Infinite Thoughts

Thoughts beyond imagination

ಸಫ್ದೊರ್ ನಗೊರಿ ಮಂಪರು ಪರೀಕ್ಷೆ: ಬಯಲಾದ ಯುಪಿಎ ಅನಾಚಾರಗಳು ಹಾಗು ಕಾಂಗ್ರೆಸ್ ನಿಂದ ಹಿಂದೂ ಭಯೋತ್ಪಾದನೆ ಪದ ನಿರ್ಮಾಣ

ಮಹಾರಾಷ್ಟ್ರ್ರದ ಮಾಲೇಗಾಂವ್ನಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ನಗರ ಅದು. ಅಲ್ಲಿ ಪದೇಪದೇ ಹಿಂದೂ ಮುಸ್ಲಿಂ ಗಲಾಟೆಯಾಗುತ್ತಿತ್ತು. ಅದಕ್ಕೆ ಹಿಂದುಗಳು ಯಾವುದೇ ತಪ್ಪು ಮಾಡಬೇಕಾದ ಅವಶ್ಯಕತೆ ಇರಲಿಲ್ಲ. ಆಫ್ಘಾನಿಸ್ತಾನದಲ್ಲಿರುವ ಸೇನೆಯನ್ನು ಅಮೇರಿಕ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಬೇಕೆಂದರೆ ಸಾಕು ಹಿಂದುಗಳ ಮೇಲೆ ಹಲ್ಲೆ (1984, 1992,2001ರಲ್ಲಿ) ನಡೆಸುವುದು, ನಂತರ ಅದನ್ನು ಕೋಮುಗಲಭೆ ಎಂದು ಕರೆಯುವುದು. ಎಲ್ಲಿಯ ಆಫ್ಘಾನಿಸ್ತಾನ, ಎಲ್ಲಿಯ ಮಾಲೇಗಾಂವ್; ಅಮೇರಿಕ ಮೇಲೆ ಸಿಟ್ಟು ಬಂದಾಗ, ಹಿಂದುಗಳ ಮೇಲೆ ಹಲ್ಲೆ ಮಾಡಬೇಕೇಕೆ; ಮುಸ್ಲಿಮರು ಹಲ್ಲೆ ಮಾಡಿದಾಗ ಅದು ಕೋಮು ಗಲಭೆ ಹೇಗೆ ಆಗುತ್ತದೆ, ಅದು ಕೇವಲ ಮುಸ್ಲಿಂ ಗಲಭೆಯಲ್ಲವೇ? ಇಂಥ ಪ್ರಶ್ನೆಗಳಿಗೆ ಉತ್ತರವೇ ಹೊಳೆಯದೆ ಹಿಂದುಗಳು ಗೊಂದಲಗೊಂಡಿದ್ದರು; ಜೊತೆಗೆ ಏಟೂ ತಿನ್ನುತ್ತಿದ್ದರು. ಇಂಥದ್ದೇ ವಾತಾವರಣದಲ್ಲಿ ನಡೆದಿತ್ತು ಸ್ಫೋಟ.

ಮಸೀದಿಯೊಂದರ ಪಕ್ಕದಲ್ಲಿದ್ದ ಸ್ಮಶಾನದಲ್ಲಿ ನಡೆದಿದ್ದ ಸ್ಫೋಟ ಎಷ್ಟು ತೀವ್ರವಾಗಿತ್ತೆಂದರೆ, 37ಜನ ಮೃತಪಟ್ಟು, 120ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದವು. ಸ್ಫೋಟಕ್ಕೆ ಆರ್ಡಿಎಕ್ಸ್ ಮತ್ತು ಅಮೋನಿಯಂ ನೈಟ್ರೇಟ್ ಮಿಶ್ರಣವನ್ನು ಬಳಸಲಾಗಿತ್ತು. 11 ಜುಲೈ 2006ರಂದು ಅಂದರೆ ಕೇವಲ ಎರಡು ತಿಂಗಳ ಮೊದಲ ಮುಂಬೈ ಟ್ರೈನ್ ಸ್ಫೋಟದಲ್ಲಿ ಬಳಸಿದ್ದೇ ಸ್ಫೋಟಕ. ಆದರೆ ಸತ್ತವರಲ್ಲಿ ಹೆಚ್ಚಿನ ಜನ ಮುಸ್ಲಿಮರು. ಹೀಗಾಗಿ ಇಂಥ ಘಟನೆಗಳಾದಾಗ ಸಾಮಾನ್ಯವಾಗಿ ಮಾತೇ ಆಡದ, ಆಗಿನ ಪ್ರಧಾನಿ ಮನಮೋಹನಸಿಂಗ್ ಕೂಡ ಅಪರೂಪಕ್ಕೆನ್ನುವಂತೆ ಘೋರವಾಗಿ ಖಂಡಿಸಿದ್ದರು (ನಂತರ ಗೊತ್ತಾಗ್ತಾ ಇದೆ ಅದರ ಮರ್ಮ).

ಪ್ರಕರಣದಲ್ಲಿ ಮೊದಲು ಸಿಮಿ ಸದಸ್ಯ ನೂರುಲ್ ಹೂಡಾ ಬಂಧನವಾಯಿತು. ಅದು ಮುಸ್ಲಿಂ ಭಯೋತ್ಪಾದಕರು ನಡೆಸಿದ ಕೃತ್ಯ ಎನ್ನುವುದರಲ್ಲಿ ಪೊಲೀಸರಿಗೆ ಯಾವುದೇ ಅನುಮಾನ ಉಳಿದಿರಲಿಲ್ಲ. ಪ್ರಕರಣವನ್ನು ಬೇಧಿಸಲಾಗಿದ್ದು, ಇದರಲ್ಲಿ ಎಂಟು ಜನ ಶಂಕಿತರಿದ್ದಾರೆ ಎಂದು ಡಿಜಿಪಿ ಪರಿಶ್ಚಾ ಹೇಳಿಕೆಯನ್ನೂ ನೀಡಿದರು. ಮಹಾರಾಷ್ಟ್ರದ Anti-terrorist cell (ಎಟಿಎಸ್) ಒಂದೇ ತಿಂಗಳಲ್ಲಿ ಎಂಟು ಜನರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ, ಪೈಕಿ ಮೂವರು ತಪ್ಪೊಪ್ಪಿಗೆ ಹೇಳಿಕೆಯನ್ನೂ ನೀಡಿದರು. ಇನ್ನೊಂದು ಕಡೆ ಸಿಬಿಐ ಕೂಡ ತನಿಖೆ ನಡೆಸುತ್ತಿತ್ತು. ಆದರೆ ಇದ್ದಕ್ಕಿದ್ದ ಹಾಗೆ ತನಿಖೆಯನ್ನು ಎನ್ಐಎಗೆ ವಹಿಸಲಾಯಿತು. ಅದುವರೆಗೆ ಆಗಿದ್ದ ಎಲ್ಲ ತನಿಖೆಯನ್ನೂ ಬದಿಗೆ ಸರಿಸಿದ ಅವರು, ಇದು ಅಭಿನವ ಭಾರತ ಎನ್ನುವ ಬಲಪಂಥೀಯರಿಂದ ನಡೆದ ಕೃತ್ಯ ಎಂದು ಹೇಳಿಕೆಯನ್ನೂ ನೀಡಿದರು.

ಆಗ ಹಿಂದೂ ಉಗ್ರವಾದ ಎನ್ನುವ ಪದಗುಚ್ಛವನ್ನು ಯಾರೋ ಹುಟ್ಟುಹಾಕಿದರು, ಉಳಿದವರು ಬಳಸಲು ಪ್ರಾರಂಭಿಸಿದರು.

ಉಗ್ರವಾದಕ್ಕೂ, ಹಿಂದುಗಳಿಗೂ ಎಲ್ಲಿಯ ಸಂಬಂಧ; ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಎಂದು ಯೇಸುಕ್ರಿಸ್ತ ಹೇಳಿದ ಮಾತನ್ನು ಕ್ರಿಶ್ಚಿಯನ್ನರು ಪಾಲಿಸುತ್ತಾರೋ ಇಲ್ಲವೋ, ಬಹುತೇಕ ಹಿಂದುಗಳು ಯೇಸು ಹುಟ್ಟುವುದಕ್ಕಿಂತ ಮೊದಲಿನಿಂದಲೇ ಪಾಲಿಸಿಕೊಂಡು ಬಂದಿದ್ದಾರೆ. ಅಂಥವರಿಗೆ ಎಂಥ ಹಣೆಪಟ್ಟಿ? ಅಮೇರಿಕದಿಂದ ಹಿಡಿದು ಆಸ್ಟ್ರೇಲಿಯಾವರೆಗೆ, ಈಜಿಪ್ಟ್ ನಿಂದ ಹಿಡಿದು ಏಷ್ಯಾವರೆಗೆ ಭಯೋತ್ಪಾದನೆ ನಡೆಸುತ್ತಿರುವವರು ಮುಸ್ಲಿಮರು ಎನ್ನುವುದು ಸಾಮಾನ್ಯ ತಿಳಿವಳಿಕೆ ಇರುವ ಪ್ರತಿಯೊಬ್ಬ ವ್ಯಕ್ತಿಗೂ ಗೊತ್ತಿರುವ ವಿಷಯವೇ.

(ಮುಸ್ಲಿಂ ಉಗ್ರ ಕೃತ್ಯಕ್ಕೆ ಒಳಗಾಗದೆ ಉಳಿದುಕೊಂಡಿರುವುದು ಕೇವಲ ಒಂದೇ ಖಂಡ: ಅಂಟಾರ್ಟಿಕಾ)

ಹೀಗಾಗಿಯೇ ಮುಸ್ಲಿಂ ಭಯೋತ್ಪಾದನೆಯ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಅಂದಿನ ಯುಪಿಎ ಸರ್ಕಾರ ಜಾಕೀರ್ ನಾಯಕ್ನಂತಹ ದುಷ್ಟರನ್ನು ಅಪ್ಪಿಕೊಂಡು, ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುತ್ತಿದ್ದಾಗ ಸಹಜವಾಗಿಯೇ ಜನರಲ್ಲಿ ಅವರ ಬಗ್ಗೆ ತಿರಸ್ಕಾರ ಉಂಟಾಗಿತ್ತು. ಭಾವನೆಯನ್ನು ಹೋಗಲಾಡಿಸಲು, ಉಗ್ರರೆಂದರೆ ಮುಸ್ಲಿಮರು ಮಾತ್ರವಲ್ಲ ಹಿಂದೂಗಳೂ ಇದ್ದಾರೆ ಎನ್ನುವ ಭಾವನೆ ಮೂಡಿಸಲು ಪದಪುಂಜವನ್ನು ಅಂದಿನ ಕಾಂಗ್ರೆಸ್ ಸರ್ಕಾರ ಸೃಷ್ಟಿಸಿತು. ಉಗ್ರರ ಭಯೋತ್ಪಾದನೆಯ ಒಂದು ಭಾಗವಾಗಿ ಮತ್ತು ಅವರನ್ನು ಓಲೈಸುವವರ ಸಂಚಾಗಿ ಪದಪುಂಜ ರೂಪುಗೊಂಡಿದೆ ಎಂದರೆ ತಪ್ಪೇನಿಲ್ಲ. ಮುಂದೆ ಕೆಲವು ಹಿಂದೂ ನಾಯಕರು ಹಾಗೂ ರಾಷ್ಟ್ರವಾದಿಗಳನ್ನು ಕೂಡ ಪ್ರಕರಣದಲ್ಲಿ ಆರೋಪಿಗಳೆನ್ನುವಂತೆ ಬಂಧಿಸಲಾಯಿತು.

ಮಾಲೇಗಾಂವ್ ಸ್ಫೋಟ ನಡೆದು ಆರು ತಿಂಗಳೂ ಆಗಿರಲಿಲ್ಲ...

ಅಂದು ಫೆಬ್ರವರಿ 19, 2007. ದೆಹಲಿ ಮತ್ತು ಲಾಹೋರ್ ನಡುವೆ ಸಂಚರಿಸುತ್ತಿದ್ದ ಸಮಜೌತಾ ಎಕ್ಸ್ಪ್ರೆಸ್ ಪಾನಿಪತ್ ಬಳಿಯ ದಿವಾನಾ ರೈಲ್ವೆ ನಿಲ್ದಾಣದ ಬಳಿ ಸ್ಫೋಟಗೊಂಡಿತ್ತು. 68ಜನ ಇದರಲ್ಲಿ ಮೃತಪಟ್ಟಿದ್ದರು. Improvised Electronic Device (ಐಇಡಿ) ಗಳನ್ನು ಸ್ಫೋಟಕ್ಕೆ ಬಳಸಿದ್ದರು. ತನಿಖೆಯ ಸಂದರ್ಭದಲ್ಲಿ ಗೊತ್ತಾಗಿದ್ದೇನೆಂದರೆ ಒಬ್ಬ ಪಾಕಿಸ್ತಾನಿ ವ್ಯಕ್ತಿ ಬಾಂಬು ತುಂಬಿದ್ದ ಒಂದು ಸೂಟ್ಕೇಸನ್ನು ಎತ್ತಿ ಹಳಿ ಮೇಲೆ ಒಗೆದಿದ್ದ. ಆದರೆ ಆತ ಕುಡಿದು ಹಾಗೆ ಮಾಡಿದ ಎಂದು ಆತನನ್ನು ಕೈಬಿಟ್ಟರು. ಸ್ಫೋಟಕ್ಕೆ ಮೊದಲು ರೈಲಿನ ವೇಗ ಅದೆಷ್ಟು ಕಡಿಮೆಯಾಗಿತ್ತೆಂದರೆ ಗಂಟೆಗೆ ಕೇವಲ 12 ಕಿ.ಮೀಗೆ ಇಳಿದಿತ್ತು. ಅಂದರೆ ಉಗ್ರರು ಸ್ಫೋಟಕ್ಕೆ ಮೊದಲೇ ಇಳಿದು ಹೋಗಿದ್ದಾರೆ ಎನ್ನುವುದು ಗೊತ್ತಾಯಿತು.

(ನೆನಪಿರಲಿ: ಆಗಿನ ರೈಲ್ವೆ ಸಚಿವ ಇಂದಿನ ಮೇವು ಕಳ್ಳ ಲಾಲೂ ಪ್ರಸಾದ್ ಯಾದವ್; ಗೃಹ ಸಚಿವ ಶಿವರಾಜ ಪಾಟೀಲ್)

ಸಾಮಾನ್ಯವಾಗಿ ಸಿಮಿ ಅಥವಾ ಇಂಡಿಯನ್ ಮುಜಾಹಿದೀನ್ ಉಗ್ರರು ಬಳಸುವ ಐಇಡಿಗಳಿಂದ ಸ್ಫೋಟಗೊಂಡಿದ್ದ ಕೃತ್ಯದ ಹೊಣೆಯನ್ನೂ ಅಭಿನವ ಭಾರತದ ಮೇಲೆ ಹಾಕಿದರು. ವನವಾಸಿ ಕಲ್ಯಾಣಾಶ್ರದ ಸ್ವಾಮಿ ಅಸೀಮಾನಂದ ಸಂಚಿನ ರೂವಾರಿ ಎಂದು ಎನ್ಐಎ ಘೋಷಿಸಿತು. ಇಂಜಿನಿಯರಿಂಗ್ ಪದವೀಧರ ಸಂದೀಪ್ ಡಾಂಗೆ, ಎಲೆಕ್ಟ್ರಿಷಿಯನ್ ರಾಮ್ಜಿ ಕಲ್ಸಂಗ್ರಾ ಸೇರಿದಂತೆ ಹಲವರನ್ನು 2011ರಲ್ಲಿ ಪ್ರಕರಣದ ಆರೋಪಿಗಳನ್ನಾಗಿ ಮಾಡಲಾಯಿತು.

ಭಾರತೀಯ ರಾಜಕಾರಣಿಗಳ ಸೋಗಲಾಡಿತನವನ್ನು ಮತ್ತು ತನಿಖಾ ಸಂಸ್ಥೆಯ ವೈಖರಿಯನ್ನು ನೋಡಿ ಅಮೇರಿಕ ನಕ್ಕುಬಿಟ್ಟಿತು. ಇದು ಲಷ್ಕರ್ ತೊಯ್ಬಾ ಸಂಘಟನೆಯ ಕೃತ್ಯ ಎಂದು ಅದಕ್ಕೆ ಮನದಟ್ಟಾಗಿದ್ದಲ್ಲದೆ, ಎಲ್ಇಟಿಗೆ ಹಣಕಾಸು ನೆರವು ಒದಗಿಸುವ ಅರಿಫ್ ಖಸ್ಮಾನಿಯೇ ಇದರ ರೂವಾರಿ ಎಂದು ಸ್ಪಷ್ಟವಾಗಿ ಹೇಳಿತು. ಆತನ ಮೇಲೆ ಪ್ರವಾಸ ನಿಷೇಧ ಹೇರಿತು. ಇಂದಿಗೂ ವಿಶ್ವಸಂಸ್ಥೆಯಲ್ಲಿ ಖಸ್ಮಾನಿ ಸಂಜೋತಾ ಎಕ್ಸ್ಪ್ರೆಸ್ ಸ್ಫೋಟದ ಶಂಕಿತ ಅಪರಾಧಿಯೇ.

ಬಯಲಾಗಿದೆ ವಿಡಿಯೋ: ಈಗ ಸಫ್ದೋರ್ ನಗೋರಿಯ ಮಂಪರು ಪರೀಕ್ಷೆಯ ವಿಡಿಯೋ ಬಯಲಾಗಿದೆ. ಸಂಜೋತಾ ಎಕ್ಸ್ಪ್ರೆಸ್ ಸ್ಫೋಟದ ಸಂಚಿನಲ್ಲಿ ಭಾಗವಹಿಸಿದ ಅನೇಕರ ಹೆಸರನ್ನು ಆತ ಮಂಪರು ಪರೀಕ್ಷೆಯಲ್ಲಿ ಬಾಯಿಬಿಟ್ಟಿದ್ದಾನೆ. ಹೈದರಾಬಾದಿನ ಅಬ್ದುಲ್ ರಜಾಕ್ಗೆ ಎಲ್ಇಟಿ ನಂಟು ಇದ್ದು, ಮೂಲಕ ಎಕೆ 47 ಶಸ್ತ್ರಾಸ್ತ್ರ ಕೂಡ ದೊರೆಯಿತು ಎಂದು ಹೇಳಿದ್ದಾನೆ. ನಾಸಿರ್ ಸ್ಫೋಟವನ್ನು ನಡೆಸಿದವರಲ್ಲಿ ಒಬ್ಬ ಎಂದು ಬಾಯಿಬಿಟ್ಟಿದ್ದಾನೆ. ಆತ ಕೂಡ ಹೈದರಾಬಾದಿನವನೇ.

ಹಾಗಾದರೆ ಖಸ್ಮಾನಿಗೂ, ರಜಾಕ್ಗೂ ಏನು ಸಂಬಂಧ ಎನ್ನುವ ಪ್ರಶ್ನೆ ಬರುವುದು ಸಹಜ. ಅಬ್ದುಲ್ ರಜಾಕ್ ಹಿನ್ನೆಲೆ ಗಮನಿಸಿದರೆ, ಸ್ಫೋಟಕ್ಕೂ ಎಲ್ಇಟಿಗೂ, ಖಸ್ಮಾನಿ ಏನು ಸಂಬಂಧ ಎನ್ನುವುದು ಸುಲಭವಾಗಿ ತಿಳಿದುಬಿಡುತ್ತದೆ. ಅಬ್ದುಲ್ ರಜಾಕ್ ಜಿಹಾದ್‍ (ಎನ್ನುವ ಪವಿತ್ರ?) ಕೆಲಸದಲ್ಲಿ ತೊಡಗಿಕೊಳ್ಳಲು ಇರಾಕ್ಗೆ ಹೊರಟಿದ್ದಾಗ, ಇರಾನ್ನಲ್ಲಿ ಸಿಕ್ಕಿಬಿದ್ದಿದ್ದ. ನಂತರ ಆತನನ್ನು ಭಾರತಕ್ಕೆ ಒಪ್ಪಿಸಿದ್ದರು. ಈತನಿಗೆ ಎಲ್ಇಟಿ ಮುಖಂಡ ಹಫೀಜ್ ಸಯೀದ್ ಚನ್ನಾಗಿಯೇ ಪರಿಚಯ ಇತ್ತು. ಸಯೀದ್ನಿಂದಲೇ ಆತನಿಗೆ ಖಸ್ಮಾನಿಯ ಪರಿಚಯ ಆಯಿತು. ಆತನ ಸಲುವಾಗಿ ಕೆಲಸ ಮಾಡು ಎಂತಲೂ ಹೇಳಿದ್ದ ಎಂದು ಹೈದರಾಬಾದ್ನಲ್ಲಿ ಪೊಲೀಸ್ ವಿಚಾರಣೆಯ ಸಂದರ್ಭದಲ್ಲಿ ಬಾಯಿ ಬಿಟ್ಟಿದ್ದ. ಆತ ಹೇಳಿಕೊಂಡಿರುವ ಪ್ರಕಾರ ಭಾರತವೇ ಆತನ ಗುರಿಯಾಗಲಿದೆ ಎನ್ನುವುದು ಗೊತ್ತಿರಲಿಲ್ಲವಂತೆ. ಕಡೆಗೆ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಇನ್ನು ಯಾರ ಸಹವಾಸವೂ ಬೇಡ ಅಂತ ಯಾವುದೋ ಉದ್ಯೋಗಕ್ಕೆ ಸೇರಿಕೊಂಡ. ಅಲ್ಲಿಯೂ ಉಗ್ರರು ಬಿಡಲಿಲ್ಲ. ತಮ್ಮ ಪರವಾಗಿ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದರು. ಇನ್ನೊಂದು ಕಡೆ ಪೊಲೀಸರಿಂದ ಒತ್ತಡವಿತ್ತು. ಜೊತೆಗೆ ಉದ್ಯೋಗ ಮಾಡುತ್ತಿದ್ದ ಕಡೆ ಈತ ಒಬ್ಬ ಉಗ್ರ ಎನ್ನುವುದು ಬಯಲಾಗಿ, ಅಲ್ಲಿಂದ ಅವನನ್ನು ಹೊರಹಾಕಲಾಯಿತು. ಕಡೆಗೆ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ಅವನು 2012ರಲ್ಲಿ ತೀರಿಕೊಂಡ.

ಬಹುಶಃ ಜಿಹಾದ್ ಬಗ್ಗೆ ಹುಚ್ಚು ಕನಸಿರುವ ಯಾವುದಾದರೂ ಮುಸ್ಲಿಂ ವ್ಯಕ್ತಿ ಒಂದು ಬಾರಿಯಾದರೂ ಹೈದರಾಬಾದ್ನಲ್ಲಿರುವ ಅಬ್ದುಲ್ ರಜಾಕ್ ಮನೆಗೆ ಹೋಗಿ, ಆತನ ಪರಿಸ್ಥಿತಿ ಏನಾಯಿತು ಎಂದು ತಿಳಿದುಕೊಂಡು ಪಾಠ ಕಲಿತರೆ ಒಳ್ಳೆಯದು. ಜಿಹಾದಿಗಳು ತಮ್ಮವರನ್ನೇ ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ. ಕಷ್ಟ ಬಂದಾಗ ಬೀದಿಗೆ ನೂಕುತ್ತಾರೆ. ಒಂದೂವರೆ ಸಾವಿರದ ಎಂಟುನೂರು ವರ್ಷಗಳಿಂದ ಇಸ್ಲಾಮಿ ಜಿಹಾದ್ ಅನ್ನು ಅವರು ನಡೆಸಿಕೊಂಡು ಬಂದಿದ್ದು ಹೀಗೆಯೇ.

ಇನ್ನೊಬ್ಬ ವ್ಯಕ್ತಿ ನಾಸಿರ್. ಆತನ ಪೂರ್ತಿ ಹೆಸರು ರಜಿಯುದ್ದಿನ್ ನಾಸಿರ್. ಈತನಿಗೆ ಪಾಕಿಸ್ತಾನದಲ್ಲಿ ಭಯೋತ್ಪಾದನೆಯ ತರಬೇತಿ ಆಗಿತ್ತು. ಈತ ಸಿಕ್ಕುಬಿದ್ದಿದ್ದು ಕರ್ನಾಟಕದ ಹೊನ್ನಾಳಿಯಲ್ಲಿ. ಕದ್ದ ಬೈಕೊಂದರ ನಂಬರ್ ಪ್ಲೇಟ್ ಬದಲಾಯಿಸಿ ಚಲಾಯಿಸುತ್ತಿದ್ದಾಗ ಪೊಲೀಸರು ಆತನನ್ನು ಹಿಡಿದರು. ಆಮೇಲಷ್ಟೇ ಈತ ಒಬ್ಬ ಉಗ್ರ ಎಂದು ಗೊತ್ತಾಗಿದ್ದು. ಪೈಕಿ ಸಿಮಿಯ ಮುಖ್ಯಸ್ಥನಾಗಿದ್ದ ಮಧ್ಯಪ್ರದೇಶದ ಸಫ್ದರ್ ನಗೋರಿ ಕೂಡ ಒಬ್ಬ. ನಾಸಿರ್ ಜಾಡನ್ನೇ ಹಿಡಿದುಕೊಂಡು ಕೇರಳದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಇಬ್ಬರು ಹೋಮಿಯೋಪಥಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಹದಿನೇಳು ಸಿಮಿ ಸದಸ್ಯರನ್ನು ಅಂದಿನ ಕರ್ನಾಟಕ ಪೊಲೀಸರು ಬಂಧಿಸಿದ್ದರು. ಉಗ್ರರನ್ನು ಹುಬ್ಬಳ್ಳಿಯ ಕೋರ್ಟ್ಗೆ ಹಾಜರುಪಡಿಸುವ ಮುನ್ನಾ ದಿನ, ಅಲ್ಲಿಯೇ ಒಂದು ಸ್ಫೋಟ ನಡೆದಿತ್ತು. ಇದೂ ಕೂಡ ಹಿಂದೂ ಉಗ್ರರ ಕೃತ್ಯ ಎಂದು ತನಿಖಾಧಿಕಾರಿಗಳು ಜನರ ತಲೆ ಸವರಿದ್ದರು. ನಂತರ ನಡೆದ ವಿಚಾರಣೆಯಲ್ಲಿ ಅಷ್ಟೂ ಜನ ಖುಲಾಸೆಗೊಂಡಿದ್ದರು. ಅದೇ ಸಂದರ್ಭದಲ್ಲಿ ಸಫ್ದರ್ ನಗೋರಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಮಂಪರು ಪರೀಕ್ಷೆ, ಸುಳ್ಳು ಪತ್ತೆ ಯಂತ್ರದ ಮೂಲಕ ಪರೀಕ್ಷೆ, ಆರೋಪಿಗಳ ಬ್ರೈನ್ ಮ್ಯಾಪಿಂಗ್ ಮುಂತಾದವುಗಳಲ್ಲಿ ತೊಡಗಿಕೊಂಡಿದ್ದ ಬೆಂಗಳೂರು ವಿಧಿವಿಜ್ಞಾನ ಕೇಂದ್ರದ ಮಾಲಿನಿಯವರ ಮೇಲೆ ಆರೋಪಗಳನ್ನು ಮಾಡಲಾಯಿತು. ಬಗ್ಗೆ ದೊಡ್ಡ ಚರ್ಚೆಯೇ ನಡೆದಿತ್ತು. ಯುಪಿಎ ಸರ್ಕಾರಕ್ಕೆ ಅದೂ ಒಂದು ನೆಪವಾಯಿತು.

ಇಷ್ಟೆಲ್ಲದರ ಹಿನ್ನೆಲೆಯಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕಾಗಿದೆ: ಒಂದೂವರೆ ಸಾವಿರಕ್ಕೂ ಹೆಚ್ಚು ಮಂಪರು ಪರೀಕ್ಷೆ, ಮೂರೂವರೆ ಸಾವಿರ ಸುಳ್ಳು ಪತ್ತೆ ಪರೀಕ್ಷೆಗಳನ್ನು ಮಾಡಿರುವ ಮಾಲಿನಿಯವರ ಮೇಲೆ ಪಾಕಿಸ್ತಾನದ ಆದೇಶದಂತೆ ಯುಪಿಎ ಆರೋಪಗಳ ಕೂಪದಲ್ಲಿ ಮುಳುಗಿಸಿತೆ? ಬಗ್ಗೆಯೂ ತನಿಖೆ ನಡೆಯಬೇಕಾದ ಅವಶ್ಯಕತೆ ಇದೆ.

ಅದೇನೆ ಇರಲಿ, ನೀವೇ ಹೇಳಿ, ಭಯೋತ್ಪಾದಕರು ದೊಡ್ಡ ಅಪರಾಧಿಗಳೋ, ಭಯೋತ್ಪಾದಕರನ್ನು ರಕ್ಷಿಸಲು ಹೊರಟವರು ದೊಡ್ಡ ಅಪರಾಧಿಗಳೋ, ಭಯೋತ್ಪಾದನೆಗೆ ಮರಣದಂಡನೆಯವರೆಗೆ ಶಿಕ್ಷೆ ನೀಡಬಹುದಾದರೆ, ಅವರನ್ನು ರಕ್ಷಿಸಿದವರಿಗೆ ಇನ್ಯಾವ ಶಿಕ್ಷೆ ನೀಡಬೇಕು?

ಅಂಟೋನಿಯೋ ಮೈನೋ ರಂತಹ ದೇಶದ ಸಂಸ್ಕೃತಿಯೇ ಗೊತ್ತಿಲ್ಲದವರು ಭಯೋತ್ಪಾದಕರನ್ನು ರಕ್ಷಿಸಲು ಹೊರಟಲ್ಲಿ, ಅವರ ಸ್ವಭಾವವೇ ಅದು ಎಂದುಕೊಳ್ಳಬಹುದು. ಆದರೆ ಹುಟ್ಟಿದಾಗಿನಿಂದಲೂ ಮಣ್ಣಿನ ಮೇಲೆ ಓಡಾಡಿ, ಇಲ್ಲಿನ ಅನ್ನ ತಿಂದು, ನೆಲಕ್ಕೆ ದ್ರೋಹ ಬಗೆದವರನ್ನು ಜನ ಕ್ಷಮಿಸಬೇಕೇ? ಲಾಲೂ ಪ್ರಸಾದ್, ಚಿದಂಬರಂ, ಶಿವರಾಜ್ ಪಾಟೀಲ್, ದಿಗ್ವಿಜಯ್ ಸಿಂಗ್ ರಂಥವರನ್ನುಯಾವ ರೀತಿಯಳ್ಳಿ ಶಿಕ್ಷಿಸಬೇಕು ಎಂದು ನೀವೇ ಯೋಚಿಸಿ...!!! ಹಿಂದೂ ಜನಾಂಗದವರನ್ನೇ ಅವಹೇಳನ ಮಾಡಿದಲ್ಲದೆ, ಅವರನ್ನು ಭಯೋತ್ಪಾದಕರೆಂದು ಕರೆದ ನಾಮರ್ದರನ್ನು ಹೇಗೆ ನಮ್ಮ ಸಮಾಜ ಒಪ್ಪಿಕೊಳ್ಳಬೇಕು....!!!!

Related posts