ಚಿತ್ರ.... ನಿಮ್ಮ ಸಾಧನೆಯನ್ನು ನಾವು ಗೌರವಿಸುತ್ತೇವೆ ಹಾಗೆ ಹೆಮ್ಮೆ ಪಡುತ್ತೇವೆ!!
ಆಕೆ ಯಾರೆಂಬುದೇ ತಿಳಿದಿರಲಿಲ್ಲ! ಯಾರು ಸಹ ಆಕೆಯ ಬಗ್ಗೆ ಮಾತನಾಡಲಿಲ್ಲ! ಅಂತಹ ಸಂದರ್ಭದಲ್ಲಿ ಎಲ್ಲರೂ ಚೀನೀ ಅಥವಾ ಜಪಾನಿ ಓಟಗಾರ್ತಿ ಗೆಲ್ಲಬಹುದು ಎಂದೇ ಉಲ್ಲೇಖಿಸುತ್ತಿದ್ದರು. ಕಾಮೆಂಟರಿ ನೀಡುತ್ತಿದವರು ಸಹ ಸುಮಾರು ಎರಡೂವರೆ ನಿಮಿಷ ಪಂದ್ಯ ಪ್ರಾರಂಭವಾಗುವರೆಗೂ ಆಕೆಯ ಹೆಸೆರೇ ಪ್ರಸ್ತಾಪಿಸಲಿಲ್ಲ. ಕೊನೆಗೆ ಸ್ಪರ್ಧಾಳುಗಳ ಹೆಸರು ಹೇಳುವಾಗ ಸಹ ಆಕೆಯ ಹೆಸರನ್ನು ಹೇಳುವವರು ತೊದಲುತ್ತಿದ್ದರು! ಕೊನೆಗೆ ಆಕೆ ತನ್ನೆಲ್ಲ ಚೈತನ್ಯವನ್ನು ಉಪಯೋಗಿಸಿ ಒಳಗಿನ ಅಂಚಿನಿಂದ ಲೀಡ್ ತೆಗೆದುಕೊಳ್ಳಬೇಕಾಯ್ತು!
ಹೀಗೆ ಕೇರಳದ ಪಿ.ಯು ಚಿತ್ರ ಏಶಿಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ೨೦೧೭ ರ ಕ್ರೀಡಾ ಕೂಟದ ೧೫೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದರು!! ಆಕೆಯ ಗೆಲುವನ್ನು ಸಂಭ್ರಮಿಸಲು ಅಂದು ಅಲ್ಲಿ ಯಾರು ಇರಲಿಲ್ಲ! ಚೀನೀ ಮತ್ತು ಜಪಾನೀ ಕ್ರೀಡಾಳುಗಳ ಸಾರ್ವಭೌಮತ್ವಕ್ಕೆ ಕಡಿವಾಣ ಹಾಕಿದ ಈ ಧೀರೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಮುಂಡೂರ್ ಎಂಬ ಪುಟ್ಟ ಗ್ರಾಮದಿಂದ ಬಂದಂತ ಪ್ರತಿಭಾನ್ವಿತೆ. ಆಕೆ ತನ್ನ ಗೆಳತಿಯರಿಂದ ಓಡುವ shoes ಅನ್ನು ಕಡತಂದ ಧರಿಸಿ ಓಡಿದ್ದಳು.... ಆಕೆಯ ಪೋಷಕರು ಕಡು ಬಡತನ ಎದುರಿಸುತ್ತ ದಿನಗೂಲಿ ಕಾರ್ಮಿಕರಾಗಿ ಬದುಕು ಕಟ್ಟುತ್ತಿದ್ದಾರೆ.... ಆಕೆಯ ಶಾಲಾ ಟೀಚರ್ ಆಕೆಯ ಕೋಚ್!!! ಆಕೆ ಶಾಲಾ ದಿನದಿಂದಲೂ ಸಹ ಅತ್ಯುತಮ ಓಟಗಾರ್ತಿ ಆದರೆ ಸಂಬಂದಿಸಿದ ಅಧಿಕಾರಿಗಳ ನಿರುತ್ಸಾಹದಿಂದ ಏನೇನು ಪ್ರೋತ್ಸಾಹ ದೊರೆಯದೆ ಇದ್ದರು ಸಹ ಆಕೆ ದೇಶಕ್ಕೆ ಚಿನ್ನ ತಂದೊಪ್ಪಿಸಿದಳು!!
ಚಿತ್ರ.... ನಿಮ್ಮ ಸಾಧನೆಯನ್ನು ನಾವು ಗೌರವಿಸುತ್ತೇವೆ ಹಾಗೆ ಹೆಮ್ಮೆ ಪಡುತ್ತೇವೆ!! ಇನ್ನಷ್ಟು ಹೆಚ್ಚಿನ ಸಾಧನೆ ನಿಮ್ಮಿಂದ ಸಿದ್ಧಿಸಲಿ! ಹಾಗೆ ಹೆಚ್ಚಿನ ಯಶಸ್ಸು ಸಹ ಪ್ರಾಪ್ತಿಯಾಗಲಿ!