Infinite Thoughts

Thoughts beyond imagination

ಇಂದು ಪರಮ ಪೂಜನೀಯ ಸರಸಂಘಚಾಲಕ ಡಾಕ್ಟರ್ ಜಿಯವರ ಜನುಮದಿನ

ಇಂದು ಪರಮ ಪೂಜನೀಯ ಸರಸಂಘಚಾಲಕ ಡಾಕ್ಟರ್ ಜಿಯವರ ಜನುಮದಿನ.

ಹಿಂದೂಗಳನ್ನು ಸಂಘಟಿಸಲೆಂದೇ  ಮಹಾತ್ಮನೊಬ್ಬ ಭಾರತದಲ್ಲಿ ಅವತರಿಸಿದ ದಿನ.

 

ಇಂದಿಗೆ ಸರಿಯಾಗಿ ನೂರಾಮೂವತ್ತು ವರ್ಷಗಳ ಹಿಂದೆ ಇದೆ ದಿನ ಅಂದರೆ ಏಪ್ರಿಲ್ ಒಂದನೇ ತಾರೀಕು ಮಹಾರಾಷ್ಟ್ರದ ನಾಗಪುರದಲ್ಲಿ ಪೂಜನೀಯ ಡಾಕ್ಟರ್ ಜಿಯವರ ಜನನವಾಯಿತು. ಬಹುಷಃ ಭರತವರ್ಷದ ಹಿಂದೂಗಳ ದಯನೀಯ  ಸ್ಥಿತಿಯನ್ನು ನೋಡಿ ಅವರನ್ನು ಸಂಘಟಿಸಲೆಂದೇ, ನಮ್ಮ  ಧರ್ಮ, ಪರಂಪರೆ, ಸಂಸ್ಕೃತಿಯನ್ನು ರಕ್ಷಿಸಲೆಂದೇ, ಈ ಪುಣ್ಯ ಭೂಮಿಯನ್ನು ಉಳಿಸಲೆಂದೇ ಪರಮಾತ್ಮ ಅವರನ್ನು ಭೂಮಿಗೆ ಕಳುಹಿಸಿರಬೇಕು.  ಮೂವತ್ತಾರರ ಹರೆಯದಲ್ಲಿ ಅಂದರೆ ೧೯೨೫ರಂದು ವಿಜಯದಶಮಿಯ ದಿನ ಪೂಜನೀಯ ಡಾಕ್ಟರ್ ಜಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸುವ ಮೂಲಕ ಪ್ರಪಂಚದಾದ್ಯಂತ ಹಿಂದೂ ಧರ್ಮೀಯರಿಗೆ ಒಂದು ದಿಕ್ಸೂಚಿಯನ್ನು ತೋರಿದರು. ಅಸಂಘಟಿತವಾಗಿದ್ದ ಹಿಂದೂ ಸಮಾಜವನ್ನು ಸಂಘಟಿತವನ್ನಾಗಿಸಲು  ಅತ್ಯಾವಶ್ಯಕವಾಗಿದ್ದ ಒಂದು ವೇದಿಕೆಯನ್ನು ಸೃಷ್ಟಿಸಿದರು. ಹಿಂದೂಗಳು ತಮ್ಮದೇ ದೇಶದಲ್ಲಿ ತಮ್ಮ ಅಸ್ತಿತ್ವನ್ನೇ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿದ್ದಾಗ ಆಪತ್ಭಾಂಧವನಂತೆ ಬಂದವರು ಶ್ರೀ ಕೇಶವ ಬಲಿರಾಮ ಹೆಡಗೇವಾರ್. ಹಿಂದೂಸ್ತಾನ ಹಿಂದೂಗಳಿಗೇ ಸೇರಿದ್ದು ಎಂಬ ಘೋಷಣೆಯನ್ನು ಸಾರಿದ ಡಾಕ್ಟರ್ ಜಿ ತಾವು ಸ್ಥಾಪಿಸಿದ ಸಂಘದ ಮೂಲಕವೇ ತಮ್ಮ ಕಲ್ಪನೆಯನ್ನು ಸಾಕ್ಷಾತ್ಕಾರ ಮಾಡಲು ಹೊರಟರು.  ಕೆಲವೇ ಕೆಲವು ಶಾಖೆಗಳೊಂದಿಗೆ ಪ್ರಾರಂಭವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇವತ್ತು ಪ್ರಪಂಚದಾದ್ಯಂತ ಐವತ್ತೇಳು ಸಾವಿರ ಶಾಖೆಗಳನ್ನು ಹೊಂದಿದೆ!!!  ಯಾವ ಭವ್ಯ ಭಾರತದ ಕನಸನ್ನು ಪರಮ ಪೂಜನೀಯ ಡಾಕ್ಟರ್ ಜಿ ಕಂಡಿದ್ದರೋ ಆ ಕನಸು ಇವತ್ತು ಸುಮಾರು ೯೪ ವರ್ಷಗಳ ಬಳಿಕ ನನಸಾಗುತ್ತಿದೆ!  ಆರೆಸ್ಸೆಸ್ಸಿನ ಓರ್ವ ಸಾಮಾನ್ಯ ಸ್ವಯಂ ಸೇವಕನಾಗಿರುವ ಶ್ರೀ ನರೇಂದ್ರ ಮೋದೀಜಿಯವರು ಇವತ್ತು ಭಾರತ ದೇಶವನ್ನು ಪ್ರಧಾನಮಂತ್ರಿಯಾಗಿ ಆಳುತ್ತಿದ್ದಾರೆ. ಈ ಸಂಧರ್ಭದಲ್ಲಿ ಪ್ರಾತಃ ಸ್ಮರಣೀಯರಾದ ಪರಮ ಪೂಜನೀಯ ಡಾಕ್ಟರ್ ಜಿಯವರ ಜನುಮದಿವನ್ನಾಚರಿಸುವ ಸಂಭ್ರಮ ನಮ್ಮದು....!!!

 

#ಡಾಕ್ಟರ್ಜಿ #ಡಾಹೆಡ್ಗೆವಾರ್

#ಅನಂತಕುಮಾರಹೆಗಡೆ

Related posts