Infinite Thoughts

Thoughts beyond imagination

ಸಂತ ಪರಂಪರೆಗೆ ಅವರು ನೀಡಿದ ಕೊಡುಗೆ ಅಪಾರ!

ಶತಾಯುಷಿ, ನಡೆದಾಡುವ ಭಗವಂತನೆಂದೇ ಪರಿಚಿತರಾದ ಶ್ರೀ ಸಿದ್ಧಗಂಗಾ ಮಠದ ಡಾ। ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ಧಿ ಕೇಳಿ ದುಃಖವಾಗಿದೆ.  
ವಿದ್ಯಾ ದಾನ ಮತ್ತು ಅನ್ನ-ದಾಸೋಹದ ಮೂಲಕ ಹಲವು ತಲೆಮಾರಿನ ಜನತೆಗೆ ವಿದ್ಯೆ, ವೃತ್ತಿ ಹಾಗು ಜೀವನಕ್ಕೆ ಭದ್ರ ಭುನಾದಿ ಕಲ್ಪಿಸಿದ ಪೂಜ್ಯ ಸ್ವಾಮೀಜಿ, ತಮ್ಮ ಅಂತಿಮ ದಿನದವರೆಗೂ ಸಮಾಜಮುಖಿಯಾಗಿಯೇ ತಮ್ಮ ಜೀವನವನ್ನು ತೇಯ್ದರು. ಸಮಾಜದ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸ್ವಾಮೀಜಿ ಆಧ್ಯಾತ್ಮ ಮತ್ತು ಶೈಕ್ಷಣಿಕ ಮಾರ್ಗದಲ್ಲಿ ಸಾಗಿದವರು.  ತಮ್ಮ ಸಂಪೂರ್ಣ ಜೀವನವನ್ನೇ ಸಮಾಜದ ಸೇವೆಗೆ ಅರ್ಪಿಸಿಕೊಂಡ ಶ್ರೀಗಳು, ಸಮಕಾಲೀನ ಯುಗದ ಅತ್ಯಂತ ಶ್ರೇಷ್ಠ ಸಂತರಾಗಿದ್ದರು.  ಸಂತ ಪರಂಪರೆಗೆ ಅವರು ನೀಡಿದ ಕೊಡುಗೆ ಅಪಾರ!  ಅವರು ಈ ಲೌಕಿಕ ಜಗತ್ತಿನಲ್ಲಿ ಪ್ರಯಾಣಿಸಿದ ಸಂದರ್ಭದಲ್ಲೇ ಜೀವಿಸಿದ ನಾವುಗಳು ಸಹ ಧನ್ಯರು!  ಮಹಾದೇವನ ಸನ್ನಿಧಿಗೆ ಸಂದ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ವಿನಮ್ರನಾಗಿ ಆ ಪರಮೇಶ್ವರನಲ್ಲಿ ಪ್ರಾರ್ಥಿಸುತ್ತೇನೆ

 

Related posts