Infinite Thoughts

Thoughts beyond imagination

ಮಕರ ಸಂಕ್ರಾಂತಿ ಶುಭಾಶಯಗಳು

ಸಂಕ್ರಾಂತಿಯ ಶುಭ ಪರ್ವ

ಪ್ರಕೃತಿಯ ಗತಿಯಲ್ಲಿಯೇ ಪ್ರಗತಿಯ ಲಯವನ್ನು ಹಿಡಿಯಬೇಕೆಂಬ ಸಂದೇಶ ಸಂಕ್ರಾಂತಿಯದಾಗಿದೆ.  ಕತ್ತಲೆ ಕಡಿಮೆಯಾಗಿ, ಬೆಳಕು ಬೆಳೆಯುವ ಹಾದಿಯತ್ತ ಸೂರ್ಯ ತನ್ನ ಗತಿಯನ್ನು ಬದಲಾಯಿಸಿದ್ದಾನೆ. ಎಲೆಗಳನ್ನು ಉದುರಿಸಿ ಬರಿ ಮೈಯಲ್ಲಿದ್ದ ಮರಗಿಡಗಳು ಮೈತುಂಬ ಚಿಗುರುವುದಕ್ಕೆ ಹಂಬಲಿಸುವ ದಿನ ಇದು.  ನಾಡಿನ ಹಸಿವೆಗೆ ಕಾಳಿನ ಭರವಸೆಯಿತ್ತ ರೈತ, ಚಳಿಗೆ ಬೆನ್ನು ಹಾಕಿ ಸುಗ್ಗಿಯ ಹಿಗ್ಗನ್ನು ತುಂಬಿಕೊಳ್ಳುತ್ತಿರುವ ಸಮಯ.

ಸೂರ್ಯನ ಬಿಸಿಲಿಗೆ ಎದುರಾಗಿ ಬದುಕನ್ನು ಬೆಳಕಿಗೊಡ್ಡಿಕೊಳ್ಳುವ ಧೈರ್ಯ ನಮ್ಮದಾಗಬೇಕು.  ಕತ್ತಲೆಗಿಂತ ಬೆಳಕು ಹೆಚ್ಚಾದಾಗ ತಾಮಸ ಹಿಂದೆ ಸರಿದು ಸಾತ್ವಿಕತೆ ಮುಂದೆ ಬರುತ್ತದೆ.  ಎಳ್ಳು ಬೆಲ್ಲಗಳ ಮಿಶ್ರಣದಂತೆ ಬದುಕು ಪಾಕವಾಗುವ ಹದದಲ್ಲಿ ಸಂಕ್ರಾಂತಿ ಹಬ್ಬವಾಗುತ್ತದೆ.  ಎಳ್ಳಿನಲ್ಲಿರುವ ಎಣ್ಣೆ ಸ್ನೇಹದ ಸಂಕೇತ, ಬೆಲ್ಲದ ಸಿಹಿ ಸ್ನೇಹದ ರುಚಿಯನ್ನು ಹೆಚ್ಚಿಸುತ್ತದೆ.  ಬದುಕಿನ ಸಂತೋಷವನ್ನೂ ಸ್ನೇಹವನ್ನು  ಹೆಚ್ಚುಸುವ ಸಂಕ್ರಾಂತಿ ನಮ್ಮೆಲ್ಲರನ್ನು ಬೆಳಕಿನತ್ತ ನಡೆಸಲಿ. ನಾಡಿನೆಲ್ಲರ ಬದುಕಿನಲ್ಲಿ ಸಮೃದ್ಧಿ ನೆಮ್ಮದಿಗಳು ಹೆಚ್ಚಲಿ ಎಂದು ಪ್ರಾರ್ಥಿಸುತ್ತೇನೆ.

As life sustainer on this planet, the mighty Sun starts his northward journey, today.  Let him fill your lives with abundant joy & prosperity on his timeline journey.  With the rays of joy touching our earth, we wish you all a Happy Makara Sankranti.

Related posts