Infinite Thoughts

Thoughts beyond imagination

ರಾಷ್ಟ್ರೀಯ ವಿಜ್ಞಾನ ದಿನ - ಭಾರತದ ವಿಜ್ಞಾನಿಗಳಿಗೆಂದೇ ಮೀಸಲಾದ ದಿನ

ಫೆಬ್ರವರಿ ೨೮  ರಾಷ್ಟ್ರೀಯ ವಿಜ್ಞಾನ ದಿನ - ಭಾರತದ ವಿಜ್ಞಾನಿಗಳಿಗೆಂದೇ ಮೀಸಲಾದ ದಿನ

ಇಂದು  ಸರ್ ಸಿ.ವಿ.ರಾಮನ್ ಬೆಳಕಿನ ವಕ್ರೀಭವನ ಸಿದ್ಧಾಂತವನ್ನು ಕಂಡು ಹಿಡಿದ ದಿನ... 

ಚಂದ್ರಶೇಖರನ್ ರಾಮನಾಥನ್ ಅಯ್ಯರ್ ಮತ್ತು ಪಾರ್ವತೀ ಅಮ್ಮಾಳ್ ಅವರ ಪುತ್ರ ಚಂದ್ರಶೇಖರ್ ವೆಂಕಟರಾಮನ್  ಅವರು ಯಾವುದಕ್ಕೆ ಪ್ರಸಿದ್ಧರು ಅಂತ ಕೇಳಿದರೆ ಯಾರಿಗೂ ಕೂಡಲೇ ಉತ್ತರ ಹೊಳೆಯಲಿಕ್ಕಿಲ್ಲ.! ಭಾರತಕ್ಕೆ ೧೯೩೦ ರಷ್ಟು ಹಿಂದೆಯೇ ದೇಶದ ಎರಡನೆಯ ನೊಬೆಲ್ ಪ್ರಶಸ್ತಿ ತಂದುಕೊಟ್ಟಾತ ಅಂತಂದರೂ ಕೂಡಾ ಗೊತ್ತಾಗುವುದು ಸಂಶಯವೇ..!!!  ಆತ ತಮಿಳುನಾಡಿನ ಪ್ರಖ್ಯಾತ ವಿಜ್ಞಾನಿ ಸರ್. ಸಿ.ವಿ.ರಾಮನ್ ಅಂತ ಅಂದ ಕೂಡಲೇ ಖಂಡಿತಾ ಪ್ರತಿಯೊಬ್ಬರ ಬಾಯಿಂದಲೂ ಒಂದು ಉದ್ಗಾರ ಹೊರಡುತ್ತದೆ ......"ಓ ... ರಾಮನ್ ಎಫೆಕ್ಟ್ ..!!" 

ಬೆಳಕಿನ  ಬಗ್ಗೆ ಸರ್ ಸಿ. ವಿ. ರಾಮನ್ ತಮ್ಮಿಬ್ಬರು ವಿದ್ಯಾರ್ಥಿಗಳಾದ ಶ್ರೀ ಕೆ.ಎಸ್, ಕೃಷ್ಣನ್ ಮತ್ತು ಶ್ರೀ ಎಸ್.ಸಿ ಸರ್ಕಾರ್ ಅವರ ಜೊತೆಗೆ ಕೈಗೊಂಡ ಅಮೋಘ ಪ್ರಯೋಗಗಳು ಅದರಿಂದ ಬೆಳಕಿನ ಕಿರಣಗಳ ವಕ್ರೀಭವನ ಹೇಗಾಗುತ್ತದೆ ಎಂಬ ತಮ್ಮ ಸಂಶೋಧನೆಯನ್ನು ೧೯೨೮ರ ಫೆಬ್ರವರಿ ೨೮ರಂದು ಪೂರ್ಣಗೊಳಿಸಿದರು... ಮುಂದೆ ಈ ಮಹಾನ್ ಸಂಶೋಧನೆಗೆಂದೇ ಅವರಿಗೆ ನೊಬೆಲ್ ಪುರಸ್ಕಾರ ಕೂಡಾ ಲಭಿಸಿತು!  ಅವರ ಈ ಪ್ರಯೋಗಗಳಿಂದಾಗಿ ಮುಂದೆ ಬೆಳಕಿನ ಬಗ್ಗೆ ಮಾತ್ರವಲ್ಲದೆ ವಿವಿಧ ವೈಜ್ಞಾನಿಕ ಆಯಾಮಗಳಲ್ಲೂ ಬಹಳಷ್ಟು ಹೊಸ ಅನ್ವೇಷಣೆಗಳು ನಡೆಯಲು ಕಾರಣವಾದವು.

ಇವತ್ತು ಫೆಬ್ರವರಿ ೨೮ನೇ ತಾರೀಕು. ಹಾಗಾಗಿ  ಸರ್ ಸಿ.ವಿ. ರಾಮನ್ ಅವರ ಅಮೋಘ ಸಂಶೋಧನೆ ಮತ್ತು ಅದಕ್ಕಾಗಿ ದೊರಕಿದ ನೊಬೆಲ್ ಬಹುಮಾನ ಇವೆಲ್ಲವನ್ನೂ ಇವತ್ತಿನ ದಿನ ಭಾರತೀಯ ವಿಜ್ಞಾನನಿಗಳೆಲ್ಲಾ ನೆನಪು ಮಾಡಿಕೊಂಡು ಸಂಭ್ರಮಿಸುವ ದಿನ!  ಭಾರತದ ವೈಜ್ಞಾನಿಕ ಸಂಶೋಧನೆಗಳನ್ನೆಲ್ಲ ಇನ್ನೊಂದು ಹೊಸ ಮಜಲಿಗೆ ಒಯ್ದು ಭವಿಷ್ಯದ  ದಿನಗಳಲ್ಲಿ ಭಾರತ ಜಾಗತಿಕವಾಗಿ ವೈಜ್ಞಾನಿಕ ರಂಗದಲ್ಲಿ ಮುಂಚೂಣಿಯಲ್ಲಿ ನಿಲ್ಲುವಂಥ ಸಾಧನೆ ಸಂಶೋಧನೆಗಳನ್ನು ಮಾಡಲೆಂದು ಹಾರೈಸುತ್ತಾ ನಮ್ಮ ದೇಶದ ಎಲ್ಲಾ ವಿಜ್ಞಾನಿಗಳಿಗೂ ರಾಷ್ಟ್ರೀಯ ವಿಜ್ಞಾನ ದಿನದ ಶುಭಾಶಯಗಳನ್ನು ಕೋರುತ್ತೇನೆ!

#ಅನಂತಕುಮಾರಹೆಗಡೆ

Related posts