Infinite Thoughts

Thoughts beyond imagination

ಒಸಾಮಾಜೀ... ಆಫ್ಝಲ್ ಗುರೂಜೀ ... ಮಸೂದ್ ಅಝರ್ ಜೀ... ಸೋನಿಯಾಜೀ... ರಾಹುಲ್ ಜೀ .... ಪ್ರಿಯಾಂಕಾ ಜೀ ... ಪೀದಿಜೀ ... ಮುಂತಾದ ಸಮಾನ ಸ್ತರದ ಪ್ರಾಸಗಳ ತ್ರಾಸ...

ಒಸಾಮಾಜೀ... ಆಫ್ಝಲ್ ಗುರೂಜೀ ... ಮಸೂದ್ ಅಝರ್ ಜೀ... 

ಸೋನಿಯಾಜೀ... ರಾಹುಲ್ ಜೀ .... ಪ್ರಿಯಾಂಕಾ ಜೀ ... ಪೀದಿಜೀ ... 

ಮುಂತಾದ ಸಮಾನ ಸ್ತರದ ಪ್ರಾಸಗಳ ತ್ರಾಸ...  

 

ಇಸ್ಲಾಮಿಕ್ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಹತ್ತು ವರ್ಷಗಳ ಕಾಲ ಇಸ್ಲಾಮಿಕ್ ಭಯೋತ್ಪಾದನೆಯ ಕೇಂದ್ರ ಬಿಂದು ಪಾಕಿಸ್ತಾನದಲ್ಲೇ ಅಡಗಿಕೂತಿದ್ದ.  ಕೊನೆಗೂ ಅವನನ್ನು ಕಂಡು ಹಿಡಿದ ಅಮೆರಿಕ, ಸೈನ್ಯ ನುಗ್ಗಿಸಿ ಅವನನ್ನು ಹೊಡೆದುರುಳಿಸಿತ್ತು.  ಅಂಥಾ ಒಸಾಮಾನನ್ನು ಇಡೀ ಜಗತ್ತೇ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದ ಸಮಯದಲ್ಲೇ ಭಾರತೀಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಮಾತ್ರ "ಒಸಾಮಾ ಜೀ... ಒಸಾಮಾ ಜೀ..." ಅಂತ ಗೌರವ ಸಲ್ಲಿಸುತ್ತಾ ಮುಸ್ಲಿಮರ ಓಟಿಗೋಸ್ಕರ ಜೊಲ್ಲು ಸುರಿಸುತ್ತಿದ್ದರು....!  ಭಾರತದ ಮೇಲೆ ಪದೇ ಪದೇ ಭಯೋತ್ಪಾದಕ ದಾಳಿ ನಡೆಸಿದ ಲಷ್ಕರ್- ಈ ತಯ್ಯಬಾ ಮುಖ್ಯಸ್ಥ, ಕುಖ್ಯಾತ ಇಸ್ಲಾಮಿಕ್ ಭಯೋತ್ಪಾದಕ ಹಫೀಜ್ ಸಯೀದ್ ಗೂ ಕೂಡಾ ಇದೆ ದಿಗ್ವಿಜಯ ಸಿಂಗ್ ಭಾರೀ ಮರ್ಯಾದೆ ನೀಡಿ "ಹಫೀಜ್ ಸಾಹೇಬ್ ಜೀ" ಅಂತ ಹಲ್ಲು ಗಿಂಜಿ ನಿಷ್ಠೆ ಪ್ರದರ್ಶಿಸಿದ್ದರು..! 

 

ಡಾ. ಅಂಬೇಡ್ಕರ್ ಬರೆದ ಸಂವಿಧಾನ ಇರುವ ಪ್ರಜಾತಂತ್ರದ ದೇಗುಲ ಸಂಸತ್ ಭವನಕ್ಕೆ ಉಗ್ರರನ್ನು ನುಗ್ಗಿಸಿ ರಕ್ತದೋಕುಳಿ ಹರಿಸಿದ್ದ ಕಾಶ್ಮೀರೀ ಉಗ್ರ ಆಫ್ಝಲ್ ಗುರುವನ್ನು ತಪ್ಪಿತಸ್ಥ ಅಂತ ಭಾರತದ ಸರ್ವೋಚ್ಚ ನ್ಯಾಯಾಲಯವೇ ಘೋಷಿಸಿ... ಆತನಿಗೆ ಮರಣದಂಡನೆ ವಿಧಿಸಿದ ಮೇಲೂ... ಕಾಂಗ್ರೆಸ್ಸಿನ ಮಾಧ್ಯಮ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಬಹಿರಂಗ ಪತ್ರಿಕಾ ಗೋಷ್ಠಿಯಲ್ಲೇ ... "ಆಫ್ಝಲ್ ಗುರೂಜೀ.." ಅಂತ ಗೌರವ ಸೂಚಿಸಿ ಇದರಿಂದ ಮುಸ್ಲಿಮರು ಸಂತುಷ್ಟರಾಗಿ ಕಾಂಗ್ರೆಸ್ಸಿಗೆ ಮತ ನೀಡಬಹುದೆಂದು ಬಾಯಿ ತೆರೆದು ಕುಳಿತಿದ್ದಈ ಆಸಾಮಿ...!   

 

ಸೋನಿಯ ಗಾಂಧಿಯ ಯುಪಿಎ ಸರಕಾರದಲ್ಲಿ ಗೃಹ ಮಂತ್ರಿಯಾಗಿದ್ದ ಸುಶೀಲ್ ಕುಮಾರ್ ಶಿಂಧೆ ಎಂಬ ಗುಲಾಮೀ ಮನಸ್ಥಿತಿಯ ಪ್ರಭೃತಿಯಂತೂ ಲೋಕಸಭೆ ಮತ್ತು ರಾಜ್ಯ ಸಭೆ.. ಪ್ರಜಾಪ್ರಭುತ್ವದ ಈ ಎರಡೂ ಪವಿತ್ರ ಸ್ಥಾನಗಳಲ್ಲಿ ನಿಂತು, ಭಾರತ ಸರಕಾರದ ಗೃಹಮಂತ್ರಿಯಾಗಿಯೇ ಅಧಿಕೃತವಾಗಿ ಹೇಳಿಕೆ ನೀಡುತ್ತಾ ವೈರಿ ರಾಷ್ಟ್ರ ಪಾಕಿಸ್ತಾನದಲ್ಲಿ ಅಡಗಿ ಕೂತು ಭಾರತದ ಮೇಲೆ ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದ, ೨೬/೧೧ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ನನ್ನು ಅತ್ಯಂತ ಗೌರವ ಪೂರ್ವಕವಾಗಿ ಸಂಬೋಧಿಸಿ ಸದನದ ಪಾವಿತ್ಯ್ರತೆಗೇ ಭಂಗ ತಂದಿದ್ದಈ ವ್ಯಕ್ತಿ...  ಮುಸ್ಲಿಮರನ್ನು ಓಲೈಸಿ ವೋಟು ಪಡೆಯುವುದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ ಅಂತ ನಿರೂಪಿಸಿದ್ದರು! 

 

ಈಗ ಸ್ವತಃ ಕಾಂಗ್ರೆಸ್ಸಿನ ಅಧ್ಯಕ್ಷ ರಾಹುಲ್ ಗಾಂಧಿಯೇ ಲಜ್ಜೆ ಬಿಟ್ಟು ಮುಸ್ಲಿಮರ ಮತಭಿಕ್ಷೆಗಾಗಿ ಏನು ಮಾಡಲೂ ಸಿದ್ಧ ಅಂತ ತೋರಿಸಿಕೊಟ್ಟಿದ್ದಾರೆ...!  ಮೊನ್ನೆ-ಮೊನ್ನೆ ಪುಲ್ವಾಮಾದಲ್ಲಿ ನಮ್ಮ ಸಿಆರ್ ಪಿಎಫ್ ಯೋಧರ ಮೇಲಿನ ದಾಳಿಯ ರೂವಾರಿ ಜೈಷೆ ಮೊಹಮ್ಮದ್ ನ ಮಸೂದ್ ಅಜ್ಹರ್  ಎಂಬ ರಕ್ತಪಿಪಾಸು ಭಯೋತ್ಪಾದಕನಿಗೂ ಬಹಿರಂಗವಾಗಿಯೇ ಗೌರವ ಸಲ್ಲಿಸಿದ್ದಾನೆ ಈ ಮಹಾತ್ಮಾ.  "ಮಸೂದ್ ಅಜ್ಹರ್ ಜೀ" ಅಂತ ಬಹಿರಂಗವಾಗಿಯೇ ಹೇಳಿ ತನ್ನ ಒಳ ಮನಸ್ಸಿನಲ್ಲಿರುವ ಅಸಹ್ಯವನ್ನು ಹೊರ ಹಾಕಿದ್ದಾನೆ..!! 

ಇದೊಂದು ವಿಚಿತ್ರ ಮನಸ್ಥಿತಿ!  ಅಧಿಕಾರಕ್ಕೋಸ್ಕರ ಏನು ಮಾಡಲೂ ಸಿದ್ಧವಿರುವ, ವೋಟುಗಳಿಗೋಸ್ಕರ ಏನನ್ನು ಬೊಗಳಲೂ ರೆಡಿ ಇರುವ, ಆತ್ಮಸಾಕ್ಷಿಯೇ ಕೊಳೆತು ನಾರುವ ಸ್ಥಿತಿ ತಲುಪಿರುವ ಕೆಲ ರಾಜಕಾರಣಿಗಳ ದಾರುಣ ಪರಿಸ್ಥಿತಿ... !  ಅದರಲ್ಲೂ ಚುನಾವಣಾ ದಿನಾಂಕ ಘೋಷಣೆಯಾಯಿತು, ಇನ್ನೇನು ಚುನಾವಣೆ ಹತ್ತಿರ ಬಂತು ಅಂತನ್ನುವಾಗ ಹೇಗಾದರೂ ಮಾಡಿ ಮತಗಳನ್ನು ಪಡಿ ಎಂಬ ಹತಾಶ ಮನಸ್ಥಿತಿ...! 

ಭಾರತದ ಮುಗ್ಧ ಪ್ರಜೆಗಳನ್ನೂ, ವೀರ ಸೈನಿಕರನ್ನೂ ಭೀಕರವಾಗಿ ಕೊಂದ ರಕ್ತ ಪಿಪಾಸು ಭಯೋತ್ಪಾದಕರನ್ನು ಈ ಲಜ್ಜೆಗೇಡಿ ಕಾಂಗ್ರೆಸ್ಸಿಗರು "ಒಸಾಮಾಜೀ", "ಆಫ್ಝಲ್ ಗುರೂಜೀ", "ಮಸೂದ್ ಅಜ್ಹರ್ ಜೀ" ಅಂತ ಹೇಗೆ ಬಾಯಿತುಂಬ ಜೊಲ್ಲು ತುಳುಕಿಸಿಕೊಂಡು "ಜೀ..ಜೀ.."ಅಂತ ಪ್ರಾಸ ಸೇರಿಸಿ ಕರೆಯುತ್ತಾರೋ ಅದೇ ರೀತಿ ತಮ್ಮದೇ ಪಕ್ಷದ ನಾಯಕರನ್ನು ಕೂಡಾ ಗೋಣು ಬಗ್ಗಿಸಿಕೊಂಡು ಪರಮ ಗುಲಾಮರಂತೆಯೇ "ಸೋನಿಯಾಜೀ", "ರಾಹುಲ್ ಜೀ" "ಪ್ರಿಯಾಂಕಾಜೀ " "ಪೀಡಿಜೀ"  ಅಂತಲೇ "ಜೀ..ಜೀ.." ಎಂಬ ಪ್ರಾಸ ಸೇರಿಸಿಕೊಂಡೇ ಹಲ್ಲು ಗಿಂಜುತ್ತಾ ಕರೆಯುತ್ತಾರೆ...!  ಆ ಮೂಲಕ ಇಸ್ಲಾಮಿನ ಭಯೋತ್ಪಾದಕರನ್ನೂ ತಮ್ಮ ನಾಯಕರನ್ನೂ ಒಂದೇ ತಕ್ಕಡಿಯಲ್ಲಿ ಕೂರಿಸಿ ಸಮಾನತೆಯನ್ನು ಮೆರೆಯುತ್ತಾರೆ...!

ಪ್ರಧಾನಿ  ಮೋದಿಯವರನ್ನು ಮನಸ್ಸಿಗೆ ತೋಚಿದಂತೆ ಬೈದು ಅವರನ್ನು ಕೊಲೆ ಮಾಡಲು ಆದೇಶ ನೀಡುವ ತನ್ನ ಗುಲಾಮರನ್ನು ರಕ್ಷಿಸುತ್ತಾ,  ತಾನೇ ಸ್ವತಃ ಭಯೋತ್ಪಾದಕರಿಗೆ ಗೌರವ ಸೂಚಿಸುವ ರಾಷ್ಟ್ರೀಯ ಪಕ್ಷದ ಅಧ್ಯಕ್ಷನನ್ನು ಮತ್ತು ಆ ಪಕ್ಷವನ್ನು, ಜನತೆ ಮುಂಬರುವ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಬೇಕಿದೆ.     

ಅಲ್ಲಿಗೆ ದೇಶ ಭಕ್ತಿ, ರಾಷ್ಟ್ರೀಯತೆ ಹಾಗು ಸ್ವಾಭಿಮಾನ ಎಲ್ಲವನ್ನು ನಿವಾಳಿಸಿ ಕಸದ ಬುಟ್ಟಿಗೆ ಎಸದ ಈ ಮಾಹಾನುಭಾವರಿಗೆ ಈ ಚುನಾವಣೆಯಲ್ಲಿ ಅವರ ಸ್ಥಾನ ತೋರಿಸಲೇಬೇಕ್ಕಾದ್ದು ಅನಿವಾರ್ಯ!

#ಅನಂತಕುಮಾರಹೆಗಡೆ

ವಿಡಿಯೋ ಕೃಪೆ : ಅಂತರ್ಜಾಲ


Related posts