ಸಾಹಿತಿಗಳ ರಾಜಕಾರಣ
ಜಾತ್ಯತೀತರೆಂದು ಕರೆದುಕೊಳ್ಳುವ ಈ ಮಂದಿಗೆ ರಾಜಕಾರಣ ಮಾಡಬೇಕೆಂದರೆ ನೇರವಾಗಿ ರಾಜಕೀಯ ಪ್ರವೇಶಿಸಿ ನಮ್ಮೆದರು ಸೆಣೆಸಲಿ! ಸಾಹಿತಿಗಳೆಂಬ ಹಣೆಪಟ್ಟಿ ಕಟ್ಟಿಕೊಂಡು ಹೇಡಿ ರಾಜಕಾರಣ ಮಾಡಬೇಕಾದ ಸೋಗಲಾಡಿತನ ಮತ್ತು ಪಲಾಯನವಾದ ಈ ಬುದ್ಧಿಜೀವಿಗಳಿಗೆ ಇಂದಿನ ಸಿದ್ಧ ಸರ್ಕಾರ ಗಂಜಿ ನೀಡುತಿರಬಹುದು; ಆದರೆ ರಾಜ್ಯದ ಜನತೆ ತಮ್ಮ ತೆರಿಗೆ ಹಣ ಹೇಗೆ ಪೋಲಾಗುತ್ತಿದೆ ಎಂದು ಗಮನಿಸುತ್ತಿದ್ದಾರೆ. ಸಾಹಿತಿಗಳೆಂದು ಬಿಂಬಿಸಿಕೊಳ್ಳುವ ಈ ಮಂದಿ ತಮ್ಮ ಸಾಹಿತ್ಯ-ಕೃಷಿ ಮೂಲಕ ಇದುವರೆಗೆ ಸಾಧಿಸಿದ್ದಾದರು ಏನು? ನನ್ನದು ಸಮಾಜವಾದಿ ಹಿನ್ನಲೆಯೆಂದು ಬೀಗುವ ಸಿದ್ಧಣ್ಣ ಇಂತಹ ಗಿರಾಕಿಗಳನ್ನು ಛೂಬಿಟ್ಟು ಹಿಂಬಾಗಿಲಿನಿಂದ ಚುನಾವಣೆಗೆ ತಯಾರಾಗುತ್ತಿರುವುದು ಹೇಡಿತನದ ಲಕ್ಷಣವಲ್ಲದೆ ಇನ್ನೇನು? ಅಧಿಕಾರವಿಲ್ಲಾದಾಗ ತೋಳೇರಿಸುವುದು ದೊಡ್ಡ ಸವಾಲ್ ಅಲ್ಲವೇ ಅಲ್ಲ ಸಿದ್ಧಣ್ಣ!!!