ಎಲ್ಲರಿಗೂ ಶಿವನೊಲಿಯಲಿ - ಮಹಾಶಿವರಾತ್ರಿಯಂದು ಎಲ್ಲರಿಗೂ ಶುಭವಾಗಲಿ....
ಎಲ್ಲರಿಗೂ ಶಿವನೊಲಿಯಲಿ- ಮಹಾಶಿವರಾತ್ರಿಯಂದು ಎಲ್ಲರಿಗೂ ಶುಭವಾಗಲಿ....
ಆತ ಆದಿ ಗುರು, ಆದಿ ಯೋಗಿ, ಆತನೇ ಆದಿ ದೇವ, ಆತ ಮಹಾರುದ್ರ.....ಮಹದೇವ....ಮಹಾಲಿಂಗ...ಮಹಾಕಾಲ......ಮಹೇಶ್ವರ....ಭಾವುಕ ಭಕ್ತರ ಮನದಲ್ಲಿ ಆತನಿಗೆ ಸಾವಿರಾರು ಹೆಸರು, ನೂರಾರು ರೂಪ, ಆತ ಶಕ್ತಿ ಸ್ವರೂಪನೂ ಹೌದು, ಮುಕ್ತಿ ಪ್ರದಾಯಕನು ಹೌದು, ಶಿವಶಕ್ತಿಯರ ಸಮಾಗಮದ ಅರ್ಧನಾರೀಶ್ವರನೂ ಹೌದು......
ಆತ ಪಶುಗಳನ್ನು ಪಾಲಿಸುವಾತ, ಗೋವುಗಳನ್ನು ರಕ್ಷಿಸುವಾತ....ಹಾಗಾಗಿಯೇ ಪಶುಪತಿನಾಥನೂ ಹೌದು, ಗೋರಕ್ಷನಾಥನೂ ಹೌದು! ಹಲನಾಮಗಳನ್ನು ಹೊಂದಿದವಗೆ ಭಕ್ತರಿಗೂ ಹಲನಾಮಗಳು. ಶಿವನನ್ನು ಆರಾಧಿಸುವ ಶೈವರಲ್ಲಿಯೂ ಹಲವಾರು ಕವಲುಗಳು, ಕಾಪಾಲಿಕರು, ಕಾಳಮುಖರು, ಪಾಶುಪಾತರು, ಗೋರಖನಾಥ ಪಂಥದವರು, ವೀರಶೈವರು ಹೀಗೆ ಬೇರೆ ಹೆಸರುಗಳಲ್ಲಿ, ಬೇರೆ ಪಂಥಗಳಲ್ಲಿ ಇವರು ಆರಾಧಿಸುವುದು ವಿವಿಧರೂಪಗಳ ಆ ಪರಾಶಿವನನ್ನೇ......
ಪ್ರಾಣವವನ್ನೊಳಗೊಂಡ ಷಡಕ್ಷರಿ ಮಂತ್ರ ಅಥವಾ ಶಿವಪಂಚಾಕ್ಷರಿ ಮಂತ್ರವೇ ಆತನನ್ನು ತಲುಪುವ ಸಾಧನೆ, ಇವತ್ತು ಶಿವಭಕ್ತರಾದ ನಮ್ಮೆಲ್ಲರಿಗೂ ತುಂಬಾ ಪರಾಮಪವಿತ್ರವಾದ ದಿನ, ಮಹಾ ಶಿವರಾತ್ರಿ.
ಶುಭಸಂದರ್ಭದಲ್ಲಿ ಮಹಾಕಾಲನು ಎಲ್ಲರಿಗೂ ಸಂಮಂಗಳವನ್ನುಂಟು ಮಾಡಲೆಂದು ಪ್ರಾರ್ಥಿಸುತ್ತಾ ಮಹಾಶಿವರಾತ್ರಿಯ ಶುಭಾಶಯಗಳನ್ನು ಸಲ್ಲಿಸುತ್ತೇನೆ.
#ಅನಂತಕುಮಾರಹೆಗಡೆ