Infinite Thoughts

Thoughts beyond imagination

ಬುದ್ಧಿವಂತರ ಜಿಲ್ಲೆಯಲ್ಲಿ ಕೋಮು ದ್ವೇಷದ ದಳ್ಳುರಿ । ದಕ್ಷಿಣ ಕನ್ನಡದ "ಮುಸ್ಲಿಂ ಪ್ರಾಬ್ಲೆಮ್ " (ಭಾಗ ಒಂದು)

ಸಾಮಾನ್ಯವಾಗಿ ಕರ್ನಾಟಕದ ಯಾವುದೇ ಮೂಲೆಗೆ ಹೋದರೂ ಕೇಳಿ ಬರುವ ಮಾತಿದು...."ದಕ್ಷಿಣ ಕನ್ನಡದ ಜನ ಬುದ್ಧಿವಂತರು". ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ವಿದ್ಯಾವಂತರಿರುವ ಜಿಲ್ಲೆ, ಅತ್ಯಂತ ಹೆಚ್ಚಿನ ಪ್ರಮಾಣದ ಅಕ್ಷರಸ್ಥರಿರುವ ಪ್ರದೇಶ ದಕ್ಷಿಣ ಕನ್ನಡದಲ್ಲಿ ರೀತಿಯ ಕೋಮು ದ್ವೇಷ - ಕೋಮು ಗಲಭೆಗಳು ಯಾಕೆ? ಜನ ವಿದ್ಯಾವಂತರಾದರೂ ಅವರು ವಿವೇಚನಾ ರಹಿತರೇ..? ಸುಮ್ಮ ಸುಮ್ಮನೆ ಕಾರಣವೆ ಇಲ್ಲದೆ ಅಲ್ಲಿ ಹಿಂದೂ - ಮುಸ್ಲಿಮರ ಮಧ್ಯೆ ವೈರತ್ವ ಉಂಟಾಗುತ್ತದೆಯೇ? ದಕ್ಷಿಣ ಕನ್ನಡದ ಜನ ನಮ್ಮ ದೇಶದ ಹಲವಾರು ರಾಜ್ಯಗಳಲ್ಲದೆ ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ವಾಸಿಸುತ್ತಾ ತಾವು ತೊಡಗಿಕೊಂಡಿರುವ ಕ್ಷೇತ್ರಗಳಲ್ಲಿ ತುಂಬಾ ಹೆಸರು, ಖ್ಯಾತಿ ಗಳಿಸಿ, ತಮ್ಮ ಬುದ್ಧಿಮತ್ತೆಯಿಂದ, ನೇರವಂತಿಕೆಯಿಂದ ಎಲ್ಲರ ಮನಸ್ಸನ್ನೂ ಗೆದ್ದವರು. ಆದರೆ ತಮ್ಮ ಹುಟ್ಟೂರಿನಲ್ಲೇ ಯಾಕೆ ಹೀಗೆ ಕೋಮು ದ್ವೇಷ ಹರಡಲು ಅವಕಾಶ ಕೊಡುತ್ತಿದ್ದಾರೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಎಲ್ಲಾ ಪ್ರಶ್ನೆಗಳಿಗೆ ಉತ್ತರ ಅಷ್ಟು ಸರಳವಿಲ್ಲ.

ಇಂಥ ಪರಿಸ್ಥಿತಿ ಅಲ್ಲಿ ಒಮ್ಮಿಂದೊಮ್ಮೆಲೆ ಉಂಟಾದದ್ದಲ್ಲ. ಅಲ್ಲೀಗ ಹೊತ್ತುರಿಯುತ್ತಿರುವ ಕೋಮು ದ್ವೇಷದ ಬೆಂಕಿಗೆ ನೂರಾರು ವರ್ಷಗಳ ಇತಿಹಾಸವಿದೆ... ಸಾಮಾಜಿಕ, ಸಾಂಸ್ಕೃತಿಕ, ಅರ್ಥಿಕ, ಮಗ್ಗುಲುಗಳಿವೆ. ಬಲವಾದ ಧಾರ್ಮಿಕ ಕಾರಣಗಳಿವೆ. ಸ್ವಾಭಾವಿಕವಾಗಿ ತುಂಬಾ ಸರಳ ಸಜ್ಜನಿಕೆ, ಬುದ್ಧಿವಂತಿಕೆ, ಜೊತೆಗೆ ವಿದ್ಯೆಯೂ ಇರುವ ಅಲ್ಲಿನ ಜನರಲ್ಲಿ ನಿಜಕ್ಕೂ ಸುದ್ದಿ ಮಾಧ್ಯಮಗಳು ಆರೋಪಿಸುವ ಹಾಗೆ ಮಟ್ಟದ 'ಅಸಹಿಷ್ಣುತೆ" ಇದೆಯೇ..? ಅಲ್ಲಿನ ಹಿಂದೂಗಳು ವಿನಾಕಾರಣ ಮುಸ್ಲಿಮರನ್ನು ದ್ವೇಷಿಸುತ್ತಾರಾ? ಇದಕ್ಕೆಲ್ಲಾ ಅಷ್ಟು ಸುಲಭದಲ್ಲಿ ಉತ್ತರ ಸಿಗುವುದಿಲ್ಲ.... ದಕ್ಷಿಣ ಕನ್ನಡ ಜಿಲ್ಲೆಯ ಪಕ್ಕವೇ ಇರುವ, ಹಿಂದೆ ದಕ್ಷಿಣ ಕನ್ನಡದ ಭಾಗವೇ ಆಗಿದ್ದ ಉಡುಪಿಗೆ ಹೋಲಿಸಿದರೆ ದಕ್ಷಿಣ ಕನ್ನಡದಲ್ಲಾಗುತ್ತಿರುವ ಕೋಮು ಗಲಭೆಗಳು ತುಂಬಾ ಹೆಚ್ಚು. ಯಾಕೆ ಹೀಗೆ?

ತುಳುನಾಡಿನ ಜನ ಅದೆಷ್ಟು ಸಾಹಸಿಗರು, ಸ್ನೇಹಜೀವಿಗಳು, ಪರಭಾಷೆ, ಮತ, ಧರ್ಮ ಸಹಿಷ್ಣುಗಳು ಎಂಬುದಕ್ಕೆ ತುಳುನಾಡಿನ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಅಸಂಖ್ಯ ಉದಾಹರಣೆಗಳು ಸಿಗುತ್ತವೆ. ಕ್ರಿ. ನಾಲ್ಕನೆಯ ಶತಮಾನದಿಂದ ಹದಿನೈದನೆಯ ಶತಮಾನದವರೆಗೆ ಆಳಿದ ತುಳು ರಾಜವಂಶ ಅಳೂಪರಿಂದ ಹಿಡಿದು, ನಂತರದ ಕಾಲಘಟ್ಟದಲ್ಲಿ ವಿಜಯನಗರ ಸಾಮ್ರಾಜ್ಯವನ್ನಾಳಿದ ತುಳುವ ರಾಜವಂಶದ ಶ್ರೀ ಕೃಷ್ಣದೇವರಾಯ ಮುಂತಾದ ಹಲವಾರು ತುಳು ಅರಸರು ಎಲ್ಲಾ ಮತಧರ್ಮ ಜಾತಿ ಭಾಷೆಗಳ ಜನರನ್ನು ಅತ್ಯಂತ ಸ್ನೇಹ ಪ್ರೀತಿಯಿಂದ ಕಂಡವರು.

ಅರಬ್ ದೇಶದಲ್ಲಿ ಇಸ್ಲಾಮ್ ಹುಟ್ಟೋದಕ್ಕಿಂತಲೂ ಮುಂಚೆಯೇ ಅಲ್ಲಿಯ ವರ್ತಕರು ತುಳುನಾಡಿಗೆ, ಅಂದರೆ ಅನಾದಿಕಾಲದಿಂದಲೂ ಬರುತ್ತಿದ್ದರು. ಅರಬರು ಮುಸ್ಲಿಮರಾಗೋದಕ್ಕಿಂತಲೂ ಹಿಂದೆಯೇ ದಕ್ಷಿಣ ಕನ್ನಡದ ಜನ ಅವರಿಗೆ ಅನ್ನ ನೀಡಿ ಸಲಹಿದ್ದರು. ಅರಬ್ ದೇಶದ ಜನರಿಗೆ ಅಕ್ಕಿ ಸರಬರಾಜು ಮಾಡುತ್ತಿದ್ದ ಪ್ರಮುಖ ಬಂದರು ಮಂಗಳೂರಾಗಿತ್ತು. ಬಳಿಕ ಇಸ್ಲಾಮ್ ಹುಟ್ಟಿಕೊಂಡು ಅರಬರು ಮುಸ್ಲಿಮರಾದ ಬಳಿಕವೂ ಮಂಗಳೂರಿನ ಜನತೆ ಮುಸ್ಲಿಂ ಅರಬ್ ವರ್ತಕರನ್ನು ಬಹಳ ಪ್ರೀತಿಯಿಂದಲೇ ಸ್ವೀಕರಿಸಿತ್ತು.

ಪ್ರವಾದಿ ಮಹಮ್ಮದ್ ತೀರಿಹೋಗಿ ಕೇವಲ ಹದಿನಾಲ್ಕು ವರ್ಷ ಕಳೆಯುವಷ್ಟರಲ್ಲೇ, ಅಂದರೆ ೬೪೪ನೇ ಇಸವಿಯಲ್ಲಿ ಮಂಗಳೂರಿನ ಬಂದರಿನಲ್ಲಿ ದಕ್ಷಿಣ ಕನ್ನಡದ ಪ್ರಥಮ ಮಸೀದಿಯ ನಿರ್ಮಾಣಕ್ಕೆ ತುಳುನಾಡಿನ ಅರಸರು ಮತ್ತು ಜನ ಅವಕಾಶ ನೀಡಿದ್ದರು. ಹಬೀಬ್ ಬಿನ್ ಮಲಿಕ್ ಎಂಬ ಅರಬ್ ವ್ಯಾಪಾರಿಯೊಬ್ಬ ಮಂಗಳೂರು ಬಂದರಿನಲ್ಲಿ ಜೀನತ್ ಬಕ್ಷ್ ಮಸೀದಿ ನಿರ್ಮಾಣ ಮಾಡಿದ್ದ. ಕೇರಳದ ಕಲ್ಲಿಕೋಟೆಯ ಅರಬ್ ಮುಸ್ಲಿಂ ವ್ಯಾಪಾರಿಗಳಿಗೆ ಮಂಗಳೂರು ಮತ್ತು ಬಸ್ರೂರಿನಲ್ಲಿ ಏಜೆಂಟರಿದ್ದರು. ಹೀಗೆ ಅರಬರಿಗೆ ಅವರು ಮುಸ್ಲಿಮರಲ್ಲದಿರುವಾಗಲೂ, ಮುಸ್ಲಿಮರಾದ ಮೇಲೂ ಮಂಗಳೂರಿನ ಜನ ಪ್ರೀತ್ಯಾದರಗಳನ್ನು ತೋರಿದ್ದರು.

ಆದರೆ ನಿಧಾನವಾಗಿ ನೂರಾರು ವರ್ಷಗಳ ಅವಧಿಯಲ್ಲಿ ದಕ್ಷಿಣ ಕನ್ನಡದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತಾ ಬಂದಂತೆಲ್ಲ ನಿಧಾನವಾಗಿ ಸ್ಥಳೀಯರಲ್ಲಿ ಅವರ ಬಗ್ಗೆ ಪ್ರೀತ್ಯಾದರಗಳು ಕಡಿಮೆಯಾಗುತ್ತಾ ಬಂದವು. ದಕ್ಷಿಣ ಕನ್ನಡದಲ್ಲಿರುವ ಬಹುತೇಕ ಮುಸ್ಲಿಮರು "ಬ್ಯಾರಿ" ಗಳೆಂದು ಕರೆಸಿಕೊಳ್ಳುವ ನಿರ್ದಿಷ್ಟ ಪಂಗಡದವರು. ಇವರು ಮಾತಾನಾಡುವ ಮಲಯಾಳಂ- ತುಳು- ಕನ್ನಡ ಮಿಶ್ರಿತ ಬ್ಯಾರಿ ಭಾಷೆ ಇವರ ಮೂಲವನ್ನು ಹೇಳುತ್ತದೆ. ಪ್ರಾರಂಭಿಕ ಹಂತದಲ್ಲಿ ಬ್ಯಾರಿಗಳು ಬಂದದ್ದು ಕೇರಳದ ಮಲಬಾರಿನಿಂದ. ಅಲ್ಲಿ ಇವರು ಮಾಪಿಳ್ಳೆ ಅಂತ ಕರೆಸಿಕೊಳ್ಳುತ್ತಿದ್ದರು. ವ್ಯಾಪಾರಕ್ಕೆಂದು ಬಂದ ಅರಬ್ ವರ್ತಕರು ಇಲ್ಲಿನ ಮಲೆಯಾಳಿ ಹೆಣ್ಣುಮಕ್ಕಳನ್ನು ಮದುವೆಯಾಗಿ ಹಾಗೆಯೇ ಬೆಳೆದ ಸಮುದಾಯವಿದು. ಇವರೇ, ಮುಂದೆ ಮಂಗಳೂರಿಗೂ ವ್ಯಾಪಾರಕ್ಕಾಗಿ ಬಂದು ಇಲ್ಲಿಯೇ ನೆಲೆಯೂರತೊಡಗಿದರು. ನಿಧಾನವಾಗಿ ತಮ್ಮ ಇಸ್ಲಾಮ್ ಧರ್ಮ ಸ್ಥಾಪನೆ ಮಾಡತೊಡಗಿದರು. ಒಂದುಕಾಲದಲ್ಲಿ ಮಂಗಳೂರಿನ ಬಂದರು ಪ್ರದೇಶದಲ್ಲಿನ ವರ್ತಕರ ಪೈಕಿ ಜೈನರೇ ಅತಿಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ ಬ್ಯಾರಿ ವರ್ತಕರು ಮಂಗಳೂರಿನ ಕಡೆಗೆ ಹೆಚ್ಚೆಚ್ಚು ಬರತೊಡಗಿದಂತೆ ಜೈನರ ಪ್ರಾಬಲ್ಯ ನಶಿಸತೊಡಗಿತು. ಮಂಗಳೂರಿನ ಇವತ್ತಿನ ಹಳೆ ಬಂದರು ಪ್ರದೇಶವೇ ದಕ್ಷಿಣ ಕನ್ನಡದ ಬ್ಯಾರಿಗಳ ಮೂಲ ಎನ್ನಬಹುದು. ಯಾಕೆಂದರೆ ಮಂಗಳೂರಿಗೆ ವ್ಯಾಪಾರದ ನೆಪದಲ್ಲಿ ಬಂದ ಬ್ಯಾರಿಗಳು ಅಲ್ಲಿದ್ದ ಜೈನ ಮನೆತನಗಳನ್ನು ಮತಾಂತರ ಮಾಡತೊಡಗಿದರು. ಜೈನ ಅವಿಭಜಿತ ಕುಟುಂಬಗಳು ತಮ್ಮ ಮನೆತನವನ್ನು "ಬೀಡು" ಅಂತ ಕರೆದುಕೊಳ್ಳುತ್ತಿದ್ದವು. ಹಾಗಾಗಿಯೇ ಇದೇ ಜೈನರು ಮುಸ್ಲಿಮರಾಗಿ ಮತಾಂತರಗೊಂಡ ಮೇಲೆ ಅವರ ಆಚಾರಗಳನ್ನು ಬ್ಯಾರಿಗಳೂ ಅಳವಡಿಸಿಕೊಂಡರು. ಮಂಗಳೂರಿನ ಮೂಲ ಬ್ಯಾರಿಗಳು "ಪೌನಾರ್" (ಹದಿನಾರು) "ಆಗಾ "(ಮನೆತನ) ಗಳನ್ನೂ ಹೊಂದಿದ್ದಾರೆ. ಮತಾಂತರಗಳ ಮೂಲಕ ಮತ್ತು ಮಲಬಾರಿನ ಮಾಪಿಳ್ಳೆ ಮುಸ್ಲಿಮರ ವಲಸೆಯ ಮೂಲಕ ದಕ್ಷಿಣ ಕನ್ನಡದ ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಾ ಸಾಗಿತು.

೧೯೦೧ ಜನಗಣತಿಯ ಪ್ರಕಾರ ದಕ್ಷಿಣ ಕನ್ನಡದ ಜನಸಂಖ್ಯೆ ಕೇವಲ ಹನ್ನೊಂದು ಲಕ್ಷದ ಮೂವತ್ನಾಲ್ಕು ಸಾವಿರದ ಏಳುನೂರಾ ಹದಿಮೂರು. ಪೈಕಿ ಶೇ. ೮೧ ಹಿಂದೂಗಳಿದ್ದರೆ,ಮುಸ್ಲಿಮರ ಸಂಖ್ಯೆ ಶೇಕಡಾ ೧೧ ರಷ್ಟಿತ್ತು.

ಹೀಗೆ ದಕ್ಷಿಣ ಕನ್ನಡದಲ್ಲಿ ಸಾವಿರದ ಮುನ್ನೂರೈವತ್ತು ವರ್ಷ ಇತಿಹಾಸವಿರುವ ಮುಸ್ಲಿಮರು ೧೯೨೦ರ ನಂತರ ಮತ್ತು ಬಳಿಕ ದೇಶ ಸ್ವತಂತ್ರವಾದ ಬಳಿಕ ಹಂತ-ಹಂತವಾಗಿ ಜಿಲ್ಲೆಯ ಸಾಂಸ್ಕೃತಿಕ, ಸಾಮಾಜಿಕ ಸಾಮರಸ್ಯಕ್ಕೆ ಕುಂದುಂಟಾಗುವ ರೀತಿಯಲ್ಲಿ ಬೆಳೆಯಲಾರಂಭಿಸಿದರು.

ಆಶ್ಚರ್ಯವೆಂದರೆ ನೂರಾರು ವರ್ಷಗಳಿಂದ ಜಿಲ್ಲೆಯನ್ನಾಳಿದ ಎಲ್ಲಾ ಆಳರಸರೂ ಬ್ಯಾರಿ ಮುಸ್ಲಿಮರಿಗೆ ಸಾಮಾಜಿಕವಾಗಿ ಸಾಕಷ್ಟು ಮನ್ನಣೆ ನೀಡಿದ್ದರು. ಸಮಾಜದಲ್ಲಿ ಸಮಾನ ಅವಕಾಶಗಳನ್ನಿತ್ತು ಅವರನ್ನು ಪೋಷಿಸಲಾಗಿತ್ತು. ಆದರೆ ದಕ್ಷಿಣ ಕನ್ನಡದ ಹಿಂದೂ - ಮುಸ್ಲಿಂ ಸಾಮರಸ್ಯ ಮೊದಲ ಬಾರಿಗೆ ಕದಡಿ ಹೋದದ್ದು ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನನ ಕಾಲದಲ್ಲಿ. ಆಗ ಕೇರಳದಲ್ಲಿ ತಮ್ಮ ಸಂಖ್ಯೆಯನ್ನು ಸಾಕಷ್ಟು ವೃದ್ಧಿಸಿಕೊಂಡಿದ್ದ ಮಾಪಿಳ್ಳೆ ಮುಸ್ಲಿಮರು ಸ್ಥಳೀಯ ಹಿಂದೂಗಳ ವಿರುದ್ಧ ತಿರುಗಿ ಬಿದ್ದು ದೊಡ್ಡ ಮಟ್ಟದ ಹಿಂಸಾಚಾರ, ಬಲವಂತದ ಮತಾಂತರದಲ್ಲಿ ತೊಡಗಿಸಿಕೊಂಡರು. ಕೇರಳದ ಗಾಳಿ ಪಕ್ಕದ ದಕ್ಷಿಣ ಕನ್ನಡಕ್ಕೂ ಬೀಸಿತು.

ಬಳಿಕ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮೋಹನ್ ದಾಸ್ ಗಾಂಧೀ ಒಂದು ಅತಿಘೋರ ತಪ್ಪೆಸಗಿಬಿಟ್ಟರು. ಬಹುಷಃ ಇದು ಭಾರತದಲ್ಲಿ ಮುಸ್ಲಿಮರ ಓಲೈಕೆಯ ಹಾಗು ತುಷ್ಟೀಕರಣದ ದೊಡ್ಡ ರಾಜಕೀಯ ನಿರ್ಧಾರವಾಗಿತ್ತು. ಭಾರತೀಯ ಮುಸ್ಲಿಮರು ತುರ್ಕಿಯಲ್ಲಿ ಒಟ್ಟೋಮನ್ ಖಲೀಫನನ್ನು ಪುನರ್ಸ್ಥಾಪಿಸಬೇಕೆಂದು ಶುರು ಮಾಡಿದ ಹಿಂಸಾತ್ಮಕ "ಖಿಲಾಫತ್ ಚಳುವಳಿ"ಯನ್ನು ಗಾಂಧೀ ಬೆಂಬಲಿಸಿದರು. ಇಲ್ಲಿ ಕೇರಳದಲ್ಲಿ ಇದೇ ನೆಪದಲ್ಲಿ ಶುರುವಾದ ಮಾಪಿಳ್ಳೆಗಳ ಹಿಂಸಾತ್ಮಕ ಕ್ರೌರ್ಯ ಹಿಂದೂಗಳ ಮೇಲಿನ ಅತ್ಯಾಚಾರ ಕೊಲೆ, ಮತಾಂತರದತ್ತ ತಿರುಗಿತು. ಭಯಾನಕ ಹಿಂದೂ ನರಮೇಧವನ್ನು ಅಂದು ಇದೆ ಗಾಂಧೀ ಸಮರ್ಥಿಸಿಕೊಂಡಿದ್ದರು....! ಆದರೆ ಹೋಂ ರೂಲ್ ಚಳವಳಿಯ ನೇತಾರೆ, ಕಾಂಗ್ರೆಸ್ ಮುಖಂಡೆ, ಬ್ರಿಟಿಷ್ ಪ್ರಜೆಯಾದರೂ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನ್ನಿ ಬೆಸಂಟ್ ಕ್ರೌರ್ಯ ಕಂಡು ಹೌಹಾರಿ ಖಂಡಿಸಿದರು. ಮಾಪಿಳ್ಳೆಗಳ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದ ಮತ್ತೊಬ್ಬ ಮೇರು ವ್ಯಕ್ತಿಯೆಂದರೆ ಅದು ಡಾ। ಬಾಬಾ ಸಾಹೇಬ್ ಅಂಬೇಡ್ಕರ್.. ಕಾಂಗ್ರೆಸ್ ಯಾವತ್ತಿಗೂ ಮಾಪಿಳ್ಳೆ ಮುಸ್ಲಿಮರ ಭೀಕರ ಹತ್ಯಾಕಾಂಡವನ್ನು ಖಂಡಿಸದೆ ಸಮರ್ಥಿಸಿ ಮುಸ್ಲಿಮರ ಓಲೈಕೆ ಮುಂದುವರಿಸಿತು!

ಅಂದಾಜು ಒಂದು ಲಕ್ಷದಷ್ಟು ಹಿಂದೂಗಳು ನಿರಾಶ್ರಿತರಾಗಿ ಮನೆಮಠ ಬಿಟ್ಟು ಪಲಾಯನಮಾಡಿದರು. ಜೀವ ಕಳಕೊಂಡವರ ಲೆಕ್ಕ ಸಿಗಲೇ ಇಲ್ಲ. ವಿಚಿತ್ರವೆಂದರೆ ಅಂದು ಕೇರಳದ ಮಲಬಾರ್ ಪ್ರಾಂತ್ಯದ ಹಿಂದೂಗಳ ನೆರವಿಗೆ ಬಂದದ್ದು ಬ್ರಿಟಿಷರೇ.... ನಿರ್ದಾಕ್ಷಿಣ್ಯವಾಗಿ ಮಾಪಿಳ್ಳೆ ಮತಾಂಧರ ಮೇಲೆ ದಾಳಿ ನಡೆಸಿದ ಬ್ರಿಟಿಷರು ಹತ್ತತ್ತಿರ ನಲವತ್ತು ಸಾವಿರ ಮಾಪಿಳ್ಳೆಗಳನ್ನು ಬಂಧಿಸಿ ಜೈಲಿಗಟ್ಟಿದರು. ಮಾಪಿಳ್ಳೆ ದಂಗೆಯ ನಾಯಕರನ್ನೆಲ್ಲಾ ಗಲ್ಲಿಗೇರಿಸಿದರು. ಆಗ ದೊಡ್ಡ ಸಂಖ್ಯೆಯ ಮಾಪಿಳ್ಳೆಗಳು ಬ್ರಿಟಿಷರಿಗೆ ಹೆದರಿ ಮಲಬಾರ್ ಬಿಟ್ಟು ಕಾಸರಗೋಡು, ದಕ್ಷಿಣ ಕನ್ನಡದ ಕಡೆಗೆ ದೊಡ್ಡ ಮಟ್ಟದಲ್ಲಿ ವಲಸೆ ಬಂದರು.(ಸಾವಿರಾರು ಮಾಪಿಳ್ಳೆ ಮುಸ್ಲಿಮರು ಪಾಕಿಸ್ತಾನದ ಕರಾಚಿಗೂ ಮುಂಬೈ ಮೂಲಕ ವಲಸೆ ಹೋದರು... ಮಾಪಿಳ್ಳೆಗಳು ಇಸ್ಲಾಮಿಕ್ ದೇಶ ಪಾಕಿಸ್ತಾನದಲ್ಲಿ ಈಗ ದಯನೀಯವಾಗಿ ಜೀವಿಸುತ್ತಿದ್ದಾರೆ!)

ಹೀಗೆ ಕೇರಳದಿಂದ ವಲಸೆ ಬಂದ ಮುಸ್ಲಿಮರು ಮಲೆಯಾಳ ಭಾಷೆ ಮಾತಾಡುವವರಾಗಿದ್ದು ಸ್ಥಳೀಯ ಬ್ಯಾರಿ ಭಾಷೆ ಮಾತಾಡುವ ಮುಸ್ಲಿಮರೊಡನೆ ಬೆರೆತುಹೋದರು. ಸ್ಥಳೀಯ ಮುಸ್ಲಿಮರು ಮತ್ತವರ ವಿಶಿಷ್ಟ ಬ್ಯಾರಿ ಭಾಷೆ ಕೂಡಾ ಮಲೆಯಾಳಂ ಮತ್ತು ತುಳು ಭಾಷೆಗಳ ಮಿಶ್ರ ತಳಿ! ಹಿಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ, ಪುತ್ತೂರು,ವಿಟ್ಲಾ ಮುಂತಾದ ಕಡೆಗಳಲ್ಲಿ ಸ್ಥಳೀಯ ಮುಸ್ಲಿಮರನ್ನು "ಮಾಪಳೆ" ಅಂತಲೇ ಕರೆಯುತ್ತಾರೆ.

ತದನಂತರ ಸ್ವಾತಂತ್ರ್ಯ ದೊರಕಿದ ಹೊಸದರಲ್ಲಿ ಕೇರಳದಿಂದ ಮಾಪಿಳ್ಳೆಗಳು ದೊಡ್ಡ ಸಂಖ್ಯೆಯಲ್ಲಿಯೇ ದಕ್ಷಿಣ ಕನ್ನಡಕ್ಕೆ ವಲಸೆ ಬಂದರು. ಹಾಗೆ ಬಂದವರು ಗುಂಪು ಗುಂಪಾಗಿ ಸ್ಥಳೀಯರ ಜಾಗಗಳನ್ನು ಬಲವಂತವಾಗಿ ಆಕ್ರಮಿಸಿಕೊಂಡರು. ಅಷ್ಟರಲ್ಲಿ ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದರು. ಕಾಂಗ್ರೆಸ್ ಆಡಳಿತ ಶುರುವಾಗಿತ್ತು. ಹಾಗಾಗಿ ಕೇರಳದಿಂದ ದಕ್ಷಿಣ ಕನ್ನಡಕ್ಕೆ ಬಂದ ಮಾಪಿಳ್ಳೆಗಳ ದೌರ್ಜನ್ಯವನ್ನು ಕೇಳುವವರೇ ಇರಲಿಲ್ಲ. ಕಾಸರಗೋಡು, ಅದಕ್ಕೆ ಹೊಂದಿಕೊಂಡ ಸುಳ್ಯ, ಪುತ್ತೂರು, ವಿಟ್ಲ, ಮಂಗಳೂರು ಮುಂತಾದ ಕಡೆಗಳಿಂದ ಜಿಲ್ಲೆಯೊಳಗೆ ನುಸುಳಿ ಬಂದ ಮಾಪಿಳ್ಳೆ ಮುಸ್ಲಿಮರು ಸ್ಥಳೀಯವಾಗಿ ಆಗಲೇ ನೆಲೆಯೂರಿದ್ದ ಬ್ಯಾರಿಗಳ ಸಹಾಯ ಪಡೆದು ಇಲ್ಲೇ ನೆಲೆಯೂರತೊಡಗಿದರು.

ಹೀಗೆ ವಲಸೆ ಬಂದ ಮಾಪಿಳ್ಳೆಗಳು ಭೂಮಿಯನ್ನು ಅತಿಕ್ರಮವಾಗಿ ವಶಪಡಿಸಿಕೊಳ್ಳತೊಡಗಿದರು. ಆಗೆಲ್ಲಾ ಬ್ರಿಟಿಷರು ತಮ್ಮ ಆಡಳಿತದಲ್ಲಿ ಸರ್ವೇ ನಡೆಸಿ ಭೂಮಿಯ ಹಂಚಿಕೆ ಮಾಡಿದ್ದರು. ಆದರೆ ದಕ್ಷಿಣ ಕನ್ನಡದ ಎಷ್ಟೋ ಕಡೆ ಚಿಕ್ಕ ಪುಟ್ಟ ಆಳರಸರು ಆಳ್ವಿಕೆ ನಡೆಸುತ್ತಿದ್ದುದರಿಂದ ಹಲವಾರು ಗ್ರಾಮ, ಹಳ್ಳಿಗಳೇ ಇಂತಹ ಚಿಕ್ಕಪುಟ್ಟ ಆಳರಸರ ಕೈಯಲ್ಲಿತ್ತು. ಇಂಥ ಭೂಮಿಗಳನ್ನು ವಲಸೆ ಬಂದ ಮಾಪಿಳ್ಳೆಗಳು ನಿರ್ಭೀತರಾಗಿ ಆಕ್ರಮಿಸಿಕೊಂಡರು. ಅವರನ್ನು ತಡೆಯುವವರಾರೂ ಇರಲಿಲ್ಲ. ನಿಧಾನವಾಗಿ ಜಾಗಗಳಿಗೆ ಜಮೀನು ದಾಖಲೆಗಳು ಅಧಿಕೃತವಾಗಿಯೇ ದೊರೆತವು. ಈಗ ಮುಸ್ಲಿಂ ಸಂಖ್ಯಾ ಬಾಹುಳ್ಯವಿರುವ ಸ್ಥಳಗಳಲ್ಲಿನ ಕೇವಲ ೫೦-೬೦ ವರ್ಷಗಳ ಹಿಂದಿನ ಭೂದಾಖಲೆಗಳನ್ನು ಇವತ್ತೂ ಪರಿಶೀಲಿಸಿ ನೋಡಿದರೂ ಭೂಮಿಯ ನಿಜವಾದ ವಾರಸತ್ವ ಯಾರದಿತ್ತು ಅನ್ನೋದು ತಿಳಿಯುತ್ತದೆ. ಇಂಥ ಹಲವಾರು ಗ್ರಾಮಗಳು ಇವತ್ತಿಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಹೀಗೆ ದಕ್ಷಿಣ ಕನ್ನಡದಲ್ಲಿ ನಿಧಾನವಾಗಿ ಮುಸ್ಲಿಮರ ಜನಸಂಖ್ಯೆ ವೃದ್ಧಿಸುತ್ತಾ ಬಂತು. ಅದಕ್ಕೆ ಸರಿಯಾಗಿ ಹಿಂದೂಗಳ ಜನಸಂಖ್ಯೆ ಕುಸಿಯುತ್ತಾ ಬಂತು.

೧೯೦೧ ಜನಗಣತಿಯಲ್ಲಿ ದಕ್ಷಿಣ ಕನ್ನಡದಲ್ಲಿ ಶೇ. ೮೧ ಹಿಂದೂಗಳಿದ್ದರೆ ಸರಿಯಾಗಿ ನೂರು ವರ್ಷಗಳ ನಂತರ ಅಂದರೆ ೨೦೦೧ ರಲ್ಲಿ ಹಿಂದೂಗಳ ಸಂಖ್ಯೆ ಶೇ. ೬೮ಕ್ಕೆ ಇಳಿಯಿತು.!

ಅದಾದ ಬಳಿಕ ೨೦೧೧ರಲ್ಲಿ ಅಂದರೆ ಕೇವಲ ಹತ್ತೇ ವರ್ಷದಲ್ಲಿ ಮತ್ತೆ ಇಳಿಕೆ ಕಂಡು ಶೇ. ೬೭. ರಷ್ಟಾಯಿತು! ಅದೇ ವೇಳೆ ೧೯೦೧ರಲ್ಲಿ ಶೇ. ೧೧ ರಷ್ಟಿದ್ದ ಮುಸ್ಲಿಮರ ಸಂಖ್ಯೆ ಗಣನೀಯ ಪ್ರಮಾಣದ ಹೆಚ್ಚಳವಾಗಿ ೨೦೦೧ರಲ್ಲಿ ಶೇ. ೨೪.೦೨ ರಷ್ಟಾಗಿದೆ.

೨೦೧೧ರ ಜನಗಣತಿಯ ಅನುಸಾರ ದಕ್ಷಿಣ ಕನ್ನಡದಲ್ಲಿ ಹಿಂದೂಗಳ ಸಂಖ್ಯೆ ತಾಲೂಕುವಾರು ಹೀಗಿದೆ-

ಮಂಗಳೂರು ತಾಲೂಕು - ಶೇ. ೬೪.೪೩
ಬಂಟ್ವಾಳ ತಾಲೂಕು - ಶೇ. ೬೧.೨೭
ಬೆಳ್ತಂಗಡಿ - ಶೇ. ೭೧.೬೯
ಪುತ್ತೂರು - ಶೇ. ೭೧.೬೩
ಸುಳ್ಯ - ಶೇ. ೮೫.೦೪

ಅದೇ ವೇಳೆ ಮುಸ್ಲಿಮರ ಸಂಖ್ಯೆ ಸಂಖ್ಯೆ ತಾಲೂಕುವಾರು ಹೀಗಿದೆ.

ಮಂಗಳೂರು ತಾಲೂಕು - ಶೇ. ೨೩.೮೫
ಬಂಟ್ವಾಳ ತಾಲೂಕು - ಶೇ. ೩೨.೪೭
ಬೆಳ್ತಂಗಡಿ - ಶೇ. ೧೯.೨೬
ಪುತ್ತೂರು - ಶೇ. ೨೨.೭೧
ಸುಳ್ಯ - ಶೇ. ೧೩.೪೭

೨೦೦೧ ಮತ್ತು ೨೦೧೧ ಜನಗಣತಿ ಅಂಕಿ-ಅಂಶಗಳನ್ನು ಗಮನಿಸಿದರೆ ಹತ್ತೇ ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳ ಸಂಖ್ಯೆ ಶೇ. . ೪೧ ರಷ್ಟು ಕಡಿಮೆಯಾಗಿದ್ದರೆ, ಮುಸ್ಲಿಮರು ಶೇ. .೯೪ ಹೆಚ್ಚಾಗಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಹಿಂದೂಗಳ ಜನಸಂಖ್ಯೆ ೨೦೧೧ ಜನಗಣತಿಯ ಪ್ರಕಾರ ಶೇ. ೮೩.೮೬ ರಷ್ಟಿದೆ. ಆದರೆ ಅದೇ ವೇಳೆ ದಕ್ಷಿಣ ಕನ್ನಡದಲ್ಲಿ ಹಿಂದೂಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಆಗಿ (ಶೇ. ೬೭. ) ಮತ್ತು ಮುಸ್ಲಿಂ ಜನಸಂಖ್ಯೆಯಲ್ಲಿ ಗಣನೀಯ ಏರಿಕೆ (ಶೇ. ೨೪.೦೨) ಆಗಿದ್ದು, ಇದೇ ಇವತ್ತಿನ ಸಮಸ್ಯೆಗಳಿಗೆ ಮೂಲ ಕಾರಣ.

ಮುಸ್ಲಿಮರ ಜನಸಂಖ್ಯೆಯಲ್ಲಿ ಹೆಚ್ಚಳ ಇಡೀ ಜಿಲ್ಲೆಯಲ್ಲಿ ಏಕಪ್ರಕಾರವಾಗೇನೂ ಇಲ್ಲ. ಜಿಲ್ಲೆಯ ೪೧ ಪಟ್ಟಣ ಪ್ರದೇಶಗಳ ಪೈಕಿ ೧೨ ರಲ್ಲಿ ಈಗಾಗಲೇ ಮುಸ್ಲಿಮರು ಬಹುಸಂಖ್ಯಾಕರಾಗಿದ್ದಾರೆ ಮತ್ತು ಹಿಂದೂಗಳೇ ಅಲ್ಪಸಂಖ್ಯಾಕರಾಗಿದ್ದಾರೆ!

ಬೇರೆ ಎಂಟು ಕಡೆಗಳಲ್ಲಿ ಮುಸ್ಲಿಮರ ಸಂಖ್ಯೆ ಹತ್ತತ್ತಿರ ಶೇ. ೪೦ ರಷ್ಟಿದೆ..... ಅಂದರೆ ಇನ್ನು ಒಂದೇ ದಶಕದೊಳಗೆ ಇಲ್ಲೆಲ್ಲಾ ಮುಸ್ಲಿಮರು ಬಹುಸಂಖ್ಯಾಕರಾಗಲಿದ್ದಾರೆ. ಕೆಳಗಿನ ಅಂಕಿ ಅಂಶಗಳ ಪಟ್ಟಿಯನ್ನೊಮ್ಮೆ ಗಮನಿಸಿದರೆ ನಿಮಗೆ ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿ ಅರ್ಥವಾದೀತು. ಇಷ್ಟೆಲ್ಲಾ ಅಂಕಿ ಅಂಶಗಳನ್ನು ಗಮನಿಸಿಯೂ ಯಾರ ಮನದಲ್ಲಾದರೂ ಒಂದು ಪ್ರಶ್ನೆ ಮೂಡಿ, ಮುಸ್ಲಿಂ ಜನಸಂಖ್ಯೆಯ ಹೆಚ್ಚಳವಾದದ್ದರಿಂದ ಏನು ತೊಂದರೆಯಾಯಿತು....? ಅದರಿಂದ ಕೋಮು ಗಲಭೆ- ಕೋಮು ದ್ವೇಷ ಹೇಗಾಗುತ್ತದೆ...? ಅಂತೆಲ್ಲಾ ಸಂಶಯಗಳು ಉಂಟಾದರೆ ಅದಕ್ಕೆ ಅತ್ಯಂತ ವಿವರವಾದ ಕಾರಣಗಳನ್ನು ನಾನು ಲೇಖನದ ಮುಂದಿನ ಭಾಗದಲ್ಲಿ ವಿವರಿಸುತ್ತೇನೆ.

ಡೆಮೊಗ್ರಾಫಿಕಲ್ ಚೇಂಜ್ ನಿಂದ ಆಗುವ, ಸಾಮಾಜಿಕ, ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು, ಪಲ್ಲಟಗಳನ್ನು ಜೀರ್ಣಿಸಿಕೊಳ್ಳಲಾಗದೆ, ಅದರಿಂದ ಡಿಸ್ಟರ್ಬ್ ಆಗುವ ಸಮಾಜ- ಅದು ಎಷ್ಟೇ ವಿದ್ಯಾವಂತ ಸಮಾಜವೇ ಇರಲಿ - ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನನ್ನ ಮುಂದಿನ ಲೇಖನದಲ್ಲಿ ವಿವರಿಸುತ್ತೇನೆ.

Related posts