ಜನವರಿ 28 ರ ಈ ದಿನ.... ಭಾರತಮಾತೆಯ ವೀರ ಪುತ್ರರಿಬ್ಬರು ಜನಿಸಿದ ಮಹಾ ಸುದಿನ!
ಪಂಜಾಬದ ಸಿಂಹ ಲಾಲಾ ಲಜಪತ್ ರಾಯ್ ಮತ್ತುಕೊಡಗಿನ ಹುಲಿ ಫೀಲ್ಡ್ ಮಾರ್ಷಲ್ ಕಾರಿಯಪ್ಪ
ಜನವರಿ 28 ರ ಈ ದಿನ.... ಭಾರತಮಾತೆಯ ವೀರ ಪುತ್ರರಿಬ್ಬರು ಜನಿಸಿದ ಮಹಾ ಸುದಿನ!
1927 ರ ಡಿಸೆಂಬರ್ 17 ನೇ ತಾರೀಕು ಭಗತ್ ಸಿಂಗ್ ಮತ್ತು ಶಿವರಾಮ ರಾಜಗುರು ಎಂಬ ಮಹಾನ್ ದೇಶಭಕ್ತ ಕ್ರಾಂತಿಕಾರಿಗಳು ಜಾನ್ ಸಾಂಡರ್ಸ್ ಎಂಬ ಬ್ರಿಟಿಷ್ ಪೊಲೀಸ್ ಅಧಿಕಾರಿಯನ್ನು ಗುಂಡಿಟ್ಟು ಸುಟ್ಟು ಕೊಂಡರು. ಇವರಿಬ್ಬರಿಗೆ ಸಹಾಯಮಾಡಿದವರು ಸುಖದೇವ್ ಥಾಪರ್ ಮತ್ತು ಚಂದ್ರಶೇಖರ್ ಅಜಾದ್. ನಿಜಕ್ಕಾದರೆ ಭಗತ್ ಸಿಂಗ್ ಮತ್ತು ರಾಜಗುರು ಕೊಲ್ಲಲು ಬಯಸಿದ್ದು ಪೊಲೀಸ್ ಸೂಪರಿಂಟೆಂಡೆಂಟ್ ಜೇಮ್ಸ್ ಸ್ಕಾಟ್ ನನ್ನು... ಆದರೆ ಅಚಾತುರ್ಯದಿಂದ ಅವರು ಕೊಂಡದ್ದು ಅಸಿಸ್ಟೆಂಟ್ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಸಾಂಡರ್ಸ್ ನನ್ನು...! ಆದರೆ ಈ ನಾಲ್ಕೂ ಜನ ಕ್ರಾಂತಿಕಾರಿಗಳು ಜೇಮ್ಸ್ ಸ್ಕಾಟ್ ನನ್ನು ಕೊಲ್ಲಲು ಯಾಕೆ ಹೊರಟರು...? ಯಾಕೆಂದರೆ ಈ ಸ್ಕಾಟ್ ತನ್ನ ಪೋಲೀಸು ಪಡೆಯ ಮೂಲಕ ಭಾರತದ ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರ, ಹಿಂದೂ ನೇತಾರ, ಅಸಹಕಾರ ಚಳುವಳಿಯ ಹರಿಕಾರ, ಪಂಜಾಬದ ಸಿಂಹವೆಂದೇ ಕರೆಯಲ್ಪಡುತ್ತಿದ್ದ ಶ್ರೀ ಲಾಲಾ ಲಜಪತ ರಾಯರನ್ನು ಹತ್ಯೆ ಮಾಡಿಸಿದ್ದ ...!
ಲಜಪತ ರಾಯರ ನೇತೃತ್ವದಲ್ಲಿ ಸೈಮನ್ ಕಮಿಷನ್ ಆಗಮನದ ವಿರುದ್ಧ ತುಂಬಾ ಶಾಂತಿಯುತರಾಗಿ ಪ್ರತಿಭಟನೆ ಮಾಡುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರ ಗುಂಪಿನ ಮೇಲೆ ಲಾಠೀ ಚಾರ್ಜ್ ಮಾಡುವಂತೆ ಜೇಮ್ಸ್ ಸ್ಕಾಟ್ ಆದೇಶ ನೀಡಿದ್ದ. ಅಷ್ಟೇ ಅಲ್ಲ ಚಳವಳಿಯ ನೇತಾರ ಲಾಲಾ ಲಜಪತರಾಯರ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸುವಂತೆ ಗುಪ್ತವಾಗಿ ಸೂಚನೆ ನೀಡಿದ್ದ...! ಪೊಲೀಸರು ಲಜಪತರಾಯರನ್ನೇ ಗುರಿಯಾಗಿಸಿ ಲಾಠಿಚಾರ್ಜ್ ಮಾಡಿದರು. ಲಜಪತರಾಯರು ಈ ದಾಳಿಯಿಂದ ಗಂಭೀರವಾಗಿ ಗಾಯಗೊಂಡರು. ಬಳಿಕ ಚಿಕಿತ್ಸೆ ಫಲಿಸದೆ ವಿಧಿವಶರಾದರು.... ತಾನು ಕೊನೆಯುಸಿರೆಳೆಯುವ ಮುನ್ನ...
"ಇವತ್ತು ತನ್ನ ದೇಹದ ಮೇಲೆ ಬಿದ್ದ ಒಂದೊಂದು ಏಟು ಕೂಡಾ ಭಾರತದಲ್ಲಿನ ಬ್ರಿಟಿಷ್ ಸಾಮ್ರಾಜ್ಯದ ಶವಪೆಟ್ಟಿಗೆಗೆ ಹೊಡೆದ ಮೊಳೆಗಳು...!" ಅಂತ ಘರ್ಜಿಸಿದ್ದರು ಲಾಲಾ...!
ಲಾಲಾ ಲಜಪತ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್ ಈ ಮೂರು ಜನ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಕ್ರಾಂತಿಯ ಸ್ವರೂಪ ಕೊಟ್ಟವರು. ಚಂದ್ರಶೇಖರ ಅಜಾದ್ , ಭಗತ್ ಸಿಂಗ್ ಮೊದಲಾದ ಅಸಂಖ್ಯಾತ ಕ್ರಾಂತಿಕಾರಿಗಳಿಗೆ ಇವರೇ ಸ್ಪೂರ್ತಿಯ ಚಿಲುಮೆ... "ಲಾಲ್-ಬಾಲ್-ಪಾಲ್" ಎಂದೇ ಖ್ಯಾತರಾಗಿದ್ದ ಈ ಮೂವರ ಪೈಕಿ ಲಾಲಾರ ಸಾವು ದೇಶಾದ್ಯಂತ ಕಿಚ್ಚು ಹಚ್ಚಿತು... ಕ್ರಾಂತಿಕಾರಿಗಳಲ್ಲಿ ಪ್ರತೀಕಾರದ ಜ್ವಾಲೆಯನ್ನು ಬಡಿದೆಬ್ಬಿಸಿತು... ಹಾಗಾಗಿಯೇ ಭಗತ್ ಸಿಂಗ್ ಮತ್ತವರ ಕ್ರಾಂತಿಕಾರೀ ಸ್ನೇಹಿತರು ಜೇಮ್ಸ್ ಸ್ಕಾಟ್ ನನ್ನು ಮುಗಿಸಬೇಕೆಂಬ ಶಪಥ ಮಾಡಿದ್ದು.
ಪಂಜಾಬದ ಸಿಂಹವೆಂದೇ ಅವರನ್ನು ಕರೆಯಲಾಗುತ್ತಿತ್ತು... ಪಂಜಾಬ ಕೇಸರಿ ಪತ್ರಿಕೆ ಶುರುವಾಗುವ ಮೊದಲೇ ಆ ಬಿರುದನ್ನ ಹೊಂದಿದ್ದವರು ಲಾಲಾ ಲಜಪತ ರಾಯರು. ಬ್ರಿಟಿಷರ ವಿರುದ್ಧ ದೇಶದಲ್ಲಿ ಅಸಹಕಾರ ಚಳುವಳಿಯನ್ನ ಶುರುಮಾಡಿದ್ದೇ ಲಜಪತ ರಾಯರು. ಬ್ರಿಟಿಷರು ಲಜಪತ ರಾಯರಿಗೆ ಎಷ್ಟು ಹೆದರಿದ್ದರೆಂದರೆ ಅವರನ್ನು ಬಂಧಿಸಿ ಅಂದಿನ ಬರ್ಮಾದಲ್ಲಿ ಸೆರೆಮನೆಯಲ್ಲಿಟ್ಟಿದ್ದರು. ಸ್ವಾಮೀ ದಯಾನಂದ ಸರಸ್ವತಿಯವರ ಅನುಯಾಯಿಯಾಗಿದ್ದ ಲಜಪತ ರಾಯರು ಹಿಂದೂ ಧರ್ಮದ ಪುನರುತ್ಥಾನದ ಕನಸು ಕಂಡವರು. ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಗೆ ಆರ್ಯ ಸಮಾಜದ ಮೂಲಕ ಹಿಂದೂ ಧರ್ಮದ ಸುಧಾರಣೆಗೆ ಶ್ರಮಿಸಿದ ರಾಯ್ ಆರ್ಯ ಸಮಾಜದ ಚರಿತ್ರೆಯನ್ನು ಬರೆದು ಪುಸ್ತಕ ರೂಪದಲ್ಲಿ ಹೊರತಂದರು. ಬ್ರಿಟಿಷರು ಭಾರತದ ಋಣದಲ್ಲಿದ್ದಾರೆ ಅನ್ನುವ ವಿಷಯದ ಮೇಲೆ ಒಂದು ಪುಸ್ತಕ ರಚಿಸಿದ್ದರು! ಹೀಗೆ ಲೇಖಕರಾಗಿಯೂ ಹೆಸರು ಮಾಡಿದ ಲಜಪತ ರಾಯ್ ಆರ್ಥಿಕ ರಂಗದಲ್ಲೂ ಸುಧಾರಣೆಗಳನ್ನು ತರುವಲ್ಲಿ ಶ್ರಮಿಸಿದರು. ಆ ಕಾಲದಲ್ಲೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸ್ಥಾಪನೆಗೆ ಕಾರಣ ಪುರುಷರಾದರು... ಇಂಥಾ ಮಹಾನ್ ಚೇತನ ಲಾಲಾ ಲಜಪತ್ ರಾಯ್ ಈ ಪುಣ್ಯ ಭೂಮಿಯಲ್ಲಿ ಜನಿಸಿದ ದಿನ ಇವತ್ತು... ಹಾಗಾಗಿ ಆ ಪುಣ್ಯ ಪುರುಷರನ್ನು ನಾವೀವತ್ತು ನೆನೆಯ ಬೇಕಿದೆ...
ಪಂಜಾಬ ಕೇಸರಿ ಲಜಪತ ರಾಯ್ ಹುಟ್ಟಿದ ಈ ದಿನವೇ ಭಾರತ ಮಾತೆಯ ಮತ್ತೊಬ್ಬ ವೀರ ಪುತ್ರ ಕೊಡಗಿನ ಹುಲಿ, ಭಾರತ ಕಂಡ ಮಹಾನ್ ಸೇನಾನಿ, ಸ್ವತಂತ್ರ ಭಾರತದ ಪ್ರಥಮ ಭಾರತೀಯ ಮಹಾದಂಡನಾಯಕ, ಫೀಲ್ಡ್ ಮಾರ್ಷಲ್ ಎಂಬ ಗೌರವ ಪಡೆದ ಮೊತ್ತ ಮೊದಲ ವೀರ ಸೇನಾನಿ...! ಆಪರೇಷನ್ ಕಿಪ್ಪರ್, ಆಪರೇಷನ್ ಈಸೀ, ಆಪರೇಷನ್ ಬೈಸನ್ ಗಳನ್ನ ಸಂಘಟಿಸಿ ಪಾಕಿಸ್ತಾನೀ ಸೈನ್ಯದ ಮೇಲೆ ಮಿಂಚಿನ ದಾಳಿ ನಡೆಸಿ ನೌಶೇರಾ, ಪೂಂಚ್, ದ್ರಾಸ್, ಕಾರ್ಗಿಲ್ ಪ್ರದೇಶಗಳನ್ನು ವಶಪಡಿಸಿಕೊಂಡು, ಭಾರತದ ಮುಕುಟ ಕಾಶ್ಮೀರ ಪಾಕಿಸ್ತಾನದ ವಶವಾಗುವುದನ್ನು ತಪ್ಪಿಸಿದ ಮಹಾಪುರುಷ, ಕೋಡಂದೇರ ಮಾದಪ್ಪ ಕಾರ್ಯಪ್ಪ! ಭಾರತ ಮಾತೆಯ ಈ ಮಹಾನ್ ವೀರ ಪುತ್ರ ಕೂಡಾ ಜನ್ಮಿಸಿದ ಮಹಾಸುದಿನ ಇಂದು... ನೆಹರೂನಂಥ ನಾಲಾಯಕ್ ಪ್ರಧಾನಿ ತನ್ನ ಅಹಂ, ಹಠಮಾರಿತನ, ಮತ್ತು ದಡ್ಡತನದಿಂದ ಕಾಶ್ಮೀರವನ್ನು ಪಾಕಿಸ್ತಾನದ ತೆಕ್ಕೆಗೆ ಹಾಕುವಂಥಾ ಸನ್ನಿವೇಶದಲ್ಲಿ ಆಪತ್ಭಾಂಧವರಂತೆ ಬಂದು ನೆಹರೂ ಅಸಹಕಾರವಿದ್ದರೂ ಕಾಶ್ಮೀರವನ್ನು ದೇಶಕ್ಕೆ ಉಳಿಸಿಕೊಟ್ಟ ಆ ಪುಣ್ಯ ಪುರುಷನ ಸ್ಮರಣೆ ಮಾಡ ಬೇಕಾದುದು ಪ್ರತಿಯೊಬ್ಬ ಭಾರತೀಯ ಆದ್ಯ ಕರ್ತವ್ಯ.
ಹಾಗಾಗಿ ಈ ದಿನ ಭಾರತಾಂಬೆಯ ಇಬ್ಬರು ವೀರ ಪುತ್ರರು ಜನಿಸಿದ ಮಹಾನ್ ಸುದಿನ... ಅವರಿಬ್ಬರ ಸ್ಮರಣೆಯನ್ನು ಮಾಡೋಣ....!
#ಅನಂತಕುಮಾರಹೆಗಡೆ