ಇಸ್ರೇಲ್ - ಭಾರತ ದ್ವಿಪಕ್ಷೀಯ ಸಂಬಂಧ । ಮೋದೀಜಿಯವರಿಂದ ಹೊಸ ಶಕೆಯ ಆರಂಭ
ಫಕ್ಕನೆ ನೋಡಲು ನಮ್ಮ ಕರ್ನಾಟಕ ಬ್ಯಾಂಕಿನ ಸಂಕೇತದಂತೆಯೇ ಕಾಣಿಸುತ್ತದೆ ಅದು. ಇನ್ನು ಹತ್ತಿರ ನೋಡಿದಾಗ ಗಣನಾಥನ ಸ್ವಸ್ತಿ ಚಕ್ರ ಅಥವ ಮನೆಯ ದ್ವಾರದ ಮುಂದಿನ ರಂಗೋಲಿಯನ್ನೋ ನೆನಪಿಸುವುದು. ಹೌದು, ಆರು ಮೂಲೆಗಳಿರುವ ನಕ್ಷತ್ರದ ಚಿನ್ಹೆ.
ಅದನ್ನವರು "ಸ್ಟಾರ್ ಆಫ್ ಡೇವಿಡ್" ಅಂತ ಕರೀತಾರೆ.
ಯಹೂದಿಗಳಿಗೆ ಈ ಚಿನ್ಹೆ ಪವಿತ್ರವಷ್ಟೇ ಅಲ್ಲ, ತಮ್ಮ ಇಸ್ರೇಲ್ ದೇಶದ ಹೆಮ್ಮೆಯ ಸ್ವಾಭಿಮಾನದ ಸಂಕೇತವೂ ಹೌದು.ಯಹೂದಿ ಜನಾಂಗದ ಚರಿತ್ರೆ ಕ್ರಿಸ್ತ ಪೂರ್ವ ಸಾವಿರದೈನೂರು ವರ್ಷಗಳಷ್ಟು ಹಳೆಯದು. ಆದರೆ ನಮ್ಮಲ್ಲಿ ಷಟ್ಕೋನ ಅಂತ ಕರೆಯಲ್ಪಡುವ ಈ ಚಿನ್ಹೆ ಶಿವ- ಶಕ್ತಿಯರ ಸಮಾಗಮವನ್ನು ಸಂಕೇತಿಸುತ್ತದೆ. ವೇದಕಾಲದಿಂದಲೂ ನಮ್ಮಲ್ಲಿ ಬಳಕೆಯಲ್ಲಿರುವ ಓಂ ಮತ್ತು ಸ್ವಸ್ತಿಕದಷ್ಟೇ ಯಹೂದಿಗಳಿಗೆ ಪಾವಿತ್ರ್ಯವಿರುವ ಸಂಕೇತವದು. ಬ್ರಹ್ಮ ಸಂಹಿತೆಯಲ್ಲಿ ಈ ಷಟ್ಕೋನವನ್ನು ಬ್ರಹ್ಮನ ಸಂಕೇತ ಅಂತ ಹೇಳಲಾಗಿದೆ. ನಮ್ಮ ಯೋಗ ವಿಜ್ಞಾನದಲ್ಲೂ ಇದನ್ನು "ಅನಾಹತ ಚಕ್ರ' ಅಂತ ಕರೆಯಲಾಗಿದೆ. ಪರಮ ಶಕ್ರಿಶಾಲಿ ಮತ್ತು ಪವಿತ್ರ ಅಂತ ಪರಿಗಣಿಸಲ್ಪಡುವ ಶ್ರೀ ಚಕ್ರ ಯಂತ್ರದಲ್ಲೂ ಈ ಷಟ್ಕೋನಗಳೇ ಪ್ರಧಾನ.
ಇದನ್ನೇ ತಮ್ಮ ದೇಶ ಇಸ್ರೇಲಿನ ಸಂಕೇತವಾಗಿಕೊಂಡಿರುವ ಯಹೂದಿಗಳು ಭಾರತವೆಂಬ ಸನಾತನ ದೇಶದ ಸಹಜ ಮಿತ್ರರು.
ಕ್ರಿಸ್ತನಾಗಲಿ ಅಥವ ಪೈಗಂಬರನಾಗಲಿ ತಮ್ಮ ಧರ್ಮ ಸ್ಥಾಪನೆಗೂ ಮೊದಲು ಮೂಲತಃ ಯಹೂದಿಗಳೇ ಆಗಿದ್ದರು. ಯಹೂದಿ ಜನಾಂಗ ನಾಗರಿಕತೆಯೊಂದಿಗೆ ಅತ್ಯುತಮವಾಗಿ ವಿಕಸನ ಹೊಂದಿಕೊಂಡು, ಈ ಪ್ರಪಂಚಕ್ಕೆ ಅಮೂಲಾಗ್ರವಾಗಿ ಸಕಾರಾತ್ಮಕ ಕೊಡುಗೆ ನೀಡುತ್ತಲೇ ಬಂದಿದೆ.
ಆದರೆ ನಮ್ಮ ದೇಶ, ನೆಹರೂನಿಂದಾರಂಭಿಸಿ ನಮ್ಮನ್ನಾಳಿದ ಅಷ್ಟೂ ಸರಕಾರಗಳು ಇಸ್ರೇಲ್ ಅನ್ನು ಯಾವತ್ತೂ ಬೆಂಬಲಿಸಲೇ ಇಲ್ಲ! ಇಸ್ರೇಲನ್ನು ಮತ್ತು ಯಹೂದಿಗಳನ್ನು ಸದಾ ಪರಕೀಯರಂತೆಯೇ ಕಂಡ ಮೊಘುಲ್ ವಂಶಸ್ಥ ನೆಹರೂ ಮತ್ತವರ ಮಗಳು ಮೈಮುನಾ ಬೇಗಮ್ ಅಲಿಯಾಸ್ ಇಂದಿರಾ ಸತತವಾಗಿ ಜಾಗತಿಕ ಮಟ್ಟದಲ್ಲಿ ಇಸ್ರೇಲಿನ ಯಹೂದಿಗಳನ್ನು ವಿರೋಧಿಸುತ್ತಾ, ಪ್ಯಾಲೆಸ್ತೀನೀ ತುರ್ಕರನ್ನು ಬೆಂಬಲಿಸುತ್ತಾ, ಅರಬರನ್ನು ಮತ್ತು ನಮ್ಮ ದೇಶದ ಇಸ್ಲಾಮಿಗಳನ್ನು ಸಂತುಷ್ಟಗೊಳಿಸಲು ಸದಾ ಪ್ರಯತ್ನಿಸಿದರು. ಆದರೆ ಅದೇ ವೇಳೆ ಯಹೂದಿಗಳು ಹೃದಯ ವೈಶಾಲ್ಯ ಮೆರೆದು ಪ್ರತೀ ಬಾರಿ ಭಾರತ ಸಂಕಷ್ಟಕ್ಕೀಡಾದಾಗಲೂ ನಮ್ಮ ಸಹಾಯಕ್ಕೆ ಧಾವಿಸಿದರು, ನೆರವು ನೀಡಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮನ್ನು ಬೆಂಬಲಿಸಿದರು. ಸ್ವತಂತ್ರ ಭಾರತದ ರಾಜತಾಂತ್ರಿಕ ಇತಿಹಾಸದಲ್ಲಿ ಇಸ್ರೇಲ್ ಜೊತೆಗಿನ ನಮ್ಮ ದ್ವಿಪಕ್ಷೀಯ ಸಂಬಂಧ ಎನ್ನುವುದು ಘೋರ ಪ್ರಮಾದಗಳ ಕಪ್ಪು ಚುಕ್ಕೆಯೇ ಸರಿ ... ಆದರೀಗ ಮೋದೀಜಿಯವರು ಬಂದ ನಂತರ ಭಾರತ- ಇಸ್ರೇಲ್ ನಡುವಿನ ಬಾಂಧವ್ಯ ಸಾಮರಸ್ಯ ಅದ್ಭುತವೆನ್ನುವಂತೆ ವೃದ್ಧಿಸಿದೆ. ಈಗ ಮೋದೀಜಿಯವರು ಇಸ್ರೇಲಿಗೆ ಭೇಟಿ ನೀಡುವ ಮೂಲಕ ಹೊಸದೊಂದು ಇತಿಹಾಸ ಸೃಷ್ಟಿಸುತ್ತಿದ್ದಾರೆ. ಇಸ್ರೇಲಿಗೆ ಭೇಟಿ ನೀಡುತ್ತಿರುವ ಭಾರತದ ಪ್ರಪ್ರಥಮ ಪ್ರಧಾನಿ ಎಂಬ ಹೊಸ ದಾಖಲೆ ಬರೆಯುತ್ತಿದ್ದಾರೆ. ಆ ಮೂಲಕ ನೆಹರೂ ಮಾಡಿದ ಗಂಭೀರ ರಾಜತಾಂತ್ರಿಕ ಲೋಪಗಳನ್ನು ಸರಿಪಡಿಸಿ ಇಸ್ರೇಲ್ ಭಾರತದ ಮಧ್ಯೆ ರಾಜತಾಂತ್ರಿಕ ಸಂಬಂಧಗಳ ಹೊಸ ಶಕೆಯೊಂದರ ಆರಂಭಕ್ಕೆ ಕಾರಣವಾಗಲಿದ್ದಾರೆ. ಅಂದ ಹಾಗೆ ನರೇಂದ್ರ ಮೋದೀಜಿಯವರು ಇಸ್ರೇಲಿಗೆ ಹೋಗುತ್ತಿರುವುದು ಇದು ಮೊದಲ ಸಲವೇನೂ ಅಲ್ಲ! ೨೦೦೬ರಲ್ಲಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೇ ಇಸ್ರೇಲ್ ಗೆ ಭೇಟಿ ನೀಡಿದ್ದರು.
೧೯೪೭ರಲ್ಲಿ ಭಾರತ ಸ್ವತಂತ್ರವಾದರೆ ಇಸ್ರೇಲ್ ದೇಶ ರೂಪುಗೊಂಡದ್ದು ೧೯೪೮ರಲ್ಲಿ. ನಮ್ಮ ದೇಶದ ಮೊದಲ ಪ್ರಧಾನಿ ಇಸ್ರೇಲ್ ಎಂಬುದೊಂದು ದೇಶದ ಅಸ್ತಿತ್ವವನ್ನೇ ಒಪ್ಪಿಕೊಳ್ಳಲಿಲ್ಲ. ನೆಹರೂಗೂ, ಗಾಂಧಿಗೂ ಪ್ಯಾಲೆಸ್ತೀನೀಯರೇ ಅಚ್ಚುಮೆಚ್ಚಾಗಿದ್ದರು. ಆದುದರಿಂದಲೇ ೧೯೪೯ರಲ್ಲಿ ಇಸ್ರೇಲ್ ಅನ್ನು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗುವುದರ ವಿರುದ್ಧ ಭಾರತ ಮತಚಲಾಯಿಸಿತು. ಅದಕ್ಕೂ ಮೊದಲು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ ನೆಹರೂಗೊಂದು ಪತ್ರ ಬರೆದು, ಇಸ್ರೇಲ್ ಪರ ವಿಶ್ವ ಸಂಸ್ಥೆಯಲ್ಲಿ ಮತ ಚಲಾಯಿಸಬೇಕೆಂದು ಕೇಳಿಕೊಂಡಿದ್ದರು ಸಹ ನೆಹರೂ ಸ್ಪಷ್ಟವಾಗಿಯೇ ಇಸ್ರೇಲ್ ವಿರುದ್ಧ ಮತಚಲಾಯಿಸಿದರು
ದೇಶದಲ್ಲಿ ಇಸ್ರೇಲ್ ಪರವಾಗಿ ಯಾರು ಮಾತನಾಡದಿದ್ದ ಸಂದರ್ಭದಲ್ಲಿ, ಸಂಘದ ಸರಸಂಘಚಾಲಕ ಶ್ರೀ ಗೊಳ್ವಾಲ್ಕರ್, ಹಿಂದೂ ಮಹಾಸಭಾದ ವಿನಾಯಕ ದಾಮೋದರ ಸಾವರ್ಕರ್ ಮುಂತಾದವರು ಇಸ್ರೇಲ್ ಪರ ದನಿಯೆತ್ತಿದ್ದರು.
೧೯೫೦ರಲ್ಲಿ ನೆಹರೂ ಔಪಚಾರಿಕವಾಗಿ ಇಸ್ರೇಲ್ ಒಂದು ದೇಶ ಅಂತ ಒಪ್ಪಿಕೊಂಡರೂ ಅದಕ್ಕೆ ಸಂಪೂರ್ಣ ರಾಜತಾಂತ್ರಿಕ ಮಾನ್ಯತೆ ನೀಡಲಿಲ್ಲ. ಹಾಗಾಗಿ ಇಸ್ರೇಲಿಗೆ ರಾಜಧಾನಿ ದೆಹಲಿಯಲ್ಲಿ ರಾಜತಾಂತ್ರಿಕ ದೂತಾವಾಸ ಸಿಗದೆ, ಬದಲಿಗೆ ನೆಹರೂ ಮುಂಬಯಿಯಲ್ಲಿ ಇಸ್ರೇಲಿಗೊಂದು ಕಚೇರಿಗೆ ಅವಕಾಶ ಕೊಟ್ಟರು. ಇಸ್ರೇಲ್ ಅನ್ನು ಒಪ್ಪಿಕೊಂಡರೆ ಅರಬ್ ದೇಶಗಳಿಗೆ ನೋವಾಗುತ್ತದೆ, ಭಾರತೀಯಇಸ್ಲಾಮಿಗಳಿಗೆ ನೋವಾಗುತ್ತದೆ ಅಂತ ನೆಹರೂ ಬಹಿರಂಗವಾಗಿಯೇ ಅಳಲು ತೋಡಿಕೊಂಡಿದ್ದರು. ಭಾರತದಲ್ಲಿ ಮುಸ್ಲಿಮರ ಸಂಖ್ಯೆ, ಎಷ್ಟೋ ಅರಬ್ ದೇಶಗಳಲ್ಲಿರುವ ಮುಸ್ಲಿಮರಿಗಿಂತ ಹೆಚ್ಚಿದ್ದು, ಅಂದಿನ ನೆಹರೂವಿನ ಭಾರತ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕಂಟ್ರೀಸ್ ಸದಸ್ಯತ್ವ ಪಡೆಯುವುದೇ ಮೇಲೆಂದುಕೊಂಡಿತು. ಹಾಗಾಗಿ ಮುಸ್ಲಿಮರನ್ನು ಮೆಚ್ಚಿಸಲು ಇಸ್ರೇಲಿಗೆ ವಿರೋಧ ವ್ಯಕ್ತಪಡಿಸಿ ಪ್ಯಾಲೇಸ್ತೀನಿಗೆ ಬೆಂಬಲ ನೀಡಿತು. ಯಾಸೀರ್ ಅರಾಫತ್ ನೇತೃತ್ವದ ಉಗ್ರ ಸಂಘಟನೆ ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ (ಪಿ.ಎಲ್.ಓ.) ಅನ್ನು ಪ್ಯಾಲೆಸ್ತೀನೀಯರ ಅಧಿಕೃತ ಪ್ರತಿನಿಧಿ ಅಂತ ಅರಬ್ ಮತ್ತು ಮುಸ್ಲಿಂ ದೇಶಗಳು ಮಾನ್ಯತೆ ನೀಡಿದವು.
ಪಿ.ಎಲ್.ಓ.ಅನ್ನುವ ಭಯೋತ್ಪಾದನೆಯ ಉಗ್ರ ಸಂಘಟನೆಯನ್ನು ಅಧಿಕೃತವೆಂದು ಒಪ್ಪಿಕೊಂಡ ಪ್ರಥಮ ಅರಬೇತರ ದೇಶ ಭಾರತವಾಗಿತ್ತು!
ನೆಹರೂ ತನ್ನ ತಿಕಲು ಅಲಿಪ್ತ ನೀತಿ ಎಂಬ ಬೊಗಳೆಯನ್ನೇ ಬೊಗಳುತ್ತ ರಷ್ಯಾ ಮತ್ತು ಚೀನ ಜೊತೆಗೆ ಅನೈತಿಕ ಸರಸಕ್ಕಿಳಿದರು. ಹಿಂದೀ ಚೀನೀ ಭಾಯೀ ಭಾಯೀ ಎಂಬ ಮಂತ್ರ ಜಪಿಸುತ್ತಾ ಚೈನಾದ ಜೊತೆಗೆ ೧೯೫೪ರಲ್ಲಿ ಪಂಚಶೀಲ ಶಾಂತಿ ಒಪ್ಪಂದ ಮಾಡಿಕೊಂಡರು. ಆದರೆ ಧೂರ್ತ ಚೀನ, ಭಾರತದ ಮೇಲೆಯೇ ಆಕ್ರಮಣ ಮಾಡಿತು. ಆಗ ನೆಹರೂ ತನ್ನ ಶೀಲಾ ಹರಣವಾದವರಂತೆ ತಲೆಮೇಲೆ ಕೈಹೊತ್ತು ಕುಳಿತರು. ಆ ಸಂದರ್ಭದಲ್ಲಿ ಭಾರತದ ಸೈನಿಕರಿಗೆ ಯುದ್ಧೋಪಕರಣಗಳು, ಶಸ್ತ್ರಾಸ್ತ್ರಗಳು ತುರ್ತಾಗಿ ಅಗತ್ಯವಿತ್ತು.. ಆಗ ಯಾರೊಬ್ಬರೂ ಸಹಾಯಮಾಡದಿದ್ದಾಗ ಇದೆ ನೆಹರು ನಾಚಿಕೆ ಬಿಟ್ಟು ಇಸ್ರೇಲ್ ಬಳಿ ಕೈಚಾಚಿದರು. ಆದರೂ ಅವರ ಅಹಂಭಾವ ಬಿಡಲಿಲ್ಲ. ನೆಹರೂ ಅಂದಿನ ಇಸ್ರೇಲೀ ಪ್ರಧಾನಿ ಬೆನ್ ಗುರಿಯೋನ್ ಒಂದು ಟೆಲಿಗ್ರಾಂ ಕಳಿಸಿ ಚೀನ ವಿರುದ್ಧ ಯುದ್ಧಕ್ಕೆ ಶಸ್ತ್ರಾಸ್ತ್ರಗಳ ಸಹಾಯ ಯಾಚಿಸುತ್ತಾರೆ.
ಆದರೆ ಇಸ್ರೇಲಿನಿಂದ ಯುದ್ಧ ಸಾಮಗ್ರಿ ಪಡೆದುಕೊಂಡದ್ದು ಗೊತ್ತಾದರೆ ಅರಬ್ ದೇಶಗಳಿಗೆ ಬೇಸರವಾಗಬಹುದು... ಆದುದರಿಂದ ಯುದ್ಧಸಾಮಗ್ರಿ ಕಳಿಸುವ ಹಡಗಿನಲ್ಲಿ ಇಸ್ರೇಲಿ ಧ್ವಜ ಇರಬಾರದು ಅಂತ ವಿಚಿತ್ರ ಬೇಡಿಕೆ ಇಡುತ್ತಾರೆ!
ಭಾರತಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ಇತ್ತ ಬೆನ್ ಗುರಿಯೋನ್ ಸಾಮಗ್ರಿ ಕಳಿಸುವ ಹಡಗಿನಲ್ಲಿ ಇಸ್ರೇಲಿ ಧ್ವಜ ಇರಲೇ ಬೇಕು.. ಇಲ್ಲದಿದ್ದರೆ ಸಹಾಯ ಇಲ್ಲ ಅಂತ ನೆಹರೂಗೆ ಮಂಗಳಾರತಿ ಎತ್ತಿದರು. ಅತ್ತ ಎಲ್ಲ ಅರಬ್ ಅಥವ ಮುಸ್ಲಿಂ ರಾಷ್ಟ್ರಗಳ ಹಿತಚಿಂತಕನೆನಿಸಿಕೊಂಡ ಈ ಭಾರತ ದೇಶಕ್ಕೆ ಬೆಂಬಲ ನೀಡಲು ಮತ್ತು ಚೀನ ವಿರುದ್ಧ ನಮಗೆ ಸಹಾಯ ಹಸ್ತ ನೀಡಲು ಒಂದು ಮುಸ್ಲಿಂ ರಾಷ್ಟ್ರಕ್ಕೂ ತಾಕತ್ ಇರಲಿಲ್ಲ ಅಥವ ನಮ್ಮನ್ನು ಅವರ ಮಿತ್ರನೆಂದು ಪರಿಗಣಿಸಲು ಇಲ್ಲ. ನೆಹರೂ ಚೀನ ಯುದ್ಧವನ್ನು ಅವಮಾನಕರವಾಗಿ ಸೋತರು.
ಇದು ನೆಹರೂನ ತಲೆಬುಡವಿಲ್ಲದ ವಿದೇಶ ನೀತಿಗೊಂದು ಸಾಕ್ಷಿಯಾಗಿ ಇತಿಹಾಸದಲ್ಲಿ ದಾಖಲಾಯಿತು. ಇಷ್ಟಾದರೂ ನೆಹರೂ ಸಾಯುವವರೆಗೆ ಇಸ್ರೇಲಿಗೆ ಭಾರತ ರಾಜತಾಂತ್ರಿಕ ಮಾನ್ಯತೆ ಕೊಡಲೇ ಇಲ್ಲ. ಕೊಟ್ಟರೆ ಎಲ್ಲಿ ಅರಬರಿಗೆ, ಮುಸ್ಲಿಮರಿಗೆ ಬೇಸರವಾಗಬಹುದೋ ಎಂಬ ಹಿಂಜರಿಕೆ!
ನೆಹರೂ ನಂತರ ಅವರ ಮಗಳು ಮೈಮುನಾ ಬೇಗಮ್ ಆಲಿಯಾಸ್ ಇಂದಿರಾ ಅಧಿಕಾರಕ್ಕೆ ಬಂದರು. ಆಕೆ ಕೂಡ ಯಾಸೆರ್ ಅರಾಫತ್ ಅನ್ನೇ ಅಪ್ಪಿ-ತಬ್ಬಿ ಕೊಂಡರು. ಇಸ್ರೇಲ್ ಆಗಲೂ ಭಾರತದ ಪಾಲಿಗೆ ಅಸ್ಪೃಶ್ಯವಾಗಿಯೇ ಉಳಿಯಿತು.
೧೯೬೯ರಲ್ಲಿ ಪಾಕಿಸ್ತಾನ ಲಾಬಿ ಮಾಡಿ, "ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕಂಟ್ರೀಸ್" ನ ಸದಸ್ಯತ್ವ ಭಾರತಕ್ಕೆ ಸಿಗದಂತೆ ಮಾಡಿತು! ಅರಬ್ ರಾಷ್ಟ್ರಗಳು ಭಾರತಕ್ಕೆ ಸರಿಯಾಗಿಯೇ ಕೈಕೊಟ್ಟವು. ಅವು ಭಾರತದ ದೊಡ್ಡ ಸಂಖ್ಯೆಯ ಮುಸ್ಲಿಮರನ್ನು 'ಮುಸ್ಲಿಮರೆಂದೇ ಪರಿಗಣಿಸಲಿಲ್ಲ! ಇದು ಇಲ್ಲಿನ ಪ್ರವಾದಿಯ ಮಕ್ಕಳಿಗೆ ಇಂದಿಗೂ ಸಹ ತಮ್ಮ ಅಸ್ಮಿತೆ ಹಾಗು ಅಸ್ಥಿತ್ವವನ್ನೇ ಅಲ್ಲಗೆಳೆದರು ಮರ್ಯಾದೆ ಇಲ್ಲದೇ ಅದೇ ಅರಬ್ ರಾಷ್ಟ್ರದವರಿಗೆ ಹುಟ್ಟಿದವರಂತೆ ತಲೆ-ತಲೆಮಾರುಗಳಿಂದ ವರ್ತಿಸುತ್ತಿವೆ.
ಇದಾದ ಬಳಿಕ ೧೯೭೧ರಲ್ಲಿ ಪೂರ್ವ ಪಾಕಿಸ್ತಾನ (ಬಾಂಗ್ಲಾ) ಸಮಸ್ಯೆ ತಲೆದೋರಿತು. ಮೈಮುನಾ, ಬಾಂಗ್ಲಾಗೆ ಸೈನ್ಯ ನುಗ್ಗಿಸುವ ಯೋಚನೆಯಲ್ಲಿದ್ದರು. ಆಗಲೂ ಶಸ್ತ್ರಾಸ್ತ್ರಗಳು ಬೇಕಾದಾಗಆಕೆಗೆ ಮತ್ತೆ ನೆನಪಾದದ್ದೇ ಇಸ್ರೇಲ್!! ರಾ ಸಂಸ್ಥೆಯ ಮೂಲಕ ಇಸ್ರೇಲ್ ನಿಂದ ಶಸ್ತ್ರಾಸ್ತ್ರ ಪಡೆಯಲು ಪ್ರಯತ್ನಿಸಿದರು. ಆಗ ಇಸ್ರೇಲ್ ಪ್ರಧಾನಿಯಾಗಿದ್ದ ಗೋಲ್ಡಾ ಮೆಯರ್ ರಹಸ್ಯವಾಗಿ ಭಾರತಕ್ಕೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕೊಟ್ಟು ಸಹಾಯ ಮಾಡಿದರು. ಭಾರತ ಯುದ್ಧ ಗೆದ್ದಿತು. ಗೋಲ್ಡಾ ಮೆಯರ್ ತಾನು ಮಾಡಿದ ಸಹಾಯಕ್ಕೆ ಪ್ರತಿಯಾಗಿ ಇಸ್ರೇಲಿಗೆ ಅಧಿಕೃತ ಸ್ಥಾನಮಾನ ನೀಡಬೇಕೆಂದು ಬೇಡಿಕೆಯಿಟ್ಟರು. ಆದರೆ ಮೈಮುನಾ ಕೃತಘ್ನರಾದರು. ಇಸ್ರೇಲಿಗೆ ಮಾನ್ಯತೆ ನೀಡಲೇ ಇಲ್ಲ. ಅರಬರನ್ನು ಮುಸ್ಲಿಮರನ್ನು, ಓಲೈಸುತ್ತಾ ಪ್ಯಾಲೇಸ್ತೀನೀಯರಿಗೆ ದೆಹಲಿಯಲ್ಲಿ ಸ್ಥಾನಮಾನ ನೀಡುತ್ತಾ, ಅರಾಫತ್ ನನ್ನ ಅಪ್ಪಿಕೊಳ್ಳುತ್ತಾ ಇಸ್ರೇಲ್ ಅನ್ನು ಕಡೆಗಣಿಸಿದ್ದ ಮೈಮುನಾಗೆ ಕಷ್ಟಕಾಲದಲ್ಲಿ ಸಹಾಯ ಮಾಡಿದ್ದು ಇಸ್ರೇಲೇ!
ಅಷ್ಟು ಸಮಯವೂ ಅರಬರನ್ನು ಓಲೈಸಿದ್ದಕ್ಕೆ ಪ್ರತಿಯಾಗಿ ಅವರೇನು ಮಾಡಿದರು ಗೊತ್ತೇ? ಪೂರ್ವ ಪಾಕಿಸ್ಥಾನ (ಬಾಂಗ್ಲಾ)ದಲ್ಲಿ ಭಾರತದ ಹಸ್ತಕ್ಷೇಪ ನಿಲ್ಲಬೇಕೆಂಬ ವಿಶ್ವ ಸಂಸ್ಥೆಯ ಕರಾರಿಗೆ ಯೆಮೆನ್ ಒಂದು ಬಿಟ್ಟು ಉಳಿದ ಅಷ್ಟೂ ಅರಬ್ ದೇಶಗಳು ಭಾರತದ ವಿರುದ್ಧ ಸಹಿಮಾಡಿದವು. ಎಲ್ಲಾ ಮುಸ್ಲಿಂ ರಾಷ್ಟ್ರಗಳೂ ಪಾಕಿಸ್ತಾನದ ಪರ ಮಾತನಾಡಿದವು!
ಇಷ್ಟಾದರೂ ಮೈಮುನಾ ಬೇಗಮ್ ಬುದ್ಧಿಕಲಿಯಲಿಲ್ಲ. ಪ್ಯಾಲೇಸ್ತೀನಿಗೆ ಬೆಂಬಲ ಮುಂದುವರಿಸುತ್ತಾ, ಇಸ್ರೇಲಿಗೆ ರಾಜತಾಂತ್ರಿಕ ಸ್ಥಾನಮಾನ ನಿರಾಕರಿಸುತ್ತಾ ಬಂದರು. ನೆಹರೂ ತಿಕಲು ಅಲಿಪ್ತ ನೀತಿಯ ಸದಸ್ಯ ದೇಶವಾಗಿದ್ದ, ಸ್ವತಃ ಮುಸ್ಲಿಂ ದೇಶವಾಗಿದ್ದು, ಪ್ಯಾಲೆಸ್ತೀನ್ ಅನ್ನು ಬೆಂಬಲಿಸುತ್ತಾ ಇಸ್ರೇಲಿಗೆ ವಿರುದ್ಧವಾಗಿದ್ದ ಈಜಿಪ್ಟ್ ೧೯೭೯ರಲ್ಲಿ ಇಸ್ರೇಲ್ ಅನ್ನು ಒಂದು ಸ್ವತಂತ್ರ ದೇಶವೆಂದು ಅಧಿಕೃತವಾಗಿ ಮಾನ್ಯತೆ ನೀಡಿಬಿಟ್ಟಿತು!
ಆದರೆ ಇದೇ ಮುಸ್ಲಿಂ ರಾಷ್ಟ್ರಗಳನ್ನು ಓಲೈಸುತ್ತಾ ಇಸ್ರೇಲಿಗೆ ಮಾನ್ಯತೆ ನೀಡದಿದ್ದ ಭಾರತ ಮಾತ್ರ ಆಗಲೂ ಎಚ್ಚೆತ್ತುಕೊಳ್ಳಲಿಲ್ಲ! ಮೈಮುನಾ ಚುನಾವಣೆ ಸೋತು ಮೊರಾರ್ಜಿಭಾಯಿ ದೇಸಾಯಿ ಅಧಿಕಾರಕ್ಕೆ ಬಂದಾಗ ಇಸ್ರೇಲ್ ಮತ್ತೆ ಭಾರತದ ಸ್ನೇಹ ಗಳಿಸಲು ಪ್ರಯತ್ನಿಸಿತು. ೧೯೭೭ರಲ್ಲಿ ಇಸ್ರೇಲಿನ ಪ್ರಖ್ಯಾತ ಸೈನ್ಯಾಧಿಕಾರಿ ಮತ್ತು ರಾಜಕಾರಣಿ ಜೀವಂತ ದಂತಕಥೆಎನಿಸಿದ್ದ ಮೋಷೆ ಡಯಾನ್ ರಹಸ್ಯವಾಗಿ ಭಾರತಕ್ಕೆ ಬಂದು ಪ್ರಧಾನಿ ಮೊರಾರ್ಜಿಭಾಯಿಯವರನ್ನು ಭೇಟಿಯಾಗಿ ತಮ್ಮ ದೇಶಕ್ಕೆ ರಾಜತಾಂತ್ರಿಕ ಮಾನ್ಯತೆ ದೊರಕಿಸಿಕೊಡಲು ಪ್ರಯತ್ನಿಸಿದರು. ಆದರೆ ಸರಕಾರ ಬಿದ್ದುಹೋಗಿ ಮೈಮುನಾ ಮತ್ತೆ ಬಂದರು. ಹಾಗೆ ಅಧಿಕಾರಕ್ಕೆ ಮರಳಿದವರೇ... ೧೯೮೦ರಲ್ಲಿ ಇಸ್ರೇಲಿಗೆ ಅಧಿಕೃತ ಮಾನ್ಯತೆ ನೀಡುವ ಬದಲು ಪ್ಯಾಲೇಸ್ತೀನಿಗೆ ದೆಹಲಿಯಲ್ಲಿ ದೂತಾವಾಸ ಕಚೇರಿ ಮಾಡಿಕೊಟ್ಟು ಪರಿಪೂರ್ಣ ರಾಜತಾಂತ್ರಿಕ ಮಾನ್ಯತೆ ನೀಡಿದರು!. ಆಗ ಇಂದಿರಾ ಸಂಪುಟದಲ್ಲಿ ಪಿ.ವಿ.ನರಸಿಂಹ ರಾವ್ ವಿದೇಶಾಂಗ ಮಂತ್ರಿಯಾಗಿದ್ದರು.
ನಂತರ ಕಾಲ ಬದಲಾಯಿತು. ಮೈಮುನಾ ಬೇಗಮ್ ತನ್ನ ಘೋರ ತಪ್ಪಿನಿಂದಾಗಿಯೇ ಸಿಖ್ ಉಗ್ರರಿಗೆ ಬಲಿಯಾದರು. ರಾಜೀವ್ ಅಧಿಕಾರಕ್ಕೆ ಬಂದರು. ಆತ ರಾಜಕಾರಣ ಮತ್ತು ಅಂತರರಾಷ್ಟ್ರೀಯ ಸಂಭಂದಗಳ ಅಕ್ಷರಾಭ್ಯಾಸ ಮಾಡುವ ಮೊದಲೇ ಅಧಿಕಾರ ಕಳೆದುಕೊಂಡ ಹಾಗು ಜೀವ ಕೂಡ ಬಿಟ್ಟ. ಆದರೆ ರಾಜೀವ್ ಹತ್ಯೆಯ ನಂತರ ಬಂದ ನರಸಿಂಹ ರಾವ್ ಸರಕಾರ ಭಾರತದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ೧೯೯೨ ರಲ್ಲಿ ಇಸ್ರೇಲಿಗೆ ಅಧಿಕೃತವಾಗಿ ರಾಜತಾಂತ್ರಿಕ ಸ್ಥಾನಮಾನ ನೀಡಿತು. ಆಗ ನರಸಿಂಹ ರಾವ್ ಗೆ ಬೇರೆ ದಾರಿಯಿರಲಿಲ್ಲ. ಅದುವರೆಗೆ ನೆಚ್ಚಿಕೊಂಡಿದ್ದ ಸೋವಿಯತ್ ರಷ್ಯಾ ಛಿದ್ರವಾಗಿತ್ತು. ಅಮೆರಿಕ ಅಂತೂ ನೆಹರೂ ಮತ್ತು ಮೈಮುನಾ ಮಾಡಿದ ಅಧ್ವಾನಗಳಿಂದ ಭಾರತದತ್ತ ಮೂಸಿಯೂ ನೋಡದೆ ಪಾಪಿ ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಂತಿತ್ತು. ಹಾಗಾಗಿ ನರಸಿಂಹ ರಾವ್ ಅನಿವಾರ್ಯವಾಗಿ ಇಸ್ರೇಲ್ ಮೊರೆ ಹೋದರು ಮತ್ತು ಅಮೆರಿಕದ ಜೊತೆಗೆ ಸಂಬಂಧ ಸುಧಾರಿಸಲು ಉಪಕ್ರಮ ಕೈಗೊಂಡರು. ಈಗ ಇದಕ್ಕೆ ಇಪ್ಪತ್ತೈದು ವರ್ಷ ತುಂಬಿದೆ. ಅಂದರೆ ಇಸ್ರೇಲಿಗೆ ರಾಜತಾಂತ್ರಿಕ ಸ್ಥಾನಮಾನ ನೀಡಲು ಭಾರತ ದೇಶಕ್ಕೆ ಭರ್ತಿ ನಲವತ್ತೈದು ವರ್ಷಗಳು ಬೇಕಾಯಿತು. ಇದೆಲ್ಲಕ್ಕೂ ಕಾರಣ ನೆಹರೂ- ಗಾಂಧಿ ಪರಿವಾರದ ಮುಸ್ಲಿಂ ಓಲೈಕೆಯ ರಾಜಕಾರಣ! ನರಸಿಂಹ ರಾವ್ ಬಳಿಕ ವಾಜಪೇಯಿ ಸರಕಾರ ಕೂಡಾ ಇಸ್ರೇಲ್ ಜೊತೆಗಿನ ಸಂಬಂಧವನ್ನು ತುಂಬಾ ಬಲಪಡಿಸಿತು.
ವಾಜಪೇಯಿಯವರ ಸರಕಾರ ಇಸ್ರೇಲ್ ಜೊತೆಗಿನ ಭಾಂದವ್ಯವನ್ನು ಉತ್ತುಂಗಕ್ಕೇರಿಸಿತು. ಭಾರತದ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಇಸ್ರೇಲಿಗೆ ಭೇಟಿ ನೀಡಿದ ಭಾರತದ ಮೊದಲ ವಿದೇಶಾಂಗ ಸಚಿವರಾದರು. ಅದೇ ವರ್ಷ ಉಪ ಪ್ರಧಾನಿ ಶ್ರೀ ಎಲ್.ಕೆ.ಅಡ್ವಾಣಿಜಿ ಕೂಡ ಇಸ್ರೇಲಿಗೆ ಭೇಟಿ ನೀಡಿದರು ಬಳಿಕ ೨೦೦೩ರಲ್ಲಿ ಇಸ್ರೇಲ್ ಪ್ರಧಾನಿ ಏರಿಯಲ್ ಶರೋನ್ ಭಾರತಕ್ಕೆ ಭೇಟಿ ನೀಡಿದಾಗ ದ್ವಿಪಕ್ಷೀಯ ಸಂಬಂಧ ಒಂದು ಹೊಸ ಮಜಲನ್ನು ತಲುಪಿತು. ಆಗಲೇ ಹಲವಾರು ಮಹತ್ವದ ಮಿಲಿಟರಿ ಒಪ್ಪಂದಗಳಿಗೆ ಸಹಿ ಬಿದ್ದದ್ದು. ಅತ್ಯುನ್ನತ ಅವಾಕ್ ಮತ್ತು ಫಾಲ್ಕನ್ ರೇಡಾರ್ ವ್ಯವಸ್ಥೆ, ಬರಾಕ್ ಕ್ಷಿಪಣಿಗಳು, ಕಣ್ಗಾವಲು ಡ್ರೋನ್ ಗಳು, ಅತ್ಯಾಧುನಿಕ ಗನ್ ಗಳು, ಹೀಗೆ ಇಸ್ರೇಲ್ ಜೊತೆಗೆ ನಮ್ಮ ದೇಶ ಭಾಂದವ್ಯ ವೃದ್ಧಿಸುತ್ತ ಸಾಗಿತು.
ಆದರೆ ೨೦೦೪ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಅಂಟೋನಿಯೋ ಮೈನೋ ನೇತೃತ್ವದ ಮೌನಮೋಹನ ಸರಕಾರ ಮತ್ತೆ ಅಸಡ್ಡೆಯ ಧೋರಣೆ ತೋರತೊಡಗಿತು. ೨೫/೧೧ ಮುಂಬೈ ದಾಳಿಗಳಾದಾಗ ಇಸ್ರೇಲ್ ಸ್ವಯಂಪ್ರೇರಿತವಾಗಿ ತನ್ನ ಗೂಢಚಾರರ, ಕಮಾಂಡೋಗಳ ನೆರವು ನೀಡಿದರೂ ಸರಕಾರ ತಿರಸ್ಕರಿಸಿತು.
ಈಗ ಮತ್ತೊಮ್ಮೆ ನರೇಂದ್ರ ಮೋದಿಯವರ ಬಲಿಷ್ಠ ನಾಯಕತ್ವ ದೇಶಕ್ಕೆ ದೊರಕಿದೆ. ಮೋದೀಜಿಯವರ ವಿದೇಶಾಂಗ ನೀತಿಗೆ ಅದ್ಭುತವೆನ್ನುವಂಥ ಪ್ರತಿಕ್ರಿಯೆ ಜಗತ್ತಿನಾದ್ಯಂತ ದೊರಕಿದೆ.... ಈಗಾಗಲೇ ಇಸ್ರೇಲ್ ಅಧ್ಯಕ್ಷರು ಕಳೆದ ವರ್ಷ ಭಾರತಕ್ಕೆ ಭೇಟಿ ನೀಡಿದ್ದಾರೆ. ನಮ್ಮ ಕಡೆಯಿಂದ ವಿದೇಶಾಂಗ ಸಚಿವೆ, ಸುಶ್ಮಾ ಜೀ, ಗೃಹ ಸಚಿವ ರಾಜ್ ನಾಥ್ ಸಿಂಗ್, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಸ್ರೇಲಿಗೆ ಭೇಟಿ ನೀಡಿದ್ದಾರೆ. ಈಗ ಮೋದೀಜಿಯವರು ಭೇಟಿ ನೀಡಲಿದ್ದಾರೆ. ಇದೊಂದು ಐತಿಹಾಸಿಕ ಭೇಟಿಯಾಗಲಿದೆ. ಇಸ್ರೇಲಿಗೆ ಅಧಿಕೃತ ರಾಜತಾಂತ್ರಿಕ ಸ್ಥಾನಮಾನ ನೀಡಿ ಇಪ್ಪತ್ತೈದು ವರುಷ ತುಂಬಿದೆ.... ಈ ಸಂಧರ್ಭದಲ್ಲಿ ಭಾರತದ ಪ್ರಧಾನಿಯೊಬ್ಬರ ಮೊತ್ತ-ಮೊದಲ ಇಸ್ರೇಲ್ ಭೇಟಿ ಇದಾಗಲಿದೆ....
ಅಂದ ಹಾಗೆ ಇಸ್ರೇಲಿಗೆ ಭೇಟಿ ನೀಡುವವರು ಪಕ್ಕದ ಪ್ಯಾಲೇಸ್ತೀನ್ನ ರಮಲ್ಲಾಹ್ ಗೆ ಭೇಟಿ ನೀಡಿ ಒಂದು ರೀತಿಯ ಬ್ಯಾಲೆನ್ಸ್ ಮಾಡುವ ಒಂದು ಅಂತರರಾಷ್ಟ್ರೀಯ ವಾಡಿಕೆಯ ಸಂಪ್ರಾದಾಯವಿದೆ, ಹಾಗು ಮೊನ್ನೆ ಟ್ರಂಪ್ ಸಹ ಪ್ಯಾಲೆಸ್ಟೈನ್ ಕಡೆಯ West Bankಗೆ ಭೇಟಿ ನೀಡಿದ್ದರು ......... ಆದರೆ ಮೋದೀಜಿಯವರು ಈ ಬಾರಿ ಇಸ್ರೇಲಿಗೆ ಮಾತ್ರ, ಅಧಿಕೃತ ಭೇಟಿ ನೀಡಲಿದ್ದು ಮೂರು ದಿನದ ತಮ್ಮ ಪ್ರವಾಸದಲ್ಲಿ ಪ್ಯಾಲೆಸ್ತೀನ್ ಜೆರುಸಲೇಮ್ ಗೆ ಹತ್ತೇ ಕಿಲೋಮೀಟರು ದೂರವಿರುವ ಪ್ಯಾಲೇಸ್ತೀನಿಗೆ ಹೋಗುತ್ತಿಲ್ಲ... ಇದರ ಮೂಲಕವೂ ಮೋದೀಜಿಯವರು ದೇಶದ ಇಸ್ಲಾಮಿಗಳಿಗೆ ಬದಲಾವಣೆಯ ಒಂದು ಸ್ಪಷ್ಟ ಹಾಗು ಎದೆಗಾರಿಕೆಯ ಸಂದೇಶ ನೀಡುತ್ತಿದ್ದಾರೆ.
ಮುಂದಿನ ಬೆಳವಣಿಗೆಗಳು ಬಹಳ ಕುತೂಹಲ ಹಾಗು ಉತ್ತೇಜನಕಾರಿಯಾಗಿರುತ್ತದೆ! ಇದರ ಬಗ್ಗೆ ನನ್ನ ಸ್ವಂತ ಅನುಭವಗಳನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಹಂಚಿಕೊಳ್ಳಲಿದ್ದೇನೆ.