ಹಿಂದೂ ವಿರೋಧಿ ಮಮತಾ ಬ್ಯಾನರ್ಜಿ ಅಲಿಯಾಸ್ ಮುಮ್ತಾಜ್ ಬೇಗಂ | ತಾರಕನಾಥ್ ದೇವಳಕ್ಕೆ ಮುಸ್ಲಿಂ ಅಧ್ಯಕ್ಷ ಫಿರ್ಹಾದ್ ಹಕೀಮ್
ಬಂಗಾಳದ ಹಿಂದೂಗಳು ತಮ್ಮ ಮುಖ್ಯಮಂತ್ರಿಯ ಹೆಸರು ಮಮತಾ ಬ್ಯಾನರ್ಜಿ ಅನ್ನೋದನ್ನೇ ಮರೆತಿದ್ದಾರೆ, ಮತ್ತಾಕೆಯನ್ನು ಮುಮ್ತಾಜ್ ಬೇಗಂ ಅಂತಲೇ ಕರೀತಿದ್ದಾರೆ. ತನ್ನ ಸುತ್ತಲೂ ತಲೆ ಮೇಲೆ ನೀರು ದೊಸೆ ಹಾಕಿ, ಉದ್ದುದ್ದ ರಂಗು-ರಂಗಿನ ಗಡ್ಡದ ಇಸ್ಲಾಮಿ ಮೌಲ್ವಿಗಳನ್ನೇ ಇಟ್ಟುಕೊಂಡು ಓಡಾಡುವ, ಥೇಟು ಮುಸ್ಲಿಂ ಹೆಂಗಸರ ರೀತಿಯೇ ತಲೆಸುತ್ತಾ ಶಾಲು ಹೊದ್ದು ನಮಾಜು ಮಾಡುವ ಮುಖ್ಯಮಂತ್ರಿಯನ್ನು ನೋಡಿ ನೋಡಿ ಅಲ್ಲಿನ ಹಿಂದುಗಳಿಗೆ ತಮ್ಮ ಮುಖ್ಯಮಂತ್ರಿಯ ಹೆಸರೇ ಮರೆತು ಹೋಗಿದೆ. ಅದಕ್ಕೆ ತಕ್ಕ ಹಾಗೆ ಮುಮ್ತಾಜ್ ಕೂಡಾ ತನ್ನ ಯಥಾನುಶಕ್ತಿ ಹಿಂದೂಗಳಿಗೆ ಕಿರುಕುಳ ಕೊಡುತ್ತಾ ಮುಸ್ಲಿಮರಿಗೆ ಕೈಮೀರಿ ಸಹಾಯ ಮಾಡುತ್ತಾ ಪಶ್ಚಿಮ ಬಂಗಾಳವನ್ನೂ ಕೂಡಾ ಪಕ್ಕದ ಬಾಂಗ್ಲಾ ದೇಶದಂತೆಯೇ ಇಸ್ಲಾಮಿ ಮಾಡಲು ಪಣ ತೊಟ್ಟಿದ್ದಾಳೇನೋ ಅನ್ನೋ ರೀತಿಯಲ್ಲಿ ವರ್ತಿಸುತ್ತಿದ್ದಾಳೆ. ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಮುಸ್ಲಿಮರ ತುಷ್ಟೀಕರಣ ಮಾಡುತ್ತಿರುವ ಮಮತಾ ಅಲಿಯಾಸ್ ಮುಮ್ತಾಜ್ ಈಗ ಅದರ ಪರಾಕಾಷ್ಠೆ ತಲುಪಿದ್ದಾಳೆ.
ಬಂಗಾಳದ ಹೂಗ್ಲಿ ಜಿಲ್ಲೆಯ, ಕೊಲ್ಕತ್ತಾದಿಂದ ಕೇವಲ ೬೦ ಕಿಲೋಮೀಟರು ದೂರವಿರುವ ತಾರಕೇಶ್ವರದಲ್ಲಿ ಇತಿಹಾಸ ಪ್ರಸಿದ್ಧ ತಾರಕಾನಾಥ ದೇವಾಲಯವಿದೆ. ಮೊನ್ನೆ ಅಲ್ಲಿಗೆ ಹೋದ ಮುಮ್ತಾಜ್, ಅಲ್ಲಿನ ಹಿಂದೂ ಭಕ್ತ ಬಾಂಧವರಿಗೆ ತಾನೇನೋ ಮಹದುಪಕಾರ ಮಾಡುತ್ತಿರುವಂತೆ ದೇವಳ ಮತ್ತು ಅದರ ಸುತ್ತಮುತ್ತಲ ಭಾಗಗಳ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ಐದು ಕೋಟಿ ರೊಪಾಯಿಗಳ ಅನುದಾನ ಘೋಷಣೆ ಮಾಡಿದಳು. ಇದೇನಪ್ಪಾ ದೀದಿಗ್ಯಾವಾಗ ಇಷ್ಟೊಳ್ಳೆ ಬುದ್ಧಿ ಬಂತೂ ಅಂತ ಜನ ಮೂಗಿನ ಬೆರಳಿಡೊವಷ್ಟರಲ್ಲೇ ಆಕೆ ತನ್ನ ವಕ್ರ ಇಸ್ಲಾಮಿ ಬುದ್ಧಿ ತೋರಿಸಿಯೇ ಬಿಟ್ಟಳು. ತಾರಕನಾಥ ದೇವಳದ ಅಭಿವೃದ್ಧಿಯ ಮೇಲುಸ್ತುವಾರಿ ನೋಡಿಕೊಳ್ಳಲು ದೇವಳದ ಸಮಿತಿಯ ಅಧ್ಯಕ್ಷನನ್ನಾಗಿ ತನ್ನ ಜೊತೆಗಾರನನ್ನೇ ನೇಮಿಸಿಬಿಟ್ಟಳು. ಆಕೆಯ ಈ ಕ್ರಮ, ಅಲ್ಲಿದ್ದ ಹಿಂದೂಗಳಷ್ಟೇ ಅಲ್ಲ, ದೇಶ ವಿದೇಶದಲ್ಲಿನ ಹಿಂದೂಗಳೂ ಕ್ರುದ್ದರಾದರು. ಯಾಕಂದರೆ ಮಮತಾ ಅಲಿಯಾಸ್ ಮುಮ್ತಾಜ್ ತಾರಕಾನಾಥ ದೇವಳದ ಅಧ್ಯಕ್ಷನಾಗಿ ನೇಮಿಸಿದ್ದು ತನ್ನ ಸರಕಾರದ ನಗರಾಭಿವೃದ್ಧಿ ಸಚಿವ ಫಿರ್ಹಾದ್ ಹಕೀಮನನ್ನು. ಇದು ದೀದಿಯ ಮುಸ್ಲಿಂ ತುಷ್ಟೀಕರಣ ಅಸಹ್ಯದ ಪರಮಾವಧಿಯೆ ಸರಿ!
ಫಿರ್ಹಾದ್ ಹಕೀಮ ಹೇಳಿ-ಕೇಳಿ ಧರಿದ್ರ ಇಸ್ಲಾಮ್ ಮತೀಯವಾದಿ. ಕಳೆದ ವರ್ಷ ನಡೆದ ಚುನಾವಣೆಯ ಸಮಯದಲ್ಲಿ ಮಲೀಹಾ ಹಮೀದ್ ಸಿದ್ದಿಖಿ ಅನ್ನೋ ಒಬ್ಬಳು ಮಹಿಳಾ ರಿಪೋರ್ಟರ್ ಹಕೀಮನ ಚುನಾವಣಾ ಪ್ರಚಾರ ವರದಿ ಮಾಡಲು ಬಂದಿದ್ದಳು. ಆಕೆಯನ್ನು ತಾನು ಪ್ರತಿನಿಧಿಸುವ ಕೊಲ್ಕೊತ್ತಾ ಪೋರ್ಟ್ ಕ್ಷೇತ್ರದ ಗಾರ್ಡನ್ ರೀಚ್ ಏರಿಯಾ ಗೆ ಕರೆದುಕೊಂಡು ಹೋದವನು "ಇದು ಮಿನಿ ಪಾಕಿಸ್ತಾನ' ಅಂತಂದ. ಆತ ಹೇಳಿದ್ದನ್ನು ಆಕೆ ತುಂಬಾ ಸಂತೋಷದಿಂದ ಹಾಗೆಯೇ ವರದಿಮಾಡಿದಳು. ಯಾಕಂದರೆ ಆಕೆ ಪಾಕಿಸ್ತಾನದ "ಡಾನ್" ಪತ್ರಿಕೆಯ ವರದಿಗಾರ್ತಿ.ತನ್ನದೇ ಕ್ಷೇತ್ರವನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದ ಫಿರ್ಹಾದ್ ಹಕೀಮನನ್ನ ದೀದಿ ಪಕ್ಕದಲ್ಲೇ ಮಂತ್ರಿ-ಸ್ಥಾನ ಕೊಟ್ಟು ಕೂರಿಸಿಕೊಂಡಳು. ಅದೇ ಹೊತ್ತಿಗೆ ಪಶ್ಚಿಮ ಬಂಗಾಳದ 'ನಾರದ ನ್ಯೂಸ್' ಒಂದು ಸ್ಟಿಂಗ್ ಆಪರೇಷನ್ ನಡೆಸಿ ಟಿಎಂಸಿ ಮಂತ್ರಿಗಳು ಎಂಜಲು ಹಣ ಸ್ವೀಕರಿಸುವುದನ್ನು ಬಯಲಿಗೆಳೆದಿತ್ತು. ಸಿಕ್ಕಿಬಿದ್ದ ಹಲವಾರು ಮಂತ್ರಿಗಳ ಪೈಕಿ ಫಿರ್ಹಾದ್ ಹಕೀಮ ಕೂಡಾ ಒಬ್ಬ. ಆದರೇನು ದೀದಿಯ ರಕ್ಷಣೆಯಿದ್ದದ್ದರಿಂದ ಆತನ ದೇಹದ ಯಾವ ಕೂದಲೂ ಕೊಂಕಲಿಲ್ಲ. ಈಗ ಅದೇ ಫಿರ್ಹಾದ್ ಹಕೀಮನನ್ನು ದೀದಿ ತಾರಕೇಶ್ವರ ದೇವಳ ಮತ್ತದರ ಸುತ್ತಮುತ್ತಲಿನ ಅಭಿವೃದ್ಧಿಗೆ ಅಧ್ಯಕ್ಷನಾಗಿ ನಿಯೋಜಿಸಿದ್ದಾಳೆ.
ಬಂಗಾಳದಲ್ಲಿ ಹಿಂದೂಗಳು ಹಲವಾರು ಕಡೆ ಅಲ್ಪಸಂಖ್ಯಾತರಾದರೂ ತಾರಕೇಶ್ವರದಲ್ಲಿ ಮಾತ್ರ ಶೇಕಡಾ ೯೩.೨೨ ರಷ್ಟಿದ್ದಾರೆ. ಅಲ್ಲಿನ ತಾರಕನಾಥ ದೇವಾಲಯ ೧೭೨೯ರಲ್ಲಿ ರಾಜಾ ವಿಷ್ಣುದಾಸ ಎಂಬವರಿಂದ ನಿರ್ಮಿತವಾದದ್ದು. ತಾರಕೇಶ್ವರ ಬಂಗಾಳ ಮಾತ್ರವಲ್ಲದೆ ದೇಶಾದ್ಯಂತ ಭಕ್ತರನ್ನು ಹೊಂದಿರುವ ಪುಣ್ಯಕ್ಷೇತ್ರಗಳಲ್ಲೊಂದು. ಇಲ್ಲಿ ಶಿವರಾತ್ರಿಯ ಸಂದರ್ಭ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುತ್ತಾರೆ. ಹೀಗೆ ಬಹಳ ಪ್ರಮುಖ ಶಿವ ದೇವಾಲಯವಾಗಿರುವ ತಾರಕನಾಥ ದೇವಸ್ಥಾನದ ಮೇಲೆ ಮುಸ್ಲಿಂ ಭಯೋತ್ಪಾದಕರ ಕಣ್ಣೂ ಬಿದ್ದಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ದೇಶದಲ್ಲಿ ಐಸಿಸ್ ಪರ ಕಾರ್ಯಾಚರಿಸುವ ದೊಡ್ಡದೊಂದು ತಂಡವನ್ನೇ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಬಂಧಿಸಿತ್ತು. ಆಗ ಉತ್ತರ ಪ್ರದೇಶದ ಹರ್ದೋಯಿ ಯಲ್ಲಿ ಅಬ್ದುಸ್ ಸಮಿ ಖಾಸ್ಮಿ ಎಂಬ ಮುಸ್ಲಿಂ ಮೌಲ್ವಿಯೊಬ್ಬನನ್ನು ಬಂಧಿಸಲಾಯಿತು. ಆತ ಕೆಲವು ಸ್ಪೋಟಕ ವಿಚಾರಗಳನ್ನು ಬಾಯಿಬಿಟ್ಟ. ಆತನ ಹೇಳಿಕೆಯ ಪ್ರಕಾರವೇ ಬಂಗಾಳದ ಹೂಗ್ಲಿಯ ಧನಿಯಾಕಲ್ ನಲ್ಲಿರುವ ಪಾಲಿಟೆಕ್ನಿಕ್ ಒಂದರಲ್ಲಿ ಕಲಿಯುತ್ತ ಅಲ್ಲೇ ಪಕ್ಕದ ದುರ್ಗಾಪುರದಲ್ಲಿ ವಾಸಿಸುತ್ತಿದ್ದ ರಾಜಾ ದಾಸ್ ಎಂಬವನನ್ನು ಬಂಧಿಸಲಾಯಿತು. ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಐಜಿ ಸಂಜೀವ್ ಸಿಂಗ್ ಒಂದು ಆಘಾತಕಾರಿ ಮಾಹಿತಿಯನ್ನು ಈ ಬಗ್ಗೆ ಮಾಧ್ಯಮಗಳ ಮುಂದೆ ಬಿಚ್ಚಿಟ್ಟರು. ಹತ್ತೊಂಬತ್ತರ ಹರೆಯದ ಈ ರಾಜಾ ದಾಸ್ ನ ನಿಜ ಹೆಸರು ಆಸಿಫ್ ಅಹ್ಮದ್. ಅವನ ಜೊತೆಗೆ ಅವನ ತಂದೆಯನ್ನೂ ಎನ್.ಐ.ಎ ಬಂಧಿಸಿತು. ಜೊತೆಗೆಯೇ ಇನ್ನೋರ್ವ ಐಸಿಸ್ ಸದಸ್ಯ ಜರೀ ಎಂಬಾತನನ್ನೂ ಸಹ ಬಂಧಿಸಲಾಯಿತು. ಇವರ ಬಳಿ ತಾರಕನಾಥ ದೇವಳದ ಅಸಂಖ್ಯಾತ ಫೋಟೋಗಳಿದ್ದವು. ಶಿವರಾತ್ರಿಯ ಸಂದರ್ಭದಲ್ಲಿ ತಾರಕನಾಥ ದೇವಾಲಯವನ್ನು ಸ್ಫೋಟಿಸುವ ಸಂಚನ್ನು ಈ ಹಂತಕರು ರೂಪಿಸಿದ್ದರು. ಭಾರೀ ಅನಾಹುತವಾಗುವದನ್ನು ಎನ್.ಐ.ಎ ಕಾರ್ಯಾಚರಣೆಯಿಂದ ತಪ್ಪಿತು.
ಇಷ್ಟೆಲ್ಲ ಹಿನ್ನೆಲೆಯಿದ್ದರೂ ತಾರಕನಾಥ ದೇವಳದ ಅಭಿವೃದ್ಧಿಯ ಹೆಸರಲ್ಲಿ ದೀದಿ ಈಗ ಫಿರ್ಹಾದ್ ಹಕೀಮನಂಥ ಭ್ರಷ್ಟ ಇಸ್ಲಾಮಿ ಮತೀಯವಾದಿಯನ್ನು ಅಧ್ಯಕ್ಷನಾಗಿ ನೇಮಿಸಿದ್ದಾಳೆ. ಈಗಾಗಲೇ ಐಸಿಸ್ ಕೆಂಗಣ್ಣಿಗೆ ಬಿದ್ದಿರುವ ಪಶ್ಚಿಮ ಬಂಗಾಳದ ಪ್ರಸಿದ್ಧ ಶಿವ ದೇವಾಲಯಕ್ಕೆ ಈಗ ಫಿರ್ಹಾದ್ ಹಕೀಮ ಅಧ್ಯಕ್ಷನಾಗಿದ್ದಾನೆ. ಇನ್ಯಾವ ಗಂಡಾಂತರ ಕಾದಿದೆಯೋ? ದೇಶದ ಯಾವುದಾದರೂ ಮಸೀದಿಗೆ ಹಿಂದೂ ಜನಾಂಗದವರನ್ನು ಮುಖ್ಯಸ್ಥರನ್ನಾಗಿ ಮಾಡಿದ ಒಂದಾದರು ಉದಾಹರಣೆ ಉಂಟಾ?? ಅಥವಾ ಇಸ್ಲಾಮಿ ಜನ ಅಂತಹ ವ್ಯವಸ್ಥೆಯನ್ನು ಒಪ್ಪಿಕೊಳ್ಳುತ್ತಾರೋ?? ಇಲ್ಲೊಂದು ಕುತೂಹಲಕ ವಿಷಯವೊಂದಿದೆ. ಅದೆಂದರೆ ತಾರಕನಾಥ ದೇವಾಲಯದ ಮೇಲೆ ಐಸಿಸ್ ಕಣ್ಣಿಗೆ ಮೂಲ ಇರೋದೇ ನಮ್ಮ ರಾಜ್ಯ ಕರ್ನಾಟಕದಲ್ಲಿ, ಅದಕ್ಕೂ ಹೆಚ್ಚಾಗಿ ನಮ್ಮ ಉತ್ತರಕನ್ನಡ ಜಿಲ್ಲೆಯಲ್ಲಿಯೇ. ಎನ್.ಐ.ಎ ವಿಚಾರಣೆಯ ವೇಳೆ ಬಾಯಿಬಿಟ್ಟ ಆಸಿಫ್ ಅಹ್ಮದ್ ತನಗೊಬ್ಬ ಕಮಾಂಡರ್ ಇದ್ದಾನೆಂಬ ವಿಚಾರ ತಿಳಿಸಿದ. ಆತ ಸಿರಿಯಾದಲ್ಲಿದ್ದುಕೊಂಡು ಅಂತರ್ಜಾಲದ ಮೂಲಕ ಭಾರತದಲ್ಲಿ ಐಸಿಸ್ ಗೆ ಯುವಕರನ್ನು ಭರ್ತಿ ಮಾಡುವ ಕೆಲಸ ಮಾಡುತ್ತಿದ್ದ. ಸಿರಿಯಾದಲ್ಲಿದ್ದ ಆ ಕಮಾಂಡರ್ ಕೂಡಾ ಭಾರತದವನೇ. ಮೇಲಾಗಿ ಕರ್ನಾಟಕದ ಭಟ್ಕಳದಾತ. ಆತನ ಹೆಸರು ಯೂಸುಫ್ ಅಲಿಯಾಸ್ ಶಫಿ ಅರ್ಮಾರ್ !