ಸಂವಿಧಾನದ ಬಗ್ಗೆ ಡಾ. ಅಂಬೇಡ್ಕರ್ ರವರಿಗೆ ಇದ್ದ ಅಸಮಾಧಾನದ ಬಗ್ಗೆ ನಿನ್ನೆಯ ದಿನ ನಾನು ಹಂಚಿಕೊಂಡ ಬಗ್ಗೆ ಕೆಲವು ಮತಿಗೇಡಿ ಕ್ರಿಮಿಗಳು ತಮ್ಮ-ತಮ್ಮ ವಿವೇಚನವಿಲ್ಲದ ವಿಷವನ್ನು ಕಕ್ಕಿದ್ದವು. ಅವುಗಳು ನನ್ನ ಗೋಡೆಯ ಮೇಲೆ ಮಾಡಿದ ಗಲೀಜನ್ನು ಅವರ ಸಮೇತ ಹೊರಹಾಕ್ಕಿದ್ದೇನೆ. ಆದರೂ ಇನ್ನುಳಿದ ನನ್ನ ಸ್ನೇಹಿತರಿಗೆ, ಆ ವಿಷಯದ ಬಗ್ಗೆ ಇರುವ ಗೊಂದಲವನ್ನು ನಿವಾರಿಸಲು ಮತ್ತೊಮ್ಮೆ ಅದಕ್ಕೆ ಸಂಬಂಧಿಸಿದ ಮೂಲ ಆಧಾರ ಮತ್ತು ಇತರ ಉಲ್ಲೇಖಗಳನ್ನು ಈ post ಮೂಲಕ ನೀಡುತ್ತಿದ್ದೇನೆ.
ನಮ್ಮ ಸಂವಿಧಾನ ನಿರ್ಮಾತೃ, ಭಾರತರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ೧೯೫೩ನೇ ಇಸವಿ ಸೆಪ್ಟೆಂಬರ್ ೨ನೇ ತಾರೀಖು ರಾಜ್ಯ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತ ಹೇಳಿದ ಮಾತುಗಳು ಗಮನಾರ್ಹವಾಗಿವೆ. ಅಲ್ಲಿ ಅವರು, ತಮ್ಮ ಇಚ್ಛೆಗೆ ಅನುಗುಣವಾಗಿ ಸಂವಿಧಾನವನ್ನು ರಚಿಸಲಾಗಲಿಲ್ಲ ಎಂಬ ತಮ್ಮ ಅಳಲನ್ನು ಬಿಚ್ಚಿಟ್ಟಿದ್ದಾರೆ.
ಸಂವಿಧಾನವನ್ನು ರಚಿಸಿದವರು ನೀವೇ ಎಂದು, ಆ ಚರ್ಚೆಯಲ್ಲಿ ಭಾಗವಹಿಸಿದ ಅವರ ವಿರೋಧಿಗಳು ಚುಚ್ಚಿದಾಗ ಬಾಬಾ ಸಾಹೇಬರು ಹೇಳಿದ ಮಾತು “ಇಲ್ಲ ಸ್ವಾಮಿ, ನಾವು ಒಂದು ಪರಂಪರೆಯ ವಾರಸುದಾರರು. ನೋಡಿ, ಸಂವಿಧಾನ ರಚಿಸಿದವರು ಎಂದು ಜನರು ನನಗೆ ಹೇಳುತ್ತಲೇ ಇದ್ದಾರೆ. ಅದಕ್ಕೆ ನನ್ನ ಉತ್ತರ: ನಾನು ದುಡಿತದ ಕತ್ತೆ ಮಾತ್ರವಾಗಿದ್ದೆ. ನನಗೆ ಏನನ್ನು ಮಾಡಲು ತಿಳಿಸಲಾಗಿತ್ತು, ನಾನದನ್ನು ಬಹುತೇಕ ನನ್ನಿಚ್ಛೆಗೆ ವಿರುದ್ಧವಾಗಿ ಮಾಡಿರುವೆ.”
“ನಾನು ಸಂವಿಧಾನವನ್ನು ರಚಿಸಿದೆ ಎಂದು ಹೇಳುತ್ತಾರೆ. ಆದರೆ ಅದನ್ನು ಸುಟ್ಟುಹಾಕುವುದಕ್ಕೆ ನಾನೇ ಸದಾಸಿದ್ಧ. ಮೊದಲಿಗ ಎಂದು ಹೇಳಲು ಇಷ್ಟಪಡುತ್ತೇನೆ. ನನಗದು ಬೇಕಾಗಿಲ್ಲ. ನನ್ನ ಸ್ವಭಾವಕ್ಕೆ ಅದು ಒಪ್ಪಿಗೆಯಾಗುವಂತಿಲ್ಲ”
ಮೇಲಿನ ಮಾತುಗಳು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು, ರಾಜ್ಯಸಭೆಯಲ್ಲಿ ಆಡಿದ ಇಂಗ್ಲಿಷ್ ವಾಕ್ಯಗಳ ಕನ್ನಡ ಅನುವಾದವಿದು. ಆಸಕ್ತರು, ರಾಜ್ಯಸಭೆಯ ಕಲಾಪಗಳ ದಾಖಲೆಯನ್ನು ನೋಡಬಹುದು. ವೆಬ್ ಸೈಟ್‌ನಲ್ಲಿಯೂ ಯಥಾವತ್ತಾಗಿರುವ ವರದಿ ಲಭ್ಯವಿದೆ.
(https://www.thequint.com/…/father-of-the-indian-constitutio…)
“ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾಸಾಹೇಬ ಅಂಬೇಡ್ಕರ್” ಇದು ಬಾಬಾಸಾಹೇಬರ ಒಡನಾಡಿಯಾಗಿದ್ದ ದಿ. ದತ್ತೋಪಂತ್ ಠೇಂಗಡಿಯವರು ಮರಾಠಿಯಲ್ಲಿ ಬರೆದ ಪುಸ್ತಕ. ಶ್ರೀ ಚಂದ್ರಶೇಖರ್ ಭಂಡಾರಿಯವರು ಅದನ್ನು ಅದೇ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕದ ಪುಟ ಸಂಖ್ಯೆ ೨೬೬ರಲ್ಲಿ ಬಾಬಾಸಾಹೇಬರ ಮಾತುಗಳನ್ನು ಉಲ್ಲೇಖಿಸಲಾಗಿದೆ. ಕನ್ನಡ ಬಲ್ಲವರು ಓದಿಕೊಳ್ಳಬಹುದು.
ಇದು ಮನವರಿಕೆಯಾಗದಿದ್ದರೆ, ಅವರವರ blog ಮತ್ತು fb timeline ನಲ್ಲಿ ಹೇಸಿಗೆ ಮಾಡಿಕೊಳ್ಳುವುದಕ್ಕೆ ನನ್ನದೇನು ಅಭ್ಯಂತರವಿಲ್ಲ.