Infinite Thoughts

Thoughts beyond imagination

ಜಾರ್ಜ್ ಫೆರ್ನಾಂಡಿಸ್ ಎಂಬ ಅಸಾಮಾನ್ಯ ನಾಯಕನ ಜೀವನ ಸಾರ್ಥಕತೆ..!

ಪಾದ್ರಿಯಾಗಿ ಪ್ರಾರ್ಥನೆ ಗೀತೆ ಹಾಡಬೇಕಿದ್ದಾತ.... ರಕ್ಷಣಾ ಮಂತ್ರಿಯಾಗಿ ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದ ವೀರಗಾಥೆ ಹಾಡಿದ ....  
 
ಜಾರ್ಜ್ ಫೆರ್ನಾಂಡಿಸ್ ಎಂಬ ಅಸಾಮಾನ್ಯ ನಾಯಕನ ಜೀವನ ಸಾರ್ಥಕತೆ..! 
 

ಹುಟ್ಟುತ್ತಲೇ ಮನುಷ್ಯನಿಗೆ ರಾಜಯೋಗವಿತ್ತಾ..?  ಯಾಕೆಂದರೆ ಬ್ರಿಟಿಷರಿನ್ನೂ ಭಾರತವನ್ನು ಆಳುತ್ತಿದ್ದ ದಿನಗಳವುಹಾಗಾಗಿ ಇಂಗ್ಲೆಂಡನ್ನು ಆಳುತ್ತಿದ್ದ ಐದನೆಯ ಕಿಂಗ್ ಜಾರ್ಜ್ ಭಾರತಕ್ಕೂ ದೊರೆಯೇ... ಆತ ಹುಟ್ಟಿದ ದಿನವೇ ತನಗೂ ಗಂಡು ಮಗು ಹುಟ್ಟಿದ್ದರಿಂದ ಮಂಗಳೂರಿನ ಆಲೀಸ್ ಮಾರ್ಥಾ ಫೆರ್ನಾಂಡಿಸ್ ತನ್ನ ಮಗನಿಗೆ ಜಾರ್ಜ್ ಅಂತಲೇ ಹೆಸರಿಟ್ಟರುಬ್ರಿಟಿಷ್ ದೊರೆ ಹುಟ್ಟಿದ ದಿನವೇ ಹುಟ್ಟಿದ ಜಾರ್ಜ್ ಫೆರ್ನಾಂಡಿಸ್  ಹದಿನಾರು ವರ್ಷವಾಗುವ ಹೊತ್ತಿಗೆ  ಕ್ರಿಶ್ಚಿಯನ್ ಪಾದ್ರಿಯಾಗಬೇಕೆಂದು ಬೆಂಗಳೂರಿನ ಮಲ್ಲೇಶ್ವರದ ಸಂತ ಪೀಟರ್ಸ್ ಸೆಮಿನರಿಗೆ ಸೇರಿದರುಬಹುಶಃ ಅಸ್ತಮಾ ಖಾಯಿಲೆ ಅವರನ್ನು ಅಂದು ಕಾಡದಿದ್ದರೆ ಇಲ್ಲೇ ಮುಂದುವರಿದು, ಜಾರ್ಜ್ ಫೆರ್ನಾಂಡಿಸ್ ಪಾದ್ರಿಯಾಗಿ ಯಾವುದಾದರೂ ಚರ್ಚ್ ನಲ್ಲಿ ಅಲೆಲೂಯಾ ಅಂತ ಪ್ರೇಯರ್ ಹಾಡಬೇಕಿತ್ತೋ ಏನೋ...!  ಆದರೆ ವಿಧಿ ಬರಹವೇ ಬೇರೆಯಿತ್ತುಚಿಕ್ಕಂದಿನಲ್ಲೇ ಅನ್ಯಾಯದ ವಿರುದ್ಧ ಸಿಡಿದೇಳುವ ಸ್ವಭಾವದ ಜಾರ್ಜ್ ಸೆಮಿನರಿಯಲ್ಲಿ ವಿದ್ಯಾರ್ಥಿಗಳಿಗೂ ರೆಕ್ಟರ್ ಗಳಿಗೂ ನೀಡುವ ಆಹಾರದ ಗುಣಮಟ್ಟದ ವ್ಯತ್ಯಾಸದ ಬಗ್ಗೆ ಪ್ರಶ್ನಿಸಿ ಅಲ್ಲಿಂದ ಹೊರನಡೆದರು

 

ಅಲ್ಲಿಂದ ಹೊರಬಂದು, ಹೆಚ್ಚಿನ ಕರಾವಳಿಯ ಮಂದಿಯಂತೆ ಉದ್ಯೋಗವನ್ನು ಅರಸಿ ಮುಂಬೈಗೆ ಸೇರಿಕೊಂಡದ್ದು ... ಅಲ್ಲಿ ಕಾರ್ಮಿಕನಾದದ್ದು ... ಬಳಿಕ ಕಾರ್ಮಿಕ ನಾಯಕನಾದದ್ದು socialist socialist ರಾಜಕಾರಣಿಯಾದದ್ದು ಎಲ್ಲವೂ ಅದ್ಭುತಗಳೇ...!  ಕಾರ್ಮಿಕ ನಾಯಕನಾಗಿ ಕಾರ್ಮಿಕ ಚಳುವಳಿಗಳನ್ನು ಸಂಘಟಿಸುತ್ತಲೇ ಪ್ರವರ್ಧಮಾನಕ್ಕೆ ಬಂದ ಜಾರ್ಜ್, ರಾಮಮನೋಹರ ಲೋಹಿಯಾರ ಸಂಪರ್ಕಕ್ಕೆ ಬಂದು ಮುಂದೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದದ್ದು, ಇದೆಲ್ಲವೂ ಅಸಾಮಾನ್ಯ ಸಾಧನೆಗಳು..!  ಬಳಿಕ ಇಂದಿರಾ ಪ್ರಧಾನಿಯಾಗಿದ್ದ ಕಾಲದಲ್ಲಿ ಜಾರ್ಜ್ ಅಖಿಲ ಭಾರತ ರೈಲ್ವೆ ನೌಕರರ ಸಂಘದ ಅಧ್ಯಕ್ಷರಾದ ಮೇಲೆ ಸಂಘಟಿಸಿದ ರೈಲ್ವೆ ನೌಕರರ ಮುಷ್ಕರ ಇಡೀ ದೇಶದ ರಾಜಕೀಯದ ದಿಕ್ಕನ್ನೇ ಬದಲಿಸಿತು..!  ಜಾರ್ಜ್ ಕರೆಗೆ ಓಗೊಟ್ಟ ರೈಲ್ವೆ ನೌಕರರು ದೇಶಾದ್ಯಂತ ಮುಷ್ಕರದಲ್ಲಿ ಪಾಲ್ಗೊಂಡರುಪೂರ್ತಿ ಭಾರತೀಯ ರೈಲ್ವೆ ಸ್ಥಬ್ಧವಾಯಿತು..!  ಇಂದಿರಾ ಗಾಂಧಿಯೊಳಗೆ ಅಡಗಿದ್ದ  ಸರ್ವಾಧಿಕಾರಿಯ ಅಹಂಗೆ ಸರಿಯಾದ ಏಟು ಬಿತ್ತುಮುಷ್ಕರವನ್ನು ಜಾರ್ಜ್ ಹಿಂತೆಗೆದುಕೊಂಡರೂ ಇಂದಿರಾ ಗಾಂಧಿಗೆ ಒಳಗೊಳಗೇ ಒಂದು ರೀತಿಯ ಭಯ; ಅಧಿಕಾರ ಕೈತಪ್ಪುವ ಭೀತಿ ಶುರುವಾಗಿತ್ತುಬಹುಷಃ ಭೀತಿಯೇ ಮುಂದೆ ಸ್ವತಂತ್ರ ಭಾರತದ ಇತಿಹಾಸದಲ್ಲೇ ಕರಾಳ ಅಧ್ಯಾಯವಾದ ತುರ್ತು ಪರಿಸ್ಥಿತಿಯ ಹೇರಿಕೆಗೂ ಕಾರಣವಾಯಿತು...!

 

ಜಾರ್ಜ ಫೆರ್ನಾಂಡಿಸ್ ತುರ್ತುಪರಿಸ್ಥಿಯ ವೇಳೆ ಭೂಗತರಾದರುತನ್ನ ಸರ್ವಾಧಿಕಾರಕ್ಕೆ ಸವಾಲು ಹಾಕಿದ್ದ ಮಂಗಳೂರಿನ ಬೆಂಕಿಚೆಂಡು ಜಾರ್ಜ್ ಫೆರ್ನಾಂಡಿಸ್ ರನ್ನು ಹೇಗಾದರೂ ಮುಗಿಸಲೇ ಬೇಕು ಅಂತ ಬಹುಷಃ  ಇಂದಿರಾ ಗಾಂಧಿ ದೃಢ ನಿಶ್ಚಯ ಮಾಡಿಕೊಂಡಿದ್ದರೇನೋ.  ರೈಲ್ವೆ ಸೇತುವೆಗಳನ್ನು ಸ್ಫೋಟಿಸಲು ಡೈನಾಮೈಟ್ ಗಳನ್ನು ಅಕ್ರಮವಾಗಿ ಸಂಗ್ರಹಿಸಿ ದೇಶದ್ರೋಹದ ಸಂಚು ರೂಪಿಸಿದ್ದಾರೆಂದು ಜಾರ್ಜ್ ಮತ್ತು ಸುಮಾರು ಇಪ್ಪತ್ತನಾಲ್ಕು ಜನ ಸಂಗಡಿಗರ ಮೇಲೆ ಇಂದಿರಾ ಕೇಸು ದಾಖಲಿಸಿ ಸಿಬಿಐ ಯನ್ನು ಛೂ ಬಿಟ್ಟರುಜಾರ್ಜ್ ಸಿಕ್ಕಿಬೀಳಲಿಲ್ಲವೆಂದು ಅವರ ತಮ್ಮ ಲಾರೆನ್ಸ್ ಫೆರ್ನಾಂಡಿಸ್ ರನ್ನು ಬಂಧಿಸಿ ಚಿತ್ರ  ಹಿಂಸೆ ನೀಡಲಾಯಿತುಬಹುಶಃ ಇವತ್ತು ಕಾಂಗ್ರೆಸ್ಸಿನವರ ಸೆರಗು ಹಿಡಿದುಕೊಂಡು ಅಡ್ಡಾಡುವ ನಮ್ಮ ರಾಜ್ಯದ ಎಡಚ ಸಮಾಜವಾದೀ ನಾಯಕರೆಂದು ಕರೆಸಿಕೊಳ್ಳುವವರಿಗೆ ಭವ್ಯ ವ್ಯಕ್ತಿತ್ವ ಮತ್ತು ಅವರ ಕೆಚ್ಚದೆಯ ಸೈದ್ಧಾಂತಿಕ ಹೋರಾಟದ ಬಗ್ಗೆ ಯಾವುದೇ ರೀತಿಯ ಭದ್ಧತೆ ಇರಲಿಕ್ಕಿಲ್ಲಇಂದಿರಾ ಗಾಂಧಿಯ ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತಿದ ಅಂದಿನ ಸಮಾಜವಾದೀ ನಾಯಕರ ಹೆಸರೂ ಕೂಡಾ ಇವತ್ತು ಕಾಂಗ್ರೆಸ್ ಗಂಜಿಗಾಗಿ ಕಾಯುತ್ತಿರುವ ()ಮಾಜವಾದಿಗಳಿಗೆ ಅರಿವಿರಲಿಕ್ಕಿಲ್ಲ...!  

 

ಎಪ್ಪತ್ತರ ದಶಕದಲ್ಲಿ ಎಡಚ ಬುದ್ಧಿಜೀವಿ ಎನಿಸಿಕೊಂಡ ಅನಂತಮೂರ್ತಿಯ ಕಾದಂಬರಿ 'ಸಂಸ್ಕಾರ' ಕನ್ನಡಲ್ಲಿ ಚಲನಚಿತ್ರವಾಯಿತುಅದನ್ನು ನಿರ್ಮಿಸಿ ನಿರ್ದೇಶಿಸಿದ್ದು ಆಂಧ್ರದ ಪಟ್ಟಾಭಿರಾಮ ರೆಡ್ಡಿ ಮತ್ತು ಅವರ ಪತ್ನಿ ಸಿನಿಮಾ ಹೀರೋಯಿನ್ ಸ್ನೇಹಲತಾ ರೆಡ್ಡಿಗೂ, ಜಾರ್ಜ್ ಫೆರ್ನಾಂಡಿಸ್ ಗೂ ಗೆಳೆತನವಿತ್ತುಇದನ್ನೇ ನೆಪ ಮಾಡಿಕೊಂಡ ಇಂದಿರಾಗಾಂಧಿ, ಆಕೆಯನ್ನೂ ಸಹ ಡೈನಾಮೈಟ್ ಕೇಸಿನಲ್ಲಿ ಸಿಲುಕಿಸಿ ಬಂಧಿಸಿ ಬೆಂಗಳೂರು ಜೈಲಲ್ಲಿ ಇಟ್ಟಿದ್ದರು..!!  ಪೊಲೀಸರ ಅಮಾನವೀಯ ಹಿಂಸೆಯಿಂದಾಗಿ ಸ್ನೇಹಲತಾ ರೆಡ್ಡಿ ಜೈಲಿನಲ್ಲೇ ತೀರಿಕೊಂಡರು..!!  ಇಂದಿರಾ ಗಾಂಧಿಯ ಸೇಡಿನ ಕ್ರಮಕ್ಕೆ ಹೆದರಿದ್ದ ಜಾರ್ಜ್ ಫೆರ್ನಾಂಡಿಸ್ ಅವರ ಪತ್ನಿ ಮತ್ತು ಮಕ್ಕಳು ಭಾರತವನ್ನೇ ತೊರೆದುಹೋದರು..!!  ಬಳಿಕ ಜಾರ್ಜ್ ಅಂದಿನ ಕಲ್ಕತ್ತಾದಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲು ಸೇರಿದರುಆದರೆ ನಂತರ ನಡೆದ ಚುನಾವಣೆಯಲ್ಲಿ ಇಂದಿರಾ ಸೋತರು... ಜಾರ್ಜ್ ಜೈಲಿನಲ್ಲೇ ಇದ್ದು, ಅವರ ತಾಯಿ ಪ್ರಚಾರ ಮಾಡಿ ಅಂದು ದಾಖಲೆಯ ಮಟ್ಟದಲ್ಲಿ ಗೆದ್ದರು... ಕೇಂದ್ರ ಮಂತ್ರಿಯೂ ಆದರು..! 

 

ಬಳಿಕ ಸ್ವಂತ  ಪಕ್ಷ ಸ್ಥಾಪಿಸಿ ವಾಜಪೇಯಿಯವರ ಜೊತೆ ಎನ್ ಡಿ.   ಸೇರಿ, ಅವರ ಸರಕಾರದಲ್ಲಿ ರೈಲ್ವೆ ಸಚಿವರಾದರುಒಂದೊಮ್ಮೆ ರೈಲ್ವೆ ಕಾರ್ಮಿಕ ಲೀಡರಾಗಿದ್ದಾಗ ರೈಲ್ವೆ ಮುಷ್ಕರ ಸಂಘಟಿಸಿ ಇಂದಿರಾ ಸರಕಾರವನ್ನೇ ನಡುಗಿಸಿದ್ದ ವ್ಯಕ್ತಿ ಬಳಿಕ ಸ್ವತಹಃ ರೈಲ್ವೆ ಸಚಿವರಾಗಿ ಅಭೂತ ಪೂರ್ವ ಅಭಿವೃದ್ಧಿ ಕೆಲಸಗಳನ್ನು ಮಾಡಿದರುನನಗಂತೂ ಸಮಯದಲ್ಲಿ ಅವರೊಂದಿಗೆ ತುಂಬಾ ಆಪ್ತ ರೀತಿಯ ಒಡನಾಟವಿತ್ತು... ಕಾರಣ ಬ್ರಿಟಿಷರ ಕಾಲದಲ್ಲೆ ಸರ್ವೇ ನಡೆಸಿ ಕಾರ್ಯಯೋಜನೆ ಸಿದ್ದವಾಗಿ ಬಳಿಕ ಮೂಲೆಗುಂಪಾಗಿದ್ದ ಕೊಂಕಣ ರೈಲ್ವೆ ಯೋಜನೆಯನ್ನು ಜಾರ್ಜ್ ಮತ್ತೆ ಕೈಗೆತ್ತಿಕೊಂಡು ಅದಕ್ಕೆ ಜೀವಕೊಟ್ಟಿದ್ದರು..!!  ಅತ್ಯುತ್ತಮ ಮತ್ತು ದಕ್ಷ ಆಡಳಿತಗಾರರೆಂದೇ ಖ್ಯಾತರಾಗಿದ್ದ ಏಳಟ್ಟುವಳಪಿಲ್ ಶ್ರೀಧರನ್ ಎಂಬ Metro Man ರನ್ನು ತಂದು ಕೊಂಕಣ ರೈಲ್ವೆ ಯೋಜನೆಯನ್ನು ಸಾಕಾರಗೊಳಿಸಿದ ಕೀರ್ತಿ ಜಾರ್ಜರದ್ದು.

 

ಉತ್ತರ ಕನ್ನಡ  ಜಿಲ್ಲೆಯ ಭವಿಷ್ಯವನ್ನೇ ಬದಲಿಸುವಂಥ ಕೊಂಕಣ ರೈಲ್ವೆ ಯೋಜನೆಯ ಅನುಷ್ಠಾನದ  ಸಂದರ್ಭದಲ್ಲಿ ರೈಲ್ವೆ ಮಂತ್ರಿಯಾಗಿ  ಮತ್ತು ಸೀ ಬರ್ಡ್ ನೌಕಾನೆಲೆಯ ವಿಷಯದಲ್ಲಿ ದೇಶದ ರಕ್ಷಣಾ ಸಚಿವರಾಗಿ ಜಾರ್ಜ್ ಕೈಗೊಂಡ ಕ್ಷಿಪ್ರ ನಿರ್ಧಾರಗಳು, ಮಾಡಿದ  ಕೆಲಸಗಳ ಬಗ್ಗೆ ಬಹಳ ಹೆಮ್ಮೆಯಿಂದ ದಿನ ನಾನು ನನ್ನ ಕ್ಷೇತ್ರದ ಜನತೆಯ ಜೊತೆಗೆ ನೆನೆಯುತ್ತೇನೆ..! 

 

ಜಾರ್ಜ್ ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿದ್ದಾಗಲೂ ಕಾಂಗ್ರೆಸ್ ಮತ್ತು ಅದರ ಬಾಲಂಗೋಚಿಗಳಂತಿದ್ದ ಕೆಲ ಎಡಚ ಪತ್ರಕರ್ತರು ಜಾರ್ಜ್ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ರಾಜಕೀಯವಾಗಿ ಅವರನ್ನು ಮುಗಿಸಿಬಿಡಲು ಇನ್ನಿಲ್ಲದ ಯತ್ನ ನಡೆಸಿದರುಅವರ ತೇಜೋವಧೆ ಮಾಡುವ ಪ್ರಯತ್ನ ಸತತವಾಗಿ ನಡೆಯಿತುಆದರೂ ಜಾರ್ಜ್ ಎಲ್ಲ ಆರೋಪಗಳಿಂದ ಮುಕ್ತರಾಗಿ ಪುಟಕ್ಕಿಟ್ಟ ಚಿನ್ನದಂತೆ ಹೊರಬಂದರು... ದೇಶದ ರಕ್ಷಣಾ ಸಚಿವರಾಗಿ ಅವರು ಸಲ್ಲಿಸಿದ ಸೇವೆ ನಿಜಕ್ಕೂ ಅನುಪಮ..!

 

ಅವರ ಮತ್ತು ಪ್ರಧಾನಿ ವಾಜಪೇಯಿ, ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಯವರ ಮಧ್ಯೆ ಒಂದು ಅನನ್ಯವಾದ ಸಂಬಂಧವಿತ್ತು..!  ಅದರಲ್ಲಿ ಅದಮ್ಯ ದೇಶ ಪ್ರೇಮದ ಬಲವಿತ್ತುಜಾರ್ಜ್ ಫೆರ್ನಾಂಡಿಸ್ ಪೋಕ್ರಾನ್ ಅಣು ಪರೀಕ್ಷೆಯ ಸಂದರ್ಭದಲ್ಲಿ ವಾಜಪೇಯಿಯವರ ಜೊತೆಗೆ ಬಂಡೆಯಂತೆ ನಿಂತರುಸಿಯಾಚಿನ್ ನೀರ್ಗಲ್ಲು ಪ್ರದೇಶಕ್ಕೆ ಹದಿನೆಂಟು ಸಲ ಭೇಟಿ ನೀಡಿದ ಏಕಮಾತ್ರ ರಕ್ಷಣಾ ಸಚಿವ, ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿದ ಧೀರ ಜಾರ್ಜ್ ಫೆರ್ನಾಂಡಿಸ್ ಇವತ್ತಿಗೆ ನಮ್ಮನ್ನು ಬಿಟ್ಟು ಅಗಲಿದ್ದಾರೆ...!   ತಮ್ಮ ಇಳಿವಯಸ್ಸಿನಲ್ಲೂ ಸಹ ಅಸ್ತಮಾವನ್ನು ಎದುರಿಸಿ ತಮ್ಮ ಭಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ ಸರಳ ಜಾರ್ಜ್ ಫೆರ್ನಾಂಡಿಸ್ ಇಂದು ಕೇವಲ ನೆನಪು ಮಾತ್ರ..!    ಇವರ ಜೀವನಗಾಥೆ  ಮುಂದಿನ ಹಲವು ತಲೆಮಾರುಗಳಿಗೆ ಆದರ್ಶ ಮತ್ತು ಸ್ಪೂರ್ತಿಯ ಚಿಲುಮೆಯಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.   ಇಂದಿರಾ ಗಾಂಧಿಗೆ ಸೆಡ್ಡು ಹೊಡೆದು ನಿಂತ ಮಂಗಳೂರಿನ ದಿಟ್ಟ ರಾಜಕಾರಣಿ ಯಾವತ್ತಿಗೂ ಪ್ರಾತಃ ಸ್ಮರಣೀಯರು...!

 

ಅವರಿಗೊಂದು ಭಾವಪೂರ್ಣ ಶ್ರದ್ಧಾಂಜಲಿಅವರ ಆತ್ಮಕ್ಕೆ ಸದ್ಗತಿ ದೊರೆಯಲಿ!

 

ಓಂ ಶಾಂತಿ!

 

#ಅನಂತಕುಮಾರಹೆಗಡೆ 

 

ಚಿತ್ರ ಕೃಪೆ: ಅಂತರ್ಜಾಲ  

 

 

Related posts