Infinite Thoughts

Thoughts beyond imagination

ಇಂದು ವಿಶ್ವ ಜಲ ದಿನವನ್ನು ಆಚರಿಸೋಣ - ಯಾರನ್ನೂ ಹಿಂದುಳಿಯಲು ಬಿಡದಿರೋಣ.... ಒಂದೊಂದು ಹನಿ ನೀರನ್ನೂ ಉಳಿಸೋಣ - ಭವಿಷ್ಯದ ಭೀಕರ ಜಲಕ್ಷಾಮವನ್ನು ತಪ್ಪಿಸೋಣ...!!

ಇಂದು ವಿಶ್ವ ಜಲ ದಿನವನ್ನು ಆಚರಿಸೋಣ - ಯಾರನ್ನೂ ಹಿಂದುಳಿಯಲು ಬಿಡದಿರೋಣ.... 

ಒಂದೊಂದು  ಹನಿ ನೀರನ್ನೂ ಉಳಿಸೋಣ - ಭವಿಷ್ಯದ ಭೀಕರ ಜಲಕ್ಷಾಮವನ್ನು ತಪ್ಪಿಸೋಣ...!!

ಇವತ್ತು ವಿಶ್ವ ಸಂಸ್ಥೆಯ ವತಿಯಿಂದ ವಿಶ್ವ ಜಲದಿನವನ್ನು ಆಚರಿಸುತ್ತಿದ್ದೇವೆ!  ಶುದ್ಧ ನೀರಿನ ಮಹತ್ವವನ್ನು ತಿಳಿಸಿ ಜನರಲ್ಲಿ ಜಾಗೃತಿ ಮೂಡಿಸಲು ಪ್ರತೀ ವರ್ಷದ ಮಾರ್ಚ್ ೨೨ ರಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತಿದೆ.  ಶುದ್ಧ ನೀರಿನ ಜಲ ಮೂಲಗಳ ಸುಸ್ಥಿರ ಅಭಿವೃದ್ಧಿ ಮತ್ತು ಅವುಗಳ ಸಂರಕ್ಷಣೆಯೇ ಇದರ ಮೂಲ ಉದ್ದೇಶ.  ೨೦೧೯ರ ವಿಶ್ವ ಜಲದಿನ ದ ಧ್ಯೇಯವಾಕ್ಯವೇ "Leaving No One Behind".   ನಾವು ವಾಸಿಸುವ ಈ ಭೂಮಿಯ ಮೇಲ್ಭಾಗದಲ್ಲಿ ಶೇಕಡಾ ೭೧ ಭಾಗದಷ್ಟು ನೀರೇ ಇದ್ದರೂ, ಭೂಮಿಯ ಮೇಲಿನ ಜೀವ ಸಂಕುಲಗಳು, ಗಿಡಮರ ಬಳ್ಳಿಗಳು, ಬದುಕಲಿಕ್ಕೆ ಅತ್ಯಾವಶ್ಯವಾಗಿ ಬೇಕಾದ ಶುದ್ಧ ನೀರಿನ ಪ್ರಮಾಣ ಮಾತ್ರ ಕೇವಲ ಶೇ.೨. ೫ ರಷ್ಟು ಮಾತ್ರ!  ಅದರಲ್ಲೂ ಮನುಷ್ಯನ ಬಳಕೆಗಾಗಿ ದೊರೆಯುವ ಶುದ್ಧ ನೀರಿನ ಪ್ರಮಾಣ ಕೇವಲ ಶೇ. ೧ ರಷ್ಟು ಮಾತ್ರ..!  ಆಷ್ಟು ಅಲ್ಪ ಪ್ರಮಾಣದ ನೀರು ದೊರೆಯುವ ನಮ್ಮ ನದಿ, ಸರೋವರ, ಕೆರೆ ಬಾವಿಗಳನ್ನು ನಾವೀಗ ನಮ್ಮ ಕೈಯಾರೆ ಹಾಳು ಮಾಡುತ್ತಿದ್ದೇವೆ...!  ವಿಪರೀತ ರಾಸಾಯನಿಕ ಬಳಕೆಯಿಂದಾಗಿ ನಮ್ಮ ಸ್ವಾಭಾವಿಕ ಜಲಮೂಲಗಳನ್ನು ಕಲುಷಿತಗೊಳಿಸುತ್ತಿದ್ದೇವೆ.  ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇನ್ನು ಕೆಲವೇ ವರ್ಷಗಳಲ್ಲಿ ಕುಡಿಯುವ ಶುದ್ಧ ನೀರು ದೊರಕುವುದೇ ಕಷ್ಟಸಾಧ್ಯವೆನ್ನುವಂತಾ ಕರಾಳ ಪರಿಸ್ಥಿತಿ ಬರಬಹುದು.  ಮನುಷ್ಯರಾದ ನಮಗೆ ಕುಡಿಯಲು ನೀರಿಲ್ಲದೆ ಹೋದಾಗ ಇನ್ನು ಪಶು ಪಕ್ಷಿಗಳಿಗೆ, ಗಿಡ ಮರಗಳಿಗೆ, ಕೃಷಿ ಚಟುವಟಿಕೆಗಳಿಗೆ ಎಲ್ಲಿಂದ ನೀರನ್ನು ತರುವುದು...? 

ಹಾಗಾಗಿ ಭವಿಷ್ಯದ ಕರಾಳ ದಿನಗಳನ್ನು ಊಹಿಸಿಕೊಂಡು, ಈಗ ಅಲ್ಪಸ್ವಲ್ಪ ಉಳಿದಿರುವ ಶುದ್ಧ ಜಲಮೂಲಗಳ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ನಮ್ಮೆಲ್ಲರ ಮಹತ್ವದ ಹೊಣೆಗಾರಿಕೆಯಾಗಿದೆ.  ಶುದ್ಧ ನೀರು ಈ ಭೂಮಿಯಲ್ಲಿ ವಾಸಿಸುವ, ಜೀವಿಸುವ ಪ್ರತಿಯೊಬ್ಬರ ಮಾನವ ಹಕ್ಕು!!  ಅಷ್ಟೇ ಅಲ್ಲ... ಮಾನವ ಹಕ್ಕು ಅಂತ ಅಂದರೆ ನಾವು ಮನುಷ್ಯರು ತುಂಬಾ ಸ್ವಾರ್ಥಿಗಳೆನ್ನಿಸಿಕೊಂಡು  ಬಿಡುತ್ತೇವೆ!!  ಶುದ್ಧ ನೀರು ಎಲ್ಲಾ ಜೀವಿಗಳ ಹಕ್ಕು... ಅಂದರೆ ಮಾತು ಬಾರದ ಮೂಕ ಪಶು ಪಕ್ಷಿ  ಪ್ರಾಣಿಗಳಿಂದ ಹಿಡಿದು ಗಿಡಮರ ಬಳ್ಳಿಗಳ ವರೆಗೆ ಎಲ್ಲರಿಗೂ ಸಮಾನವಾದ ಹಕ್ಕು ಈ ಭೂಮಿಯ ಜಲ ಮೂಲಗಳ ಮೇಲಿದೆ!!  ಹಾಗಾಗಿ ನಾವು ಮನುಷ್ಯರು ಮಾತ್ರವಲ್ಲ, ಈ ಭೂಮಿಯ ಮೇಲಿರುವ ಸಮಸ್ತ ಜೀವರಾಶಿಯೂ ಶುದ್ಧ ನೀರಿನ ಮೇಲೆ ಹಕ್ಕು ಹೊಂದಿದೆ..!! ಹಾಗಾಗಿಯೇ ಈ ಬಾರಿಯ ವಿಶ್ವ ಜಲದಿನದ ಧ್ಯೇಯ ವಾಕ್ಯ "ಯಾರನ್ನೂ ಹಿಂದುಳಿಯಲು ಬಿಡದಿರೋಣ"... ಅಂದರೆ ಮುಂದಿನ ದಿನಗಳಲ್ಲಿ ಜಲಕ್ಷಾಮ ಬರದಿರುವಂತೆ ತಡೆಯುವ ಪ್ರಯತ್ನದ ಜೊತೆಗೆ ಈ ಭೂಮಿ ಮೇಲಿನ ಸಕಲ ಜೀವರಾಶಿಗೂ ಕೂಡಾ ಅವುಗಳ ಹಕ್ಕಿನ ನೀರಿನ ಪಾಲು ಸಿಗುವಂತೆ ನೋಡಿಕೊಳ್ಳೋಣ; ಯಾರೂ ಕೂಡಾ ತಮ್ಮ ಹಕ್ಕಿನ ನೀರನ್ನು ಪಡೆಯುವಲ್ಲಿ ವಂಚಿತರಾಗದಿರುವಂತೆ ನೋಡಿಕೊಳ್ಳೋಣ..!!  ಎಲ್ಲರನ್ನು ನಮ್ಮೊಂದಿಗೆ ಕರೆದೊಯ್ಯೋಣ...! ಯಾರೂ ಕೂಡಾ ಹಿಂದುಳಿಯದಂತೆ ನೋಡಿಕೊಳ್ಳೋಣ...!! ಜೀವಜಲವನ್ನು ಎಲ್ಲರೂ ಸಮಾನವಾಗಿ ಹಂಚಿಕೊಂಡು ಉಪಯೋಗಿಸೋಣ....!! ಎಲ್ಲರಿಗೂ ಸಾಕಷ್ಟು ನೀರು ಲಭ್ಯವಾಗುವಂತೆ ಮಾಡಲು ನದೀಮೂಲಗಳಿಂದಾರಂಭಿಸಿ ಎಲ್ಲಾ ರೀತಿಯ ಜಲಮೂಲಗಳನ್ನು ರಕ್ಷಿಸೋಣ...!! ಸಂರಕ್ಷಿಸೋಣ...!! ಉಳಿಸೋಣ ....!!  ಬೆಳೆಸೋಣ...!! ಅಭಿವೃದ್ಧಿಪಡಿಸೋಣ...!! ಅವುಗಳನ್ನು ಸುಸ್ಥಿರವಾಗಿಸೋಣ...!!

#ಅನಂತಕುಮಾರಹೆಗಡೆ

Related posts