ಸಾತ್ವಿಕ ಸಿಟ್ಟಿನ ಹಿಂದುತ್ವದ ಆಕ್ರೋಶ!
ಸಾತ್ವಿಕ ಸಿಟ್ಟಿನ ಹಿಂದುತ್ವದ ಆಕ್ರೋಶ!
ಭಾರತದಲ್ಲಿ, “ಹಿಂದು ಭಯೋತ್ಪಾದನೆ”ಯ ಭ್ರಮೆಯನ್ನು ಹುಟ್ಟಿಸಿದವರಿಗೆ, ಸಾಧ್ವಿ ಪ್ರಜ್ಞಾಸಿಂಗ್ ಅವರು ಬಿಜೆಪಿಯ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುತ್ತಾರೆನ್ನುವುದು ನುಂಗಲಾರದ ತುತ್ತಾಗಿದೆ. ಅಫಜಲ್ ಗುರು ಎಂಬ ಪಾತಕಿಯನ್ನು ‘ಅಫಜಲ್ ಗುರೂಜಿ’ ಎಂದು ಕರೆದಿದ್ದ ರಾಜಕಾರಣಿಗೆ ಮಾಡಿದ ಪಾಪ ಬೆನ್ನು ಹತ್ತಿದಂತೆ ಭಾಸವಾಗುತ್ತಿದೆ. ರಾಷ್ಟ್ರ ದ್ರೋಹಿ ರಾಜಕಾರಣದಲ್ಲಿ ಪಳಗಿದ ನಯವಂಚಕರ “ಚಿದಂಬರ” ರಹಸ್ಯ ಬಯಲಾಗುವುದೆನ್ನುವ ದಿಗಿಲು ಹುಟ್ಟಿದೆ. ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥನನ್ನು ಅಝರ್ ಮಸೂದ್‌ಜಿ ಎಂದು ಕರೆಯುವ ಭಾವಿ ಪ್ರಧಾನಿಗಳ ನಿದ್ದೆ ಕೆಡಿಸಿದೆ.
ಭಾರತದಲ್ಲಿ ಹಿಂದು ಎಂದು ಕೊಳ್ಳುವುದೇ ಜಾತ್ಯತೀತತೆಗೆ ವಿರುದ್ಧವಾದ ನಡೆ ಎಂದೇ ದೇಶವನ್ನು ನಂಬಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ, ನೆಹರು ಮತಾವಲಂಬನೆಯ ಬುದ್ಧಿಜೀವಿಗಳಿಗೆ, ಹಿಂದುತ್ವದ ನಿಲುವನ್ನು ಎತ್ತಿಹಿಡಿದವರನ್ನು ಕಂಡರೇ ತಮ್ಮ ಬುನಾದಿಯೇ ಕುಸಿದಷ್ಟು ಭಯವಾಗುತ್ತಿದೆ. ಜಾತ್ಯತೀತ “ಹಸ್ತಕರ” ರಕ್ಕಸ ಬಾಧೆಗೆ ತುತ್ತಾಗಿ ಹೇಳಲಾಗದ್ದನ್ನು ಅನುಭವಿಸಿದ ಸಾಧ್ವಿ ಪ್ರಜ್ಞಾಸಿಂಗ್ ಜನತಂತ್ರದ ಹೆಗಲೇರಿ ನಿಂತು ತನಗಾದ ಅನ್ಯಾಯವನ್ನೂ, ಹಿಂದುತ್ವದ ವಿರುದ್ಧದ ಹುನ್ನಾರವನ್ನೂ ಜಗತ್ತಿಗೆ ಸಾರಿ ಹೇಳಲು ಮುಂದಾಗಿದ್ದಾರೆ. ಭಾರತ ಮಾತೆಯ ವೀರ ಪುತ್ರಿಯ ಸತ್ಯದ ಘರ್ಜನೆಯನ್ನು ಕೇಳಿದಾಗ ವಿದೇಶಿ ತಳಿಯ ಭ್ರಷ್ಟಮಾತೆಗೆ ಶಿಲುಬೆಗೇರಿದ ಸಂಕಟವಾಗುತ್ತಿದೆ.
೧೯೮೪ರ ಭೋಪಾಲ ಅನಿಲ ದುರಂತಕ್ಕೆ ಕಾರಣವಾದ, ಯೂನಿಯನ್ ಕಾರ್ಬೈಡ್ ಕಂಪನಿಯ ವಾರನ್ ಎಂಡರ್‌ಸನ್ ಎಂಬ ಧೂರ್ತನನ್ನು ಕೂದಲು ಕೊಂಕದಂತೆ ವಿದೇಶಕ್ಕೆ ಪಾರು ಮಾಡಿದವರ ವಾರಸುದಾರರು ಭಾರತವೆಂದರೆ ತಮ್ಮ ಪಿತ್ರಾರ್ಜಿತ ಆಸ್ತಿ ಎಂದು ಕೊಂಡಿದ್ದಾರೆ. ಓಡಿಶಾದಲ್ಲಿ ಮತಾಂತರದ ವಿರುದ್ಧ ಎದ್ದು ನಿಂತ ಸ್ವಾಮಿ ಲಕ್ಷ್ಮಣಾನಂದರನ್ನು ಕೊಚ್ಚಿಕೊಂದ ಶಿಲುಬೆಯ ಸೈನ್ಯಕ್ಕೆ ಸರ್ವ ರಕ್ಷಣೆಯನ್ನೂ ನೀಡಿದ ಧೂರ್ತರಿಗೆ ಹಿಂದುತ್ವವೆಂದರೆ ಮೈ ಮೇಲೆ ಹಾವು ಹರಿದಾಡಿದಂತಾಗುತ್ತದೆ.
“ಹಿಂದು ಭಯೋತ್ಪಾದನೆ” ಎಂಬ ಸುಳ್ಳನ್ನು ಸೃಷ್ಟಿಸಿ ಪ್ರಪಂಚದ ತುಂಬ ಡಂಗುರ ಸಾರಿದ ದೇಶ ದ್ರೋಹಿಗಳ ದಂಡು ನ್ಯಾಯಾಲಯದ ತೀರ್ಮಾನಗಳಿಂದ ಮುಖ ಮುಚ್ಚಿಕೊಂಡು ಕುಳಿತಿದೆ. ಅವರ ನಿಜವಾದ ಬಣ್ಣವನ್ನು ಅನಾವರಣಗೊಳಿಸಬೇಕು. ಗೌರವಾನ್ವಿತ ಸನ್ಯಾಸಿನಿ ಯೋರ್ವಳನ್ನು ಯಾವ ಸಾಕ್ಷ್ಯವೂ ಇಲ್ಲದೇ ಬಂಧಿಸಿ ಮರ್ಯಾದೆಯ ಪರಿಧಿಯಾಚೆ ಹಿಂಸಿಸಿದ ಪರಿಯನ್ನು ನೆನೆದರೆ ಕಣ್ಣಿನಲ್ಲಿ ನೀರು ಬರುವುದಿಲ್ಲ, ರಕ್ತವೇ ಬರುತ್ತದೆ..!! ಅಂತಹ ಎಲ್ಲ ರಾಕ್ಷಸರನ್ನೂ ಮತಾಸ್ತ್ರದ ಮೂಲಕ ನಿವಾರಿಸುವ ಸುವರ್ಣಾವಕಾಶ ಈಗ ಒದಗಿದೆ. ಗೋ ಹತ್ಯಾ ನಿಷೇಧಕ್ಕೆ ಒತ್ತಾಯಿಸಿದ್ದ ಸಾಧುಗಳ ಮೇಲೆ ಗೋಲಿಬಾರ್ ಮಾಡಿಸಿದ ಪ್ರಧಾನಿಯ ಪರಿವಾರದವರು ಈ ನೆಲದ ಸಾತ್ವಿಕ ಸಿಟ್ಟನ್ನು ಎದುರಿಸಲೇ ಬೇಕಾಗಿದೆ...!!
ಪ್ರಪಂಚದ ಅತ್ಯಂತ ಪ್ರಾಚೀನ ಸಭ್ಯತೆ, ಸಾವಿರಾರು ವರ್ಷಗಳ ಅವಿಛಿನ್ನ ಇತಿಹಾಸದ ಅನಾದಿ ಸಂಸ್ಕೃತಿ, ಹಿಂದುತ್ವವನ್ನು ಪ್ರತಿಪಾದಿಸುವುದು ಭಯೋತ್ಪಾದನೆ ಎಂದು ಕರೆದವರ ಅಭಿಮಾನಶೂನ್ಯ ಸಮಯಸಾಧಕತನಕ್ಕೆ ಹೇವರಿಕೆಯಾಗುತ್ತಿದೆ. ಸಾಧ್ವಿ ಪ್ರಜ್ಞಾಸಿಂಗ್ ಈ ಲೋಕತಂತ್ರದ ಯುದ್ಧದಲ್ಲಿ ದಿಗ್ವಿಜಯವನ್ನು ಸಾಧಿಸಬೇಕು, ಭಾರತದ ಹೃದಯವಾದ ಹಿಂದುತ್ವಕ್ಕೆ ಪ್ರತಿಷ್ಠೆಯ ಯಶಸ್ಸು ಬೇಕು.
#ಅನಂತಕುಮಾರಹೆಗಡೆ