ಮತ್ತೊಂದು ಕನ್ನಡ ಸಾಹಿತ್ಯ ಸಮ್ಮೇಳನ 2017
ವಾಡಿಕೆಯಂತೆ ಮತ್ತೊಂದು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಯಿತು. ಸಾಹಿತ್ಯಕ್ಕಿಂತ ರಾಜಕೀಯದ ತೆವಳು ಮತ್ತು ಎಂಜಲು ಪ್ರವೃತ್ತಿ ವಿಜೃಂಭಿಸಿದ್ದು ಸಿದ್ಧ ಸರ್ಕಾರದ ಇನ್ನೊಂದು ಸಾಧನೆಯೇ ಸರಿ. ನಾಲ್ಕೂವರೆ ವರ್ಷಗಳ ಕಾಲ ಆಳ್ವಿಕೆ ನಡೆಸಿದ ಸಿದ್ಧ ಸರ್ಕಾರ ಇದುವರೆಗೆ ಕನ್ನಡಕ್ಕೆ ಸಂಬಂದಿಸಿದ ಯಾವುದಾದರೂ ವಿಶೇಷವಾಗಿ ಕಾರ್ಯ ನಿರ್ವಹಿಸಿ, ಒಂದು ದಿಕ್ಕು ಬದಲಿಸುವ ಯೋಜನೆ ರೂಪಿಸಿ ಕನ್ನಡ ಸೇವೆ ಮಾಡಿದೆಯೇ? ಈ ಪ್ರಶ್ನೆ ಕೇಳಲು ಒಂದು ವಿಶೇಷ ಕಾರಣವಿದೆ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದ ಇಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯನವರೇ, ನಿಮಗೆ ಆತ್ಮ ಸಾಕ್ಷಿಯಿದ್ದರೆ ಉತ್ತರಿಸಿ! ಜನರ ತೆರಿಗೆ ಹಣದಿಂದ ಕನ್ನಡಕ್ಕಾಗಿ ಇದುವರೆಗೆ ತಮ್ಮ ನೇತೃತ್ವದ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಿ. ತೆರಿಗೆ ಹಣದಿಂದ ಒಂದಷ್ಟು ಶಿಖಂಡಿ ಸಾಹಿತಿಗಳಿಗೆ ಗಂಜಿ ನೀಡಿ ಅವರಿಂದ ಪರಾಕ್ ಹೇಳಿಸಿಕೊಂಡಿದ್ದೆ ಸಿದ್ಧ ಸಾಧನೆ ಎಂದರೆ ಅತಿಶಯೋಕ್ತಿಯಾಗಲಾರದು.
ರಾಜ್ಯದ ರಾಜಧಾನಿಯಲ್ಲಿ, ಬಹುತೇಕ ಕನ್ನಡವನ್ನು ಒತ್ತಡದಿಂದ ಹೇರಬೇಕಾದ ಪರಿಸ್ಥಿತಿ ಬಂದೊದಗಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಮೂಲಕ ಶಿಕ್ಷಣ ನೀಡುವ ಸೂತ್ರಕ್ಕೆ ತಮ್ಮ ಪಾತ್ರವೇನು ಎಂದು ಈ ಗಂಜಿ ಗಿರಾಕಿಗಳು ನಿಮ್ಮನ್ನು ಸಮ್ಮೇಳನದಲ್ಲಿ ಪ್ರಶ್ನಿಸಲೇ ಇಲ್ಲ. ನಾಡಿನ ಜ್ವಲಂತ ಸಮಸ್ಯೆಗಳಾದ ನಾಡು-ನುಡಿ-ಜಲ-ಗಡಿಗಳ ಬಗ್ಗೆ ಸಮ್ಮೇಳನದಲ್ಲಿ ಯಾವುದೇ ಪ್ರಸ್ತಾಪವಾಗಲೇ ಇಲ್ಲ. ಸರ್ಕಾರಕ್ಕೆ ಏನಾದರೂ ಕನ್ನಡದ ಅಭಿವೃದ್ಧಿಗೆ ಕಾರ್ಯಸೂಚಿ ಅಥವಾ ದಿಕ್ಸೂಚಿಯನ್ನು ಈ ಸಮ್ಮೇಳನ ನೀಡಿತೇ? ಕನ್ನಡ ಪ್ರೇಮ ಮೂಡಿಸುವಲ್ಲಿ ಈ ಸಮ್ಮೇಳನ ಏನಾದರೂ ಪ್ರಯತ್ನ ಮಾಡಿತೇ?
ಒಟ್ಟಾರೆ ಈ ಎಲ್ಲ ಪ್ರಶ್ನೆಗಳಿಗೆ ವಾಸ್ತವ ಸ್ಥಿತಿ-ಗತಿಗಳ ಬಗ್ಗೆ ಕನ್ನಡಿ ಹಿಡಿದ್ದಿದ್ದು ಮಾತ್ರ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸನ್ಮಾನ್ಯ ಶ್ರೀ ಕೆ ಏ ದಯಾನಂದರವರ ಅಭಿಪ್ರಾಯ ಮಾತ್ರ.http://www.prajavani.net/news/article/2017/11/27/535978.html