ದಕ್ಷಿಣ ಕನ್ನಡದ "ಮುಸ್ಲಿಂ ಪ್ರಾಬ್ಲೆಮ್ " (ಭಾಗ ಎರಡು)
ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ "ಮುಸ್ಲಿಂ ಪ್ರಾಬ್ಲೆಮ್" ಲೇಖನದ ಮುಂದುವರಿದ ಭಾಗ ಇದು. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೇರಳ ಬಿಟ್ಟರೆ ಅತಿ ಹೆಚ್ಚಿನ ಮುಸ್ಲಿಂ ಜನಸಂಖ್ಯೆ ಇರುವ ರಾಜ್ಯ ಕರ್ನಾಟಕ. ಉತ್ತರ ಭಾರತದ ಕೆಲ ರಾಜ್ಯಗಳ ರೀತಿಯಲ್ಲೇ ಕರ್ನಾಟಕದ ಮುಸ್ಲಿಂ ಜನಸಂಖ್ಯೆ ಕೂಡಾ ಏರುಗತಿಯಲ್ಲಿ ಬೆಳೆಯುತ್ತಿದೆ.
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಮುಸ್ಲಿಮರಿದ್ದಾರೆ, ಆದರೆ ಕೆಲವು ಜಿಲ್ಲೆಗಳಲ್ಲಿ ಅವರ ಸಂಖ್ಯೆ ತೀರಾ ಹೆಚ್ಚಿದೆ... ಉತ್ತರ ಕರ್ನಾಟಕದ ಬೀದರ್ ಮತ್ತು ಕಲ್ಬುರ್ಗಿ ಜಿಲ್ಲೆಗಳಲ್ಲಿ ಮುಸ್ಲಿಂ ಜನಸಂಖ್ಯಾ ಪ್ರಮಾಣ ಶೇ. ೨೦ ರಷ್ಟಿದೆ, ವಿಜಯಪುರದಲ್ಲಿ ಶೇ. ೧೭ರಷ್ಟಿದೆ... ಸ್ವಾತಂತ್ರ್ಯಕ್ಕೂ ಮೊದಲೇ ಬೀದರ್, ಕಲ್ಬುರ್ಗಿ ಜಿಲ್ಲೆಗಳಲ್ಲಿ ಹೈದರಾಬಾದಿನ ನಿಜಾಮನ ಆಡಳಿತವಿದ್ದುದರಿಂದ ಆ ಎರಡು ಜಿಲ್ಲೆಗಳಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಛೆ ಇತ್ತು. ಸ್ವಾತಂತ್ರ್ಯಾ ನಂತರವೂ ಅವೆರಡು ಜಿಲ್ಲೆಗಳಲ್ಲಿ ಮುಸ್ಲಿಮರ ಸಂಖ್ಯೆ ವೃದ್ಧಿಸುತ್ತಾ ಬಂತು. ಮುಸ್ಲಿಮರು ಗಣನೀಯ ಪ್ರಮಾಣದಲ್ಲಿರುವ ಇನ್ನೆರಡು ಜಿಲ್ಲೆಗಳೆಂದರೆ ಧಾರವಾಡ (ಶೇ. ೨೦) ಮತ್ತು ಹಾವೇರಿ(ಶೇ. ೧೯). ಬೀದರ್ ಮತ್ತು ಕಲ್ಬುರ್ಗಿ ಬಿಟ್ಟರೆ ವಿಜಯಪುರ, ಧಾರವಾಡ ಮತ್ತು ಹಾವೇರಿಯಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಿನ ಹೆಚ್ಚಳದ ಪ್ರಮಾಣ ಶೇ. ೪ರಷ್ಟು ಇದ್ದು, ಇದೆ ಪ್ರಮಾಣದ ಏರಿಕೆ ಈ ಜಿಲ್ಲೆಗಳ ಸುತ್ತಮುತ್ತದ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲೂ ಇದೆ. ಬೆಂಗಳೂರು ಮತ್ತು ಕೋಲಾರ ಭಾಗಗಳಲ್ಲೂ ಮುಸ್ಲಿಮರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಈಗ ಶೇ. ೧೨ ರಷ್ಟಿದೆ. ಆದರೆ ಮುಸ್ಲಿಂ ಜನಸಂಖ್ಯೆ ಏರಿಕೆಯ ಪ್ರಮಾಣ ಅತ್ಯಂತ ಹೆಚ್ಚಿರುವುದು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ. ಕೊಡಗು ಜಿಲ್ಲೆಯಲ್ಲಿ ಏರಿಕೆಯ ಪ್ರಮಾಣ ಶೇ. ೬ ರಷ್ಟಿದ್ದು ಅವಿಭಜಿತ ದಕ್ಷಿಣ ಕನ್ನಡದಲ್ಲಿ ಈ ಏರಿಕೆಯ ಪ್ರಮಾಣ ಶೇ. ೯ರಷ್ಟಿದ್ದು ಇದು ರಾಜ್ಯದಲ್ಲೇ ಅತೀ ಹೆಚ್ಚು.
ಕರ್ನಾಟಕದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣ ಪ್ರದೇಶಗಳಲ್ಲೇ ವಾಸಿಸುತ್ತಿದ್ದು ರಾಜ್ಯದ ೨೨ ಪಟ್ಟಣ ಪ್ರದೇಶದಲ್ಲಿ ಮುಸ್ಲಿಮರು ಬಹುಸಂಖ್ಯಾಕರಾಗಿದ್ದಾರೆ, ಮತ್ತು ೧೯ ಪಟ್ಟಣ ಪ್ರದೇಶಗಳಲ್ಲಿ ಅವರ ಸಂಖ್ಯಾ ಶೇ. ೪೦ ಮೇಲೆ ಇದೆ. ಇಂಥಾ ಒಂದು ಪಟ್ಟಣ ನಮ್ಮ ಉತ್ತರ ಕನ್ನಡ ಜಿಲ್ಲೆಯ ಭಟ್ಕಳವಾಗಿದ್ದು ಅಲ್ಲಿ ಮುಸ್ಲಿಮರ ಸಂಖ್ಯೆ ಶೇ. ೭೪. ೪ ರಷ್ಟಿದೆ. ರಾಜ್ಯದಲ್ಲಿ ೨೦೧೧ರ ಜನಗಣತಿಯ ಪ್ರಕಾರ ಹಿಂದೂಗಳು ಶೇ. ೮೪ ಇದ್ದರೆ ಮುಸ್ಲಿಮರು ಶೇ. ೧೨ ರಷ್ಟಿದ್ದಾರೆ. ಆದರೆ ಹಿಂದೂಗಳ ಜನಸಂಖ್ಯಾ ಹೆಚ್ಚಳ ಶೇ. ೧೫.೭೯ ಆಗಿದ್ದರೆ ಮುಸ್ಲಿಮರ ಜನಸಂಖ್ಯಾ ಹೆಚ್ಚಳ ಶೇ. ೨೨. ೧೨ ಆಗಿದೆ.
ಆದರೆ ಸ್ವಾತಂತ್ರ್ಯಾ ನಂತರ ಎಲ್ಲಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಿ ಏರಿಕೆಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ. ರಾಜ್ಯದಲ್ಲಿ ಮುಸ್ಲಿಮರು ಬಹುಸಂಖ್ಯಾಕರಾಗಿರುವ ೨೨ ಪಟ್ಟಣ ಪ್ರದೇಶಗಳ ಪೈಕಿ ೧೧ ಪಟ್ಟಣ ಪ್ರದೇಶಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಇವೆ. ಮುಸ್ಲಿಮರ ಸಂಖ್ಯೆ ಶೇ. ೪೦ ಕ್ಕಿಂತ ಹೆಚ್ಚಿರುವ ೧೯ ಪಟ್ಟಣ ಪ್ರದೇಶಗಳ ಪೈಕಿ ೫ ದಕ್ಷಿಣ ಕನ್ನಡದಲ್ಲಿವೆ. ಹೀಗಾಗಿ ದಕ್ಷಿಣ ಕನ್ನಡ, ರಾಜ್ಯದ ಬೇರೆಲ್ಲಾ ಜಿಲ್ಲೆಗಳಿಗಿಂತ ಭಿನ್ನವಾಗಿ ಒಂದು ರೀತಿಯ ವಿಷಮ ಪರಿಸ್ಥಿತಿಯಲ್ಲಿ ಸಿಕ್ಕಿ ತೊಳಲಾಡುತ್ತಿದೆ.
ಅಲ್ಲಿನ ಜನರಲ್ಲಿ ಅರ್ಥವಾಗದ ಒಂದು ಸಂಧಿಗ್ಧತೆ ಇದೆ. ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಅಲ್ಲಿನ ಸಾಕಷ್ಟು ವಿದ್ಯಾವಂತ ಜನ, ಸೌಜನ್ಯದ ನಡವಳಿಕೆಯಿರುವ ಜನ ಮುಸ್ಲಿಮರ ಜೊತೆಗಿನ ಕೋಮು ಸಾಮರಸ್ಯದ ಪ್ರಶ್ನೆ ಬಂದಾಗ ಯಾಕೆ ಹೀಗೆ ವರ್ತಿಸುತ್ತಾರೆ? ಯಾಕೆ ಅಲ್ಲಿ ಪದೇ ಪದೇ ಹಿಂದೂ ಮುಸ್ಲಿಂ ಘರ್ಷಣೆಗಳು ಸಂಭವಿಸುತ್ತವೆ? ಇದಕ್ಕೆಲ್ಲಾ ಉತ್ತರ ಬಹಳ ಸಂಕೀರ್ಣ! ಅದಕ್ಕೆ ಅಲ್ಲಿನ ಸಾಮಾಜಿಕ ರಚನೆಯ ಜೊತೆಗೆ, ಅಲ್ಲಿನ ಧಾರ್ಮಿಕ ನಂಬಿಕೆಗಳು, ಆಚರಣೆಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ದಕ್ಷಿಣ ಕನ್ನಡ ಎಂಬ ಹೆಸರಿನಲ್ಲಿ "ಕನ್ನಡ" ಇದೆಯಾದರೂ ಅದು ಮೂಲತಃ ತುಳುನಾಡು. ತುಳು ಕೇವಲ ಒಂದು ಭಾಷೆ ಮಾತ್ರವಲ್ಲ ಅದೊಂದು ವಿಶಿಷ್ಟ ಸಂಸ್ಕೃತಿ. ಸಾವಿರಾರು ವರ್ಷಗಳಿಂದಲೂ ಸಾಮಾಜಿಕ ಜೀವನದಲ್ಲಿ ಹಾಸುಹೊಕ್ಕಾಗಿರುವ ಅಲ್ಲಿನ ಸಂಸ್ಕೃತಿ ಅಲ್ಲಿನ ಜನರ ಭಾಷೆ, ಆಹಾರ, ಕಲೆ, ಧಾರ್ಮಿಕತೆ, ಎಲ್ಲದರೊಂದಿಗೆ ಬೆಸೆದುಕೊಂಡಿದೆ. ಭೂತಾರಾಧನೆ, ನಾಗಾರಾಧನೆಯಂಥ ಭಾರತದ ಬೇರೆ ಯಾವ ಕಡೆಗಳಲ್ಲೂ ಕಾಣಲು ಸಿಗದಂಥಾ ವಿಶಿಷ್ಟ ಜಾನಪದೀಯ ಧಾರ್ಮಿಕ ನಂಬಿಕೆ - ಆಚರಣೆಗಳಿವೆ ಅಲ್ಲಿ. ಜೊತೆಗೇ ಹಿಂದೂ ಧಾರ್ಮಿಕ ಆಚರಣೆಗಳಲ್ಲೂ ಕೂಡ ಕರ್ನಾಟಕದ ಇತರ ಕಡೆಗಳಲ್ಲಿ ಸ್ವಾಭಾವಿಕವಾಗಿ ಕಂಡುಬರದಂಥಾ ಕಟ್ಟುನಿಟ್ಟಿನ ಆಗಮ ಸಂಪ್ರದಾಯಗಳ, ವೈದಿಕ ಆಚರಣೆಗಳ ಹಿಂದೂ ಪರಂಪರೆಯೂ ಇದೆ.
ನಾಗಾರಾಧನೆ ಮತ್ತು ಭೂತಾರಾಧನೆಗಳು ತುಳುನಾಡಿನ ಪ್ರತಿ ಮನೆತನಕ್ಕೂ, ಪ್ರತಿ ಮನೆಗೂ, ಸಂಬಂಧಿಸಿದ ತೀರಾ ವೈಯಕ್ತಿಕ ನೆಲೆಗಟ್ಟಿನಲ್ಲೂ ವ್ಯಾಪಕವಾಗಿದೆ. ಅಂದರೆ ಉದಾಹರಣೆಗೆ ಯಾವುದೊ ಒಂದು ನಿರ್ಧಿಷ್ಟ ಕುಟುಂಬ- ಮನೆತನ ಆರಾಧಿಸುವ ನಾಗನನ್ನು ಆ ಮನೆತನಕ್ಕೆ ಸಂಬಂಧಿಸಿದವರು ಮಾತ್ರ ಆರಾಧಿಸುತ್ತಾರೆ. ಇಂಥಾ ನಾಗನಿಗೆ ಆತನದ್ದೇ ಆದ ಮೂಲಸ್ಥಾನವಿರುತ್ತದೆ! ಆ ಮೂಲ ನಾಗ ಅವನ ಮೂಲ ಸ್ಥಾನವನ್ನು ಬಿಟ್ಟು ಕದಲುವುದಿಲ್ಲ! ಹಾಗಾಗಿ ನಾಗಾರಾಧನೆ, ನಾಗ ಇರುವ ಜಾಗದ ಮೇಲೆಯೇ ಅವಲಂಬಿತವಾಗಿದೆ. ಕುಟುಂಬವೊಂದು ಕಾಲಾಂತರದಲ್ಲಿ ಊರು ತೊರೆದು ದೇಶದ ಬೇರೆ ಭಾಗಕ್ಕೂ, ಅಥವಾ ವಿದೇಶಕ್ಕೋ ಹೋದರೂ ಆ ಕುಟುಂಬದ ನಾಗ ಮಾತ್ರ ತನ್ನ ಮೂಲಸ್ಥಾನ ಬಿಟ್ಟು ಹೋಗುವುದಿಲ್ಲ. ಹಾಗಾಗಿ ಮಂಗಳೂರಿನ ಒಂದು ಪುಟ್ಟ ಹಳ್ಳಿಯ ಒಂದು ಕುಟುಂಬ ಊರು ತೊರೆದು ಮಂಡ್ಯದ ಒಂದೂರಿನಲ್ಲಿ ವ್ಯವಹಾರ ಮಾಡತೊಡಗಿ ಅಲ್ಲೇ ವಾಸಿಸಲು ಪ್ರಾರಂಭಿಸಿದರೂ, ಆ ಕುಟುಂಬ ತನ್ನ ಮೂಲ ನಾಗನನ್ನು ಮಂಡ್ಯಗೆ ಕರೆದುಕೊಂಡು ಹೋಗುವುದು ಅಸಾಧ್ಯವೇ ಸರಿ! ಹಾಗಾಗಿ ಏನೇ ಆದರೂ ನಾಗಾರಾಧನೆಗೆ ಆ ಕುಟುಂಬ ತನ್ನ ಮೂಲ ಜಾಗಕ್ಕೆ ಬರಲೇ ಬೇಕು!
ಅದೇ ರೀತಿ ಭೂತಾರಾಧನೆಯ ಕ್ರಮಗಳೂ ಇವೆ. ಭೂತ ಅಥವಾ ದೈವಗಳು ನೂರಾರಿದ್ದರೂ ಅವುಗಳು ಒಂದು ಭೂಭಾಗಕ್ಕೆ ಸೀಮಿತವಾಗಿಯೇ ಇರುತ್ತವೆ. ಉದಾಹರಣೆಗೆ "ಪಂಜುರ್ಲಿ" ಎಂಬ ಭೂತವನ್ನೇ ತೆಗೆದುಕೊಳ್ಳೋಣ. ಇದು ಕಾಡು ಹಂದಿಯ ರೂಪವಿರುವ ಭೂತ. ಈ ಪಂಜುರ್ಲಿಯಲ್ಲೂ ಹಲವು ವಿಧಗಳಿವೆ, "ಅಣ್ಣಪ್ಪ ಪಂಜುರ್ಲಿ" "ಕುಪ್ಪೆಟ್ಟು ಪಂಜುರ್ಲಿ"(ಅಥವಾ ಕುಪ್ಪೆ ಪಂಜುರ್ಲಿ), ತೆಂಬಿಕಲ ಪಂಜುರ್ಲಿ ಇತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುತ್ತವೆ. ಪಂಜುರ್ಲಿ ಅಥವಾ ಈ ರೀತಿಯ ಭೂತಗಳು ಒಂದೊಂದು ಗ್ರಾಮಗಳಲ್ಲೂ, ಮಾಗಣೆಗಳಲ್ಲೂ (ಗ್ರಾಮಗಳ ಗುಂಪು) ತಮ್ಮ ಇರುವನ್ನು ಹೊಂದಿವೆ ಮತ್ತು ಅಲ್ಲೇ ವಾರ್ಷಿಕವಾಗಿ ಅದರ ಸಾರ್ವಜನಿಕ ಆರಾಧನೆಯೂ ನಡೆಯುತ್ತದೆ. ಅದೇ ರೀತಿ ವೈಯಕ್ತಿಕವಾಗಿ ಒಂದೊಂದು ಕುಟುಂಬ ಕೂಡ ತಮ್ಮ ಕುಟುಂಬದೊಳಗೆಯೇ ಇಂಥಾ ಭೂತಾರಾಧನೆಗಳನ್ನು ಭಯಭಕ್ತಿಯಿಂದ ನಡೆಸುತ್ತವೆ. ಈ ಭೂತ ಅಥವಾ ದೈವಗಳು ನ್ಯಾಯ ನೀತಿ ಧರ್ಮದ ರಕ್ಷಕರಾಗಿ ಪರಿಗಣಿಸಲ್ಪಡುತ್ತವೆ. ದುಷ್ಟ ಶಿಕ್ಷಣೆ - ಶಿಷ್ಟರ ರಕ್ಷಣೆ ಇವುಗಳ ಕೆಲಸ. ಹಾಗಾಗಿ ಕುಟುಂಬದೊಳಗಿನ ಸಮಸ್ಯೆಗಳನ್ನಷ್ಟೇ ಅಲ್ಲದೆ ತನ್ನೂರಿನ, ಮಾಗಣೆಯ ಸಮಸ್ಯೆಯ ಪರಿಹಾರವನ್ನೂ ಈ ದೈವಗಳೇ ಮಾಡುತ್ತವೆ. ಈ ದೈವಗಳ ಪೈಕಿ ಅನೇಕ ದೈವಗಳು, ಕ್ಷೇತ್ರಪಾಲ ಅಂತಲೂ ಕರೆಸಿಕೊಂಡು ಆಯಾಯ ಜಾಗಕ್ಕೆ ಸೀಮಿತವಾಗಿರುತ್ತದೆ.
ಸಾಮಾನ್ಯವಾಗಿ ಸಾಮಾಜಿಕ ರಚನೆಯಲ್ಲಿ ಬದಲಾವಣೆಗಳಾದಾಗ ಇಂಥಾ ನಂಬಿಕೆಗಳಿಗೆ ಕುಂದುಂಟಾಗುತ್ತದೆ. ಭೂತಾರಾಧನೆ ಅಥವಾ ನಾಗಾರಾಧನೆಗಳೆಂಬ ತುಳುನಾಡಿನ ಅಂತಸತ್ವವುಳ್ಳ ನಂಬಿಕೆಗಳ, ಆಚರಣೆಗಳ ಸ್ವಾತಂತ್ರ್ಯಕ್ಕೆ ಜನಸಂಖ್ಯೆಯಲ್ಲಿನ ಏರುಪೇರುಗಳಿಂದ ಏಕಾಏಕಿ ಕುಂದುಂಟಾಗುತ್ತದೆ ಅಂತ ನನ್ನ ವಾದವಲ್ಲ. ಒಂದು ನಿರ್ದಿಷ್ಟ ವರ್ಗದ, ಜಾತಿಯ, ಕೋಮಿನ ಜನರ ಸಂಖ್ಯೆ ನಿಧಾನವಾಗಿ ಹೆಚ್ಚಿ ಒಂದು ಪ್ರದೇಶದ ಜನಸಂಖ್ಯೆಯಲ್ಲಿ ಸಮತೋಲನ ತಪ್ಪಿದಾಗ ಅಲ್ಲಿನ ಮೂಲನಿವಾಸಿಗಳಲ್ಲಿ ಸಣ್ಣದೊಂದು ಅಸಮಾಧಾನ, ಸಣ್ಣ ಮಟ್ಟಿನ ಅಸಹನೆ ಕಾಣಿಸಿಕೊಳ್ಳುವುದು ಸಹಜವೇ... ಗ್ರಾಮಗಳ ಹಳ್ಳಿಗಳ, ಮೂಲ ಧಾರ್ಮಿಕ ನಂಬಿಕೆಗಳಿಗೆ ನಗರೀಕರಣ ಪ್ರಕ್ರಿಯೆಯಿಂದಲೂ ಚ್ಯುತಿಯುಂಟಾಗುತ್ತದೆ... ಆದರೆ ಜನಸಂಖ್ಯೆಯಲ್ಲಿನ ಅಸಮತೋಲನದಿಂದಾಗಿ ಆಗುವ ಪರಿಣಾಮ ಕೊಂಚ ಭಿನ್ನ.
ದಕ್ಷಿಣ ಕನ್ನಡದ ಮೂಲ ನಿವಾಸಿಗಳ ಈ ವಿಶಿಷ್ಟ ನಂಬಿಕೆಗಳಿಗೆ- ಆಚರಣೆಗಳಿಗೆ ಅಲ್ಲಿಗೆ ಹೊಸದಾಗಿ ಬಂದು ನೆಲೆಸತೊಡಗಿದ ಜನರೂ, ಅವರು ಕ್ರಿಶ್ಚಿಯನ್, ಮುಸ್ಲಿಮರೇ ಅಂತಲ್ಲ ಇತರರೂ, ಅಂದರೆ ಜೈನರು, ಹಿಂದೂಗಳಲ್ಲೇ ಬೇರೆ ಬೇರೆ ಬ್ರಾಹ್ಮಣ ವರ್ಗಗಳು,(ಕನ್ನಡ ಮಾತೃಭಾಷೆಯ ಹವ್ಯಕ, ಕೋಟ, ಕೋಟೇಶ್ವರ, ಕೊಂಕಣಿ ಮಾತೃಭಾಷೆಯ ಗೌಡ ಸಾರಸ್ವತರು, ರಾಜಾಪುರಿ ಸಾರಸ್ವತರು, ಇತ್ಯಾದಿ) ಕನ್ನಡ ಮಾತೃಭಾಷೆಯಾಗಿರುವ ಹಲವಾರು ಕ್ಷತ್ರಿಯ ಜಾತಿಗಳು (ಕೋಟೆ ಕ್ಷತ್ರಿಯ, ರಾಮ ಕ್ಷತ್ರಿಯ ಇತ್ಯಾದಿ) ಎಲ್ಲರೂ ಒಂದರ್ಥದಲ್ಲಿ ತುಳುನಾಡಿಗೆ ಪರಕೀಯರೇ. ಸಾವಿರಾರು ವರ್ಷಗಳಿಂದ ಅನೂಚಾನವಾಗಿ ನಂಬಿಕೊಂಡು ಬಂದ ಜಾನಪದೀಯ ನೆಲೆಗಟ್ಟಿನ ನಂಬಿಕೆಗಳಿಗೆ ಈ "ಹೊರಗಿನಿಂದ" ಬಂದ ಅಷ್ಟೂ ಜನ ಹೊಂದಿಕೊಂಡು ತುಳುನಾಡಿನ ಸಂಸ್ಕೃತಿಯಲ್ಲಿ ಬೆರೆತು ಹೋದರು.
ಪ್ರಾರಂಭದಲ್ಲಿ ಮುಸ್ಲಿಮರು ಸಹ ಸ್ವಲ್ಪ ಮಟ್ಟಿಗೆ ಬೆರೆಯುತ್ತಿದ್ದರು! ಯಾಕೆಂದರೆ ತುಳುನಾಡಿನ ಭೂತಾರಾಧನೆ ಪರಂಪರೆಯಲ್ಲಿ ಕೆಲ ವಿಚಿತ್ರ ವಿಶಿಷ್ಟ ಭೂತಗಳೂ ಇವೆ ಅದರಲ್ಲಿ ಒಂದು ಭೂತದ ಹೆಸರೇ ಆಲಿ ಭೂತ! ಅಂದರೆ ಅದು ಮುಸ್ಲಿಂ ಭೂತ! ಇನ್ನೊಂದು ಬೊಬ್ಬರ್ಯ ಎಂಬ ಭೂತಕ್ಕೂ ಮುಸ್ಲಿಮನೊಬ್ಬನಿಗೂ ನಂಟಿದೆ. ಯಾಕೆಂದರೆ ಆ ಭೂತದ ತಂದೆಯೇ ಓರ್ವ ಮುಸ್ಲಿಮ್ ಎಂಬ ದಂತಕತೆಯಿದೆ! ಹೀಗೆ ಪ್ರಾರಂಭದಲ್ಲಿ ತುಳುನಾಡಿಗೆ ವ್ಯಾಪಾರಕ್ಕಾಗಿ ಬಂದ ಮುಸ್ಲಿಮರೂ ಕೂಡ ಇಲ್ಲಿನ ಜನರ ಮೂಲ-ಸಂಸ್ಕೃತಿಗೆ, ನಂಬಿಕೆ ಆಚರಣೆಗಳಿಗೆ ತಕ್ಕ-ಮಟ್ಟಿಗೆ ಒಗ್ಗಿಕೊಂಡ ಕೆಲವು ನಿದರ್ಶನಗಳಿವೆ.
ಆದರೆ ಆಗೆಲ್ಲಾ ಮುಸ್ಲಿಮರ ಸಂಖ್ಯೆ ಬಹಳ ಸಣ್ಣದಿತ್ತು. ಅವರು ನಿಜ ಅರ್ಥದಲ್ಲಿ ಅಲ್ಪಸಂಖ್ಯಾತರಾಗಿದ್ದರು ಮತ್ತು ಅಲ್ಪಸಂಖ್ಯಾತರಾಗಿದ್ದಾಗ ಅವರದೇ ಗ್ರಂಥದಲ್ಲಿ ಹೇಳಿದಂತೆ "ತಖಿಯ" ಪಾಲಿಸಬಹುದಾಗಿದೆ. ತಖಿಯ ಮೂಲಕ ಮುಸ್ಲಿಮರು ಬಹುಸಂಖ್ಯಾತರೊಂದಿಗೆ ಹೊಂದಿಕೊಂಡಂತೆ ಜೀವಿಸಿದರು ಅದು ಕೇವಲ ತಾತ್ಕಾಲಿಕ ವ್ಯವಸ್ಥೆಯಾಗಿರುತ್ತದೆ ಮತ್ತು ಅದು ಬಹುಸಂಖ್ಯಾತರನ್ನು ಎದುರು ಹಾಕಿಕೊಳ್ಳದೆ ಅವರನ್ನು ಮೋಸಗೊಳಿಸುವ ಒಂದು ತಂತ್ರ ಮಾತ್ರ! ಸದ್ದಿಲ್ಲದೇ ಬಹುಸಂಖ್ಯಾತರನ್ನು ಅಲ್ಪ ಸಂಖ್ಯಾತರನ್ನಾಗಿ ಮಾಡುವ ತಂತ್ರ!
ಆದರೆ ಕಳೆದ ನೂರು ವರ್ಷಗಳಲ್ಲಿ ಅವರ ಸಂಖ್ಯೆ ಬೆಳೆದ ರೀತಿ ತುಳುನಾಡಿನ ಸಾಂಸ್ಕೃತಿಕ ಸಮತೋಲನಕ್ಕೆ ನೋಡು-ನೋಡುತ್ತಿದ್ದ ಹಾಗೆ ಧಕ್ಕೆ ತರತೊಡಗಿತು. ಎಲ್ಲೆಲ್ಲಾ ಮುಸ್ಲಿಮರು ಬಹುಸಂಖ್ಯಾಕರಾಗತೊಡಗಿದರೋ, ಯಾವಾಗ ಅಲ್ಲಿನ ಹಿಂದೂಗಳೇ ಅಲ್ಪಸಂಖ್ಯಾಕರಾಗತೊಡಗಿದರೋ ಆಗ ಸಹಜವಾಗಿಯೇ ಒಂದು ಸಾಮೂಹಿಕವಾದಂತಹ ಅಸಹನೆ ಮಡುಗಟ್ಟಲಾರಂಭಿಸಿತು. ಅದಕ್ಕೆ ಮುಖ್ಯ ಕಾರಣ ಮುಸ್ಲಿಮರೂ ತುಳುನಾಡಿನ ನೆಲದ ಸಂಸ್ಕೃತಿಯನ್ನು ಅವಗಣಿಸುತ್ತಾ, ಮೂಲ ಸೆಲೆಯೊಂದಿಗೆ ಬೇರೆಯದೇ ತಾವೇ ಪ್ರತ್ಯೇಕವೆಂದು ನಡೆದುಕೊಳ್ಳತೊಡಗಿದಾಗ ಹಿಂದೂ ಮತ್ತು ಮುಸ್ಲಿಮರ ನಡುವಿನ ಕಂದರ ಮತ್ತಷ್ಟು ಹೆಚ್ಚಾಗತೊಡಗಿತು. ಕಳೆದ ಸುಮಾರು ೬೦-೭೦ ವರ್ಷಗಳಿಂದ ಇವೆರಡೂ, ಅಂದರೆ ಮುಸ್ಲಿಮರ ಜನಸಂಖ್ಯೆ ಮತ್ತು ಅವರು ಇತರ ಹಿಂದೂಗಳ ಆಚರಣೆಗಳ ಮೇಲೆ ತೋರತೊಡಗಿದ ತಿರಸ್ಕಾರ, ಎರಡೂ ಹೆಚ್ಚಾಗುತ್ತಾ ಬಂತು. ಜೊತೆಗೆಯೇ ಅಲ್ಲಿನ ಮುಸ್ಲಿಮರ ಮೇಲೆ ಕೇರಳದ ಮುಸ್ಲಿಮರ ಪ್ರಭಾವ ಹೆಚ್ಚತೊಡಗಿ, ಅವರಲ್ಲಿನ ಮತಾಂಧತೆಯೂ ಹೆಚ್ಚತೊಡಗಿದ್ದು ಸಮತೋಲನವನ್ನು ಇನ್ನಷ್ಟು ಹಾಳುಮಾಡಿತು.
ಮಾತೆತ್ತಿದರೆ ದಕ್ಷಿಣ ಕನ್ನಡದ ಕೋಮು ಗಲಭೆಗಳಿಗೆಲ್ಲಾ ಸಂಘ ಪರಿವಾರ ಕಾರಣ ಅಂತ ಬೊಬ್ಬಿಡುವ ಅರೆಬುದ್ಧಿ ಜೀವಿಗಳಿಗೆ ಕರ್ನಾಟಕದಲ್ಲೇ ಮೊಟ್ಟಮೊದಲಿಗೆ ದಕ್ಷಿಣ ಕನ್ನಡದಲ್ಲಿ ತಲೆ ಎತ್ತಿದ ಸಲಾಫಿ ಇಸ್ಲಾಂ ಕಾಣಿಸುವುದಿಲ್ಲ. ದಕ್ಷಿಣ ಕನ್ನಡದಲ್ಲಿ ಸದ್ದಿಲ್ಲದೇ ಹಲವಾರು ಸಲಾಫಿ ಮಸೀದಿಗಳು ತಲೆ ಎತ್ತತೊಡಗಿದವು. ಇಲ್ಲಿ "ಅಹ್ಲೇ ಹದೀಸ್" ಹೆಸರಿನಲ್ಲಿ ಯುವಕರ ತಲೆಗೆ ಮೂಲಭೂತವಾದದ ಬೋಳೆಣ್ಣೆ ತಿಕ್ಕಲಾಯಿತು. ಇವತ್ತು ದಕ್ಷಿಣ ಕನ್ನಡದ ಹಲವಾರು ಕಡೆ ಸಲಾಫಿ ಮಸೀದಿಗಳಿವೆ. ಆದರೆ ಇವೆಲ್ಲವೂ ಒಂದೇ ಅಲ್ಲ. ಯಾಕಂದರೆ ಕೇರಳ ಮೂಲದ ಪಿಎಫ್ಐ ಸಂಘಟನೆಯ ಮೂಲಕ ಸಲಾಫಿ ಇಸ್ಲಾಮಿನ ಇನ್ನೊಂದು ಬಣವೂ ದಕ್ಷಿಣ ಕನ್ನಡಕ್ಕೆ ಕಾಲಿಟ್ಟಿದೆ. ಮುಸ್ಲಿಮರ ಮತಕ್ಕಾಗಿ ಬಾಯಿಬಿಡುವ ಕಾಂಗ್ರೆಸ್ಸಿಗೆ ಈ ಸಲಾಫಿ ಇಸ್ಲಾಮ್ ಎಂಬ ಜಾಗತಿಕ ಇಸ್ಲಾಮಿಕ್ ಮೂಲಭೂತವಾದ ಜಿಲ್ಲೆಯೊಳಗೆ ಕಾಲಿಟ್ಟದ್ದು ಕಾಣಿಸಲಿಲ್ಲವೇ? .
ಜನಸಂಖ್ಯೆಯಲ್ಲಿ ಅಸಮತೋಲನವುಂಟಾದಾಗ ಸ್ವಾಭಾವಿಕವಾಗಿ ಉಂಟಾಗುವ ಒಂದು ರೀತಿಯ ಅಭದ್ರತೆಯ ಭಾವ ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ ಹಿಂದೂಗಳಿಗೆ ಆಗತೊಡಗಿತು. ತಮ್ಮ ನಂಬಿಕೆ, ಆಚರಣೆಗಳಿಗೆ ಗೌರವ ಸಿಗದಂಥ ವಾತಾವರಣ ನಿರ್ಮಾಣ ಆಗುತ್ತಿದೆಯೋ ಎಂಬ ಭಾವನೆ ಕಾಡತೊಡಗಿತು. ಈ ಎಲ್ಲಾ ಬೆಳವಣಿಗೆಗಳು ಜಿಲ್ಲೆಯಲ್ಲಿ ಸದ್ದಿಲ್ಲದೇ ಆಗುತ್ತಿದ್ದಾಗ ಪ್ರಜ್ಞಾವಂತ ಮುಸ್ಲಿಮರೂ ಸುಮ್ಮನಿದ್ದರು, ಹಿಂದೂಗಳೂ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.
ಮುಂದಿನ ಭಾಗದಲ್ಲಿ ಮುಂದುವರಿಯಲಿದೆ......