ಪರೇಶ್ ಮೇಸ್ತ ಕೊಲೆ
ಪರೇಶ್ ಮೇಸ್ತ ಕೊಲೆಯನ್ನು ಸಿದ್ದರಾಮಯ್ಯನವರ ಅನಾಗರಿಕ ಕಾಂಗ್ರೆಸ್ ಸರ್ಕಾರ ಕೊನೆಗೂ ಜನರ ಪ್ರತಿಭಟನೆಗೆ ಬೆದರಿ ಕಂಗಾಲಾಗಿ ಕ್ಬೈ ಗೆ ಹಸ್ತಾಂತರಿಸುವುದಾಗಿ ತಿಳಿಸಿದೆ. ಈ ಅಮಾನುಷ ಕೊಲೆಗೆ ಉತ್ತರ ಕನ್ನಡ ಜಿಲ್ಲೆಯ ಜನರು ಮನನೊಂದು ವ್ಯಾಪಕವಾಗಿ ಪ್ರತಿಭಟಿಸಿ, ತಮ್ಮ ನೋವನ್ನು ತೋಡಿಕೊಂಡಿದ್ದರು. ಪರೇಶ್ ರ ಬೀಭತ್ಸ ಹತ್ಯೆಯೇ ಅವರ ಕುಟುಂಬ ಹಾಗೂ ರಾಜ್ಯದ ಜನತೆಯ ಒಂದು ಮಾನಸಿಕ ಸ್ಥಿತಿ-ಗತಿಯನ್ನೇ ತೀವ್ರವಾಗಿ ಘಾಸಿಗೊಳಿಸಿದ್ದರೇ, ಆನಂತರ ಲಜ್ಜೆಗೆಟ್ಟ ಸಿದ್ದರಾಮಯ್ಯನವರ ಸರ್ಕಾರ ನಡೆದುಕೊಂಡ ರೀತಿ ಸಹಅಷ್ಟೇ ತೀವ್ರವಾಗಿ ಅಸಹ್ಯಕರವಾಗಿತ್ತು. ತಮ್ಮ ನೋವನ್ನು ಶಾಂತಿಯುತವಾಗಿ ವ್ಯಕ್ತಪಡಿಸಲು ಪ್ರಜಾಪ್ರಭುತ್ವದ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡಂತೆ ವರ್ತಿಸುವ ಈ ನಮ್ಮ ಮುಖ್ಯಮಂತ್ರಿಯವರಿಗೆ ಇದು ದಮನಿಸುವ ಕುಕೃತ್ಯವೆಂದು ತಿಳಿಯಲಿಲ್ಲವೇ? ಇಡೀ ಜಿಲ್ಲೆಯನ್ನು ಪೋಲೀಸ್ರ ದಾದಾಗಿರಿಗೆ ಒಪ್ಪಿಸಿ ಸದ್ದುಬಡೆಯಬಹುದೆಂದು ನಿರೀಕ್ಷಿಸಿದ್ದ ಸನ್ಮಾನ್ಯ ಸಿದ್ಧರಾಮಯ್ಯನವರ ನಾಲಾಯಕ್ ಗೃಹ ಸಚಿವ ಹಾಗು ಇನ್ನೋರ್ವ ಅವರ ಆತ್ಮೀಯ ಸಲೆಹಗಾರರಿಗೆ ಜಿಲ್ಲೆಯ ಜನತೆ ಸರಿಯಾಗಿ ಉತ್ತರ ನೀಡಿದ್ದಾರೆ.
ದುರಂತವೆಂದರೆ ಎಲ್ಲ ಸಾಕ್ಷಿ ಪುರಾವೆಗಳನ್ನು ಧ್ವಂಸ ಮಾಡಿ ಹತ್ಯೆ ಪ್ರಕರಣವನ್ನು ಸಂಪೂರ್ಣವಾಗಿ ತಿರುಚಿದ್ದೇವೆ ಎಂದು ಈ ಸಲೆಹೆಗಾರರು ಸೂಚಿಸಿದ ನಂತರ, ಈ ನೀತಿಗೆಟ್ಟ ಸರ್ಕಾರ ಕ್ಬೈಗೆ ಒಪ್ಪಿಸುತ್ತೇವೆ ಎನ್ನುವುದನ್ನು ಜಿಲ್ಲೆಯ ಜನತೆ ವ್ಯಾಪಕವಾಗಿ ಮಾತನಾಡುತ್ತಿರುವುದು, ಸಿದ್ಧರಾಮಯ್ಯನವರ ಮಾನಗೆಟ್ಟ ಸರ್ಕಾರಕ್ಕೆ ಹಿಡಿದ ಕೈಗನ್ನಡಿ. ಇದುವರೆಗೂ ಈ ರಾಕ್ಷಸಿ ಸರ್ಕಾರ ನಡೆದುಕೊಂಡ ರೀತಿಯೇ ಹಾಗಿದೆ. ಈ ಘೋರ ಹತ್ಯೆಯನ್ನು ಸಾಮಾನ್ಯ ಸಾವೆಂದು ಪರಿಗಣಿಸುವ ಗೃಹಸಚಿವರಿಗೆ ತಮ್ಮ ಅವಧಿಯಲ್ಲಿ ಇನ್ನೆಷ್ಟು ಇಂತಹ ಸಾಮನ್ಯ ಸಾವನ್ನು ನೆರೆವೇರಿಸಿ ಮೆರೆಯಬೇಕೆಂದು ಕೊಂಡಿದ್ದಾರೋ!!!
ಆದರೆ ಒಂದೊಂತು ಸತ್ಯ.... ಪರೇಶ್ ರ ಹತ್ಯೆಗೂ ಮುಂಚೆ ಅನುಭವಿಸಿದ್ದ ಕರಾಳ ನೋವು ಅವರ ಮುಖ ಹಾಗು ದೇಹದಲ್ಲಿ ಹೆಪ್ಪುಗಟ್ಟಿ ದಾಖಲಿಸಿ ಈ ಲೋಕ ತೃಜಿಸಿದ್ದಾರೆ. ಅವರ ಒಂದೊಂದು ರಕ್ತದ ಹನಿಗೂ ಜಿಲ್ಲೆಯ ಜನತೆ ಲೆಖ್ಖ-ಕೇಳಿ ನ್ಯಾಯಪಡೆಯಲು ತೀರ್ಮಾನಿಸಿದ್ದಾರೆ.
ಜನರ ಈ ತೀರ್ಮಾನವೇ ನನಗೆ ಕಟ್ಟಾಜ್ಞೆಯಾಗಿದೆ.
ಹತ್ಯೆಯನ್ನು CBಈಗೆ ಒಪ್ಪಿಸಿದ್ದೇವೆಂದು ಸರ್ಕಾರ ಪಲಾಯನಗೈಯ್ಯುವ ಪ್ರಯತ್ನ ಪ್ರಾರಂಭಿಸಿದೆ ಎಂಬುದು ಸೂಚನೆ ದೊರೆಯುತ್ತಿದೆ. ಹಾಗಾಗಿ ನಮ್ಮ ಹೋರಾಟವನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲಾಗುವುದಿಲ್ಲ. ಈ ಸಂಕಲ್ಪಕ್ಕೆ ಯಾವುದೇ ಚೌಕಟ್ಟು ನಿರ್ಬಂಧಿಸುವ ಶಕ್ತಿಗಳಿಗೆ, (ಅದರಲ್ಲೂ ಒಳಗಿನ ಹಾಗು ಬಾಹ್ಯಶಕ್ತಿಗಳಿಗೆ) ಈ ಮೂಲಕ ಹೋರಾಟದ ಕಿಚ್ಚು ಉರಿಯುತ್ತಿರುತ್ತದೆ ಎಂಬ ಸ್ಪಷ್ಟ ಸಂದೇಶ ನೀಡಿತ್ತಿದ್ದೇನೆ.
ಕೊನೆಯದಾಗಿ, ಜಿಲ್ಲೆಯ ಜನತೆ ತೋರಿದ ಅಗಾಧ ಒಗ್ಗಟ್ಟು, ಹೋರಾಟದ ಜ್ವಾಲೆಯನ್ನು ತೀವ್ರಗೊಳಿಸಿ, ಸರ್ಕಾರದ ಸೊಕ್ಕನ್ನು ಬಗ್ಗು ಬಡಿದು, ಈ ಹೇಯ ಕುಕೃತ್ಯ ಖಂಡಿಸಿ ಹೋರಾಟಕ್ಕೆ ಸಹಕಾರ ನೀಡಿದ ಎಲ್ಲ ನನ್ನ ಭಾಂದವರಿಗೂ ಅನಂತ ಧನ್ಯವಾದಗಳು.