ಯುವಜನತೆ ಮೊದಲ ಬಾರಿಗೆ ಚುನಾವಣೆ ಪ್ರಕ್ರಿಯಲ್ಲಿ ಮತ ನೀಡುವವರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ
ಸಮಾಜ ತನ್ನ ಅರ್ಹತೆಗೆ ತಕ್ಕಂತೆ ತನ್ನ ಸರ್ಕಾರವನ್ನು ಪಡೆಯುತ್ತದೆ ಎಂಬುದು ಹಿರಿಯರ ಅಭಿಪ್ರಾಯ. ಎಂತಹ ಜನತೆ ತಮ್ಮ ಅಭಿರುಚಿಗೆ ಒಳಪಟ್ಟು ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಸಂಪೂರ್ಣವಾಗಿ ಅತ್ಯುತ್ತಮ ಎಂದು ಹೇಳಲಾಗದು. ಹಾಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸದ ಒಂದು ದೊಡ್ಡ ವರ್ಗ ಮತ ಚಲಾಯಿಸದೆ ಇನ್ನ್ಯಾವುದೋ ವ್ಯವಸ್ಥೆಯನ್ನು ಸ್ಥಾಪಿಸಲು ನೆರವಾಗುತ್ತದೆ. ಒಳ್ಳೆಯ ಜನರು ಚುನಾವಣೆಯೇ ಪ್ರಕ್ರಿಯೆಯಿಂದ ದೂರವುಳಿದು ಕೆಟ್ಟ ಸರ್ಕಾರ ರಚನೆಯಾಗಿರುವುದಕ್ಕೆ ನಾವೆಲ್ಲಾ ಸಾಕ್ಷಿಗಳಾಗಿದ್ದೇವೆ.
ಹಾಗಾಗಿ ಪ್ರಜಾಪ್ರಭುತ್ವ ನೀಡಿರುವ ಈ ಮಹತ್ವದ ಪ್ರಜಾ-ಮಾನ್ಯತೆಯನ್ನು ನಾವು ಸಂಪೂರ್ಣವಾಗಿ ಚಲಾಯಿಸಿ ಯೋಗ್ಯ ಸರ್ಕಾರ ರಚನೆಯಾಗುವಂತೆ ಬಳಸಿಕೊಳ್ಳಬೇಕು. ಒಳ್ಳೆಯ ಸರ್ಕಾರವನ್ನು ಅನುಮೋದಿಸಬೇಕು, ಮತ್ತೆ ಅಧಿಕಾರಕ್ಕೆ ಅವರನ್ನು ಆಯ್ಕೆ ಮಾಡಬೇಕು. ರಾಷ್ಟ್ರ ದ್ರೋಹ, ವಂಶಾಡಳಿತ ಮತ್ತು ಸ್ವಜನ ಪಕ್ಷಪಾತ ಮಾಡುವ ಪಕ್ಷಗಳನ್ನು ತಿರಸ್ಕರಿಸಬೇಕು.
ಈ ಪ್ರಕ್ರಿಯೆಯನ್ನು ನಿರ್ವಹಿಸಲು ನಮ್ಮ ಸಂವಿಧಾನ ನಮಗೆ ಅವಕಾಶ ಮತ್ತು ಅಧಿಕಾರ ದೊರಕಿಸಿದೆ. ಇಂತಹ ಅವಕಾಶವನ್ನು ಬಳಸಿಕೊಂಡು, ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಚುನಾವಣೆಯಲ್ಲಿ ನಿಮ್ಮ ಅಭಿಪ್ರಾಯದ ಆಯ್ಕೆ ಬಹಳ ಮುಖ್ಯ. ಅದರಲ್ಲೂ ಯುವಜನತೆ ಮೊದಲ ಬಾರಿಗೆ ಚುನಾವಣೆ ಪ್ರಕ್ರಿಯಲ್ಲಿ ಮತ ನೀಡುವವರು ತಮ್ಮ ಹೆಸರನ್ನು ನೋಂದಾಯಿಸಕೊಳ್ಳಬೇಕು. ಲೋಕ ಸಭೆ ಚುನಾವಣೆ ಪ್ರಾಯಶಃ ಏಪ್ರಿಲ್ ಅಂತ್ಯದಲ್ಲಿ ಪ್ರಾರಂಭವಾಗಿ ಮೇ ೧೦ ರೊಳಗೆ ಅಂತ್ಯಗೊಂಡು ನಂತರ ಸರ್ಕಾರ ರಚನೆಯಾಗಲಿಕ್ಕಿದೆ.
ಈ ದಿಕ್ಕಿನಲ್ಲಿ ನಮ್ಮ ಯುವಜನತೆ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಇಂದೇ ನೊಂದಾಯಿಸಿಕೊಳ್ಳಬೇಕು. ಈ ನಿಟ್ಟಿನಲ್ಲೂ ತಮ್ಮ ನೋಂದಾವಣೆ ಕಾರ್ಯಕ್ಕೆ ಸುಗಮವಾಗಲೆಂದು ಈ PDF Document ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳಲಾಗಿದೆ. ಇದು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅಥವಾ ನಿಮ್ಮ ಹೆಸರು ದಾಖಲಾಗಿರುವುದನ್ನು ಖಾತ್ರಿಪಡಿಸಿಕೊಳ್ಳಲು ಸಹಾಯಕವಾಗಿದೆ. ಪ್ರತಿ ಹಂತದಲ್ಲೂ ನಿಮಗೆ ಸೂಕ್ತವಾಗಿ ಮಾರ್ಗದರ್ಶನ ಮಾಡುತ್ತದೆ. ಇದರ ಸದುಪಯೋಗವನ್ನು ಪಡಿಸಿಕೊಂಡು ಉತ್ತಮ ಸರ್ಕಾರ ಪಡೆದು ನಿಮ್ಮ ಸಮಾಜವನ್ನು ಮಾದರಿಯನ್ನಾಗಿ ಮಾಡಿಕೊಳ್ಳಿ.