆಳೆಗಳು ಕಡಿಮೆ ಶ್ರಮ ಬಯಸುತ್ತವೆ ಹಾಗು ಆದಾಯ ತರುವ ವ್ಯವಸಾಯಗಳಾಗಿರುತ್ತವೆ. ಎಷ್ಟು ದಿನವೆಂದು ಅದೇ ಅಡಿಕೆ ಮರ ಬೆಳೆ ಬೆಳೆಯುತ್ತೀರಿ? ಅದಕ್ಕೆ ಎಲ್ಲಿಂದ ನೀರು ತರುತ್ತೀರಿ? Palmrose ಎಂಬ ಸುಗಂಧ ಬೆಳೆಗೆ ಸುಮಾರು ವರ್ಷ ಶ್ರಮ ಹಾಕಿದರೆ ಮುಂದಿನ ವರ್ಷಗಳಲ್ಲಿ ತಾನೇ ತಾನಾಗಿ ಬೆಟ್ಟ- ಗುಡ್ಡಗಳಲ್ಲಿ ಹುಲುಸಾಗಿ ಬೆಳೆಯುತ್ತದೆ.

ಹಾಗೆ ಇಂತಹ ಸುಮಾರು ಸುಗಂಧ ಪುಷ್ಪ ಗಿಡಗಳು ಸುಮಾರು ಒಂದು ಎಕರೆಯಲ್ಲಿ ತರುವ ಆದಾಯ ನಿಮ್ಮ ೧೫ ಎಕರೆ ಅಡಿಕೆ ಕೂಡ ತರ್ಲಿಕ್ಕಿಲ್ಲ!!

ಮತ್ತೆ ಬೆಳೆಗಳು ನಮ್ಮ ಬೆಟ್ಟ-ಗುಡ್ಡಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತವೆಯೆಂದೇ, ಇಂತಹ ಗಿಡಗಳನ್ನು ಆಯ್ಕೆ ಮಾಡಿಕೊಂಡು ಬಳಕೆದಾರರ ಸಂಘದ ಮೂಲಕ ನಮ್ಮ ಬೆಟ್ಟ-ಗುಡ್ಡಗಳನ್ನು ಸಮೃದ್ಧಗೊಳಿಸೋಣ. ಬೆಟ್ಟ-ಗುಡ್ಡಗಳು ನಮ್ಮವೆಂದು ಅಲ್ಲಿ ತೋಟ ಮಾಡಿ ಅಡಿಕೆ, ತೆಂಗು ಬೆಳೆಯಿರಿ ಎನ್ನುತ್ತಿಲ್ಲ. ಬೆಟ್ಟ ಉಪಯೋಗಕ್ಕೂ ಬರಬೇಕು ಮತ್ತು ಅದರ ಉಸ್ತುವಾರಿಯನ್ನು ನಾವೇ ನೋಡಿಕೊಳ್ಳಬೇಕು. ಬೆಟ್ಟವು ಪರಿಸರಪೂರಕ ಅಭಿವೃದ್ಧಿಯಾಗಬೇಕು ಹಾಗು ಅದು ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬೇಕು. ಹಾಗಾಗಿ ಬೆಟ್ಟ ಬಳಕೆದಾರರ ಸಂಘ ಸ್ಥಾಪನೆಯಾಗಬೇಕು. ಗ್ರಾಮಸ್ಥರು ಸಂಘ ಸಂಸ್ಥೆ, ಸ್ವಸಹಾಯ ಸಂಘಗಳೊಂದಿಗೆ ಮುಂದುಬಂದು ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ಇದಕ್ಕೆ ಕದಂಬ (Kadamba) ವತಿಯಿಂದ Business Plan ರೂಪಗೊಳ್ಳುತ್ತಿದೆ.

ಯೋಜನೆ ಮುಂದಿನ ದಿನಗಳಲ್ಲಿ ಹಳ್ಳಿಗಳಿಂದ ಹೊರ ಹೋದವರನ್ನು ಸಹ ವಾಪಸ್ ಸ್ವಂತ ಊರಿಗೆ ಬರುವಂತೆ ಮಾಡುತ್ತದೆ. ಉದ್ಯೋಗ ಆರಿಸಿಕೊಂಡು ಹೊರಗೆ ಹೋದವರೆಲ್ಲ ಅಲ್ಲಿ ಲಾಭದಾಯಕವಾದ ಆರ್ಥಿಕ ಜೀವನ ನಡೆಸಲಾಗುತ್ತಿಲ್ಲ. ಇಂಥವರು ವಾಪಸ್ ಬರಲಿಕ್ಕೆ ಇಂತಹ ಯೋಜನೆಗಳು ಬೇಕಾಗುತ್ತದೆ.

ಇನ್ನು ಮುಖ್ಯವಾಗಿ ಬೆಟ್ಟ-ಗುಡ್ಡಗಳಿಗೆ ಪೂರಕವಾಗಿ ಕೇಂದ್ರ ಸರ್ಕಾರ ಕಾನೂನು ರೂಪಿಸಿರುವ ವಿಚಾರ ಭಾಗದಲ್ಲೇಕೆ, ದೇಶದ ಹಲವು ಭಾಗಗಳಲ್ಲಿ ಜನರ ಅರಿವಿಗೆ ಬಂದಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಅರಣ್ಯವಾಸಿಗಳ ಹಕ್ಕು ೨೦೦೬ ರಲ್ಲೇ ಸಂಸತ್ತಿನಲ್ಲಿ ಅನುಮೋದನೆಗೊಂಡಿದ್ದು ಪ್ರತಿ ಗ್ರಾಮದಲ್ಲಿಯೂ ಅರಣ್ಯ ಹಕ್ಕಿನ ಸಮಿತಿ (Forest Privilege Committee) ರಚನೆಯಾಗಬೇಕಿದೆ.

ಸುಮಾರು ಕಡೆ ಗ್ರಾಮಸ್ಥರು ಸಮಿತಿಯನ್ನು ಗ್ರಾಮ ಅರಣ್ಯ ಸಮಿತಿಯೆಂದು (Village Forest Committee) ತಪ್ಪು ಗ್ರಹಿಕೆ ಹೊಂದಿದ್ದಾರೆ. ಗ್ರಾಮ ಅರಣ್ಯ ಸಮಿತಿ ಕೇವಲ ಒಂದು ad-hoc body ಯಾಗಿದ್ದಾರೆ, ಅರಣ್ಯ ಹಕ್ಕಿನ ಸಮಿತಿ ಸಾಂವಿಧಾನಿಕವಾಗಿ ರೂಪಿತಗೊಂಡ ಸಮಿತಿಯಾಗಿರುತ್ತದೆ. ಆದರೆ ಗ್ರಾಮಸ್ಥರಿಗೆ ಬಗ್ಗೆ ಸಂಪೂರ್ಣ ಮಾಹಿತಿಯೇ ಇಲ್ಲದೆ ಅರಣ್ಯ ಇಲಾಖೆಯವರ ದರ್ಬಾರನ್ನೇ ಸಹಿಸಿಕೊಳ್ಳುತ್ತಿದ್ದಾರೆ. ದಿಕ್ಕಿನಲ್ಲಿ ಸರ್ಕಾರವಾಗಲಿ ಅಥವಾ ಅರಣ್ಯ ಇಲಾಖೆ ಅಧಿಕಾರಿಗಳಾಗಲಿ ಜನರಿಗೆ ಕಾನೂನಿನ ಮೂಲಕ ರಚನೆಯಾಗಿರುವ ಸಮಿತಿಯ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಕಾನೂನಿನ ಪ್ರಕಾರ ಗ್ರಾಮಸ್ಥರೇ ತಮ್ಮಲಿಯ ಅರಣ್ಯ ಪ್ರದೇಶದ ಬೆಟ್ಟ-ಗುಡ್ಡಗಳ ಉಸ್ತುವಾರಿ ನೋಡಿಕೊಂಡು ಅದರ management ಮಾಡುವವರಾಗಿರುತ್ತಾರೆ. ಸಮಿತಿಗೆ ಗ್ರಾಮ ಪಂಚಾಯತ್ ಚುನಾವಣೆಯಂತೆ ಸದಸ್ಯರು ಚುನಾಯುತರಾಗಬೇಕಾಗುತ್ತದೆ. ಮತ್ತೆ ಮುಂದುವರಿದು ಅದರ ಉಸ್ತುವಾರಿಯಂತೆ Tender ಕೂಡ ಅರಣ್ಯ ಹಕ್ಕಿನ ಸಮಿತಿಯೇ ಕರೆದು ಅದರ ಆದಾಯವನ್ನು ಗ್ರಾಮದ ಅಭಿವೃದ್ಧಿಗೆ ಖರ್ಚು ಮಾಡಬೇಕು. ಹೀಗೆ ಬೆಟ್ಟ ಗುಡ್ಡಗಳ ಅಭಿವೃದ್ಧಿ ಮಾಡಬೇಕೆಂದು ಅರಣ್ಯ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಬಗ್ಗೆ ಅರಣ್ಯ ಇಲಾಖೆಯ ಯಾವ ಅಧಿಕಾರಿಯು ಪ್ರಶ್ನಿಸುವಂತಿಲ್ಲ. ಮುಂದೆ ಮರ ಕಡಿಯಲು ಸಹ ಅರಣ್ಯ ಇಲಾಖೆ ಅರಣ್ಯ ಹಕ್ಕಿನ ಸಮಿತಿಯಿಂದಲೇ ಪರವಾನಗಿ ಪಡೆಯಬೇಕು.

ನನಗು ಸಹ ಇದರ ಬಗ್ಗೆ ಜಾಸ್ತಿ ಅರಿವಿರಲಿಲ್ಲ. ಕಾಯ್ದೆಗೆ ತಿದ್ದುಪಡಿ ಮಾಡುವಾಗ ಎಲ್ಲ ಅರಣ್ಯವಾಸಿಗಳಿಗೆ ಅನುಕೂಲವಾಗುವ ಹಾಗೆ ಅದರ target group ಅನ್ನು ವಿಸ್ತರಿಸುವ private member bill ಪ್ರಸ್ತಾಪವನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆಗೊಂಡ ನಂತರ ನಾನು ಬೇರೆ ಬೇರೆ ಯೋಜನೆಗಳಲ್ಲಿ ಸಕ್ರಿಯನಾಗಿದ್ದೆ. ಮೊನ್ನೆ ಒಡ್ಡಿಸ ರಾಜ್ಯಕ್ಕೆ ಭೇಟಿ ನೀಡಿದಾಗ ಅಲ್ಲಿಯ ಸಮುದಾಯ ಅಭಿವೃದ್ಧಿಯಲ್ಲಿ ಕಾನೂನಿನ ಸದ್ಬಳಕೆಯಾಗ್ಗಿದ್ದು ಗಮನಕ್ಕೆ ಬಂತು. ಕೇಂದ್ರ ಸರ್ಕಾರ ಅಲ್ಲಿನ ನಕ್ಸಲ್ ಪೀಡಿತ ಪ್ರದೇಶದಲ್ಲಿ(ಮುಖ್ಯವಾಗಿ ಜಿಲ್ಲೆಗಳಲ್ಲಿ) ಕಾನೂನನ್ನು ಜಾರಿಗೊಳಿಸಿ ಒಳ್ಳೆಯ ಸದುಪಯೋಗ ಪಡಿಸಿಕೊಂಡಿದೆ. ಇದೆ ಸಂದರ್ಭದಲ್ಲಿ ಅಲ್ಲೇ ನಮ್ಮ ರಾಜ್ಯದ IFS (ಅರಣ್ಯ) ಅಧಿಕಾರಿಗಳನ್ನು ಭೇಟಿ ಮಾಡುವ ಪ್ರಸಂಗ ಬಂದಿತು ಮತ್ತು ಅವರಲ್ಲಿ ಇದರ ಬಗ್ಗೆ ವಿಚಾರಿಸಿದಾಗ ಕಾನೂನನ್ನು ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸಿಲ್ಲವೆಂದು ಬಾಯಿಬಿಟ್ಟರು! ಮುಂದೆ ರಾಜ್ಯದ PCCF (ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ) ಯವರನ್ನು ಪ್ರಶ್ನಿಸಲಾಗಿ ಲೋಪವಾಗಿರುವುದನ್ನು ಒಪ್ಪಿಕೊಂಡು ಕೂಡಲೇ ಒಂದು ವಾರದೊಳಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಯೋಜಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.

ಹಿಂದೆ ಭೈರು೦ಬೆಯ ಶಾಲೆಯಲ್ಲಿ ಬೆಳೆದಿದ್ದ ಅಕೇಸಿಯಾ ಮರವನ್ನು ಗ್ರಾಮಸ್ಥರೇ ಕಡಿದಾಗ, ಅರಣ್ಯ ಇಲಾಖೆಯವರು ಬಂದು ಪ್ರಶ್ನಿಸಿದರು. ಆಗ ಗ್ರಾಮಸ್ಥರೇ ಅರಣ್ಯ ಹಕ್ಕಿನ ಸಮಿತಿ ಪರವಾನಗಿ ನೀಡಿದ ನಂತರ ಇದರ ಬಗ್ಗೆ ಕೇಳುವ ಅಥವಾ ಪ್ರಶ್ನಿಸುವ ಹಕ್ಕು ತಮಗಿಲ್ಲವೆಂದು ಅರಣ್ಯ ಅಧಿಕಾರಿಗಳ ಬಾಯಿ ಮುಚ್ಚಿಸಿದರು.

ಒಬ್ಬ ರಾಜಕಾರಣಿಯಾಗಿ ನನಗೆ ಮತ ನೀಡದ್ದಿದ್ದರು ಪರವಾಗಿಲ್ಲ ಆದರೆ ಗ್ರಾಮಸ್ಥರು ತಮ್ಮ ಸಾಂವಿಧಾನಿಕವಾದ ಹಕ್ಕಿನ ಬಗ್ಗೆ ಅರಿವಿದ್ದು, ತಮ್ಮ ಸುತ್ತ-ಮುತ್ತಲಿನ ಅದರಲ್ಲೂ ಅರಣ್ಯ ಪ್ರದೇಶದ ಬೆಟ್ಟ-ಗುಡ್ಡಗಳ ಬಗ್ಗೆ ಸಂಪೂರ್ಣ ಹಿಡಿತವಿಟ್ಟುಕೊಂಡು ಅದರ ಏಳಿಗೆಯ ಸಂಪೂರ್ಣ ಜವಾಬ್ದಾರಿ ಹೊಂದುವಂಥವರಾಗಬೇಕು. ಆಗಲೇ ನಾಯಕನೆನಿಸಿಕೊಂಡವನು ಸಮುದಾಯಕ್ಕೆ ಹೊಸ ದಿಕ್ಕು ಕೊಟ್ಟಹಾಗೆ ಆಗುತ್ತದೆ. ನಮ್ಮ ಬೆಟ್ಟ-ಗುಡ್ಡ ನಾವು ಉಳಿಸಿಕೊಳ್ಳಬೇಕು ಹಾಗು ಅದನ್ನು ಅಭಿವೃದ್ಧಿಪಡಿಸಿ ಸದುಪಯೋಗ ಪಡಿಸಿಕೊಳ್ಳಬೇಕು.

ಸಂದರ್ಭದಲ್ಲಿ ಸಂಕಲ್ಪ ಸಂಸ್ಥೆಯ ಶ್ರೀ ಪ್ರಮೋದ ಹೆಗಡೆ, ಬಿ.ಜೆ.ಪಿ ಜಿಲ್ಲಾ ಮಹಿಳಾ ಅಧ್ಯಕ್ಷೆಯಾದ ಶ್ರೀಮತಿ ರೇಖಾ ಹೆಗಡೆ, ಕಂಪ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪವನಕುಮಾರ ಕೆಸರಕರ್, ಯಲ್ಲಾಪುರ ಬಿ.ಜೆ.ಪಿ ಅಧ್ಯಕ್ಷರಾದ ಶ್ರೀ ರಾಮುನಾಯ್ಕ, ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶ್ರೀ ಮೋಹನದಾಸ ನಾಯ್ಕ, ಬಿ.ಜೆ.ಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ನರಸಿಂಹ ಕೋಣೆಮನೆ ಮುಂತಾದವರು ಉಪಸ್ಥಿತರಿದ್ದರು.

Related posts