Infinite Thoughts

Thoughts beyond imagination

ಇವತ್ತು ಎಲ್ಲರೂ ಹರ್ಷಿಸುವ ಹೊತ್ತು.... ನಮ್ಮ ಗಣರಾಜ್ಯೋತ್ಸವಕ್ಕೆ ಎಪ್ಪತ್ತು ತುಂಬಿತು.....

ಇವತ್ತು ಎಲ್ಲರೂ ಹರ್ಷಿಸುವ ಹೊತ್ತು.... 

ನಮ್ಮ ಗಣರಾಜ್ಯೋತ್ಸವಕ್ಕೆ ಎಪ್ಪತ್ತು ತುಂಬಿತು..... !!!

 

ಡಾ ಭೀಮರಾವ್ ರಾಮಜೀ ಅಂಬೇಡ್ಕರ್ ಅನ್ನುವ ಮಹಾನುಭಾವ ರಚಿಸಿದ್ದು ಒಂದು ಲಕ್ಷದ ನಲವತ್ತೈದು ಸಾವಿರ ಪದಗಳುಳ್ಳ, ಜಗತ್ತಿನಲ್ಲೇ ಎರಡನೇ ಅತಿದೊಡ್ಡ ಸಂವಿಧಾನ ಅಂತ ಹೆಸರು ಪಡೆದ ಮಹಾನ್ ಗ್ರಂಥವನ್ನು. ಡಾ.ಅಂಬೇಡ್ಕರ್  ಅವರ ಸಂವಿಧಾನವನ್ನು ದೇಶ ಒಪ್ಪಿ ಅಳವಡಿಸಿ, ಭಾರತ ಗಣರಾಜ್ಯವಾಗಿ ಇವತ್ತಿಗೆ ಎಪ್ಪತ್ತು ವರ್ಷ ತುಂಬಿತು... ಈ ಹೊತ್ತಿನಲ್ಲಿ ನಾವು ಮೊಟ್ಟಮೊದಲಿಗೆ ಸ್ಮರಿಸಬೇಕಿರುವುದು ಡಾ. ಅಂಬೇಡ್ಕರ್ ಅವರನ್ನೇ... 

 

ಜೊತೆಗೆ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಅತ್ಯಂತ ವಿಶೇಷವಾದ ಸಂಗತಿಯೂ ಇದೆ... ಹೌದು ... ಈ ಬಾರಿಯ ನಮ್ಮ ಗಣರಾಜ್ಯೋತ್ಸವ ನಮ್ಮ ದೇಶದ ನಾರೀ ಶಕ್ತಿಯ ಪ್ರದರ್ಶನಕ್ಕೂ ಸಾಕ್ಷಿಯಾಗಲಿದೆ... ಭಾರತದ ಅತ್ಯಂತ ಹಳೆಯ ಪ್ಯಾರಾ ಮಿಲಿಟರಿ ಪಡೆ ಅಸ್ಸಾಮ್ ರೈಫಲ್ಸ್ ನಲ್ಲಿನ  ಸಂಪೂರ್ಣ ಮಹಿಳೆಯರೇ ಇರುವ ತುಕಡಿಯೊಂದು ಮೇಜರ್ ಖುಷ್ಬೂ ಕನ್ವರ್ ಇವರ ಮುಂದಾಳತ್ವದಲ್ಲಿ ಗಣರಾಜ್ಯೋತ್ಸವ ಪರೇಡ್ ನ ಮುಂಚೂಣಿಯಲ್ಲಿದ್ದು ಇಡೀ ಪೆರೇಡಿನ ನೇತೃತ್ವ ವಹಿಸಿಕೊಳ್ಳಲಿದೆ. ಅಷ್ಟೇ ಅಲ್ಲ ಭಾರತೀಯ ಸೇನೆಯ ಡೇರ್ ಡೆವಿಲ್ ಮೋಟಾರ್ ಸೈಕಲ್ ತಂಡದ ನೇತೃತ್ವವನ್ನು ಮೊಟ್ಟಮೊದಲ ಬಾರಿಗೆ ಮಹಿಳಾ ಆಫೀಸರ್ ಕ್ಯಾಪ್ಟನ್ ಶಿಖಾ ಸುರಭಿ ವಹಿಸಿಕೊಳ್ಳಲಿದ್ದಾರೆ . ಆರ್ಮಿ ಸರ್ವಿಸಸ್ ಕಾರ್ಪ್ಸ್ ನೇತೃತ್ವ ವಹಿಸುವವರು ಲೆಫ್ಟಿನೆಂಟ್ ಭಾವನಾ ಕಸ್ತೂರಿ    

ಜೊತೆಗೆ ನೆಹರೂ ಕಾಲದಿಂದ ಇಲ್ಲಿಯವರೆಗೆ ಸತತವಾಗಿ ಕಾಂಗ್ರೆಸ್ ಸರಕಾರದ ಅವಕೃಪೆಗೆ ಒಳಗಾಗಿ, ಯಾವತ್ತಿಗೂ ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿದ ಸೇನೆ ಅಂತ ಕರೆಸಿಕೊಳ್ಳದೆ ಇದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ ಮೊಟ್ಟ ಮೊದಲನೆ ಬಾರಿಗೆ ಗಣರಾಜ್ಯೋತ್ಸವ ಪೆರೇಡಿನಲ್ಲಿ ಅಧಿಕೃತವಾಗಿ ಭಾಗವಹಿಸುತ್ತಿದೆ. 

ಇದೆಲ್ಲದರ ಜೊತೆಗೆ ವೈರಿಗಳ ...ದೇಶದ್ರೋಹಿಗಳ ಎದೆನಡುಗಿಸುವಂಥ ಭಾರತದ ಹೊಸ ದೈತ್ಯ ಆರ್ಟಿಲರಿ ಫಿರಂಗಿ M777  ಮತ್ತು  K9 VAJRA ವನ್ನು ಮೊಟ್ಟಮೊದಲ ಬಾರಿಗೆ ಸಾರ್ವಜನಿಕವಾಗಿ ಗಣರಾಜ್ಯೋತ್ಸವ ಪೆರೇಡಿನಲ್ಲಿ ಪ್ರದರ್ಶಿಸಲಾಗುತ್ತಿದೆ.... ಇದರಲ್ಲಿ  M777 ಮೂವತ್ತು ಕಿಲೋಮೀಟರ್ ದೂರ ಶೆಲ್ ಗಳನ್ನೂ ಉಡಾಯಿಸುವ ಭಾರೀ ಸಾಮರ್ಥ್ಯದ ೧೫೫ ಎಂ ಎಂ ಫಿರಂಗಿಯಾದರೆ.... K9 VAJRA ಮೋದೀಜಿಯವರ ಕನಸಿನಂತೆ ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತದಲ್ಲೇ ಎಲ್ ಅಂಡ್ ಟಿ ಯಿಂದ ತಯಾರಿಸಲ್ಪಟ್ಟ ಸೆಲ್ಫ್ ಪ್ರೊಫೆಲ್ಡ್ ಗನ್ ಗಳು.... ರಷ್ಯಾ ನಿರ್ಮಿತ ಭಾರೀ ಸರಕು ಸಾಗಾಣಿಕಾ ಮಿಲಿಟರಿ ವಿಮಾನ ಎ ಎನ್ 32 ಈ ಬಾರಿಯ ಪರೇಡ್ ನಲ್ಲಿ ಮೊಟ್ಟಮೊದಲ ಬಾರಿಗೆ ಜೈವಿಕ ಇಂಧನದ ಸಹಾಯದೊಂದಿಗೆ ಹಾರಾಟ ನಡೆಸಲಿದೆ...ಹೀಗೆ ಹಲವಾರು ಪ್ರಥಮಗಳನ್ನು ಒಳಗೊಂಡಿರುವ ನಮ್ಮ ಎಪ್ಪತ್ತನೇ ಗಣರಾಜ್ಯೋತ್ಸವದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳನ್ನು ಹೇಳುತ್ತಿದ್ದೇನೆ... 

ಜೈಹಿಂದ್

#ಗಣರಾಜ್ಯೋತ್ಸವ

#ಅನಂತಕುಮರಹೆಗಡೆ

Related posts