Infinite Thoughts

Thoughts beyond imagination

ಗ್ರೆಗೊರಿಯನ್ ನೂತನ ವರ್ಷ ಆಚರಣೆ ಮಾಡುವವರಿಗೆ ನನ್ನ ಹಾರ್ದಿಕ ಶುಭಾಶಯಗಳು

ಕ್ರಿಶ್ಚಿಯನ್ ದೇಶಗಳು ಪ್ರಾರಂಭದಲ್ಲಿ ಜೂಲಿಯಸ್ ಸೀಸರ್ ಜಾರಿಗೆ ತಂದಿದ್ದ ಜೂಲಿಯನ್ ಕ್ಯಾಲೆಂಡರ್ ಬಳಸುತ್ತಿದ್ದವು.  ಆದರೆ ಇದರ ಕಾಲಗಣನೆ ಸರಿಯಿಲ್ಲ ಎಂಬ ಕಾರಣಕ್ಕೆ 1582 ರಲ್ಲಿ ಕ್ರಿಶ್ಚಿಯನ್ನರ ಪರಮೋಚ್ಛ ಧರ್ಮಗುರು ಪೋಪ್ 8ನೆಯ ಗ್ರೆಗೊರಿ ಹೊಸ ಕ್ಯಾಲೆಂಡರ್ ಅನ್ನು ಜಾರಿಗೊಳಿಸಿ ಎಲ್ಲಾ ಕ್ರಿಶ್ಚಿಯನ್ ದೇಶಗಳೂ ಕಡ್ಡಾಯವಾಗಿ ಇದನ್ನೇ ಬಳಸಬೇಕೆಂದೂ ಆಜ್ಞೆ ಮಾಡಿದ.  

ಅಮೇರಿಕ, ಯುರೋಪ್ ಮುಂತಾದ ಎಲ್ಲಾ ಕಡೆಗಳಲ್ಲಿರುವ ಕ್ರಿಶ್ಚಿಯನ್ ದೇಶಗಳೂ ಹೊಸ ಕ್ಯಾಲೆಂಡರ್ ಅನ್ನೇ ಬಳಸತೊಡಗಿದರೂ ಬ್ರಿಟಿಷರು ಮಾತ್ರ ಇದನ್ನೊಪ್ಪದೆ ಹಳೇ ಕ್ಯಾಲೆಂಡರನ್ನೇ ಬಳಸುತ್ತಿದ್ದರು. ಬಳಿಕ 1750 ರಲ್ಲಿ ಬ್ರಿಟಿಷ್ ಪಾರ್ಲಿಮೆಂಟು ಪೋಪ್ 8ನೆಯ ಗ್ರೆಗೊರಿಯ ಕ್ಯಾಲೆಂಡರ್ ಅನ್ನು ಬಳಸಲು ತೀರ್ಮಾನಿಸಿ, 1752 ರಿಂದ ಭಾರತ ಸೇರಿದಂತೆ ತನ್ನ ವಸಾಹತುಗಳಿದ್ದ ಎಲ್ಲಾ ದೇಶಗಳಲ್ಲೂ ಇದರ ಬಳಕೆಯನ್ನು ಕಡ್ಡಾಯ ಮಾಡಿತು. ಇದರ ಫಲವೇ ಇಂದು ನಮ್ಮ ಮೂಲದ ಪಂಚಾಂಗವನ್ನು ಬದಿಗಿಟ್ಟು ಈ ಗ್ರೆಗೊರಿಯನ್ ಕ್ಯಾಲೆಂಡರ್ ಅನ್ನು ಉಪಯೋಗಿಸುತ್ತಿರುವುದು ಮತ್ತು ಇವತ್ತು ಹೊಸವರ್ಷವೆಂತ ಸಂಭ್ರಮ ಪಡುತ್ತಿರುವುದು.

ಸೆಪ್ಟೆಂಬರ್ ಅಂದರೆ ಏಳನೆಯ ತಿಂಗಳೆಂದು ಅರ್ಥ... ಆದರೆ ನಾವು ಉಪಯೋಗಿಸುವ  ಗ್ರೆಗೊರಿಯನ್   ಕ್ಯಾಲೆಂಡರ್ ನಲ್ಲಿ ಅದು ಒಂಭತ್ತನೆಯ ತಿಂಗಳು...! ಅಕ್ಟೋಬರ್ ಅಂದರೆ ಎಂಟನೆಯ, ನವೆಂಬರ್ ಅಂದರೆ ಒಂಭತ್ತನೆಯ, ಡಿಸೆಂಬರ್ ಅಂದರೆ ಹತ್ತನೆಯ ತಿಂಗಳು ಅಂತ ಅರ್ಥ ಇದ್ದರೂ ಈಗಿನ ಕ್ಯಾಲೆಂಡರ್ ನಲ್ಲಿ ಎಲ್ಲಾ ಕಲಸುಮೇಲೋಗರ..!  ಬ್ರಿಟಿಷರು ಮತ್ತು ಉಳಿದ ಕ್ರಿಶ್ಚಿಯನ್ ದೇಶಗಳು ಪ್ರಪಂಚದಾದ್ಯಂತ ಇರುವ ತಮ್ಮ ವಸಾಹತುಗಳಲ್ಲಿ ಈ ಗ್ರೆಗೊರಿಯನ್  ಕ್ಯಾಲೆಂಡರ್ ಅನ್ನು ಜಾರಿಗೆ ತಂದದ್ದರಿಂದಲೇ ಇವತ್ತು New Year ಅಂತ ಆಗಿದೆ.  ಇದಕ್ಕೆ ಯಾವುದೇ ರೀತಿಯ ಪ್ರಬಲವಾದ ಭೌಗೋಳಿಕ ಅಥವಾ ಖಗೋಳ ಶಾಸ್ತ್ರದ ಹಿನ್ನಲೆಯಿರದ ಒಂದು ಅಂಧ ಆಚರಣೆಯಾಗಿದೆ.

ಭಾರತದಲ್ಲಿ ಕ್ರಿಸ್ತ ಹುಟ್ಟುವುದಕ್ಕೂ ಸಾವಿರಾರು ವರ್ಷಗಳ ಹಿಂದಿನಿಂದ ಬಳಕೆಯಲ್ಲಿದ್ದ ನಮ್ಮ ಪಂಚಾಂಗ ಪದ್ಧತಿಯನ್ನು ಬದಲಿಸಿ ಈ ಗ್ರೆಗೊರಿಯನ್ ಕ್ಯಾಲೆಂಡರ್ ಜಾರಿಗೆ ಬಂದದ್ದು ಕೇವಲ 266 ವರ್ಷಗಳ ಹಿಂದೆ...!  ಇವತ್ತು ಹಳೆಯ ಗ್ರೆಗೊರಿಯನ್ ಕ್ಯಾಲೆಂಡರ್ ಬದಲಿಸಿ ಹೊಸ ಗ್ರೆಗೊರಿಯನ್ ಕ್ಯಾಲೆಂಡರ್ ನೇತುಹಾಕುತ್ತೇವೆ... ಮತ್ತು ಅದನ್ನೇ ಹೊಸ ವರ್ಷ ಅಂತ ಕರೆಯುತ್ತೇವೆ....  

ಗುಲಾಮಗಿರಿಯ ಆರಾಧನೆಯ ಸಂಕೇತವಾದ ಈ ಗ್ರೆಗೊರಿಯನ್ ನೂತನ ವರ್ಷ ಆಚರಣೆ ಮಾಡುವವರಿಗೆ ನನ್ನ ಹಾರ್ದಿಕ ಶುಭಾಶಯಗಳು ..... !

Related posts