Infinite Thoughts

Thoughts beyond imagination

ಚಂದ್ರ ಮತ್ತವನ ಮೇರೆಯನ್ನೂ ಮೀರಿ; ಒಂದು ಮುನ್ನೋಟ..!!

ಚಂದ್ರ ಮತ್ತವನ ಮೇರೆಯನ್ನೂ ಮೀರಿ;  ಒಂದು ಮುನ್ನೋಟ..!!

 
ವಿಕ್ರಂ ಬಾಹ್ಯಾಕಾಶ ನೌಕೆ ಬರುವ ಸೆಪ್ಟೆಂಬರ್ ೬ ಮತ್ತು ೯ನೆಯ ತಾರೀಕಿನಂದು ಸುರಕ್ಷಿತವಾಗಿ ನಮ್ಮೆಲ್ಲರ ಚಿರಂತನ ಕಾಲ್ಪನಿಕ-ಲೋಕವಾದ ಚಂದ್ರನಲ್ಲಿ ಇಳಿದಾಗ,  ಅದು ಅತ್ಯಂತ ಬೃಹತ್  ನೆಗೆತ ಅಂತ ಹೇಳಿದರೆ ಖಂಡಿತಾ ತಪ್ಪಲ್ಲ. 
 
ಯಾಕೆ?  ಭೂಮಿಯ ಪುಟ್ಟ ಮಗುವನಂತಿರುವ ಚಂದ್ರನನ್ನು ತಲುಪೋದರಲ್ಲಿ ಅಂತಾ ದೊಡ್ಡಸ್ತಿಕೆ ಏನಿದೆ?   ಅದರಲ್ಲೂ ಅಮೆರಿಕಾದ ಖಗೋಳ ಸಾಹಸಿಗಳು ತುಂಬಾ ದಶಕಗಳ ಹಿಂದೆಯೇ ಅಲ್ಲಿಗೆ ಭೇಟಿ ನೀಡಿರುವಾಗ, ಚೀನಾ ಮತ್ತು ರಷ್ಯಾ ಚಂದ್ರನ ಮಣ್ಣಿನ ಮೇಲೆ ತಮ್ಮ-ತಮ್ಮ ಹೆಜ್ಜೆ ಗುರುತುಗಳನ್ನು ಈಗಾಗಲೇ ಮೂಡಿಸಿರುವಾಗ, ನಮ್ಮ ಹೆಚ್ಚುಗಾರಿಕೆ ಏನಿದೆ?  ಚಂದ್ರನೆಂಬ  ಉಪಗ್ರಹ ಯಾವುದರಿಂದ ಮಾಡಲ್ಪಟ್ಟಿದೆ ಮತ್ತು ಅಲ್ಲಿನ ಹೆಪ್ಪುಗಟ್ಟಿಸುವ ಚಳಿಯಲ್ಲಿ  ಏನೇನು ಸಿಗಬಹುದು ಎಂಬುದೆಲ್ಲಾ ನಮಗೀಗಾಗಲೇ  ಗೊತ್ತಿರುವುದರಿಂದ ನಮ್ಮ ಚಂದ್ರಯಾನ -೨ ಹೊಸದಾಗಿ ಏನ್ನನ್ನು  ಕಂಡುಹಿಡಿದೀತು?  ೯೭೮ ಕೋಟಿ ರೂಪಾಯಿಗಳನ್ನೂ ಹಾಗು ದೇಶದ ಅತ್ಯಂತ ಪ್ರತಿಭಾನ್ವಿತ ವೈಜ್ಞಾನಿಕ ಬುದ್ಧಿಮತ್ತೆಯ ಸಾವಿರಾರು ಗಂಟೆಗಳ ದುಡಿಮೆಯನ್ನೂ ಸುಮ್ಮನೇ ವ್ಯರ್ಥ ಮಾಡುವುದೇಕೆ?  ಚಂದ್ರನನ್ನು ಮುಟ್ಟುವ ಹುಚ್ಚು ಕನಸನ್ನು ಬೆನ್ನಟ್ಟಿದವರ ಪೈಕಿ  "ನಾವೂ ಕೂಡಾ ಒಬ್ಬರು .." ಅನ್ನುವ ಪಟ್ಟಿಯಲ್ಲಿ ಕೊನೆಯವರು ನಾವಲ್ಲವೇ? 
 
ನಾವು ಕೊನೆಯವರೇನೋ ಇರಬಹುದು... ಆದರೆ ನಮ್ಮ ಮುಂದೆ ಇರುವವರು ಕೇವಲ ಮೂವರು ಮಾತ್ರ.  ಆದುದರಿಂದ "ಅದ್ಭುತವನ್ನು ಸಾಧಿಸಿದ ನಾಲ್ವರು" ಎಂಬ ಗುಂಪಿನಲ್ಲೀಗ ನಾವೂ ಒಬ್ಬರು.  ಮತ್ತು ಇದೆಲ್ಲವನ್ನೂ ನಾವು ಸ್ವಂತ ಶಕ್ತಿಯಲ್ಲಿ ಸಾಧಿಸಿದ್ದೇವೆ- ಶುರುವಾತಿನಲ್ಲೇ, ಅದೂ ಕೂಡ ಅತ್ಯಂತ ಕಡಿಮೆ ಖರ್ಚಿನಲ್ಲೇ  ಸಾಧಿಸಿದ್ದೇವೆ!  ಇದು ನಿಜಕ್ಕೂ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. 
 
ಹಾಗೆ, ನಮ್ಮಿಂದ ಮೊದಲು ಚಂದ್ರನನ್ನು ತಲುಪಿದ್ದ ಮೂವರು ರಾಷ್ಟ್ರಗಳು, ಚಂದ್ರನ ಮೇಲೆ ಏನೇನೆಲ್ಲಾ ಕಂಡು ಹಿಡಿಯಬಹುದಾಗಿತ್ತೋ ಅದೆಲ್ಲವನ್ನೂ ಕಂಡು ಹಿಡಿದಾಗಿದೆ ಅಂತ ನೀವೆಲ್ಲಾದರೂ ತಿಳಿದಿದ್ದರೆ, ನೀವು ಮತ್ತೊಮ್ಮೆ ಯೋಚಿಸಬೇಕಾಗುತ್ತದೆ.  ಚಂದ್ರಯಾನ - ೧ ಚಂದ್ರನ ಮೇಲ್ಮೈಯಲ್ಲಿ ನೀರಿನ ಕಣಗಳನ್ನು ಪತ್ತೆ ಹಚ್ಚಿದಾಗ,  ಆ ಮೂವರು ದೊಡ್ಡಣ್ಣನಂಥಾ ನಾಯಕ ರಾಷ್ಟ್ರಗಳು ಮಾತ್ರವಲ್ಲ , ಇಡೀ ಜಗತ್ತೇ ನಮ್ಮ ಸಂಶೋಧನೆಯ ತಥ್ಯವನ್ನು ಅನಿವಾರ್ಯವಾಗಿ ಅಸೂಯೆಯಿಂದಲೇ ಒಪ್ಪಿಕೊಂಡಿತ್ತು.  ಇದಾದ ನಂತರ ತಕ್ಷಣವೇ ಆ ಮೂವರೂ ಮತ್ತೊಮ್ಮೆ ಚಂದ್ರನತ್ತ ಗಮನ ಕೇಂದ್ರಿಕರಿಸಿಕೊಂಡಿದ್ದರು.  ಅಮೇರಿಕ ೨೦೨೪ ರಲ್ಲಿ ತನ್ನ ಗಗನಯಾತ್ರಿಗಳನ್ನು ಚಂದ್ರನಲ್ಲಿಗೆ ಕಳುಹಿಸುತ್ತಿದೆ.  ಮುಂದಿನ ಹತ್ತು ವರ್ಷಗಳಲ್ಲಿ ಚೀನಾ ಮತ್ತೆ ಮೂರು ಚಂದ್ರಯಾನಗಳನ್ನು ಕೈಗೊಳ್ಳಲಿದ್ದು,  ೩ಡಿ ಪ್ರಿಂಟಿಂಗ್ ತಂತ್ರಜ್ಞಾನದ ಸಹಾಯದಿಂದ ಚಂದ್ರನ ಮೇಲೊಂದು ಕೇಂದ್ರ ನಿರ್ಮಿಸುವ ಯೋಜನೆಯನ್ನೂ ರೂಪಿಸುತ್ತಿದೆ.  ರಷ್ಯಾ ಕೂಡಾ ನಲವತ್ತೈದು ವರ್ಷಗಳ ಬಳಿಕ ಚಂದ್ರನ ಬಿಳಿಗೋಳದ ಕಡೆಗೆ ೨೦೨೧ರಲ್ಲಿ ಬಾಹ್ಯಾಕಾಶ ನೌಕೆಯನ್ನು ಹಾರಿಸಲಿದೆ ಮತ್ತು ೨೦೨೩ -೨೪ ರಲ್ಲಿ ಇನ್ನೆರಡು ನೌಕೆಗಳನ್ನು ಹಾರಿಸಲಿದೆ.  ಇವರೆಲ್ಲರಿಗಿಂತ ಭಿನ್ನವಾಗಿ ಎಲಾನ್ ಮಸ್ಕ್ ನ Space-X ಯೋಚಿಸುತ್ತಿದೆ!  ಅದು ಚಂದ್ರನನ್ನು ಪ್ರವಾಸೀ ತಾಣವಾಗಿಸುವ ಯೋಜನೆಯಲ್ಲಿದೆ!
 
ಇದರರ್ಥ ಏನೆಂದರೆ ಚಂದ್ರನ ದೆಸೆ ಇನ್ನೂ ಮುಗಿದಿಲ್ಲ!  ಒಂದೊಮ್ಮೆ ಭೂಮಿಯ ಒಡಹುಟ್ಟಿದವನಂತಿರುವ ಚಂದ್ರನಲ್ಲಿ ವಸಾಹತು ರಚಿಸುವ ಯೋಜನೆ ಕಾರ್ಯಗತಗೊಂಡರೆ, ಆಗ ಖಂಡಿತವಾಗಿಯೂ ಭಾರತವು ಇತರೆಲ್ಲರೂ ಅಸೂಯೆ ಪಡುವಂಥ ರೀತಿಯಲ್ಲಿ ಮುಂಚೂಣಿಯಾಗಿ ಪೈಲಟ್ ಸೀಟಿನಲ್ಲಿರುತ್ತದೆ!!! 
 
ಇಸ್ರೋ ಮತ್ತದರ ಅಂಗ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅತ್ಯಂತ ಕುಶಾಗ್ರಮತಿ ಮತ್ತು ನಿಸ್ವಾರ್ಥ ವೈಜ್ಞಾನಿಕ ಮನಸುಗಳಿಂದಲೇ ಇದೆಲ್ಲಾ ಸಾಧ್ಯವಾದದ್ದು.  ಇವರೆಲ್ಲರಿಗೂ ನಮ್ಮ ಅಭಿನಂಧನೆಗಳು ಸಲ್ಲುತ್ತದೆ.  ಕಳೆದ ಕೆಲವು ದಶಕಗಳಲ್ಲಿ ದೇಶದಲ್ಲಿ ಏನೆಲ್ಲಾ ರಾಜಕೀಯ ಸಾಮಾಜಿಕ ಗದ್ದಲ-ಗೊಂದಲಗಳು  ಉಂಟಾಗಿದ್ದರೂ, ನಮ್ಮ ವಿಜ್ಞಾನಿಗಳ ಸಮುದಾಯ ಇದ್ಯಾವುದರಿಂದಲೂ ವಿಚಲಿತರಾಗಲೇ  ಇಲ್ಲ.  ೧೯೮೦ರಲ್ಲಿ ರಷ್ಯಾದ ಸಹಾಯ ಪಡೆದು ರಷ್ಯಾದ ನೆಲದಿಂದ ನಾವು ನಮ್ಮ ಮೊತ್ತ ಮೊದಲ ಉಪಗ್ರಹ ಹಾರಿಸಿದಾಗ - ಕೇವಲ ನಾಲ್ಕೇ ನಾಲ್ಕು ದಶಕಗಳ ಅವಧಿಯಲ್ಲಿ ಈ ಮಟ್ಟದ ಅಭಿವೃದ್ಧಿ ಸಾಧಿಸುತ್ತೇವೆ ಎಂದು ಯಾರಿ ಊಹಿಸಿರಲಿಕ್ಕಿಲ್ಲ..!!   
 
ಜಗತ್ತೇ ನಮ್ಮನ್ನು ಬಹಿಷ್ಕರಿಸಿದ್ದಾಗ, ಬಾಹ್ಯಾಕಾಶ ನೌಕೆಯ ನಿರ್ಮಾಣಕ್ಕೆ ಅತ್ಯಂತ ಪ್ರಮುಖ ಅವಶ್ಯಕತೆಯಾಗಿದ್ದ ಕ್ರಯೋಜೆನಿಕ್ ಎಂಜಿನ್ ತಂತ್ರಜ್ಞಾನವನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಸಹ ಯಾವುದೇ ಮುಂದುವರಿದ ದೇಶವೂ ಸಿದ್ಧವಿರದಿದ್ದಾಗ, ನಮ್ಮನ್ನು ಎಲ್ಲರೂ ಸಂಪೂರ್ಣವಾಗಿ ಕಡೆಗಣಿಸಿ ಅವಕಾಶವನ್ನು ನಿರಾಕರಿಸಿದ್ದರು.   ಆದರೆ ಜ್ಞಾನವೆಂಬುದು ಯಾರ ಗುಲಾಮನೂ ಅಲ್ಲ ಅಥವಾ ಯಾರ ಆಸ್ತಿಯೂ ಅಲ್ಲ.  ಆದರೆ ವಿಜ್ಞಾನದ ಎಲ್ಲಾ ಶಾಖೆಗಳಲ್ಲೂ ಜಗತ್ತಿನ  ಉಳಿದೆಲ್ಲ ದೇಶಗಳಿಗಿಂತ ಜ್ಯೋತಿರ್ವರ್ಷಗಳಷ್ಟು ಮುಂದೆ ಇದ್ದ ನಮ್ಮ ಪ್ರಾಚೀನ ಪರಂಪರೆಯ ಬೇರುಗಳಿದ್ದದ್ದರಿಂದ ನಮಗೆ ಸವಾಲುಗಳನ್ನು ಮೆಟ್ಟಿ ನಿಂತು, ತನ್ನದೇ ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸಲು ತುಂಬಾ ಸಮಯ ಹಿಡಿಯಲಿಲ್ಲ. 
 
ಕ್ರಯೋಜೆನಿಕ್ ಎಂಜಿನ್ ಗಳನ್ನೂ ಮರೆತುಬಿಡಿ... ಬಾಹ್ಯಾಕಾಶದ ಅನಂತ ವಿಸ್ತಾರದಲ್ಲಿ ಏಕಾಂಗಿಯಾಗಿ ತನ್ನನ್ನು ತಾನೇ ಸಂಭಾಳಿಸಿಕೊಳ್ಳಬೇಕಾದ ಎಲ್ಲಾ ಕಮಾಂಡ್ ಗಳನ್ನೂ ತುಂಬಿಸಿಕೊಂಡಿರುವ, ಎಲೆಕ್ಟ್ರಾನಿಕ್ ಬ್ರೈನ್ ಅನ್ನು ಒಂದು ಉಪಗ್ರಹದೊಳಗೆ ಸ್ಥಾಪಿಸುವ ಕೆಲಸವನ್ನೂಮ್ಮೆ ಊಹಿಸಿಕೊಳ್ಳಿ!  ಆ ಎಲೆಕ್ಟ್ರಾನಿಕ್ ಮೆದುಳು ಉಪಗ್ರಹವನ್ನು ಕೌಶಲ್ಯಪೂರ್ಣವಾಗಿ ಚಲಾಯಿಸುತ್ತಾ ತುಂಬಾ ನ್ಯಾಯ ನಾಜೂಕಾಗಿ ನಿಗದಿತ ಪಥದತ್ತ ಕ್ರಮಿಸುವುದನ್ನೊಮ್ಮೆ ಊಹಿಸಿನೋಡಿ.  ಇದನ್ನೇ Space Autonomy ಅರ್ಥಾತ್ ಅಂತರಿಕ್ಷ ಸ್ವಾಯತ್ತತೆ ಅನ್ನುವುದು.  ಭಾರತ ಈ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯನ್ನು ಚಂದ್ರಯಾನ-೧ ರಲ್ಲಿ ಮತ್ತು ಬಳಿಕ ಮಂಗಳಯಾನ ದಲ್ಲೂ ನೀಡಿತ್ತು.  ಚಂದ್ರಯಾನ -೨ ರಲ್ಲಿ ಚಂದ್ರನ ಮೇಲಿಳಿಯುವ  ಲ್ಯಾಂಡರ್ 'ವಿಕ್ರಮ್' ಮತ್ತು ಚಂದ್ರನ ಮೇಲ್ಮೈಯಲ್ಲಿ ಚಲಿಸುವ ರೋವರ್ 'ಪ್ರಗ್ಯಾನ್' ಎರಡೂ ಕೂಡ ಅಂತರಿಕ್ಷ ಸ್ವಾಯತ್ತ ತಂತ್ರಜ್ಞಾನ ಹೊಂದಿದೆ. 
 
ಈಗ ನಾವು ಬ್ರಹ್ಮಾಂಡದಂತ ಬೃಹತ್ ಯೋಚನೆಗಳನ್ನು ಮಾಡುತ್ತಿರುವುದೇ ಆದರೆ, ಮುಂದಿನ ಒಂದು ದಶಕದೊಳಗೆ ಏಳು ಅಂತರಗ್ರಹ ಬಾಹ್ಯಾಕಾಶ ಯಾನಗಳನ್ನು ಕೈಗೊಳ್ಳುವ ಯೋಜನೆ ರೂಪಿಸುವುದೇ ಆಗಿದ್ದರೆ ಅದಕ್ಕೆಲ್ಲಾ ನಮ್ಮ ವಿಜ್ಞಾನಿಗಳ ಆತ್ಮವಿಶ್ವಾಸ ಮತ್ತು ಪರಿಣತಿಯೇ ಕಾರಣ.  ಪ್ರಧಾನಮಂತ್ರಿ ಮೋದಿಯವರು ಇಸ್ರೋದ ಅಷ್ಟೂ ಯೋಜನಾ ಚಟುವಟಿಕೆಗಳಿಗೆಲ್ಲ, ಬಹುಕಾಲದಿಂದ ಅರ್ಹವಾಗಿದ್ದ ಒಂದು ತಾರಾ ಪಟ್ಟವನ್ನು ನೀಡಿ ಬಿಟ್ಟಿದ್ದಾರೆ.  ಈ ಹಿಂದೆಲ್ಲ ಇಸ್ರೋದ ಸಾಧನೆಗಳನ್ನು ಇಡೀ ದೇಶವೇ ಒಂದಾಗಿ ಒಗ್ಗಟ್ಟಿನಿಂದ ಸಂಭ್ರಮಾಚರಣೆ ಮಾಡಿದ ಉದಾಹರಣೆ ಇಲ್ಲವೇ ಇಲ್ಲವೆನ್ನಬಹುದು.  ಮೋದೀಯವರು ವಿಜ್ಞಾನಿಗಳಿಗೆ ಸಂಪೂರ್ಣವಾಗಿ ಬೆಂಬಲಿಸಿ ಅವರ ಪರವಾಗಿ ನಿಂತು, ಈ ಎಲ್ಲ ಸಾಧನೆಯನ್ನು ಅವರಿಗೆ ಅರ್ಪಿಸಿದರು.   
 
ಚಂದ್ರಯಾನ-೨ರ  ಯಶಸ್ವಿ ಉಡಾವಣೆಯಿಂದಾಗಿ ಇಂದು, ಭಾರತವು ತಾನು ಹೊಂದಿರುವ ಸಂಪೂರ್ಣ ವೈಫಲ್ಯ ರಹಿತ ಅಂತರಿಕ್ಷ ಉಡಾವಣಾ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ಸಾಬೀತು ಪಡಿಸಿದೆ.  ಶೇಕಡಾ ೯೬ ರಷ್ಟು ನಿಖರ ಯಶಸ್ಸು ತಮಾಷೆಯ ಮಾತಲ್ಲ.  ಅಮೆರಿಕ, ಕೆನಡಾ, ಜರ್ಮನಿ, ಬ್ರಿಟನ್ ಮುಂತಾದ ಅತ್ಯಂತ ಮುಂದುವರಿದ ದೇಶಗಳ ಉಪಗ್ರಹಗಳೇ ನಮ್ಮ ಸೌಲಭ್ಯ ಬಳಸಿ ನಮ್ಮ ನೆಲದಿಂದ ಉಡಾವಣೆಯಾಗಿರುವಾಗ, ಈ ದೇಶಗಳೆಲ್ಲಾ ನಮ್ಮ ಅಂತರಿಕ್ಷ ಉಡಾವಣಾ ಸಾಮರ್ಥ್ಯವನ್ನು ಅತೀವ ಗಂಭೀರವಾಗಿ ಗಮನಿಸಿವೆ.  ಸುಮ್ಮನೆ ಒಮ್ಮೆ ಯೋಚಿಸಿ ನೋಡಿ; ಕಳೆದ ವರ್ಷ ಅಂದರೆ ೨೦೧೭ ರ ವರ್ಷವೊಂದರಲ್ಲೇ ನಾವು ನೂರ ಇಪ್ಪತ್ತೈದು ವಿದೇಶೀ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ್ದೇವೆ!  ಕಳೆದ ಎರಡು ದಶಕದ ಅವಧಿಯಲ್ಲಿ ನಾವು ನಮ್ಮ ನೆಲದಿಂದ ಉಡಾವಣೆ ಮಾಡಿದ ಉಪಗ್ರಹಗಳ ಸಂಖ್ಯೆ ಐವತ್ತಕ್ಕಿಂತಲೂ ಕಡಿಮೆ! ೨೦೧೮ ರಲ್ಲಿ ಈಗಾಗಲೆ ನಾವು ಐವತ್ತು ಉಪಗ್ರಹಗಳ ಗಡಿ ತಲುಪಿದ್ದೇವೆ!  ಇಸ್ರೋ ದ ಈ ರೀತಿಯ ವಾಣಿಜ್ಯ ಉಡಾವಣೆಗಳನ್ನು ನಿರ್ವಹಿಸುವ ಆಂಟ್ರಿಕ್ಸ್ ಕಾರ್ಪೋರೇಶನ್ ೨೦೧೭ರ ವರ್ಷದಲ್ಲಿ ಸುಮಾರು ೨೧೮ ಕೋಟಿ  ರೂಪಾಯಿಗಳ ಲಾಭ ಮಾಡಿರುವುದರಲ್ಲಿ ಆಶ್ಚರ್ಯವೇನಿಲ್ಲ.  ಮುಂದಿನ ದಿನಗಳಲ್ಲಿ ಇನ್ನಷ್ಟು ಲಾಭ ಬರಲಿದೆ.  ಅಂದರೆ, ಚಂದ್ರಯಾನ ಮತ್ತು ಮಂಗಳಯಾನ ಮುಂತಾದ ಯೋಜನೆಗಳಿಗೆ ವೆಚ್ಚ ಮಾಡಿದ ಹಣವೆಲ್ಲವೂ ಸುಮ್ಮನೇ ಖರ್ಚು ಮಾಡಿದ ಹಣವಲ್ಲ... ಬದಲಿಗೆ ಅದೆಲ್ಲಾ ನಿಜಕ್ಕೂ ಬಂಡವಾಳ ಹೂಡಿಕೆಗಳೇ... ಹಾಗು ಅದಕ್ಕೂ ಮೀರಿದ ಮಾಹಿತಿ ಬಂಡವಾಳ ನಮಗೆ ಬಂದು ಸೇರಿದೆ..!!
 
ಆದರೆ ಇಂತಾ ಅಂತರಿಕ್ಷ ಸಾಹಸಗಳನ್ನು ಕೇವಲ ವ್ಯವಹಾರದ ಮತ್ತು ವಾಣಿಜ್ಯ ಆದಾಯದ ದೃಷ್ಟಿಯಿಂದ ನೋಡುವುದು ಅತ್ಯಂತ ಸಂಕುಚಿತ ದೃಷ್ಟಿಕೋನ ಮತ್ತು ಪರಮ ದಡ್ಡತನವಾದೀತು.  ಇಂತಾ ಯೋಜನೆಗಳು ಯಶಸ್ವಿಯಾಗಲು ಸಾಧ್ಯವಾಗುವಂತೆ ಮಾಡುವ ತಂತ್ರಜ್ಞಾನದ ಅನ್ವೇಷಣೆಗಳು ನಮ್ಮ ಜೀವನವನ್ನು ಹೆಚ್ಚು ಆರಾಮದಾಯಕ ಮತ್ತು ಸುರಕ್ಷಿತಗೊಳಿಸುವಂತ ಉಪಕರಣಗಳನ್ನು ತಯಾರಿಸಲೂ ಉಪಯೋಗವಾಗುತ್ತವೆ.  ಈಗ ನಾವು ಯಥೇಚ್ಛವಾಗಿ ಸುಲಭವಾಗಿ ಬಳಸುತ್ತಿರುವ Vaccum Cleanerಗಳನ್ನು ಮಾನವನನ್ನು ಮೊಟ್ಟಮೊದಲು ಚಂದ್ರನ ಮೇಲೆ ಇಳಿಸುವ ಅಂತರಿಕ್ಷ ಯೋಜನೆಗಾಗಿಯೇ ಸಂಶೋಧಿಸಿದ್ದು ಎಂಬ ವಿಚಾರ ನಿಮಗೆ ತಿಳಿದಿದೆಯೇ?  ಈಗ ಅಗ್ನಿಶಾಮಕ ದಳದವರು ಸಾಮಾನ್ಯಾವಾಗಿ ಉಪಯೋಗಿಸುವ ಅಗ್ನಿನಿರೋಧಕ ಉಡುಪುಗಳನ್ನೂ ಕೂಡಾ ಬಾಹ್ಯಾಕಾಶ ಯೋಜನೆಗಳಿಗಾಗಿಯೇ ಕಂಡು ಹಿಡಿಯಲಾಗಿತ್ತು.  ನಮ್ಮ ದೇಶದ ಎಲ್ಲಾ ಪ್ರಯಾಣ, ಸಂವಹನ, ಮತ್ತು ಮನರಂಜನೆಗೆ ಸಂಬಂಧಿಸಿದ ವಿಷಯಗಳೆಲ್ಲ ಭಾರತದ ಹೆಮ್ಮೆಯ ಇನ್ಸಾಟ್ ಸರಣಿಯ ಉಪಗ್ರಹಗಳ ಮೇಲೆ ಅವಲಂಬಿತವಾಗಿದೆ ಎಂಬುದನ್ನು ನಾವು ಮರೆಯಲಾದೀತೇ? ಅಥವಾ RISAT-1 ನಮ್ಮ ದೇಶದ ಕೃಷಿ ಬೆಳೆಗಳ ಬಗ್ಗೆ ಯೋಜನೆ ರೂಪಿಸಲು ಮತ್ತು ಅವುಗಳ ಮೇಲುಸ್ತುವಾರಿ ವಹಿಸಲು ಸಹಾಯ ಮಾಡುತ್ತದೆ, ನಮ್ಮ IRS ಉಪಗ್ರಹಗಳು ದಣಿವೆ ಇಲ್ಲದೆ ಪ್ರತೀ ಕ್ಷಣವೂ ಹವಾಮಾನ ಮತ್ತು ಬಿರುಗಾಳಿಗಳ ಬಗ್ಗೆ ಮುನ್ಸೂಚನೆ ನೀಡುತ್ತಿದೆ ಎಂಬುದನ್ನು ಹಾಗೂ ನಮ್ಮ RISAT -2 ಉಪಗ್ರಹ ನಮ್ಮ ಸುತ್ತಲಿನ ಶತ್ರುಗಳ ಬಗ್ಗೆ ಹದ್ದಿನ ಕಣ್ಣಿಟ್ಟು ನಿಗಾ ವಹಿಸುತ್ತಿದೆ ಎಂಬುದನ್ನು ಮರೆಯಲಾದೀತೇ? 
 
ಅಂತರಿಕ್ಷ ಯೋಜನೆಗಳಿಗಾಗಿ ನಾವು ವ್ಯಯಿಸುವ ಹಣ ಖಂಡಿತಾ ವ್ಯರ್ಥವಲ್ಲ.  ಅದು ಬಿಡಿ, ನಿಜಕ್ಕಾದರೆ  ಇತರೆಲ್ಲಾ ಪ್ರಮುಖ ಅಂತರಿಕ್ಷ ಯೋಜನೆಗಳನ್ನು ನಿರ್ವಹಿಸುವ ದೇಶಗಳ ವಿಜ್ಞಾನಿಗಳಿಗೆ ಹೋಲಿಸಿದರೆ, ನಮ್ಮ ವಿಜ್ಞಾನಿಗಳಿಗೇ ಅತ್ಯಂತ ಕಡಿಮೆ ವೇತನ ಮತ್ತು ಇನ್ನಿತರ ಸೌಲಭ್ಯಗಳು ಸಿಗುತ್ತಿವುದು!
 
ಖರ್ಚು ವೆಚ್ಚ, ಹೂಡಿಕೆ ಮಟ್ಟದರಿಂದ ಬರುವ ಲಾಭ ಇದೆಲ್ಲಕ್ಕಿಂತಲೂ ಮಿಗಿಲಾಗಿ, ಅಖಂಡ ಬ್ರಹ್ಮಾಂಡಕ್ಕೆ ಹೋಲಿಸಿದರೆ ನಾವು ಅದೆಷ್ಟು ಚಿಕ್ಕವರು ಎಂಬುದನ್ನು ನಮ್ಮ ಅರಿವಿಗೆ ಬರುವುದು ಸಹ ಅಷ್ಟೇ ಮುಖ್ಯವಲ್ಲವೇ??  ನಮಗೆ ಭಾರೀ ಬೃಹತ್ ಗಾತ್ರದ್ದು ಅಂತ ಅನ್ನಿಸುವ ನಮ್ಮ ಭೂಮಿ ಇಡೀ ಬ್ರಹ್ಮಾಂಡದ ಅನಂತ ವಿಸ್ತಾರದೊಳಗೆ ಒಂದು ಚಿಕ್ಕ ಧೂಳಿನ ಕಣಕ್ಕೂ ಸಮವಲ್ಲ.  ಇಡೀ ಅಂತರಿಕ್ಪ ವ್ಯವಸ್ಥೆಯಲ್ಲಿ ಒಂದೇ ಒಂದು ಸಣ್ಣ ಆಘಾತವಾಗಿಬಿಟ್ಟರೂ ನಾವು ಹೇಳ ಹೆಸರಿಲ್ಲದಂತೆ ಕ್ಷಣಾರ್ಧದಲ್ಲಿ ನಾಶವಾಗಿಬಿಡುತ್ತೇವೆ.  ಇಲ್ಲಿ, ಈ ಭೂಮಿಯಲ್ಲಲ್ಲದಿದ್ದರೆ ನಾವೆಲ್ಲಿ ವಾಸಿಸಲು ಸಾಧ್ಯ?  ಇಡೀ ಮಾನವ ಜನಾಂಗ ಇವತ್ತು ಭೂಮಿಯ ಹೊರಗೆ ನೋಡ ತೊಡಗಿದೆ ಮತ್ತು ಆ ಸಮೂಹದಲ್ಲಿ ನಮ್ಮ ದೇಶದ್ದೇ ಪ್ರಮುಖ ಕಣ್ಣು! 
 
ವಿಜ್ಞಾನಿಗಳಿಗೆ ಜೈ ! ವಿಜ್ಞಾನಕ್ಕೂ ಜೈ ! 
 
#ಅನಂತಕುಮಾರಹೆಗಡೆ 

The Moon and Beyond; The Gaze Ahead

It will be giant leap, make no mistake, when Vikram lands on our eternal fantasy land, the Moon, between Sept 6 and 9.

Why? What’s so great in reaching out to the earth’s child when America has already got its space adventurers visit it long ago and when China and Russia have had their space footprint ingrained on the moon soil?  Why, when we already know what moon is made of and what’s available in the chilling cold out there?  What new can our Chandrayaan-2 bump into?  Why waste 978 crore rupees and thousands of manhours of the brightest scientific minds in the country?  Aren’t we just a ‘we too’ – and the last one at that – in the moon dreams?

Maybe we are the last; but there are only three before us!  That makes us a part of the ‘Fantastic Four’ club.  And, we have done it all on our own - and the lowest cost; a matter of immense pride, to start with.

And, if you thought the three before us have already found out everything that was there to be found on the moon, think again.  The three big brother leaders and of course the entire world grudgingly acknowledged the fact of discovery, when Chandrayaan-1 found water particles on the moon.  Promptly, they started looking at taking a trip to the moon again. The US will send its astronauts in 2024, China will undertake three more missions in the next ten years to explore the possibility of building a base on the moon using 3D printing technology, Russia will shoot its craft towards the white globe in 2021 – after a gap of 45 years – and will follow it up with two more in 2023 and 24.  Elon Musk’s SpaceX is thinking beyond all of them, to turn the moon into a holiday destination!

This means, the moon is not done with yet.  When the day to colonize the earth’s sibling comes, India will be right up there in the pilot’s seat; an enviable position to be in, for sure.

This has been possible thanks to the brilliant and selfless minds that are at work at ISRO and its sister organizations.  Whatever the socio-political turmoil that the country may have gone through in the last few decades, the scientific community has remained untouched by it all.  When we launched our first satellite from the Russian soil – and with the help of Russia – in 1980, nobody had imagined that we would come this far in just 4 decades timeline.   

Nobody gave a chance to India when our country was ostracized by the world and the advanced countries refused to share their knowhow on cryogenic engines – the most vital requirement to build spacecraft.  But knowledge, after all, is neither nobody’s slave nor anybody’s sole asset.  And India, having its roots in a great ancestry that was lightyears ahead of the rest of the world in all spheres of science, didn’t find it difficult to navigate the challenges and develop its own technology.

Forget the cryogenic engines; imagine implanting a satellite with an electronic brain that’s fed with all the commands that it will need when it’s left all alone in the vastness of space; imagine that brain maneuvering it perfectly towards its destination and ensuring its smooth functioning.  It’s called space autonomy.  India demonstrated it in Chandrayan-1 and, then, in Mangalyaan.  Vikram, the lander in Chandrayaan -2 and Pragyan, the rover, are also on autonomy.

If we are thinking astronomically big now, to carry out at least seven inter-planetary missions in the next decade, it’s because of the confidence and expertise of our scientists.   Prime Minister Narendra Modi has given the whole spectrum of ISRO’s activities a stardom it so deserved for long.  Never before had ISRO’s accomplishments been a spectacle that the, country celebrated as one entity.  Modi, by being one with the scientists and by giving them all the credit and fanfare, has ensured it.

What India’s successful launch of Chandrayan -2 has done is that it has demonstrated to the world its failproof launching capabilities.  A 96% success record is no joke.  A fact that’s looked at in awe by even some of the most advanced countries like the USA, Canada, Germany and UK – among others – whose satellites we have launched from our facilities.  Come to think of it; we successfully launched 125 foreign satellites in 2017 alone, whereas the count was less than 50 in the preceding two decades!  50 is what we have already touched in 2018!  No wonder, then, that the Antrix Corporation, which handles commercial launches for ISRO, made a profit of about 218 crores in 2017.  There’s a lot more to come. Which means, the money that’s spent on missions like Chandrayaan or Mangalyaan are not ‘spendings’, but indeed investments and if one looks at the quantum of data that pours in.. that’s indeed a great asset!

But to look at such ventures just in terms of commercial returns would be shortsighted and plain stupid. The technology that goes into making them possible invariably lead to developing tools that makes our lives so much more comfortable and secure.  Do you know that vacuum cleaners that we so readily use now was actually invented for use in the first human-mission to the moon?  And, that the fire-resistant suits that firemen across the world use were first made for space missions?  Can we ignore the fact that all our travel, communication, and entertainment are dependent on India’s proud INSAT series of satellites?  Or that RISAT-1 has been helping us monitor and plan our crops; the IRS satellites have been tirelessly giving us a low-down every second on our weather and storms, and RISAT -2 that’s keeping a close watch on our enemies around?

The money that goes into space missions is never a waste.  If anything, the Indian scientific community is the most underpaid and under-aided among those in all the leading space nations!

More than the returns on investment, isn’t it important for us to see from outside how small we are?  This massive globe of ours is a small speck of dust in the vastness of cosmos.  One small jolt in the system, and we are gone without a trace!  Where else can we live, if not here?  The human race is looking out.  And, ours is a leading eye in the crowd!


Jai ho scientists! Jai Vigyaan!

#AnantkumarHegde

 

 

Related posts