ನಿಮಗೆಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು!!
नमस्थे सदा वत्सले मात्रु भूमे,
त्वया हिन्दुभूमे सुखं वर्धितोहम् |
महामङ्गले पुण्यभूमे त्वदर्थे,
पतत्वेष कायो नमस्ते नमस्ते ||
प्रभो शक्तिमन् हिन्दुराष्ट्राङ्गभूता,
इमे सादरं त्वां नमामो वयम् |
त्वदीयाय कार्याय बध्दा कटीयं,
शुभामाशिषं देहि तत्पूर्तये ||
ದೇಶ ಇಂದು ತನ್ನ ೭೧ನೆಯ ಸ್ವಾತಂತ್ರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದೆ. ಬ್ರಿಟಿಷರ ದಾಸ್ಯದಿಂದ ಮುಕ್ತರಾದ ಈ ದಿನ ನಮಗೆಲ್ಲ ಪವಿತ್ರವಾದ ದಿನವೇ ಹೌದು. ಆದರೆ ಈ ನಮ್ಮ ಪಾವನ ದೇಶ ತನ್ನ ಹಿಂದಿನ ಗತಕಾಲದ ವೈಭವವನ್ನು ಮತ್ತೆ ಮರಳಿಸಿಕೊಂಡು ವಿಜೃಂಭಣೆಯಿಂದ ವಿಶ್ವದಲ್ಲೇ ವಿರಾಜಮಾನಳಾಗಿದ್ದಾಳೆಯೇ ಎಂಬ ಪ್ರಶ್ನೆ ಅನೇಕ ಭಾರತೀಯರಲ್ಲಿ ಸದಾ ಕಾಡುತಿರುತ್ತದೆ.
ಸ್ವಾತಂತ್ರ್ಯವೇನೋ ದಕ್ಕಿತು ಆದರೆ ವಿಭಜನೆ ಅಗತ್ಯವಿತ್ತೆ? ಚರಿತ್ರೆಯ ಪುಟ ತಿರುವಿದಾಗ ಅಂದಿನ ಹಲವು ಘಟನೆಗಳು ನಾಟಕೀಯ ಬೆಳವಣಿಗೆಗಳ ತಿರುವು ಪಡೆದು ಮುಂದಿನ ಅನಾಹುತಗಳಿಗೆ ಕಾರಣವಾಗಿದ್ದದ್ದು ಪೂರ್ಣ ಸತ್ಯ. ದೇಶ-ರಾಜಕಾರಣ ಎಲ್ಲವನ್ನು ಬಿಟ್ಟು ದೂರ ಹೋಗಿದ್ದ ಜಿನ್ನಾ, ಹಿಂತಿರುಗಿ ಮುಸಲ್ಮಾನರನ್ನು ಒಟ್ಟುಗೂಡಿಸಿ ಪಾಕಿಸ್ತಾನ ನಿರ್ಮಾಣಕ್ಕೆ ಬೇಡಿಕೆ ಇತ್ತು ಅದನ್ನು ಕೇವಲ ಕೆಲವೇ ವರ್ಷಗಳಲ್ಲಿ ಸಾಧಿಸಿಕೊಂಡ ಬಗ್ಗೆ ನನ್ನಂಥವರನ್ನು ಸೇರಿಸಿ ಹಲವರ ಆಕ್ರೋಶ ಇನ್ನು ತಣ್ಣಗಾಗಿಲ್ಲ. ಈ ದೇಶವೇ ನಾನು ಹೇಳಿದ ಹಾಗೆ ಕೇಳುತ್ತದೆ ಎಂಬ ಹುಚ್ಚು ಆದೇಶ ಪಡೆದವರಂತೆ ವರ್ತಿಸಿದ ಗಾಂಧಿಯವರ ಪಾತ್ರ ಕೂಡ ಈ ವಿಭಜನೆಗೆ ಬಹು ದೊಡ್ಡ ಕೊಡುಗೆ ನೀಡಿದೆ. ಇನ್ನು ಮುಸ್ಲಿಂ ರಕ್ತವೇ ನನ್ನಲ್ಲಿ ಹರಿಯುತ್ತಿದೆ ಎಂದ ನೆಹರು ತನ್ನ ಅಧಿಕಾರದ ಆಸೆಗಾಗಿ ಎಲ್ಲಾದಕ್ಕೂ ತಿಲಾಂಜಲಿ ಇಟ್ಟ ಮಹನೀಯ.
ಮತ್ತು ಅಂದಿನ ಈ ಮುಂಚೂಣಿ ರಾಜಕೀಯ ನಾಯಕತ್ವ ಅಧಿಕಾರದ ಆಸೆಗಾಗಿ ಎಷ್ಟು ದುರ್ಬಲಗೊಂಡು ಹತಾಶವಾಗಿತ್ತು ಎಂದರೆ ಯಾವುದೇ ರಾಜಿಗೂ ಸಿದ್ಧಗೊಂಡು ವಿಭಜನೆ ಒಪ್ಪಿ ತುಂಡಾದ ದೇಶಕ್ಕೆ ಅರಸರಾಗಲು ತುದಿಗಾಲಲ್ಲಿ ನಿಂತಿದ್ದರು. ಈ ನಾಯಕತ್ವದ ಬಹುತೇಕ ಎಲ್ಲ ಪ್ರಮುಖ ನಾಯಕರು ಪ್ರಾಯ ಕಳೆದು ಹೋರಾಟದ ಕಿಚ್ಚು ಸಹ ಕಳೆದುಕೊಂಡಿದ್ದರು. ಹೀಗೆ ಎಲ್ಲಿಯವರೆಗೆ ಹೋರಾಟ ಮುಂದುವರಿಸುವುದು? ಅಧಿಕಾರ ನಮಗೆ ದಕ್ಕದಿರಬಹುದು ಎಂಬ ತೀವ್ರ ಆತಂಕ ಈ ನಾಯಕತ್ವಕ್ಕೆ ಕಾಡಿದ್ದರಿಂದಲೇ ತುಂಡು ಮಾಡಲು ಕಾಯುತ್ತಿದ್ದ ಬ್ರಿಟಿಷರಿಗೆ ಹಾಗು ಪ್ರತ್ಯೇಕವಾಗಲು ಹಿಂದೂಗಳ ನರಹತ್ಯೆ ನಡೆಸಿದ ಮುಸ್ಲಿಂ ಲೀಗ್ ಸೇರಿ ಎಲ್ಲರಿಗೂ ಇದು ಬಹುದೊಡ್ಡ Political Profit ನೀಡುವ ಮಾರ್ಗವಾಗಿತ್ತು.
ಆದರೆ ನಿಜವಾದ ದೇಶ ನಿಷ್ಠೆಯ ಹೋರಾಟ ನಡೆಸಿದ ಅಸಂಖ್ಯಾತ ಮಂದಿಗೆ ಮಾತ್ರ ಇದರಿಂದ ಎಳ್ಳಷ್ಟೂ ಸಂತಸವಾಗಲಿಲ್ಲ. ಸ್ವಾತಂತ್ರಗೊಂಡರು ಮುಂದಿನ ಹಾದಿ ಮಾತ್ರ ಮತ್ತದೇ ರಾಜಕೀಯ ವ್ಯವಸ್ಥೆ. ಬ್ರಿಟಿಷರು ಮಾತ್ರ ತೊಲಗಿದ್ದರು.... ಆದರೆ ಅವರ ವಾರಸುದಾರರು ನಮ್ಮ ದೇಶವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕ್ಪೊಂಡು ಸಮಸ್ತ ಭಾರತೀಯತೆಯನ್ನು ಹತ್ತಿಕ್ಕಿದರು. ಈ ಕ್ರಮ ಸ್ವಾತಂತ್ರ್ಯದ ಒಂದು ಭಾವನಾತ್ಮಕ ನೆಲೆಯಲ್ಲಿ ದೇಶದ ಜನತೆಯನ್ನು ಸಂಪೂರ್ಣ ಮಂಗ ಮಾಡುವ ವ್ಯವಸ್ಥಿತ ಸಂಚಾಗಿತ್ತು. ಈ ದೇಶ ಎಚ್ಚತ್ತುಗೊಳ್ಳಲು ಸುಮಾರು ೭ ದಶಕಗಳೇ ಬೇಕಾದವು. ತುರ್ಕರು, ಮೊಘುಲ್, ಪೋರ್ಚುಗೀಸ್, ಫ್ರೆಂಚ್, ಬ್ರಿಟಿಷ್ ರಿಂದ ಮುಕ್ತರಾದೆವು ಎನ್ನುವುದು ಸತ್ಯವಾದರೂ ಅದೇ ಸಂಕುಚಿತ ಮಾನಸಿಕತೆಯ ಮಿಶ್ರಿತ ತಳಿಗಳ ಹಿಡಿತದಿಂದ ಈಗತಾನೇ ಒಂದು ಹಂತದಲ್ಲಿ ಸ್ವಲ್ಪ ಸಡಿಲುಗೊಂಡಿದ್ದೇವೆ ಎಂದೇ ನನ್ನ ಬಲವಾದ ಭಾವನೆ.
ವಿದೇಶಿ ಚಿಂತನೆ, ವಿದೇಶಿ ಪಕ್ಷ-ವ್ಯಕ್ತಿಗಳು ಹೇಗೆ ತಾನೇ ದೇಶಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಿ ದೇಶ ಪ್ರೇಮವನ್ನು ಜಾಗ್ರತ ಗೊಳಿಸಲು ಸಾಧ್ಯ? ಈ ನೆಲದ ಸಂಸ್ಕೃತಿ , ಇಲ್ಲಿಯ ಪದ್ಧತಿ, ಮೂಲ ಪರಂಪರೆ ಎಲ್ಲವನ್ನು ಹತ್ತಿಕ್ಕಿ ಪಾಶ್ಚಾತ್ಯ ತರ್ಕ ಅಥವಾ ಬುಡವಿಲ್ಲದ ವಿಚಾರಗಳಿಗೆ ಮಣೆ ಹಾಕಿದಾಗ ನಮ್ಮ ಸ್ವಾತಂತ್ರ್ಯ ಹರಣವಾಗಲಿಲ್ಲವೇ? ಈ ದೇಶದ ಉನ್ನತ ಭವಿಷ್ಯಕ್ಕಾಗಿ ತಮ್ಮ ಎಲ್ಲ ಆಸ್ತಿ-ಪಾಸ್ತಿ, ಜೀವನ, ಮತ್ತು ಕೊನೆಗೆ ತಮ್ಮ ಪ್ರಾಣವನ್ನು ಸಹ ಅರ್ಪಿಸಿದ ಅದೆಷ್ಟೋ ಅಸಂಖ್ಯಾತ ಮಹನೀಯರನ್ನು ಸೂಕ್ತವಾಗಿ ನಡೆಸಿಕೊಂಡ ಪರಂಪರೆಯನ್ನು ನಾವು ಹೊಂದಿದ್ದೇವೆಯೇ??? ಇಂತಹ ಅಸಂಖ್ಯಾತ ಪ್ರಶ್ನೆಗಳು ಸದಾ ಹಸಿರಾಗಿಯೇ ಇರುತ್ತವೆ.
ಹಾಗಾಗಿಯೇ ಇನ್ನಾದರೂ ನಮ್ಮ ದೇಶದ ಮೂಲ ಪರಂಪರೆಯನ್ನು ಗೌರವಿಸಿ ಮತ್ತು ಅದಕ್ಕಾಗಿ ಜೀವಿಸುವ ಒಂದು ನಿಜವಾದ ಸ್ವಾತಂತ್ರ್ಯ ನಮಗೆಲ್ಲರಿಗೂ ದಕ್ಕಲಿ ಎಂದೇ ಈ ಪುಣ್ಯ ದಿನದಂದು ಆ ಭಾರತ ಮಾತೆಯಲ್ಲಿ ನನ್ನ ವಿನಮ್ರ ಪ್ರಾರ್ಥನೆ! ನಿಮಗೆಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು!!